ಆರೋಗ್ಯ
Guava Leaves-ಪೇರಲ ಹಣ್ಣುಗಳಷ್ಟೇ ಅಲ್ಲ…ಎಲೆಗಳಿಂದಲೂ ಹಲವಾರು ಆರೋಗ್ಯ ಪ್ರಯೋಜನ!
ಪೇರಲ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಕ್ಕೇ ವೈದ್ಯರು ಕೂಡ ಇವುಗಳನ್ನು ಆಗಾಗ ತೆಗೆದುಕೊಳ್ಳುವಂತೆ ಹೇಳುತ್ತಾರೆ. ಸೀಸನಲ್ ಹಣ್ಣುಗಳಲ್ಲಿ ಪೇರಲ ಕೂಡ ಒಂದು. ಆದರೆ ಪೇರಲ ಮಾತ್ರವಲ್ಲ ಪೇರಲ ಎಲೆಯಿಂದಲೂ ಹಲವಾರು ಪ್ರಯೋಜನಗಳಿವೆ ಎನ್ನುತ್ತಾರೆ ವೈದ್ಯರು.
ಪೇರಲ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಕ್ಕೇ ವೈದ್ಯರು ಕೂಡ ಇವುಗಳನ್ನು ಆಗಾಗ ತೆಗೆದುಕೊಳ್ಳುವಂತೆ ಹೇಳುತ್ತಾರೆ. ಸೀಸನಲ್ ಹಣ್ಣುಗಳಲ್ಲಿ ಪೇರಲ ಕೂಡ ಒಂದು. ಆದರೆ ಪೇರಲ ಮಾತ್ರವಲ್ಲ ಪೇರಲ ಎಲೆಯಿಂದಲೂ ಹಲವಾರು ಪ್ರಯೋಜನಗಳಿವೆ ಎನ್ನುತ್ತಾರೆ ವೈದ್ಯರು. ಪೇರಲ ಎಲೆಗಳ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ
ಪೇರಲ ಎಲೆಗಳಲ್ಲಿ ಹಲವು ಔಷಧೀಯ ಗುಣಗಳು ಅಡಗಿವೆ. ಪೇರಲ ಎಲೆಗಳನ್ನು ಜಗಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಪೇರಲ ಎಲೆಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಿಂದ ಹೊಟ್ಟೆಯ ಸಮಸ್ಯೆಗಳಾದ ಮಲಬದ್ಧತೆ, ಅಜೀರ್ಣ, ಅಸಿಡಿಟಿ ಮತ್ತು ಗ್ಯಾಸ್ ಬರುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ.
ಬೆಳಿಗ್ಗೆ ಬೇಗ ಪೇರಲ ಎಲೆಗಳನ್ನು ಜಗಿಯುವುದರಿಂದ ತೂಕ ಕಡಿಮೆಯಾಗುತ್ತದೆ.ಇದು ನಿಮ್ಮ ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಪೇರಲ ಎಲೆಗಳಲ್ಲಿರುವ ಅನೇಕ ಸಂಯುಕ್ತಗಳು ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ. ಇವುಗಳು ನಿಮ್ಮ ದೇಹದಲ್ಲಿ ಕಾರ್ಬೋಹೈಡ್ರೆಟ್‌ಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ ಮತ್ತು ಇದರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ.
ವಿಟಮಿನ್ ಸಿ ಪೇರಲ ಎಲೆಗಳಲ್ಲಿ ಸಮೃದ್ಧವಾಗಿದೆ. ಇವುಗಳನ್ನು ಬೆಳಗ್ಗೆ ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಪೇರಲ ಎಲೆಗಳ ನಿಯಮಿತ ಸೇವನೆಯಿಂದ ಈ ಎಲೆಗಳಲ್ಲಿರುವ ಫೀನಾಲಿಕ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ ಎಂದೂ ಹೇಳಲಾಗುತ್ತದೆ. ಪೇರಲ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದಲೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಎಲೆಗಳು ಪೊಟ್ಯಾಸಿಯಮ್ ಮತ್ತು ಫೈಬರ್ನಲ್ಲಿ ಸಮೃದ್ಧವಾಗಿವೆ ಎಂದು ಹೇಳಲಾಗುತ್ತದೆ. ಈ ಪೊಟ್ಯಾಸಿಯಮ್ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಆರೋಗ್ಯ
Puttur-ಸೆ.29: ವಿಶ್ವ ಹೃದಯ ದಿನ: ಪುತ್ತೂರಿನ ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಹೃದಯ ತಪಾಸಣಾ ಶಿಬಿರ
ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಪುತ್ತೂರು: ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಇ.ಸಿ.ಜಿ., ಇಕೋ (ECHO), ಟಿ.ಎಂ.ಟಿ. (TMT) ಸೇರಿದಂತೆ ಅಗತ್ಯ ತಪಾಸಣೆಗಳನ್ನು ನಡೆಸಲಾಗುವುದು. ತಪಾಸಣೆಯ ಬಳಿಕ ಹೃದ್ರೋಗ ತಜ್ಞ ವೈದ್ಯರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವೂ ದೊರೆಯಲಿದೆ.
ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲು ಶಿಬಿರವು ಸಾರ್ವಜನಿಕರಿಗೆ ಉಪಯುಕ್ತ ಅವಕಾಶವಾಗಲಿದೆ. ವಿಶೇಷವಾಗಿ ಎದೆನೋವು, ಉಸಿರಾಟದ ತೊಂದರೆ, ಹೃದಯ ಬಡಿತದಲ್ಲಿ ವ್ಯತ್ಯಾಸ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕುಟುಂಬದಲ್ಲಿ ಹೃದಯ ಕಾಯಿಲೆಯ ಹಿನ್ನೆಲೆ ಹೊಂದಿರುವವರು ಶಿಬಿರದ ಪ್ರಯೋಜನ ಪಡೆಯುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.
ಹೃದಯದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಆಸ್ಪತ್ರೆ ತಿಳಿಸಿದೆ.
ಆರೋಗ್ಯ
HIV test-ಯುವಜನರಲ್ಲಿ ಹೆಚ್ಚುತ್ತಿದೆ HIV ಸೋಂಕು; ರಾಜ್ಯದ ಪದವಿ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ
ರಾಜ್ಯದ ಯುವ ಸಮೂಹದಲ್ಲಿ ಎಚ್‌ಐವಿ (HIV) ಸೋಂಕು ಆತಂಕಕಾರಿ ರೀತಿಯಲ್ಲಿ ಹರಡುತ್ತಿರುವುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಎಲ್ಲ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ ನಡೆಸಲು ನಿರ್ಧರಿಸಿದೆ.
ಬೆಂಗಳೂರು: ರಾಜ್ಯದ ಯುವ ಸಮೂಹದಲ್ಲಿ ಎಚ್‌ಐವಿ (HIV) ಸೋಂಕು ಆತಂಕಕಾರಿ ರೀತಿಯಲ್ಲಿ ಹರಡುತ್ತಿರುವುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಎಲ್ಲ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ ನಡೆಸಲು ನಿರ್ಧರಿಸಿದೆ.
ದೇಶದಲ್ಲೇ ಮೂರನೇ ಸ್ಥಾನ:
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ವರದಿ ಪ್ರಕಾರ, ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 2.60 ಲಕ್ಷ ಸೋಂಕಿತರಿದ್ದು, ಈ ಪೈಕಿ ಸುಮಾರು 54 ಸಾವಿರ ಮಂದಿಗೆ ತಮಗೆ ಸೋಂಕು ತಗುಲಿರುವ ಅರಿವೇ ಇಲ್ಲದಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ 18 ರಿಂದ 35 ವರ್ಷದೊಳಗಿನವರಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ತಡೆ ಸೊಸೈಟಿ (KSAPS) ಕಳವಳ ವ್ಯಕ್ತಪಡಿಸಿದೆ.
ಕಾಲೇಜುಗಳಲ್ಲಿ ಆರೋಗ್ಯ ಶಿಬಿರ ಮತ್ತು ಜಾಗೃತಿ:
ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಆರೋಗ್ಯ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯು ಜಂಟಿಯಾಗಿ ‘ಸಂಯೋಜಿತ ಆರೋಗ್ಯ ಶಿಬಿರ’ಗಳನ್ನು (IHC) ಆಯೋಜಿಸುತ್ತಿವೆ.
ವಿಟಿಯು (VTU) ವ್ಯಾಪ್ತಿಯಲ್ಲೂ ತಪಾಸಣೆ: ರಾಜ್ಯದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ನಡೆಸುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೂಚನೆ ನೀಡಿದೆ.
ವಿವಿಧ ಸ್ಪರ್ಧೆಗಳು: 2026ರ ಜುಲೈನಿಂದ 2027ರ ಫೆಬ್ರವರಿವರೆಗೆ ಕಾಲೇಜುಗಳಲ್ಲಿ ಬೀದಿ ನಾಟಕ, ರಸಪ್ರಶ್ನೆ ಮತ್ತು ತಜ್ಞರ ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಅಂಕಗಳ ಆಧಾರದ ಮೇಲೆ ಮಾರ್ಗಸೂಚಿಯನ್ನೂ ನೀಡಲಾಗಿದೆ.
ಮಾಹಿತಿಯ ಗೌಪ್ಯತೆಗೆ ಆದ್ಯತೆ (QR Code ಸೌಲಭ್ಯ):
ವಿದ್ಯಾರ್ಥಿಗಳು ತಮ್ಮ ಎಚ್‌ಐವಿ ಸ್ಥಿತಿಯನ್ನು ಅತ್ಯಂತ ಗೌಪ್ಯವಾಗಿ ತಿಳಿದುಕೊಳ್ಳಲು ಸರ್ಕಾರವು ವಿಶೇಷ ತಂತ್ರಜ್ಞಾನದ ಮೊರೆ ಹೋಗಿದೆ.
ಕ್ಯೂಆರ್ ಕೋಡ್ (QR Code): ಕಾಲೇಜುಗಳಲ್ಲಿ ಕಡ್ಡಾಯವಾಗಿ ಕ್ಯೂಆರ್ ಕೋಡ್ ಪ್ರದರ್ಶಿಸಲಾಗುತ್ತದೆ. ಇದನ್ನು ಸ್ಕ್ಯಾನ್ ಮಾಡುವ ಮೂಲಕ ವಿದ್ಯಾರ್ಥಿಗಳು ಸ್ವಯಂ-ಅಪಾಯ ಮೌಲ್ಯಮಾಪನ ಮಾಡಿಕೊಳ್ಳಬಹುದು.
ವೆಬ್‌ಸೈಟ್: ಗೌಪ್ಯ ಮಾರ್ಗದರ್ಶನಕ್ಕಾಗಿ www.breakfreeindia.org ಜಾಲತಾಣವನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.
ಸರ್ಕಾರದ ಮುಂದಿರುವ ಸವಾಲು:
ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ಸಮರ ಸಾರಿರುವ ಸರ್ಕಾರಕ್ಕೆ, ಈಗ ಎಚ್‌ಐವಿ ಹರಡದಂತೆ ತಡೆಯುವುದು ದೊಡ್ಡ ಸವಾಲಾಗಿದೆ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಕೆಎಸ್‌ಎಪಿಎಸ್ ತಿಳಿಸಿದೆ. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಈ ತಪಾಸಣಾ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದ್ದಾರೆ.
ಆರೋಗ್ಯ
Puttur-ಪುತ್ತೂರು: ಜು.9ರಂದು ಡಾ. ನಝೀರ್ ಅಹಮ್ಮದ್ ರವರ ಕ್ಲಿನಿಕ್ ನಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಾರ್ವಜನಿಕರ ಆರೋಗ್ಯದ ಕಾಳಜಿಯೊಂದಿಗೆ, ಪುತ್ತೂರಿನ ಖ್ಯಾತ ವೈದ್ಯಕೀಯ ತಜ್ಞ ಡಾ. ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಪುತ್ತೂರು: ಸಾರ್ವಜನಿಕರ ಆರೋಗ್ಯದ ಕಾಳಜಿಯೊಂದಿಗೆ, ಪುತ್ತೂರಿನ ಖ್ಯಾತ ವೈದ್ಯಕೀಯ ತಜ್ಞ ಡಾ. ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರವು ಜು.9, ಗುರುವಾರದಂದು ಬೆಳಗ್ಗೆ 9-30ರಿಂದ ಮಧ್ಯಾಹ್ನ 12-30ರವರೆಗೆ ಪುತ್ತೂರಿನ ಕಲ್ಲಾರೆಯಲ್ಲಿರುವ ಡಾ. ನಝೀರ್ ಅಹಮದ್ ರವರ ಕ್ಲಿನಿಕ್ ನಲ್ಲಿ ನಡೆಯಲಿರುವುದು.
ಶಿಬಿರದಲ್ಲಿ ಸಿಗುವ ಸೌಲಭ್ಯಗಳು:
ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಈ ಕೆಳಗಿನ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡಲಾಗುವುದು.
ಉಚಿತ ಪರೀಕ್ಷೆಗಳು: ಥೈರಾಯಿಡ್ (TSH), ರಕ್ತದ ಸಕ್ಕರೆ ಅಂಶ (Sugar), HBA1C ಮತ್ತು ಮೂಳೆ ಸಾಂದ್ರತೆ ಪರೀಕ್ಷೆ (BMD Test).
-
ಬಿಗ್ ನ್ಯೂಸ್19 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
ನಿಧನ ವಾರ್ತೆ24 hours agoPuttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು
-
ಶಿಕ್ಷಣ23 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ23 hours agoKerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು
-
Uncategorized20 hours ago
ಶಿಕ್ಷೆಯ ವಿರುದ್ಧ ಹೈಕೋರ್ಟಿಗೆ ಅಪೀಲು; ನ್ಯಾಯಾಲಯಕ್ಕೆ ಗೈರು: ನೆಕ್ಕಿಲಾಡಿಯಲ್ಲಿ ಆರೋಪಿಯ ಬಂಧನ
-
ರಾಜಕೀಯ19 hours ago2027ರ ಜನವರಿ ಮೊದಲ ವಾರದಲ್ಲೇ ಜಿ.ಪಂ ಮತ್ತು ತಾ.ಪಂ ಚುನಾವಣೆ : ಸಚಿವ ಸಂಪುಟದಲ್ಲಿ ಚರ್ಚೆ..!
-
ಅಂತರ ರಾಜ್ಯ23 hours agoYouTuber-89 ವರ್ಷದ ವೃದ್ಧನ 5 ಸವರನ್ ಚಿನ್ನದ ಸರ ಕಳವು ಆರೋಪ; 118 ಸವರನ್ ಚಿನ್ನ ಕಳವು ಪ್ರಕರಣದ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲು
-
Uncategorized20 hours ago
Rahul Gandhi ;8 ಗಂಟೆಗಳ ಧರಣಿ ಬಳಿಕ ಪೊಲೀಸ್ ಆ್ಯಕ್ಷನ್: ರಾಹುಲ್–ಪ್ರಿಯಾಂಕಾ ಸೇರಿ 50 ಸಂಸದರು ವಶ


















