ರಾಜಕೀಯ
Ashok Rai-ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ರಸ್ತೆ, ಕಾಲನಿ ಅಭಿವೃದ್ದಿಗೆ ಒಟ್ಟು 16 ಕೋಟಿ ಅನುದಾನ ಬಿಡುಗಡೆ; ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ರಸ್ತೆಗಳಿಗೂ ಅನುದಾನ ನೀಡುತ್ತೇನೆ- ಅಶೋಕ್ ರೈ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ ರಸ್ತೆ ಹಾಗೂ ಕಾಲನಿ ಗಳ ಅಭಿವೃದ್ದಿಗೆ ಒಟ್ಟು 16 ಕೋಟಿ ಅನುದಾನ ಬಿಡುಗಡೆಯಾಗಿದೆ. ಶಾಸಕರಾದ ಅಶೋಕ್ ರೈ ಅವರು ವಿವಿಧ ಇಲಾಖೆಗಳ ಮೂಲಕ ಒತ್ತಡವನ್ನು ತರುವ ಮೂಲಕ ಈ ಅನುದಾನವನ್ನು ಕ್ಷೆತ್ರಕ್ಕೆ ಕೊಡಿಸುವಲ್ಲಿ ಸಫಲರಾಗಿದ್ದಾರೆ.
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ ರಸ್ತೆ ಹಾಗೂ ಕಾಲನಿ ಗಳ ಅಭಿವೃದ್ದಿಗೆ ಒಟ್ಟು 16 ಕೋಟಿ ಅನುದಾನ ಬಿಡುಗಡೆಯಾಗಿದೆ. ಶಾಸಕರಾದ ಅಶೋಕ್ ರೈ ಅವರು ವಿವಿಧ ಇಲಾಖೆಗಳ ಮೂಲಕ ಒತ್ತಡವನ್ನು ತರುವ ಮೂಲಕ ಈ ಅನುದಾನವನ್ನು ಕ್ಷೆತ್ರಕ್ಕೆ ಕೊಡಿಸುವಲ್ಲಿ ಸಫಲರಾಗಿದ್ದಾರೆ.
ವಿವಿಧ ಇಲಾಖೆಯಿಂದ ಬಿಡುಗಡೆಯಾದ ಒಟ್ಟು ಅನುದಾನವನ್ನು ಆದ್ಯತೆ ಮೇಲೆ ಕೆಲವೊಂದು ರಸ್ತೆ ಹಾಗೂ ಕಾಲನಿಗೆ ಮೀಸಲಿರಿಸಿದ್ದು ಮುಂದಿನ ದಿನಗಳಲ್ಲಿ ಕ್ಷೆತ್ರದ ಎಲ್ಲಾ ರಸ್ತೆಗಳಿಗೂ ಅನುದಾನವನ್ನು ಒದಗಿಸುವ ಕೆಲಸವನ್ನು ಮಾಡಲಿದ್ದು ಅರ್ಜಿ ಹಾಕಿದ ಫಲಾನುಭವಿಗಳ ಬೇಡಿಕೆಯನ್ನು ಖಂಡಿತವಾಗಿಯೂ ಈಡೇರಿಸುವುದಾಗಿ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.
ಶಾಸಕರ ಮೂಲಕ ವಿವಿಧ ಗ್ರಾಮಗಳಿಗೆ ಬಿಡುಗಡೆಯಾದ ಕಾಮಗಾರಿಯ ವಿವರ ಇಂತಿದೆ:
ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದ ಪುಲಮುಗೇರು ರಸ್ತೆ ಅಭಿವೃದ್ಧಿ 05.05, ಹಿರೆಬಂಡಾಡಿ ಗ್ರಾಮದ ಹರಿನಗರ ರಸ್ತೆ ಅಭಿವೃದ್ಧಿ05.05, ಹಿರೆಬಂಡಾಡಿ ಗ್ರಾಮದ ಮುಖ್ಯ ರಸ್ತೆ ಯಿಂದ ಹಿರೇಬಂಡಾಡಿ ಪ್ರೌಢಶಾಲೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ 05.05, ಹಿರೆಬಂಡಾಡಿಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೆತ್ತಡಿ ಹೆನ್ನಾಳ ಕಾಲೋನಿ ರಸ್ತೆ ಅಭಿವೃದ್ಧಿ 10.00, ಹಿರೆಬಂಡಾಡಿ ಗ್ರಾಮದ ಪೊಟ್ಟೆಜಾಲುಕಲ್ಲಡ್ಕ ಭಂಡಾರ ಮನೆವರೆಗೆ ರಸ್ತೆ ಅಭಿವೃದ್ಧಿ 10.00, ಬಡಗನ್ನೂರು ಗ್ರಾಮದ ಶ್ರೀ ಕ್ಷೇತ್ರಗೆಜ್ಜೆಗಿರಿ ನಂದನ ಬಿತ್ತ್ಲ್ ರಸ್ತೆ ಅಭಿವೃದ್ಧಿ 05.05, ಬಡಗನ್ನೂರು ಗ್ರಾಮದ ನೆಕ್ಕರೆ- ಕೋಡಿಯಡ್ಕ ರಸ್ತೆ ಅಭಿವೃದ್ಧಿ 10.00, ಬಡಗನ್ನೂರು ಗ್ರಾಮದ ಡೆಂಬಳೆ ಕುಕ್ಕಾಜೆ ರಸ್ತೆ ಅಭಿವೃದ್ಧಿ 05.00, ಬಡಗನ್ನೂರುಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಸುಳ್ಯ ಪದವು ಹಾಲಿನ ಡೈರಿಯಿಂದ ಮರದ ಮೂಲೆ ಕಾಲೋನಿ ರಸ್ತೆ ಅಭಿವೃದ್ಧಿ10.00, ಬಡಗನ್ನೂರು ಗ್ರಾಮದ ಪಡುವನ್ನೂರು ಗ್ರಾಮ ಪದಡ್ಕ-ಕುದ್ಕಾಡಿ-ಸಣಗೋಳು ರಸ್ತೆ ಅಭಿವೃದ್ಧಿ 10.00, ತಾಲೂಕಿನ ಪಡುವನ್ನೂರು ಗ್ರಾಮದ ಕುತ್ಯಾಲ-ದೊಡ್ಡ ಮನೆ ರಸ್ತೆ ಅಭಿವೃದ್ಧಿ 05.05 , ನಿಡ್ಪಳ್ಳಿಗ್ರಾಮದ ಸೆರ್ಕಲ ನುಳಿಯಾಲು ರಸ್ತೆ ಅಭಿವೃದ್ಧಿ 05.05,ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿಯಿಂದ ಪಟ್ಟೆ ರಸ್ತೆ ಅಭಿವೃದ್ಧಿ 05.05, ನಿಡ್ಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಕುವೆಂಜಕಾಲೋನಿ ರಸ್ತೆ ಅಭಿವೃದ್ಧಿ 05.05, ಗ್ರಾಮದ ಕಕ್ಕೂರು-ತೋರಣಕುಕ್ಕು-ಕುಂಞಮಜಲು ರಸ್ತೆ ಅಭಿವೃದ್ಧಿ 10.00, ಬಲ್ನಾಡು ಗ್ರಾಮದ ಮಲ್ಲಿಕಟ್ಟೆಯಿಂದ ಕೆಳಗಿನ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ 10.00, ಬಲ್ನಾಡು ಗ್ರಾಮದ ವಿನಾಯಕ ದೇವಸ್ಥಾನದಿಂದ- ಓಟೆ ಬಿರ್ಮರಕೋಡಿ ಬಾಯಾರು ರಸ್ತೆ ಅಭಿವೃದ್ಧಿ10.00, ಒಳಮೊಗ್ರು ಗ್ರಾಮದ ವಾರ್ಡ್ 1 ಪರ್ಪುಂಜಕ್ವಾಟ್ರಸ್ ರಸ್ತೆ ಅಭಿವೃದ್ಧಿ 10.00, ಒಳಮೊಗ್ರು ಗ್ರಾಮದ ಕೈಕಾರ- ಬಾನಬೆಟ್ಟು ರಸ್ತೆ ಅಭಿವೃದ್ಧಿ 10.00 , ಒಳಮೊಗ್ರು ಗ್ರಾಮದ ಕುಟಿನೋಪಿನಡ್ಕದಿಂದ ನರ್ಪಾಡಿ ರಸ್ತೆ ಅಭಿವೃದ್ಧಿ 10.00, ಒಳಮೊಗ್ರು ಗ್ರಾಮದ ಕುದ್ಕಲ್ ನೀರ್ಪಾಡಿ ರಸ್ತೆ ಅಭಿವೃದ್ಧಿ05.05 ,ಅರಿಯಡ್ಕ ಗ್ರಾಮದ ಕೊಲ್ಲಾಜೆ ಕೊಂಬರಡ್ಕಕೋರಿಕ್ಕಾರು ಪಯಂದೂರು ರಸ್ತೆ ಅಭಿವೃದ್ಧಿ 10.00, ಅರಿಯಡ್ಕ ಗ್ರಾಮದ ಮಾಡ್ನುರುಉಜ್ರುಗುರಿಜನತಾ ಕಾಲೋನಿ ರಸ್ತೆ ಅಭಿವೃದ್ಧಿ10.00, ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡ್ನೂರು ಗ್ರಾಮದ ಅಮ್ಚಿನಡ್ಕ ಬದಿಯಡ್ಕ ಕಾಲೋನಿ ರಸ್ತೆ ಅಭಿವೃದ್ಧಿ 10.00, ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ-ಕೋಟಿಚೆನ್ನಯ್ಯಗರಡಿ ಸಂಪರ್ಕ ರಸ್ತೆ ಅಭಿವೃದ್ಧಿ 10.00, ಅರಿಯಡ್ಕ ಗ್ರಾಮದ ಹೊಸಗದ್ದೆ ಕಾಲೋನಿ ರಸ್ತೆ ಅಭಿವೃದ್ಧಿ 06.05, ಅರಿಯಡ್ಕ ಗ್ರಾಮದ ಜಾರತ್ತಾರುಪಣ್ಣೆಕಲ ರಸ್ತೆ ಅಭಿವೃದ್ಧಿ05.05, ಬಜತ್ತೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಅಯೋಧ್ಯಾನಗರ ಬರುವ ರಸ್ತೆ ಅಭಿವೃದ್ಧಿ 05.05, ಬಜತ್ತೂರುಗ್ರಾಮ ಪಂಚಾಯತ್ ವ್ಯಾಪ್ತಿಯ ವಳಾಲು ಕಾಲೋನಿ ರಸ್ತೆ ಅಭಿವೃದ್ಧಿ10.00, ಬಜತ್ತೂರು ಗ್ರಾಮದ ಬೆದ್ರೋಡಿ ಸಂಪರ್ಕ ರಸ್ತೆ ಕೆಳವು ಉದ್ದಳಿಕೆ ಅಭಿವೃದ್ಧಿ10.00, ಪಾಣಾಜೆ ಗ್ರಾಮದ ಕೀಲಂಪಾಡಿ- ಕಾನ ಎಣ್ನೆಗದ್ದೆ ರಸ್ತೆ ಅಭಿವೃದ್ಧಿ 10.00, ಪಾಣಾಜೆ ಗ್ರಾಮದ ಆರ್ಲಪದವುನಿಂದಜಾಲಗದ್ದೆ ರಸ್ತೆ ಅಭಿವೃದ್ಧಿ 10.00, ಪಾಣಾಜೆ ಗ್ರಾಮದ ಒಡ್ಯ ಶಾಲೆಯಿಂದ? ಮುಗ್ಲಿಮನೆಅಡ್ಕ ಸ್ಥಳ ರಸ್ತೆ ಅಭಿವೃದ್ಧಿ 10.00, ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆದಂಬಾಡಿಕೋಟೆ ಕಾಲೋನಿ ರಸ್ತೆ ಅಭಿವೃದ್ಧಿ10.00, ಪಾಣಾಜೆ ಗ್ರಾಮ ಪಂಚಾಯತ್ ಭರಣ್ಯ ಕೆದಂಬಾಡಿ ನಡುವಡ್ಕ ರಸ್ತೆ ಅಭಿವೃದ್ಧಿ 05.05, ಪಾಣಾಜೆ ಗ್ರಾಮದ ಆರ್ಲದವು ಸ್ನೇಹ ಜನರಲ್ ಸ್ಟೋರ್ಎದುರು ರಸ್ತೆ ಅಭಿವೃದ್ಧಿ 05.05, ಆರ್ಯಾಪು ಗ್ರಾಮದ ಕಲ್ಲರ್ಪೆಯಿಂದ- ಜಯರಾಮ್ರೈಯವರ ವಸತಿ ಸಮುಚ್ಚಯದ ರಸ್ತೆ ಅಭಿವೃದ್ಧಿ 05.05 ಗ್ರಾಮದ ಬಂಗಾರಡ್ಕ ಪುರಂದರರೈ ಮನೆಯಿಂದ- ರಮ್ಯ ನಾಯಕ್ ರವರ ಮನೆವರೆಗೆ ರಸ್ತೆ ಅಭಿವೃದ್ಧಿ10.00, ಆರ್ಯಾಪು ಗ್ರಾಮದ ಮರಿಕೆ- ನೀರ್ಕಜೆ ರಸ್ತೆ ಅಭಿವೃದ್ಧಿ 10.00, ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ- ಅಪ್ನಾ ಕರಾವಳಿ ರಸ್ತೆಯಿಂದ ಬನಾರಿ ರಸ್ತೆ ಅಭಿವೃದ್ಧಿ 10.00, ಕೆದಂಬಾಡಿ ಗ್ರಾಮದ ಪೊಟ್ಟಮೂಲೆ-ಬಾಳಾಯ ರಸ್ತೆ ಅಭಿವೃದ್ಧಿ 10.00, ,ಕೆದಂಬಾಡಿ ಗ್ರಾಮದ ತಿಂಗಳಾಡಿಯಿಂದ ಕೆಯ್ಯೂರು ಗ್ರಾಮ ಅಂಗನತಡ್ಕ ಅಭಿವೃದ್ಧಿ 10.00,ಕೆದಂಬಾಡಿ ಗ್ರಾಮದ ಕುಯ್ಯಾರು- ಗಟ್ಟಮನೆ ಪಂಚಾಯತ್ ರಸ್ತೆಯಲ್ಲಿಗಟ್ಟಮನೆ ಒಳ ರಸ್ತೆ ಅಭಿವೃದ್ಧಿ 10.00, ಕೆದಂಬಾಡಿ ಗ್ರಾಮದ ನಿಡ್ಯಾಣಚನಿಯಪ್ಪಎಂಬುವವರ ಮನೆಯಿಂದ- ನೆಬಿಸ ಎಂಬುವವರ ಮನೆ ವರೆಗು ರಸ್ತೆ ಅಭಿವೃದ್ಧಿ 05.05, ಇರ್ದೆ ಗ್ರಾಮದ ಪೈಂತಿಮುಗೇರು- ಇರ್ದೆ ರಸ್ತೆ ಅಭಿವೃದ್ಧಿ 10.00, ಇರ್ದೆ ಗ್ರಾಮದ ದೂಮಡ್ಕ- ಕೆಳಗಿನ ಬಾಳೆಗುಳಿ ರಸ್ತೆ ಅಭಿವೃದ್ಧಿ 10.00, ಕೋಡಿಂಬಾಡಿ ಗ್ರಾಮದ ತುರ್ಕೆದಗುರಿಯಿಂದ- ಚೀಮುಳ್ಳು ರಸ್ತೆ ಅಭಿವೃದ್ಧಿ 10.00, ಕೋಡಿಂಬಾಡಿ ಗ್ರಾಮದ ತುರ್ಕೆತಗುರಿ- ನೆಕ್ಕಿಲಾರು ರಸ್ತೆ ಅಭಿವೃದ್ಧಿ 10.00, ಕುರಿಯ ಗ್ರಾಮದ ಪಾಲಿಂಜ ಅಮ್ಮುಂಜ ರಸ್ತೆ ಅಭಿವೃದ್ಧಿ 05.05, ಕುರಿಯ ಗ್ರಾಮದ ಪಾಲಿಂಜೆ- ಮಾದೆರಿ- ವಿಷ್ಣುಮೂರ್ತಿದೇವಸ್ಥಾನ ಸಂಪರ್ಕ ರಸ್ತೆ ಅಭಿವೃದ್ಧಿ 10.00, ಕುರಿಯ ಗ್ರಾಮದ ಸಂಪ್ಯದಮೂಲೆ ಮಾದೆರಿ- ರಸ್ತೆ ಅಭಿವೃದ್ಧಿ 5.05, ಪಡ್ನೂರುಗ್ರಾಮದ ಬೇರಿಕೆ ರಸ್ತೆ ಅಭಿವೃದ್ಧಿ 10.00, ಪಡ್ನೂರು ಗ್ರಾಮದ ಎರ್ಮುಂಜ ಪಳ್ಳ ಅಡಿಕೆ ಸಮಸ್ಕರನಘಟಕದ ಮುಂಬದಿ ರಸ್ತೆ ಅಭಿವೃದ್ಧಿ 10.00, ಶಾಂತಿಗೋಡು ಗ್ರಾಮದ ವೀರಮಂಗಲ ಒಳರಾಡಿ ಡೆಬ್ಬಿಲಿ ರಸ್ತೆ ಅಭಿವೃದ್ಧಿ 10.00, ಶಾಂತಿಗೋಡು ಗ್ರಾಮದ ಕೈಂದಾಡಿಯಿಂದ ಶಿರಾಡಿ ದೈವಸ್ಥಾನ ರಸ್ತೆ ಅಭಿವೃದ್ಧಿ 05.05, ಶಾಂತಿಗೋಡು ಗ್ರಾಮದ ಮುಂಡೋಡಿ? ಕಲ್ಕಾರು ರಸ್ತೆ ಅಭಿವೃದ್ಧಿ 05.05, ಶಾಂತಿಗೋಡು ಗ್ರಾಮದ ವಿರಮಂಗಲ ಕೈಲಾಜೆ ರಸ್ತೆ ಅಭಿವೃದ್ಧಿ05.05, ತಾಲೂಕಿನ ಶಾಂತಿಗೋಡು ಗ್ರಾಮದ ಪಜಿರೋಡಿ- ಪಾಣಂಬು ರಸ್ತೆ ಅಭಿವೃದ್ಧಿ 10.00, ನರಿಮೊಗರು ಗ್ರಾಮದ ಕೂಡುರಸ್ತೆ ಮುಗೇರಡ್ಕ ನಡುಗುಡ್ಡೆ ಸಂಪರ್ಕ ರಸ್ತೆ ಕಾಂಕ್ರಿಟೀಕರಣ 10.00, ನರಿಮೊಗರು ಗ್ರಾಮದ ನೆಕ್ಕಿಲು ಪೇರಡ್ಕ ರಸ್ತೆ ಅಭಿವೃದ್ಧಿ 10.00, ಕೋಳ್ತಿಗೆ ಗ್ರಾಮದ ಅಮಲ- ಅಡ್ಕರಗುಂಡಿ ಕಾಲನಿ ರಸ್ತೆ ಅಭಿವೃದ್ಧಿ 10.00, ಕೊಳ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಕುಂಟಿಕ್ಕಾನ- ಬದಿಯಡ್ಕ ರಸ್ತೆ ಅಭಿವೃದ್ಧಿ. 05.00 , ಕೊಳ್ತಿಗೆ ಗ್ರಾಮದ ಪೆರ್ಲಂಪ್ಪಾಡಿ ಯಿಂದಕನಿಯಾರು ರಸ್ತೆ ಅಭಿವೃದ್ಧಿ 06.05, ಕೊಳ್ತಿಗೆ ಗ್ರಾಮದ ಸೇಡಿಗುರಿಯಿಂದಕುವೈಟು ಮಸೀದಿ ರಸ್ತೆ ಅಭಿವೃದ್ಧಿ 05.05, ಕೊಡಿಪ್ಪಾಡಿ ಗ್ರಾಮದ ಓಜಾಳ ನೀವೇಶನದಜಾಗದ ಬಳಿ ರಸ್ತೆ ಅಭಿವೃದ್ಧಿ 10.00, ಕೊಡಿಪ್ಪಾಡಿ ಗ್ರಾಮದ ಕಲೆಂಬಿ ಬಾಲಜಾಲು ರಸ್ತೆ ಅಭಿವೃದ್ಧಿ 10.00, 34-ನೆಕ್ಕಿಲಾಡಿ ಗ್ರಾಮದ ಬೇರಿಕೆ ಅಲಿಮಾರ(ಮೊಡಂಕೋಳಿ) ರಸ್ತೆ ಅಭಿವೃದ್ಧಿ 10.00. 34-ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿನಗರ ಮೈಕಲ್ ವೇಗಸ್ ಮನೆಯಿಂದ ಹನೀಫ್ ಮನೆ ತನಕ ರಸ್ತೆ ಅಭಿವೃದ್ಧಿ. 10.00 ,
34-ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಂದಡ್ಕಕ್ರೆöÊಸ್ತರದಫನ ಭೂಮಿ ರಸ್ತೆ ಕಾಂಕ್ರಿಟೀಕರಣ 05.00, 71 ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ತಾಲೂಕಿನ 34-ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಶಾಲೆ ರಸ್ತೆ ಅಭಿವೃದ್ಧಿ 05.05 , 34 -ನೆಕ್ಕಿಲಾಡಿ ಗ್ರಾಮದ ಕಲ್ಯಾಣಿಅವರ ಮನೆ ಬಳಿಯಿಂದ ಸುಭಾಶ್ನಗರ ಭಜನಾ ಮಂದಿರ ವರೆಗೆ ರಸ್ತೆ ಅಭಿವೃದ್ಧಿ 05.05 , ಮಾಡ್ನೂರು ಗ್ರಾಮದ ಡೆಂಬಲೆಯಾಗಿ- ಕೋಟಿಗುಡ್ಡೆ ರಸ್ತೆ ಅಭಿವೃದ್ಧಿ 10.00, ಸರ್ವೆ ಗ್ರಾಮದ ಕಟ್ಟತ್ತಡ್ಕ- ಪರಂಟೋಲು- ಉರಿಯ ರಸ್ತೆ ಅಭಿವೃದ್ಧಿ 05.05 , ಸರ್ವೆ ಗ್ರಾಮದ ರೆಂಜಲಾಡಿ- ಕಲ್ಲಗುಡ್ಡೆ-ಭಕ್ತಕೋಡಿ ರಸ್ತೆ ಅಭಿವೃದ್ಧಿ 05.05 , ಸರ್ವೆ ಗ್ರಾಮದ ಭಕ್ತಕೋಡಿ -ಪಿಳಿಗುಂಡ ರಸ್ತೆ ಅಭಿವೃದ್ಧಿ 10.00.
ನೆಟ್ಟಣಿಗೆಮುಡ್ನೂರು ಗ್ರಾಮದ ಗುಳಿಗಕಲ್ಲು ಹಿತ್ಲುಮೂಲೆ ರಸ್ತೆ ಅಭಿವೃದ್ಧಿ 10.00, ನೆಟ್ಟಣಿಗೆ ಮುಡ್ನೂರು ಗ್ರಾಮದ ಸುರುಳಿಮೂಲೆ- ಕೊಪ್ಪಳ ರಸ್ತೆ ಅಭಿವೃದ್ಧಿ 10.00
ನೆಟ್ಟಣಿಗೆ-ಮುಡ್ನೂರುಗ್ರಾಮ ಪಂಚಾಯತ್ ವ್ಯಾಪ್ತಿಯ ಈಶ್ವರಮಂಗಳ ತೊಯಿಭಾ ಮಸೀದಿ ಬಳಿ ರಸ್ತೆ ಅಭಿವೃದ್ಧಿ 05.00, ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಎಂಬಲ್ಲ ನೆಕ್ಕರೆ-ನಳಿಕೆಮಜಲು ರಸ್ತೆ ಅಭಿವೃದ್ಧಿ 10.00, ಉಪ್ಪಿನಂಗಡಿಗ್ರಾಮ ಪಂಚಾಯತ್ ವ್ಯಾಪ್ತಿಯ ಹಿರ್ತಡ್ಕ ಮದರಸಕ್ಕೆ ಹೋಗುವ ರಸ್ತೆ ಅಭಿವೃದ್ದಿ. 1.0.00, ಉಪ್ಪಿನಂಗಡಿ ಗ್ರಾಮದ ಹಿರ್ತಡ್ಕಅಂಗನವಾಡಿ ಬಳಿ ಮೋರಿ ಮತ್ತು ರಸ್ತೆ ಅಭಿವೃದ್ಧಿ 05.05 , ಉಪ್ಪಿನಂಗಡಿ ಗ್ರಾಮದ ಕುಕ್ಕಾಜೆ ಯಿಂದ ಕೊಪ್ಪಳ ರಸ್ತೆ ಅಭಿವೃದ್ಧಿ 05.05 , ಕೆಯ್ಯೂರು ಗ್ರಾಮದ ಮೇರ್ಲ-ನೂಜಿ ಏರ್ಕಳ ರಸ್ತೆ ಅಭಿವೃದ್ಧಿ 10.00 , ಕೆಯ್ಯೂರು ಗ್ರಾಮದ ಕಟ್ಟತ್ತಾರು?ಕೊಡಂಬು ರಸ್ತೆ ಅಭಿವೃದ್ಧಿ 10.00 , ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಕಲ್ಲೇಗ ಮಾಡತ್ತಾರು ಪುಣ್ಯ ಕುಮಾರ್ 2 ನೇ ಅಡ್ಡ ರಸ್ತೆ ಅಭಿವೃದ್ಧಿ 05.00 , ಕಬಕ ಗ್ರಾಮದ ಮುರ ಹಸೈನರ್ ಬ್ಯಾರಿ ಮನೆ ಬಳಿ ರಸ್ತೆ ಅಭಿವೃದ್ಧಿ 05.05, ಕಬಕ ಗ್ರಾಮದ ಪೋಳ್ಯ ಮೂಲೆಕಾಡುಕೆರೆಮನೆಕಟ್ಟೆ-ಮರ್ತಡ್ಕ-ನಾಡಾಜೆ ರಸ್ತೆ ಅಭಿವೃದ್ಧಿ 05.05, ತಾಲೂಕಿನ ಕಬಕ ಗ್ರಾಮದ ವಿಧ್ಯಾಪುರ 2ನೇ ಅಡ್ಡ ರಸ್ತೆ ಅಭಿವೃದ್ಧಿ 10.00 , ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಕಲ್ಲಗುಡ್ಡೆಅಲ್ಪ-ಸಂಖ್ಯಾತರ ಕಾಲೋನಿ ರಸ್ತೆ ಅಭಿವೃದ್ಧಿ 10.00 ,ಮುಂಡೂರು ಗ್ರಾಮದ ಕೆರೆಮನೆಕಟ್ಟೆ-ಮರ್ತಡ್ಕ-ನಾಡಾಜೆ ರಸ್ತೆ ಅಭಿವೃದ್ಧಿ 10.00, ಕೆದಿಲ ಗ್ರಾಮದ ಮುಖ್ಯ ರಸ್ತೆಯಿಂದ ದೇಂತಡ್ಕ ಶ್ರೀ ವನದುರ್ಗಾದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ 10.00, ಕೆದಿಲಾ ಗ್ರಾಮದ ಕುಕ್ಕಾಜೆ-ಆನಡ್ಕ-ಪಾಟ್ರೋಕೋಡಿಜಂಕ್ಷಣ್ ರಸ್ತೆ ಅಭಿವೃದ್ಧಿ 10.00, ಕೆದಿಲಾ ಗ್ರಾಮ ಬದ್ರಿಯಾಜುಮಾ ಮಸೀದಿ ಪೇರಮೊಗ್ರುಧಫನ ಭೂಮಿ ಸಂಪರ್ಕ ರಸ್ತ್ತೆ ಅಭಿವೃದ್ಧಿ 10.00, ತಾಲೂಕಿನ ಕೇಪು ಗ್ರಾಮದ ಬೇಂಗ್ರೋಡಿಯಿಂದ ಆಳ್ವರ್ ದೈವಸ್ಥಾನ ರಸ್ತೆ ಅಭಿವೃದ್ಧಿ 10.00, ಬಂಟ್ವಾಳ ತಾಲೂಕಿನ ಕೇಪುಗ್ರಾಮದಕುದ್ದುಪದವು-ಸುರುಳಿಮೂಲೆ ರಸ್ತೆ ಅಭಿವೃದ್ಧಿ 10.00, ಕುಳ ಗ್ರಾಮದ ಉರಿಮಜಲುಜಂಕ್ಷಣ್ ನಿಂದಕಾರ್ಯಡಿಕೋಟ್ರಸ್ ರಸ್ತೆ ಅಭಿವೃದ್ಧಿ 05.05, ಕುಳ ಗ್ರಾಮದ ಪಾಂಡೆಲು ನಿಂದ ಮುರುವಾಳ ರಸ್ತೆ ಅಭಿವೃದ್ಧಿ 05.05, ಕುಳ ಗ್ರಾಮ ಪಂಚಾಯತ್ ವ್ಯಾಪ್ತಿಯಉರಿಮಜಲುನಿಂದ ಸ್ಮಶಾನ ಹಾಗೂ ಧಫನ ಭೂಮಿ ರಸ್ತೆ ಅಭಿವೃದ್ಧಿ. 11.00, ಕುಳ ಗ್ರಾಮ ಕುಂದಡ್ಕಕುದ್ವಾರಬೆಟ್ಟುರಸ್ತ್ತೆ ಅಭಿವೃದ್ಧಿ 10.00, ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಓಟೆಪಡ್ಪು, ಪಡ್ಡೆಯಿಮೂಲೆ, ಮರ್ಕಯತ್ತಡ್ಕ ರಸ್ತೆ ಅಭಿವೃದ್ಧಿ 10.00, ಮಾಣಿಲ ಗ್ರಾಮದ ತಾರಿದಳ ಆರೋಗ್ಯ ಉಪಕೇಂದ್ರಕ್ಕೆ ಹೋಗುವ ರಸ್ತೆ ಅಭಿವೃದ್ಧಿ 05.00, ಮಾಣಿಲ ಗ್ರಾಮದ ಕುಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ರಸ್ತೆ ಅಭಿವೃದ್ಧಿ 10.00, ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಬಿಳಿಯೂರು ದೇಂತಡ್ಕಕಡಪುಆಣೇಕಟ್ಟು ಸಂಪರ್ಕ ರಸ್ತೆ ಅಭಿವೃದ್ಧಿ 05.00, ಬಿಳಿಯೂರು ಗ್ರಾಮದ ಬಡಕೋಡಿ ನಾಡಾಳಿ ತನಕ ಹಾಗೂ ನಾಡಾಳಿಯಿಂದ ರಸ್ತೆ ಅಭಿವೃದ್ಧಿ 10.00 , ಬಿಳಿಯೂರು ಗ್ರಾಮದ ಹೊಳೆಬದಿ ರಸ್ತೆ ಅಭಿವೃದ್ಧಿ 10.00 , ಬಿಳಿಯೂರು ಗ್ರಾಮದ ಪಲ್ಲತ್ತಾರುಇಬ್ರಾಯಿ ಬ್ಯಾರಿ ಮನೆ ಬಳಿ ರಸ್ತೆ ಅಭಿವೃದ್ಧಿ 05.05, ಬಿಳಿಯೂರು ಗ್ರಾಮದ ಕೊಡಂಚಡ್ಕಕಾಲೋನಿ ರಸ್ತೆ ಅಭಿವೃದ್ಧಿ 05.05, ಇಡ್ಕಿದು ಗ್ರಾಮದ ಸೂರ್ಯದಿಂದ ಕಂಬಳಬೆಟ್ಟು ಸಂಪರ್ಕ ರಸ್ತೆ ಅಭಿವೃದ್ಧಿ 10.00, ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಳಕೆಮಜಲು ಮಾಸ್ಟರ್ ಪ್ಲಾನರಿಯಿಂದ ಪುಂಡಿಕಾಯಿ ಕಾಲೋನಿ ಅಭಿವೃದ್ಧಿ05.05,ಇಡ್ಕಿದು ಗ್ರಾಮದ ಮಿತ್ತೂರು- ಗಾಣದಕೊಟ್ಯ ರಸ್ತೆ ಅಭಿವೃದ್ಧಿ 10.00, 114 ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಕೋಡಂದೂರು- ನಡುಮನೆ- ಬೈಲುಗುತ್ತು ರಸ್ತೆ ಅಭಿವೃದ್ಧಿ10.00, ಪುಣಚ ಗ್ರಾಮದ ಅಜ್ಜಿನಡ್ಕ- ನಡುಸಾರು ರಸ್ತೆ ಅಭಿವೃದ್ಧಿ 10.00, ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಕಾನ ರಸ್ತೆ ಅಭಿವೃದ್ಧಿ 10.00, ಪೆರುವಾಯಿ ಗ್ರಾಮದ ಕೆದುಮೂಲೆ- ಬರೆಮನೆ- ಅಡ್ವಾಯಿ ತೋಟದ ಮೂಲೆ ರಸ್ತೆ ಅಭಿವೃದ್ಧಿ 10.00, ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕೋಳಂಞಮಾರು ಪಡಿಬಾಗಿಲುರಸ್ತೆ ಅಭಿವೃದ್ಧಿ 10.00,ಅಳಿಕೆ ಗ್ರಾಮದ ಎರುಂಬುತಾಮ್ರಕಜೆ ಬಿಲ್ಲಂಪದವು ರಸ್ತೆ ಅಭಿವೃದ್ಧಿ 10.00, ಅಳಿಕೆ ಗ್ರಾಮದ ಜಂಕ್ಷನ್ ಶಾರದ ವಿಹಾರ-ಪಡೀಲ ಬಳಕ್ಕೆ ರಸ್ತೆ ಅಭಿವೃದ್ಧಿ 05.05, ಅಳಿಕೆ ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರ ರಸ್ತೆ ಅಭಿವೃದ್ಧಿ 05.05, ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಗುಂಡಲಡ್ಕ-ಸರಳಿಮೂಲೆ ರಸ್ತೆ ಅಭಿವೃದ್ಧಿ 10.00, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರುಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಬೆಟ್ಟು ಮಸೀದಿ ಬಳಿ ಕಾಲೋನಿ ರಸ್ತೆ ಅಭಿವೃದ್ಧಿ. 10.00, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ನೆಕ್ಕರೆ ರಸ್ತೆ ಅಭಿವೃದ್ಧಿ 05.05, ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮ ಅಶ್ವತಕಟ್ಟೆ ಮೇಲಿನ ಮಾರ್ಗವಾಗಿ ಬದಿಗುಡ್ಡೆ ಕುಶಾಲನಗರ ಸಂಪರ್ಕ ರಸ್ತೆ ಅಭಿವೃದ್ಧಿ 10.00, ಕೊಡಿಂಬಾಡಿ ಗ್ರಾಮದ ಹೆಗ್ಡೆಹಿತ್ಲು-ಡೆಕ್ಕಾಜೆ ರಸ್ತೆ ಅಭಿವೃದ್ಧಿ 05.05.
ಕಾಮಗಾರಿಗಳ ವಿವರ:
ತಾಲೂಕು, ಶಾಂತಿಗೋಡು ಗ್ರಾಮದ ಕೂಡುರಸ್ತೆಯಿಂದ ಕಲ್ಲರ್ಪೆ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ: 10.00, ಮಾಡ್ನೂರು ಗ್ರಾಮದ ಅಶ್ವತ್ತಡಿ- ಸಸ್ಪೆಟ್ಟಿರಸ್ತೆ ಅಭಿವೃದ್ಧಿ: 10.00, ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಥಮೂಲೆ ಪರಿಶಿಷ್ಟ ಪಂಗಡ ಕಾಲೋನಿಗೆ ರಸ್ತೆ ಅಭಿವೃದ್ಧಿ.: 10.00 ಲಕ್ಷ , ಪಡುವನ್ನೂರು ಗ್ರಾಮದ ಪದಡ್ಕ ಕಾಲೋನಿ ಸಂಪರ್ಕರಸ್ತೆ ಅಭಿವೃದ್ಧಿ: 10.00 ಲಕ್ಷ , ಅರಿಯಡ್ಕ ಗ್ರಾಮದ ಬಳ್ಳಿಕಾನ ಕಾಲೋನಿ ಸಂಪರ್ಕರಸ್ತೆ ಅಭಿವೃದ್ಧಿ: 10.00, ಬಲ್ನಾಡು ಗ್ರಾಮದ ಕುರುಡಕಟ್ಟೆಯ ಮಡೋಟ್ಟುಮಲ್ಲಿಪ್ಪಾಡಿ-ಕೆಳಗಿನ ಮನೆ ಸಂಪರ್ಕರಸ್ತೆ ಅಭಿವೃದ್ಧಿ: 10.00, ಬಡಗನ್ನೂರು ಗ್ರಾಮದ ನೆಕ್ಕರೆ-ಬಾಣಪದವು- ಮುಡಿಪಿನಡ್ಕ ಸಂಪರ್ಕರಸ್ತೆÉ ಅಭಿವೃದ್ಧಿ: 10.00, ಆರ್ಯಾಪು ಗ್ರಾಮದ ಕೊಲ್ಯಜನತಾ ಕಾಲೋನಿಸಂಪರ್ಕರಸ್ತೆ ಅಭಿವೃದ್ಧಿ: 10.00, ಮುಂಡೂರು ಗ್ರಾಮದ ಅಂಬಟ-ಪೋನೊನಿ ಕಾಲೋನಿ ಸಂಪರ್ಕರಸ್ತೆ ಅಭಿವೃದ್ಧಿ: 05.00, ಕೊಳ್ತಿಗೆ ಗ್ರಾಮದ ಗೇಟಿನಂಗಡಿ-ಕೆರೆಮೂಲೆ ಪರಿಶಿಷ್ಟ ಪಂಗಡ ಕಾಲೋನಿ,ಸಂಪರ್ಕರಸ್ತೆ ಅಭಿವೃದ್ಧಿ: 10.00, ಒಳಮೊಗ್ರ ಗ್ರಾಮದ ಕೊಯಿಲತ್ತಡ್ಕ-ಕಡ್ತಿಮಾರು ಹೋಗುವ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ: 10.00, 34- ನೆಕ್ಕಿಲಾಡಿ ಬೊಳಂತಿಲ ಜಾರ್ಕೋಡಿ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆ ಅಭಿವೃದ್ಧಿ: 10.00, ಮುಂಡೂರು ಗ್ರಾಮದ ಅಜಿಲಾಡಿ ಪಾದೆ ಹೊಸ್ಮಾರು ಸಂಪರ್ಕ ರಸ್ತೆ ಅಭಿವೃದ್ಧಿ: 10 ಲಕ್ಷ , ಸರ್ವೆ ಗ್ರಾಮದ ಕೂಡುರಸ್ತೆ -ನೆಕ್ಕಿಲು ಅಜಿಲಾಡಿಪಾದೆ ಹೊಸ್ಮಾರು ಸಂಪರ್ಕ ರಸ್ತೆ ಅಭಿವೃದ್ಧಿ : 10 ಲಕ್ಷ ,ನೆಟ್ಟಣಿಗೆ ಮುಡ್ನೂರು ಗ್ರಾಮದ ಪಲ್ಲತ್ತೂರು ಕುಂಟಾಪು ಸಂಪರ್ಕ ರಸ್ತೆ ಅಭಿವೃದ್ಧಿ: 10 ಲಕ್ಷ , ಕುಡಿಪ್ಪಾಡಿ ಗ್ರಾಮದ ಅರ್ಕ ಪರಿಶಿಷ್ಟ ಪಂಗಡ ರಸ್ತೆ ಅಭಿವೃದ್ಧಿ: 10.00 ಲಕ್ಷ ,ಪುತ್ತೂರು ಕಸಬಮಂಜಲ್ಪಡ್ಪು ಜನತಾ ಕಾಲೋನಿ ಸಂಪರ್ಕ ರಸ್ತೆ ಅಭಿವೃದ್ಧಿ 05.05 ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಂದಳಿಕೆ ಕುಟೇಲು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ: 05.05 ಲಕ್ಷ ,ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಜೋಗಿಮಠ ನೆಕ್ಕರೆಕಾಡು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ: 05.05 ಲಕ್ಷ ,ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳತಾಲೂಕು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯsಸೇರಾಜೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ: 05.05, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕುಮೇರು-ಪುಳಿತ್ತಾಡಿಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ: 10.00 ಲಕ್ಷ , ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳತಾಲೂಕು ಕೆದಿಲಾ ಗ್ರಾಮದ ಗಾಂಧಿನಗರ ಸತ್ತಿಕಲ್ಲುಸರೋಳಿ ಕುದ್ಮಾನ್ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಅಭಿವೃದ್ಧಿ: 09.45 ಲಕ್ಷ , ಬೆಳ್ಳಿಪ್ಪಾಡಿ ಗ್ರಾಮದ ಬತ್ರೋಳಿ ಕಟರಕೊಡಿಮರ ಪರಿಶಿಷ್ಟ ಪಂಗಡ ಕಾಲೋನಿಲೋಕಯ್ಯ ನಾಯ್ಕ ಮನೆ ಬಳಿ ರಸ್ತೆ ಅಭಿವೃದ್ಧಿ: ೦೫.೦೫ ಲಕ್ಷ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕುಮೇರುಜೆಡ್ಡು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ: 10.00 ಲಕ್ಷ , ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳತಾಲೂಕು ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರುಗ್ರಾಮದ ಶ್ರೀ ಮೂಕಾಂಭಿಕದೇವಸ್ಥಾನ ಬಳಿ ಪರಿಶಿಷ್ಟಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ: 10 ಲಕ್ಷ ,ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಮಾಣಿಮೂಲೆ, ಭಾಳೆಕಾನ ಬಟ್ಯಡ್ಕರತೆ ರಸ್ತೆ ಅಭಿವೃದ್ಧಿ: 10.00 ಲಕ್ಷ , ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳತಾಲೂಕು ಇಡ್ಕಿಡು ಗ್ರಾಮದ ಸೂರ್ಯ ಮುಂಡ್ರೆಬೈಲು ಪ.ಪಂ ರಸ್ತೆ ಅಭಿವೃದ್ಧಿ: 10.00, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳತಾಲೂಕು ಕೇಪು ಗ್ರಾಮದ ಅಮೈ-ಕೋಪ್ರೆ ಪರಿಶಿಷ್ಟಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ: 10.00, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳತಾಲೂಕು ಪೆರುವಾಯಿ ಗ್ರಾಮದ ಮುಳ್ಳೆಚ್ಚಿ-ಗೌರಿಮೂಲೆಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ: 10.00, ಕೆಯ್ಯೂರು ಗ್ರಾಮದ ಮಾಡಾವು ಸಂತೋಷ್ನಗರ-ಉನ್ನಿಮಾರು-ಪಂಜಿಗುಡ್ಡೆ-ಕೆ.ಪಿ.ಎಸ್ ಕೆಯ್ಯೂರುಪ.ಪಂ ರಸ್ತೆ ಅಭಿವೃದ್ಧಿ: 5.05 ಲಕ್ಷ,ತಾಲೂಕಿನ ಬೆಟ್ಟಂಪ್ಪಾಡಿ ಗ್ರಾಮದ ಪುಲ್ಲಿತ್ತಾಡಿ ಚೆಲ್ಯಡ್ಕ ರಸ್ತೆಅಭಿವೃದ್ಧಿ: 5.05, ನರಿಮೊಗ್ರು ಗ್ರಾಮದ ನೆಕ್ಕಿಲು ಪರಿಶಿಷ್ಟಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ: 05.05, ಕುರಿಯ ಗ್ರಾಮದ ಬಳ್ಳಮಜಲು-ಕುಕ್ಕುಂಜೋಡು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಅಭಿವೃದ್ಧಿ: 05.05, ಮಾಡ್ನೂರುಗ್ರಾಮದ ಮಿನೋಜಿಕಲ್ಲು ಪರಿಶಿಷ್ಟ ಪಂಗಡ ಕಾಲೋನಿ
ರಸ್ತೆ ಅಭಿವೃದ್ಧಿ: 10.00, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಕೆದಿಲಾ ಗ್ರಾಮದ ಸತ್ತಿಕಲ್ಲು ಕುದ್ಮಾನುಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ:05.05, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್ವ್ಯಾಪ್ತಿಯ ಕುರಿಯ ಗ್ರಾಮದ ಮಾಲಾರು- ನೆಕ್ಕರೆ ರಸ್ತೆ ಅಭಿವೃದ್ಧಿ: 05.05, ಪುತ್ತೂರುತಾಲೂಕು, ಬನ್ನೂರುಗ್ರಾಮದಕುಂಟ್ಯಾನ ಸದಾಶಿವ ದೇವಸ್ಥಾನದ ಬಳಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 10.00, ಪುತ್ತೂರುತಾಲೂಕು, ಬಡಗನ್ನೂರುಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುವನ್ನೂರು ಗ್ರಾಮ ಸಜಂಕಾಡಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00, ಪುತ್ತೂರುತಾಲೂಕು, ಕೆಯ್ಯೂರು ಗ್ರಾಮದ ಅಂಕತ್ತಡ್ಕ ಜನತಾ ಕಾಲೋನಿ-ಗರಡಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00, ಪುತ್ತೂರು ತಾಲೂಕು, ಬೆಳ್ಳಿಪ್ಪಾಡಿ ಗ್ರಾಮದ ಬೇರಿಕೆ- ನೆಕ್ಕರೆ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00, ಪುತ್ತೂರುತಾಲೂಕು, ಪಾಣಾಜೆಗ್ರಾಮದ ಉಡ್ಡಂಗಳದಿಂದ ಕೀಲಂಪಾಡಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 10.00, ಪುತ್ತೂರುತಾಲೂಕು, 34-ನೆಕ್ಕಿಲಾಡಿಗ್ರಾಮದ ಬಿತಲಪ್ಪು ಮಾರುತಿ ನಾಯ್ಕರ ಮನೆಯಿಂದ ಸುಮತಿ ನಲ್ಕೆಯವರ ಮನೆವರೆಗೆ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 05.05, ಪುತ್ತೂರುತಾಲೂಕು, 34-ನೆಕ್ಕಿಲಾಡಿಗ್ರಾಮದ ಬಿತಲಪ್ಪು ಶಕ್ತಿನಗರ ಬಸ್ ನಿಲ್ದಾಣದಿಂದ ಬಿತಲಪ್ಪು ಪರಿಶಿಷ್ಟ ಜಾತಿಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 05.05,ಬಂಟ್ವಾಳ ತಾಲೂಕು, ಮಾಣಿಲ ಗ್ರಾಮದ ತಾರಿದಳ ಕುಕ್ಕಾಜೆ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 10.00, ಬಂಟ್ವಾಳ ತಾಲೂಕು, ಅಳಿಕೆ ಗ್ರಾಮದಕಲ್ಲೇಜಾರು ಮಣ್ಣಾಪು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00, ಬಂಟ್ವಾಳ ತಾಲೂಕು, ವಿಟ್ಲಕಸಬದ 18ನೇ ವಾರ್ಡಿನ ನೆಲ್ಲಿಗುಡ್ಡ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 09.85, ಬಂಟ್ವಾಳ ತಾಲೂಕು, ಪುಣಚಗ್ರಾಮದ ಅಗ್ರಾಳ-ಪದವುಅಂಬಟೆಮೂಲೆ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆಅಭಿವೃದ್ಧಿ 10.00, ಬಂಟ್ವಾಳ ತಾಲೂಕು, ವಿಟ್ಲಮುಡ್ನೂರುಗ್ರಾಮದ ಮಾಡತ್ತಡ್ಕತೊಟ್ಟಿಲುಪಾದೆಡೆಚ್ಚಾರು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 10.00, ಬAಟ್ವಾಳ ತಾಲೂಕು, ವಿಟ್ಲಗ್ರಾಮದ ಚಂದಳಿಕೆ- ಕುಟೇಲು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 05.05, ಪುತ್ತೂರುತಾಲೂಕು, ನಿಡ್ಪಳ್ಳಿ ಗ್ರಾಮದಕೋಡಿ-ಕಕ್ಕೂರು ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆಅಭಿವೃದ್ಧಿ 10.00 , ಪುತ್ತೂರುತಾಲೂಕು, ಕೆದಂಬಾಡಿಗ್ರಾಮದ ತಿಂಗಳಾಡಿ-ಕೊಡಗೋಣಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 10.00, ಪುತ್ತೂರುತಾಲೂಕು, ಕೊಳ್ತಿಗೆ ಗ್ರಾಮದ ಮೊಗಪ್ಪೆ-ಪುನರಡ್ಕ-ಎಳೆತ್ತಡ್ಕ ಬೈಲೋಡಿ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 15.00, ಬಂಟ್ವಾಳ ತಾಲೂಕು, ಇಡ್ಕಿದುಗ್ರಾಮದ ಮಿತ್ತೂರು ಬೂಡಿನಮಜಲು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 10.00, ಪುತ್ತೂರುತಾಲೂಕು, ಇರ್ದೆಗ್ರಾಮದ ಬೈಲಾಡಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 10.00, ಪುತ್ತೂರುತಾಲೂಕು, ಮುಂಡೂರುಗ್ರಾಮದ ಬದಿಯಡ್ಕ- ಜನತಾಜಾತಿ ಪಂಗಡಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 10.00, ಪುತ್ತೂರುತಾಲೂಕು, ನೆಟ್ಟಣಿಗೆಮುಡ್ನೂರುಗ್ರಾಮದ ವಜ್ರಮೂಲೆ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00, ಪುತ್ತೂರುತಾಲೂಕು, ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಅಣಿಲೆ- ಗೆಜ್ಜೆಗಿರಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 10.00, ,ಪುತ್ತೂರುತಾಲೂಕು, ಇರ್ದೆಗ್ರಾಮದ ಬಂದತಡ್ಕ- ನೆಲ್ಯಾರ್ಣೆ ಪರಿಶಿಷ್ಟ ಪಂಗಡಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00, ಮಾಡ್ನೂರುಗ್ರಾಮದ ನೆಲ್ಲಿತ್ತಡ್ಕಅಂಗನವಾಡಿ ಕೇಂದ್ರದಿಂದ ಸಸ್ಪೆಟಿ ಪುಷ್ಪಾವತಿ ಇವರ ಮನೆ ತನಕ ಪರಿಶಿಷ್ಟ ಪಂಗಡಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 10.00, ಬಲ್ನಾಡುಗ್ರಾಮದ ಪದವುನಿಂದ- ಬಂಗಾರಡ್ಕ ಪರಿಶಿಷ್ಟ ಪಂಗಡಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 05.50, ಒಳಮೊಗ್ರು ಗ್ರಾಮದ ಕುಟ್ಟಿನೋಪಿನಡ್ಕ ಇಡಿಂಜಿಲ ನೆಲ್ಲಿತ್ತಡ್ಕ ಪರಿಶಿಷ್ಟ ಪಂಗಡಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 10.00, ಬಂಟ್ವಾಳ ತಾಲೂಕು, ಕೆದಿಲ ಗ್ರಾಮದಗುಡ್ಡೆಕೋಡಿನಿಂದ- ಓನಿಬಾಗಿಲುಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 14.50, ಪುತ್ತೂರು ತಾಲೂಕು, ಅರಿಯಡ್ಕ ಗ್ರಾಮದ ಹೊಸಗದ್ದೆಜನತಾ ಕಾಲೋನಿ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 10.00, ಆರ್ಯಾಪು ಗ್ರಾಮದ ನೆಲ್ಲಿತ್ತಡ್ಕಕುಕ್ಕಾಡಿಯಿಂದ-ಬಾರಿಕೆ- ಸಂಪ್ಯ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 10.00, ಕಬಕ ಗ್ರಾಮದ ಕಬಕಬೈಲು- ಕಾಜುಬಳ್ಳಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 05.05 , ಸರ್ವೆಗ್ರಾಮದ ಸೊರಕೆ-ಅಜ್ಜಿಕಲ್ಲು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 10.00, ಶಾಂತಿಗೋಡುಗ್ರಾಮದ ಮುಂಡೋಡಿ ಆನಡ್ಕ ಮನೆವರೆಗೆ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆಅಭಿವೃದ್ಧಿ 09.90, ಬಂಟ್ವಾಳ ತಾಲೂಕು, ಪೆರ್ನೆಗ್ರಾಮದ ನೂಜಿನಡ್ಕ- ಕಡಂಬು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 05.05 ರೂ ಅನುದಾನ ಬಿಡುಡೆಯಾಗಿದೆ. ಈ ಕಾಮಗಾರಿಗೆ ಇನ್ನಷ್ಟೆ ಗುದ್ದಲಿ ಪೂಜೆ ನಡೆಯಬೇಕಿದೆ.
ರಾಜಕೀಯ
BJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಪುತ್ತೂರು: ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ನರಸಿಂಹ ಮಾಣಿ ಅವರು ಎದುರಿಸುತ್ತಿರುವ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರಿಗೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಅವರ ತಾಯಿಯ ಯೋಗಕ್ಷೇಮ ವಿಚಾರಿಸಿದ ಮುಖಂಡರು, ಧೈರ್ಯ ಕಳೆದುಕೊಳ್ಳದೆ ಆತ್ಮವಿಶ್ವಾಸದಿಂದ ಇರುವಂತೆ ಪ್ರೇರಣೆ ನೀಡಿದರು.

ಸಾಮಾಜಿಕ ಹಾಗೂ ಸಂಘಟನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಕುಟುಂಬದೊಂದಿಗೆ ಸಮಾಜ ನಿಲ್ಲಬೇಕು ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.
ಭೇಟಿಯ ವೇಳೆ ಬಿಜೆಪಿ ಪುತ್ತೂರು ಮಂಡಲ ಉಪಾಧ್ಯಕ್ಷ ರತನ್ ರೈ ಕುಂಬ್ರ, ಪುತ್ತೂರು ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ನಿತೇಶ್ ನೆಲಪ್ಪಾಲು, ಯುವಮೋರ್ಚಾದ ಪವನ್ ಶೆಟ್ಟಿ ಕಂಬಳತ್ತಡ್ಡ, ಪ್ರೀತಮ್ ಶೆಟ್ಟಿ ಪೆರ್ನೆ, ಆದೇಶ್ ಶೆಟ್ಟಿ ಉಪ್ಪಿನಂಗಡಿ, ವಿಶ್ವನಾಥ ಕುಲಾಲ್ ಹಾಗೂ ಹಿಂದೂ ಜಾಗರಣ ವೇದಿಕೆಯ ರಾಜೇಶ್ ಉಪಸ್ಥಿತರಿದ್ದರು.
ಮಂಗಳೂರು
Lakshman Sawadi-ಸಹಕಾರಿ ಕ್ಷೇತ್ರದ ಮೂಲಕ ಕರಾವಳಿಯಲ್ಲಿ ಕಾಂಗ್ರೆಸ್ಗೆ ಹೊಸ ಶಕ್ತಿ; ತಳಮಟ್ಟದಿಂದ ಪಕ್ಷ ಕಟ್ಟಲು ಕಾರ್ಯಕರ್ತರಿಗೆ ಸಚಿವ ಲಕ್ಷ್ಮಣ ಸವದಿ ಕರೆ
ಹಕಾರಿ ಕ್ಷೇತ್ರದಲ್ಲಿ ಜಾತಿ-ಮತಗಳ ಬೇಧವಿಲ್ಲದೆ ಜನರಿಗೆ ನೇರವಾಗಿ ಸಹಾಯ ಮಾಡಬಹುದು. ಹೀಗಾಗಿ, ತಳಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸುವ ಮೂಲಕ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಮುಂದಾಗಬೇಕು,” ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.
ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ ಜಾತಿ-ಮತಗಳ ಬೇಧವಿಲ್ಲದೆ ಜನರಿಗೆ ನೇರವಾಗಿ ಸಹಾಯ ಮಾಡಬಹುದು. ಹೀಗಾಗಿ, ತಳಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸುವ ಮೂಲಕ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಮುಂದಾಗಬೇಕು,” ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಗ್ರಾಮೀಣ ಮಟ್ಟದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಪಕ್ಷದ ಮೂಲ ಬೇರುಗಳಿದ್ದಂತೆ. ಜಿಲ್ಲೆಯ ಯಾವ ಗ್ರಾಮಗಳಲ್ಲಿ ಇನ್ನೂ ಸಹಕಾರಿ ಸಂಘಗಳು ಸ್ಥಾಪನೆಯಾಗಿಲ್ಲವೋ ಅಂತಹ ಗ್ರಾಮಗಳನ್ನು ಗುರುತಿಸಿ ಪಟ್ಟಿ ನೀಡಿದರೆ, ತಕ್ಷಣವೇ ಅಧಿಕಾರಿಗಳ ಮೂಲಕ ನೋಂದಣಿ ಮಾಡಿಸಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (DCC) ಸದಸ್ಯತ್ವ ಕೊಡಿಸಲಾಗುವುದು ಎಂದರು.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪಕ್ಷವನ್ನು ಸಂಘಟಿಸಲು ನಾನು ಸಂಪೂರ್ಣ ಬದ್ಧನಾಗಿದ್ದೇನೆ ಎಂದರು.
“2008ರಲ್ಲಿ ನಾನು ಸಹಕಾರ ಸಚಿವನಾಗಿದ್ದಾಗ ಕೃಷಿ ಸಾಲದ ಬಡ್ಡಿದರವನ್ನು ಶೇ.3ಕ್ಕೆ ಇಳಿಸಿದ್ದೆ. ಆದರೆ, ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಅವಧಿಗೆ ಮುನ್ನ ಸಾಲ ಮರುಪಾವತಿಸುವವರಿಗೆ ಶೇ.3ರಷ್ಟು ಸಹಾಯಧನ ಘೋಷಿಸಿದ್ದರಿಂದ, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗುವಂತಾಯಿತು. ಈ ಸತ್ಯವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು.
ಜೈನ ಅಭಿವೃದ್ಧಿ ನಿಗಮಕ್ಕೆ ಸಿಎಂ ಅನುಮೋದನೆ:
ಕಾಂಗ್ರೆಸ್ ಪಕ್ಷಕ್ಕೆ ‘ಹಸ್ತದ ಚಿಹ್ನೆ’ ಸಿಕ್ಕ ಇತಿಹಾಸವನ್ನು ಸ್ಮರಿಸಿದ ಸವದಿ, “ತುರ್ತು ಪರಿಸ್ಥಿತಿಯ ನಂತರ ಚಿಹ್ನೆಯ ವ್ಯಾಜ್ಯ ಎದುರಾದಾಗ ನಮ್ಮ ಭಾಗದ ಜೈನ ಮುನಿ ಶ್ರೀ ವಿದ್ಯಾನಂದ ಮುನಿಗಳು ಇಂದಿರಾ ಗಾಂಧಿ ಅವರಿಗೆ ಬೆಳ್ಳಿಯ ಹಸ್ತದ ಚಿಹ್ನೆ ನೀಡಿ ಆಶೀರ್ವದಿಸಿದ್ದರು. ಆ ಸಮಾಜದ ಋಣ ತೀರಿಸುವ ಉದ್ದೇಶದಿಂದ ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿರುವ ಜೈನ ಸಮುದಾಯದ ಬೇಡಿಕೆಯಂತೆ, ಪ್ರತ್ಯೇಕ ‘ಜೈನ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿಗಳಿಂದ ಕಡತಕ್ಕೆ ಅನುಮೋದನೆ ಪಡೆಯಲಾಗಿದೆ,” ಎಂದು ಮಾಹಿತಿ ನೀಡಿದರು.
ಸಚಿವರನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಗೌರವಿಸಿದರು.
ಮಾಜಿ ಸಚಿವ ಬಿ. ರಮಾನಾಥ್ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪರಿಸರಮತ್ತು ಪ್ರವಾಸೋದ್ಯಮ ನಿಗಮ ಅಧ್ಯಕ್ಷೆ ಶಾಲೆಟ್ ಪಿಂಟೋ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ವಿಶ್ವಾಸ್ ದಾಸ್, ಶುಭೋದಯ ಆಳ್ವ, ಬ್ಲಾಕ್ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜಕೀಯ
Puttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿದರು.
ಪುತ್ತೂರು: ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೀಡಲಾಗುತ್ತಿರುವ ಭರವಸೆಗಳು ಕೇವಲ ಬ್ಯಾನರ್ಗಳಿಗೆ ಸೀಮಿತವಾಗಿದ್ದು, ಕ್ಷೇತ್ರಕ್ಕೆ ಯಾವುದೇ ಗಮನಾರ್ಹ ಅನುದಾನ ಬರುತ್ತಿಲ್ಲ. ಶಾಸಕರು ಕಳೆದ ಮೂರೂವರೆ ವರ್ಷಗಳಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಸವಾಲು ಹಾಕಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರಿಗೆ ಬೆಳೆ ವಿಮೆಯ ಸೂಕ್ತ ಮೊತ್ತ ನೀಡದೆ ವಂಚಿಸಲಾಗುತ್ತಿದೆ. ಕಾರ್ಮಿಕರ ನಿಧಿಯ ವಿಚಾರದಲ್ಲೂ ಅನ್ಯಾಯವಾಗುತ್ತಿದೆ. ಕ್ಷೇತ್ರದಾದ್ಯಂತ ರಸ್ತೆ ದುರಸ್ತಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಒಂದಿಷ್ಟು ಅನುದಾನ ಬಂದಿದ್ದರೆ ಅದು ಕೇಂದ್ರ ಸರ್ಕಾರದಿಂದ ಮಾತ್ರವೇ ಹೊರತು ರಾಜ್ಯ ಸರ್ಕಾರದಿಂದಲ್ಲ ಎಂದು ಆರೋಪಿಸಿದರು.

ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನೇ ವಿತರಿಸಲಾಗುತ್ತಿದೆ. ಆದರೆ ಬೆಳೆ ವಿಮೆಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತವನ್ನು ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಶಾಸಕರು ಕ್ಷೇತ್ರಕ್ಕೆ ತಂದಿರುವ ಅನುದಾನದ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅವಧಿಯಲ್ಲಿ ನೆಟ್ಟಣಿಗೆ ಮುಡೂರಿಗೆ ₹29.50 ಕೋಟಿ ಅನುದಾನ: ಸಾಜ ರಾಧಾಕೃಷ್ಣ ಆಳ್ವ
ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಅಂದಿನ ಶಾಸಕ ಸಂಜೀವ ಮಠಂದೂರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರ ಮೂಲಕ ಒಟ್ಟು ₹29.50 ಕೋಟಿ ಅನುದಾನ ಒದಗಿಸಲಾಗಿತ್ತು ಎಂದು ತಿಳಿಸಿದರು.
ಈಶ್ವರಮಂಗಲ-ಸುಳ್ಯಪದವು ರಸ್ತೆ ಹಾಗೂ ಹನುಮಗಿರಿಯಿಂದ ನಿಡಳ್ಳಿ ಮುಂಡೂರು ರಸ್ತೆಯನ್ನು ಪಿಎಂಜಿಎಸ್ವೈ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈಗಿನ ಶಾಸಕರು ಮೂರೂವರೆ ವರ್ಷಗಳಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ. ಬಂದಿರುವುದು ಶಾಸನಬದ್ಧ ಅನುದಾನ ಮಾತ್ರ ಎಂದು ಟೀಕಿಸಿದರು.
ಅನುದಾನ ಮಂಜೂರಾಗಿದೆ ಎಂದು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಆದರೆ ಕಾಮಗಾರಿಗಳು ಆರಂಭವಾಗಲು ಒಂದು ವರ್ಷವೇ ಬೇಕಾಗುತ್ತದೆ. ಶಿಲಾನ್ಯಾಸ ನಡೆದ ಹಲವು ಕಾಮಗಾರಿಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಆದರೂ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಬಿಜೆಪಿ ಆಡಳಿತದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಬಂದಿರುವ ಅನುದಾನಗಳ ಸಂಪೂರ್ಣ ಪಟ್ಟಿ ಶಕ್ತಿ ಕೇಂದ್ರದ ಪ್ರಮುಖರ ಬಳಿ ಇದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಹಾಗೂ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ನೆಟ್ಟಣಿಗೆ ಮುಡೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ನರಸೀನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಮುಂಡ್ಯ ವಂದಿಸಿದರು.
-
ಮಂಗಳೂರು15 hours agoMangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
-
ಅಂತರ ರಾಜ್ಯ20 hours agoFormer CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!
-
ಬಿಗ್ ನ್ಯೂಸ್22 hours agoBail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ
-
ಅಂತರ ರಾಜ್ಯ14 hours agoArrested-14ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕಾರರ ಬೇಡಿಕೆಯಂತೆ 25ಲಕ್ಷ ರೂ ನೀಡಿದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಮಹತ್ವದ ತಿರುವು..!
-
ನಿಧನ ವಾರ್ತೆ21 hours agoHeart attack-ಸಾಲಿಗ್ರಾಮ: ಕಚೇರಿಯಲ್ಲೇ ಹೃದಯಾಘಾತ; ಬಹುಮುಖ ಪ್ರತಿಭೆ ದಿನೇಶ್ ಹೊಳ್ಳ ನಿಧನ
-
ಸಿನೆಮಾ20 hours agoDawood-‘ಧುರಂಧರ್ ‘ ನಲ್ಲಿ ದಾವೂದ್ ನ ತೋರಿಸಿದ ರೀತಿ ವಾಸ್ತವವಲ್ಲ…! ಮೋಸ್ಟ್ ವಾಂಟೆಡ್ ಪಾತಕಿ ಈಗ ಹೇಗಿದ್ದಾನೆ ಗೊತ್ತೇ..? ಮಾಜಿ FBI ಅಧಿಕಾರಿ ಹೇಳಿದ್ದೇನೂ..?
-
ನಿಧನ ವಾರ್ತೆ21 hours agoMudbidri-ಮಂಗಳೂರಿನಲ್ಲಿ ಮೇಲ್ಛಾವಣಿ ಕೆಲಸದ ವೇಳೆ ಅವಘಡ: ಮೂಡುಬಿದಿರೆ ತಾ.ಪಂ. ಮಾಜಿ ಉಪಾಧ್ಯಕ್ಷ ಸಾವು
-
ನಿಧನ ವಾರ್ತೆ20 hours agoOne-sided love-ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಮೇಲಿನ ಒನ್ಸೈಡೆಡ್ ಲವ್; ಹಲ್ಲೆಗೊಳಗಾದ ಯುವಕ ಸಾವು















