ಚಿನ್ನ-ಬೆಳ್ಳಿ ದರ
Gold Rate Today – ಆಭರಣ ಖರೀದಿಗೆ ಶುಭದಿನ-ಚಿನ್ನ-ಬೆಳ್ಳಿ ಬೆಲೆ ಇಂದು ಕೊಂಚ ಇಳಿಕೆ-ಇಲ್ಲಿದೆ ಇವತ್ತಿನ ದರ ಪಟ್ಟಿ
ಕಳೆದ ಕೆಲವು ದಿನಗಳಿಂದಲೂ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ದರ ಇಂದು ಕೊಂಚ ತಗ್ಗಿದೆ. ಭಾರತದಲ್ಲಿ ಇಂದು 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ.ಗೆ 50 ರೂಪಾಯಿ ಇಳಿಕೆಯಾಗಿದ್ದು, 100 ಗ್ರಾಂ.ಗೆ 500 ರೂಪಾಯಿ ಇಳಿಕೆ ಕಂಡಿದೆ. ಇದು ಬಂಗಾರ ಕೊಳ್ಳುವ ಬಯಕೆಯಲ್ಲಿ ಇರುವವರಿಗೆ ತುಸು ನಿರಾಳ ತಂದಿದೆ. ಯುಎಸ್ ಫೆಡರಲ್ ರಿಸರ್ವ್ ತನ್ನ ಬಡ್ಡಿದರಗಳ ರೇಟ್ ಕಡಿತಗೊಳಿಸಿದ ಬೆನ್ನಲ್ಲೇ ಚಿನ್ನದ ಬೆಲೆ ನಿರಂತರವಾಗಿ ಏರುತ್ತಲೇ ಇತ್ತು.
ಕಳೆದ ಕೆಲವು ದಿನಗಳಿಂದಲೂ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ದರ ಇಂದು ಕೊಂಚ ತಗ್ಗಿದೆ. ಭಾರತದಲ್ಲಿ ಇಂದು 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ.ಗೆ 50 ರೂಪಾಯಿ ಇಳಿಕೆಯಾಗಿದ್ದು, 100 ಗ್ರಾಂ.ಗೆ 500 ರೂಪಾಯಿ ಇಳಿಕೆ ಕಂಡಿದೆ. ಇದು ಬಂಗಾರ ಕೊಳ್ಳುವ ಬಯಕೆಯಲ್ಲಿ ಇರುವವರಿಗೆ ತುಸು ನಿರಾಳ ತಂದಿದೆ. ಯುಎಸ್ ಫೆಡರಲ್ ರಿಸರ್ವ್ ತನ್ನ ಬಡ್ಡಿದರಗಳ ರೇಟ್ ಕಡಿತಗೊಳಿಸಿದ ಬೆನ್ನಲ್ಲೇ ಚಿನ್ನದ ಬೆಲೆ ನಿರಂತರವಾಗಿ ಏರುತ್ತಲೇ ಇತ್ತು.
ದೇಶದಲ್ಲಿ ಚಿನ್ನದ ದರ:
ಭಾರತದಲ್ಲಿ ಇಂದು 24 ಕ್ಯಾರೆಟ್ ಚಿನ್ನ, 10 ಗ್ರಾಂ.ಗೆ 77,400 ರೂಪಾಯಿ ಇದೆ. ಇದು ನಿನ್ನೆಗಿಂತಲೂ 50 ರೂಪಾಯಿ ಕಡಿಮೆ. ಹಾಗೇ, 100 ಗ್ರಾಂ.ಗೆ 7,74,000 ರೂ. ಗಳಷ್ಟಿದ್ದು, ಇದು ನಿನ್ನೆಗಿಂತಲೂ 500 ರೂಪಾಯಿ ಕಡಿಮೆ. ಇನ್ನು 22 ಕ್ಯಾರೆಟ್ ಚಿನ್ನ, 10 ಗ್ರಾಂ.ಗೆ 70,950 ರೂಪಾಯಿ ಆಗಿದ್ದು, ನಿನ್ನೆ (ಸೆ.27)ಗಿಂತಲೂ 50 ರೂ.ಇಳಿಕೆಯಾಗಿದೆ ಮತ್ತು 100 ಗ್ರಾಂ.ಗೆ 7,09,500 ರೂ. ಆಗಿದ್ದು, ನಿನ್ನೆಗಿಂತ 500 ರೂ.ತಗ್ಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಗಣನೀಯವಾಗಿ ಇಳಿಕೆ ಕಂಡಿದೆ. ಇದು 10 ಗ್ರಾಂ.ಗೆ 58,050 ರೂ.ಆಗಿದ್ದು, 40 ರೂ.ಇಳಿಕೆಯಾಗಿದೆ. ಹಾಗೇ, 100 ಗ್ರಾಂ ಚಿನ್ನದ ಬೆಲೆ 400 ರೂ.ಇಳಿದಿದ್ದು, 5,80,500 ರೂ.ಗೆ ತಲುಪಿದೆ.
ಬೆಳ್ಳಿ ಬೆಲೆ:
ದೇಶದಲ್ಲಿ ಇಂದು ಬೆಳ್ಳಿಯ ಬೆಲೆಯಲ್ಲೂ ಇಳಿಕೆಯಾಗಿದೆ. ಇಂದು 1 ಕೆಜಿ ಬೆಳ್ಳಿಗೆ ಸುಮಾರು 1000 ರೂಪಾಯಿ ಕಡಿಮೆಯಾಗಿದ್ದು, 95 ಸಾವಿರಕ್ಕೆ ಇಳಿಕೆಯಾಗಿದೆ. 100ಗ್ರಾಂ. ಬೆಳ್ಳಿಗೆ 100 ರೂ.ಇಳಿಕೆಯಾಗಿದ್ದು, 9500 ರೂ.ಇದೆ. ಹಾಗಿದ್ದಾಗ್ಯೂ ಚೆನ್ನೈ, ಹೈದರಾಬಾದ್, ಕೇರಳ ರಾಜ್ಯಗಳಲ್ಲಿ 1 ಕೆಜಿ ಬೆಳ್ಳಿ ಬೆಲೆ ಲಕ್ಷ ರೂಪಾಯಿ ದಾಟಿದ್ದು, ಗ್ರಾಹಕರಿಗೆ ತಲೆನೋವು ತಂದಿದೆ.
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ಬೆಲೆ:
ಬೆಂಗಳೂರಿನಲ್ಲಿಯೂ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನ, 10 ಗ್ರಾಂ.ಗೆ 70,950 ರೂ., 100 ಗ್ರಾಂ.ಗೆ 7,09,500 ರೂ. ಇದೆ. 24 ಕ್ಯಾರೆಟ್ ಚಿನ್ನ, 10 ಗ್ರಾಂ.ಗೆ 77,400 ರೂಪಾಯಿ ಮತ್ತು 100 ಗ್ರಾಂ.ಗೆ 7,74,000 ರೂ. ಆಗಿದೆ. ಇನ್ನು 18 ಕ್ಯಾರೆಟ್ ಚಿನ್ನ, 10 ಗ್ರಾಂ.ಗೆ 58,050 ರೂ. ಮತ್ತು 100 ಗ್ರಾಂ.ಗೆ 5,80,500 ರೂ. ಆಗಿದೆ.
ಬೆಂಗಳೂರಲ್ಲಿ ಸಹ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನ, 10 ಗ್ರಾಂ.ಗೆ 50 ರೂಪಾಯಿ ಮತ್ತು 100 ಗ್ರಾಂ.ಗೆ 500 ರೂಪಾಯಿ ಇಳಿಕೆಯಾಗಿದ್ದು, 18 ಕ್ಯಾರೆಟ್ ಚಿನ್ನ, 10 ಗ್ರಾಂ.ಗೆ 40 ರೂಪಾಯಿ, 100 ಗ್ರಾಂ.ಗೆ 400 ರೂಪಾಯಿ ಇಳಿಕೆ ಕಂಡಿದೆ..
ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. ಇಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 5000 ರೂಪಾಯಿಗಳಷ್ಟು ಕಡಿಮೆಯಾಗಿದೆ. ನಿನ್ನೆ (ಸೆ.27) 90 ಸಾವಿರ ಇದ್ದ ಬೆಲೆ, ಇಂದು 85ಸಾವಿರಕ್ಕೆ ಇಳಿದಿದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 8,500 ರೂ. ಮತ್ತು 10 ಗ್ರಾಂ. ಬೆಳ್ಳಿ ಬೆಲೆ 850ಕ್ಕೆ ಇಳಿಕೆಯಾಗಿದೆ.
ವಿವಿಧ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ? (1 ಗ್ರಾಂ.ಗಳಲ್ಲಿ)
24 ಕ್ಯಾರೆಟ್ ಚಿನ್ನ..
ದೆಹಲಿ -7,755 ರೂಪಾಯಿ
ಮುಂಬೈ- 7,740 ರೂ.
ಚೆನ್ನೈ- 7,740 ರೂ.
ಕೋಲ್ಕತ್ತ – 7,740 ರೂಪಾಯಿ.
ಹೈದರಾಬಾದ್- 7,740 ರೂ.
22 ಕ್ಯಾರೆಟ್ ಚಿನ್ನ (1 ಗ್ರಾಂ.)
ದೆಹಲಿ -7,110 ರೂಪಾಯಿ
ಮುಂಬೈ- 7,095 ರೂ.
ಚೆನ್ನೈ- 7,095 ರೂ.,
ಕೋಲ್ಕತ್ತ – 7,095 ರೂಪಾಯಿ.
ಹೈದರಾಬಾದ್- 7,095 ರೂ.
ಚಿನ್ನ-ಬೆಳ್ಳಿ ದರ
Gold Rate Today -ಅಮೆರಿಕ-ಇರಾನ್ ಸಂಘರ್ಷದ ಎಫೆಕ್ಟ್: 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ ₹1.48 ಲಕ್ಷ; ಬೆಳ್ಳಿಯೂ ದುಬಾರಿ
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,940 ರೂ. ಏರಿಕೆಯಾಗಿದ್ದು, ಒಟ್ಟು ದರ 1,48,580 ರೂ. ತಲುಪಿದೆ. ಪ್ರತಿ ಗ್ರಾಂಗೆ 294 ರೂ. ಹೆಚ್ಚಳವಾಗಿದ್ದು, 14,858 ರೂ. ದಾಖಲಾಗಿದೆ. ಬೆಳ್ಳಿಯ ದರದಲ್ಲಿ ಇಂದು ಒಂದೇ ದಿನ 10,000 ರೂ. ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ 2,60,000 ರೂ. ನೊಂದಿಗೆ ಹೊಸ ದಾಖಲೆ ಬರೆದಿದೆ.
ಬೆಂಗಳೂರು: ಜಾಗತಿಕ ರಾಜಕೀಯ ಬೆಳವಣಿಗೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಭಾರಿ ಪ್ರಭಾವ ಬೀರಿದ್ದು, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇಂದಿನ ಚಿನ್ನದ ದರ ವಿವರ (ಜೂನ್ 12, 2026):
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ):
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,940 ರೂ. ಏರಿಕೆಯಾಗಿದ್ದು, ಒಟ್ಟು ದರ 1,48,580 ರೂ. ತಲುಪಿದೆ. ಪ್ರತಿ ಗ್ರಾಂಗೆ 294 ರೂ. ಹೆಚ್ಚಳವಾಗಿದ್ದು, 14,858 ರೂ. ದಾಖಲಾಗಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):
ಆಭರಣ ಚಿನ್ನದ ಬೆಲೆಯೂ ಏರಿಕೆಯ ಹಾದಿಯಲ್ಲಿದ್ದು, 10 ಗ್ರಾಂಗೆ 2,700 ರೂ. ಹೆಚ್ಚಳವಾಗಿದೆ. ಇದರೊಂದಿಗೆ 22 ಕ್ಯಾರೆಟ್ ಚಿನ್ನದ ಬೆಲೆ 1,36,200 ರೂ. ಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ:
ಬೆಳ್ಳಿಯ ದರದಲ್ಲಿ ಇಂದು ಒಂದೇ ದಿನ 10,000 ರೂ. ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ 2,60,000 ರೂ. ನೊಂದಿಗೆ ಹೊಸ ದಾಖಲೆ ಬರೆದಿದೆ.
ಬೆಲೆ ಏರಿಕೆಗೆ ಕಾರಣವೇನು?
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಇರಾನ್ ಪಡೆಗಳು ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿರುವುದು ಮತ್ತು ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದು ತೈಲ ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ. ಇದರ ಜೊತೆಗೆ ಒಮಾನ್ ಕರಾವಳಿಯಲ್ಲಿ ಭಾರತದ ಹಡಗುಗಳ ಮೇಲೆ ಸರಣಿ ದಾಳಿಗಳು ನಡೆದಿರುವುದು ಮಾರುಕಟ್ಟೆಯ ಏರುಪೇರಿಗೆ ಕಾರಣವಾಗಿದೆ.
ಆದರೆ, ಅಂತಿಮವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್ ಮೇಲಿನ ಯೋಜಿತ ದಾಳಿಯನ್ನು ರದ್ದುಗೊಳಿಸಿ, ಶಾಂತಿ ಸಂಧಾನಕ್ಕೆ ಮುಂದಾಗುವುದಾಗಿ ಹೇಳಿರುವುದು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಸಂಚಲನ ಮೂಡಿಸಿದೆ. ಸುರಕ್ಷಿತ ಹೂಡಿಕೆಯ ದೃಷ್ಟಿಯಿಂದ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಪುಷ್ಟಿ ನೀಡಿದೆ.
ಚಿನ್ನ-ಬೆಳ್ಳಿ ದರ
Gold Rate Today -ಆಭರಣ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್: ಒಂದೇ ದಿನ ಸಾವಿರ ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ..!
ವಾರದ ಮೊದಲ ದಿನವಾದ ಸೋಮವಾರ ಆಭರಣ ಖರೀದಿದಾರರಿಗೆ ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಜೂನ್ ತಿಂಗಳ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿರುವ ಚಿನ್ನದ ಬೆಲೆ, ಇಂದು ಮತ್ತಷ್ಟು ಕುಸಿತ ಕಾಣುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬೆಂಗಳೂರು: ವಾರದ ಮೊದಲ ದಿನವಾದ ಸೋಮವಾರ ಆಭರಣ ಖರೀದಿದಾರರಿಗೆ ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಜೂನ್ ತಿಂಗಳ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿರುವ ಚಿನ್ನದ ಬೆಲೆ, ಇಂದು ಮತ್ತಷ್ಟು ಕುಸಿತ ಕಾಣುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬೆಲೆ ಇಳಿಕೆಗೆ ಕಾರಣಗಳೇನು?
ಜಾಗತಿಕ ಮಾರುಕಟ್ಟೆಯಲ್ಲಿನ ಏರುಪೇರುಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರಿವೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿ, ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಹಾಗೂ ಹಣದುಬ್ಬರದ ಅಪಾಯಗಳ ನಡುವೆಯೂ ಹೂಡಿಕೆದಾರರು ಹೆಚ್ಚಿನ ಬಡ್ಡಿದರ ಸಿಗುವ ಸುರಕ್ಷಿತ ಕಡೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಚಿನ್ನದ ಮೇಲಿನ ಬೇಡಿಕೆ ಕುಸಿದು ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ವರದಿಯಾಗಿದೆ.
ಇಂದಿನ ಚಿನ್ನದ ಬೆಲೆ ವಿವರ (ಜೂನ್ 8):
24 ಕ್ಯಾರೆಟ್ ಚಿನ್ನ (ಅಪರಂಜಿ): ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1,040 ರೂಪಾಯಿ ಭಾರಿ ಇಳಿಕೆಯಾಗಿದೆ. ಇದರಿಂದಾಗಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15,169 ರೂಪಾಯಿಗೆ ತಲುಪಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 950 ರೂಪಾಯಿ ಕುಸಿತ ಕಂಡಿದೆ. ಇದರೊಂದಿಗೆ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 13,905 ರೂಪಾಯಿಯಾಗಿದೆ.
ಕಳೆದ 10 ದಿನಗಳ ಟ್ರೆಂಡ್:
ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಇಳಿಯುತ್ತಲೇ ಸಾಗಿದೆ. ಕಳೆದ 10 ದಿನಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 5,350 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನದ ಮೇಲೆ 4,900 ರೂಪಾಯಿ ಇಳಿಕೆಯಾಗಿರುವುದು ಮಧ್ಯಮ ವರ್ಗದ ಜನರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಚಿನ್ನ-ಬೆಳ್ಳಿ ದರ
Gold Rate Today -ಕದನ ವಿರಾಮದ ಬೆನ್ನಲ್ಲೇ ಭಾರಿ ಏರಿಕೆ ಕಂಡ ಚಿನ್ನ ಮತ್ತು ಬೆಳ್ಳಿ ದರ..! ಒಂದೇ ದಿನ ಕೆ.ಜಿ ಬೆಳ್ಳಿಗೆ ₹11,000 ಹೆಚ್ಚಳ..!
ಜಾಗತಿಕ ಮಾರುಕಟ್ಟೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆ ಕಂಡಿವೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿಯಂತೆ, ಬುಧವಾರ ಚಿನಿವಾರ ಪೇಟೆಯಲ್ಲಿ ಈ ಬೆಲೆಬಾಳುವ ಲೋಹಗಳ ಬೆಲೆ ಹೊಸ ದಾಖಲೆ ಬರೆದಿದೆ.
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆ ಕಂಡಿವೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿಯಂತೆ, ಬುಧವಾರ ಚಿನಿವಾರ ಪೇಟೆಯಲ್ಲಿ ಈ ಬೆಲೆಬಾಳುವ ಲೋಹಗಳ ಬೆಲೆ ಹೊಸ ದಾಖಲೆ ಬರೆದಿದೆ.
ಬೆಳ್ಳಿಯ ದರದಲ್ಲಿ ಭಾರಿ ಜಿಗಿತ:
ಬೆಳ್ಳಿಯ ದರವು ಪ್ರತಿ ಕೆ.ಜಿಗೆ ಬರೋಬ್ಬರಿ ₹11,000 ರಷ್ಟು ಏರಿಕೆಯಾಗಿದೆ. ಇದರಿಂದಾಗಿ ದೇಶದಲ್ಲಿ ಬೆಳ್ಳಿಯ ಬೆಲೆ ಈಗ ₹2.51 ಲಕ್ಷದ ಗಡಿ ತಲುಪಿದೆ.
ಚಿನ್ನದ ಬೆಲೆ ಎಷ್ಟು ಹೆಚ್ಚಳ?:
ಚಿನ್ನದ ದರದಲ್ಲೂ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದ್ದು, 10 ಗ್ರಾಂ (ಶೇ 99.9ರಷ್ಟು ಪರಿಶುದ್ಧತೆ) ಚಿನ್ನದ ಬೆಲೆಯಲ್ಲಿ ₹3,200 ಹೆಚ್ಚಳವಾಗಿದೆ. ಇದರೊಂದಿಗೆ 10 ಗ್ರಾಂ ಚಿನ್ನದ ಮಾರುಕಟ್ಟೆ ದರವು ₹1,56,400ಕ್ಕೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಹಠಾತ್ ಬೆಳವಣಿಗೆಗಳು ಮತ್ತು ಹೂಡಿಕೆದಾರರ ಒಲವು ದೇಶದ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದ್ದು, ಆಭರಣ ಖರೀದಿದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.


















