ಕಾರ್ಯಕ್ರಮಗಳು
Ambika-ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸದ್ಯದಲ್ಲೇ ಹಿಂದೂ ಧರ್ಮ ಶಿಕ್ಷಣ ಆರಂಭಧರ್ಮದ ಉಳಿವಿಗಾಗಿ ಹೆತ್ತವರ ಸಹಕಾರ ಅಗತ್ಯ : ಸುಬ್ರಹ್ಮಣ್ಯ ನಟ್ಟೋಜ
ಹಿಂದೂ ಸಮಾಜವನ್ನು ಛಿದ್ರಗೊಳಿಸುವ ವ್ಯವಸ್ಥಿತ ಯೋಜನೆಗಳನ್ನು ದುಷ್ಟ ಶಕ್ತಿಗಳು ಕಾರ್ಯಗತಗೊಳಿಸುತ್ತಿವೆ. ನಮ್ಮ ಮಕ್ಕಳಿಗೆ ಹಿಂದೂ ಧರ್ಮದ ಕುರಿತಾದ ಜಾಗೃತಿ ಒಡಮೂಡದಿರುವುದೇ ಸಮಾಜಘಾತುಕ ಶಕ್ತಿಗಳ ಹುನ್ನಾರ ಯಶಸ್ವಿಯಾಗುವುದಕ್ಕೆ ಕಾರಣವಾಗುತ್ತಿದೆ.
ಪುತ್ತೂರು: ಹಿಂದೂ ಸಮಾಜವನ್ನು ಛಿದ್ರಗೊಳಿಸುವ ವ್ಯವಸ್ಥಿತ ಯೋಜನೆಗಳನ್ನು ದುಷ್ಟ ಶಕ್ತಿಗಳು ಕಾರ್ಯಗತಗೊಳಿಸುತ್ತಿವೆ. ನಮ್ಮ ಮಕ್ಕಳಿಗೆ ಹಿಂದೂ ಧರ್ಮದ ಕುರಿತಾದ ಜಾಗೃತಿ ಒಡಮೂಡದಿರುವುದೇ ಸಮಾಜಘಾತುಕ ಶಕ್ತಿಗಳ ಹುನ್ನಾರ ಯಶಸ್ವಿಯಾಗುವುದಕ್ಕೆ ಕಾರಣವಾಗುತ್ತಿದೆ.
ಆದ್ದರಿಂದ ಪಠ್ಯ ಆಧಾರಿತ ಶಿಕ್ಷಣದ ಜತೆಗೆ ಧಾರ್ಮಿಕ ಶಿಕ್ಷಣವನ್ನೂ ಕೊಡುವ ಅನಿವಾರ್ಯತೆ ಇಂದು ತಲೆದೋರಿದೆ. ಈ ನೆಲೆಯಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಮುಂದಿನ ದಿನಗಳಲ್ಲಿ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆದೇಶ ಹಾಗೂ ಆಶೀರ್ವಾದದೊಂದಿಗೆ ಧರ್ಮಶಿಕ್ಷಣವನ್ನು ಒದಗಿಸಿಕೊಡಲಾಗುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಬುಧವಾರ ನಡೆದ ರಕ್ಷಕ ಶಿಕ್ಷಕ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದೂ ಹೆಣ್ಣುಮಕ್ಕಳನ್ನಷ್ಟೇ ಅಲ್ಲದೆ ಗಂಡುಮಕ್ಕಳನ್ನೂ ಮತಾಂತರಗೊಳಿಸುವ ಪ್ರಯತ್ನಗಳು ಸಾಗುತ್ತಿವೆ. ಹಿಂದೂ ಧರ್ಮ, ದೇವತೆಗಳ ಬಗೆಗೆ ಹಲವು ಪ್ರಶ್ನೆಗಳನ್ನು ಕೇಳಿ ಹಿಂದೂ ಯುವ ಮನಸ್ಸುಗಳನ್ನು ಹಾದಿ ತಪ್ಪಿಸುವ ಕೆಲಸಗಳಾಗುತ್ತಿವೆ. ತಮ್ಮ ಧರ್ಮದ ಬಗೆಗೆ ತಿಳಿದಿರದ ನಮ್ಮ ಯುವಕ – ಯುವತಿಯರು ಪ್ರಶ್ನೆಗಳಿಗೆ ಉತ್ತರಿಸಲಾಗದೆ ಧರ್ಮವೇ ಸರಿ ಇಲ್ಲ ಎಂಬ ನಿರ್ಣಯಕ್ಕೆ ಬಂದು ಸುಲಭಕ್ಕೆ ಮತಾಂತರದ ಕಬಂಧ ಬಾಹುಗಳಲ್ಲಿ ಸಿಲುಕುತ್ತಿದ್ದಾರೆ ಎಂದು ನುಡಿದರು.
ಧರ್ಮ ಶಿಕ್ಷಣವನ್ನು ಒದಗಿಸಿಕೊಡುವ ಮೂಲಕ ಧರ್ಮದ ಆಳ ಅಗಲವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ. ಧರ್ಮದ ಬಗೆಗೆ, ಪುರಾಣಗಳ ಬಗೆಗೆ ಯಾರಾದರೂ ಪ್ರಶ್ನೆ ಮಾಡಿದಲ್ಲಿ ಸರಿಯಾದ ಉತ್ತರ ಕೊಡುವ ಯೋಗ್ಯತೆಯನ್ನು ನಮ್ಮ ಮಕ್ಕಳಲ್ಲಿ ತುಂಬಬೇಕಿದೆ. ನಾವು ಧರ್ಮ ಜ್ಞಾನ ಬೆಳೆಸಿಕೊಂಡಾಗ ಮತೀಯ ಶಕ್ತಿಗಳು ಸೋಲೊಪ್ಪಿಕೊಳ್ಳಬೇಕಾಗುತ್ತದೆ. ಅಂತೆಯೇ ನಮ್ಮ ಧರ್ಮವನ್ನು ಪ್ರಶ್ನೆ ಮಾಡುವವರ ಧರ್ಮದ ನ್ಯೂನತೆಗಳ ಬಗೆಗೆ ನಾವು ಪ್ರಶ್ನೆ ಮಾಡುವಷ್ಟು ಜ್ಞಾನ ಬೆಳೆಸಿಕೊಂಡಾಗ ಯಾರೂ ನಮ್ಮನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು.
ಧರ್ಮ ಶಿಕ್ಷಣ ಕೊಡದೆ ಮಕ್ಕಳನ್ನು ನಾವು ಬೆಳೆಸಿದರೆ ನಾಳೆ ನಮ್ಮ ಮಕ್ಕಳು ನಮ್ಮ ಜತೆ ಇರುತ್ತಾರೆಂಬ ಖಾತ್ರಿ ಇಲ್ಲ. ಬೆಳಗ್ಗೆ ಹೋದವರು ಸಂಜೆ ಬರುತ್ತಾರೆಂಬ ವಿಶ್ವಾಸ ಇಲ್ಲ. ನಮ್ಮ ಮಕ್ಕಳಿಗೇನೂ ಆಗುವುದಿಲ್ಲ, ನಮಗೇನೂ ಬಾಧಿಸುವುದಿಲ್ಲ ಎನ್ನುತ್ತಾ ಕುಳಿತರೆ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳು ಮರೆಯಾಗಿ ಅಂತಿಮವಾಗಿ ಧರ್ಮವನ್ನೂ ಕಳೆದುಕೊಳ್ಳಲಿದ್ದೇವೆ ಎಂಬ ಎಚ್ಚರ ನಮ್ಮಲ್ಲಿರಬೇಕು. ಇಂದು ಎಷ್ಟೋ ಮನೆ – ಮನಗಳು ಮತಾಂತರದ ಸುಳಿಗೆ ಸಿಕ್ಕಿ ಘಾತಿಗೊಳಗಾಗಿವೆ. ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದರು.
ಅAಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ದೇಶ ಉಳಿಯಬೇಕಾದರೆ ಧರ್ಮ ಉಳಿಯಬೇಕಿದೆ. ಆದರೆ ಧರ್ಮ ಉಳಿಯುವುದಕ್ಕೆ ಸಮಾಜ ಉಳಿಯುವುದು ಮುಖ್ಯ. ಅಂತಹ ಸಮಾಜ ಸರಿ ಇರಬೇಕಾದರೆ ಕುಟುಂಬ ದೃಢವಾಗಿರಬೇಕು. ಇಂದಿನ ದಿನಗಳಲ್ಲಿ ಹಿಂದೂ ಕುಟುಂಬಗಳನ್ನೇ ಒಡೆಯುವ ಪ್ರಯತ್ನ ಅಲ್ಲಲ್ಲಿ ನಡೆಯುತ್ತಿದೆ. ಮದುವೆಯಾದ ಹಿಂದೂ ಪುರುಷ ಅಥವ ಮಹಿಳೆಯನ್ನೇ ಗುರಿಯಾಗಿಸಿ ಮತಾಂತರ ನಡೆಯುತ್ತಿದೆ. ತನ್ಮೂಲಕ ಹಿಂದೂ ಕುಟುಂಬಗಳನ್ನು ಒಡೆದು, ಧರ್ಮ ಕೆಡಿಸುವ ಯೋಜನೆ ಜಾರಿಯಲ್ಲಿದೆ. ಇದರ ಬಗೆಗೆ ಎಚ್ಚರ ವಹಿಸಬೇಕು ಎಂದರು.
ಅAಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ.ದೀಪಕ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ., ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಿವರಾಮ ಆಳ್ವ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷೆ ಸೀಮಾ ನಾಗರಾಜ್, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಅಂಬಿಕಾ ವಿದ್ಯಾಲಯ ಸಿಇಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು. ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು.
ಹೆತ್ತವರಿಂದ ಅತ್ಯುತ್ತಮ ಪ್ರತಿಕ್ರಿಯೆ: ಹಿಂದೂ ಧರ್ಮ ಶಿಕ್ಷಣವನ್ನು ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಆರಂಭಿಸುವುದಕ್ಕೆ ಎಲ್ಲಾ ಹೆತ್ತವರು ಒಕ್ಕೊರಲಿನಿಂದ ಬೆಂಬಲ ನೀಡಿದರು. ಇಂದು ನಮ್ಮ ಮಕ್ಕಳಿಗೆ ಧರ್ಮ ಶಿಕ್ಷಣ ಅತ್ಯಂತ ಅಗತ್ಯವಾಗಿ ಬೇಕಿದೆ. ಅಂಬಿಕಾ ಸಂಸ್ಥೆ ಇಂತಹ ಕಾರ್ಯಕ್ಕೆ ಅಡಿಯಿಟ್ಟಿರುವುದು ಅತ್ಯಂತ ಖುಷಿಯ ಸಂಗತಿ ಎಂದು ಹೆತ್ತವರು ಅಭಿಪ್ರಾಯವ್ಯಕ್ತಪಡಿಸಿದರು.
ಸ್ಥಳೀಯ
Dharmasthala-ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನ ಸಂಭ್ರಮ; ಧರ್ಮಸ್ಥಳದ ಮ್ಯೂಸಿಯಂಗೆ ಕಲಾಂ ಕಾರು, ಸಚಿತ್ರ ಅಂಚೆಚೀಟಿಗಳು, ಬಗ್ಗಿ ವಾಹನ ಕೊಡುಗೆ
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನವನ್ನು ನ. 26ರಂದು ಧರ್ಮಸ್ಥಳದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಗಣ್ಯರು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.
ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನವನ್ನು ನ. 26ರಂದು ಧರ್ಮಸ್ಥಳದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಗಣ್ಯರು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.

ಪೆರಿಂಜೆ ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಎ. ಜೀವಂಧರ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಡಾ. ಪ್ರಭಾಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕೆ. ಅಭಯಚಂದ್ರ ಜೈನ್ ಮೂಡುಬಿದಿರೆ, ಸುದರ್ಶನ ಜೈನ್ ಬಂಟ್ವಾಳ, ನೋಟರಿ ಶ್ವೇತಾ ಜೈನ್, ಉದ್ಯಮಿ ಪ್ರಭಾತ್ ಮೂಡುಬಿದಿರೆ, ಮಾಳ ಹರ್ಷೇಂದ್ರ ಜೈನ್, ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತಾಧಿಕಾರಿ ಬಿ.ಪಿ. ಸಂಪತ್ ಕುಮಾರ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಸೇರಿದಂತೆ ಹಲವರು ಹೆಗ್ಗಡೆಯವರಿಗೆ ಗೌರವಪೂರ್ವಕವಾಗಿ ಶುಭಾಶಯಗಳನ್ನು ಅರ್ಪಿಸಿದರು.

ಕಲಾಂ ಬಳಸಿದ ಟಾಟಾ ನ್ಯಾನೋ ಕಾರು, ಪೆನ್ನು ಕೊಡುಗೆ
ರಾಮೇಶ್ವರಂನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬಳಸಿದ್ದ ಟಾಟಾ ನ್ಯಾನೋ ಕಾರು, ಅದರ ದಾಖಲೆ ಪತ್ರಗಳು ಹಾಗೂ ಪೆನ್ನನ್ನು ಧರ್ಮಸ್ಥಳದ ಮಂಜೂಷಾ ವಾಹನಗಳ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲು ಕೊಡುಗೆಯಾಗಿ ಹಸ್ತಾಂತರಿಸಲಾಯಿತು.

ಡಾ. ಅಬ್ದುಲ್ ಕಲಾಂ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭವನ್ನು ಸ್ಮರಿಸಿದ ಹೆಗ್ಗಡೆಯವರು, ಅವರ ಸರಳ ವ್ಯಕ್ತಿತ್ವ, ಸರ್ವಧರ್ಮ ಸಮನ್ವಯದ ನಿಲುವು, ದೇವರ ಮೇಲಿನ ದೃಢಭಕ್ತಿ ಮತ್ತು ವಿಶ್ವಾಸವನ್ನು ನೆನಪಿಸಿಕೊಂಡರು. ಮಕ್ಕಳೊಂದಿಗೆ ಮಗುವಿನಂತೆ ಮುಕ್ತವಾಗಿ ಬೆರೆಯುತ್ತಿದ್ದ ಅವರ ಗುಣ ಹಾಗೂ ಸರಳತೆ ಅವಿಸ್ಮರಣೀಯ ಎಂದು ಹೇಳಿದರು. ಕಲಾಂ ಅವರ ಸ್ಮರಣಾರ್ಥ ಅಮೂಲ್ಯ ವಸ್ತುಗಳಾದ ಕಾರು ಮತ್ತು ಪೆನ್ನನ್ನು ಕೊಡುಗೆಯಾಗಿ ನೀಡಿದ ಪ್ರತಿಷ್ಠಾನದವರಿಗೆ ಕೃತಜ್ಞತೆ ಸಲ್ಲಿಸಿದರು.
ಡಾ. ಎ.ಪಿ.ಜೆ.ಎಂ. ನಝೀಮಾ ಮರೈಕಾಯಲ್, ಪ್ರತಿಷ್ಠಾನದ ಕಾರ್ಯದರ್ಶಿ ಎ.ಪಿ.ಜೆ.ಎಂ. ಜೈನೀಲಾಭಿ ಡೀಮ್ ಹಾಗೂ ಸಹ ಸಂಸ್ಥಾಪಕ ಎ.ಪಿ.ಜೆ.ಎಂ. ಶೇಖ್ ಸಲೀಂ ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಕುಮಾರ್ ಸ್ವಾಗತಿಸಿದರು.
ವೀರವನಿತೆಯರ ಸಚಿತ್ರ ಅಂಚೆಚೀಟಿ ಬಿಡುಗಡೆ
ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನದ ಸವಿ ನೆನಪಿಗಾಗಿ ವಂದೇ ಭಾರತಂ ಪರಿಕಲ್ಪನೆಯಡಿ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ, ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಸಹಯೋಗದೊಂದಿಗೆ ವೀರವನಿತೆಯರ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡ ಸಚಿತ್ರ ಅಂಚೆಚೀಟಿಗಳನ್ನು ಬೀಡಿನಲ್ಲಿ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.

ದಾನಚಿಂತಾಮಣಿ ಅತ್ತಿಮಬ್ಬೆ, ರಣಭೈರವಿ, ಅಕ್ಕಾದೇವಿ, ಕಾಳಲಾ ದೇವಿ, ಕಂತಿ, ಚೌಟರ ರಾಣಿ ಅಬ್ಬಕ್ಕ ದೇವಿ, ನಾಟ್ಯರಾಣಿ ಶಾಂತಲಾದೇವಿ ಹಾಗೂ ಚಂದನಬಾಲೆಯ ಕುರಿತ ಸಚಿತ್ರ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಯಿತು.
ವಂದೇ ಮಾತರಂ ಗೀತೆಯ 150ನೇ ವರ್ಷದ ಸ್ಮರಣಾರ್ಥ ಹಾಗೂ 2026ರ ಜಿನಸಮ್ಮಿಲನ ನಡೆಯುವ ಸಮ್ಮೇದ ಶಿಖರ್ಜಿಗೆ ಸಂಬಂಧಿಸಿದ ವಿಷಯಗಳನ್ನೊಳಗೊಂಡ ಅಂಚೆಪತ್ರಗಳೂ ಸೇರಿದಂತೆ ಒಟ್ಟು ಹತ್ತು ಅಂಚೆಪತ್ರಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಚಿತ್ರ ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿ, ಈ ಕಾರ್ಯದಲ್ಲಿ ಕೈಜೋಡಿಸಿದ ಅಂಚೆ ಇಲಾಖೆ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ಅಂಚೆ ಇಲಾಖೆಯ ನಿರ್ದೇಶಕ ಶ್ರೀಹರ್ಷ ಎನ್. ಹಾಗೂ ಪುತ್ತೂರು ಅಂಚೆ ವಿಭಾಗದ ಅಧೀಕ್ಷಕ ರವೀಂದ್ರ ನಾಯ್ಕ ಉಪಸ್ಥಿತರಿದ್ದರು. ಹುಬ್ಬಳ್ಳಿಯ ಮಹಾವೀರ ಕುಂದೂರ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಆಡಳಿತ ನಿರ್ದೇಶಕ ಬಿ.ಪಿ. ಸಂಪತ್ ಕುಮಾರ್ ಸಹಕರಿಸಿದರು.
ವಿಶೇಷಚೇತನರ ಸೇವೆಗೆ 10 ಆಸನಗಳ ಬಗ್ಗಿ ಕಾರು ಕೊಡುಗೆ
ಉದ್ಯಮಿ ಬಸವರಾಜ್ ಆರ್. ಅವರು ಹತ್ತು ಆಸನಗಳ ಇಲೆಕ್ಟ್ರಿಕ್ ಬಗ್ಗಿ ಕಾರನ್ನು ಧರ್ಮಸ್ಥಳಕ್ಕೆ ಕೊಡುಗೆಯಾಗಿ ಅರ್ಪಿಸಿದರು. ಈ ವಾಹನವನ್ನು ವಿಶೇಷಚೇತನರು ವಸತಿಗೃಹಕ್ಕೆ ತೆರಳಲು ಉಚಿತ ಸೇವೆಗಾಗಿ ಬಳಸಲಾಗುವುದು ಎಂದು ಡಾ. ಹೆಗ್ಗಡೆಯವರು ತಿಳಿಸಿದರು.
ರಾಷ್ಟ್ರಪತಿ, ಪ್ರಧಾನಿಯಿಂದ ಶುಭಾಶಯ
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕ ಶುಭಾಶಯ ಪತ್ರಗಳ ಮೂಲಕ ಹೆಗ್ಗಡೆಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ಕಾರ್ಯಕ್ರಮಗಳು
Medland Cup-2026-ಮೆಡ್‌ಲ್ಯಾಂಡ್ ಆಸ್ಪತ್ರೆಯ ವಾರ್ಷಿಕ ಸಂಭ್ರಮ: ನ.29ರಂದು ‘ಮೆಡ್‌ಲ್ಯಾಂಡ್ ಕಪ್-2026’ ಕ್ರಿಕೆಟ್ ಪಂದ್ಯಾಟ
ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ವರ್ಷದ ಸೇವಾ ಸಂಭ್ರಮದ ಅಂಗವಾಗಿ ವಿವಿಧ ಇಲಾಖೆಗಳ ಎಂಟು ತಂಡಗಳ ನಡುವಿನ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ‘ಮೆಡ್‌ಲ್ಯಾಂಡ್ ಕಪ್-2026’ ನ.29ರಂದು ಪುತ್ತೂರಿನ ಸಂಪ್ಯ ಕಮ್ಮಾಡಿ ಮೈದಾನದಲ್ಲಿ ನಡೆಯಲಿದೆ.
ಪುತ್ತೂರು: ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ವರ್ಷದ ಸೇವಾ ಸಂಭ್ರಮದ ಅಂಗವಾಗಿ ವಿವಿಧ ಇಲಾಖೆಗಳ ಎಂಟು ತಂಡಗಳ ನಡುವಿನ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ‘ಮೆಡ್‌ಲ್ಯಾಂಡ್ ಕಪ್-2026’ ನ.29ರಂದು ಪುತ್ತೂರಿನ ಸಂಪ್ಯ ಕಮ್ಮಾಡಿ ಮೈದಾನದಲ್ಲಿ ನಡೆಯಲಿದೆ.

ಪುತ್ತೂರಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಎಂಟು ತಂಡಗಳು ಈ ಕ್ರೀಡಾಕೂಟದಲ್ಲಿ ಸೆಣಸಾಡಲಿವೆ. ಪುತ್ತೂರು ಪೊಲೀಸ್ ಎಲೆವೆನ್, ಫಾರೆಸ್ಟ್ ಎಲೆವೆನ್, ಮೆಡ್ಲ್ಯಾಂಡ್ ಫಾಲ್ಕನ್ಸ್, ಪುತ್ತೂರು ಬಾರ್ ಅಸೋಸಿಯೇಷನ್, ಮೆಸ್ಕಾಂ ಪುತ್ತೂರು ಪರ್ಲ್ಸ್, ಕ್ಯಾಂಪ್ಕೋ ಪುತ್ತೂರು, ಕೆಎಸ್‌ಆರ್‌ಟಿಸಿ ಪುತ್ತೂರು ಹಾಗೂ ಸಿಎಂಸಿ ಎಲೆವೆನ್ ಪುತ್ತೂರು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ.
ಆಸ್ಪತ್ರೆಯ ಒಂದು ವರ್ಷದ ವೈದ್ಯಕೀಯ ಸೇವೆಯ ಸಂಭ್ರಮವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ವಿವಿಧ ಇಲಾಖೆಗಳ ನಡುವೆ ಪರಸ್ಪರ ಬಾಂಧವ್ಯ ವೃದ್ಧಿಸುವುದರ ಜತೆಗೆ ಕ್ರೀಡಾಸ್ಫೂರ್ತಿ, ತಂಡದ ಒಗ್ಗಟ್ಟು ಹಾಗೂ ಸ್ನೇಹಭಾವವನ್ನು ಉತ್ತೇಜಿಸುವುದು ಪಂದ್ಯಾಟದ ಆಶಯವಾಗಿದೆ.
ಈ ಕುರಿತು ಮಾಹಿತಿ ನೀಡಿದ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ವಿಶಾಲ್ ಅವರು, ಆಸ್ಪತ್ರೆಯ ಪ್ರಥಮ ವರ್ಷದ ಸಂಭ್ರಮವನ್ನು ಕ್ರೀಡಾಕೂಟದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಗಳು
Silver Jubilee-ಸವಣೂರು ವಿದ್ಯಾರಶ್ಮಿ ವಿದ್ಯಾಲಯಕ್ಕೆ 25ನೇ ವರ್ಷದ ಸಂಭ್ರಮ: ಡಿ.26ರಂದು ಬೆಳ್ಳಿಹಬ್ಬ ʻರಜತ ರಶ್ಮಿʼ; ಜ ಸಮಾಲೋಚನಾ ಸಭೆಯಲ್ಲಿ ಸವಣೂರು ಸೀತಾರಾಮ ರೈ ಘೋಷಣೆ
ರಾಜ್ಯದಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ಹೆಸರನ್ನು ಮಾಡಿರುವ ವಿದ್ಯಾಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಬೆಳ್ಳಿಹಬ್ಬ ಆಚರಣೆಯ ಸಮಾರಂಭ ರಜತ ರಶ್ಮಿ ದ. 26 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಸಹಕಾರರತ್ನ ಸವಣೂರು ಸೀತಾರಾಮ ರೈ ಹೇಳಿದರು.
ಪುತ್ತೂರು: ರಾಜ್ಯದಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ಹೆಸರನ್ನು ಮಾಡಿರುವ ವಿದ್ಯಾಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಬೆಳ್ಳಿಹಬ್ಬ ಆಚರಣೆಯ ಸಮಾರಂಭ ರಜತ ರಶ್ಮಿ ದ. 26 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಸಹಕಾರರತ್ನ ಸವಣೂರು ಸೀತಾರಾಮ ರೈ ಹೇಳಿದರು.
ನ. 24 ರಂದು ಸಂಸ್ಥೆಯ ಸಭಾಂಗಣದಲ್ಲಿ ಬೆಳ್ಳಿಹಬ್ಬ ಆಚರಣೆಯ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಮ್ಮ ಸಂಸ್ಥೆಯು 2001 ಮೇ 23 ರಂದು ಪ್ರಾರಂಭಗೊಂಡಿತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಅಂಗ್ಗಮಾಧ್ಯಮ ಶಿಕ್ಷಣದೊಂದಿಗೆ ಸಕಲ ಸೌಲಭ್ಯಗಳನ್ನು ಒಳಗೊಂಡ ವ್ಯವಸ್ಥೆಯನ್ನು ನೀಡುವುದರ ಜೊತೆಗೆ ರಾಜ್ಯದ ನಾನಾ ಜಿಲ್ಲೆಗಳ ವಿದ್ಯಾರ್ಥಿಗಳು ಕಲಿಕೆಗೆ ಇಲ್ಲಿಗೆ ಆಗಮಿಸಿ, ಉತ್ತಮ ಶಿಕ್ಷಣ ಪಡೆದು, ಇಂದು ದೇಶ-ವಿದೇಶಗಳಲ್ಲಿ ಉನ್ನತವಾದ ಹುದ್ದೆಗಳಲ್ಲಿ ಇದ್ದಾರೆ. ಇದು ನಮಗೆ ತುಂಬಾ ಸಂತೋಷದ ವಿಚಾರ, ಸಂಸ್ಥೆಯ ಬೆಳ್ಳಿಹಬ್ಬವನ್ನು ಅರ್ಥಪೂರ್ಣ ಕಾರ್‍ಯಕ್ರಮವಾಗಿ ರೂಪಿಸುವ ನಿಟ್ಟಿನಲ್ಲಿ ದ. 26 ರಂದು ಬೆಳಿಗ್ಗೆ ಸವಣೂರು ಬಸದಿ ವಠಾರದಿಂದ ಮುಖ್ಯರಸ್ತೆಯಾಗಿ ಸಂಸ್ಥೆಯ ವಠಾರಕ್ಕೆ ಅದ್ದೂರಿಯಾದ ಮೆರವಣಿಗೆಯನ್ನು ಆಯೋಜಿಸಲಿವೆ.
ಬಳಿಕ ಸಭಾ ಕಾರ್‍ಯಕ್ರಮ, ಸಾಂಸ್ಕೃತಿಕ ವೈವಿಧ್ಯಮಯ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಿವೆ ಎಂದು ಹೇಳಿದರು.
ವೈವಿಧ್ಯಮಯ 40 ಸ್ಟಾಲ್‌ಗಳು: ರಜತ ಸಂಭ್ರಮದ ನಿಟ್ಟಿನಲ್ಲಿ ನಾವು ಸಂಸ್ಥೆಯ ಅವರಣದಲ್ಲಿ 40 ಬಗೆಯ ವಿವಿಧ ಸ್ಟಾಲ್‌ಗಳನ್ನು ಹಾಕಲಿವೆ. ಈ ಸ್ಟಾಲ್‌ನಲ್ಲಿ ಜಿಲ್ಲೆಯ ವಿವಿಧ ಕಡೆಯಿಂದ ಅನೇಕ ಬಗೆಯ ವಸ್ತುಗಳ ಮಾರಾಟ, ಪ್ರದರ್ಶನ ಇರಲಿದೆ ಎಂದು ಸೀತಾರಾಮ ರೈ ತಿಳಿಸಿದರು.
ಮಾದರಿ ಕಾರ್‍ಯಕ್ರಮ ಆಗಬೇಕು-ಬಾಲ್ಯೊಟ್ಟು: `ರಜತರಶ್ಮಿ’ ಕಾರ್‍ಯಕ್ರಮದ ಗೌರವಾಧ್ಯಕ್ಷ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ ಕಾರ್‍ಯಕ್ರಮ ಸಂಘಟಿಸುವುದರಲ್ಲಿ ಸೀತಾರಾಮ ರೈ ಅವರು ಬಹಳಷ್ಟು ಹೆಸರನ್ನು ಪಡೆದಿದ್ದಾರೆ, ವಿದ್ಯಾರಶ್ಮಿ ವಿದ್ಯಾಲಯ ಮತ್ತು ಆದರ್ಶ ವಿವಿಧೋzಶ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಿರುವ ಸೀತಾರಾಮ ರೈ ಅವರನ್ನು ವಿದ್ಯಾರಶ್ಮಿ ಸಂಸ್ಥೆಯ ರಜತ ಸಂಭ್ರಮ ಕಾರ್‍ಯಕ್ರಮದಲ್ಲಿ ಸವಣೂರು ಬಸದಿ ವಠಾರದಿಂದ ವಿದ್ಯಾರಶ್ಮಿ ವಿದ್ಯಾಲಯದ ತನಕ ರಥದ ಮೂಲಕ ವೈಭವಯುತವಾದ ಮೆರವಣಿಗೆಯಲ್ಲಿ ಕರೆತರಲಾಗುವುದು, ಮೆರವಣಿಗೆಯನ್ನು ವಿಶೇಷ ರೀತಿಯಲ್ಲಿ ಆಯೋಜಿಸಲಾಗುವುದು.
ಕಲ್ಲಡ್ಕಗೊಂಬೆಗಳ ಕುಣಿತದೊಂದಿಗೆ ಮೆರವಣಿಗೆಯ ಮೆರಗು ಹೆಚ್ಚಲಿದೆ ಎಂದರು. ಸೀತಾರಾಮ ರೈ ಓರ್ವ ಸಾಧಕರು, ಅವರ ನೇತೃತೃದಲ್ಲಿ ನಡೆಯುವ ಸಂಸ್ಥೆಯ ಬೆಳ್ಳಿಹಬ್ಬ ಮಾದರಿ ಕಾರ್‍ಯಕ್ರಮವಾಗಬೇಕು ಎಂದು ಬಾಲ್ಯೊಟ್ಟು ಹೇಳಿದರು.
ನ್ಯಾಯವಾದಿ ಎನ್.ಜಯಪ್ರಕಾಶ್ ರೈ ಸುಳ್ಯ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಪ್ರಮುಖರಾದ ಪಿ.ಡಿ. ಕೃಷ್ಣಕುಮಾರ್ ರೈ ದೇವಸ್ಯ, ಸುದರ್ಶನ್ ನಾಕ್ ಕಂಪ, ಕುಸುಮಾ ಶೆಟ್ಟಿ ಕೆರೆಕ್ಕೋಡಿ, ಸುರೇಶ್ ರೈ ಸೂಡಿಮುಳ್ಳು, ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ವಿವಿಧ ಸಲಹೆ-ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ಟ್ರಸ್ಟಿಗಳಾದ ಎನ್.ಸುಂದರ ರೈ ಸವಣೂರು, ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ರಾಜಲಕ್ಷ್ಮಿ ಎಸ್ ರೈ, ಸಂಸ್ಥೆಯ ರಕ್ಷಕ-ಶಿಕ್ಷಕ ಅಧ್ಯಕ್ಷ ಡಾ. ಜೀವನ್ ಪ್ರಕಾಶ್ ರೈ ಉಪಸ್ಥಿತರಿದ್ದರು.
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಸ್ವಾಗತಿಸಿ, ಉಪನ್ಯಾಸಕಿ ಕಸ್ತೂರಿ ವಂದಿಸಿದರು. ಶಿಕ್ಷಕಿ ಚೇತನಾ ಕಾರ್‍ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಪ್ರತಿಭಾ ಸ್ಮರಣ ಸಂಚಿಕೆ ತಯಾರಿಯ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಜಿ.ಪಂ, ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಸವಣೂರು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಸವಣೂರು ಬೊಳ್ಳಿಬೊಲ್ಪು ತುಳುಕೂಟದ ಅಧ್ಯಕ್ಷ ಸತೀಶ್ ಬಲ್ಯಾಯ ಕನ್ನಡಕುಮೇರು, ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಕೆಡೆಂಜಿ, ಸಂಗೀತ ಪ್ರತಿಭೆ ಅಖಿಲಾ ನೆಕ್ರಾಜೆ, ಶಾಲಾ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ರಜತ ರಶ್ಮಿ ಊರಿನ ಹಬ್ಬ
ವಿದ್ಯಾರಶ್ಮಿ ವಿದ್ಯಾಲಯದ ರಜತ ಸಂಭ್ರಮದ ಬೆಳ್ಳಿಹಬ್ಬ `ರಜತ ರಶ್ಮಿ’ ದ. 26 ರಂದು ದಿನಪೂರ್ತಿ ಅದ್ದೂರಿಯಾಗಿ ನಡೆಯಲಿದೆ. ಈ ಸುಂದರವಾದ ಕಾರ್‍ಯಕ್ರಮ ಅರ್ಥಪೂರ್ಣ ರೀತಿಯಲ್ಲಿ ನಡೆಯುವಲ್ಲಿ ಸಂಸ್ಥೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು, ಊರ-ಪರವೂರ ಹಿತೈಷಿಗಳ ಪೂರ್ಣ ಸಹಕಾರ ಅಗತ್ಯ ಇದೆ. ರಜತ ರಶ್ಮಿ ಕಾರ್‍ಯಕ್ರಮ ಊರಿನ ಹಬ್ಬದಂತೆ ಆಗಲಿದೆ.
-ಸವಣೂರು ಸೀತಾರಾಮ ರೈ, ಸಂಚಾಲಕರು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು
-
ನಿಧನ ವಾರ್ತೆ21 hours agoMangaluru-ಮಂಗಳೂರು: ರಸ್ತೆ ದಾಟುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಬಸ್ ಹರಿದು ಸಾವು
-
ಬಿಗ್ ನ್ಯೂಸ್16 hours agoVitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
-
ಅಪರಾಧ21 hours agoPunacha-ಪುಣಚದಲ್ಲಿ ಬೈಕ್ಗೆ ಕಾರು ಡಿಕ್ಕಿ; ಸವಾರನಿಗೆ ಗಂಭೀರ ಗಾಯ – ನಿಲ್ಲಿಸದೆ ಪರಾರಿಯಾದ ಕಾರು?
-
ಅಂತರ ರಾಜ್ಯ21 hours agoChennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!
-
ಅಪರಾಧ21 hours agoPunacha-ಪುಣಚ: ಪತ್ನಿಯನ್ನು ಕೊಲೆಗೈದು ಹೃದಯಾಘಾತವೆಂದು ಬಿಂಬಿಸಲು ಯತ್ನ: ಪತಿಗೆ 5 ವರ್ಷ ಜೈಲು..!
-
ಬಿಗ್ ನ್ಯೂಸ್16 hours agoVirupaksha Bhat-ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ: ಅನುಮತಿಯಿಲ್ಲದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ; ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ನಿಯಮಬದ್ಧ ಆಡಳಿತಕ್ಕೆ ಆಗ್ರಹ : ದೂರುದಾರ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ
-
ರಾಜಕೀಯ21 hours agoKumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ
-
ಅಪರಾಧ19 hours agoBantwal-ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಗುಂಪುಗೂಡಿ ಗಲಾಟೆ; ಟೋಲ್ ಉಪಕರಣಗಳಿಗೆ ಹಾನಿ ಯತ್ನ – ಪ್ರಕರಣ ದಾಖಲು















