ಜ. 8 1988ರಂದು ಅದು ಪರ್ಲಡ್ಕದಲ್ಲಿ ಶುಭಾರಂಭಗೊಂಡಿತ್ತು. ಆರಂಭದಲ್ಲಿ ಈ […]" /> ಜ. 8 1988ರಂದು ಅದು ಪರ್ಲಡ್ಕದಲ್ಲಿ ಶುಭಾರಂಭಗೊಂಡಿತ್ತು. ಆರಂಭದಲ್ಲಿ ಈ […]"> Sriram Oil Mil-ಪುತ್ತೂರು ಹಾಗೂ ಹತ್ತೂರಿಗೆ ಘಮಘಮಿಸುವ ಪರಿಶುದ್ಧ ತೆಂಗಿನ ಎಣ್ಣೆ ಒದಗಿಸುವ ಮೂಲಕ ಮನೆಮಾತಾದ ಸಂಸ್ಥೆ ಶ್ರೀರಾಮ ಎಣ್ಣೆ ಮಿಲ್ ಗೆ 37 ಸಂವತ್ಸರ – ಅದು ಬೆಳೆದು ಬಂದ ಹಾದಿ ಹೀಗಿದೆ - Nikhara News | Kannada News Website
Connect with us

ಬಿಗ್ ನ್ಯೂಸ್

Sriram Oil Mil-ಪುತ್ತೂರು ಹಾಗೂ ಹತ್ತೂರಿಗೆ ಘಮಘಮಿಸುವ ಪರಿಶುದ್ಧ ತೆಂಗಿನ ಎಣ್ಣೆ ಒದಗಿಸುವ ಮೂಲಕ ಮನೆಮಾತಾದ ಸಂಸ್ಥೆ ಶ್ರೀರಾಮ ಎಣ್ಣೆ ಮಿಲ್ ಗೆ 37 ಸಂವತ್ಸರ – ಅದು ಬೆಳೆದು ಬಂದ ಹಾದಿ ಹೀಗಿದೆ

Published

on

Ad Widget

Ad Widget

Ad Widget

Ad Widget

ಪುತ್ತೂರು ಹಾಗೂ ಹತ್ತೂರಿಗೆ ಘಮಘಮಿಸುವ ಪರಿಶುದ್ಧ ತೆಂಗಿನ ಎಣ್ಣೆ ಒದಗಿಸುವ ಮೂಲಕ ಮನೆಮಾತಾದ ಸಂಸ್ಥೆ ಶ್ರೀರಾಮ ಎಣ್ಣೆ ಮಿಲ್ . ಶಿವಶಂಕರ ಭಟ್ ಬೋನಂತಾಯರವರು ಸ್ಥಾಪಿಸಿದ ಸಂಸ್ಥೆಗೀಗ 37 ಸಂವತ್ಸರ.

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರು ಹಾಗೂ ಹತ್ತೂರಿಗೆ ಘಮಘಮಿಸುವ ಪರಿಶುದ್ಧ ತೆಂಗಿನ ಎಣ್ಣೆ ಒದಗಿಸುವ ಮೂಲಕ ಮನೆಮಾತಾದ ಸಂಸ್ಥೆ ಶ್ರೀರಾಮ ಎಣ್ಣೆ ಮಿಲ್ . ಶಿವಶಂಕರ ಭಟ್ ಬೋನಂತಾಯರವರು ಸ್ಥಾಪಿಸಿದ ಸಂಸ್ಥೆಗೀಗ 37 ಸಂವತ್ಸರ.

Ad Widget

Ad Widget alt="Ad Widget"/>

Ad Widget

ಜ. 8 1988ರಂದು ಅದು ಪರ್ಲಡ್ಕದಲ್ಲಿ ಶುಭಾರಂಭಗೊಂಡಿತ್ತು. ಆರಂಭದಲ್ಲಿ ಈ ಸಂಸ್ಥೆ ಒಂದಷ್ಟು ಕಷ್ಟದ ದಿನಗಳನ್ನು ಎದುರಿಸಿದರೂ ಸದ್ಯ ಪುತ್ತೂರು ಮಾತ್ರವಲ್ಲದೇ ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದಲ್ಲಿ ಪ್ರತಿಷ್ಟಿತ ಬ್ರ್ಯಾಂಡ್ ಆಗಿ ಬೆಳೆದಿದೆ. ಇದರ ಜತೆಗೆ ಬೇರೆ ಹಲವು ಉದ್ಯಮಗಳ ವಿಸ್ತರಣೆಗೊಂಡಿರುವ ಈ ಸಂಸ್ಥೆಯ ಯಶೋಗಾಥೆ ಇಲ್ಲಿದೆ.

Ad Widget

Ad Widget <> Ad Widget

ಶಿವಶಂಕರ ಭಟ್ ಬೋನಂತಾಯರವರು ಆರಂಭದ ದಿನಗಳಲ್ಲಿ, ಏಳ್ಮುಡಿಯ ಭಟ್ ಬಿಲ್ಡಿಂಗ್ ನ ಬಾಡಿಗೆ ಕೊಠಡಿಯಲ್ಲಿ ಕೊಬ್ಬರಿಯ ಖರೀದಿ ಹಾಗೂ ತೆಂಗಿನ ಎಣ್ಣೆ ಮಾರಾಟ, ಜಾಬ್ ವರ್ಕ್ ಸೇವೆಗಳನ್ನು ನೀಡಲಾರಂಭಿಸಿದರು. ಜೊತೆಗೆ ತೆಂಗಿನ ಹಿಂಡಿಯನ್ನು ಕೂಡ ಹಸುವಿನ ಮೇವಾಗಿ ಮಾರಾಟ ಮಾಡಲು ಆರಂಭಿಸಿದರು.

ಕಷ್ಟದ ದಿನಗಳು
ಶಿವಶಂಕರ್ ಭಟ್ ಬೋನಂತಾಯರವರು ಸಾಲಮಾಡಿ ಕೇವಲ ಒಂದು ಗಾಣ ಖರೀದಿಸಿ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಆರಂಭದ ದಿನಗಳಲ್ಲಿ ಕಷ್ಟ ನಷ್ಟಗಳನ್ನು ಎದುರಿಸಿದ್ದಾರೆ. ಆಕಸ್ಮಿಕ ಬೆಂಕಿ ಅವಘಡ, ಕೆಲಸಗಾರರಿಂದಲೆ ಕಳ್ಳತನ ಮುಂತಾದ ಸಮಸ್ಯೆಗಳು ಎದುರಾದರೂ ಎದೆಗುಂದದ ಅವರು, ನಂಬಿಕಸ್ತ ಕೆಲಸಗಾರರು ಹಾಗೂ ಕುಟುಂಬದ ಸಹಕಾರದಿಂದ ವ್ಯವಹಾರ ಕ್ಷೇತ್ರವನ್ನು ನಿಧಾನವಾಗಿ ವಿಸ್ತರಿಸುತ್ತ ಹೋದರು. ಯಾವುದೇ ಸಮಸ್ಯೆ ಎದುರಾದರೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ, ವ್ಯವಹಾರದಲ್ಲಿ ತೋರ್ಪಡಿಸಿದ ಪ್ರಾಮಾಣಿಕತೆಯಿಂದ ಅವರ ಉತ್ಪನ್ನಗಳಿಗೆ ಜನ ಮಾರುಹೋದರು. ಈ ಸಂಸ್ಥೆಯ ತೆಂಗಿನ ಎಣ್ಣೆ ಉತ್ತಮ ಗುಣಮಟ್ಟದ್ದು ಎಂಬ ಮಾತು ಎಲ್ಲೆಡೆ ಪಸರಿಸಿತು. ಸುತ್ತಮುತ್ತಲಿನ ಐವತ್ತು ಕಿಲೋಮೀಟರ್ ಪ್ರದೇಶಗಳಲ್ಲಿ ಶ್ರೀ ರಾಮ ತೆಂಗಿನ ಎಣ್ಣೆ ಎಂದರೆ ಪರಿಶುದ್ಧ ತೆಂಗಿನ ಎಣ್ಣೆ ಎಂದೇ ಹೆಸರುವಾಸಿ ಆಯಿತು.

Ad Widget

Ad Widget

ಶ್ರೀ ರಾಮ ಎಣ್ಣೆ ಮಿಲ್ ನ ಹೊಸ ಉತ್ಪನ್ನಗಳು ಹಾಗೂ ಸೇವೆಗಳು:
ಸಂತೋಷ್ ಬ್ರಾಂಡ್ ನ ಪ್ಯಾಕೆಟ್
ಶ್ರೀರಾಮ ಎಣ್ಣೆ ಮಿಲ್ಲಿನ ಸಹಯೋಗದೊಂದಿಗೆ ತೆಂಗು ಬೆಳೆಗಾರರು ತಮ್ಮದೇ ಕೊಬ್ಬರಿಯಿಂದ ಉತ್ತಮ ಬೆಲೆಗೆ ಎಣ್ಣೆಯನ್ನು ತೆಗೆಯುತ್ತಿದ್ದರು. ಇಲ್ಲಿ ತಯಾರಿಸಲ್ಪಟ್ಟ ತೆಂಗಿನ ಎಣ್ಣೆಯನ್ನು ಕಿರಾಣಿ ಅಂಗಡಿಗಳಲ್ಲಿ ಗ್ರಾಹಕರಿಗೆ ಖರೀದಿಸಲು ನೆರವಾಗಲು ಸಂತೋಷ್ ಬ್ರಾಂಡ್ ನ ಪ್ಯಾಕೆಟ್ ಗಳಲ್ಲಿ ಅದನ್ನು ಮಾರುಕಟ್ಟೆಗೆ ಪರಿಚಯಿಸಿದರು. ಇದರಿಂದಾಗಿ ರಿಟೇಲ್ ಮಾರುಕಟ್ಟೆಯಲ್ಲಿ ಶ್ರೀರಾಮ ಆಯಿಲ್ ಮಿಲ್ ನ ಎಣ್ಣೆ ಹೆಚ್ಚು ಪ್ರಚಲಿತಕ್ಕೆ ಬರಲು ಸಾಧ್ಯವಾಯಿತು. 2006 ರಂದು ಕಿರಿಯ ಮಗ ಸಂತೋಷ ಬೋನಂತಾಯ ರವರು ಈ ವ್ಯವಹಾರದಲ್ಲಿ ಕೈ ಜೋಡಿಸುವ ಮೂಲಕ ಹೊಸ ಪೀಳಿಗೆಯ ಒಳಗೊಳ್ಳುವಿಕೆಯು ಆಯಿತು.

ಕೊಕೊಗುರು – ಸಂಪ್ಯದಲ್ಲಿ ನೂತನ ತೈಲ ಉತ್ಪಾದನಾ ಘಟಕ
2009 ರಿಂದ ಹಿರಿಯ ಮಗ ಕೇಶವ ರಾಮ ಬೋನಂತಾಯ ಅವರು ಈ ವ್ಯವಹಾರ ಕ್ಷೇತ್ರಕ್ಕೆ ಕಾಲಿರಿಸಿದರು. 2011ರಲ್ಲಿ ಕೊಕೊಗುರು ಟ್ರೇಡ್ ಮಾರ್ಕ್ ನೊಂದಿಗೆ ಆಧುನಿಕ ಯಂತ್ರಗಳನ್ನು ಬಳಸಿ ಬೃಹತ್ ಪ್ರಮಾಣದಲ್ಲಿ ರೋಸ್ಟೆಡ್ ತೆಂಗಿನೆಣ್ಣೆಯನ್ನು ತಯಾರಿಸುವ ತೈಲ ಘಟಕವನ್ನು ಸಂಪ್ಯದ ಕಲ್ಲರ್ಪೆಯಲ್ಲಿ ಪ್ರಾರಂಭಿಸಿದರು. 2012ರಿಂದ ಕೊಕೊಗುರು ಉತ್ಪನ್ನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾರಾಟ ಮಾಡಲು ಆರಂಭಿಸಲಾಯಿತು. ಪ್ರಸ್ತುತ ಉಡುಪಿ ಕೊಡಗು ಚಿಕ್ಕಮಗಳೂರು ಮತ್ತು ಬೆಂಗಳೂರಿನವರೆಗೂ ಕೊಕೊಗುರು ಉತ್ಪನ್ನಗಳು ವಿತರಕರು ಹಾಗೂ ಕಿರಾಣಿ ಅಂಗಡಿಗಳ ಮೂಲಕ ಗ್ರಾಹಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈಗ ಆನ್ಲೈನ್ ನಲ್ಲಿ ಕಂಪನಿಯ Website(cocoguru.com), Amazon, Flipkart, Jiomart ನಲ್ಲಿ ಲಭ್ಯವಿದೆ.

ನೂತನ ಕೊಕೊನಟ್ ಡ್ರೈಯರ್:
ಶ್ರೀ ರಾಮ ಎಣ್ಣೆ ಮಿಲ್ ನಲ್ಲಿ ಖರೀದಿಸಿದ ತೆಂಗಿನಕಾಯಿಗಳನ್ನು ಒಣಗಿಸಲು, ಸಂಸ್ಕರಿಸಲು ಹಾಗೂ ಗುಣಮಟ್ಟದ ಅನುಸಾರ ಬೇರ್ಪಡಿಸಿ ಮಾರಾಟ ಮಾಡಲು, ಸಾವಿರಾರು ತೆಂಗಿನಕಾಯಿಗಳನ್ನು ಶೇಖರಿಸಲು ಡ್ರೈಯರ್ ನ ಅನುಕೂಲವಿರುವ ದೊಡ್ಡ ಉಗ್ರಾಣವನ್ನು 2016ರಂದು ಶುರು ಮಾಡಲಾಯಿತು. ಇಲ್ಲಿ 20,000ಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಸಂಸ್ಕರಿಸಬಹುದು.

ಗೃಹ ಉತ್ಪನ್ನಗಳು:
ತೆಂಗಿನ ಎಣ್ಣೆಯ ಉತ್ಪನ್ನಗಳೊಂದಿಗೆ ಶಿವಶಂಕರ ಭಟ್ ಬೋನಂತಾಯ ಅವರ ಮನೆಯ ಪರಿಸರದಲ್ಲಿ ಹಾಗೂ ತೋಟದಲ್ಲಿ ಅವರ ಧರ್ಮಪತ್ನಿಯಾದ ಗಾಯತ್ರಿ ದೇವಿ ಬೋನಂತಾಯ ಅವರು ಸಾವಯವ ತರಕಾರಿಗಳನ್ನು ಬೆಳೆಸಲಾರಂಭಿಸಿದರು. ಇದರೊಂದಿಗೆ ಹೈನುಗಾರಿಕೆಯು ಚಾಲನೆಯಾಯ್ತು. ಮನೆಯಲ್ಲೇ ಬೆಳೆದ ತರಕಾರಿಗಳು, ಮಾವು, ಹಲಸು ಖರೀದಿಗೆ ಲಭ್ಯವಿದೆ. ಜೊತೆಗೆ ಮನೆಯಲ್ಲೇ ತಯಾರಿಸಿದ ಅರಿಶಿಣ ಹುಡಿ, ಕಷಾಯ ಹುಡಿ, ಉಂಡೆ ಹುಳಿ, ಗಿಡಮೂಲಿಕೆಯ ಕೇಶತೈಲ, ಜೇನುತುಪ್ಪ ಹಾಗೂ ಶುದ್ಧ ದೇಶಿಯ ದನದ ತುಪ್ಪ, ಗೋ ಅರ್ಕ ಇನ್ನಿತರ ಗೃಹ ಉತ್ಪನ್ನಗಳನ್ನು ಪರಿಚಯಿಸಿದ್ದಾರೆ.

ಕೊಕೊಗುರು ಅಡಿಗೆಮನೆ:
2023 ರಂದು ಪುತ್ತೂರಿನ ನೆಹರೂ ನಗರದಲ್ಲಿ ಶುದ್ಧ ತೆಂಗಿನ ಎಣ್ಣೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಮಂಗಳೂರು ಶೈಲಿಯ ಸಸ್ಯಾಹಾರ ಖಾದ್ಯಗಳನ್ನು ಜನರಿಗೆ ನೀಡಲು ಕೊಕೊಗುರು ಅಡಿಗೆಮನೆ ಉಪಾಹಾರ ಗೃಹವನ್ನು ಆರಂಭಿಸಿದರು. ಗುಣಮಟ್ಟದ ಪದಾರ್ಥಗಳೊಂದಿಗೆ ಬಳಸಿ ಆರೋಗ್ಯಕರ ಆಹಾರವನ್ನು ಉಣಬಡಿಸುವುದರೊಂದಿಗೆ ಶುಚಿ ಹಾಗೂ ತಾಜಾ ಆಹಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತೆಂಗಿನ ಎಣ್ಣೆಯಲ್ಲಿ ಕರಿದ ತಿನಿಸುಗಳು
2024 ರಿಂದ ನೈಟ್ರೋಜನ್ ಪೌಚ್ ಗಳಲ್ಲಿ ಪ್ಯಾಕ್ ಮಾಡಲಾದ ಬಾಳೆಕಾಯಿ, ಆಲೂ, ಹಲಸು, ಮರಗೆಣಸು, ಗೆಣಸು ಹಾಗೂ ಜೀಗುಜ್ಜೆ ಚಿಪ್ಸ್ ಗಳು, ಮುರುಕು, ಹುರಿದ ಕಡ್ಲೆ , ಖಾರದ ಕಡ್ಡಿ, ನಿಪ್ಪಟ್ಟು, ಸೇವ್, ತೆಂಗೊಳಲು, ಮುರುಕು, ತುಕ್ಕುಡಿ, ಕೋಡುಬಳೆ ಹೀಗೆ ಬಗೆ ಬಗೆಯ ತೆಂಗಿನ ಎಣ್ಣೆಯಲ್ಲಿ ಕರಿದ ತಿನಿಸುಗಳೊಂದಿಗೆ ಸಾವಯವ ಬೆಲ್ಲದಿಂದ ತಯಾರಿಸಿದ ಎಳ್ಳುಂಡೆ, ನೆಲಕಡಲೆ ಉಂಡೆ, ತಂಬಿಟ್ಟು, ಶುದ್ಧ ತುಪ್ಪದಿಂದ ತಯಾರಿಸಿದ ಮೈಸೂರು ಪಾಕ್, ಹಲ್ವಾ ಈ ರೀತಿ ಹೊಸ ಬೇಕರಿ ಉತ್ಪನ್ನಗಳನ್ನು ಪರಿಚಯಿಸಿದ್ದಾರೆ.

ಕೌಟುಂಬಿಕ ವ್ಯವಹಾರವಾದ ಶ್ರೀ ರಾಮ ಎಣ್ಣೆ ಮಿಲ್ ಕೊಕೊಗುರು ಜ. 8, 2025 ರಂದು 37 ಸಂವತ್ಸರಗಳನ್ನು ಪೂರ್ಣಗೊಳಿಸಿ 38ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಶಿವಶಂಕರ್ ಭಟ್ ಬೋನಂತಾಯ ಅವರು ತಮ್ಮ ಮಕ್ಕಳೊಡನೆ ಸೇರಿ ಮುಂಬರುವ ದಿನಗಳಲ್ಲಿ ತೆಂಗಿನ ಎಣ್ಣೆ ಉತ್ಪನ್ನಗಳೊಡನೆ ಇನ್ನಷ್ಟು ಹೊಸ ಸೇವೆಗಳನ್ನು ಗ್ರಾಹಕರಿಗೆ ನೀಡಲು ಉತ್ಸುಕರಾಗಿದ್ದಾರೆ.

Ad Widget
Click to comment

Leave a Reply

ಮಂಗಳೂರು

Mangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!

Published

on

Ad Widget

Ad Widget

Ad Widget

Ad Widget

ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.

Ad Widget

Ad Widget

Ad Widget

Ad Widget

ಮಂಗಳೂರು: ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.

Ad Widget

Ad Widget alt="Ad Widget"/>

Ad Widget

ಏನಿದು ಪ್ರಕರಣ?
ನ.19ರ ಗುರುವಾರ ಸಂಜೆ ಕಾಲೇಜು ಆವರಣದಿಂದ ಕರೆದೊಯ್ಯಲ್ಪಟ್ಟ ಯುವತಿ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಮೂಲದವರಾಗಿದ್ದು, ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ.

Ad Widget

Ad Widget <> Ad Widget

ಯುವತಿ ಮಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವ್ಯಾಸಂಗ ಮಾಡುತ್ತಿರುವ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದ ಯುವತಿಯ ಪೋಷಕರು ಹಾಗೂ ಸಂಬಂಧಿಕರು ಕಾಲೇಜು ಆವರಣಕ್ಕೆ ಆಗಮಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಎಳೆದೊಯ್ದು ಮಹೀಂದ್ರಾ ಥಾರ್ ವಾಹನದಲ್ಲಿ ಕರೆದೊಯ್ದಿದ್ದರು. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಘಟನೆಯ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇರಳಂನ ಸಂಬಂಧಿಕರ ಮನೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮಂಗಳೂರಿಗೆ ಕರೆತಂದಿದ್ದಾರೆ.

Ad Widget

Ad Widget

ಮನೆಯವರ ಜೊತೆ ಹೋಗಲು ನಿರಾಕರಣೆ
ಪೊಲೀಸರು ರಕ್ಷಿಸಿದ ಬಳಿಕ ಯುವತಿಯ ಹೇಳಿಕೆ ದಾಖಲಿಸಿದ್ದು, ತನ್ನ ಪೋಷಕರು ಅಥವಾ ಮನೆಯವರ ಜೊತೆ ಹೋಗಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ ಎನ್ನಲಾಗಿದೆ. ಯುವತಿ ವಯಸ್ಕಳಾಗಿರುವುದರಿಂದ ತಾನು ಎಲ್ಲಿ ವಾಸಿಸಬೇಕು ಎಂಬುದನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕು ಆಕೆಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ವೈದ್ಯಕೀಯ ತಪಾಸಣೆಯ ಬಳಿಕ ಯುವತಿಯ ಇಚ್ಛೆಯ ಸ್ಥಳಕ್ಕೆ ಅಥವಾ ಸಾಂತ್ವನ ಕೇಂದ್ರಕ್ಕೆ ಪೊಲೀಸ್ ರಕ್ಷಣೆಯಲ್ಲಿ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 140(3) ಮತ್ತು 126ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಿಚಾರಣೆಗೆ ಕರೆಸಲಾಗಿದೆ. ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಿರುವ ಅಪರಾಧವಾಗಿರುವ ಹಿನ್ನೆಲೆಯಲ್ಲಿ ಬಿಎನ್‌ಎಸ್‌ಎಸ್ ಅಡಿಯಲ್ಲಿ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ.

Ad Widget
Continue Reading

ಅಂತರ ರಾಜ್ಯ

Former CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್‌ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!

Published

on

Ad Widget

Ad Widget

Ad Widget

Ad Widget

ಉನ್ನತ ಸರ್ಕಾರಿ ಹುದ್ದೆ, ಕೈತುಂಬಾ ಸಂಬಳ, ಕಾರು, ಬಂಗಲೆಯಂತಹ ಐಷಾರಾಮಿ ಸೌಲಭ್ಯಗಳಿದ್ದರೂ ನೆಮ್ಮದಿ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿ ಸನ್ಯಾಸ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅರಣ್ಯದ ಗುಹೆಗಳಲ್ಲಿ ಸರಳ ಜೀವನ ನಡೆಸುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

Ad Widget

Ad Widget

Ad Widget

Ad Widget

ನವದೆಹಲಿ: ಉನ್ನತ ಸರ್ಕಾರಿ ಹುದ್ದೆ, ಕೈತುಂಬಾ ಸಂಬಳ, ಕಾರು, ಬಂಗಲೆಯಂತಹ ಐಷಾರಾಮಿ ಸೌಲಭ್ಯಗಳಿದ್ದರೂ ನೆಮ್ಮದಿ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿ ಸನ್ಯಾಸ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅರಣ್ಯದ ಗುಹೆಗಳಲ್ಲಿ ಸರಳ ಜೀವನ ನಡೆಸುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

Ad Widget

Ad Widget alt="Ad Widget"/>

Ad Widget

ಆಧುನಿಕ ಜಗತ್ತಿನ ಸಕಲ ಸೌಕರ್ಯಗಳಿಂದ ದೂರವಾಗಿ ಗುಹೆಗಳಲ್ಲಿ ವಾಸಿಸುತ್ತಿರುವ ಮಾಜಿ ಅಧಿಕಾರಿಯು, ತಮ್ಮ ಆಧ್ಯಾತ್ಮಿಕ ಪಯಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅರಣ್ಯದ ವಾತಾವರಣದಲ್ಲಿ ಬದುಕಲು ಆರಂಭಿಸಿದ ಬಳಿಕ ಜೀವನದ ನೈಜ ಅರ್ಥ ಹಾಗೂ ನೆಮ್ಮದಿಯ ಮಹತ್ವ ಅರಿವಾಯಿತು ಎಂದು ಅವರು ಹೇಳಿದ್ದಾರೆ.

Ad Widget

Ad Widget <> Ad Widget

ಸಿಬಿಐ ಇನ್ಸ್‌ಪೆಕ್ಟರ್ ಹುದ್ದೆ ದೊರೆತ ಆರಂಭದಲ್ಲಿ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಭಾವಿಸಿದ್ದ ಅವರು, ಕಾಲಕ್ರಮೇಣ ಆ ವ್ಯವಸ್ಥೆಯೊಳಗೆ ಮಾನಸಿಕ ಒತ್ತಡ ಅನುಭವಿಸಲಾರಂಭಿಸಿದರು. ಕಾನೂನು ಪಾಲನೆಯ ಹೆಸರಿನಲ್ಲಿ ಜನರೊಂದಿಗೆ ಕಠಿಣವಾಗಿ ಹಾಗೂ ಒರಟಾಗಿ ವರ್ತಿಸಬೇಕಾದ ಪರಿಸ್ಥಿತಿ ತಮ್ಮ ಸ್ವಭಾವಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಹಣ, ಮನೆ, ಕಾರು ಸೇರಿದಂತೆ ಎಲ್ಲ ಸೌಲಭ್ಯಗಳಿದ್ದರೂ ಮನಸ್ಸಿಗೆ ಬೇಕಾದ ನೆಮ್ಮದಿ ಮತ್ತು ಸ್ವಾತಂತ್ರ್ಯ ಸಿಗುತ್ತಿಲ್ಲ ಎಂಬ ಅರಿವಾದ ಬಳಿಕ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದರು.

ನಂತರ ಹಲವು ರಾಜ್ಯಗಳಲ್ಲಿ ಸಂಚರಿಸಿದ ಅವರು, ಕೊನೆಗೆ ಮಧ್ಯಪ್ರದೇಶದ ಓಂಕಾರೇಶ್ವರದ ಸಮೀಪ ನರ್ಮದಾ ನದಿ ತೀರಕ್ಕೆ ತಲುಪಿದರು. ಅಲ್ಲಿ ಸರಳ ಜೀವನ ಆರಂಭಿಸಿ, ಚಪ್ಪಲಿ ಇಲ್ಲದೆ, ಮಲಗಲು ಚಾಪೆಯನ್ನೂ ಬಳಸದೆ, ದೊರೆಯುವ ಆಹಾರವನ್ನು ಸೇವಿಸುತ್ತಾ ಧ್ಯಾನ ಮತ್ತು ದೇವಿಯ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.

Ad Widget

Ad Widget

ಬಳಿಕ ಬೆಟ್ಟದ ಮೇಲಿರುವ ದೇವಸ್ಥಾನವೊಂದರಲ್ಲಿ ಸಾಧುಗಳೊಂದಿಗೆ ಕೆಲವು ವರ್ಷಗಳನ್ನು ಕಳೆದರು. ಈ ಸಂದರ್ಭದಲ್ಲಿ ಗ್ರಾಮದ ಮಕ್ಕಳಿಗೆ ಪ್ರಕೃತಿಯೊಂದಿಗೆ ಬೆರೆಯುವ ಪಾಠವನ್ನೂ ಕಲಿಸಿದರು. ಸದ್ಯ ದಟ್ಟ ಅರಣ್ಯದ ಗುಹೆಗಳಲ್ಲಿ ವಾಸಿಸುತ್ತಿರುವ ಅವರು, ಒಲೆಯ ಮೇಲೆ ಅಡುಗೆ ಮಾಡಿಕೊಂಡು ಧ್ಯಾನದಲ್ಲಿ ಕಾಲ ಕಳೆಯುತ್ತಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಅವರ ಅಭಿಪ್ರಾಯವೇನು?
ಸಮಾಜದಲ್ಲಿನ ಭ್ರಷ್ಟಾಚಾರದ ಕುರಿತು ಮಾತನಾಡಿರುವ ಮಾಜಿ ಅಧಿಕಾರಿ, ಭ್ರಷ್ಟಾಚಾರದ ಬೀಜ ಮನೆಯಲ್ಲಿಯೇ ಬಿತ್ತನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ನೆರೆಹೊರೆಯವರ ಶ್ರೀಮಂತಿಕೆಯೊಂದಿಗೆ ಹೋಲಿಕೆ ಮಾಡುವುದು ಮಕ್ಕಳಲ್ಲಿ ಹಣ ಮತ್ತು ಐಷಾರಾಮಿ ಜೀವನದ ಮೇಲಿನ ಅತಿಯಾದ ಆಸೆ ಬೆಳೆಸುತ್ತದೆ. ಇಂತಹ ಮನೋಭಾವದಲ್ಲಿ ಬೆಳೆಯುವ ಮಕ್ಕಳು ಮುಂದೆ ಜಿಲ್ಲಾಧಿಕಾರಿ, ವೈದ್ಯ ಅಥವಾ ಎಂಜಿನಿಯರ್‌ನಂತಹ ಉನ್ನತ ಸ್ಥಾನಕ್ಕೇರಿದರೂ ಸಮಾಜವನ್ನು ಶೋಷಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಆದ್ದರಿಂದ ಮಕ್ಕಳನ್ನು ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿ ಅಥವಾ ಸನ್ಯಾಸಿಗಳನ್ನಾಗಿ ರೂಪಿಸುವುದಕ್ಕಿಂತ ಮೊದಲು ಅವರನ್ನು ಉತ್ತಮ ಮನುಷ್ಯರನ್ನಾಗಿ ಬೆಳೆಸುವುದು ಪೋಷಕರ ಆದ್ಯತೆಯಾಗಬೇಕು ಎಂದು ಸಲಹೆ ನೀಡಿದ್ದಾರೆ.

ಕೇವಲ ಬಟ್ಟೆ ಅಥವಾ ವೇಷ ಬದಲಾಯಿಸಿಕೊಳ್ಳುವುದರಿಂದ ಸನ್ಯಾಸಿಯಾಗಲು ಸಾಧ್ಯವಿಲ್ಲ. ತಾನು ಮಾಡುವ ಕೆಲಸದಲ್ಲಿ ಸಂಪೂರ್ಣ ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವ ಹೊಂದಿರುವುದೇ ನಿಜವಾದ ಪವಿತ್ರತೆ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.

Ad Widget
Continue Reading

ಬಿಗ್ ನ್ಯೂಸ್

Bail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ

Published

on

Ad Widget

Ad Widget

Ad Widget

Ad Widget

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.

Ad Widget

Ad Widget alt="Ad Widget"/>

Ad Widget

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ನಡೆಸಲಾಗಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವಿಡಿಯೋ ಕುರಿತು ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ತನಿಖೆ ಕೈಗೊಂಡಿದ್ದರು.

Ad Widget

Ad Widget <> Ad Widget

ಪ್ರಕರಣದ ತನಿಖೆಯ ಭಾಗವಾಗಿ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ, ಕಾಂಗ್ರೆಸ್‌ನಿಂದ ಉಚ್ಚಾಟಿತರಾಗಿರುವ ಕೃಪಾ ಆಳ್ವಾ, ಪ್ರಜ್ವಲ್ ಪ್ರಸಾದ್, ಚಂದನ್ ಎಚ್.ಎಸ್., ಕೆ.ವಿ. ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಆರು ಮಂದಿ ಆರೋಪಿಗಳು ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಗಳ ವಿಚಾರಣೆ ನಡೆಯುವವರೆಗೆ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

Ad Widget

Ad Widget

ಆದರೆ, ನವೆಂಬರ್ 20ರಂದು ವಿಚಾರಣೆ ಪೂರ್ಣಗೊಳಿಸಿದ 66ನೇ ಸಿಸಿಎಚ್ ನ್ಯಾಯಾಲಯ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ. ಈ ಹಿಂದೆ ಮಧ್ಯಂತರ ರಕ್ಷಣೆ ನೀಡುವಾಗ, ಅಂತಿಮವಾಗಿ ನಿರೀಕ್ಷಣಾ ಜಾಮೀನು ದೊರೆಯದಿದ್ದಲ್ಲಿ ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು ಎನ್ನಲಾಗಿದೆ.

ಇದೀಗ ಜಾಮೀನು ಅರ್ಜಿಗಳು ವಜಾಗೊಂಡಿರುವುದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಿದ್ದು, ಇಲ್ಲವಾದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಎದುರಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!