Connect with us

ಸ್ಥಳೀಯ

Kalburgi-ಕಲ್ಬುರ್ಗಿ : ತೀವ್ರ ತಾಪಮಾನ – ಈಜುಕೊಳಗಳು ಫುಲ್

Published

on

Ad Widget

Ad Widget

Ad Widget

Ad Widget

ಕಲಬುರಗಿಯಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ ಜನರನ್ನು ತೀವ್ರವಾಗಿ ಕಾಡುತ್ತಿದೆ. ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ಮತ್ತು ದೇಹವನ್ನು ತಂಪಾಗಿಸಿಕೊಳ್ಳಲು ಜನರು ಈಜಿನತ್ತ ಒಲವು ತೋರುತ್ತಿದ್ದಾರೆ. ಇದರ ಪರಿಣಾಮವಾಗಿ, ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣ ಸಮುಚ್ಛಯದಲ್ಲಿರುವ ಈಜುಕೊಳವು ಪ್ರತಿದಿನ ಜನರಿಂದ ಕಿಕ್ಕಿರಿದು ತುಂಬುತ್ತಿದೆ.

Ad Widget

Ad Widget

Ad Widget

Ad Widget

ಕಲಬುರಗಿ: ಕಲಬುರಗಿಯಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ ಜನರನ್ನು ತೀವ್ರವಾಗಿ ಕಾಡುತ್ತಿದೆ. ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ಮತ್ತು ದೇಹವನ್ನು ತಂಪಾಗಿಸಿಕೊಳ್ಳಲು ಜನರು ಈಜಿನತ್ತ ಒಲವು ತೋರುತ್ತಿದ್ದಾರೆ. ಇದರ ಪರಿಣಾಮವಾಗಿ, ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣ ಸಮುಚ್ಛಯದಲ್ಲಿರುವ ಈಜುಕೊಳವು ಪ್ರತಿದಿನ ಜನರಿಂದ ಕಿಕ್ಕಿರಿದು ತುಂಬುತ್ತಿದೆ.

Ad Widget

Ad Widget alt="Ad Widget"/>

Ad Widget

ಹವ್ಯಾಸಿ ಹಾಗೂ ಸ್ಪರ್ಧಾತ್ಮಕ ಈಜು ಸ್ಪರ್ಧಿಗಳು ಸೇರಿ ಹಿಂದಿನ ವರ್ಷಕ್ಕಿಂತ ಸುಮಾರು 200 ಹೆಚ್ಚಿನ ಸ್ಪರ್ಧಿಗಳು ಈ ಬಾರಿ ನೋಂದಾಯಿಸಿಕೊಂಡಿದ್ದು, ಬಿಸಿಲಿನ ಪ್ರಖರತೆಗೆ ಸಾಕ್ಷಿ.

Ad Widget

Ad Widget <> Ad Widget

‘ಹಿಂದಿನ ವರ್ಷ ಸುಮಾರು 1,000 ಮಂದಿ ಈಜಿಗಾಗಿ ನೋಂದಾಯಿಸಿಕೊಂಡಿದ್ದರು. ಈ ಬಾರಿ ಆ ಸಂಖ್ಯೆ 1,200 ದಾಟಿದೆ. ಇದು ಇನ್ನೂ ಆರಂಭ. ಏಪ್ರಿಲ್-ಮೇ ತಿಂಗಳಲ್ಲಿ ಈ ಸಂಖ್ಯೆ ಇನ್ನೂ ಅಧಿಕವಾಗಲಿದೆ’ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ.

ಪ್ರತಿದಿನ ಏಳು ಬ್ಯಾಚ್‌ಗಳನ್ನು ಮಾಡಲಾಗುತ್ತಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಬ್ಯಾಚ್ ಇದೆ. 60ಕ್ಕಿಂತ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಈಜುಕೊಳಕ್ಕೆ ಬರುವವರು ಕ್ಯಾಪ್, ಸಮವಸ್ತ್ರ ಸೇರಿದಂತೆ ಇತರ ಪರಿಕರಗಳನ್ನು ತಾವೇ ತರಬೇಕು. 50 ಮೀಟ‌ರ್ ಅಗಲ ಮತ್ತು 21 ಮೀಟರ್ ಅಗಲ ಇರುವ ಈ ಕೊಳ ಗರಿಷ್ಠ 6 ಅಡಿ ಆಳ ಹೊಂದಿದೆ. ನಾಲ್ಕು ಜನ ಜೀವರಕ್ಷಕರು ಸೇರಿ 12 ಜನ ನಿರ್ವಹಣಾ ಸಿಬ್ಬಂದಿ ಇದ್ದಾರೆ. ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯೇಕ ಕೋಚ್‌ಗಳು ಇದ್ದಾರೆ. ಸ್ನಾನಕೊಳ ಮತ್ತು ಷವ‌ರ್ ವ್ಯವಸ್ಥೆಯೂ ಇಲ್ಲಿದೆ. ಪ್ರತಿದಿನ ಒಂದು ತಾಸು ಸಮಯ ಈಜಬಹುದಾಗಿದೆ.

Ad Widget

Ad Widget

ಪ್ರತಿ ಮಂಗಳವಾರ ಈಜುಕೊಳ ತೆರೆಯುವುದಿಲ್ಲ. ಪ್ರತಿದಿನ ಬೀಚಿಂಗ್ ಪೌಡ‌ರ್ ಮತ್ತು ಇತರೆ ರಾಸಾಯನಿಕ ಬಳಸಿ ಕೊಳವನ್ನು ಸ್ವಚ್ಛ ಮಾಡಲಾಗುತ್ತದೆ.

ಶಾಲೆಗಳಿಗೆ ರಜೆ ಇರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಈಜು ಕಲಿಯಲೆಂದು ಕರೆದುಕೊಂಡು ಬರುವುದು ಹೆಚ್ಚಾಗಿದೆ. 2008ರಲ್ಲಿ ಈ ಈಜುಕೊಳವನ್ನು ನಿರ್ಮಿಸಲಾಗಿದೆ. ಹವ್ಯಾಸಿ ಈಜುಗಾರರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಪರ್ಧಿಗಳಿಗಾಗಿ ಪ್ರತ್ಯೇಕ ಈಜುಕೊಳ ನಿರ್ಮಿಸಬೇಕು ಎಂದು ಹಲವು ಪೋಷಕರು ಒತ್ತಾಯಿಸುತ್ತಾರೆ.

ಬೇಬಿ ಈಜುಕೊಳ ದುರಸ್ತಿಗೆ ಒತ್ತಾಯ:
ಇದೇ ಸಮುಚ್ಛಯದಲ್ಲಿರುವ ಬೇಬಿ ಈಜುಕೊಳವು (ಹತ್ತು ವರ್ಷದೊಳಗಿನವರ) ನೀರಿನ ಸೋರಿಕೆ ಸಮಸ್ಯೆಯಿಂದಾಗಿ ರಿಪೇರಿಗೆ ಕಾದಿದೆ. ಅದನ್ನು ದುರಸ್ತಿ ಮಾಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಈಜು ನೋಂದಣಿ ಶುಲ್ಕ
ತರಬೇತಿ ರಹಿತ (ಪ್ರತಿ ತಿಂಗಳಿಗೆ)
ವಿಭಾಗ;ಶುಲ್ಕ
16 ವರ್ಷದೊಳಗಿನವರು; ₹ 600
16 ವರ್ಷಕ್ಕಿಂತ ಮೇಲಿನವರು ;₹ 1,200
ಸರ್ಕಾರಿ ನೌಕರರು, ಸೀನಿಯರ್ಸ್; ₹ 600

ತರಬೇತಿ ಸಹಿತ (15 ದಿನಕ್ಕೆ)
16 ವರ್ಷದೊಳಗಿನವರು;₹ 1,200
16 ವರ್ಷಕ್ಕಿಂತ ಮೇಲಿನವರು;₹ 1,800
ಸರ್ಕಾರಿ ನೌಕರರು, ಸೀನಿಯರ್ಸ್;₹ 1,200

Ad Widget
Click to comment

Leave a Reply

ಬಿಗ್ ನ್ಯೂಸ್

Muraleedhar Rai-ಮೆಸ್ಕಾಂ ನಿರ್ದೇಶಕರಾಗಿ ಮುರಳೀಧರ ರೈ ಮಠಂತಬೆಟ್ಟು ಸರ್ಕಾರದಿಂದ ನೇಮಕ

Published

on

Ad Widget

Ad Widget

Ad Widget

Ad Widget

ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ 81 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಪೈಕಿ ಮೆಸ್ಕಾಂ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಅವರು ನೇಮಕಗೊಂಡಿದ್ದಾರೆ.

Ad Widget

Ad Widget

Ad Widget

Ad Widget

ಉಪ್ಪಿನಂಗಡಿ: ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ 81 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಪೈಕಿ ಮೆಸ್ಕಾಂ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಅವರು ನೇಮಕಗೊಂಡಿದ್ದಾರೆ.

Ad Widget

Ad Widget alt="Ad Widget"/>

Ad Widget

ಕೋಡಿಂಬಾಡಿ ಮಠಂತಬೆಟ್ಟುವಿನ ಪ್ರತಿಷ್ಠಿತ ಬಂಟ ಕುಟುಂಬದ ಹಿರಿಯ ಕಾಂಗ್ರೆಸ್ ಮುಖಂಡ ಅನಂತ ರೈಯವರ ಪುತ್ರ ಮುರಳೀಧರ ರೈ ಮಠಂತಬೆಟ್ಟು ಅವರು ಹಿರಿಯರ ಕಾಲದಿಂದಲೇ ಕಾಂಗ್ರೆಸ್ ಕುಟುಂಬದಲ್ಲಿ ಬೆಳೆದು ಬಂದವರು.ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಸುಮಾರು ವರ್ಷಗಳ ಕಾಲ ವಲಯ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಜನ ಸೇವೆ ಆರಂಭಿದ ಇವರು ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಪ್ರಸ್ತುತ ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿರುವ ಮುರಳೀಧರ ರೈಯವರನ್ನು ಇದೀಗ ಕರ್ನಾಟಕ ಸರಕಾರ ಮೆಸ್ಕಾಂ ನಿರ್ದೇಶಕರಾಗಿ ನೇಮಕ ಮಾಡಿದೆ.

Ad Widget

Ad Widget <> Ad Widget

Ad Widget
Continue Reading

ಶಿಕ್ಷಣ

Philomena-ಮಂಗಳೂರು ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ಕೂಟದಲ್ಲಿ ಫಿಲೋಮಿನಾ ಕಾಲೇಜಿನ ಕ್ರೀಡಾಪಟುಗಳ ಸಾಧನೆ

Published

on

Ad Widget

Ad Widget

Ad Widget

Ad Widget

ಮಂಗಳೂರಿನ ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನ. 11ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕೂಟದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದು, ಮಹಿಳಾ ತಂಡವು ಸಮಗ್ರವಾಗಿ ಐದನೇ ಹಾಗೂ ಪುರುಷರ ತಂಡವು ಏಳನೇ ಸ್ಥಾನ ಪಡೆದಿದೆ.

Ad Widget

Ad Widget

Ad Widget

Ad Widget

ಪುತ್ತೂರು, ನ. 20: ಮಂಗಳೂರಿನ ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನ. 11ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕೂಟದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದು, ಮಹಿಳಾ ತಂಡವು ಸಮಗ್ರವಾಗಿ ಐದನೇ ಹಾಗೂ ಪುರುಷರ ತಂಡವು ಏಳನೇ ಸ್ಥಾನ ಪಡೆದಿದೆ.

Ad Widget

Ad Widget alt="Ad Widget"/>

Ad Widget

ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ನಿಹಾಲ್ ಪೋಲ್ ವಾಲ್ಟ್‌ನಲ್ಲಿ ಬೆಳ್ಳಿ ಪದಕ ಗಳಿಸಿದರೆ, ತೃತೀಯ ಬಿಎಸ್ಸಿಯ ರಿತೀಶ್ ಡಿಸ್ಕಸ್ ಥ್ರೋ ಹಾಗೂ ಶಾಟ್‌ಪುಟ್‌ನಲ್ಲಿ ತಲಾ ಕಂಚಿನ ಪದಕ ಪಡೆದರು. ದ್ವಿತೀಯ ಬಿಸಿಎಯ ಆಶ್ರಯ್ ಹಾಗೂ ಪ್ರಥಮ ಬಿಕಾಂನ ನಿಶ್ಚಿತ್ 4×400 ಮೀಟರ್ ಮಿಶ್ರ ರಿಲೇಯಲ್ಲಿ ಕಂಚಿನ ಪದಕ ಪಡೆದ ತಂಡದ ಸದಸ್ಯರಾಗಿದ್ದರು.

Ad Widget

Ad Widget <> Ad Widget

ಮಹಿಳಾ ವಿಭಾಗದಲ್ಲಿ ತೃತೀಯ ಬಿಕಾಂನ ಅಮೃತಾ ಹೈಜಂಪ್‌ನಲ್ಲಿ ಕಂಚಿನ ಪದಕ ಗಳಿಸಿದರೆ, ತೃತೀಯ ಬಿಕಾಂನ ಪೃಥ್ವಿ ಹ್ಯಾಮರ್ ಥ್ರೋದಲ್ಲಿ ಕಂಚಿನ ಪದಕ ಪಡೆದರು. ದ್ವಿತೀಯ ಬಿಎಯ ಕೃತಿ 4×400 ಮೀಟರ್ ಮಿಶ್ರ ರಿಲೇಯಲ್ಲಿ ಕಂಚಿನ ಪದಕ ಪಡೆದ ತಂಡದ ಸದಸ್ಯೆಯಾಗಿದ್ದರು. ಪ್ರಥಮ ಬಿಎಯ ಜೀವಿತಾ ಲಾಂಗ್ ಜಂಪ್ ಹಾಗೂ 4×400 ಮೀಟರ್ ಮಿಶ್ರ ರಿಲೇಯಲ್ಲಿ ತಲಾ ಕಂಚಿನ ಪದಕ ಗಳಿಸಿದರು.

ಕ್ರೀಡಾಪಟುಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ದೈಹಿಕ ಶಿಕ್ಷಣ ವಿಭಾಗ ಅಭಿನಂದನೆ ಸಲ್ಲಿಸಿದ್ದು, ಪದಕ ವಿಜೇತರು ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಕ್ರೀಡಾಪಟುಗಳು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

Continue Reading

ಶಿಕ್ಷಣ

Narendra-ಪುತ್ತೂರಿನ ನರೇಂದ್ರ ಪದವಿ ಪೂರ್ವ ಕಾಲೇಜಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರವೀಶ ನಾಯಕ್ ಬಿ.ಸಿ., ಸಂಚಾಲಕರಾಗಿ ಚೇತನ್ ನಾಯಕ್ ಜವಾಬ್ದಾರಿ ಸ್ವೀಕಾರ

Published

on

Ad Widget

Ad Widget

Ad Widget

Ad Widget

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಪ್ರತಿಷ್ಠಿತ ಘಟಕ ಸಂಸ್ಥೆಗಳಲ್ಲಿ ಒಂದಾಗಿರುವ ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಮತ್ತು ಜವಾಬ್ದಾರಿ ಸ್ವೀಕಾರ ಸಮಾರಂಭವು ನ.19 ರಂದು ಕಾಲೇಜಿನ ಆಡಳಿತ ಮಂಡಳಿಯ ಕಚೇರಿಯಲ್ಲಿ ಜರುಗಿತು.

Ad Widget

Ad Widget

Ad Widget

Ad Widget

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಪ್ರತಿಷ್ಠಿತ ಘಟಕ ಸಂಸ್ಥೆಗಳಲ್ಲಿ ಒಂದಾಗಿರುವ ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಮತ್ತು ಜವಾಬ್ದಾರಿ ಸ್ವೀಕಾರ ಸಮಾರಂಭವು ನ.19 ರಂದು ಕಾಲೇಜಿನ ಆಡಳಿತ ಮಂಡಳಿಯ ಕಚೇರಿಯಲ್ಲಿ ಜರುಗಿತು.

Ad Widget

Ad Widget alt="Ad Widget"/>

Ad Widget

ಪುತ್ತೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇಲ್ಲಿ ಕರ್ತವ್ಯ ನಿರ್ವಹಿಸಿ ಉಪ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತ ರಾದ ರವೀಶ ನಾಯಕ್ ಬಿ.ಸಿ. ಇವರು ಕಾಲೇಜಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ವಕೀಲರಾದ ಚೇತನ್ ನಾಯಕ್ ಸಂಚಾಲಕರಾಗಿ, ವಕೀಲರಾದ ಅರುಣ್ ಬಿ.ಕೆ. ಕೋಶಾಧಿಕಾರಿಗಳಾಗಿ, ಹಾಗೂ ಸದಸ್ಯರುಗಳಾಗಿ ಚಾರ್ಟರ್ಡ್ ಅಕೌಂಟೆಂಟ್ ಆದ ಶಿವಕುಮಾರ್
ಹಿಳ್ಳೆಮನೆ, ಅಶ್ವಿನಿ ಕೃಷ್ಣ ಮುಳಿಯ, ಸತ್ಯನಾರಾಯಣ ಬಿ., ಶುಭಾ ಅಡಿಗ, ರಮೇಶ್ ನಾಯಕ್ ಕೆ., ಗೊಲೆಕ್ಸ್ ಕ್ಯಾಟಲ್ ಫೀಡ್ಸ್ ನೈತಾಡಿ ಇದರ ಮಾಲಕರಾದ ಕೃಷ್ಣ ಮೋಹನ್ ಪಿ.ಎಸ್. ಜವಾಬ್ದಾರಿ ಸ್ವೀಕರಿಸಿದರು.

Ad Widget

Ad Widget <> Ad Widget

ಇವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ‍್ಯದರ್ಶಿಗಳಾದ ವಿಜಯನಾರಾಯಣ ಕೆ.ಎಮ್. ದೀಪ ಪ್ರದಾನ ಮಾಡುವ ಮೂಲಕ ಜವಾಬ್ದಾರಿ ಪ್ರದಾನ ಮಾಡಿದರು. ಜೊತೆ ಕರ‍್ಯದರ್ಶಿಗಳಾದ ಭರತ್
ಪೈ, ಕೋಶಾಧಿಕಾರಿಗಳಾದ ಸಂತೋಷ ಬಿ., ನಿರ್ದೇಶಕರಾದ ಮಹಾಕ್ಷ್ಮಿ ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ, ನಿಕಟಪೂರ್ವ ಸಂಚಾಲಕರಾದ ಸಂತೋಷ ಬಿ., ಕೋಶಾಧಿಕಾರಿಗಳಾದ ಸಂಪತ್
ಕುಮಾರ್ , ಸದಸ್ಯರಾದ ಉಮೇಶ್ ನಾಯಕ್, ಮೋಹಿನಿ ದಿವಾಕರ, ಸೂರ್ಯನಾಥ ಆಳ್ವ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶಾನ್ ಭಾಗ್ , ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Ad Widget

Ad Widget

ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ನಿರ್ಗಮಿತ ಸಮಿತಿಯ ಪದಾಧಿಕಾರಿಗಳು ದೀಪ ಜ್ಯೋತಿಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ಉಪಸ್ಥಿತರಿದ್ದು ನೂತನ ಸಮಿತಿಗೆ ಶುಭ ಹಾರೈಸಿದರು.

ನಿರ್ಗಮಿತ ಸಮಿತಿಯ ಪದಾಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.ನೂತನ ಸಮಿತಿಯ ಅಧ್ಯಕ್ಷರು, ಸಂಚಾಲಕರು ಮುಂದಿನ ದಿನಗಳಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಶ್ರಮಿಸುವ ಎಂದು ಎಲ್ಲರ ಸಹಕಾರವನ್ನು ಕೋರಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!