Connect with us

ಸುಳ್ಯ

Sullia-ಸುಳ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ : ಅಂಗಾರ ಮಂಜೂರುಗೊಳಿಸಿದ ಕಾಮಗಾರಿಗಳನ್ನು ಬದಲಾಯಿಸಿದ ಶಾಸಕಿ ಭಾಗೀರಥಿ ಮುರುಳ್ಯ – ಅಂಗಾರರಿಂದಲೂ ವಿರೋಧ..! ಕಾರ್ಯಕರ್ತನಿಂದ ಆಕ್ರೋಶ

Published

on



Ad Widget

Ad Widget

Ad Widget

Ad Widget
Ad Widget

Ad Widget

Ad Widget

Ad Widget

ಹಿಂದಿನ ಸರಕಾರದ ಅವಧಿಯಲ್ಲಿ ಅಂದಿನ ಶಾಸಕರ ಶಿಫಾರಸಿನಂತೆ ಮಳೆಹಾನಿ ಯೋಜನೆಯಡಿ ಮಂಜೂರಾದ ಕೆಲವು ಕಾಮಗಾರಿಗಳನ್ನು ಈಗಿನ ಶಾಸಕಿ ಬದಲಾಯಿಸಿದ್ದಾರೆಂಬ ವಿಚಾರ ಸುಳ್ಯ ಬಿಜೆಪಿಯಲ್ಲಿ ವಿವಾದದ ಅಲೆ ಎಬ್ಬಿಸಿದೆ. ಬಿಜೆಪಿ ಕಾರ್ಯಕರ್ತ ಸುಪ್ರೀತ್ ಮೋಂಟಡ್ಕ ಎಂಬವರು ಈ ಬದಲಾವಣೆಯಿಂದ ರೊಚ್ಚಿಗೆದ್ದಿದ್ದು ಪಕ್ಷದ ಮಂಡಲಾಧ್ಯಕ್ಷರಿಗೆ ಮತ್ತು ಜಿಲ್ಲಾಧ್ಯಕ್ಷರಿಗೆ ದೂರು ನೀಡಿದ್ದಾರೆ. ಈ ವಿಚಾರ ಪಕ್ಷದೊಳಗೆ ಚರ್ಚೆಯ ವಿಷಯವಾಗಿದ್ದು ಬದಲಾವಣೆ ಮಾಡಿದ್ದು ಸರಿಯೇ – ತಪ್ಪೇ ಎಂಬ ಕುರಿತು ಜಿಜ್ಞಾಸೆ ಆರಂಭವಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

2022 – 23ನೇ ಸಾಲಿನಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಸೇತುವೆ, ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ,, ಸರಕಾರ ಕಟ್ಟಡಗಳು ಹಾಗೂ ಕೆರೆಗಳ ದುರಸ್ತಿಗಾಗಿ ಮಳೆ ಪರಿಹಾರ ಕಾರ್ಯಕ್ರಮದಡಿ 9.12.2022 ರ ಆದೇಶದ.ತೆ 3 ಕೋಟಿ ರೂ. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿತ್ತು. ಈ ಅನುದಾನದಲ್ಲಿ 20 ಕಾಮಗಾರಿಗಳನ್ನು ಮಾಡಲು ಆಗಿನ ಶಾಸಕ, ಸಚಿವ ಎಸ್.ಅಂಗಾರರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಪತ್ರ ನೀಡಿದ್ದರು.

Ad Widget

Ad Widget <> Ad Widget

ಐವರ್ನಾಡು ಗ್ರಾಮದ ಕಲ್ಲೋಣಿ – ಕುಳ್ಳಂಪಾಡಿ ರಸ್ತೆ ಅಭಿವೃದ್ಧಿ (25 ಲಕ್ಷ), ಐವರ್ನಾಡು ದೇರಾಜೆ ರಸ್ತೆ ಅಭಿವೃದ್ಧಿ (25 ಲಕ್ಷ), ಕೊಡಿಯಾಲಬೈಲು – ಕಮಿಲಡ್ಕ ರಸ್ತೆ ಅಭಿವೃದ್ಧಿ (25 ಲಕ್ಷ), ಅಮರಮುನ್ನೂರು ಗ್ರಾಮದ ಕುಡುಂಬಿಲ – ಕಂಜರ್ಪಣೆ ರಸ್ತೆ ಅಭಿವೃದ್ಧಿ (15 ಲಕ್ಷ), ಕಳಂಜ ಗ್ರಾಮದ ಶೇಣಿ – ಪುಂಡೂರು ರಸ್ತೆ ಅಭಿವೃದ್ಧಿ (15 ಲಕ್ಷ), ಜಾಲ್ಲೂರು ಗ್ರಾಮದ ಆರ್ತಾಜೆ – ನಡುಬೆಟ್ಟು ರಸ್ತೆ ಅಭಿವೃದ್ಧಿ (15 ಲಕ್ಷ), ಜಾಲ್ಲೂರು ಗ್ರಾಮದ ಮೋಂಟಡ್ಕ – ಕುಕ್ಕಂದೂರು – ದೆಯ್ಯಾರ ಮಾಡ ರಸ್ತೆ ಅಭಿವೃದ್ಧಿ (15 ಲಕ್ಷ), ಅಜ್ಞಾವರ ಗ್ರಾಮದ ಓಡಬಾಯಿ ತೂಗುಸೇತುವೆ ದುರಸ್ತಿ (10 ಲಕ್ಷ), ಕೊಡಿಯಾಲಬೈಲು ಸರಕಾರಿ ಕಸ್ತೂರಿ ಪ್ರಥಮ ದರ್ಜೆ ಕಾಲೇಜ್ ರಸ್ತೆಯ ಮುಂಭಾಗ ಇಂಟರ್ಲಾಕ್ ಅಳವಡಿಕೆ (5 ಲಕ್ಷ), ಅಮರಮುಡ್ಡಿರು ಗ್ರಾಮದ ಬೊಳ್ಕೊಡಿ – ಇಟ್ಟಿಗುಂಡಿ ರಸ್ತೆ ಅಭಿವೃದ್ಧಿ (15 ಲಕ್ಷ), ಅಜ್ಞಾವರ ಗ್ರಾಮದ ದೊಡ್ಡರಿ ಕಿರಿಯ ಪಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣ (7 ಲಕ್ಷ), ಸುಳ್ಯ ಗಾಂಧಿನಗರದ ಸರಕಾರಿ ಪ್ರೌಢಶಾಲೆಯ ಕಟ್ಟಡ ದುರಸ್ತಿ (8.89 ಲಕ್ಷ), ಏನೆಕಲ್ ಗ್ರಾಮದ ಅಂಗಾರವರ್ಮ ಕೆರೆಯ ದುರಸ್ತಿ (4.26 ಲಕ್ಷ) ಅಲ್ಲದೆ ಕಡಬ ಕರಡು ತಾಲೂಕು ವ್ಯಾಪ್ತಿಯ ಕೆಲವು ಕಾಮಗಾರಿಗಳು ಸೇರಿ 20 ಕಾಮಗಾರಿಗಳು ಅಂಗಾರರಿಂದ ಸೂಚಿಸಲ್ಪಟ್ಟಿದ್ದವು.



Ad Widget

ಚುನಾವಣೆಯ ಹೊಸ್ತಿಲಲ್ಲಿ ಈ ಕಾಮಗಾರಿಗಳು ಮಂಜೂರಾದುದರಿಂದ ಇದಕ್ಕೆ ಹಣ ಬಂದಿರಲಿಲ್ಲವೆನ್ನಲಾಗಿದೆ. ಕೆಲವು ಕಾಮಗಾರಿಗಳನ್ನು ಗುತ್ತಿಗೆದಾರರು ಹಣ ಬರುವ ಭರವಸೆಯಲ್ಲಿ ಮಾಡಿದ್ದರೆಂದೂ ಹೇಳಲಾಗುತ್ತಿದೆ. ಇದರಲ್ಲಿ ಸುಮಾರು 16 ಕಾಮಗಾರಿಗಳನ್ನು ಅಂಗಾರರು ನಿರ್ಮಿತಿ ಕೇಂದ್ರದ ಮೂಲಕ ಮಾಡಲು ಸೂಚನೆ ನೀಡಿದ್ದರು.

Ad Widget

Ad Widget

ರಾಜ್ಯದಲ್ಲಿ ಹೊಸ ಸರಕಾರ ಹಾಗೂ ಸುಳ್ಯ ಕ್ಷೇತ್ರದಲ್ಲಿ ಹೊಸ ಶಾಸಕರು ಚುನಾಯಿತರಾಗಿ ಬಂದ ಬಳಿಕ ಶಾಸಕರು ನಿರ್ಮಿತಿಗೆ ನೀಡಿದ 16 ಕಾಮಗಾರಿಗಳಲ್ಲಿ 6 ಕಾಮಗಾರಿಗಳಿಗೆ ಬದಲಿ ಪ್ರಸ್ತಾವನೆ ನೀಡಿದರೆನ್ನಲಾಗಿದೆ. ಆ ಸಂದರ್ಭ ಜಾಲ್ಲೂರು ಗ್ರಾಮದ ಆರ್ತಾಜೆ – ನಡುಬೆಟ್ಟು ರಸ್ತೆ ಅಭಿವೃದ್ಧಿ, ಮೋಂಟಡ್ಕ ಕುಕ್ಕಂದೂರು ರಸ್ತೆ ಅಭಿವೃದ್ಧಿ, ಬೊಳ್ಳೂಡಿ – ಇಟ್ಟಿಗುಂಡಿ ರಸ್ತೆ ಅಭಿವೃದ್ಧಿ, ಗಾಂಧಿನಗರ ಸರಕಾರಿ ಪ್ರೌಢಶಾಲಾ ಕೊಠಡಿ ದುರಸ್ತಿ ಮೊದಲಾದ 6 ಕಾಮಗಾರಿಗಳನ್ನು ಕೈಬಿಡಲಾಗಿತ್ತೆಂದು ತಿಳಿದು ಬಂದಿದೆ.

ಇದರಿಂದ ಆ ಭಾಗದ ಬಿಜೆಪಿ ಕಾರ್ಯಕರ್ತರು ಬೇಸರಗೊಂಡರೆಂದೂ, ಬೊಳುಬೈಲು ಮೋಂಟಡ್ಗದವರಾದ ಸುಪ್ರೀತ್ ಮೋಂಟಡ್ಕರವರು ಬಿಜೆಪಿ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಲಿಖಿತ ದೂರು ನೀಡಿದರೆಂದೂ ತಿಳಿದುಬಂದಿದೆ. ಅಂಗಾರರು ಮತ್ತು ಭಾಗೀರಥಿಯವರು ಒಂದೇ ಪಕ್ಷದವರಾಗಿರುವ ಕಾರಣ ಅಂಗಾರರು ಸಾಂಕ್ಷನ್ ಮಾಡಿಸಿಕೊಂಡಿದ್ದ ಕಾಮಗಾರಿಯಲ್ಲಿ ಭಾಗೀರಥಿಯವರು ಬದಲಾವಣೆ ಮಾಡಬಾರದಿತ್ತು ಎಂಬ ಅಭಿಪ್ರಾಯವನ್ನು ಪಕ್ಷದ ಕೆಲವು ನಾಯಕರು ಹೇಳುತ್ತಿದ್ದರೆ, ‘ಶಾಸಕರಾಗಿ ಕಾಮಗಾರಿಗಳನ್ನು ನಿಗದಿಪಡಿಸುವುದು ಭಾಗೀರಥಿಯವರ ಹಕ್ಕು. ಅವರೊಡನೆ ಕಾರ್ಯಕರ್ತರು ಒತ್ತಡ ಹೇರಿ ಕೆಲವು ಬದಲಾವಣೆ ಮಾಡಿಸಿರಬಹುದು’ ಎಂಬ ಅಭಿಪ್ರಾಯ ಹೇಳುವವರೂ ಇದ್ದಾರೆ. ಒಟ್ಟಿನಲ್ಲಿ ಈ ಬೆಳವಣಿಗೆ ಸುಳ್ಯದ ಬಿಜೆಪಿಯಲ್ಲಿ ಚರ್ಚೆಯ ವಿಷಯವಾಗಿದೆ.

ಹಿಂದೆ ಅಂಗಾರರು ಶಾಸಕರಾಗಿರುವಾಗ ಕಾಮಗಾರಿಗಳ ಪಾಟ್ಟಿ ಕೊಟ್ಟಿದ್ದರೂ, ಅದಕ್ಕೆ ಹಣ ಬಿಡುಗಡೆಯಾಗಿರಲಿಲ್ಲ. ನಾನು ಶಾಸಕಿಯಾದ ಬಳಿಕ ಸರಕಾರಕ್ಕೆ ಪತ್ರಕೊಟ್ಟು ಮುತುವರ್ಜಿ ವಹಿಸಿ ಹಣ ಬಿಡುಗಡೆ ಮಾಡಿಸಿದ್ದೇನೆ. ಅದೂ 3 ಕೋಟಿ ಪೂರ್ತಿ ಬಿಡುಗಡೆಯಾಗಿಲ್ಲ. ಮುಂದಕ್ಕೆ ಹಣ ತರಿಸಿಕೊಂಡು ಎಲ್ಲಾ ಕೆಲಸಗಳನ್ನು ಮಾಡಿಸುತ್ತೇನೆ. ಚುನಾವಣೆಯ ಸಂದರ್ಭ ಜನರ ಬಳಿ ಹೋದಾಗ ಕಾರ್ಯಕರ್ತರ ಬೇಡಿಕೆ. ಬಂದ ಮೇರೆಗೆ ಒಂದೆರಡು ಕಾಮಗಾರಿಗೆ ಬದಲಿ ಪ್ರಸ್ತಾವನೆ ನೀಡಿದ್ದೆ. ಅಂಗಾರರ ಪಟ್ಟಿಯಲ್ಲಿದ್ದ ಎಲ್ಲಾ ಕೆಲಸಗಳನ್ನೂ ಮಾಡಿಸುತ್ತೇನೆ.- ಕು. ಭಾಗೀರಥಿ ಮುರುಳ್ಯ, ಶಾಸಕರು.

ನಾನು ಕಾಮಗಾರಿಗಳ ಪಟ್ಟಿ ಕೊಟ್ಟಾಗ ಕೊಟ್ಟಾಗ ಅಲ್ಲಿನ ಅವಶ್ಯಕತೆ ಮತ್ತು ಕಾರ್ಯಕರ್ತರ ಬೇಡಿಕೆಯ ಆಧಾರದಲ್ಲಿ ಕೊಟ್ಟಿದ್ದೆವು. ಈಗ ಅದನ್ನು ಬದಲಾಯಿಸಿದರೆ ಸ್ಥಳೀಯರಿಗೆ ನೋವಾಗುತ್ತದೆ. ಹೆಚ್ಚುವರಿ ಅನುದಾನ ತರಿಸಿಕೊಂಡು ಬೇರೆ! ಕಾಮಗಾರಿ ಮಾಡಬೇಕೇ ಹೊರತು ಪಟ್ಟಿ ಬದಲಾಯಿಸುವುದಲ್ಲ.– ಎಸ್.ಅಂಗಾರ ಮಾಜಿ ಸಚಿವರು

ಅನ್ಯಾಯ ಸರಿಪಡಿಸದಿದ್ದರೆ ಕೋರ್ಟಿಗೆ ಹೋಗುತ್ತೇನೆ : ಸುಪ್ರೀತ್
ಅಂಗಾರರು ಶಾಸಕರಾಗಿರುವಾಗ ಮಂಜೂರುಗೊಳಿಸಿದ ಕಾಮಗಾರಿಗಳನ್ನು ಇವರು ಬದಲಾಯಿಸಿದ್ದು ಸರಿಯಲ್ಲ, ಅದಕ್ಕೆ ನಾವು ಎಷ್ಟು ಕಷ್ಟಪಟ್ಟಿದ್ದೇವೆ ಎಂದು ನನಗೆ ಮತ್ತು ಅಂಗಾರರಿಗೆ ಗೊತ್ತು, ನಾನು ಪಕ್ಷದ ಇಲ್ಲಿಯ ಅಧ್ಯಕ್ಷರಿಗೆ ಮತ್ತು ಜಿಲ್ಲೆಯ ಅಧ್ಯಕ್ಷರಿಗೆ ದೂರು ನೀಡಿದ್ದೇನೆ. ಸರಿಪಡಿಸುವುದಾಗಿ ಜಿಲ್ಲಾಧ್ಯಕ್ಷರು ಸತೀಶ್ ಕುಂಪಲರು ಹೇಳಿದ್ದಾರೆ. ಅನ್ಯಾಯ ಸರಿಪಡಿಸದಿದ್ದರೆ ನಾನು ನ್ಯಾಯಾಲಯಕ್ಕೆ ಹೋಗಿ ಸ್ಟೇ ಮಾಡಿಸುತ್ತೇನೆ ಎಂದು ಸುಪ್ರೀತ್ ಮೋಂಟಡ್ಕ ತಿಳಿಸಿದ್ದಾರೆ.

ನಾನು ಬದಲಾಯಿಸಿಲ್ಲ : ಕಂಜಿಪಿಲಿ
ಕಾಮಗಾರಿ ಬದಲಾಯಿಸಿದ್ದು ನಾನಲ್ಲ. ನಾನು ಮಂಡಲಾಧ್ಯಕ್ಷನಾಗಿರುವಾಗ ಕೆಲವು ಕಡೆಯ ಕಾಮಗಾರಿಗಳನ್ನು ನಾನು ತೀರಾ ಅವಶ್ಯಕತೆಯ ನೆಲೆಯಲ್ಲಿ ಬದಲಾವಣೆ ಮಾಡಿಸಿದ್ದೆ. ಅಧ್ಯಕ್ಷತೆಯ ಅವಧಿ ಮುಗಿದ ಬಳಿಕ ನಾನು ಹಸ್ತಕ್ಷೇಪ ಮಾಡಿಲ್ಲ. ಈ ಪಟ್ಟಿ ಬದಲಾವಣೆ ನನ್ನ ಅವಧಿಯಲ್ಲಿ ಆದುದಲ್ಲ. – ಹರೀಶ್ ಕಂಜಿಪಿಲಿ, ಬಿಜೆಪಿ ಮಾಜಿ ಅಧ್ಯಕ್ಷರು.

Ad Widget
Click to comment

Leave a Reply

ಸುಳ್ಯ

Sevaratna-ಕಲ್ಪವೃಕ್ಷದ ಕಾಯಕಯೋಗಿಗೆ ‘ಸೇವಾರತ್ನ’ ಗೌರವ; 20 ವರ್ಷಗಳ ನಿರಂತರ ಕಾಯಕಕ್ಕೆ ಅಚ್ಚುತ ನಾಯಕ್ ಕಿಲಂಗೋಡಿಯವರಿಗೆ ಜಿಲ್ಲಾಮಟ್ಟದ ಪ್ರಶಸ್ತಿ

Published

on



Ad Widget

Ad Widget

Ad Widget

Ad Widget

ಕಲ್ಪವೃಕ್ಷವೆಂದೇ ಕರೆಯಲ್ಪಡುವ ತೆಂಗಿನ ಮರವನ್ನು ಏರಿ, ಕಳೆದ ಎರಡು ದಶಕಗಳಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಕಳಂಜ ಗ್ರಾಮದ ಶ್ರೀ ಅಚ್ಚುತ ನಾಯಕ್ ಕಿಲಂಗೋಡಿಯವರು ತಮ್ಮ ಕಾಯಕನಿಷ್ಠೆ ಹಾಗೂ ಸೇವೆಯಿಂದ ಇದೀಗ ಜಿಲ್ಲಾಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.

Ad Widget

Ad Widget

Ad Widget

Ad Widget

ಸುಳ್ಯ: ಕಲ್ಪವೃಕ್ಷವೆಂದೇ ಕರೆಯಲ್ಪಡುವ ತೆಂಗಿನ ಮರವನ್ನು ಏರಿ, ಕಳೆದ ಎರಡು ದಶಕಗಳಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಕಳಂಜ ಗ್ರಾಮದ ಶ್ರೀ ಅಚ್ಚುತ ನಾಯಕ್ ಕಿಲಂಗೋಡಿಯವರು ತಮ್ಮ ಕಾಯಕನಿಷ್ಠೆ ಹಾಗೂ ಸೇವೆಯಿಂದ ಇದೀಗ ಜಿಲ್ಲಾಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆಕ್ಸಿಸ್ ಬ್ಯಾಂಕ್ ಹಾಗೂ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಿಂದ ಕೊಡಮಾಡುವ ಜಿಲ್ಲಾಮಟ್ಟದ ‘ಸೇವಾರತ್ನ ಪ್ರಶಸ್ತಿ’ಗೆ ಅಚ್ಚುತ ನಾಯಕ್ ಕಿಲಂಗೋಡಿಯವರನ್ನು ಆಯ್ಕೆ ಮಾಡಲಾಗಿದೆ.
ಒಕ್ಟೊಬರ್ 9ರಂದು ಸಂಜೆ 4.30ಕ್ಕೆ ಮoಗಳೂರಿನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Ad Widget

Ad Widget <> Ad Widget

ತೆಂಗಿನ ಮರವೇರುವುದು ಸುಲಭದ ಕೆಲಸವಲ್ಲ. ಮರದ ಎತ್ತರ, ಗಾಳಿಯ ವೇಗ, ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಮರದ ತುದಿಗೆ ಏರಿ ತೆಂಗಿನಕಾಯಿಗಳನ್ನು ಕೊಯ್ದು ಕೆಳಗಿಳಿಸುವ ಈ ಕಾಯಕಕ್ಕೆ ಧೈರ್ಯ, ದೈಹಿಕ ಸಾಮರ್ಥ್ಯ, ಕೌಶಲ್ಯ ಹಾಗೂ ಅಪಾರ ಅನುಭವದ ಅಗತ್ಯವಿದೆ. ಇಂತಹ ಅಪಾಯಭರಿತ ಕಾಯಕವನ್ನು ಅಚ್ಚುತ ನಾಯಕ್ ಅವರು ಕಳೆದ 20 ವರ್ಷಗಳಿಂದ ಅತ್ಯಂತ ಪ್ರಾಮಾಣಿಕತೆ ಮತ್ತು ಕಾಯಕನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದಾರೆ.
ಕಳಂಜ ಗ್ರಾಮಕ್ಕೆ ಮಾತ್ರ ಸೀಮಿತವಾಗದೆ ಸುಳ್ಯ ತಾಲೂಕು ಹಾಗೂ ಹೊರ ತಾಲೂಕುಗಳ ವಿವಿಧ ಪ್ರದೇಶಗಳಿಗೆ ತೆರಳಿ, ರೈತರು ಮತ್ತು ಸಾರ್ವಜನಿಕರ ತೆಂಗಿನ ಮರಗಳಿಂದ ತೆಂಗಿನಕಾಯಿಗಳನ್ನು ಕೊಯ್ದು ತೆಗೆದು ಕೊಡುವ ಸೇವೆಯನ್ನು ಅವರು ನಿರಂತರವಾಗಿ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅತ್ಯಗತ್ಯವಾಗಿರುವ ಈ ಸೇವೆಯನ್ನು ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ಮಾಡುತ್ತಿರುವುದು ಅವರ ಕಾಯಕದ ವಿಶೇಷತೆಯಾಗಿದೆ.



Ad Widget

ಮೌನ ಸಾಧಕರ ಸೇವೆಗೆ ಮತ್ತೊಂದು ಗೌರವ
ಅಚ್ಚುತ ನಾಯಕ್ ಅವರ ಸೇವೆಯನ್ನು ಈಗಾಗಲೇ ಹಲವು ಸಂಸ್ಥೆಗಳು ಗುರುತಿಸಿವೆ. ರೋಟರಿ ಕ್ಲಬ್ ಬೆಳ್ಳಾರೆ ಸಂಸ್ಥೆಯು 2018–19ನೇ ಸಾಲಿನಲ್ಲಿ ಅವರ ಸೇವೆಯನ್ನು ಗುರುತಿಸಿ ಗೌರವಿಸಿತ್ತು.
ಅದೇ ರೀತಿ ಜೆಸಿಐ ಬೆಳ್ಳಾರೆ ಸಂಸ್ಥೆಯು 2025ರಲ್ಲಿ ಅವರ ನಿರಂತರ ಹಾಗೂ ಶ್ರಮದಾಯಕ ಸೇವೆಯನ್ನು ಗುರುತಿಸಿ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿ ನೀಡಿ ಗೌರವಿಸಿತ್ತು.

Ad Widget

Ad Widget

ಯಾವುದೇ ಪ್ರಚಾರದ ಹಿಂದೆ ಹೋಗದೆ, ತನ್ನ ಶ್ರಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಪ್ರತಿದಿನವೂ ದುಡಿಯುತ್ತಿರುವ ಅಚ್ಚುತ ನಾಯಕ್ ಅವರು ನಿಜವಾದ ಮೌನ ಕಾಯಕಯೋಗಿ. ತೆಂಗಿನ ಮರದ ತುದಿಯಲ್ಲಿ ನಿಂತು ಅವರು ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೂ ಧೈರ್ಯ, ಪರಿಶ್ರಮ, ಕೌಶಲ್ಯ ಮತ್ತು ಕುಟುಂಬದ ಬದುಕಿಗಾಗಿ ನಡೆಸುವ ಪ್ರಾಮಾಣಿಕ ಹೋರಾಟವಿದೆ.

ಕಲ್ಪವೃಕ್ಷದೊಂದಿಗೆ ಎರಡು ದಶಕಗಳ ಕಾಲ ನಂಟು ಬೆಳೆಸಿಕೊಂಡಿರುವ ಅಚ್ಚುತ ನಾಯಕ್ ಅವರ ಕಾಯಕವು ಗ್ರಾಮೀಣ ಶ್ರಮಜೀವಿಗಳ ಬದುಕಿನ ಪ್ರತೀಕವಾಗಿದೆ. ರೈತರ ಅಗತ್ಯಕ್ಕೆ ಸ್ಪಂದಿಸುತ್ತಾ, ಅಪಾಯವನ್ನು ಲೆಕ್ಕಿಸದೆ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವ ಅವರ ಸೇವೆಗೆ ‘ಸೇವಾರತ್ನ’ ಪ್ರಶಸ್ತಿ ಮತ್ತೊಂದು ಸಾರ್ಥಕ ಗೌರವವಾಗಿದೆ.

ಕಾಯಕಕ್ಕೆ ಸಂದ ಸಾರ್ಥಕ ಗೌರವ
ಕಳೆದ 20 ವರ್ಷಗಳಿಂದ ತೆಂಗಿನ ಮರದ ತುದಿಯಲ್ಲಿ ಬೆವರು ಸುರಿಸಿ, ರೈತರು ಮತ್ತು ಸಾರ್ವಜನಿಕರಿಗೆ ಅಗತ್ಯವಾದ ಸೇವೆಯನ್ನು ಸಲ್ಲಿಸುತ್ತಿರುವ ಅಚ್ಚುತ ನಾಯಕ್ ಕಿಲಂಗೋಡಿಯವರಿಗೆ ದೊರೆಯುತ್ತಿರುವ ‘ಸೇವಾರತ್ನ’ ಪ್ರಶಸ್ತಿ, ಅವರ ಕಾಯಕನಿಷ್ಠೆಗೆ ಸಂದ ಗೌರವ ಮಾತ್ರವಲ್ಲದೆ, ಗ್ರಾಮೀಣ ಶ್ರಮಜೀವಿಗಳ ಪರಿಶ್ರಮಕ್ಕೂ ಸಂದ ಗೌರವವಾಗಿದೆ.

ಕಲ್ಪವೃಕ್ಷದ ಕಾಯಕಯೋಗಿಯ ಎರಡು ದಶಕಗಳ ನಿರಂತರ ಸೇವೆಗೆ ಇದೀಗ ‘ಸೇವಾರತ್ನ’ದ ಗೌರವದ ಕಿರೀಟ ದೊರೆತಿದೆ.

Ad Widget
Continue Reading

ಸುಳ್ಯ

ಸುಳ್ಯ :ಗ್ಯಾರೇಜ್‌ನಲ್ಲಿ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ

Published

on



Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆರೋಪಿಗಳನ್ನು ಸುಳ್ಯ ಐವರ್ನಾಡು ನಿವಾಸಿ ದಯಾನಂದ (30) ಹಾಗೂ ಸುಳ್ಯ ಕಸಬಾ ನಿವಾಸಿ ದರ್ಶನರಾಜು (23) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕದಲ್ಲಿ ಆ.26ರ ರಾತ್ರಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.120/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 326(g) ಅಡಿ ಪ್ರಕರಣ ದಾಖಲಾಗಿತ್ತು.



Ad Widget

ಪ್ರಕರಣದ ತನಿಖೆ ನಡೆಸಿದ ಸುಳ್ಯ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Continue Reading

ಸುಳ್ಯ

Dr. Deviprasad Kanattur-ಪಂಜ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆ ಅವ್ಯವಹಾರದ ಆರೋಪ; ಸತ್ಯ ಪ್ರಮಾಣಕ್ಕೆ ಡಾ. ದೇವಿಪ್ರಸಾದ್ ಕಾನತ್ತೂರ್ ನಿರ್ಧಾರ

Published

on



Ad Widget

Ad Widget

Ad Widget

Ad Widget

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.

Ad Widget

Ad Widget

Ad Widget

Ad Widget

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆಗಸ್ಟ್ 31 ರಂದು ಸೋಮವಾರ ಪೂರ್ವಾಹ್ನ ಶ್ರೀ ದೇವರು ಜಳಕ ಮಾಡುವ ಪವಿತ್ರ ನಾಗತೀರ್ಥ ನದಿಯಲ್ಲಿ ಸ್ನಾನಮಾಡಿ ದೇಗುಲದ ನಡೆಯಲ್ಲಿ ಬೆಳಗ್ಗಿನ ಮಹಾಪೂಜೆಯ ನಂತರ ನಾನು ಯಾವ ಅವ್ಯವಹಾರ ಮಾಡಿಲ್ಲ ಎಂದು ಸತ್ಯ ಪ್ರಮಾಣ ಮಾಡುತ್ತೇನೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರು ಹಾಗೂ ಪರಿವಾರ ದೈವಗಳು ಉತ್ತರ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಯಾರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರೂ ಪ್ರಮಾಣಕ್ಕೆ ಬರಲಿ ಎಂದು ಅವರು ತಿಳಿಸಿದ್ದಾರೆ.

Ad Widget

Ad Widget <> Ad Widget

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading