ಮಂಗಳೂರು
Dasara Marathon-ಮನಸೂರೆಗೊಂಡ ಮಂಗಳೂರು ದಸರಾ ಮ್ಯಾರಾಥಾನ್- 2024; ಜೂಯಿಸ್ ಫಿಟ್ನೆಸ್ ಕ್ಲಬ್ ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಆಯೋಜನೆ
ಮಂಗಳೂರು: ಬೆಳಗ್ಗೆ ಸುಮಾರು ಐದು ಗಂಟೆಯ ವೇಳೆ ಚುಮು ಚುಮು ಚಳಿಯ ಮಧ್ಯೆಯೂ ಕುದ್ರೋಳಿ ಕ್ಷೇತ್ರದ ಪರಿಸರದಲ್ಲಿ ಸೇರಿದ ಸಹಸ್ರಾರು ಮಂದಿಯಲ್ಲಿ ಬತ್ತದ ಉತ್ಸಾಹ.. ಗೆಲುವಿನ ಖುಷಿ… ಇಂತಹ ಅದ್ಭುತ ಸನ್ನಿವೇಶಕ್ಕೆ ಕಾರಣವಾಗಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ-2024ರ ಅಂಗವಾಗಿ ಜೂಯಿಸ್ ಫಿಟ್ನೆಸ್ ಕ್ಲಬ್ ವತಿಯಿಂದ ನಡೆದ ರಾಜ್ಯಮಟ್ಟದ ಮಂಗಳೂರು ದಸರಾ ಹಾಫ್ ಮ್ಯಾರಥಾನ್-2024 ಸ್ಪರ್ಧೆ…
ಮಂಗಳೂರು: ಬೆಳಗ್ಗೆ ಸುಮಾರು ಐದು ಗಂಟೆಯ ವೇಳೆ ಚುಮು ಚುಮು ಚಳಿಯ ಮಧ್ಯೆಯೂ ಕುದ್ರೋಳಿ ಕ್ಷೇತ್ರದ ಪರಿಸರದಲ್ಲಿ ಸೇರಿದ ಸಹಸ್ರಾರು ಮಂದಿಯಲ್ಲಿ ಬತ್ತದ ಉತ್ಸಾಹ.. ಗೆಲುವಿನ ಖುಷಿ…
ಇಂತಹ ಅದ್ಭುತ ಸನ್ನಿವೇಶಕ್ಕೆ ಕಾರಣವಾಗಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ-2024ರ ಅಂಗವಾಗಿ ಜೂಯಿಸ್ ಫಿಟ್ನೆಸ್ ಕ್ಲಬ್ ವತಿಯಿಂದ ನಡೆದ ರಾಜ್ಯಮಟ್ಟದ ಮಂಗಳೂರು ದಸರಾ ಹಾಫ್ ಮ್ಯಾರಥಾನ್-2024 ಸ್ಪರ್ಧೆ…

‘ವನ್ ಸಿಟಿ ವನ್ ಸ್ಪಿರಿಟ್’ ಧ್ಯೇಯದೊಂದಿಗೆ ದಕ್ಷಿಣಕನ್ನಡ ಜಿಲ್ಲೆಯನ್ನು ವ್ಯಸನಮುಕ್ತವಾಗಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಚಿಣ್ಣರಿಂದ ವೃದ್ಧರವರೆಗೂ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ವಿಶೇಷ ಮೆರಗು ನೀಡಿದರು.

ಕೇರಳ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡರು. ಧಾರ್ಮಿಕ ಕ್ಷೇತ್ರದಿಂದ ಇಂತಹ ಸಮಾಜಮುಖಿ ಧ್ಯೇಯದೊಂದಿಗೆ ಮ್ಯಾರಾಥಾನ್ ಆಯೋಜಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. 21 ಕಿ.ಮೀ, 10 ಕಿ.ಮೀ ಸ್ಪರ್ಧೆ ಮತ್ತು 5 ಕಿ.ಮೀಟರ್ ಫನ್ ರನ್ ನಡೆಯಿತು.

ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಯಿತು. 21 ಕಿ.ಮೀ. ಪ್ರಥಮ ವಿಜೇತರಿಗೆ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ತೃತೀಯ 10 ಸಾವಿರ ರೂ., 10 ಕಿ.ಮೀ. ಹಾಫ್ ಮ್ಯಾರಥಾನ್‌ಗೆ ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ. ಹಾಗೂ ತೃತೀಯ 5 ಸಾವಿರ ರೂ. ಬಹುಮಾನ ನೀಡಲಾಯಿತು

ಉದ್ಘಾಟನೆ: ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕುದ್ರೋಳಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಟ್ರಸ್ಟಿ ಸಂತೋಷ್ ಜೆ.ಪೂಜಾರಿ, ಕುದ್ರೋಳಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ದ.ಕ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಅನಿಲ್ ಲೋಬೋ, ಜೂಯಿಸ್ ಫಿಟ್ನೆಸ್ ಕ್ಲಬ್‌ನ ರಾಜೇಶ್ ಪಾಟಾಲಿ, ಕಬಡ್ಡಿಪಟು ರವಿ ಉರ್ವ, ಗೋಕರ್ಣನಾಥ ಸೇವಾದಳ ಸದಸ್ಯರು ಮೊದಲಾದವರು ಇದ್ದರು. ಆರ್.ಜೆ ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.

ಬಹುಮಾನ ವಿಜೇತರು
10ಕೆ ಪುರುಷರ ವಿಭಾಗ
ಪ್ರಥಮ: ಮಂಗಳೂರಿನ ರಂಗಣ್ಣ ನಾಯ್ಕರ (33 ನಿಮಿಷ 53ಸೆಕೆಂಡ್),
ದ್ವಿತೀಯ: ಬೆಂಗಳೂರಿನ ಶ್ರೀಧರ ಎಸ್.ಎನ್(33.55)
ತೃತೀಯ: ಬೆಂಗಳೂರಿನ ಗೋವಿಂದರಾಜ ಎಚ್. (35.15)

10ಕೆ ಮಹಿಳಾ ವಿಭಾಗ
ಪ್ರಥಮ: ಬೆಂಗಳೂರಿನ ಸ್ಮಿತಾ ಡಿ.ಆರ್.(41.09)
ದ್ವಿತೀಯ: ಮೈಸೂರಿನ ಉಷಾ ಆರ್. (42.01)
ತೃತೀಯ: ಮೈಸೂರಿನ ಪ್ರೀಯಾಂಕಾ ಮಾರುತಿ(44.48)
22ಕೆ ಪುರುಷರ ವಿಭಾಗ
ಪ್ರಥಮ: ಬೆಳಗಾಂನ ಶಿವಾನಂದ ಚಿಗರಿ (1ಗಂಟೆ 12ನಿಮಿಷ 07 ಸೆಕೆಂಡ್)
ದ್ವಿತೀಯ: ಹಾವೇರಿಯ ಪುರುಷೋತ್ತಮ ಆರ್. (1.13.28),
ತೃತೀಯ: ಮೈಸೂರಿನ ಸಚಿನ್ ನಂದು (1.14.13)
22ಕೆ ಮಹಿಳಾ ವಿಭಾಗ
ಪ್ರಥಮ: ಕೇರಳದ ಆಶಾ ಟಿ.ಪಿ (1.30.20)
ದ್ವಿತೀಯ: ಬೆಂಗಳೂರಿನ ಪ್ರಿಯಾಂಕಾ ಸಿ (1.35.18)
ತೃತೀಯ: ಮೈಸೂರಿನ ಅರ್ಚನಾ ಕೆ. ಎಂ(1.36.14)
ಮಂಗಳೂರು
Chouta-ಫಾರಂ 7 ಕೊಟ್ಟ ಮಾತ್ರಕ್ಕೆ ಮತ ಡಿಲೀಟ್ ಆಗಲ್ಲ; ಅಕ್ರಮ ಡಿಲೀಷನ್‌ಗೆ ದಾಖಲೆ ತೋರಿಸಿ: ಕಾಂಗ್ರೆಸ್‌ಗೆ ಚೌಟ ಸವಾಲು
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಕಾಂಗ್ರೆಸ್ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಇದರ ನೆಪದಲ್ಲಿ ದೇಶಾದ್ಯಂತ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.
ಮಂಗಳೂರು, ಅ.6: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಕಾಂಗ್ರೆಸ್ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಇದರ ನೆಪದಲ್ಲಿ ದೇಶಾದ್ಯಂತ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ. ಫಾರಂ 7 ಸಲ್ಲಿಸಿದ ಮಾತ್ರಕ್ಕೆ ಮತದಾರರ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಅಕ್ರಮವಾಗಿ ಮತಗಳನ್ನು ಡಿಲೀಟ್ ಮಾಡಲಾಗಿದೆ ಎಂಬ ಆರೋಪಕ್ಕೆ ಕಾಂಗ್ರೆಸ್ ಬಳಿ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅಗತ್ಯವಾದ ಪ್ರಕ್ರಿಯೆ. ಇದಕ್ಕೆ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು (ಬಿಎಲ್‌ಎ–2) ಸಹಕರಿಸಬೇಕು. ಆದರೆ, ಕಾಂಗ್ರೆಸ್ ಈ ಪ್ರಕ್ರಿಯೆಯಲ್ಲಿ ತೊಡಗಿರುವ ಏಜೆಂಟರನ್ನು ಬೆದರಿಸುವ ಹಾಗೂ ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ಫಾರಂ 7 ಸಲ್ಲಿಸಿದ ತಕ್ಷಣ ಹೆಸರು ಡಿಲೀಟ್ ಆಗಲ್ಲ
ಮತದಾರರು ಸ್ಥಳಾಂತರಗೊಂಡಿರುವುದು, ಮೃತಪಟ್ಟಿರುವುದು ಅಥವಾ ಭಾರತೀಯ ಪ್ರಜೆಯಲ್ಲ ಎಂಬ ಆಕ್ಷೇಪಣೆಗಳಿದ್ದಲ್ಲಿ ಫಾರಂ 7 ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ, ಅರ್ಜಿ ಸಲ್ಲಿಕೆಯಾದ ಮಾತ್ರಕ್ಕೆ ಮತದಾರರ ಹೆಸರನ್ನು ಏಕಪಕ್ಷೀಯವಾಗಿ ಅಳಿಸಲು ಸಾಧ್ಯವಿಲ್ಲ. ಚುನಾವಣಾಧಿಕಾರಿಗಳು ಆಕ್ಷೇಪಣೆಯನ್ನು ಪರಿಶೀಲಿಸಿ, ಸೂಕ್ತ ದೃಢೀಕರಣದ ಬಳಿಕವೇ ನಿಯಮಾನುಸಾರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಚೌಟ ವಿವರಿಸಿದರು.
ಫಾರಂ 7 ಮೂಲಕ ಅಲ್ಪಸಂಖ್ಯಾತ ಮತದಾರರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಅವರು ತಳ್ಳಿಹಾಕಿದರು. ಅಕ್ರಮವಾಗಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂಬುದಕ್ಕೆ ನಿರ್ದಿಷ್ಟ ದಾಖಲೆಗಳಿದ್ದರೆ ಚುನಾವಣಾ ಆಯೋಗದ ಮುಂದೆ ಸಲ್ಲಿಸಲಿ. ಅಂತಹ ಮತದಾರರನ್ನೇ ಕರೆತಂದು ತೋರಿಸಲಿ ಎಂದು ಸವಾಲು ಹಾಕಿದರು.
5.54 ಕೋಟಿ ಮತದಾರರ ಲೆಕ್ಕ ಮುಂದಿಟ್ಟು ಗೊಂದಲ ಎಂದ ಚೌಟ
ಕರ್ನಾಟಕದಲ್ಲಿ 5.54 ಕೋಟಿಗೂ ಅಧಿಕ ಮತದಾರರಿದ್ದರೂ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 4.46 ಕೋಟಿ ಮತದಾರರಿದ್ದಾರೆ ಎಂದು ಕಾಂಗ್ರೆಸ್ ಹೇಳುವ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಅವರು ಆರೋಪಿಸಿದರು.
ಕರಡು ಮತದಾರರ ಪಟ್ಟಿ ಅಂತಿಮವಲ್ಲ. ಕರಡು ಪಟ್ಟಿ ಪ್ರಕಟವಾದ ಬಳಿಕವೂ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಇಂತಹ ಪ್ರಕ್ರಿಯೆಯ ವಿರುದ್ಧವೇ ಜನರನ್ನು ಎತ್ತಿಕಟ್ಟುವುದು ಸರಿಯಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಯ ವಿರುದ್ಧ ಎಫ್‌ಐಆರ್‌ಗೆ ಆಗ್ರಹ
ಕಾಂಗ್ರೆಸ್‌ಗೆ ಸಂವಿಧಾನ ಮತ್ತು ಕಾನೂನಿನ ಬಗ್ಗೆ ಗೌರವವಿಲ್ಲ ಎಂದು ಆರೋಪಿಸಿದ ಚೌಟ, ಮುಖ್ಯಮಂತ್ರಿಯೊಬ್ಬರು ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸುವುದು ಸರಿಯೇ ಎಂದು ಪ್ರಶ್ನಿಸಿದರು. ಸಾಂವಿಧಾನಿಕ ಸಂಸ್ಥೆಗಳ ಕಾರ್ಯವಿಧಾನ ಹಾಗೂ ಪ್ರತಿಭಟನೆಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಅರಿವು ಇರಬೇಕು. ಚುನಾವಣಾ ಆಯೋಗದ ಕಾರ್ಯದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಈ ವಿಚಾರದಲ್ಲಿ ಮುಖ್ಯಮಂತ್ರಿಯ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದರೆ ಸುಮ್ಮನಿರಲ್ಲ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾನೂನುಬದ್ಧವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರನ್ನು ಬೆದರಿಸುವ ಅಥವಾ ಒತ್ತಡಕ್ಕೆ ಒಳಪಡಿಸುವ ಪ್ರಯತ್ನಗಳನ್ನು ಸಹಿಸುವುದಿಲ್ಲ ಎಂದು ಚೌಟ ಎಚ್ಚರಿಸಿದರು. ಆಕ್ಷೇಪಣೆಗಳಿಗೆ ಬೆದರಿಕೆ ಮೂಲಕ ಉತ್ತರಿಸುವ ಬದಲು ನಿಗದಿತ ಕಾನೂನು ಪ್ರಕ್ರಿಯೆಯ ಮೂಲಕವೇ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕು ಎಂದರು.
ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರುಗಳು ಉಳಿದರೆ ಅರ್ಹ ಮತದಾರರ ಹಕ್ಕಿಗೆ ಧಕ್ಕೆಯಾಗಬಹುದು. ಹೀಗಾಗಿ ಶುದ್ಧ ಮತದಾರರ ಪಟ್ಟಿ ಪ್ರತಿಯೊಬ್ಬ ಮತದಾರನ ಹಕ್ಕು ಎಂದು ಪ್ರತಿಪಾದಿಸಿದ ಅವರು, ಎಸ್‌ಐಆರ್‌ಗೆ ಕೋಮು ಬಣ್ಣ ನೀಡುವ ಬದಲು ವಾಸ್ತವಾಂಶಗಳ ಆಧಾರದಲ್ಲಿ ಚರ್ಚೆ ನಡೆಯಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪೂಜಾ ಪೈ, ಪೂರ್ಣಿಮಾ, ಸುಜಿತ್ ಪ್ರತಾಪ್, ರಾಜಗೋಪಾಲ ರೈ, ವಸಂತ ಜೆ. ಪೂಜಾರಿ, ಜೀವನ್ ಕುಮಾರ್ ತೊಕ್ಕೊಟ್ಟು ಹಾಗೂ ಸಂಜಯ ಪ್ರಭು ಉಪಸ್ಥಿತರಿದ್ದರು.
ನಿಧನ ವಾರ್ತೆ
Dead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
ಮಂಗಳೂರಿನ ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಬೆಳ್ತಂಗಡಿಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಎಸ್. ಕುಂಬಾರ (14) ಅವರ ಮೃತದೇಹ ಶೋಧ ಕಾರ್ಯಾಚರಣೆ ವೇಳೆ ಅ.6ರಂದು ಸಂಜೆ ಪತ್ತೆಯಾಗಿದೆ.
ಬೆಳ್ತಂಗಡಿ: ಮಂಗಳೂರಿನ ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಬೆಳ್ತಂಗಡಿಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಎಸ್. ಕುಂಬಾರ (14) ಅವರ ಮೃತದೇಹ ಶೋಧ ಕಾರ್ಯಾಚರಣೆ ವೇಳೆ ಅ.6ರಂದು ಸಂಜೆ ಪತ್ತೆಯಾಗಿದೆ.
ಬೆಳ್ತಂಗಡಿ ತಾಲೂಕಿನ ರಂಕದಗುತ್ತು, ಕಸಬಾ ಗ್ರಾಮದ ಮೂಲದ ಶ್ರೇಯಸ್ ಅ.4ರಂದು ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿಗೆ ತೆರಳಿದ್ದರು. ನಾಲ್ವರು ಅಪ್ರಾಪ್ತ ಸ್ನೇಹಿತರೊಂದಿಗೆ ಬೆಳಗ್ಗೆ ಸುಮಾರು 10 ಗಂಟೆಗೆ ಮಂಗಳೂರಿಗೆ ಬಂದು ಹುಲಿ ವೇಷದ ತರಬೇತಿಯಲ್ಲಿ ಭಾಗವಹಿಸಿದ್ದರು.
ತರಬೇತಿ ಮುಗಿದ ಬಳಿಕ ಶ್ರೇಯಸ್ ಹಾಗೂ ಸ್ನೇಹಿತರು ಸ್ಟೇಟ್ ಬ್ಯಾಂಕ್‌ನಿಂದ ಪಣಂಬೂರು ಬೀಚ್‌ಗೆ ತೆರಳಿದ್ದರು. ಸಂಜೆ ಸುಮಾರು 4.30ರಿಂದ 5 ಗಂಟೆಯ ವೇಳೆಗೆ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿದ್ದು, ಸುಮಾರು 6 ಗಂಟೆಗೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಶ್ರೇಯಸ್ ನೀರಿನಲ್ಲಿ ಮುಳುಗಿದ್ದಾರೆ. ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು.
ಶ್ರೇಯಸ್ ನೀರು ಪಾಲಾದ ವಿಚಾರವನ್ನು ಆತನ ಅಪ್ರಾಪ್ತ ಸ್ನೇಹಿತರು ಭಯಗೊಂಡು ಮನೆಯವರಿಗೆ ತಿಳಿಸಿರಲಿಲ್ಲ. ಅ.5ರಂದು ಬೆಳಗ್ಗೆ ಈ ವಿಚಾರ ಶ್ರೇಯಸ್ ಕುಟುಂಬಸ್ಥರಿಗೆ ತಿಳಿದುಬಂದಿದೆ.
ಬಾಲಕನ ತಂದೆ ಶೇಷಪ್ಪ ನೀಡಿದ ದೂರಿನ ಆಧಾರದಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಬಾಲಕನ ಪತ್ತೆಗಾಗಿ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಹಾಗೂ ಸಮುದ್ರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿತ್ತು. ಲೈಫ್‌ಗಾರ್ಡ್‌ಗಳು, ಮುಳುಗು ತಜ್ಞರು ಹಾಗೂ ಸ್ಥಳೀಯ ಮೀನುಗಾರರ ಸಹಕಾರದಿಂದ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ಮಂಗಳೂರು
Satyajit-ಎಂಆರ್‌ಪಿಎಲ್ ಸುರಕ್ಷತೆಯಲ್ಲಿ ರಾಜಿ ಬೇಡ: ಸುರಕ್ಷತಾ ಲೋಪದ ಸಮಗ್ರ ತನಿಖೆಗೆ ಸತ್ಯಜಿತ್ ಸುರತ್ಕಲ್ ಆಗ್ರಹ
ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟ ಪ್ರಕರಣವನ್ನು ಕೇವಲ ಪರಿಹಾರ ಮತ್ತು ಉದ್ಯೋಗದ ವಿಚಾರಕ್ಕೆ ಸೀಮಿತಗೊಳಿಸದೆ, ಅವಘಡಕ್ಕೆ ಕಾರಣವಾದ ಸುರಕ್ಷತಾ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಎಂಆರ್‌ಪಿಎಲ್ ಮಜ್ದೂರ್ ಸಂಘದ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.
ಮಂಗಳೂರು, ಅ.6: ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟ ಪ್ರಕರಣವನ್ನು ಕೇವಲ ಪರಿಹಾರ ಮತ್ತು ಉದ್ಯೋಗದ ವಿಚಾರಕ್ಕೆ ಸೀಮಿತಗೊಳಿಸದೆ, ಅವಘಡಕ್ಕೆ ಕಾರಣವಾದ ಸುರಕ್ಷತಾ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಎಂಆರ್‌ಪಿಎಲ್ ಮಜ್ದೂರ್ ಸಂಘದ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಆರ್‌ಪಿಎಲ್‌ನಂತಹ ಬೃಹತ್ ಕೈಗಾರಿಕಾ ಘಟಕಗಳಲ್ಲಿ ಕಾರ್ಮಿಕರು ಮಾತ್ರವಲ್ಲದೆ ಸುತ್ತಮುತ್ತಲಿನ ಜನರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಈ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಈ ಹಿಂದೆ ನಡೆದಿರುವ ಅವಘಡಗಳನ್ನೂ ಪರಿಗಣಿಸಿ ಸಮಗ್ರ ತನಿಖೆ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅವಘಡದಲ್ಲಿ ಮೃತಪಟ್ಟ ಮನೀಶ್ ಕರ್ಕೇರ ಅವರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ನೀಡಿರುವುದನ್ನು ಸ್ವಾಗತಿಸಿದ ಅವರು, ಕುಟುಂಬಕ್ಕೆ ಅಗತ್ಯ ನೆರವು ಮುಂದುವರಿಸುವುದರ ಜತೆಗೆ ಉದ್ಯೋಗ ಕಲ್ಪಿಸುವ ಕ್ರಮ ಕೈಗೊಳ್ಳಬೇಕು ಎಂದರು.
ಗುತ್ತಿಗೆ ಕಾರ್ಮಿಕರಿಗೆ ವಿಮೆ
ಎಂಆರ್‌ಪಿಎಲ್‌ನ ಗುತ್ತಿಗೆ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಹಿತದೃಷ್ಟಿಯಿಂದ ಕನಿಷ್ಠ ₹10 ಲಕ್ಷದ ಆರೋಗ್ಯ ವಿಮೆ ಒದಗಿಸಬೇಕು. ಅಪಘಾತದಲ್ಲಿ ಕಾರ್ಮಿಕ ಮೃತಪಟ್ಟ ಸಂದರ್ಭದಲ್ಲಿ ₹25 ಲಕ್ಷದ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದು ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಕಾರ್ಮಿಕರನ್ನು ಉದ್ಯೋಗದಿಂದ ವಜಾಗೊಳಿಸಲಾಗುತ್ತಿದೆ ಎಂಬ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಅನಿಲ ಸೋರಿಕೆ ಪತ್ತೆಗೆ ಪರಿಣಾಮಕಾರಿ ವ್ಯವಸ್ಥೆ ಅಗತ್ಯ
ಎಂಆರ್‌ಪಿಎಲ್‌ನಲ್ಲಿ ಅನಿಲ ಸೋರಿಕೆ ಸೇರಿದಂತೆ ಅಪಾಯಕಾರಿ ಪರಿಸ್ಥಿತಿಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚುವ ಡಿಟೆಕ್ಷನ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಬೇಕು. ಅಪಾಯದ ಸಂದರ್ಭದಲ್ಲಿ ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಜನರಿಗೆ ತಕ್ಷಣ ಎಚ್ಚರಿಕೆ ನೀಡಲು ಸೈರನ್ ವ್ಯವಸ್ಥೆ ಮತ್ತು ತುರ್ತು ಸ್ಥಳಾಂತರ ವ್ಯವಸ್ಥೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದರು.
ಸುರಕ್ಷತಾ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಕೈಗಾರಿಕಾ ಸುರಕ್ಷತೆಯ ವಿಚಾರದಲ್ಲಿ ಲೋಪ ಕಂಡುಬಂದರೆ ಅದರ ಮೂಲ ಕಾರಣ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ ಹಿತಾಸಕ್ತಿಯ ವಿಚಾರ
ಎಂಆರ್‌ಪಿಎಲ್ ಅವಘಡವನ್ನು ಕೇವಲ ಕಾರ್ಮಿಕರ ಸಮಸ್ಯೆಯಾಗಿ ಪರಿಗಣಿಸದೆ, ಜಿಲ್ಲೆಯ ಜನರ ಸುರಕ್ಷತೆ ಹಾಗೂ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರವಾಗಿ ನೋಡಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸತ್ಯಜಿತ್ ಸುರತ್ಕಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎತ್ತಿನಹೊಳೆ ಹೋರಾಟ ಸಮಿತಿ ಸಂಚಾಲಕ ಶಶಿರಾಜ್ ಶೆಟ್ಟಿ ಕೊಳಂಬೆ, ಕೆಪಿಟಿಎಂಎಸ್ ಜಿಲ್ಲಾಧ್ಯಕ್ಷ ಯಶ್‌ಪಾಲ್ ಸುವರ್ಣ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ತುಷಾರ್ ಕದ್ರಿ, ತುಳುನಾಡು ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಹಾಗೂ ಪ್ರಮುಖರಾದ ಅಮರ್ ಉಪಸ್ಥಿತರಿದ್ದರು.
-
ದಕ್ಷಿಣ ಕನ್ನಡ23 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ಅಪರಾಧ22 hours agoSomasekhar-ನಕಲಿ ದಾಖಲೆ ಸೃಷ್ಟಿಸಿ ಕೈದಿಯ ಬಿಡುಗಡೆ..! ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಡಿಐಜಿ ಎಂ. ಸೋಮಶೇಖರ್
-
ನಿಧನ ವಾರ್ತೆ21 hours agoPuttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು
-
ಬಿಗ್ ನ್ಯೂಸ್17 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
ಶಿಕ್ಷಣ20 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ21 hours agoDead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
-
ನಿಧನ ವಾರ್ತೆ21 hours agoKerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು
-
ಬಿಗ್ ನ್ಯೂಸ್22 hours agoPuttur-ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ‘ಭಕ್ತರನ್ನು ಕಡೆಗಣಿಸಿ ಜೀರ್ಣೋದ್ಧಾರ ಸಮಿತಿ ರಚನೆ’ – ವಿಹಿಂಪ ಆಕ್ಷೇಪ


















