Connect with us

ಕಾರ್ಯಕ್ರಮಗಳು

SLV Book House-ಪುತ್ತೂರಿನ ನೆಹರೂನಗರದಲ್ಲಿ ನ.15ಕ್ಕೆ ರಾಜ್ಯದಾದ್ಯಂತ ಬ್ರ್ಯಾಂಚ್ ಗಳನ್ನು ಹೊಂದಿರುವ ‘SLV ಬುಕ್ ಹೌಸ್’ ಶುಭಾರಂಭ – ಸೂಪರ್ ಮಾರ್ಕೆಟ್ ಮಾದರಿ ಔಟ್ ಲೆಟ್ – ಅನುಕೂಲಕರ ಶಾಪಿಂಗ್ ಅನುಭವ – ಶುಭಾರಂಭಧ ಪ್ರಯಕ್ತ ಡಿಸ್ಕೌಂಟ್ ಗಳ ಮಹಾಪೂರ

Published

on

Ad Widget

Ad Widget

Ad Widget

Ad Widget

ಪುಸ್ತಕ ಮತ್ತು ಶೈಕ್ಷಣಿಕ ಸಾಮಗ್ರಿಗಳ ಕ್ಷೇತ್ರದಲ್ಲಿ ತಮ್ಮದೇ ಆದ ಬ್ರ್ಯಾಂಡ್ ಮೌಲ್ಯವನ್ನು ಸೃಷ್ಟಿಸಿ ಮುನ್ನುಗ್ಗುತ್ತಿರುವ ‘SLV ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.’ ಸಂಸ್ಥೆಯ ಆಡಳಿತ ನಿರ್ದೇಶಕ, ಯಶಸ್ವಿ ಉದ್ಯಮಿ ಹಾಗೂ ಕೊಡುಗೈ ದಾನಿ ದಿವಾಕರ ವಾಸ್ ನೇರ್ಲಾಜೆ ಅವರ ಸಾಹಸಗಾಥೆ ಇದೀಗ ಪುತ್ತೂರಿನಲ್ಲಿ ಹೊಸ ಅಧ್ಯಾಯವೊಂದನ್ನು ತೆರೆಯಲು ಸಿದ್ಧವಾಗಿದೆ. ಜ್ಞಾನದಾಹವನ್ನು ನೀಗಿಸುವ ಮತ್ತು ಕಲಿಕೆಗೆ ಪ್ರೋತ್ಸಾಹ ನೀಡುವ ಮಹತ್ವಾಕಾಂಕ್ಷೆಯೊಂದಿಗೆ, ಪುತ್ತೂರಿನ ನೆಹರೂನಗರದಲ್ಲಿ ‘SLV ಬುಕ್ ಹೌಸ್’ನ ಮತ್ತೊಂದು ಭವ್ಯ ಮಳಿಗೆ ಶುಭಾರಂಭಗೊಳ್ಳಲಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಪುಸ್ತಕ ಮತ್ತು ಶೈಕ್ಷಣಿಕ ಸಾಮಗ್ರಿಗಳ ಕ್ಷೇತ್ರದಲ್ಲಿ ತಮ್ಮದೇ ಆದ ಬ್ರ್ಯಾಂಡ್ ಮೌಲ್ಯವನ್ನು ಸೃಷ್ಟಿಸಿ ಮುನ್ನುಗ್ಗುತ್ತಿರುವ ‘SLV ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.’ ಸಂಸ್ಥೆಯ ಆಡಳಿತ ನಿರ್ದೇಶಕ, ಯಶಸ್ವಿ ಉದ್ಯಮಿ ಹಾಗೂ ಕೊಡುಗೈ ದಾನಿ ದಿವಾಕರ ವಾಸ್ ನೇರ್ಲಾಜೆ ಅವರ ಸಾಹಸಗಾಥೆ ಇದೀಗ ಪುತ್ತೂರಿನಲ್ಲಿ ಹೊಸ ಅಧ್ಯಾಯವೊಂದನ್ನು ತೆರೆಯಲು ಸಿದ್ಧವಾಗಿದೆ. ಜ್ಞಾನದಾಹವನ್ನು ನೀಗಿಸುವ ಮತ್ತು ಕಲಿಕೆಗೆ ಪ್ರೋತ್ಸಾಹ ನೀಡುವ ಮಹತ್ವಾಕಾಂಕ್ಷೆಯೊಂದಿಗೆ, ಪುತ್ತೂರಿನ ನೆಹರೂನಗರದಲ್ಲಿ ‘SLV ಬುಕ್ ಹೌಸ್’ನ ಮತ್ತೊಂದು ಭವ್ಯ ಮಳಿಗೆ ಶುಭಾರಂಭಗೊಳ್ಳಲಿದೆ.

Ad Widget

Ad Widget alt="Ad Widget"/>

Ad Widget

ದಿವಾಕರ ವಾಸ್ ನೇರ್ಲಾಜೆ: ಕನಸಿನಿಂದ ಸಾಮ್ರಾಜ್ಯದವರೆಗೆ
1997ರಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದ ದಿವಾಕರದಾಸ್ ನೇರ್ಲಾಜೆ ಎಂಬ ಅದಮ್ಯ ಕನಸುಗಾರ, ಇಂದು ‘SLV ಗ್ರೂಪ್’ ಎಂಬ ಬೃಹತ್ ಸಾಮ್ರಾಜ್ಯವನ್ನು ಕಟ್ಟಿ ನಿಲ್ಲಿಸಿದ್ದಾರೆ. ಅವರ ದೂರದೃಷ್ಟಿ ಮತ್ತು ಕಠಿಣ ಪರಿಶ್ರಮಕ್ಕೆ ‘SLV ಬುಕ್ ಹೌಸ್’ ಪುತ್ತೂರಿನಲ್ಲಿ ತೆರೆಯುತ್ತಿರುವುದು ಮತ್ತೊಂದು ಗರಿ. ತಮ್ಮ ಹುಟ್ಟೂರಿಗೆ ವಿಶೇಷ ಕೊಡುಗೆ ನೀಡಬೇಕೆಂಬ ಮಹದಾಸೆಯಿಂದ ಅವರು ಈ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ.

Ad Widget

Ad Widget <> Ad Widget

ಭವ್ಯ ಮಳಿಗೆಯಲ್ಲಿ ಜ್ಞಾನದ ಬೆಳಕು: ನವೆಂಬರ್ 15ರದು ಶುಭಾರಂಭ
2025ರ ನವೆಂಬರ್ 15ರಂದು, ನೆಹರೂನಗರದ ಕಾಲೇಜ್ ಗೇಟ್ ಕಾಂಪ್ಲೆಕ್ಸ್ನಲ್ಲಿ ವಿಭಿನ್ನವಾದ, ವಿಸ್ತಾರವಾದ, ಸಂಪೂರ್ಣ ಹವಾನಿಯಂತ್ರಿತ ‘ಎಸ್ಎಲ್ವಿ ಬುಕ್ ಹೌಸ್’ ಮಳಿಗೆ ಶುಭಾರಂಭಗೊಳ್ಳಲಿದೆ. ಇದು ಗ್ರಾಹಕರಿಗೆ ಹೊಸ ಮತ್ತು ಅದ್ಭುತ ಅನುಭವವನ್ನು ನೀಡಲು ಸಿದ್ಧವಾಗಿದೆ. ಶುಭಾರಂಭದ ಪ್ರಯುಕ್ತ, ಎಲ್ಲಾ ಪುಸ್ತಕಗಳ ಮೇಲೆ ಭರ್ಜರಿ 40% ರಿಯಾಯಿತಿ ಇರಲಿದೆ! ಇದು ಜ್ಞಾನವನ್ನು ಅಗ್ಗವಾಗಿಸುವ ಎಸ್ಎಲ್ವಿ ಬದ್ಧತೆಗೆ ಸಾಕ್ಷಿ.

ಶಿಕ್ಷಣದ ಅಡಿಪಾಯಕ್ಕೆ ‘SLV’ಯ ಅನನ್ಯ ಕೊಡುಗೆ
ದೇಶದ ಭವಿಷ್ಯವು ಶಿಕ್ಷಣದ ಮೇಲೆ ನಿಂತಿದೆ ಎಂಬುದನ್ನು ಮನಗಂಡಿರುವ ಎಸ್ಎಲ್ವಿ, ವಿದ್ಯಾಸಂಸ್ಥೆಗಳು ಮತ್ತು ಶಿಕ್ಷಕರ ಜೊತೆಗೆ, ಶಿಕ್ಷಣಕ್ಕೆ ಪೂರಕವಾಗಿ ಬೇಕಾಗುವ ಸ್ಟೇಷನರಿ ವಸ್ತುಗಳು, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಳಸುವ ಪೆನ್ಸಿಲ್, ಪೆನ್, ನೋಟ್ಬುಕ್ ಮತ್ತು ಪಠ್ಯಪುಸ್ತಕಗಳಂತಹ ಮೂಲಭೂತ ಸಾಮಗ್ರಿಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಉತ್ತಮ ಗುಣಮಟ್ಟದ ಸ್ಟೇಷನರಿಗಳ ಲಭ್ಯತೆಯು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ, ಇದು ಭವಿಷ್ಯದ ವಿಜ್ಞಾನಿಗಳು, ಶಿಕ್ಷಕರು, ತಂತ್ರಜ್ಞರು ಮತ್ತು ನಾಯಕರ ಉಗಮಕ್ಕೆ ಪ್ರೇರಣೆಯಾಗಿದೆ.

Ad Widget

Ad Widget

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳ ನಡುವೆ ತೀವ್ರ ಸ್ಪರ್ಧೆ ಇರುವ ಬುಕ್ಸ್ ಮತ್ತು ಸ್ಟೇಷನರಿ ವಿಭಾಗದಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸುವುದು ಸುಲಭವಲ್ಲ. ಆದರೆ, ಕಳೆದ 16 ವರ್ಷಗಳ ಹಿಂದೆ ರೂಪುಗೊಂಡು, ಇಂದು ರಾಜ್ಯವ್ಯಾಪಿ ಬೆಳೆದು, ಗ್ರಾಹಕರ ಮೆಚ್ಚುಗೆ ಗಳಿಸಿಕೊಂಡಿರುವ ಹೆಗ್ಗಳಿಕೆ ‘ಎಸ್ಎಲ್ವಿ’ಗೆ ಸಲ್ಲುತ್ತದೆ.

‘ವೈಟ್ಸ್ಪೇಸ್’ – SLV ಉತ್ಪನ್ನಗಳ ವಿಶೇಷತೆ
ಪೆನ್, ಪೆನ್ಸಿಲ್ನಿಂದ ಆರಂಭಿಸಿ ಪಠ್ಯಪುಸ್ತಕಗಳವರೆಗೂ ಎಲ್ಲಾ ರೀತಿಯ ಸ್ಟೇಷನರಿ ಉತ್ಪನ್ನಗಳು ‘SLV’ ಮೂಲಕ ತಯಾರಾಗುತ್ತಿವೆ. ‘ವೈಟ್ಸ್ಪೇಸ್’ ಎಂಬ ಬ್ರ್ಯಾಂಡ್ ಅಡಿಯಲ್ಲಿ ಪೆನ್, ಪೆನ್ಸಿಲ್, ರಬ್ಬರ್, ಕ್ರಯಾನ್ಸ್, ಜ್ಯಾಮೆಟ್ರಿ ಬಾಕ್ಸ್ ಹೀಗೆ ಎಲ್ಲಾ ಸ್ಟೇಷನರಿ ಸಾಮಗ್ರಿಗಳು ‘SLV’ಯಿಂದ ಉತ್ಪಾದನೆಯಾಗುತ್ತವೆ. ‘ವೈಟ್ಸ್ಪೇಸ್’ ಹೆಸರಿನ ನೋಟ್ಬುಕ್ಗಳು ತಮ್ಮದೇ ಆದ ಬ್ರ್ಯಾಂಡ್ ಮೌಲ್ಯವನ್ನು ಸೃಷ್ಟಿಸಿಕೊಂಡಿದ್ದು, ಈಗಾಗಲೇ ಸಂಸ್ಥೆಯ ಉತ್ಪನ್ನಗಳಿಗೆ ಪೂರೈಕೆ ಮಾಡಲು ಸಾಧ್ಯವಾಗದಷ್ಟು ಬೇಡಿಕೆ ಸೃಷ್ಟಿಯಾಗಿದೆ.

ನೋಟ್ಬುಕ್ಗಳನ್ನು ಕಸ್ಟಮೈಸ್ ಮಾಡುವ ವ್ಯವಸ್ಥೆಯೂ ಇದ್ದು, ಸುಮಾರು 1 ಸಾವಿರ ಶಾಲೆಗಳಿಗೆ ಆಯಾ ಶಾಲೆಗಳ ಫೋಟೋ, ಲೋಗೋಗಳನ್ನು ಬಳಸಿ ಕಸ್ಟಮೈಸ್ಡ್ ನೋಟ್ಬುಕ್ಗಳನ್ನು ಒದಗಿಸಲಾಗುತ್ತಿದೆ. ಪ್ರತಿ ವರ್ಷ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಸಂಸ್ಥೆಯು, ಇದೀಗ ವಿವಿಧ ಸ್ಟೇಷನರಿ ಉತ್ಪನ್ನಗಳನ್ನು ಹೊಂದಿರುವ ಗಿಫ್ಟ್ ಬಾಕ್ಸ್ಗಳನ್ನು ಸಹ ರೂಪಿಸಿದೆ. ಜೊತೆಗೆ, ಝರಾಕ್ಸ್ ಮೆಷಿನ್ಗಳಿಗೆ ಬೇಕಾಗುವ ಎ4 ಶೀಟ್ಗಳ ತಯಾರಿಕೆಗೂ ಸಂಸ್ಥೆ ಮುಂದಾಗಿದ್ದು, 75 ಮತ್ತು 80 GSM ಗುಣಮಟ್ಟದ ಎ4 ಶೀಟ್ಗಳು ‘ವೈಟ್ಸ್ಪೇಸ್’ ಹೆಸರಿನಲ್ಲಿ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿವೆ.

ಪ್ರಕಾಶನ ವಿಭಾಗ: ವಿದ್ಯಾಭವನ ಮತ್ತು ವಿಸ್ತಾರ
‘ಎಸ್ಎಲ್ವಿ’ ಸಂಸ್ಥೆಯ ಅಧೀನದಲ್ಲಿ ‘ವಿದ್ಯಾಭವನ’ ಮತ್ತು ‘ವಿಸ್ತಾರ’ ಎಂಬ ಪ್ರಕಾಶನ ಸಂಸ್ಥೆಗಳು ಸಹ ಕಾರ್ಯನಿರ್ವಹಿಸುತ್ತಿವೆ. ‘ವಿದ್ಯಾಭವನ ಪ್ರಕಾಶನ’ದಲ್ಲಿ ಶಾಲಾ-ಕಾಲೇಜುಗಳಿಗೆ ಬೇಕಾದ ಪಠ್ಯಪುಸ್ತಕಗಳನ್ನು ಮುದ್ರಿಸಲಾಗುತ್ತಿದೆ. ‘ವಿಸ್ತಾರ’ ಪ್ರಕಾಶನದಲ್ಲಿ ಎಲ್ಕೆಜಿ, ಯುಕೆಜಿ ಸಹಿತ ನರ್ಸರಿ ಮಕ್ಕಳಿಗೆ ಪೂರಕವಾದ ಡಿಜಿಟಲ್ ಕಂಟೆಂಟ್ ಒಳಗೊಂಡ ಪಠ್ಯಪುಸ್ತಕಗಳನ್ನು ಮುದ್ರಿಸಲಾಗುತ್ತಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರೆತಿದೆ.

ಸೂಪರ್ಮಾರ್ಕೆಟ್ ಮಾದರಿ ಔಟ್ಲೆಟ್ಗಳು: ಅನುಕೂಲಕರ ಶಾಪಿಂಗ್ ಅನುಭವ
‘ಎಸ್ಎಲ್ವಿ ಬುಕ್ಹೌಸ್’ನ ಯಾವುದೇ ಔಟ್ಲೆಟ್ಗಳನ್ನು ಗಮನಿಸಿದರೆ ಅವು ಸೂಪರ್ಮಾರ್ಕೆಟ್ ಮಾದರಿಯಲ್ಲಿ ಗ್ರಾಹಕ ಸ್ನೇಹಿಯಾಗಿರುತ್ತವೆ. ಸೂಪರ್ಮಾರ್ಕೆಟ್ನಂತೆ ಗ್ರಾಹಕರು ಬಂದು ಅವರಿಗೆ ಬೇಕಿರುವ ವಸ್ತುಗಳನ್ನು ಅವರೇ ಆರಿಸಿ ಪಡೆದುಕೊಳ್ಳಬಹುದು. ಮಳಿಗೆಗಳಲ್ಲಿ ಸ್ಟೇಷನರಿ ಐಟಮ್ಸ್, ಟೆಕ್ಸ್ಟ್ಬುಕ್ಸ್, ನೋಟ್ಬುಕ್ಸ್ ಹೀಗೆ ಐಟಂವಾರು ಶೆಲ್ಫ್ಗಳಿದ್ದು, ಪ್ರತಿ ಕೌಂಟರ್ ಬಳಿಯೂ ಸಹಾಯಕರು ಗ್ರಾಹಕರಿಗೆ ಸಹಾಯ ಒದಗಿಸುತ್ತಾರೆ. ಸಂಸ್ಥೆಯ ಎಲ್ಲಾ ಶೋರೂಂಗಳು ಹವಾನಿಯಂತ್ರಿತವಾಗಿದ್ದು, ಪುತ್ತೂರಿನ ನೂತನ ಮಳಿಗೆಯೂ ವಿಭಿನ್ನ, ಸುಸಜ್ಜಿತವಾಗಿ ಗ್ರಾಹಕರಿಗೆ ಅದ್ಭುತ ಸೇವೆ ನೀಡಲಿದೆ.

ಲಭ್ಯವಿರುವ ಅತ್ಯಾಧುನಿಕ ಪ್ರಕಾಶನ ಪುಸ್ತಕಗಳು:
• CBSE/ICSE ಪುಸ್ತಕಗಳು
• ಸ್ಟೇಟ್ ಸಿಲೆಬಸ್ ಪುಸ್ತಕಗಳು
• PUC ಪಠ್ಯಪುಸ್ತಕಗಳು
• ಗೋಲ್ಡನ್ ಗೈಡ್ಸ್
• ಜೀವಿತ್ ಉಲ್ಲೇಖ ಪುಸ್ತಕಗಳು
• NEET / JEE ಪುಸ್ತಕಗಳು

Ad Widget
Click to comment

Leave a Reply

ಕಾರ್ಯಕ್ರಮಗಳು

Puttur-ಡಿ.8ರಂದು ಪುತ್ತೂರು ದೀಪೋತ್ಸವ: ದೇವಸ್ಥಾನದ ಮುಂಭಾಗದಲ್ಲಿ ಚಪ್ಪರ ಮುಹೂರ್ತ

Published

on

Ad Widget

Ad Widget

Ad Widget

Ad Widget

ಪುತ್ತೂರು ದೀಪೋತ್ಸವ ಸಮಿತಿಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಡಿ.8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಸಮಾರಂಭ ಬುಧವಾರ ನಡೆಯಿತು.

Ad Widget

Ad Widget

Ad Widget

Ad Widget

ಪುತ್ತೂರು, ನ.18: ಪುತ್ತೂರು ದೀಪೋತ್ಸವ ಸಮಿತಿಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಡಿ.8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಸಮಾರಂಭ ಬುಧವಾರ ನಡೆಯಿತು.

Ad Widget

Ad Widget alt="Ad Widget"/>

Ad Widget

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ಉದ್ಯಮಿ ವಾಮನ ಪೈ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ದೀಪೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.

Ad Widget

Ad Widget <> Ad Widget

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಶ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ದೇವಸ್ಥಾನದ ಮುಂಭಾಗದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೂ ವ್ಯವಸ್ಥಾಪನಾ ಸಮಿತಿಯ ಸಂಪೂರ್ಣ ಸಹಕಾರ ಇರಲಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದರು.

ದೀಪೋತ್ಸವ ಸಮಿತಿ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ದೀಪೋತ್ಸವವನ್ನು ಉತ್ಸವದ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಐದು ಸಾವಿರಕ್ಕೂ ಅಧಿಕ ಮಂದಿ ದೀಪ ಬೆಳಗಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಉತ್ತಮ ಸಮಿತಿ ರಚಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Ad Widget

Ad Widget

ವೇದಿಕೆಯಲ್ಲಿ ಉದ್ಯಮಿ ಜಯಕುಮಾರ್ ನಾಯರ್, ಸ್ವರ್ಣೋದ್ಯಮಿ ಈಶ್ವರ ಮುರಳಿ ಹಾಗೂ ದೀಪೋತ್ಸವ ಸಮಿತಿ ಉಪಾಧ್ಯಕ್ಷ ಕರುಣಾಕರ ರೈ ದೇರ್ಲ ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಂದಿಸಿದರು. ಸಂಚಾಲಕ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ ಕಾರ್ಯಕ್ರಮ ನಿರ್ವಹಿಸಿದರು.

Ad Widget
Continue Reading

ಕಾರ್ಯಕ್ರಮಗಳು

Puttur-ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್-2026

Published

on

Ad Widget

Ad Widget

Ad Widget

Ad Widget

ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ 37ನೇ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್-2026 ನವೆಂಬರ್ 20ರಿಂದ 22ರವರೆಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಭರತ್ ಪೈ ತಿಳಿಸಿದರು.

Ad Widget

Ad Widget

Ad Widget

Ad Widget

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ 37ನೇ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್-2026 ನವೆಂಬರ್ 20ರಿಂದ 22ರವರೆಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಭರತ್ ಪೈ ತಿಳಿಸಿದರು.

Ad Widget

Ad Widget alt="Ad Widget"/>

Ad Widget

ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿದ್ಯಾಭಾರತಿಯ ಅಧೀನದಲ್ಲಿರುವ ದೇಶದ ವಿವಿಧ ರಾಜ್ಯಗಳ ಆರು ಕ್ಷೇತ್ರಗಳ ಒಟ್ಟು 162 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ 30 ಎಸ್ಕಾರ್ಟ್‌ಗಳು ಹಾಗೂ ತರಬೇತುದಾರರು ಭಾಗವಹಿಸಲಿದ್ದು, ಒಟ್ಟು 104 ಸ್ಪರ್ಧಾ ವಿಭಾಗಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

Ad Widget

Ad Widget <> Ad Widget

ನವೆಂಬರ್ 20ರಂದು ಸಂಜೆ 6 ಗಂಟೆಗೆ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಈಜುಪಟು ರಾಧಾಕೃಷ್ಣ ನಾಯಕ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿದ್ಯಾಭಾರತಿ ಕರ್ನಾಟಕದ ರಾಜ್ಯಾಧ್ಯಕ್ಷ ಪರಮೇಶ್ವರ ಹೆಗ್ಡೆ ಭಾಗವಹಿಸಲಿದ್ದು, ಮನಮೋಹನ್ ರೈ ಚೆಲ್ಯಡ್ಕ, ವಸಂತ ಮಾಧವ, ಯು.ಪಿ. ಹರಿದಾಸ್ ಹಾಗೂ ಬಿ.ಡಿ. ಮಣಿ ಉಪಸ್ಥಿತರಿರಲಿದ್ದಾರೆ.

Ad Widget

Ad Widget

ನವೆಂಬರ್ 21ರಂದು ಪುತ್ತೂರಿನ ಬಾಲವನ ಈಜುಕೊಳದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.

ನವೆಂಬರ್ 22ರಂದು ಬೆಳಗ್ಗೆ 11.30ಕ್ಕೆ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರದ ಜಂಟಿ ಕಾರ್ಯದರ್ಶಿ ವಸಂತ ಮಾಧವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬ್ರಾಂಡ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀಕಾಂತ್ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಸಂತಿ ಕೆ. ಹಾಗೂ ಪ್ರತಿಮಾ ಹೆಗ್ಡೆ ಉಪಸ್ಥಿತರಿರಲಿದ್ದಾರೆ ಎಂದು ಭರತ್ ಪೈ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ವಿಷ್ಣು ಪ್ರಸಾದ್ ಸಿ., ಪ್ರಾಂಶುಪಾಲೆ ಸಿಂಧು ವಿ.ಜಿ., ರವಿನಾರಾಯಣ, ಶ್ಯಾಮಲಾ ಹಾಗೂ ವೆಂಕಟರಮಣ ಮಂಕುಡೆ ಉಪಸ್ಥಿತರಿದ್ದರು

Ad Widget
Continue Reading

ಸ್ಥಳೀಯ

Savanoor-ಸವಣೂರು ಆದರ್ಶ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮ: ‘ಸಹಕಾರ ರಶ್ಮಿ’ ನೂತನ ಕಟ್ಟಡ ಉದ್ಘಾಟನೆ

Published

on

Ad Widget

Ad Widget

Ad Widget

Ad Widget

ಸಹಕಾರರತ್ನ ಸವಣೂರು ಕೆ. ಸೀತಾರಾಮ ರೈ ಅವರು ಅಧ್ಯಕ್ಷರಾಗಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿ, ಸವಣೂರು ಶಾಖೆ ಮತ್ತು ವಾಣಿಜ್ಯ ಸಂಕೀರ್ಣಗಳಿರುವ ಸಹಕಾರ ರಶ್ಮಿ’ ಕಟ್ಟಡದ ಉದ್ಘಾಟನೆ ಹಾಗೂ ಸಂಘದ ರಜತ ಮಹೋತ್ಸವ ನ.16ರಂದು ಸವಣೂರಿನಲ್ಲಿ ನಡೆಯಿತು.

Ad Widget

Ad Widget

Ad Widget

Ad Widget

ಪುತ್ತೂರು: ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈ ಅವರು ಅಧ್ಯಕ್ಷರಾಗಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿ, ಸವಣೂರು ಶಾಖೆ ಮತ್ತು ವಾಣಿಜ್ಯ ಸಂಕೀರ್ಣಗಳಿರುವ ಸಹಕಾರ ರಶ್ಮಿ’ ಕಟ್ಟಡದ ಉದ್ಘಾಟನೆ ಹಾಗೂ ಸಂಘದ ರಜತ ಮಹೋತ್ಸವ ನ.16ರಂದು ಸವಣೂರಿನಲ್ಲಿ ನಡೆಯಿತು.

Ad Widget

Ad Widget alt="Ad Widget"/>

Ad Widget

ಆದರ್ಶ ರಜತ ಪ್ರಶಸ್ತಿ ಪ್ರದಾನ
ಹಿರಿಯ ಸಹಕಾರಿ, ಸಹಕಾರ ರತ್ನ ಜಾಕೆ ಮಾಧವ ಗೌಡ ಅವರಿಗೆ ಆದರ್ಶ ರಜತ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಸಹಾಯಕ ಮಹಾಪ್ರಬಂಧಕ ಸುನಾರಾಜ್ ಶೆಟ್ಟಿ ಅವರು ಪ್ರಶಸ್ತಿ ಪತ್ರ ವಾಚಿಸಿದರು.

Ad Widget

Ad Widget <> Ad Widget

ಸಾಂಸ್ಕೃತಿಕ ಕಾರ್ಯಕ್ರಮ:
ಬೆಳಗ್ಗೆ ಯಜೇಶ್ ಆಚಾರ್ ಮತ್ತು ಬಳಗ ಸುಬ್ರಹ್ಮಣ್ಯ ಇವರಿಂದ ಭಕ್ತಿ ಗಾನಾಮೃತ, ಉಮೇಶ್‌ ದೇವಾಡಿಗ ಪುತ್ತೂರು ಬಳಗದವರಿಂದ ರಾಗ್‌ರಂಗ್ ಸಂಗೀತ ಕಾರ್ಯಕ್ರಮ, ಅಪರಾಹ್ನಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಯತೀಶ್ ರೈ ಚೆಲ್ಯಡ್ಕ ಮತ್ತು ಬಳಗದವರಿಂದ ಯಕ್ಷನೃತ್ಯ ರೂಪಕ ನಡೆಯಿತು. ಸಮಾರಂಭದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ಸನ್ಮಾನ:
ಸಹಕಾರ ರತ್ನ ಸವಣೂರು ಸೀತಾರಾಮ ರೈ ಅವರನ್ನು ಅವರ ಶಿಷ್ಯ ವೃಂದದವರು ಸನ್ಮಾನಿಸಿ ಗೌರವಿಸಿದರು. ಸಂಘದ ಆಡಳಿತ ಮಂಡಳಿಯಲ್ಲಿ ಆರಂಭದಿಂದಲೇ ನಿರ್ದೇಶಕರಾಗಿರುವ ಎನ್.ಸುಂದರ ರೈ ಸವಣೂರು, ಎಸ್.ಎಮ್. ಬಾಪು ಸಾಹೇಬ್ ಸುಳ್ಯ, ಬಿ.ಮಹಾಬಲ ರೈ ಬೋಳಂತೂರು, ಪೂರ್ಣಿಮ ಎಸ್‌. ಆಳ್ವ ಮಂಗಳೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದಲ್ಲಿ ಆರಂಭದಿಂದಲೇ ಸೇವೆ ಸಲ್ಲಿಸುತ್ತಿರುವ ಪ್ರಸ್ತುತ ಮಹಾಪ್ರಬಂಧಕರಾಗಿರುವ ವಸಂತ್ ಜಾಲಾಡಿ, ನಿವೃತ್ತರಾದ ಸಿಬ್ಬಂದಿಗಳಾದ ಮೋನಪ್ಪ ಗೌಡ ವಿಟ್ಲ, ಶ್ರೀನಿವಾಸ ತಂತ್ರಿ ಉಜಿರೆ, ಮನೋಜ್‌ಕುಮಾರ್ ಸುಳ್ಯ, ಸುರೇಖಾ ಬೆಳ್ತಂಗಡಿ, ನಿತ್ಯ ನಿಧಿ ಸಂಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಪುತ್ತೂರು ಶಾಖೆಯ ಕೃಷ್ಣಪ್ಪ, ಸುಬ್ರಹ್ಮಣ್ಯ ಶಾಖೆಯ ಶ್ರೀನಿವಾಸ ಡಿ., ಉಜಿರೆ ಶಾಖೆಯ ಮಂಜುನಾಥ ಶೆಟ್ಟಿ, ಸಂಘದ ಗುತ್ತಿಗೆದಾರ ಎಂ.ಎನ್.ಪ್ರಭಾಕರ್( ಡೆಕ್ಕನ್ ಡೀಲ್ ಪುತ್ತೂರು), ಕಟ್ಟಡದ ಇಂಜಿನಿಯರ್ ಸಚ್ಚಿದಾನಂದ (ನಿರ್ಮಾಣ್ ಅಸೋಸಿಯೇಟ್ಸ್ ಪುತ್ತೂರು) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ನಿರೂಪಿಸಿದ ರಾಕೇಶ್ ರೈ ಕೆಡೆಂಜಿಯವರಿಗೆ ಗೌರವಾರ್ಪಣೆ ಮಾಡಲಾಯಿತು.

Ad Widget

Ad Widget

ದಕ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್., ಸವಣೂರು ಗ್ರಾ.ಪಂ.ಆಡಳಿತಾಧಿಕಾರಿ ಹರೀಶ್ ಕೆ., ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ಮಹಾಪ್ರಬಂಧಕ ವಸಂತ್ ಜಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೀತಾರಾಮ ರೈ ಅವರು ಎಡನೀರು ಮತ್ತು ಒಡಿಯೂರು ಶ್ರೀಗಳಿಗೆ ತುಳಸಿ ಹಾರ, ಫಲಪುಷ್ಪ ನೀಡಿ ಗೌರವಿಸಿದರು. ನಿರ್ದೇಶಕರಾದ ಎನ್.ಜಯಪ್ರಕಾಶ್ ರೈ ಸುಳ್ಯ, ಮಹಾಬಲ ರೈ ಬೋಳಂತೂರು, ಎಸ್.ಎಮ್.ಬಾಪೂ ಸಾಹೇಬ್, ಪೂರ್ಣಿಮಾ ಎಸ್.ಆಳ್ವ, ವಿ.ವಿ.ನಾರಾಯಣ ಭಟ್, ರಾಮಯ್ಯ ರೈ ತಿಂಗಳಾಡಿ, ಅಶ್ವಿನ್ ಎಲ್.ಶೆಟ್ಟಿ ಸವಣೂರು, ಸೀತಾರಾಮ ಶೆಟ್ಟಿ ಮಂಗಳೂರು, ಮಹಾದೇವ ಮಂಗಳೂರು, ಯಮುನಾ ಎಸ್ ರೈ ಗುತ್ತುಪಾಲ್, ಅರಿಯಡ್ಕ ಚಿಕ್ಕಪ್ಪ ನ್ಯಾಕ್, ರಶ್ಮಿ ಎಸ್.ರೈ ಸವಣೂರು ಅತಿಥಿಗಳನ್ನು ಗೌರವಿಸಿದರು.

ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೊಣಾಲು ವಂದಿಸಿದರು. ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ವಿದುಷಿ ಪವಿತ್ರಾ ರೂಪೇಶ್ ಪುತ್ತೂರು ಪ್ರಾರ್ಥನೆಗೈದರು. ಸಂಘದ ಸಹಾಯಕ ಮಹಾಪ್ರಬಂಧಕ ಸುನಾರಾಜ್ ಶೆಟ್ಟಿ ಮತ್ತು ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬೆಳಗ್ಗೆ – ಉಪಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!