ಚಿನ್ನ-ಬೆಳ್ಳಿ ದರ
Gold Rate Today – ಆಭರಣ ಪ್ರಿಯರಿಗೆ ಟೆನ್ಷನ್ – ಮುಗಿಲು ಮುಟ್ಟುತ್ತಿದೆ ಚಿನ್ನ-ಬೆಳ್ಳಿ ಬೆಲೆ
ಚಿನ್ನ ಮತ್ತು ಬೆಳ್ಳಿ ಬೆಲೆ ಮುಗಿಲು ಮುಟ್ಟುತ್ತಿದೆ, ಅದರಲ್ಲೂ ಆಭರಣ ಪ್ರಿಯರಿಗೆ ಹೀಗೆ ಚಿನ್ನದ ಬೆಲೆ ಹಾಗೂ ಬೆಳ್ಳಿ ರೇಟ್ ಏರಿಕೆ ಕಾಣುತ್ತಿರುವುದು ಟೆನ್ಷನ್ ತರುತ್ತಿದೆ. ಯಾಕಂದ್ರೆ ಇದೇ ರೀತಿ ಹಳದಿ ಲೋಹ ಚಿನ್ನದ ಬೆಲೆ ಏರಿಕೆ ಕಾಣುತ್ತಿದ್ದರೆ ಮುಂದಿನ ದಿನಗಳಲ್ಲಿ ಬೆಲೆಯು ಇನ್ನಷ್ಟು ಎತ್ತರಕ್ಕೆ ಹೋಗಬಹುದು ಎಂಬ ಭಯ ಆವರಿಸಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆ ಮುಗಿಲು ಮುಟ್ಟುತ್ತಿದೆ, ಅದರಲ್ಲೂ ಆಭರಣ ಪ್ರಿಯರಿಗೆ ಹೀಗೆ ಚಿನ್ನದ ಬೆಲೆ ಹಾಗೂ ಬೆಳ್ಳಿ ರೇಟ್ ಏರಿಕೆ ಕಾಣುತ್ತಿರುವುದು ಟೆನ್ಷನ್ ತರುತ್ತಿದೆ. ಯಾಕಂದ್ರೆ ಇದೇ ರೀತಿ ಹಳದಿ ಲೋಹ ಚಿನ್ನದ ಬೆಲೆ ಏರಿಕೆ ಕಾಣುತ್ತಿದ್ದರೆ ಮುಂದಿನ ದಿನಗಳಲ್ಲಿ ಬೆಲೆಯು ಇನ್ನಷ್ಟು ಎತ್ತರಕ್ಕೆ ಹೋಗಬಹುದು ಎಂಬ ಭಯ ಆವರಿಸಿದೆ.
ಚಿನ್ನದ ಬೆಲೆ ಈಗ ಭಾರಿ ಏರಿಕೆ ಆಗುತ್ತಿದ್ದು, ಚಿನ್ನ ಖರೀದಿ ಮಾಡಲು ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಸಾಕಷ್ಟು ಜನರು ಮುಂದೆ ಬರುತ್ತಿದ್ದಾರೆ. ಹೀಗೆ ಚಿನ್ನ ಬೆಲೆಯು ದಿನದಿಂದ ದಿನಕ್ಕೆ ಭಾರಿ ಏರಿಕೆ ಕಾಣುತ್ತಿದೆ. ಕಳೆದ 15 ವರ್ಷಗಳಲ್ಲಿ ಚಿನ್ನದ ಬೆಲೆ 08 ರಿಂದ 10 ಪಟ್ಟು ಹೆಚ್ಚಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಚಿನ್ನ ಜಗತ್ತಿನಲ್ಲಿ ಸಿಗುತ್ತಿರುವುದೇ ಕಡಿಮೆ, ಹೀಗಾಗಿ ಚಿನ್ನಕ್ಕೆ ಜಗತ್ತಿನಾದ್ಯಂತ ಭರ್ಜರಿ ಬೇಡಿಕೆ ಬಂದಿದೆ. ಹಾಗಾದ್ರೆ ಈಗಿನ ಸ್ಥಿತಿ ನೋಡಿದರೆ ಚಿನ್ನದ ಬೆಲೆ 1 ಲಕ್ಷ ರೂಪಾಯಿ ತಲುಪಿಬಿಡುತ್ತಾ? ಇಲ್ಲಿದೆ ಮಾಹಿತಿ
ಚಿನ್ನದ ಬೆಲೆ 1 ಲಕ್ಷ ರೂ ತಲುಪುವ ನಿರೀಕ್ಷೆ?
ಭಾರತದ ಚಿನ್ನ ಮಾರುಕಟ್ಟೆಯಲ್ಲಿ ಇದೀಗ 24 ಕ್ಯಾರೆಟ್ ಅಂದ್ರೆ ಶುದ್ಧ ಚಿನ್ನದ ಬೆಲೆ 77,400 ರೂಪಾಯಿ ಆಗಿದ್ದು, 22 ಕ್ಯಾರೆಟ್ ಅಂದ್ರೆ ಆಭರಣ ಚಿನ್ನದ ಬೆಲೆಯು 70,950 ರೂಪಾಯಿ ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 58,050 ರೂಪಾಯಿ ಆಗಿದೆ. ಹೀಗಿದ್ದಾಗ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುವ ಸಾಧ್ಯತೆ ಇದ್ದು, ಈ ಮೂಲಕ ಚಿನ್ನದ ಬೆಲೆಯು 1 ಲಕ್ಷ ರೂಪಾಯಿ ತಲುಪುವ ನಿರೀಕ್ಷೆ ದಟ್ಟವಾಗಿದೆ. ಇದೇ ಕಾರಣಕ್ಕೆ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹಾಗಾದ್ರೆ ಬೆಳ್ಳಿ ಬೆಲೆ ಎಷ್ಟು ರೂಪಾಯಿ ಆಗಬಹುದು? ಮುಂದೆ ಓದಿ.
ಬೆಳ್ಳಿ ಬೆಲೆಯೂ ಏರಿಕೆ:
ಚಿನ್ನದ ರೀತಿಯಲ್ಲೇ ಬೆಳ್ಳಿ ಬೆಲೆ ಕೂಡ ಭಾರಿ ಪ್ರಮಾಣದ ಏರಿಕೆ ಕಾಣುತ್ತಿದ್ದು, ಈಗಾಗಲೇ ಒಂದು ಬಾರಿ ಬೆಳ್ಳಿ ಪ್ರತಿ 1 ಕೆಜಿಗೆ 1 ಲಕ್ಷ ರೂಪಾಯಿ ತಲುಪಿತ್ತು. ಇದೀಗ ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 88,000 ಸಾವಿರ ರೂಪಾಯಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಮತ್ತೆ 1 ಲಕ್ಷ ರೂಪಾಯಿ ದಾಟಿ ಮತ್ತೊಂದು ಹೊಸ ಹಂತಕ್ಕೆ ತಲುಪುವ ನಿರೀಕ್ಷೆ ಇದೆ. ಹೀಗಾಗಿ ಚಿನ್ನ & ಬೆಳ್ಳಿ ಬೆಲೆಯಲ್ಲಿ ಇದೀಗ ಭಾರಿ ಏರಿಳಿತ ಕಾಣುತ್ತಿದೆ. ಹಾಗೇ ಜಾಗತಿಕವಾಗಿ ಯುದ್ಧ ಭೀತಿ ಕೂಡ ಆವರಿಸಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗ್ತಾ ಇದೆ. ಇದರ ಜೊತೆ ಬೆಳ್ಳಿ ಕೂಡ ಇದೀಗ ಹೂಡಿಕೆ ಮಾಡುವವರ ಪಾಲಿಗೆ ಫೇವರಿಟ್ ಆಗಿದೆ.
ಚಿನ್ನ-ಬೆಳ್ಳಿ ದರ
Gold Rate Today -ಅಮೆರಿಕ-ಇರಾನ್ ಸಂಘರ್ಷದ ಎಫೆಕ್ಟ್: 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ ₹1.48 ಲಕ್ಷ; ಬೆಳ್ಳಿಯೂ ದುಬಾರಿ
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,940 ರೂ. ಏರಿಕೆಯಾಗಿದ್ದು, ಒಟ್ಟು ದರ 1,48,580 ರೂ. ತಲುಪಿದೆ. ಪ್ರತಿ ಗ್ರಾಂಗೆ 294 ರೂ. ಹೆಚ್ಚಳವಾಗಿದ್ದು, 14,858 ರೂ. ದಾಖಲಾಗಿದೆ. ಬೆಳ್ಳಿಯ ದರದಲ್ಲಿ ಇಂದು ಒಂದೇ ದಿನ 10,000 ರೂ. ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ 2,60,000 ರೂ. ನೊಂದಿಗೆ ಹೊಸ ದಾಖಲೆ ಬರೆದಿದೆ.
ಬೆಂಗಳೂರು: ಜಾಗತಿಕ ರಾಜಕೀಯ ಬೆಳವಣಿಗೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಭಾರಿ ಪ್ರಭಾವ ಬೀರಿದ್ದು, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇಂದಿನ ಚಿನ್ನದ ದರ ವಿವರ (ಜೂನ್ 12, 2026):
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ):
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,940 ರೂ. ಏರಿಕೆಯಾಗಿದ್ದು, ಒಟ್ಟು ದರ 1,48,580 ರೂ. ತಲುಪಿದೆ. ಪ್ರತಿ ಗ್ರಾಂಗೆ 294 ರೂ. ಹೆಚ್ಚಳವಾಗಿದ್ದು, 14,858 ರೂ. ದಾಖಲಾಗಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):
ಆಭರಣ ಚಿನ್ನದ ಬೆಲೆಯೂ ಏರಿಕೆಯ ಹಾದಿಯಲ್ಲಿದ್ದು, 10 ಗ್ರಾಂಗೆ 2,700 ರೂ. ಹೆಚ್ಚಳವಾಗಿದೆ. ಇದರೊಂದಿಗೆ 22 ಕ್ಯಾರೆಟ್ ಚಿನ್ನದ ಬೆಲೆ 1,36,200 ರೂ. ಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ:
ಬೆಳ್ಳಿಯ ದರದಲ್ಲಿ ಇಂದು ಒಂದೇ ದಿನ 10,000 ರೂ. ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ 2,60,000 ರೂ. ನೊಂದಿಗೆ ಹೊಸ ದಾಖಲೆ ಬರೆದಿದೆ.
ಬೆಲೆ ಏರಿಕೆಗೆ ಕಾರಣವೇನು?
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಇರಾನ್ ಪಡೆಗಳು ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿರುವುದು ಮತ್ತು ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದು ತೈಲ ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ. ಇದರ ಜೊತೆಗೆ ಒಮಾನ್ ಕರಾವಳಿಯಲ್ಲಿ ಭಾರತದ ಹಡಗುಗಳ ಮೇಲೆ ಸರಣಿ ದಾಳಿಗಳು ನಡೆದಿರುವುದು ಮಾರುಕಟ್ಟೆಯ ಏರುಪೇರಿಗೆ ಕಾರಣವಾಗಿದೆ.
ಆದರೆ, ಅಂತಿಮವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್ ಮೇಲಿನ ಯೋಜಿತ ದಾಳಿಯನ್ನು ರದ್ದುಗೊಳಿಸಿ, ಶಾಂತಿ ಸಂಧಾನಕ್ಕೆ ಮುಂದಾಗುವುದಾಗಿ ಹೇಳಿರುವುದು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಸಂಚಲನ ಮೂಡಿಸಿದೆ. ಸುರಕ್ಷಿತ ಹೂಡಿಕೆಯ ದೃಷ್ಟಿಯಿಂದ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಪುಷ್ಟಿ ನೀಡಿದೆ.
ಚಿನ್ನ-ಬೆಳ್ಳಿ ದರ
Gold Rate Today -ಆಭರಣ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್: ಒಂದೇ ದಿನ ಸಾವಿರ ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ..!
ವಾರದ ಮೊದಲ ದಿನವಾದ ಸೋಮವಾರ ಆಭರಣ ಖರೀದಿದಾರರಿಗೆ ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಜೂನ್ ತಿಂಗಳ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿರುವ ಚಿನ್ನದ ಬೆಲೆ, ಇಂದು ಮತ್ತಷ್ಟು ಕುಸಿತ ಕಾಣುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬೆಂಗಳೂರು: ವಾರದ ಮೊದಲ ದಿನವಾದ ಸೋಮವಾರ ಆಭರಣ ಖರೀದಿದಾರರಿಗೆ ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಜೂನ್ ತಿಂಗಳ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿರುವ ಚಿನ್ನದ ಬೆಲೆ, ಇಂದು ಮತ್ತಷ್ಟು ಕುಸಿತ ಕಾಣುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬೆಲೆ ಇಳಿಕೆಗೆ ಕಾರಣಗಳೇನು?
ಜಾಗತಿಕ ಮಾರುಕಟ್ಟೆಯಲ್ಲಿನ ಏರುಪೇರುಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರಿವೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿ, ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಹಾಗೂ ಹಣದುಬ್ಬರದ ಅಪಾಯಗಳ ನಡುವೆಯೂ ಹೂಡಿಕೆದಾರರು ಹೆಚ್ಚಿನ ಬಡ್ಡಿದರ ಸಿಗುವ ಸುರಕ್ಷಿತ ಕಡೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಚಿನ್ನದ ಮೇಲಿನ ಬೇಡಿಕೆ ಕುಸಿದು ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ವರದಿಯಾಗಿದೆ.
ಇಂದಿನ ಚಿನ್ನದ ಬೆಲೆ ವಿವರ (ಜೂನ್ 8):
24 ಕ್ಯಾರೆಟ್ ಚಿನ್ನ (ಅಪರಂಜಿ): ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1,040 ರೂಪಾಯಿ ಭಾರಿ ಇಳಿಕೆಯಾಗಿದೆ. ಇದರಿಂದಾಗಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15,169 ರೂಪಾಯಿಗೆ ತಲುಪಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 950 ರೂಪಾಯಿ ಕುಸಿತ ಕಂಡಿದೆ. ಇದರೊಂದಿಗೆ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 13,905 ರೂಪಾಯಿಯಾಗಿದೆ.
ಕಳೆದ 10 ದಿನಗಳ ಟ್ರೆಂಡ್:
ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಇಳಿಯುತ್ತಲೇ ಸಾಗಿದೆ. ಕಳೆದ 10 ದಿನಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 5,350 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನದ ಮೇಲೆ 4,900 ರೂಪಾಯಿ ಇಳಿಕೆಯಾಗಿರುವುದು ಮಧ್ಯಮ ವರ್ಗದ ಜನರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಚಿನ್ನ-ಬೆಳ್ಳಿ ದರ
Gold Rate Today -ಕದನ ವಿರಾಮದ ಬೆನ್ನಲ್ಲೇ ಭಾರಿ ಏರಿಕೆ ಕಂಡ ಚಿನ್ನ ಮತ್ತು ಬೆಳ್ಳಿ ದರ..! ಒಂದೇ ದಿನ ಕೆ.ಜಿ ಬೆಳ್ಳಿಗೆ ₹11,000 ಹೆಚ್ಚಳ..!
ಜಾಗತಿಕ ಮಾರುಕಟ್ಟೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆ ಕಂಡಿವೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿಯಂತೆ, ಬುಧವಾರ ಚಿನಿವಾರ ಪೇಟೆಯಲ್ಲಿ ಈ ಬೆಲೆಬಾಳುವ ಲೋಹಗಳ ಬೆಲೆ ಹೊಸ ದಾಖಲೆ ಬರೆದಿದೆ.
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆ ಕಂಡಿವೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿಯಂತೆ, ಬುಧವಾರ ಚಿನಿವಾರ ಪೇಟೆಯಲ್ಲಿ ಈ ಬೆಲೆಬಾಳುವ ಲೋಹಗಳ ಬೆಲೆ ಹೊಸ ದಾಖಲೆ ಬರೆದಿದೆ.
ಬೆಳ್ಳಿಯ ದರದಲ್ಲಿ ಭಾರಿ ಜಿಗಿತ:
ಬೆಳ್ಳಿಯ ದರವು ಪ್ರತಿ ಕೆ.ಜಿಗೆ ಬರೋಬ್ಬರಿ ₹11,000 ರಷ್ಟು ಏರಿಕೆಯಾಗಿದೆ. ಇದರಿಂದಾಗಿ ದೇಶದಲ್ಲಿ ಬೆಳ್ಳಿಯ ಬೆಲೆ ಈಗ ₹2.51 ಲಕ್ಷದ ಗಡಿ ತಲುಪಿದೆ.
ಚಿನ್ನದ ಬೆಲೆ ಎಷ್ಟು ಹೆಚ್ಚಳ?:
ಚಿನ್ನದ ದರದಲ್ಲೂ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದ್ದು, 10 ಗ್ರಾಂ (ಶೇ 99.9ರಷ್ಟು ಪರಿಶುದ್ಧತೆ) ಚಿನ್ನದ ಬೆಲೆಯಲ್ಲಿ ₹3,200 ಹೆಚ್ಚಳವಾಗಿದೆ. ಇದರೊಂದಿಗೆ 10 ಗ್ರಾಂ ಚಿನ್ನದ ಮಾರುಕಟ್ಟೆ ದರವು ₹1,56,400ಕ್ಕೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಹಠಾತ್ ಬೆಳವಣಿಗೆಗಳು ಮತ್ತು ಹೂಡಿಕೆದಾರರ ಒಲವು ದೇಶದ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದ್ದು, ಆಭರಣ ಖರೀದಿದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
-
ಬಿಗ್ ನ್ಯೂಸ್12 hours agoBantwal-Big Breaking-ದ.ಕ. ಜಿಲ್ಲೆಯಲ್ಲಿ ಗುಡುಗು-ಮಿಂಚಿನ ಮಳೆ: ಸಿಡಿಲು ಬಡಿದು ಮನೆ ಜಖಂ-ಮಹಿಳೆ ಅಸ್ವಸ್ಥ
-
ನಿಧನ ವಾರ್ತೆ7 hours agoUppinangadi-ಉಪ್ಪಿನಂಗಡಿ: ಸೇತುವೆ ಮೇಲೆ ಬೈಕ್, ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ
-
ಅಪರಾಧ13 hours agoPuttur-ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ 11 ಗೋವುಗಳ ಸಾಗಾಟ; ವಾಹನ ಪತ್ತೆ, ಇಬ್ಬರು ಪರಾರಿ
-
ಅಂತರ ರಾಜ್ಯ11 hours agoMurder-ಆಸ್ತಿಗಾಗಿ ಬೆಲ್ಟ್ನಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ: ಆಕಸ್ಮಿಕ ಸಾವೆಂದು ನಂಬಿಸಿದ್ದ ಪತ್ನಿ ಅರೆಸ್ಟ್
-
ಸ್ಥಳೀಯ12 hours agoCrop insurance-ಬೆಳೆ ವಿಮೆಯಲ್ಲಿ ಭಾರೀ ಇಳಿಕೆ – ದ.ಕ. ಜಿಲ್ಲೆಯ ಅಡಿಕೆ, ಕಾಳುಮೆಣಸು ಬೆಳೆಗಾರರು ಶಾಕ್..!; ಬೇಗನೆ ಜಮೆಯಾದರೂ ಪರಿಹಾರ ಮೊತ್ತದಲ್ಲಿ ಭಾರೀ ಇಳಿಕೆ; ಲೆಕ್ಕಾಚಾರ ಬಹಿರಂಗಕ್ಕೆ ಆಗ್ರಹ
-
ನಿಧನ ವಾರ್ತೆ10 hours agoAccident-ಹುತಾತ್ಮ ಸೈನಿಕನ ಮೃತದೇಹ ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅಪಘಾತ: ಸೈನಿಕನ ಮಗ, ಸಹೋದರ ಸೇರಿ ನಾಲ್ವರು ಸಾವು
-
ನಿಧನ ವಾರ್ತೆ12 hours agoLalitamma-ಸುಂಟರಗಾಳಿ’, ‘ಜಂಗ್ಲಿ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ
-
ರಾಜಕೀಯ6 hours agoPuttur-ಪುತ್ತೂರು: ಅಲ್ಪಸಂಖ್ಯಾತ ಸೇವಾ ಕೇಂದ್ರ ಉದ್ಘಾಟನೆಗೆ ಬಿಜೆಪಿ ಮೋರ್ಚಾದಿಂದ ಆಗ್ರಹ


















