ರಾಜಕೀಯ
Urva SI-ಕಾಂಗ್ರೆಸ್ ಕಾರ್ಯಕರ್ತರಿಗೆ ವಿನಾ ಕಾರಣ ಕಿರುಕುಳ : ಪುತ್ತೂರು ಶಾಸಕ ಅಶೋಕ್ ರೈ ಸೂಚನೆ ಸೂಚನೆಯಂತೆ ಉರ್ವಠಾಣಾ ಎಸ್ ಐ ವರ್ಗಾವಣೆ
ಮಂಗಳೂರು ಉರ್ವಠಾಣೆಯಲ್ಲಿ ಎಸ್ ಐ ಆಗಿದ್ದ ಭಾರತಿ ಅವರನ್ನು ದಿಡೀರನೆ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ ಎಂದು ಅಶೋಕ್ ರೈ ಮಾಧ್ಯಮ ಪ್ರಕಟನೆ ಹೊರಡಿಸಿದ್ದಾರೆ.
ಪುತ್ತೂರು:ಮಂಗಳೂರು ಉರ್ವಠಾಣೆಯಲ್ಲಿ ಎಸ್ ಐ ಆಗಿದ್ದ ಭಾರತಿ ಅವರನ್ನು ದಿಡೀರನೆ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ ಎಂದು ಅಶೋಕ್ ರೈ ಮಾಧ್ಯಮ ಪ್ರಕಟನೆ ಹೊರಡಿಸಿದ್ದಾರೆ.
ಉರ್ವ ಠಾಣೆಯ ಸಬ್ ಇನ್ಸ್ಪೆಕ್ಟರ್ ಭಾರತಿ ಅವರು ಮಂಗಳೂರು ವ್ಯಾಪ್ತಿಯ ಅನೇಕ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಿರಂತರ ಕಿರುಕುಳ ಮತ್ತು ಸುಳ್ಳು ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಯಾರದೋ ರಾಜಕೀಯ ಕುಮ್ಮಕ್ಕಿನಿಂದ ಇವರ ಈ ಕೃತ್ಯ ಕೆಲವು ಸಮಯಗಳಿಂದ ಹೆಚ್ಚಾಗಿಯೇ ಇತ್ತು. ಇವರ ವಿರುದ್ದ ಕ್ರಮಕ್ಕಾಗಿ ಮಂಗಳೂರು ಭಾಗದ ಕಾಂಗ್ರೆಸ್ ಕಾರ್ಯಕರ್ತರು ಪುತ್ತೂರು ಶಾಸಕ ಅಶೋಕ್ ರೈ ಅವರಲ್ಲಿ ದೂರು ನೀಡಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿದಾಗ ಎಸ್ ಐ ಭಾರತಿ ಅವರು ಒಂದು ಪಕ್ಷದ ಆಣತಿಯಂತೆ ನಡೆದುಕೊಳ್ಳುತ್ತಿದ್ದರು, ಅವರ ಸೂಚನೆಯಂತೆ ಪಕ್ಷದ ನಿರಪರಾಧಿ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸನ ದಾಖಲಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿತ್ತು. ರಾಜಕೀಯ ಪ್ರಭಾವ ಬಳಸಿ ಉರ್ವ ಠಾಣೆಯಲ್ಲಿ ಕೆಲವು ವರ್ಷಗಳಿಂದ ಎಸ್ ಐ ಆಗಿರುವ ಇವರನ್ನು ಸರಕರ ವರ್ಗಾವಣೆ ಮಾಡಿ ಆದೇಶಿಸಿದೆ ಎಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜಕೀಯ
Puttur-ಪುತ್ತೂರು: ಅಲ್ಪಸಂಖ್ಯಾತ ಸೇವಾ ಕೇಂದ್ರ ಉದ್ಘಾಟನೆಗೆ ಬಿಜೆಪಿ ಮೋರ್ಚಾದಿಂದ ಆಗ್ರಹ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪುತ್ತೂರಿನ ದರ್ಬೆ ಸಿಟಿ ಗುಡ್ಡೆಯಲ್ಲಿ ನಿರ್ಮಿಸಲಾಗಿರುವ ಅಲ್ಪಸಂಖ್ಯಾತ ಸಾಮಾನ್ಯ ಸೇವಾ ಕೇಂದ್ರವನ್ನು ಯಥಾಸ್ಥಿತಿಯಲ್ಲಿ ಉಳಿಸಿ, ಶೀಘ್ರ ಉದ್ಘಾಟನೆ ಮಾಡಿ ಅಲ್ಪಸಂಖ್ಯಾತ ಸಮುದಾಯದ ಸೇವೆಗೆ ನಿಯೋಜಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಆಗ್ರಹಿಸಿದೆ.
ಪುತ್ತೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪುತ್ತೂರಿನ ದರ್ಬೆ ಸಿಟಿ ಗುಡ್ಡೆಯಲ್ಲಿ ನಿರ್ಮಿಸಲಾಗಿರುವ ಅಲ್ಪಸಂಖ್ಯಾತ ಸಾಮಾನ್ಯ ಸೇವಾ ಕೇಂದ್ರವನ್ನು ಯಥಾಸ್ಥಿತಿಯಲ್ಲಿ ಉಳಿಸಿ, ಶೀಘ್ರ ಉದ್ಘಾಟನೆ ಮಾಡಿ ಅಲ್ಪಸಂಖ್ಯಾತ ಸಮುದಾಯದ ಸೇವೆಗೆ ನಿಯೋಜಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಆಗ್ರಹಿಸಿದೆ.
ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋರ್ಚಾ ಮುಖಂಡರು, ಪುತ್ತೂರಿನ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲವು ಯೋಜನೆಗಳಿಗೆ ಅನುದಾನ ನೀಡಲಾಗಿದೆ ಎಂದು ಹೇಳಿದರು.
2020ರಲ್ಲಿ ಅಂದಿನ ಶಾಸಕ ಸಂಜೀವ ಮಟಂದೂರು ಅವರ ಅವಧಿಯಲ್ಲಿ ವಾಜಪೇಯಿ ಅವರ ಅಲ್ಪಸಂಖ್ಯಾತರ ಅಭಿವೃದ್ಧಿಯ ಕನಸಿನ ಭಾಗವಾಗಿ ಸುಮಾರು ₹2.50 ಕೋಟಿ ವೆಚ್ಚದಲ್ಲಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣವಾಗಿದೆ. ಇದರ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸುವ ಉದ್ದೇಶದಿಂದ ದರ್ಬೆ ಸಿಟಿ ಗುಡ್ಡೆಯಲ್ಲಿ ಸುಮಾರು ₹1.40 ಕೋಟಿ ವೆಚ್ಚದಲ್ಲಿ 4,000 ಚದರ ಅಡಿ ವಿಸ್ತೀರ್ಣದ ಅಲ್ಪಸಂಖ್ಯಾತ ಸಾಮಾನ್ಯ ಸೇವಾ ಕೇಂದ್ರ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.
ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದ್ದ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಉದ್ಘಾಟನೆ ಸಾಧ್ಯವಾಗಿರಲಿಲ್ಲ. ಬಳಿಕವೂ ಕಟ್ಟಡವನ್ನು ಉದ್ಘಾಟಿಸಿ ಬಳಕೆಗೆ ನೀಡಲಾಗದೆ ಕಳೆದ ನಾಲ್ಕು ವರ್ಷಗಳಿಂದ ಪಾಳು ಬಿದ್ದಿದೆ ಎಂದು ಮೋರ್ಚಾ ಮುಖಂಡರು ಆರೋಪಿಸಿದರು.
ಬೇರೆ ಉದ್ದೇಶಕ್ಕೆ ಬಳಸಬೇಡಿ
ಪ್ರಸ್ತುತ ಶಾಸಕರು ಈ ಕಟ್ಟಡವನ್ನು ಬೇರೆ ಕಾರ್ಯಕ್ಕೆ ಬಳಸಲು ಮುಂದಾಗಿರುವುದು ಸರಿಯಲ್ಲ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತ ಸಮುದಾಯಕ್ಕೆ ಅಗತ್ಯವಿರುವ ಸೇವೆಗಳನ್ನು ಒದಗಿಸುವ ಕೇಂದ್ರವಾಗಿಯೇ ಕಟ್ಟಡವನ್ನು ಬಳಕೆ ಮಾಡಬೇಕು. ಪುತ್ತೂರಿನಲ್ಲಿ ಅಲ್ಪಸಂಖ್ಯಾತರಿಗಾಗಿ ಬಾಲಕರ ಹಾಗೂ ಬಾಲಕಿಯರ ಪ್ರತ್ಯೇಕ ಹಾಸ್ಟೆಲ್‌ಗಳು ಮತ್ತು ಸಮುದಾಯ ಭವನ ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಿಟಿ ಗುಡ್ಡೆ ಪ್ರದೇಶದಲ್ಲಿ ಈಗಾಗಲೇ ವಾಣಿಜ್ಯ ತೆರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಇಲಾಖೆಗಳ ಕಚೇರಿಗಳಿವೆ. ಪುತ್ತೂರು ನಗರದ ಎರಡನೇ ಪ್ರಮುಖ ಪ್ರದೇಶವಾಗಿ ದರ್ಬೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸೇವಾ ಕೇಂದ್ರವೂ ತನ್ನ ಉದ್ದೇಶಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ವಿರುದ್ಧ ಆರೋಪ
ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರದ ಯೋಜನೆಗಳು ಹಾಗೂ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡರು ಆರೋಪಿಸಿದರು.
ಅಲ್ಪಸಂಖ್ಯಾತರ ಬೆಂಬಲವನ್ನು ಪಡೆದಿರುವ ಹಾಲಿ ಶಾಸಕರು ತಮ್ಮ ಅವಧಿಯಲ್ಲಿ ಸಮುದಾಯಕ್ಕೆ ನೀಡಿರುವ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ನಿರ್ಮಿಸಿರುವ ಸೇವಾ ಕೇಂದ್ರವನ್ನು ವಿರೋಧಿಸುವ ಬದಲು ಅದನ್ನು ಉದ್ಘಾಟಿಸಿ ಅಲ್ಪಸಂಖ್ಯಾತ ಸಮುದಾಯದ ಬಹುಉಪಯೋಗಕ್ಕೆ ಬಳಸಲು ಸಹಕರಿಸಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಟಿ.ಎ. ಶನವಾಜ್, ಪ್ರಧಾನ ಕಾರ್ಯದರ್ಶಿ ಫೆಡ್ರಿಕ್ ಪೌಲ್, ಉಪಾಧ್ಯಕ್ಷ ಅಜ್ಗರ್ ಮುಡಿಪು, ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ, ಹಿರೆಬಂಡಾಡಿ ಪಂಚಾಯತ್ ಮಾಜಿ ಅಧ್ಯಕ್ಷ ಸೌಕತ್ ಅಲಿ, ರಾಜೇಶ ಬನ್ನೂರು ಉಪಸ್ಥಿತರಿದ್ದರು.
ಸ್ಥಳೀಯ
B.Y. Vijayendra-ಬಣ ಕಿತ್ತಾಟ ಮುಂದುವರಿದರೆ ಗುಬ್ಬಿಯಲ್ಲಿ ನಾನೇ ಸ್ಪರ್ಧಿಸುತ್ತೇನೆ’: ಬಿ.ವೈ.ವಿಜಯೇಂದ್ರ
ಗುಬ್ಬಿ ಕ್ಷೇತ್ರದ ಬಿಜೆಪಿಯ ಎರಡು ಬಣಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಮತ್ತೆ ಬಹಿರಂಗವಾಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲೇ ಎರಡೂ ಬಣಗಳ ಬೆಂಬಲಿಗರು ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಇದರಿಂದ ಅಸಮಾಧಾನಗೊಂಡ ವಿಜಯೇಂದ್ರ, ಇದೇ ರೀತಿಯ ಬಣ ಕಿತ್ತಾಟ ಮುಂದುವರಿದರೆ ಗುಬ್ಬಿ ಕ್ಷೇತ್ರದಲ್ಲಿ ತಾವೇ ಸ್ಪರ್ಧಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚೇಳೂರು (ತುಮಕೂರು), ಅ.4: ಗುಬ್ಬಿ ಕ್ಷೇತ್ರದ ಬಿಜೆಪಿಯ ಎರಡು ಬಣಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಮತ್ತೆ ಬಹಿರಂಗವಾಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲೇ ಎರಡೂ ಬಣಗಳ ಬೆಂಬಲಿಗರು ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಇದರಿಂದ ಅಸಮಾಧಾನಗೊಂಡ ವಿಜಯೇಂದ್ರ, ಇದೇ ರೀತಿಯ ಬಣ ಕಿತ್ತಾಟ ಮುಂದುವರಿದರೆ ಗುಬ್ಬಿ ಕ್ಷೇತ್ರದಲ್ಲಿ ತಾವೇ ಸ್ಪರ್ಧಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚೇಳೂರಿನಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ದಡಿ ಆಯೋಜಿಸಿದ್ದ ಬೂತ್ ಮಟ್ಟದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಹಾಗೂ 2023ರ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ದಿಲೀಪ್ ಕುಮಾರ್ ಮಾತನಾಡುವ ವೇಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಹೆಸರುಗಳನ್ನು ಪ್ರಸ್ತಾಪಿಸಿದರು. ಬಳಿಕ ಜಿಪಂ ಮಾಜಿ ಸದಸ್ಯ ಚಂದ್ರಶೇಖರ್ ಬಾಬು ಮಾತನಾಡುವಾಗ ದಿಲೀಪ್ ಕುಮಾರ್ ಅವರ ಹೆಸರನ್ನು ಉಲ್ಲೇಖಿಸದಿರುವುದು ಕೆಲವು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಯಿತು.
ಈ ವಿಚಾರಕ್ಕೆ ಸಂಬಂಧಿಸಿ ಎರಡೂ ಬಣಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ರಾಜ್ಯಾಧ್ಯಕ್ಷರ ಸಮ್ಮುಖದಲ್ಲೇ ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬಳಿಕ ಮಾತನಾಡಿದ ಬಿ.ವೈ.ವಿಜಯೇಂದ್ರ, ಗುಬ್ಬಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪಕ್ಷದೊಳಗಿನ ಆಂತರಿಕ ಜಗಳ ಹಾಗೂ ಭಿನ್ನಾಭಿಪ್ರಾಯಗಳೇ ಅಡ್ಡಿಯಾಗುತ್ತಿವೆ ಎಂದು ಹೇಳಿದರು.
ಮುಖಂಡರು ಹಾಗೂ ಕಾರ್ಯಕರ್ತರು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಸಂಘಟನೆ ಮತ್ತು ಗೆಲುವಿನತ್ತ ಗಮನಹರಿಸಬೇಕು ಎಂದು ವಿಜಯೇಂದ್ರ ಸೂಚಿಸಿದರು. ಇದೇ ರೀತಿ ಬಣ ಕಿತ್ತಾಟ ಮುಂದುವರಿದರೆ ಗುಬ್ಬಿ ಕ್ಷೇತ್ರದಲ್ಲಿ ತಾವೇ ಸ್ಪರ್ಧಿಸುವ ಸಂದರ್ಭ ಬರಬಹುದು ಎಂದು ಅವರು ಎಚ್ಚರಿಕೆ ನೀಡಿದರು.
ಸ್ಥಳೀಯ
Mysuru-ಮೈಸೂರು ಕಂಬಳಕ್ಕೆ ಆಗಮಿಸಲಿರುವ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿಗೆ ವ್ಯವಸ್ಥೆ – ಶಾಸಕರಾದ ಅಶೋಕ್ ರೈ ಮಂಥರ್ ಗೌಡ ನೇತೃತ್ವದಲ್ಲಿ ಸಭೆ
ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.
ಕುಶಾಲನಗರ: ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯು ಮೈಸೂರು ಕಂಬಳದ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಡಿಕೇರಿ ಶಾಸಕ ಮಂಥರ್ ಗೌಡ ಅವರ ನೇತೃತ್ವದಲ್ಲಿ ನಡೆಯಿತು.
ಕಂಬಳ ಕೋಣಗಳಿಗೆ ಪ್ರಯಾಣದ ಬಳಿಕ ವಿಶ್ರಾಂತಿ, ಆರೈಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ರಾಜ್ಯ ಕಂಬಳ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಗೂ ಮುರಳೀಧರ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.
-
ಬಿಗ್ ನ್ಯೂಸ್12 hours agoBantwal-Big Breaking-ದ.ಕ. ಜಿಲ್ಲೆಯಲ್ಲಿ ಗುಡುಗು-ಮಿಂಚಿನ ಮಳೆ: ಸಿಡಿಲು ಬಡಿದು ಮನೆ ಜಖಂ-ಮಹಿಳೆ ಅಸ್ವಸ್ಥ
-
ನಿಧನ ವಾರ್ತೆ7 hours agoUppinangadi-ಉಪ್ಪಿನಂಗಡಿ: ಸೇತುವೆ ಮೇಲೆ ಬೈಕ್, ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ
-
ಅಪರಾಧ13 hours agoPuttur-ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ 11 ಗೋವುಗಳ ಸಾಗಾಟ; ವಾಹನ ಪತ್ತೆ, ಇಬ್ಬರು ಪರಾರಿ
-
ಅಂತರ ರಾಜ್ಯ11 hours agoMurder-ಆಸ್ತಿಗಾಗಿ ಬೆಲ್ಟ್ನಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ: ಆಕಸ್ಮಿಕ ಸಾವೆಂದು ನಂಬಿಸಿದ್ದ ಪತ್ನಿ ಅರೆಸ್ಟ್
-
ಸ್ಥಳೀಯ12 hours agoCrop insurance-ಬೆಳೆ ವಿಮೆಯಲ್ಲಿ ಭಾರೀ ಇಳಿಕೆ – ದ.ಕ. ಜಿಲ್ಲೆಯ ಅಡಿಕೆ, ಕಾಳುಮೆಣಸು ಬೆಳೆಗಾರರು ಶಾಕ್..!; ಬೇಗನೆ ಜಮೆಯಾದರೂ ಪರಿಹಾರ ಮೊತ್ತದಲ್ಲಿ ಭಾರೀ ಇಳಿಕೆ; ಲೆಕ್ಕಾಚಾರ ಬಹಿರಂಗಕ್ಕೆ ಆಗ್ರಹ
-
ನಿಧನ ವಾರ್ತೆ10 hours agoAccident-ಹುತಾತ್ಮ ಸೈನಿಕನ ಮೃತದೇಹ ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅಪಘಾತ: ಸೈನಿಕನ ಮಗ, ಸಹೋದರ ಸೇರಿ ನಾಲ್ವರು ಸಾವು
-
ನಿಧನ ವಾರ್ತೆ12 hours agoLalitamma-ಸುಂಟರಗಾಳಿ’, ‘ಜಂಗ್ಲಿ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ
-
ರಾಜಕೀಯ7 hours agoPuttur-ಪುತ್ತೂರು: ಅಲ್ಪಸಂಖ್ಯಾತ ಸೇವಾ ಕೇಂದ್ರ ಉದ್ಘಾಟನೆಗೆ ಬಿಜೆಪಿ ಮೋರ್ಚಾದಿಂದ ಆಗ್ರಹ


















