ಸುಳ್ಯ
Sullia-ಸುಳ್ಯ: ‘ದಿ ರಿದನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಲೋಕಾರ್ಪಣೆ
ಎ.ಎಚ್.ಆರ್. ಗ್ರೂಪ್ ನೇತೃತ್ವದ ದಿ ರಿದನ್ ಮಂದಿ ಫ್ಯಾಮಿಲಿ ರೆಸ್ಟೋರೆಂಟ್ ಸೋಮವಾರ ಸಂಜೆ ಸುಳ್ಯದಲ್ಲಿ ಉದ್ಘಾಟನೆಗೊಂಡಿತು.
ಸುಳ್ಯ: ಎ.ಎಚ್.ಆರ್. ಗ್ರೂಪ್ ನೇತೃತ್ವದ ದಿ ರಿದನ್ ಮಂದಿ ಫ್ಯಾಮಿಲಿ ರೆಸ್ಟೋರೆಂಟ್ ಸೋಮವಾರ ಸಂಜೆ ಸುಳ್ಯದಲ್ಲಿ ಉದ್ಘಾಟನೆಗೊಂಡಿತು.
ಸುಳ್ಯ ಪರಿವಾರಕಾನ ಮದರ್ ತೆರೆಸಾ ಚರ್ಚ್ ಧರ್ಮಗುರು ರೆ. ಫಾ. ಜೋಶಿ ನಿರಪ್ಪಾಲ್ ಮಾತನಾಡಿ, ಹೋಟೆಲ್, ರೆಸ್ಟೋರೆಂಟ್ ಗಳು ಉದ್ಯಮವಷ್ಟೇ ಅಲ್ಲ; ಅದು ಜನರ ಹಸಿವು ತಣಿಸುವ ಸೇವಾ ಕ್ಷೇತ್ರವೂ ಹೌದು. ಹಾಗಾಗಿ ದಿ ರಿದನ್ ಮಂದಿ ಗ್ರಾಹಕರ ಸಂತೃಪ್ತಿ ಗಳಿಸಲಿ ಎಂದು ಶುಭಹಾರೈಸಿದರು.
ರೆಡ್ ಕ್ರಾಸಿನ ಸುಧಾಕರ್ ರೈ ಮಾತನಾಡಿ, ಸುಳ್ಯದಲ್ಲಿ ಅನೇಕ ರೆಸ್ಟೋರೆಂಟ್’ಗಳಿದ್ದರೂ, ಮಂದಿ ಬಿರಿಯಾನಿಯ ಕಾನ್ಸೆಪ್ಟ್ ಹೊಸದು. ಉತ್ತಮ ಕಾನ್ಸೆಪ್ಟಲ್ಲಿ ದಿ ರಿದನ್ ಮಂದಿ ರೆಸ್ಟೋರೆಂಟ್ ನಿರ್ಮಿಸಿದ್ದಾರೆ. ಡಿಸೈನ್ ಕೂಡ ಚೆನ್ನಾಗಿದೆ. ಸುಳ್ಯಕ್ಕೆ ಹೊಸದು ಬರುವಾಗ ನಾವು ಸ್ವಾಗತಿಸಬೇಕು. ಇವರು ಸುಳ್ಯಕ್ಕೆ ಹೊಸತನ ನೀಡುತ್ತಾರೆ ಎಂದ ಅವರು, ಅಡಿಕೆಗೆ ದರ ಹೆಚ್ಚಾದರೆ ನಾವೆಲ್ಲಾ ಬಿರಿಯಾನಿ ತಿನ್ನುವವರೇ. ಬಂದವರೆಲ್ಲಾ ಸಂಸ್ಥೆಯ ಜೊತೆ ಉತ್ತಮ ಒಡನಾಟ ಇಟ್ಟುಕೊಳ್ಳಿ ಎಂದು ಹಾರೈಸಿದ ಅವರು ಸುಳ್ಯ ವಾಣಿಜ್ಯ ಸಂಘದ ಸದಸ್ಯರಾಗುವಂತೆ ಮನವಿ ಮಾಡಿಕೊಂಡರು.

ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮಾತನಾಡಿ, ಉತ್ತಮ ರೆಸ್ಟೋರೆಂಟಿನಲ್ಲಿ ಊಟ ಮಾಡಬೇಕು ಎನ್ನುವುದು ಎಲ್ಲರ ಕನಸು. ರೆಸ್ಟೋರೆಂಟ್ ನೋಡಿದಾಕ್ಷಣ ವಾಹನ ನಿಲ್ಲಿಸುವವರೇ ಹೆಚ್ಚಿದ್ದಾರೆ. ಮೆಲ್ಕಾರ್, ಪುತ್ತೂರಿನ ಸಂಪ್ಯ ಈಗ ಸುಳ್ಯದಲ್ಲಿ ದಿ ರಿದನ್ ಮಂದಿ ಬಂದಿದೆ. ಇದರ ಶಾಖೆಗಳು ಇನ್ನಷ್ಟು ಹೆಚ್ಚಾಗಲಿ ಎಂದು ಹಾರೈಸಿದರು.
ಲಯನ್ಸ್ ಮಾಜಿ ಗವರ್ನರ್ ಎಂ.ಬಿ. ಸದಾಶಿವ ಮಾತನಾಡಿ, ಸುಳ್ಯದ ಇತಿಹಾಸದಲ್ಲಿ ಹೋಟೆಲಿಗೆ ದೊಡ್ಡ ಇತಿಹಾಸವಿದೆ. ಅನೇಕ ರೀತಿಯ ಹೋಟೆಲ್ ಗಳಿತ್ತು. ರಾತ್ರಿ ಹೊತ್ತು ಬಂದ್ರೆ ಜಗಮಗಿಸುತ್ತಿರುವುದನ್ನು ಕಾಣಬಹುದು. ದೇಶದಲ್ಲೇ ಆಹಾರಕ್ಕೆ ದೊಡ್ಡ ವ್ಯವಸ್ಥೆ ಇದೆ. ಈ ದೇಶದಲ್ಲಿ ಶೇ. 70ರಷ್ಟು ಮಾಂಸಾಹಾರಿಗಳಿದ್ದಾರೆ. ಇದರಲ್ಲಿ ಮಂದಿ ಆಹಾರದ ವಿಶೇಷತೆ ಎಂದರೆ, ನಿಧಾನವಾಗಿ ಬೇಯಿಸುವುದು, ನೀರಿನಲ್ಲಿ ಬೇಯಿಸುವುದು ಹೀಗೆ ಅನೇಕ ರೀತಿಯಿವೆ. ಈ ರೆಸ್ಟೋರೆಂಟ್ ಶುಚಿ ರುಚಿಯಾಗಿರಲಿ. ಉತ್ತಮವಾಗಿ ಮೂಡಿಬರಲಿ ಎಂದು ಹಾರೈಸಿದರು.
ಸುಳ್ಯ ಪಟ್ಟಣ ಪಂಚಾಯತ್ ಮಾಜಿ ಸದಸ್ಯ, ಅಡ್ವೊಕೇಟ್ ಎಂ. ವೆಂಕಪ್ಪ ಗೌಡ ಮಾತನಾಡಿ, ಅತ್ಯಂತ ಆಕರ್ಷಕವಾಗಿದೆ ದಿ ರಿದನ್ ಮಂದಿ. ಮಡಿಕೇರಿ ಭಾಗದಿಂದ ಬರುವ ಯಾತ್ರಾರ್ಥಿಗಳು ಶುಚಿ – ರುಚಿಯಾದ ಹಾಗೂ ಪಾರ್ಕಿಂಗ್ ಇರುವ ಹೋಟೆಲ್ ಗಳನ್ನು ಅಪೇಕ್ಷೆ ಪಡ್ತಾರೆ. ಈ ಭಾಗದಲ್ಲಿರುವ ಇನ್ನೆರಡು ರೆಸ್ಟೋರೆಂಟ್ ಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಇದೆ. ಅದೇ ರೀತಿ ರಿದನ್ ಮಂದಿಯೂ ಕೂಡ. ಅರೇಬಿಕ್ ಡಿಶ್ ಸುಳ್ಯದಲ್ಲಿ ಹೊಸದು. ಒಳ್ಳೆ ಒಳ್ಳೆಯ ಸಂಸ್ಥೆಗಳು ಸುಳ್ಯಕ್ಕೆ ಬರುತ್ತಿದೆ. ಇದರ ಅರ್ಥ ಸುಳ್ಯ ಬೆಳೆಯುತ್ತಾ ಇದೆ ಎಂದು. ಇಂತಹ ಒಳ್ಳೆಯ ರೆಸ್ಟೋರೆಂಟ್ ಗಳು ಹೆಸರುವಾಸಿಯಾಗಬೇಕು. ಎಲ್ಲಾ ವರ್ಗದವರು ಇಲ್ಲಿಗೆ ಬರಬೇಕು. ಪ್ರೀತಿ – ವಿಶ್ವಾಸದ ಹೋಟೆಲ್ ಇದಾಗಲಿ ಎಂದು ಹಾರೈಸಿದರು.
ಸುಳ್ಯ ಪಪಂ ಸದಸ್ಯ ಶರೀಫ್ ಕಂಠಿ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಕೆಲಸ ನಡೆಯುತ್ತಿರುವುದನ್ನು ಕಂಡಿದ್ದೇವೆ. ಸುಳ್ಯದಲ್ಲಿ ಇಂತಹದ್ದೊಂದು ಸಂಸ್ಥೆ ಬಂದಿರುವುದು ಖುಷಿ ತಂದಿದೆ. ಈ ಉದ್ದಿಮೆ ಯಶಸ್ವಿಯಾಗಲಿ. ಈ ಗಾಂಧಿನಗರಕ್ಕೆ ಆಹಾರ ನಗರಿ ಎಂದು ಹೆಸರಿಸಬಹುದು. ಯಾಕೆಂದರೆ ಇಲ್ಲಿರುವಷ್ಟು ರೆಸ್ಟೋರೆಂಟ್ ಬೇರೆಲ್ಲಿಯೂ ಇಲ್ಲ ಎಂದರು.
ಕೃಷ್ಣ ಪ್ರಶಾಂತ್ ಮಾತನಾಡಿ, ಯಾತ್ರಾರ್ಥಿಗಳಿಗೆ ಉತ್ತಮವಾದ ರೆಸ್ಟೋರೆಂಟ್ ಇದು. ಸುಳ್ಯದ ಈ ಭಾಗ ಬಹಳಷ್ಟು ಬೆಳೆದಿದೆ. ರಿದನ್ ಮಂದಿ ಇನ್ನಷ್ಟು ಮೆರುಗನ್ನು ಸುಳ್ಯಕ್ಕೆ ನೀಡಿದೆ. ಈ ಉದ್ದಿಮೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭಹಾರೈಸಿದರು.
ಸುಳ್ಯ ತಾಲೂಕು ಸುಡಾ ಅಧ್ಯಕ್ಷ ಕೆ.ಎಂ. ಮುಸ್ತಫಾ ಮಾತನಾಡಿ, ಸುಳ್ಯದ ಜನತೆಗೆ ಆದರ್ಶಪ್ರಾಯವಾದ, ಅಪೇಕ್ಷಿತವಾದ ಹೋಟೆಲ್ ದಿ ರಿದನ್ ಮಂದಿ. ಉದ್ಯಮ ಕೇವಲ ಉದ್ಯಮವಲ್ಲ. ಅದು ಸಮಾಜಕ್ಕಾಗಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಮುಖ್ಯ. ಇಂತಹ ಉತ್ತಮ ಉದ್ಯಮಗಳು ನಮ್ಮೂರಿಗೆ ಬರಬೇಕಾದರೆ ಎದುರಾಗುವ ಅಡೆತಡೆಗಳನ್ನು ಪರಿಹರಿಸಿಕೊಡುವ ಕೆಲಸವೂ ಆಗಬೇಕು ಎಂದ ಅವರು, ಜನರು ರುಚಿಕರ, ಸ್ವಾದಿಷ್ಟವಾದ ಆಹಾರವನ್ನು ಹುಡುಕುತ್ತಾರೆ. ರಿದನ್ ಮಂದಿಯ ಜೊತೆಗೆ ಕುನಾಫಾ ಎಂಬ ಶುದ್ಧ ಸಸ್ಯಾಹಾರಿ ಆಹಾರ ಇದು. ಸಸ್ಯಾಹಾರಿಗಳು ಇದರ ಸವಿಯನ್ನು ಇಲ್ಲಿ ಸವಿಯಬಹುದು. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದಂತೆ, ಮೂಲ ಔಷಧಿ ಎಂದರೆ ಆಹಾರ. ಅದನ್ನು ಹೈಜಿನಿಕ್ ಆಗಿ ಸೇವಿಸಬೇಕು ಅನ್ತಾರೆ. ಇದನ್ನು ನಾವು ಪಾಲಿಸಬೇಕು ಎಂದ ಅವರು, ರಾತ್ರಿ ಹೊತ್ತು ಉದ್ಯಮಕ್ಕೆ ನಿರ್ಬಂಧ ಇದೆ. ಆದರೆ ಫುಡ್ ಡೆಲಿವರಿ ವ್ಯವಸ್ಥೆಗೆ ಅನುವು ಮಾಡಿ ಕೊಡುವಂತೆ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಮಾಡಿದರು.
ಇಸ್ಮಾಯಿಲ್ ಮಾತನಾಡಿ, ಸಾಂಪ್ರದಾಯಿಕ ಆಹಾರ ನೀಡುತ್ತಾ ಜನಮೆಚ್ಚುಗೆ ಗಳಿಸಿರುವ ದಿ ರಿದನ್ ಮಂದಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಆಗಲಿ ಎಂದು ಹಾರೈಸಿದರು.
ಉದ್ಯಮಿ ಎನ್.ಆರ್. ರಂಜಿತ್ ಮಾತನಾಡಿ, ಹೊಸ ಆಂಬಿಯೆನ್ಸಲ್ಲಿ ರೆಸ್ಟೋರೆಂಟ್ ಆರಂಭಗೊಂಡಿದೆ. ಸುಳ್ಯಕ್ಕೆ ಅತ್ಯಾಧುನಿಕ ಟಚ್ ನೀಡಲಾಗಿದೆ. ಖಂಡಿತವಾಗಿಯೂ ಇದು ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುಳ್ಯ ರೋಟರಿ ಕ್ಲಬ್ ಬುಲೆಟಿನ್ ಎಡಿಟರ್ ಅಬ್ದುಲ್ ಕಲಾಂ ಶುಭಹಾರೈಸಿದರು.
ಇದೇ ಸಂದರ್ಭ ವೆಲ್ಡಿಂಗಿನಲ್ಲಿ ಸಹಕರಿಸಿದ ಜಯರಾಮ್, ಟೈಲ್ಸ್ ಕೆಲಸದಲ್ಲಿ ಸಹಕರಿಸಿದ ಇನಾಸ್ ಜಟ್ಟಿಪಳ್ಳ, ಇಂಟೀರಿಯರ್ ನಲ್ಲಿ ಸಹಕರಿಸಿದ ಮಹಮ್ಮದ್ ರವೀಸ್, ಇಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗಿನಲ್ಲಿ ಇಕ್ಬಾಲ್, ಸಿವಿಲ್ ಇಂಜೀನಿಯರ್ ಮಹಮ್ಮದ್ ಅನಾಸ್, ಇಂಟೀರಿಯರ್ ಹಾಗೂ ಡಿಸೈನ್ ನಲ್ಲಿ ಸಹಕರಿಸಿದ ರಾಹುಲ್ ಕುಮಾರ್, ಬ್ರಾಂಡಿಂಗ್ ಹಾಗೂ ಪ್ರಮೋಷನಿನಲ್ಲಿ ಆರ್ವಿ ಇಂಟರ್ ಗ್ರಾಫಿಕ್ಸಿನ ಜ್ಞಾನೇಶ್ ವಿಶ್ವಕರ್ಮ ಹಾಗೂ ಸಂಸ್ಥೆಗೆ ಸಹಕರಿಸಿದ ಇಸ್ಮಾಯಿಲ್ ಸಂಪ್ಯ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶೆರೀಫ್ ಜಟ್ಟಿಪಳ್ಳ, ಹರ್ಷಿತ್ ಮರ್ಕಂಜ ಅವರನ್ನು ಗೌರವಿಸಲಾಯಿತು.
ಸುಳ್ಯ ಪ.ಪಂ. ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ವಾಣಿಜ್ಯ ಸಂಘದ ಅಧ್ಯಕ್ಷ ಕೆ.ಎಂ. ಅಬ್ದುಲ್ ಹಮೀದ್ ಜನತಾ, ಸುಳ್ಯ ರೋಟರಿ ಕ್ಲಬ್ ಕಾರ್ಯದರ್ಶಿ ಹರಿರಾಯ ಕಾಮತ್, ಸುಳ್ಯ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪೈ, ಎಪಿಎಂಸಿ ಮಾಜಿ ನಿರ್ದೇಶಕ ಅದಾಂ ಹಾಜಿ ಕಮ್ಮಾಡಿ, ಕೆವಿಜಿ ಇಂಜಿನಿಯರಿಂಗ್ ಕಾಲೇಜು ನಿವೃತ್ತ ಪ್ರಾಂಶುಪಾಲ ಜ್ಞಾನೇಶ್, ಕಟ್ಟಡದ ಮಾಲಕ ಹಾಜಿ ಇಬ್ರಾಹಿಂ ಕುಂಬ್ಳೆ, ಅನ್ವರ್ ಡೈಮಂಡ್, ಸರ್ಫುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರರಾದ ಮೊಹಮ್ಮದ್ ಶರೀಫ್ (ಆಶೀಫ್), ಅಬ್ದುಲ್ ರಶೀದ್, ಅಬ್ದುಲ್ ಹಮೀದ್ ವಿಟ್ಲ ಅತಿಥಿಗಳನ್ನು ಗೌರವಿಸಿದರು.
ಶೆರೀಫ್ ಜಟ್ಟಿಪಳ್ಳ ಸ್ವಾಗತಿಸಿದರು. ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ
ಸುಳ್ಯ :ಗ್ಯಾರೇಜ್‌ನಲ್ಲಿ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಸುಳ್ಯ ಐವರ್ನಾಡು ನಿವಾಸಿ ದಯಾನಂದ (30) ಹಾಗೂ ಸುಳ್ಯ ಕಸಬಾ ನಿವಾಸಿ ದರ್ಶನರಾಜು (23) ಎಂದು ಗುರುತಿಸಲಾಗಿದೆ.
ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕದಲ್ಲಿ ಆ.26ರ ರಾತ್ರಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.120/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 326(g) ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಸುಳ್ಯ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಸುಳ್ಯ
Dr. Deviprasad Kanattur-ಪಂಜ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆ ಅವ್ಯವಹಾರದ ಆರೋಪ; ಸತ್ಯ ಪ್ರಮಾಣಕ್ಕೆ ಡಾ. ದೇವಿಪ್ರಸಾದ್ ಕಾನತ್ತೂರ್ ನಿರ್ಧಾರ
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.
ಆಗಸ್ಟ್ 31 ರಂದು ಸೋಮವಾರ ಪೂರ್ವಾಹ್ನ ಶ್ರೀ ದೇವರು ಜಳಕ ಮಾಡುವ ಪವಿತ್ರ ನಾಗತೀರ್ಥ ನದಿಯಲ್ಲಿ ಸ್ನಾನಮಾಡಿ ದೇಗುಲದ ನಡೆಯಲ್ಲಿ ಬೆಳಗ್ಗಿನ ಮಹಾಪೂಜೆಯ ನಂತರ ನಾನು ಯಾವ ಅವ್ಯವಹಾರ ಮಾಡಿಲ್ಲ ಎಂದು ಸತ್ಯ ಪ್ರಮಾಣ ಮಾಡುತ್ತೇನೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರು ಹಾಗೂ ಪರಿವಾರ ದೈವಗಳು ಉತ್ತರ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಯಾರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರೂ ಪ್ರಮಾಣಕ್ಕೆ ಬರಲಿ ಎಂದು ಅವರು ತಿಳಿಸಿದ್ದಾರೆ.
ಸುಳ್ಯ
B.C. Road-ಬಿ.ಸಿ.ರೋಡು: ಸೆ.13ರಂದು ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿ. ಇದರ ಸುಳ್ಯ ಶಾಖೆಯ ಉದ್ಘಾಟನಾ ಸಮಾರಂಭ
ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿ. ಬಿ.ಸಿ.ರೋಡು ಇದರ ಸುಳ್ಯ ಶಾಖೆಯ ಉದ್ಘಾಟನಾ ಸಮಾರಂಭ ಸೆ.13ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಸುಳ್ಯದ ಗಾಂಧೀನಗರದಲ್ಲಿರುವ ಆರ್.ಕೆ. ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಬಂಟ್ವಾಳ: ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿ. ಬಿ.ಸಿ.ರೋಡು ಇದರ ಸುಳ್ಯ ಶಾಖೆಯ ಉದ್ಘಾಟನಾ ಸಮಾರಂಭ ಸೆ.13ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಸುಳ್ಯದ ಗಾಂಧೀನಗರದಲ್ಲಿರುವ ಆರ್.ಕೆ. ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥೀ ಮುರುಳ್ಯ ನೂತನ ಶಾಖೆ ಉದ್ಘಾಟಿಸುವರು. ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಮಡಲ ನಿ. ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ ಭದ್ರತಾ ಕೋಶ ಉದ್ಘಾಟಿಸುವರು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಕಂಪ್ಯೂಟರ್ ಉದ್ಘಾಟಿಸುವರು, ಸುಳ್ಯ ಕೆವಿಜೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕೆ.ವಿ. ಚಿದಾನಂದ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕ ಕೆ.ಪಿ.ಜೋನಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಾಫ, ಸುಳ್ಯ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್, ಅಜ್ಜಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ರಾಮಣ್ಣ ಪೂಜಾರಿ ಪಿ.ಕೆ., ಸುಳ್ಯ ತಾಲೂಕು ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ. ಸುಧಾಕರ ರೈ, ಸುಳ್ಯ ತಾಲೂಕು ಬಿಎಂಎಸ್ ಅಧ್ಯಕ್ಷ ಪ್ರಕಾಶ್ ಎಂ.ಎಸ್., ಆರ್.ಕೆ. ಕಾಂಪ್ಲೆಕ್ಸ್ ಮಾಲಕ ರಾಮಕೃಷ್ಣ ರೈ ವಿಶೇಷ ಅಭ್ಯಾಗತರಾಗಿ ಭಾಗವಹಿಸುವರು.

ಮಹಾಮಂಡಲ ಸ್ಥಾಪನೆಯ ಹಿನ್ನೆಲೆ:
ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲವು 1953ರಲ್ಲಿ ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ವ್ಯಾಪ್ತಿಯನ್ನು ಹೊಂದಿಕೊಂಡು ದ.ಕ. ಜಿಲ್ಲಾ ತಾಳೆ ಮತ್ತು ತೆಂಗು ಬೆಲ್ಲ ಮಾರಾಟ ಸಂಯುಕ್ತ ಸಂಘ ಹೆಸರಿನಲ್ಲಿ, ದಿ.ದಾಮೋದರ ಆರ್. ಸುವರ್ಣ ನಾಯಕತ್ವದಲ್ಲಿ 130 ತಾಳೆಬೆಲ್ಲ ಪ್ರಾಥಮಿಕ ಸಹಕಾರಿ ಸಂಘಗಳ ಸದಸ್ಯತ್ವದಿಂದ 9 ಜನ ನಿರ್ದೇಶಕರ ಆಡಳಿತ ಮಂಡಳಿಯೊಂದಿಗೆ ಸ್ಥಾಪನೆಯಾಯಿತು. ಆರಂಭದಲ್ಲಿ ಮಂಗಳೂರು ಕೊಡಿಯಾಲ್ ಬೈಲ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಟ್ಟಡದಲ್ಲಿ ಕಛೇರಿ ಹೊಂದಿ ನಂತರ ಮಂಗಳೂರು ಪಂಪ್‌ವೆಲ್‌ಗೆ ಸ್ಥಳಾಂತರಗೊಂಡಿತು. ಮೂರ್ತೆದಾರಿಕೆಯನ್ನು ನಿಷೇಧಿಸುವ ಸಂದರ್ಭ ಬಂದಾಗ ಕೋಟ ಶ್ರೀನಿವಾಸ ಪೂಜಾರಿ, ಶ್ರೀಧರ್ ಕಲ್ಯಾಡಿ, ರಾಜಕೀಯ ಹಾಗೂ ಬಿಲ್ಲವ ಪ್ರಮುಖರ ನೇತೃತ್ವದಲ್ಲಿ ಮೂರ್ತೆದಾರರರು ನಡೆಸಿದ ಹೋರಾಟದ ಫಲವಾಗಿ 1991ರಲ್ಲಿ ಹಾಲು ಉತ್ಪಾದನಾ ಸಹಕಾರಿ ಸಂಘ ಮಾದರಿಯಲ್ಲಿ ಶೇಂದಿ ಉತ್ಪಾದನೆ-ಮಾರಾಟಕ್ಕೆ ಸಹಕಾರಿ ಸಂಘದ ಮೂಲಕ ಬಂಗಾರಪ್ಪ ಸರಕಾರ ಅವಕಾಶ ನೀಡಿದ್ದು 2007-08 ಸಾಲಿನಲ್ಲಿ ಅಬಕಾರಿ ಕಾಯ್ದೆಯಂತೆ ಅನುಮತಿ ನೀಡಲಾಯಿತು. ಮುಂದೆ ಪಿ.ಕೆ ಸದಾನಂದ ಅಧ್ಯಕ್ಷತೆಯಲ್ಲಿ ಮೂರ್ತೆದಾರರ ಸಹಕಾರಿ ಸಂಘಕ್ಕೆ ಚಾಲನೆ ದೊರೆತು ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲವಾಗಿ ಪರಿವರ್ತನೆಗೊಂಡು ಉಡುಪಿ ಜಿಲ್ಲೆಯಲ್ಲಿ 16 ಮತ್ತು ದ.ಕ.ಜಿಲ್ಲೆಯಲ್ಲಿ 27 ಸಹಿತ ಒಟ್ಟು 43 ಮೂರ್ತೆದಾರರ ಪ್ರಾಥಮಿಕ ಸಹಕಾರಿ ಸಂಘಗಳ ಸ್ಥಾಪನೆಯಾಯಿತು, ಉಡುಪಿ, ದ.ಕ ಜಿಲ್ಲೆ ವಿಭಜನೆಯಾದಾಗ ಪ್ರತ್ಯೇಕ ಮಹಾಮಂಡಲಗಳು ಅಸ್ಥಿತ್ವಗೊಂಡು ಬಳಿಕದ ಜಿಲ್ಲೆಯ ಪ್ರಥಮ ಅಧ್ಯಕ್ಷರಾಗಿ ಕೆ.ನಾರಾಯಣ, ನಂತರ ವಿಜಯ್ ಕುಮಾರ್ ಸೊರಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಹಾಮಂಡಲದ ಅಧ್ಯಕ್ಷರಾಗಿ ದಾಮೋದರ ಆರ್. ಸುವರ್ಣ, ಗಂಗಾಧರ ವಾಸ್, ಕೆ.ನಾರಾಯಣ, ನವೀನ್ ಡಿ. ಸುವರ್ಣ, ಪ್ರಭಾಕರ ಬಂಗೇರ, ಪಿ.ಕೆ.ಸದಾನಂದ, ವಿಜಯ ಕುಮಾರ್ ಸೊರಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಹಂತ ಹಂತವಾಗಿ ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ್ದಾರೆ.
ಕಳೆದ ವರದಿ ವರ್ಷದ ಅಂತ್ಯಕ್ಕೆ ಮಹಾಮಂಡಲದಲ್ಲಿ ಈವರೆಗೆ 31 ‘ಎ’ ವರ್ಗದ ಮೂರ್ತೆದಾರರ ಸಹಕಾರ ಸಂಘ ಗಳು. 1,800 ‘ಏ’ ವರ್ಗದ ಸದಸ್ಯರು, ‘ಸಿ’ ಮತ್ತು ‘ಇ’ ವರ್ಗದ 1197 ಸದಸ್ಯರು ಇದ್ದಾರೆ. ವರದಿ ಸಾಲಿನಲ್ಲಿ 45 ಕೋಟಿ ವ್ಯವಹಾರ ನಡೆಸಿ ರೂ 11.44 ಲಕ್ಷ ಲಾಭವನ್ನು ಗಳಿಸಿದೆ. 13 ಕೋಟಿ ಠೇವಣೆ ಹೊಂದಿದ್ದು ಒಟ್ಟು 7,00,31,874 ರೂ. ಸಾಲವನ್ನು ನೀಡಿದೆ.
ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿಯವರು ಸಂಘದ ಯಶಸ್ಸಿನ ಹಿಂದಿರುವ ಪ್ರೇರಕ ಶಕ್ತಿ, ಉದ್ಯಮಿಯಾಗಿ, ಜನಸ್ನೇಹಿ ರಾಜಕಾರಣಿಯಾಗಿ, ಧಾರ್ಮಿಕ ಮುಂದಾಳುವಾಗಿ, ಸಾಮಾಜಿಕ ನೇತಾರನಾಗಿ, ಶೈಕ್ಷಣಿಕ ಪ್ರೋತ್ಸಾಹಕರಾಗಿ, ಸಹಕಾರಿ ಧುರೀಣರಾಗಿ ವಿವಿಧ ಕ್ಷೇತ್ರಗಳಲ್ಲಿ ಇವರ ಸೇವೆ ಹಾಗೂ ಸಾಧನೆ ವಿಶಿಷ್ಟವಾದುದು. ಮೆಲ್ಕಾರ್ ಹಾಗೂ ನೆಲ್ಯಾಡಿಯ ಬಿರ್ವ ಸೆಂಟರ್ ಹಾಗೂ ಉಪ್ಪಿನಂಗಡಿಯ ಬಿರ್ವ ಉಬಾರ್ ಬಾರ್ ಎಂಡ್ ರೆಸ್ಟೋರೆಂಟ್ ಸಂಸ್ಥಾಪಕರಾಗಿ, ಸುರಭಿ ಹಾಗೂ ಸಾಥೀ ಬೀಡಿ ಉದ್ಯಮ ಸ್ಥಾಪಿಸಿ ಹಲವು ಮಂದಿಗೆ ಉದ್ಯೋಗದಾತರಾಗಿದ್ದಾರೆ. ಇವರು ಬಂಟ್ವಾಳ ತಾಲೂಕು. ಪಂಚಾಯತಿ ಸದಸ್ಯರಾಗಿ, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದ ಮಾಜಿ ಮೊಕೇಸರರಾಗಿ, ನಗ್ರಿ ಯುವಕ ಮಂಡಲದ ಅಧ್ಯಕ್ಷರಾಗಿ, ಸಜೀಪಮೂಡ ಗ್ರಾಪಂನ ಪೂರ್ವಾಧ್ಯಕ್ಷರಾಗಿ, 20 ವರ್ಷಗಳಿಂದ ಗ್ರಾ.ಪಂ.ಸದಸ್ಯರಾಗಿ, ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯ ಎರಡು ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಾದ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ, ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷರಾಗಿ ಇದರ ಸಮಗ್ರ ಪ್ರಗತಿಯ ರುವಾರಿಯಾಗಿದ್ದಾರೆ.
ಉದ್ದೇಶಗಳು
ಸಂಘದ ಕಾರ್ಯವ್ಯಾಪ್ತಿಯು ದ.ಕ.ಜಿಲ್ಲೆಗೆ ಸೀಮಿತಗೊಂಡಿದ್ದು, ಎಲ್ಲಾ ಮೂರ್ತೆದಾರರನ್ನು ಒಗ್ಗೂಡಿಸಿ, ಮೂರ್ತೆಗಾರಿಕೆಗೆ ಕಡಿಮೆ ಸಾಲ ಸೌಲಭ್ಯ, ಮೂರ್ತೆದಾರರ ಶ್ರೇಯೋಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸಂಘದ ಮೂಲ ಉದ್ದೇಶವಾಗಿದೆ.
ಮೂರ್ತೆದಾರರ ಎಲ್ಲಾ ಸಂಘಗಳನ್ನು ಬ್ಯಾಂಕಿಂಗ್ ವ್ಯವಹಾರಿಕ ಸಂಘಗಳಾಗಿ ಪರಿವರ್ತಿಸುವುದು, ಹಿಂದೆ ಶೇಂದಿ ಮಾರಾಟ ಸಹಕಾರಿ ಸಂಘಗಳಿಗೆ ಗ್ರಾಮ ಮಟ್ಟದಲ್ಲಿ ಸರಕಾರವು ಜಮೀನು ಕಾದಿರಿಸಿದ್ದು ಅವುಗಳನ್ನು ಸಂಘದ ಸುಪರ್ದಿಯಲ್ಲಿ ಪಡೆದು ಪುನರ್ ಸಕ್ರಿಯಗೊಳಿಸುವ ಚಿಂತನೆಯನ್ನು ಕೂಡಾ ಇದೆ ಎಂದು ಅಧ್ಯಕ್ಷ ಸಂಜೀವ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
ಪುತ್ತೂರು19 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಬಿಗ್ ನ್ಯೂಸ್22 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಮಂಗಳೂರು22 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
ಬಿಗ್ ನ್ಯೂಸ್21 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ಶಿಕ್ಷಣ22 hours agoSpecial classes: ಮಳೆ ರಜೆ ಹೊಂದಾಣಿಕೆ: ಅ.3ರಿಂದ ಅ.7ರವರೆಗೆ ದಸರಾ ರಜೆಯಲ್ಲೂ ವಿಶೇಷ ತರಗತಿ
-
ಅಪರಾಧ20 hours agoMangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
-
ಶಿಕ್ಷಣ21 hours agoNarendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
-
ಶಿಕ್ಷಣ21 hours agoVivekananda-ವಿವೇಕಾನಂದ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ; ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಅಗತ್ಯ : ಪ್ರತಿಮಾ


















