ಅಂತರ ರಾಜ್ಯ
Moodappa Seva-ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವ : 33 ವರ್ಷಗಳ ನಂತರ ನಾಳೆ ಮಹಾ ಮೂಡಪ್ಪ ಸೇವೆ : ಇಲ್ಲಿ ಮೂಡಪ್ಪ ಸೇವೆ ಹರಕೆ ಹೇಳಿ ಅಣುಸ್ಥಾವರವೇ ಸ್ಥಗಿತಗೊಂಡಿತು..!
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಾಳೆ(ಎ.5)ಬ್ರಹಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ನೇತೃತ್ವದಲ್ಲಿ ಮಹಾ ಗಣಪತಿಗೆ ಮೂಡಪ್ಪ ಸೇವೆ ಜರಗಲಿದೆ.
ಮಧೂರು, ಎ.4: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಾಳೆ(ಎ.5)ಬ್ರಹಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ನೇತೃತ್ವದಲ್ಲಿ ಮಹಾ ಗಣಪತಿಗೆ ಮೂಡಪ್ಪ ಸೇವೆ ಜರಗಲಿದೆ.
ಬೆಳಗ್ಗೆ 5 ರಿಂದ ದೀಪದ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, 9 ರಿಂದ ಮಹಾಮೂಡಪ್ರಸೇವೆಯ ಆರಿಕೊಟ್ಟಿಗೆ ಮುಹೂರ್ತ, ಅಪ್ಪ ಮಾಡಲು ಪ್ರಾರಂಭ, ಮಹಾಪೂಜೆ, ಸಂಜೆ 5 ರಿಂದ ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಸವಾರಿ, ರಾತ್ರಿ 8 ಕ್ಕೆ ಶ್ರೀ ದೇವರ ಬೆಡಿಕಟ್ಟೆಯಲ್ಲಿ ಸುಡುಮದ್ದಿನ ಪ್ರದರ್ಶನ, 10 ಕ್ಕೆ ಶ್ರೀ ಭೂತಬಲಿ, ಮಹಾ ಮೂಡಪ್ರಾಧಿವಾಸ ಹೋಮ, 11 ರಿಂದ ಶ್ರೀ ಮಹಾಗಣಪತಿ ದೇವರಿಗೆ ಮಹಾಮೂಡಪ್ಪ ಸಮರ್ಪಣೆ, ಶಯ್ಯಾಕಲ್ಪನೆ, ಕವಾಟ ಬಂಧನ ನಡೆಯಲಿದೆ. ಎ.6 ರಂದು ಬೆಳಗ್ಗೆ 6.20 ಕ್ಕೆ ಕವಾಟೋದ್ಘಾಟನೆ, ಆಪೂವ ಪರ್ವತದ ಮಧ್ಯದಿಂದ ಮೂಡಿ ಬರುವ ಶ್ರೀ ಸಿದ್ದಿವಿನಾಯಕ ದೇವರ ದಿವ್ಯ ದರ್ಶನ, ಪ್ರಸನ್ನ ಪೂಜೆ, ಅಪೂಪ ಪ್ರಸಾದ ವಿತರಣೆ, 128 ಕಾಯಿ ಅನ್ನದವ್ಯ ಮಹಾಗಣಪತಿ ಯಾಗ ಮಹಾಪೂಜೆ, ಸಂಜೆ 6 ರಿಂದ ಜಳಕದ ಬಲಿ, ಕಟ್ಟೆಪೂಜೆ, ಶ್ರೀ ದೇವರ ಕೆರೆಯಲ್ಲಿ ಅವಭ್ರಥ ಸ್ನಾನ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.
ಮೂಡಪ್ಪ ಸೇವೆ:
ವಿಗ್ರಹವನ್ನು ಅಪ್ಪಗಳಿಂದ ಮುಚ್ಚುವ ಈ ಸೇವೆಯನ್ನು ಒಂದಿಬ್ಬರಿಂದ ಮಾಡಲು ಸಾಧ್ಯವಿಲ್ಲ. ಭಕ್ತರು ಸಾಮೂಹಿಕವಾಗಿ ಮಾಡುವ ಸೇವೆ ಇದು. ಹಾಗೆಂದು ಆಗಿಂದಾಗ ಇದನ್ನು ಮಾಡಲಾಗುವುದಿಲ್ಲ. ಇದು ದೊಡ್ಡ ವೆಚ್ಚ ಬರುವ ಸೇವೆಯಾದುದರಿಂದ ಅತ್ಯಂತ ಅಪೂರ್ವವಾಗಿ ನಡೆಯುತ್ತದೆ. 160 ವರ್ಷಗಳ ನಂತರ ಏಪ್ರಿಲ್ 1962ರಲ್ಲಿ ಮತ್ತು ಏಪ್ರಿಲ್ 1992ರಲ್ಲಿ ಈ ಮಹಾ ಸೇವೆಯನ್ನು ಶ್ರೀಕ್ಷೇತ್ರದಲ್ಲಿ ನಡೆಸಲಾಯಿತು.
ಕಾಸರಗೋಡಿಗೆ ಅಣುಸ್ಥಾವರ ಸ್ಥಾಪಿಸುವ ಬಗ್ಗೆ ಸರ್ಕಾರ ನಿರ್ದಾರ ಕೈಗೊಂಡಾಗ ಬಾರಿ ವಿರೋಧ ವ್ಯಕ್ತವಾಯಿತು. ಆದರೂ ಸ್ಥಾವರ ಸ್ಥಾಪಿಸಲು ಮುಂದಾದಾಗ ಮಧೂರು ಮಹಾಗಣಪತಿಗೆ ಮೂಡಪ್ಪ ಸೇವೆಯ ಹರಕೆ ಹೇಳಿಕೊಳ್ಳಲಾಯಿತು. ನಂತರ ಸೋವಿಯತ್ ಒಕ್ಕೂಟದೊಳಗೆ ಗೊಂದಲಗಳು ಸೃಷ್ಟಿಯಾಗಿ ಅಣುಸ್ಥಾವರ ಸ್ಥಾಪನೆ ಸ್ಥಗಿತಗೊಂಡಿತು. 1992ರಲ್ಲಿ ಮಧೂರು ದೇವಸ್ಥಾನದಲ್ಲಿ ಮಹಾ ಮೂಡಪ್ಪ ಸೇವೆ ಹರಕೆ ತೀರಿಸಲಾಯಿತು. ಅದಕ್ಕೂ ಮೊದಲು ಬ್ರಿಟೀಷರ ದಬ್ಬಾಳಿಕೆ ವಿರುದ್ಧ ಮಹಾಮೂಡಪ್ಪ ಸೇವೆ ಹರಕೆ ಸಲ್ಲಿಸಲಾಗಿದೆ ಎನ್ನುವುದು ಚರಿತ್ರೆ.
ಅಪ್ಪ ತಯಾರಿಯ ನೇತೃತ್ವ ದೇವನರ್ತಕ ಧನಂಜಯರಿಗೆ
ಕೇರಳ, ಕರ್ನಾಟಕದ ಪ್ರಶಸ್ತಿ ವಿಜೇತ ದೇವನರ್ತಕರಾದ ಮಧೂರು ಕ್ಷೇತ್ರ ಸಿಬಂಧಿ ಧನಂಜಯರಿಗೆ ಈ ಬಾರಿಯ ಮೂಡಪ್ಪ ಸೇವೆಯ ಅಪ್ಪ ತಯಾರಿಯ ಚುಕ್ಕಾಣಿ ಮಹಾಗಣಪತಿ ಕೃಪೆಯಿಂದ ಒಲಿದಿದೆ. ಇವರು ಮಧೂರಿನ ಪಡು ಕಕ್ಕೆಪ್ಪಾಡಿ ಮನೆಯವರು. ಈ ಹಿಂದೆ ಮಧೂರಿನಲ್ಲಿ ನಡೆದ 1962ರ ಮೂಡಪ್ಪ ಸೇವೆ ಮತ್ತು 1992ರ ಮೂಡಪ್ಪ ಸೇವೆಯಲ್ಲಿ ಆ ಕಾಲದ ಪ್ರಸಿದ್ಧ ದೇವನರ್ತಕರಾಗಿದ್ದ , ಧನಂಜಯರ ತಂದೆ ಪಡುಕಕ್ಕೆಪ್ಪಾಡಿ ರಾಮಕೃಷ್ಣ ಭಟ್ಟರಿಗೆ ಈ ಸುಯೋಗ ಒಲಿದಿತ್ತು.
ಆದರೆ 1992ರಲ್ಲಿ ಅಪ್ಪನ ಜತೆ ಧನಂಜಯರೂ ಸಹಾಯಕರಾಗಿ ಮಧೂರು ಗಣಪತಿಯನ್ನು ಅಪೂಪ ಪರ್ವತದಲ್ಲಿ ಮುಚ್ಚುವ ಸಹಸ್ರಾರು ಅಪ್ಪ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು. ಬಳಿಕ 2008ರಲ್ಲಿ ಪಡುಕಕ್ಕೆಪ್ಪಾಡಿ ರಾಮಕೃಷ್ಣ ಭಟ್ಟರ ಅಗಲಿಕೆಯೊಂದಿಗೆ ಮಧೂರಿನ ವಿಶೇಷ ಅಪ್ಪ ತಯಾರಿಯ ಹೊಣೆಗಾರಿಕೆ ಧನಂಜಯರ ಹೆಗಲೇರಿತು. ಮಧೂರು ಕ್ಷೇತ್ರದಲ್ಲಿ ಸೇವೆಗೈಯ್ಯುತ್ತಾ, ಅತ್ಯುತ್ತರ ಕೇರಳದ ಅತ್ಯಂತ ವಿಶಿಷ್ಟವಾದ ತಿಡಂಬ್ ನೃತ್ಯ ಪ್ರವೀಣರಾಗಿ ಜನಮನ್ನಣೆ ಪಡೆದ ಇವರಿಗಿದು ಗಣಪತಿಯೇ ಒದಗಿಸಿದ ಸುಯೋಗ.
ವಿಶೇಷ ಬಸ್ ಸೇವೆ:
ಈ ವಿಶೇಷ ಬಸ್ ಸೇವೆಯು ಎ.4 ರಿಂದ ಎ.6ರವರೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಬಸ್ ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಮಧೂರಿಗೆ ಬೆಳಗ್ಗೆ 10 ಗಂಟೆಗೆ ಮತ್ತು 10.20ಕ್ಕೆ ಹೊರಡಲಿದೆ. ಮಧೂರಿನಿಂದ ಮಂಗಳೂರಿಗೆ 1.30 ಮತ್ತು 1.45ಕ್ಕೆಹೊರಡಲಿದೆ.
ಅಂತರ ರಾಜ್ಯ
ಕಾಸರಗೋಡು: ಆರ್‌ಎಸ್‌ಎಸ್ ವಕ್ತಾರರ ಭಾಗವಹಿಸುವಿಕೆ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಾಯ
ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಅಂಗವಾಗಿ ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವಕ್ತಾರರು ಭಾಗವಹಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಕಾಸರಗೋಡು, ಅ.6: ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಅಂಗವಾಗಿ ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವಕ್ತಾರರು ಭಾಗವಹಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಸಾಹಿತ್ಯ ಅಕಾಡೆಮಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ವಿಚಾರಸಂಕಿರಣ ಆಯೋಜಿಸಲಾಗಿದೆ. ಆರ್‌ಎಸ್‌ಎಸ್‌ನ ಬೌದ್ಧಿಕ ವಿಭಾಗವೆಂದು ಪರಿಗಣಿಸಲಾಗುವ ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ್ ಅವರು ವಿಚಾರಸಂಕಿರಣದಲ್ಲಿ ಮುಖ್ಯ ಭಾಷಣ ಮಾಡುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾರ್ಯಕ್ರಮ ನಡೆಯುತ್ತಿದ್ದ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳು ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ಸಂಭವಿಸಿದೆ.
ಘರ್ಷಣೆಯಲ್ಲಿ ಎಸ್‌ಎಫ್‌ಐ ಕೇರಳ ಕೇಂದ್ರ ವಿಶ್ವವಿದ್ಯಾಲಯ ಘಟಕದ ಕಾರ್ಯದರ್ಶಿ ಸೈಯದ್ ಅಲಿ, ಪ್ಲಾಂಟ್ ಸೈನ್ಸ್ ವಿಭಾಗದ ಅಭಿರಾಗ್ ಹಾಗೂ ಇಂಟರ್‌ನ್ಯಾಷನಲ್ ರಿಲೇಶನ್ಸ್ ವಿಭಾಗದ ಮುರಳೀಕೃಷ್ಣನ್ ಎಂಬ ಮೂವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಂತರ ರಾಜ್ಯ
Fire truck-ಬಿಜೆಪಿ ಶಾಸಕನ ಬಂಗಲೆ ತೊಳೆಯಲು ಅಗ್ನಿಶಾಮಕ ವಾಹನ ಬಳಕೆ; ವಿಡಿಯೋ ವೈರಲ್ ಬಳಿಕ ₹2,700 ದಂಡ
ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಬಂಗಲೆಯನ್ನು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳದ ವಾಹನ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.
ದಾಹೋದ್: ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಬಂಗಲೆಯನ್ನು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳದ ವಾಹನ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.
ದೇವಗಢ್ ಬಾರಿಯಾ ಪುರಸಭೆಯ ಅಗ್ನಿಶಾಮಕ ವಾಹನವು ಧನ್‌ಪುರ್ ತಾಲೂಕಿನಲ್ಲಿರುವ ಬಿಜೆಪಿ ಶಾಸಕ ಬಚುಭಾಯ್ ಖಬಾದ್ ಅವರ ನಿವಾಸದ ಬಳಿ ನಿಂತಿದ್ದು, ಸಿಬ್ಬಂದಿ ಬಂಗಲೆಯ ಆವರಣ ಹಾಗೂ ಗೋಡೆಗಳಿಗೆ ಪೈಪ್ ಮೂಲಕ ನೀರು ಸಿಂಪಡಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವಿಡಿಯೋ ವೈರಲ್ ಆದ ಬಳಿಕ ತುರ್ತು ಸೇವೆಗೆ ಮೀಸಲಾಗಿರುವ ಅಗ್ನಿಶಾಮಕ ವಾಹನವನ್ನು ವೈಯಕ್ತಿಕ ಬಳಕೆಗೆ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಖಬಾದ್ ಅವರಿಂದ ₹2,700 ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದೇವಗಢ್ ಬಾರಿಯಾ ಪುರಸಭೆ ಅಧ್ಯಕ್ಷ ಘಮೇಶ್ ಕಲಾಲ್, ಅಗ್ನಿಶಾಮಕ ವಾಹನ ಕಳುಹಿಸುವಂತೆ ಶಾಸಕರು ಕರೆ ಮಾಡಿದ್ದರು. ಯಾವುದಾದರೂ ಗಂಭೀರ ಘಟನೆ ಸಂಭವಿಸಿರಬಹುದು ಎಂದು ಭಾವಿಸಿ ತಕ್ಷಣ ಅಗ್ನಿಶಾಮಕ ದಳವನ್ನು ಸಂಪರ್ಕಿಸಿ ವಾಹನ ಕಳುಹಿಸಿದ್ದಾಗಿ ತಿಳಿಸಿದ್ದಾರೆ.
ಆದರೆ, ಬಂಗಲೆ ಸ್ವಚ್ಛಗೊಳಿಸುವ ಉದ್ದೇಶಕ್ಕಾಗಿ ಅಗ್ನಿಶಾಮಕ ವಾಹನವನ್ನು ಬಳಸಲಾಗುತ್ತಿದೆ ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಬಂಗಲೆ ತೊಳೆಯಲು ವಾಹನ ಬಳಸಲಾಗುತ್ತದೆ ಎಂಬ ಮಾಹಿತಿ ಮುಂಚಿತವಾಗಿ ನೀಡಲಾಗಿರಲಿಲ್ಲ. ಈ ಕಾರಣದಿಂದ ಅಚಾತುರ್ಯ ಸಂಭವಿಸಿದೆ. ಇದೀಗ ತಪ್ಪಿತಸ್ಥರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೃಹತ್ ಬಂಗಲೆಯೊಂದರ ಮುಂಭಾಗ ಅಗ್ನಿಶಾಮಕ ವಾಹನ ನಿಂತಿರುವುದು ಕಾಣಿಸುತ್ತದೆ. ಅಗ್ನಿಶಾಮಕ ಸಿಬ್ಬಂದಿ ಪೈಪ್‌ಗಳ ಮೂಲಕ ಬಂಗಲೆಯ ಕಂಪೌಂಡ್ ಹಾಗೂ ಗೋಡೆಗಳಿಗೆ ನೀರು ಸಿಂಪಡಿಸಿ ಸ್ವಚ್ಛಗೊಳಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.
ಸಿನೆಮಾ
Drishyam 3-ಮಲಯಾಳಂ ನ ದಾಖಲೆ ಮುರಿದು ಬಾಕ್ಸ್ ಆಫೀಸ್‌ನಲ್ಲಿ ‘ದೃಶ್ಯಂ 3’ ಧಮಾಕಾ; 4 ದಿನದಲ್ಲೇ ₹300 ಕೋಟಿ ಕ್ಲಬ್‌ಗೆ ಎಂಟ್ರಿ..!
ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3: ದಿ ಕನ್‌ಕ್ಲೂಷನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ₹300 ಕೋಟಿ ಗಡಿ ದಾಟಿದೆ. ಚಿತ್ರದ ಒಟ್ಟು ವಿಶ್ವಾದ್ಯಂತ ಗಳಿಕೆ ಇದೀಗ ₹303 ಕೋಟಿ ತಲುಪಿದೆ.
ಮುಂಬೈ: ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3: ದಿ ಕನ್‌ಕ್ಲೂಷನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ₹300 ಕೋಟಿ ಗಡಿ ದಾಟಿದೆ. ಚಿತ್ರದ ಒಟ್ಟು ವಿಶ್ವಾದ್ಯಂತ ಗಳಿಕೆ ಇದೀಗ ₹303 ಕೋಟಿ ತಲುಪಿದೆ.
ಬಿಡುಗಡೆಯ ನಾಲ್ಕನೇ ದಿನ ಚಿತ್ರವು ಭಾರತದಲ್ಲಿ 16,274 ಪ್ರದರ್ಶನಗಳಿಂದ ಸುಮಾರು ₹21 ಕೋಟಿ ನಿವ್ವಳ ಗಳಿಸಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ ₹197.50 ಕೋಟಿಗೆ ತಲುಪಿದ್ದು, ಒಟ್ಟು ಕಲೆಕ್ಷನ್ ಸುಮಾರು ₹237 ಕೋಟಿ ಆಗಿದೆ.
ಚಿತ್ರಕ್ಕೆ ಭಾರತ ಮಾತ್ರವಲ್ಲದೆ ಸಾಗರೋತ್ತರ ಮಾರುಕಟ್ಟೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾಲ್ಕನೇ ದಿನ ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು ₹5 ಕೋಟಿ ಗಳಿಸಿದ್ದು, ಇದರೊಂದಿಗೆ ವಿದೇಶದಲ್ಲಿನ ಒಟ್ಟು ಗಳಿಕೆ ₹66 ಕೋಟಿ ತಲುಪಿದೆ.
ಮಲಯಾಳಂ ‘ದೃಶ್ಯಂ 3’ ಗಳಿಕೆಯನ್ನೂ ಮೀರಿಸಿದ ಹಿಂದಿ ಸಿನಿಮಾ
ಅಜಯ್ ದೇವಗನ್ ಅಭಿನಯದ ಹಿಂದಿ ‘ದೃಶ್ಯಂ 3’ಗೂ ಮುನ್ನ ಮೋಹನ್‌ಲಾಲ್ ನಟನೆಯ ಮಲಯಾಳಂ ‘Drishyam 3: The Past Never Stays Silent’ ಬಿಡುಗಡೆಯಾಗಿತ್ತು. ಆ ಚಿತ್ರವು ವಿಶ್ವಾದ್ಯಂತ ₹237.70 ಕೋಟಿ ಗಳಿಕೆ ದಾಖಲಿಸಿತ್ತು ಎಂದು ವರದಿಯಾಗಿದೆ.
-
ದಕ್ಷಿಣ ಕನ್ನಡ20 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ಅಪರಾಧ19 hours agoSomasekhar-ನಕಲಿ ದಾಖಲೆ ಸೃಷ್ಟಿಸಿ ಕೈದಿಯ ಬಿಡುಗಡೆ..! ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಡಿಐಜಿ ಎಂ. ಸೋಮಶೇಖರ್
-
ನಿಧನ ವಾರ್ತೆ18 hours agoPuttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು
-
ಬಿಗ್ ನ್ಯೂಸ್14 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
ಶಿಕ್ಷಣ17 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ18 hours agoDead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
-
ಬಿಗ್ ನ್ಯೂಸ್18 hours agoPuttur-ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ‘ಭಕ್ತರನ್ನು ಕಡೆಗಣಿಸಿ ಜೀರ್ಣೋದ್ಧಾರ ಸಮಿತಿ ರಚನೆ’ – ವಿಹಿಂಪ ಆಕ್ಷೇಪ
-
ರಾಜಕೀಯ19 hours agoDK Shivakumar-ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಭರ್ಜರಿ ಬಹುಮಾನ: 8 ಕ್ರೀಡಾಪಟುಗಳಿಗೆ ₹8 ಕೋಟಿ ಘೋಷಿಸಿದ ಡಿಕೆಶಿ – ಭಾಗವಹಿಸಿದವರಿಗೆ 5 ಲಕ್ಷ


















