ಆ ನಂತರ ಹಲವು ಗಂಭೀರ ಆರೋಪಗಳನ್ನು ಮಾಡಿದರು, […]" /> ಆ ನಂತರ ಹಲವು ಗಂಭೀರ ಆರೋಪಗಳನ್ನು ಮಾಡಿದರು, […]"> Soujanya Case | ಚಿನ್ನಯ್ಯ ಸೌಜನ್ಯಳ ಹೆಣವನ್ನು ಹೂತು ಹಾಕ್ತಿದ್ದ ಆದರೆ ಜನ ಎದ್ದ ಕಾರಣ ಅಗ್ಲಿಲ್ಲ..! - ಗಿರೀಶ್ ಮಟ್ಟಣ್ಣನವರ್ ಸ್ಪೋಟಕ ಹೇಳಿಕೆ : ವಿಜಯೇಂದ್ರರೇ ಸುಪ್ರೀಂ ಕೋರ್ಟಿಗೆ ವಕೀಲರು ಖರ್ಚುವೆಚ್ಚ ಬೇಡ ಸಿಬಿಐ ಶಿಫಾರಸ್ಸು ಮಾಡಿದ್ದನ್ನು ಅಮಿತ್ ಷಾ ಹತ್ರ ಹೇಳಿಸಿ ಮಾಡಿಸಿ ಸಾಕು - ಮಟ್ಟಣ್ಣನವರ್ - Nikhara News | Kannada News Website
Connect with us

ಬಿಗ್ ನ್ಯೂಸ್

Soujanya Case | ಚಿನ್ನಯ್ಯ ಸೌಜನ್ಯಳ ಹೆಣವನ್ನು ಹೂತು ಹಾಕ್ತಿದ್ದ ಆದರೆ ಜನ ಎದ್ದ ಕಾರಣ ಅಗ್ಲಿಲ್ಲ..! – ಗಿರೀಶ್ ಮಟ್ಟಣ್ಣನವರ್ ಸ್ಪೋಟಕ ಹೇಳಿಕೆ : ವಿಜಯೇಂದ್ರರೇ ಸುಪ್ರೀಂ ಕೋರ್ಟಿಗೆ ವಕೀಲರು ಖರ್ಚುವೆಚ್ಚ ಬೇಡ ಸಿಬಿಐ ಶಿಫಾರಸ್ಸು ಮಾಡಿದ್ದನ್ನು ಅಮಿತ್ ಷಾ ಹತ್ರ ಹೇಳಿಸಿ ಮಾಡಿಸಿ ಸಾಕು – ಮಟ್ಟಣ್ಣನವರ್

Published

on

Ad Widget

Ad Widget

Ad Widget

Ad Widget

ಮಂಗಳೂರು: ಸೌಜನ್ಯ ಪರ ಹೋರಾಟಗಾರ (Soujanya Case) ಗಿರೀಶ್ ಮಟ್ಟಣ್ಣನವರ್ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸವಾಲು ಎಸೆದಿದ್ದಾರೆ.

Ad Widget

Ad Widget

Ad Widget

Ad Widget

ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಗೆ ಬಂದ ಮಟ್ಟಣ್ಣನವರ್ , ಯಡಿಯೂರಪ್ಪ ಮತ್ತು ಇವರ ಆತ್ಮೀಯ ಸಂಬಂಧವನ್ನು ನೆನಪಿಸಿಕೊಂಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಟ್ಟಣ್ಣನವರ್ ನ್ನು ಕ್ಯಾಬಿನೆಟ್ ಸ್ಥಾನಮಾನದ ಹುದ್ದೆ ನೀಡಲಾಗಿತ್ತು ಆಗ ವಿಜಯೇಂದ್ರ ಅವರೂ ಆತ್ಮೀಯರಾಗಿದ್ದರು. ಈಗ ಷಡ್ಯಂತ್ರ ಏನೂ ಅಂತ ವಿಜಯೇಂದ್ರರವರಿಗೆ ನೇರವಾಗಿ ನನ್ನಲ್ಲಿ ಕೇಳಬಹುದಿತ್ತು ಎಂದರು.

Ad Widget

Ad Widget alt="Ad Widget"/>

Ad Widget

ಆ ನಂತರ ಹಲವು ಗಂಭೀರ ಆರೋಪಗಳನ್ನು ಮಾಡಿದರು, ಚಿನ್ನಯ್ಯ ಸೌಜನ್ಯಳ ಹೆಣವನ್ನು ಹೂತು ಹಾಕ್ತಿದ್ದ ಆದರೆ ಸೌಜನ್ಯ ನಾಪತ್ತೆಯಾದಾಗ ಜನ ಎದ್ದ ಕಾರಣ ಹೂತು ಹಾಕಲು ಅಗ್ಲಿಲ್ಲ ಎಂಬ ಸ್ಪೋಟಕ ಹೇಳಿಕೆಯನ್ನು ಗಿರೀಶ್ ಮಟ್ಟಣ್ಣನವರ್ ನೀಡಿದ್ದಾರೆ.

Ad Widget

Ad Widget <> Ad Widget

ಪದೇ ಪದೇ ಸೌಜನ್ಯ ಮೃತದೇಹ ಸಿಕ್ಕ ಜಾಗದಲ್ಲಿ ಹೆಣ್ಣು ಮಕ್ಕಳ ಮೃತದೇಹಗಳು ಸಿಗ್ತಿವೆ ಯಾಕೆ ಅಂತ 2012ರಲ್ಲಿ ಆಗಿನ ಎಸ್ಪಿ ಅಭಿಷೇಕ್ ಗೋಯಲ್ ಹತ್ರ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಎಸ್ಪಿ ನಿರುತ್ತರರಾಗುತ್ತಾರೆ.

ಈ ವಿಡಿಯೋ ಆಗ ಡಿಲೀಟ್ ಮಾಡಿಸಲಾಗಿದೆ. ವಿಜಯೇಂದ್ರರವರೇ ನಿಮಗೆ ಬೇಕಿದ್ದರೆ ರಾ ಫೈಲ್ ಕಳುಹಿಸುತ್ತೇನೆ ಎಂದರು.

Ad Widget

Ad Widget

ವಿಜಯೇಂದ್ರ ಅವರೇ ಸೌಜನ್ಯ ಕೇಸ್ ಗೆ ಸುಪ್ರೀಂ ಕೋರ್ಟ್ ಹೋಗಲು ದುಡ್ಡು ಕೊಡ್ತಿವಿ ವಕೀಲರನ್ನು ಕೊಡ್ತಿವಿ ಅಂತ ಹೇಳ್ತಿರಲ್ವ ನಮಗೆ ಧನಂಜಯ ಸರ್ ಗಿಂತ ಒಳ್ಳೆಯ ಅಡ್ವಕೇಟ್ ಬೇಕಾ ..? ಎಂದು ಪ್ರಶ್ನಿಸಿದರು.

ಧನಂಜಯ್ ಯಾರಾಂತ ವಿಜಯೇಂದ್ರರಿಗೆ ಗೊತ್ತಿಲ್ವ..? ನಮಗೆ ದುಡ್ಡು ವಕೀಲರು ಬೇಡ. ಸಿಬಿಐ ತನ್ನ ವರದಿಯಲ್ಲೇ ಹೇಳಿದೆ ಡಾ.ಆದಂ ಮತ್ತು ಡಾ.ರಶ್ಮಿ ಅವರು ಮಾಡಿರುವ ಸೌಜನ್ಯಳ ಪೋಸ್ಟ್ ಮಾರ್ಟಂ ಸರಿ ಇಲ್ಲ ಅಂತ ಸ್ವತಃ ಸಿಬಿಐ ಹೇಳಿದೆ.

ಮಾತು ಕೇಳಬೇಡಿ ಅಧಿಕೃತ ದಾಖಲೆ ನೋಡಿ ವಿಜಯೇಂದ್ರರೇ ಎಂದರು.

ದೇವೇಗೌಡರು, ಸಿದ್ದರಾಮಯ್ಯ, ಯಡಿಯೂರಪ್ಪನವರ ರೀತಿ ದಾಖಲೆಗಳನ್ನು ಅಧ್ಯಯನ ಮಾಡಿ ಮುತ್ಸದಿಗಳಾಗಿ ಐಟಿ ಸೆಲ್ ಮಾಹಿತಿ ನಂಬಬೇಡಿ ಎಂದರು.

ಹೈಕೋರ್ಟ್ ತೀರ್ಪು ,17th ಕೋರ್ಟ್ ತೀರ್ಪು , ಸಿಬಿಐ ಕೋರ್ಟ್ ಏನೂ ಬಂದಿದೆ ಅಂತ ಓದಿ ನೀವು ಯಾತ್ರೆ ಮಾಡಬೇಕಿತ್ತು, ಹಾಗೆ ಮಾಡದೇ ಬಹಳ ತಪ್ಪು ಮಾಡಿದ್ರಿ.

ಸಿಬಿಐ ಹೇಳಿದೆ ತಪ್ಪಿತ್ತಸ್ತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಅಂತ ಇದು ಬಹಳ ಸರಳ ಕೆಲಸ ನಿಮ್ಮದೇ ಗೃಹ ಸಚಿವ ಅಮಿತ್ ಷಾ ರು ಇದ್ದಾರಲ್ವ.

2025 ಜೂ.2 ನೇ ತಾರೀಕು ಅಕ್ವಿಟಲ್ ಕಮಿಟಿ ರಚನೆ ಮಾಡಲಾಗಿದೆ. ಹರಿಶೇಖರಣ್ ಸಾಹೇಬರ ನೇತೃತ್ವದಲ್ಲಿ ಅಕ್ವಿಟಲ್ ಕಮಿಟಿ ಆಗಿದೆ

ಸಿಬಿಐ ಶಿಪಾರಸ್ಸು ಮಾಡಿದ್ದಾರೆ ತಪ್ಪಿತ್ತಸ್ತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಕ್ವಿಟಲ್ ಕಮಿಟಿ ಶಿಪಾರಸ್ಸು ಮಾಡಿದೆ , ವಿಜಯೇಂದ್ರರು ಅಮಿತ್ ಷಾ ಜೊತೆ ಮಾತನಾಡಿ ತಪ್ಪಿತ್ತಸ್ತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದರು.

ಸೌಜನ್ಯ ಶಕ್ತಿ ಏನಂತ ನಿಮಗೂ ಸಮಾವೇಶ ಮಾಡಿದ ನಂತರ ಅರಿವು ಆಗಿರಬಹುದು, ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ ಕೇಶವ ಗೌಡರೇ ಬಿಜೆಪಿಯವರದು ಸ್ಕ್ರಿಪ್ಟೆಡ್ ನಾಟಕ ಎಂದಿದ್ದಾರೆ ಎಂದು ಮಟ್ಟಣ್ಣನವರ್ ಹೇಳಿದರು.

Ad Widget
Click to comment

Leave a Reply

ಬಿಗ್ ನ್ಯೂಸ್

Puttur-ಎಸ್‌ಡಿಪಿಐ ನಿರಂತರ ಪ್ರಯತ್ನ: ಪುತ್ತೂರಿನ ಅಲ್ಪಸಂಖ್ಯಾತರ ಸೇವಾ ಕೇಂದ್ರ ಪುನರಾರಂಭ

Published

on

Ad Widget

Ad Widget

Ad Widget

Ad Widget

ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಪುತ್ತೂರು ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಇದೀಗ ಮತ್ತೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಕೇಂದ್ರವನ್ನು ಪುನರಾರಂಭಿಸುವಂತೆ ಎಸ್‌ಡಿಪಿಐ ಪುತ್ತೂರು ನಗರ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ನಿರಂತರ ಪ್ರಯತ್ನ ನಡೆಸಿತ್ತು.

Ad Widget

Ad Widget

Ad Widget

Ad Widget

ಪುತ್ತೂರು: ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಪುತ್ತೂರು ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಇದೀಗ ಮತ್ತೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ.

Ad Widget

Ad Widget alt="Ad Widget"/>

Ad Widget

ಕೇಂದ್ರವನ್ನು ಪುನರಾರಂಭಿಸುವಂತೆ ಎಸ್‌ಡಿಪಿಐ ಪುತ್ತೂರು ನಗರ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ನಿರಂತರ ಪ್ರಯತ್ನ ನಡೆಸಿತ್ತು. ಸಾರ್ವಜನಿಕರಿಗೆ ಅನುಕೂಲವಾಗುವ ಈ ಸೇವಾ ಕೇಂದ್ರವನ್ನು ಮತ್ತೆ ಆರಂಭಿಸಬೇಕೆಂದು ಸಮಿತಿಯು ಒತ್ತಾಯಿಸಿತ್ತು.

Ad Widget

Ad Widget <> Ad Widget

ಈ ನಡುವೆ, ಕೇಂದ್ರಕ್ಕೆ ಸಂಬಂಧಿಸಿದ ಕಟ್ಟಡವನ್ನು ಹಾಸ್ಟೆಲ್ ಬಳಕೆಗೆ ಪರಿವರ್ತಿಸಲು ಪುತ್ತೂರು ಶಾಸಕರು ಪ್ರಯತ್ನಿಸಿದ್ದರು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಮೂರು ವರ್ಷಗಳ ಬಳಿಕ ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಮತ್ತೆ ಕಾರ್ಯಾರಂಭ ಮಾಡಿದ್ದು, ಸಾರ್ವಜನಿಕರಿಗೆ ಸೇವೆ ಲಭ್ಯವಾಗಿರುವುದಾಗಿ ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಅಂತರ ರಾಜ್ಯ

Toll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್‌ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್‌ಗೆ SMS, 10 ಸಾವಿರ ರೂ.ವರೆಗೆ ದಂಡ..!

Published

on

Ad Widget

Ad Widget

Ad Widget

Ad Widget

ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ನೋಂದಣಿ ಸಂಖ್ಯೆಯ ಆಧಾರದ ಮೇಲೆ ವಿಮೆಯ ಮಾನ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ.

Ad Widget

Ad Widget

Ad Widget

Ad Widget

ನವದೆಹಲಿ: ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ನೋಂದಣಿ ಸಂಖ್ಯೆಯ ಆಧಾರದ ಮೇಲೆ ವಿಮೆಯ ಮಾನ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ.

Ad Widget

Ad Widget alt="Ad Widget"/>

Ad Widget

ಈ ವ್ಯವಸ್ಥೆಯ ಪ್ರಕಾರ, ಟೋಲ್ ಪ್ಲಾಜಾ ದಾಟುವ ವಾಹನದ ವಿಮೆ ಚಾಲ್ತಿಯಲ್ಲಿದೆಯೇ ಎಂಬುದನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಾಗುತ್ತದೆ. ಒಂದು ವೇಳೆ ವಿಮೆಯ ಅವಧಿ ಮುಗಿದಿದ್ದರೆ, ವಾಹನದ ಮಾಲೀಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ತಕ್ಷಣವೇ SMS ಮೂಲಕ ಎಚ್ಚರಿಕೆ ಸಂದೇಶ ಕಳುಹಿಸಲಾಗುತ್ತದೆ. ವಿಮೆ ಇಲ್ಲದೆ ವಾಹನ ಚಲಾಯಿಸುವವರಿಗೆ ನಿಯಮಾನುಸಾರ 10,000 ರೂ.ವರೆಗೆ ದಂಡ ವಿಧಿಸುವ ಅವಕಾಶವೂ ಇದೆ.

Ad Widget

Ad Widget <> Ad Widget

ಟೋಲ್ ಪ್ಲಾಜಾದಲ್ಲಿ ವಿಮೆ ಪರಿಶೀಲನೆ ಹೇಗೆ?
ಹೊಸ ವ್ಯವಸ್ಥೆಯು ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ನಿರ್ವಹಿಸುವ ‘ವಾಹನ್’ (VAHAN) ಡೇಟಾಬೇಸ್‌ನಲ್ಲಿರುವ ವಾಹನಗಳ ನೋಂದಣಿ ಹಾಗೂ ವಿಮೆಯ ಮಾಹಿತಿಯನ್ನು ಆಧರಿಸಿ ಕಾರ್ಯನಿರ್ವಹಿಸಲಿದೆ.

ವಾಹನ ಟೋಲ್ ಪ್ಲಾಜಾ ದಾಟುವಾಗ ಅದರ ನೋಂದಣಿ ಸಂಖ್ಯೆಯನ್ನು ಗುರುತಿಸಿ, ಡೇಟಾಬೇಸ್‌ನಲ್ಲಿರುವ ವಿಮೆಯ ವಿವರಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಈ ಮೂಲಕ ವಿಮೆ ಚಾಲ್ತಿಯಲ್ಲಿದೆಯೇ ಅಥವಾ ಅವಧಿ ಮುಗಿದಿದೆಯೇ ಎಂಬುದನ್ನು ತಂತ್ರಜ್ಞಾನದ ಸಹಾಯದಿಂದ ಪರಿಶೀಲಿಸಲಾಗುತ್ತದೆ.

Ad Widget

Ad Widget

ವಿಮೆಯ ಅವಧಿ ಮುಗಿದಿದ್ದರೆ ಕೆಲವೇ ನಿಮಿಷಗಳಲ್ಲಿ ವಾಹನ ಮಾಲೀಕರ ಮೊಬೈಲ್‌ಗೆ SMS ರವಾನೆಯಾಗಲಿದೆ.

SMSನಲ್ಲಿ ಯಾವ ಮಾಹಿತಿ ಇರಲಿದೆ?
ವಾಹನದ ವಿಮೆ ಅವಧಿ ಮುಗಿದಿದ್ದರೆ ಮಾಲೀಕರಿಗೆ ಕಳುಹಿಸುವ ಸಂದೇಶದಲ್ಲಿ ಈ ಕೆಳಗಿನ ವಿವರಗಳಿರಲಿವೆ:

  • ವಾಹನದ ನೋಂದಣಿ ಸಂಖ್ಯೆ.
  • ಟೋಲ್ ಪ್ಲಾಜಾ ದಾಟಿದ ದಿನಾಂಕ ಮತ್ತು ಸಮಯ.
  • ವಾಹನದ ವಿಮೆ ಅವಧಿ ಮುಗಿದ ದಿನಾಂಕ.
  • ವಿಮೆಯನ್ನು ನವೀಕರಿಸಿಕೊಳ್ಳುವಂತೆ ಸೂಚನೆ.
    ಈ ಮೂಲಕ ವಾಹನ ಮಾಲೀಕರು ವಿಮೆಯನ್ನು ತಕ್ಷಣ ನವೀಕರಿಸಿಕೊಳ್ಳಲು ಎಚ್ಚರಿಕೆ ನೀಡುವ ಉದ್ದೇಶ ಹೊಂದಲಾಗಿದೆ.
  • ವಿಮೆ ಇಲ್ಲದೆ ವಾಹನ ಚಲಾಯಿಸಿದರೆ ಎಷ್ಟು ದಂಡ?
  • ಮೋಟಾರು ವಾಹನ ಕಾಯ್ದೆಯ ಪ್ರಕಾರ ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಂದು ವಾಹನಕ್ಕೂ ಮಾನ್ಯವಾದ ಥರ್ಡ್ ಪಾರ್ಟಿ ವಿಮೆ ಹೊಂದಿರುವುದು ಕಡ್ಡಾಯವಾಗಿದೆ. ಅಪಘಾತ ಸಂಭವಿಸಿದಾಗ ಮತ್ತೊಬ್ಬ ವ್ಯಕ್ತಿಗೆ ಗಾಯ, ಸಾವು ಅಥವಾ ಆಸ್ತಿಗೆ ಹಾನಿಯಾದರೆ ಪರಿಹಾರ ನೀಡಲು ಈ ವಿಮೆ ನೆರವಾಗುತ್ತದೆ.

ಮಾನ್ಯ ವಿಮೆ ಇಲ್ಲದೆ ವಾಹನ ಚಲಾಯಿಸುವುದು ಕಾನೂನು ಉಲ್ಲಂಘನೆಯಾಗಿದ್ದು, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 196ರ ಅಡಿಯಲ್ಲಿ ಮೊದಲ ಬಾರಿಗೆ ತಪ್ಪು ಎಸಗಿದರೆ 2,000 ರೂ. ಹಾಗೂ ಮರುಕಳಿಸಿದರೆ 4,000 ರೂ. ದಂಡ ಅಥವಾ ಕಾಯ್ದೆಯಲ್ಲಿ ನಿಗದಿಪಡಿಸಿರುವ ಇತರ ಶಿಕ್ಷೆ ವಿಧಿಸಬಹುದು.

ಸದ್ಯ ಒಂದು ಟೋಲ್ ಪ್ಲಾಜಾದಲ್ಲಿ ಮಾತ್ರ ಪ್ರಾಯೋಗಿಕ ಪರೀಕ್ಷೆ
ಪ್ರಸ್ತುತ ದೆಹಲಿಯ ಅರ್ಬನ್ ಎಕ್ಸ್‌ಟೆನ್ಷನ್ ರಸ್ತೆ-2 (UER-II)ಯ ಮುಂಡ್ಯಾ ಟೋಲ್ ಪ್ಲಾಜಾದಲ್ಲಿ ಈ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಪ್ರಯೋಗ ಯಶಸ್ವಿಯಾದರೆ ದೇಶದ ಇತರ ಟೋಲ್ ಪ್ಲಾಜಾಗಳಿಗೂ ವಿಸ್ತರಿಸುವ ಕುರಿತು NHAI ಚಿಂತನೆ ನಡೆಸಿದೆ.

ಆದರೆ ದೇಶಾದ್ಯಂತ ಈ ವ್ಯವಸ್ಥೆ ಯಾವಾಗ ಜಾರಿಗೆ ಬರಲಿದೆ ಎಂಬ ಬಗ್ಗೆ ಪ್ರಾಧಿಕಾರ ಇನ್ನೂ ಅಧಿಕೃತ ದಿನಾಂಕ ಪ್ರಕಟಿಸಿಲ್ಲ. ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ವಾಹನ ಸವಾರರೇ ಎಚ್ಚರ: ನಿಮ್ಮ ವಾಹನದ ವಿಮೆಯ ಅವಧಿಯನ್ನು ಆಗಾಗ್ಗೆ ಪರಿಶೀಲಿಸಿ. ಅವಧಿ ಮುಗಿಯುವ ಮೊದಲೇ ವಿಮೆಯನ್ನು ನವೀಕರಿಸಿಕೊಳ್ಳಿ. ವಿಮೆ ಇಲ್ಲದೆ ವಾಹನ ಚಲಾಯಿಸುವುದು ಕಾನೂನುಬಾಹಿರವಾಗಿದ್ದು, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ದೊಡ್ಡ ಆರ್ಥಿಕ ಹೊರೆ ಎದುರಿಸಬೇಕಾಗಬಹುದು.

Ad Widget
Continue Reading

ಬಿಗ್ ನ್ಯೂಸ್

Puttur-ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ

Published

on

Ad Widget

Ad Widget

Ad Widget

Ad Widget

ಗ್ರಾಮೀಣ ಗುಡಿ ಕೈಗಾರಿಕೆಯಾದ ಕುಂಬಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ವಲಯದ ಮೂಲಕ ನಿರಂತರವಾಗಿ ಶ್ರಮಿಸುತ್ತಿರುವ, 69 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿಗೆ ಆಯ್ಕೆಯಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಗ್ರಾಮೀಣ ಗುಡಿ ಕೈಗಾರಿಕೆಯಾದ ಕುಂಬಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ವಲಯದ ಮೂಲಕ ನಿರಂತರವಾಗಿ ಶ್ರಮಿಸುತ್ತಿರುವ, 69 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿಗೆ ಆಯ್ಕೆಯಾಗಿದೆ.

Ad Widget

Ad Widget alt="Ad Widget"/>

Ad Widget

73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

Ad Widget

Ad Widget <> Ad Widget

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 18 ಶಾಖೆಗಳನ್ನು ಹೊಂದಿರುವ ಈ ಸಂಘವು ಕುಂಬಾರಿಕೆ ಉದ್ಯಮದ ಉತ್ತೇಜನ ಹಾಗೂ ಗ್ರಾಮೀಣ ಕುಶಲಕರ್ಮಿಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದೆ.

ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ಸಂಘವು ಕುಂಬಾರಿಕೆ ಉತ್ಪಾದನಾ ತರಬೇತಿ ಕೇಂದ್ರವನ್ನು ಹೊಂದಿದೆ. ಇಲ್ಲಿ ಗ್ರಾಮೀಣ ಕುಂಬಾರಿಕೆಯ ಉತ್ಪಾದನೆ ಹಾಗೂ ತರಬೇತಿ ನೀಡಲಾಗುತ್ತಿದ್ದು, ಇಂತಹ ಸೌಲಭ್ಯ ಹೊಂದಿರುವ ರಾಜ್ಯದ ಏಕೈಕ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Ad Widget

Ad Widget

ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!