ಆರೋಗ್ಯ
Health Tips : Cumin: ಜೀರಿಗೆಯ ಈ 12 ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತೆ?
ಅಬಾಲ ವೃದ್ದರಾದಿಯಾಗಿ ಎಲ್ಲರಿಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮೊದಲು ಅಡುಗೆಮನೆಯಲ್ಲಿ ಔಷಧವಾಗಿ ಸಿಗುವ ಸಾಂಬಾರ ಪದಾರ್ಥವೆಂದರೆ ಅದು ಜೀರಿಗೆ( Cumin) . ವಿಶೇಷವಾಗಿ ಹಳ್ಳಿಗಳಲ್ಲಿ ಹಾಗೂ ಮನೆಮದ್ದುಗಳನ್ನು ಇಷ್ಟಪಡುವವರಲ್ಲಿ ವಿಚಾರಿಸಿದರೆ ಇದು ನಿಮ್ಮ ಅನುಭವಕ್ಕೂ ಬರಬಹುದು.
ಅವರು ಅತಿಹೆಚ್ಚು ಪ್ರಮಾಣದಲ್ಲಿ ಔಷಧವಾಗಿ ಬಳಕೆ ಮಾಡುವುದು ಜೀರಿಗೆ. ಇದಕ್ಕೆ ಕಾರಣ ಅದಕ್ಕಿರುವ ಅದ್ಭುತ ಔಷಧೀಯ ಗುಣಗಳು. ಈ ಅಂಕಣದಲ್ಲಿ ಜೀರಿಗೆಯ ವಿವಿಧ ಆರೋಗ್ಯ ಲಾಭಗಳ (Health Benefits) ಬಗ್ಗೆ ತಿಳಿಯೋಣ
ಉಪಯುಕ್ತತೆಗಳು
1 ಜೀರಿಗೆಯನ್ನು ಜಗಿದರೆ ಹೊಟ್ಟೆಯಲ್ಲಿ ತುಂಬಿದ ಗ್ಯಾಸ್ ನಿಂದ ಬಿಡುಗಡೆ ಹೊಂದಬಹುದು
2 ಜೀರ್ಣಕಾರಿಯಾದ ಈ ಜೀರಿಗೆ ಜಠರಾಗ್ನಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸುವ ಗುಣವನ್ನು ಹೊಂದಿದೆ. ವಿಶೇಷವಾಗಿ ಆಮಶಂಕೆ ಅಥವಾ ಭೇದಿ ಪ್ರಧಾನವಾದ ಐಬಿಎಸ್ ಸಮಸ್ಯೆ ಅನುಭವಿಸುತ್ತಿರುವವರಿಗೆ ಜೀರಿಗೆ ಅತ್ಯಂತ ಸಹಾಯಕ. ಏಕೆಂದರೆ ಇದು ಮಲದಲ್ಲಿರುವ ನೀರಿನ ಅಂಶವನ್ನು ದೇಹ ಹೀರಿಕೊಂಡು ಸರಿಯಾದ ರೀತಿಯಲ್ಲಿ ಮಲ ರೂಪುಗೊಳ್ಳುವಂತೆ ಮಾಡುತ್ತದೆ.
3 ಆಯುರ್ವೆದದ ಭಾವ ಪ್ರಕಾಶ ನಿಘಂಟುವಿನಲ್ಲಿ ಇದನ್ನು ಮೇಧ್ಯ ಎಂದು ಕರೆದಿದ್ದಾರೆ. ಅಂದರೆ ಇದು ಬುದ್ಧಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವಂಥದ್ದು ಎಂದರ್ಥ.

4. ಗರ್ಭಿಣಿಯರಿಗೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡು ಸಮಸ್ಯೆಯಾಗುವುದು ಅತ್ಯಂತ ಸಹಜ. ಆ ಸಂದರ್ಭದಲ್ಲಿ ಸ್ವಲ್ಪ ಜೀರಿಗೆ ಮತ್ತು ಶುಂಠಿಯನ್ನು ಸೇವಿಸಿದರೆ ಗ್ಯಾಸ್ನ ತೊಂದರೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣವಾಗುತ್ತದೆ. ಆದರೆ ಇದರ ಅತಿಯಾದ ಬಳಕೆ ಗರ್ಭಿಣಿಯರಿಗೆ ಸರಿಯಲ್ಲ. ಏಕೆಂದರೆ ಇದಕ್ಕೆ ಗರ್ಭಾಶಯವನ್ನು ಶುದ್ಧ ಮಾಡುವ ಗುಣವಿದೆ. ಹಾಗಾಗಿಯೇ ಬಾಣಂತಿಯರಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವ ಪದ್ಧತಿ ಭಾರತೀಯರಲ್ಲಿದೆ.
5. ಪಿಸಿಓಡಿ ಅಥವಾ ಇನ್ನಿತರ ಸಮಸ್ಯೆಗಳ ಕಾರಣದಿಂದ ಕಾಲಕಾಲಕ್ಕೆ ಋತುಸ್ರಾವ ಆಗದ ಮಹಿಳೆಯರಿಗೆ ಜೀರಿಗೆಯ ಸೇವನೆ ಅನುಕೂಲಕರ.

6 ಜೀರಿಗೆಗೆ ಸ್ವಲ್ಪ ಪ್ರಮಾಣದಲ್ಲಿ ಜ್ವರವನ್ನು ನಿವಾರಿಸುವ ಗುಣವೂ ಇದೆ. ಹಾಗಾಗಿ ಜ್ವರವಿದ್ದಾಗ ಜೀರಿಗೆಯ ಕಷಾಯವನ್ನು ಸೇವಿಸುತ್ತಿದ್ದರೆ ಜ್ವರ ಬೇಗ ಗುಣವಾಗುವುದರ ಜೊತೆಗೆ ಆಹಾರ ಸುಲಭವಾಗಿ ಪಚನವಾಗಿ ಬಾಯಿಯ ರುಚಿಯೂ ಹೆಚ್ಚುತ್ತದೆ.
6 ಜೀರಿಗೆ ವೃಷ್ಯವೂ, ಬಲ್ಯವೂ ಆಗಿದೆ ಎಂದು ಆಯುರ್ವೆದ ಹೇಳುತ್ತದೆ. ಅಂದರೆ ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುವ ಮತ್ತು ದೇಹದ ಬಲವನ್ನು ಹೆಚ್ಚಿಸುವ ಶಕ್ತಿ ಜೀರಿಗೆಗೆ ಇದೆ ಎಂದರ್ಥ.
7 ಜೀರಿಗೆಗೆ ವಾತದ ಜೊತೆ ಕಫವನ್ನು ನಿಯಂತ್ರಿಸುವ ಗುಣ ಇದೆ. ಹಾಗಾಗಿ ದೇಹದ ಯಾವುದೇ ಭಾಗದಲ್ಲಿ ನೋವು, ಬಿಗಿತ, ನರಸಂಬಂಧಿ ಸಮಸ್ಯೆಗಳು, ಕಫದ ತೊಂದರೆಗಳು ಇರುವಾಗ ಜೀರಿಗೆಯ ಸೇವನೆ ತುಂಬಾ ಸಹಕಾರಿ.
9 . ಜೀರಿಗೆ ಜೀರ್ಣಕಾರಿಯಾದ ಕಾರಣದಿಂದ ಪದೇಪದೇ ವಾಂತಿ ಅಥವಾ ಭೇದಿ ಆಗುವವರು ಇದನ್ನು ನಿತ್ಯವೂ ಸೇವಿಸಬೇಕು.
10 : ಜೀರಿಗೆಯ ಜತೆಗೆ ಸ್ವಲ್ಪ ಶುಂಠಿ ಮತ್ತು ಕೊತ್ತಂಬರಿ ಕಾಳನ್ನು ಸೇರಿಸಿ ಕಷಾಯಮಾಡಿ ನಿತ್ಯವೂ ಸೇವಿಸಿದರೆ ಹೆಚ್ಚು ಅನುಕೂಲಕರ. ಇದು ಮೂತ್ರಾಂಗ ವ್ಯೂಹದ ಮೇಲೆ ಕೂಡ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಮೂತ್ರದ ಕಲ್ಲು, ಮೂತ್ರ ತಡೆ, ಮೂತ್ರಕೋಶದ ಉರಿಯೂತ ಇರುವಾಗ ಔಷಧಗಳ ಜೊತೆಗೆ ಜೀರಿಗೆ ಕಷಾಯವನ್ನು ಕುಡಿಯುತ್ತಿದ್ದರೆ ಸಮಸ್ಯೆ ಬೇಗ ವಾಸಿಯಾಗುತ್ತದೆ.
11 .ಚಿಕ್ಕ ಮಕ್ಕಳು ಸರಿಯಾಗಿ ಊಟ ಮಾಡದೆ ಇದ್ದಾಗ ಜೀರಿಗೆ ಕಷಾಯವನ್ನು ಕೊಡುವುದರಿಂದ ಬಾಯಿರುಚಿ ಹೆಚ್ಚಾಗಿ ಚೆನ್ನಾಗಿ ಊಟ ಮಾಡುತ್ತಾರೆ. ಬಾಣಂತಿಯರಿಗೆ ಜೀರಿಗೆ ಕಷಾಯವನ್ನು ಕುಡಿಸುವುದರಿಂದ ಎದೆಹಾಲು ಹೆಚ್ಚುತ್ತದೆ.
12 ಬಿಕ್ಕಳಿಕೆ ನಿಲ್ಲದಿದ್ದರೆ ಜೀರಿಗೆಯನ್ನು ತುಪ್ಪದಲ್ಲಿ ಕಲಸಿ ಅದನ್ನು ಬೆಂಕಿಗೆ ಹಿಡಿದು ಅಥವಾ ಕೆಂಡದ ಮೇಲೆ ಹಾಕಿ ಬರುವ ಉಗಿಯನ್ನು ಮೂಗಿನ ಮೂಲಕ ಸೇವಿಸುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.
ತುಂಬಾ ಮಾತನಾಡುವ ವೃತ್ತಿಯಲ್ಲಿರುವವರು ಅಥವಾ ಹಾಡುಗಾರರಿಗೆ ಧ್ವನಿಯ ಸಮಸ್ಯೆಯಾಗುವುದು ಸಹಜ. ಅಂಥವರು ಸ್ವಲ್ಪ ಜೀರಿಗೆ ಮತ್ತು ಜೇಷ್ಠಮಧುವಿನ ಮಿಶ್ರಣವನ್ನು ಬಾಯಲ್ಲಿಟ್ಟು ಜಗಿಯುತ್ತಿದ್ದರೆ ಧ್ವನಿ ಸುಧಾರಿಸುತ್ತದೆ ಮತ್ತು ಧ್ವನಿಗೆ ಸಂಬಂಧಿಸಿದ ಸಮಸ್ಯೆ ಬರದಂತೆ ಇದು ತಡೆಯುತ್ತದೆ.
ಒಟ್ಟಿನಲ್ಲಿ ನಿತ್ಯವೂ ಜೀರಿಗೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆರೋಗ್ಯ
Puttur-ಸೆ.29: ವಿಶ್ವ ಹೃದಯ ದಿನ: ಪುತ್ತೂರಿನ ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಹೃದಯ ತಪಾಸಣಾ ಶಿಬಿರ
ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಪುತ್ತೂರು: ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಇ.ಸಿ.ಜಿ., ಇಕೋ (ECHO), ಟಿ.ಎಂ.ಟಿ. (TMT) ಸೇರಿದಂತೆ ಅಗತ್ಯ ತಪಾಸಣೆಗಳನ್ನು ನಡೆಸಲಾಗುವುದು. ತಪಾಸಣೆಯ ಬಳಿಕ ಹೃದ್ರೋಗ ತಜ್ಞ ವೈದ್ಯರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವೂ ದೊರೆಯಲಿದೆ.
ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲು ಶಿಬಿರವು ಸಾರ್ವಜನಿಕರಿಗೆ ಉಪಯುಕ್ತ ಅವಕಾಶವಾಗಲಿದೆ. ವಿಶೇಷವಾಗಿ ಎದೆನೋವು, ಉಸಿರಾಟದ ತೊಂದರೆ, ಹೃದಯ ಬಡಿತದಲ್ಲಿ ವ್ಯತ್ಯಾಸ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕುಟುಂಬದಲ್ಲಿ ಹೃದಯ ಕಾಯಿಲೆಯ ಹಿನ್ನೆಲೆ ಹೊಂದಿರುವವರು ಶಿಬಿರದ ಪ್ರಯೋಜನ ಪಡೆಯುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.
ಹೃದಯದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಆಸ್ಪತ್ರೆ ತಿಳಿಸಿದೆ.
ಆರೋಗ್ಯ
HIV test-ಯುವಜನರಲ್ಲಿ ಹೆಚ್ಚುತ್ತಿದೆ HIV ಸೋಂಕು; ರಾಜ್ಯದ ಪದವಿ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ
ರಾಜ್ಯದ ಯುವ ಸಮೂಹದಲ್ಲಿ ಎಚ್‌ಐವಿ (HIV) ಸೋಂಕು ಆತಂಕಕಾರಿ ರೀತಿಯಲ್ಲಿ ಹರಡುತ್ತಿರುವುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಎಲ್ಲ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ ನಡೆಸಲು ನಿರ್ಧರಿಸಿದೆ.
ಬೆಂಗಳೂರು: ರಾಜ್ಯದ ಯುವ ಸಮೂಹದಲ್ಲಿ ಎಚ್‌ಐವಿ (HIV) ಸೋಂಕು ಆತಂಕಕಾರಿ ರೀತಿಯಲ್ಲಿ ಹರಡುತ್ತಿರುವುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಎಲ್ಲ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ ನಡೆಸಲು ನಿರ್ಧರಿಸಿದೆ.
ದೇಶದಲ್ಲೇ ಮೂರನೇ ಸ್ಥಾನ:
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ವರದಿ ಪ್ರಕಾರ, ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 2.60 ಲಕ್ಷ ಸೋಂಕಿತರಿದ್ದು, ಈ ಪೈಕಿ ಸುಮಾರು 54 ಸಾವಿರ ಮಂದಿಗೆ ತಮಗೆ ಸೋಂಕು ತಗುಲಿರುವ ಅರಿವೇ ಇಲ್ಲದಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ 18 ರಿಂದ 35 ವರ್ಷದೊಳಗಿನವರಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ತಡೆ ಸೊಸೈಟಿ (KSAPS) ಕಳವಳ ವ್ಯಕ್ತಪಡಿಸಿದೆ.
ಕಾಲೇಜುಗಳಲ್ಲಿ ಆರೋಗ್ಯ ಶಿಬಿರ ಮತ್ತು ಜಾಗೃತಿ:
ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಆರೋಗ್ಯ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯು ಜಂಟಿಯಾಗಿ ‘ಸಂಯೋಜಿತ ಆರೋಗ್ಯ ಶಿಬಿರ’ಗಳನ್ನು (IHC) ಆಯೋಜಿಸುತ್ತಿವೆ.
ವಿಟಿಯು (VTU) ವ್ಯಾಪ್ತಿಯಲ್ಲೂ ತಪಾಸಣೆ: ರಾಜ್ಯದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ನಡೆಸುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೂಚನೆ ನೀಡಿದೆ.
ವಿವಿಧ ಸ್ಪರ್ಧೆಗಳು: 2026ರ ಜುಲೈನಿಂದ 2027ರ ಫೆಬ್ರವರಿವರೆಗೆ ಕಾಲೇಜುಗಳಲ್ಲಿ ಬೀದಿ ನಾಟಕ, ರಸಪ್ರಶ್ನೆ ಮತ್ತು ತಜ್ಞರ ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಅಂಕಗಳ ಆಧಾರದ ಮೇಲೆ ಮಾರ್ಗಸೂಚಿಯನ್ನೂ ನೀಡಲಾಗಿದೆ.
ಮಾಹಿತಿಯ ಗೌಪ್ಯತೆಗೆ ಆದ್ಯತೆ (QR Code ಸೌಲಭ್ಯ):
ವಿದ್ಯಾರ್ಥಿಗಳು ತಮ್ಮ ಎಚ್‌ಐವಿ ಸ್ಥಿತಿಯನ್ನು ಅತ್ಯಂತ ಗೌಪ್ಯವಾಗಿ ತಿಳಿದುಕೊಳ್ಳಲು ಸರ್ಕಾರವು ವಿಶೇಷ ತಂತ್ರಜ್ಞಾನದ ಮೊರೆ ಹೋಗಿದೆ.
ಕ್ಯೂಆರ್ ಕೋಡ್ (QR Code): ಕಾಲೇಜುಗಳಲ್ಲಿ ಕಡ್ಡಾಯವಾಗಿ ಕ್ಯೂಆರ್ ಕೋಡ್ ಪ್ರದರ್ಶಿಸಲಾಗುತ್ತದೆ. ಇದನ್ನು ಸ್ಕ್ಯಾನ್ ಮಾಡುವ ಮೂಲಕ ವಿದ್ಯಾರ್ಥಿಗಳು ಸ್ವಯಂ-ಅಪಾಯ ಮೌಲ್ಯಮಾಪನ ಮಾಡಿಕೊಳ್ಳಬಹುದು.
ವೆಬ್‌ಸೈಟ್: ಗೌಪ್ಯ ಮಾರ್ಗದರ್ಶನಕ್ಕಾಗಿ www.breakfreeindia.org ಜಾಲತಾಣವನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.
ಸರ್ಕಾರದ ಮುಂದಿರುವ ಸವಾಲು:
ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ಸಮರ ಸಾರಿರುವ ಸರ್ಕಾರಕ್ಕೆ, ಈಗ ಎಚ್‌ಐವಿ ಹರಡದಂತೆ ತಡೆಯುವುದು ದೊಡ್ಡ ಸವಾಲಾಗಿದೆ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಕೆಎಸ್‌ಎಪಿಎಸ್ ತಿಳಿಸಿದೆ. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಈ ತಪಾಸಣಾ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದ್ದಾರೆ.
ಆರೋಗ್ಯ
Puttur-ಪುತ್ತೂರು: ಜು.9ರಂದು ಡಾ. ನಝೀರ್ ಅಹಮ್ಮದ್ ರವರ ಕ್ಲಿನಿಕ್ ನಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಾರ್ವಜನಿಕರ ಆರೋಗ್ಯದ ಕಾಳಜಿಯೊಂದಿಗೆ, ಪುತ್ತೂರಿನ ಖ್ಯಾತ ವೈದ್ಯಕೀಯ ತಜ್ಞ ಡಾ. ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಪುತ್ತೂರು: ಸಾರ್ವಜನಿಕರ ಆರೋಗ್ಯದ ಕಾಳಜಿಯೊಂದಿಗೆ, ಪುತ್ತೂರಿನ ಖ್ಯಾತ ವೈದ್ಯಕೀಯ ತಜ್ಞ ಡಾ. ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರವು ಜು.9, ಗುರುವಾರದಂದು ಬೆಳಗ್ಗೆ 9-30ರಿಂದ ಮಧ್ಯಾಹ್ನ 12-30ರವರೆಗೆ ಪುತ್ತೂರಿನ ಕಲ್ಲಾರೆಯಲ್ಲಿರುವ ಡಾ. ನಝೀರ್ ಅಹಮದ್ ರವರ ಕ್ಲಿನಿಕ್ ನಲ್ಲಿ ನಡೆಯಲಿರುವುದು.
ಶಿಬಿರದಲ್ಲಿ ಸಿಗುವ ಸೌಲಭ್ಯಗಳು:
ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಈ ಕೆಳಗಿನ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡಲಾಗುವುದು.
ಉಚಿತ ಪರೀಕ್ಷೆಗಳು: ಥೈರಾಯಿಡ್ (TSH), ರಕ್ತದ ಸಕ್ಕರೆ ಅಂಶ (Sugar), HBA1C ಮತ್ತು ಮೂಳೆ ಸಾಂದ್ರತೆ ಪರೀಕ್ಷೆ (BMD Test).
-
Uncategorized14 hours ago
Naana Paatekar No More : ವ್ಯವಸ್ಥೆಯ ವಿರುದ್ಧದ ಧ್ವನಿಗೆ ರೂಪ ನೀಡಿದ, ತನ್ನ ಡೈಲಾಗ್ ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಅಭಿಜಾತ ಕಲಾವಿದ ನಾನಾಪಾಟೇಕರ್ ಇನ್ನಿಲ್ಲ
-
ಬಿಗ್ ನ್ಯೂಸ್8 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಮಂಗಳೂರು12 hours agoMangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ
-
Uncategorized13 hours agoAshok Rai-ಬದ್ಯಾರ್ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
-
ನಿಧನ ವಾರ್ತೆ12 hours agoBeltangadi-ಬೆಳ್ತಂಗಡಿ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು
-
ಅಪರಾಧ13 hours agoUppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ
-
ನಿಧನ ವಾರ್ತೆ12 hours agoAccident-ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
-
ಬಿಗ್ ನ್ಯೂಸ್13 hours agoHalf helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ


















