ಸುಳ್ಯ
Sullia-ಸುಳ್ಯಕ್ಕೆ ಕಾಲಿಟ್ಟ ‘ದಿ ರಿದಾನ್ ಮಂದಿ’; ಅರೇಬಿಯನ್ ಸಾಂಪ್ರದಾಯಿಕ ರುಚಿಯ ಸವಿಗೆ ಇಂದು ಭವ್ಯ ಚಾಲನೆ
ಕರಾವಳಿ ಭಾಗದ ಆಹಾರಪ್ರಿಯರ ಬಹು ನಿರೀಕ್ಷಿತ ‘ದಿ ರಿದಾನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಇಂದು (ಜುಲೈ 13) ಸುಳ್ಯದ ಗಾಂಧಿನಗರದ ಮುಖ್ಯರಸ್ತೆಯಲ್ಲಿ ಭವ್ಯವಾಗಿ ಉದ್ಘಾಟನೆಯಾಗಲಿದೆ. ಅರೇಬಿಯನ್ ಮತ್ತು ಭಾರತೀಯ ಸಾಂಪ್ರದಾಯಿಕ ಪಾಕಶೈಲಿಯ ಸಂಗಮವನ್ನು ಒಂದೇ ಸೂರಿನಡಿ ನೀಡುವ ಉದ್ದೇಶದೊಂದಿಗೆ ಆರಂಭಗೊಳ್ಳುತ್ತಿರುವ ಈ ರೆಸ್ಟೋರೆಂಟ್, ಕುಟುಂಬ ಸಮೇತ ಗುಣಮಟ್ಟದ ಆಹಾರ ಸವಿಯಲು ಹೊಸ ತಾಣವಾಗಲಿದೆ.
ಸುಳ್ಯ: ಕರಾವಳಿ ಭಾಗದ ಆಹಾರಪ್ರಿಯರ ಬಹು ನಿರೀಕ್ಷಿತ ‘ದಿ ರಿದಾನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಇಂದು (ಜುಲೈ 13) ಸುಳ್ಯದ ಗಾಂಧಿನಗರದ ಮುಖ್ಯರಸ್ತೆಯಲ್ಲಿ ಭವ್ಯವಾಗಿ ಉದ್ಘಾಟನೆಯಾಗಲಿದೆ. ಅರೇಬಿಯನ್ ಮತ್ತು ಭಾರತೀಯ ಸಾಂಪ್ರದಾಯಿಕ ಪಾಕಶೈಲಿಯ ಸಂಗಮವನ್ನು ಒಂದೇ ಸೂರಿನಡಿ ನೀಡುವ ಉದ್ದೇಶದೊಂದಿಗೆ ಆರಂಭಗೊಳ್ಳುತ್ತಿರುವ ಈ ರೆಸ್ಟೋರೆಂಟ್, ಕುಟುಂಬ ಸಮೇತ ಗುಣಮಟ್ಟದ ಆಹಾರ ಸವಿಯಲು ಹೊಸ ತಾಣವಾಗಲಿದೆ.
ಸಂಜೆ 4.30 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಪಾಲ್ಗೊಳ್ಳಲಿದ್ದು, ಬಳಿಕ ಸಾರ್ವಜನಿಕರಿಗೆ ರೆಸ್ಟೋರೆಂಟ್ ಸೇವೆ ಆರಂಭವಾಗಲಿದೆ.
AHR Group ಪ್ರಾಯೋಜಕತ್ವದಲ್ಲಿ ಉದ್ಯಮಿಗಳಾದ ಮುಹಮ್ಮದ್ ಶರೀಫ್ (ಆಸಿಫ್), ಅಬ್ದುಲ್ ಹಮೀದ್ ಹಾಗೂ ಅಬ್ದುಲ್ ರಶೀದ್ ಅವರ ಮಾಲಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ದಿ ರಿದಾನ್ ಮಂದಿ’ ಈಗಾಗಲೇ ತನ್ನ ವಿಶಿಷ್ಟ ರುಚಿ ಮತ್ತು ಗುಣಮಟ್ಟದ ಸೇವೆಯಿಂದ ಗ್ರಾಹಕರ ವಿಶ್ವಾಸ ಗಳಿಸಿದೆ. 2020ರಲ್ಲಿ ಮೆಲ್ಕಾರ್‌ನಲ್ಲಿ ಮೊದಲ ಶಾಖೆ ಆರಂಭಿಸಿದ ಸಂಸ್ಥೆ, 2025ರಲ್ಲಿ ಪುತ್ತೂರು ತಾಲೂಕಿನ ಸಂಪ್ಯದಲ್ಲಿ ಎರಡನೇ ಶಾಖೆ ತೆರೆದು ಅಲ್ಪಾವಧಿಯಲ್ಲೇ ಜನಪ್ರಿಯತೆ ಪಡೆದಿತ್ತು. ಇದೀಗ ಸುಳ್ಯದಲ್ಲಿ ಮೂರನೇ ಶಾಖೆ ಆರಂಭಿಸುವ ಮೂಲಕ ತನ್ನ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.
ರೆಸ್ಟೋರೆಂಟ್‌ನ ಪ್ರಮುಖ ಆಕರ್ಷಣೆಯಾದ ಚಿಕನ್ ಮಂದಿ ಮತ್ತು ಮಟನ್ ಮಂದಿ ಸೇರಿದಂತೆ ಹಲವು ಅಪ್ಪಟ ಅರೇಬಿಯನ್ ಖಾದ್ಯಗಳನ್ನು ಅನುಭವೀ ಮಾಸ್ಟರ್‌ಚೆಫ್‌ಗಳು ನೈಸರ್ಗಿಕ ಮಸಾಲೆಗಳು, ಪ್ರೀಮಿಯಂ ಗುಣಮಟ್ಟದ ಪದಾರ್ಥಗಳು ಹಾಗೂ ಸಾಂಪ್ರದಾಯಿಕ ಪಾಕವಿಧಾನಗಳ ಮೂಲಕ ಸಿದ್ಧಪಡಿಸುತ್ತಾರೆ. ನಿಧಾನವಾಗಿ ಬೇಯಿಸಿದ ಮಂದಿ ಅಕ್ಕಿ, ರಸಭರಿತ ಮಾಂಸಾಹಾರಿ ಖಾದ್ಯಗಳು ಮತ್ತು ಸುವಾಸನೆಯ ಸಸ್ಯಾಹಾರಿ ವಿಶೇಷ ಭಕ್ಷ್ಯಗಳು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ.
ಮಾತ್ರ ರೆಸ್ಟೋರೆಂಟ್ ಆಗಿರದೇ, ಕುಟುಂಬ, ಸ್ನೇಹಿತರು ಹಾಗೂ ಆಹಾರಪ್ರಿಯರು ಒಂದಾಗಿ ಸಮಯ ಕಳೆಯುವ ಆತ್ಮೀಯ ತಾಣವಾಗಿ ‘ದಿ ರಿದಾನ್ ಮಂದಿ’ ರೂಪುಗೊಂಡಿದೆ. ಕುಟುಂಬ ಸಮೇತ ಊಟಕ್ಕೆ ಅನುಕೂಲಕರ ಆಸನ ವ್ಯವಸ್ಥೆ, ವಿಶೇಷ ಮಂದಿ ಮಜ್ಲಿಸ್, ಮಿನಿ ಪಾರ್ಟಿ ಹಾಲ್, ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಹೋಮ್ ಡೆಲಿವರಿ ಸೇವೆ ಸಹ ಲಭ್ಯವಿದೆ.
ವ್ಯವಹಾರ ವಿಸ್ತರಣೆಯೊಂದಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ಕಲಬೆರಕೆಯಿಲ್ಲದ, ನೈಸರ್ಗಿಕ, ಸಾಂಪ್ರದಾಯಿಕ ಆಹಾರವನ್ನು ಜನರಿಗೆ ತಲುಪಿಸುವುದು ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಸುಳ್ಯದ ಆಹಾರಪ್ರಿಯರಿಗೆ ಅರೇಬಿಯನ್ ಸಾಂಪ್ರದಾಯಿಕ ರುಚಿಯ ಹೊಸ ಅನುಭವ ನೀಡಲಿರುವ ‘ದಿ ರಿದಾನ್ ಮಂದಿ’ ರೆಸ್ಟೋರೆಂಟ್ ಉದ್ಘಾಟನಾ ದಿನದಂದೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುವ ನಿರೀಕ್ಷೆಯಿದೆ.
ಹೆಚ್ಚಿನ ಮಾಹಿತಿಗಾಗಿ 7899774133 ಅಥವಾ 9187464337 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಸುಳ್ಯ
ಸುಳ್ಯ :ಗ್ಯಾರೇಜ್‌ನಲ್ಲಿ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಸುಳ್ಯ ಐವರ್ನಾಡು ನಿವಾಸಿ ದಯಾನಂದ (30) ಹಾಗೂ ಸುಳ್ಯ ಕಸಬಾ ನಿವಾಸಿ ದರ್ಶನರಾಜು (23) ಎಂದು ಗುರುತಿಸಲಾಗಿದೆ.
ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕದಲ್ಲಿ ಆ.26ರ ರಾತ್ರಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.120/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 326(g) ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಸುಳ್ಯ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಸುಳ್ಯ
Dr. Deviprasad Kanattur-ಪಂಜ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆ ಅವ್ಯವಹಾರದ ಆರೋಪ; ಸತ್ಯ ಪ್ರಮಾಣಕ್ಕೆ ಡಾ. ದೇವಿಪ್ರಸಾದ್ ಕಾನತ್ತೂರ್ ನಿರ್ಧಾರ
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.
ಆಗಸ್ಟ್ 31 ರಂದು ಸೋಮವಾರ ಪೂರ್ವಾಹ್ನ ಶ್ರೀ ದೇವರು ಜಳಕ ಮಾಡುವ ಪವಿತ್ರ ನಾಗತೀರ್ಥ ನದಿಯಲ್ಲಿ ಸ್ನಾನಮಾಡಿ ದೇಗುಲದ ನಡೆಯಲ್ಲಿ ಬೆಳಗ್ಗಿನ ಮಹಾಪೂಜೆಯ ನಂತರ ನಾನು ಯಾವ ಅವ್ಯವಹಾರ ಮಾಡಿಲ್ಲ ಎಂದು ಸತ್ಯ ಪ್ರಮಾಣ ಮಾಡುತ್ತೇನೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರು ಹಾಗೂ ಪರಿವಾರ ದೈವಗಳು ಉತ್ತರ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಯಾರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರೂ ಪ್ರಮಾಣಕ್ಕೆ ಬರಲಿ ಎಂದು ಅವರು ತಿಳಿಸಿದ್ದಾರೆ.
ಸುಳ್ಯ
B.C. Road-ಬಿ.ಸಿ.ರೋಡು: ಸೆ.13ರಂದು ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿ. ಇದರ ಸುಳ್ಯ ಶಾಖೆಯ ಉದ್ಘಾಟನಾ ಸಮಾರಂಭ
ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿ. ಬಿ.ಸಿ.ರೋಡು ಇದರ ಸುಳ್ಯ ಶಾಖೆಯ ಉದ್ಘಾಟನಾ ಸಮಾರಂಭ ಸೆ.13ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಸುಳ್ಯದ ಗಾಂಧೀನಗರದಲ್ಲಿರುವ ಆರ್.ಕೆ. ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಬಂಟ್ವಾಳ: ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿ. ಬಿ.ಸಿ.ರೋಡು ಇದರ ಸುಳ್ಯ ಶಾಖೆಯ ಉದ್ಘಾಟನಾ ಸಮಾರಂಭ ಸೆ.13ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಸುಳ್ಯದ ಗಾಂಧೀನಗರದಲ್ಲಿರುವ ಆರ್.ಕೆ. ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥೀ ಮುರುಳ್ಯ ನೂತನ ಶಾಖೆ ಉದ್ಘಾಟಿಸುವರು. ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಮಡಲ ನಿ. ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ ಭದ್ರತಾ ಕೋಶ ಉದ್ಘಾಟಿಸುವರು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಕಂಪ್ಯೂಟರ್ ಉದ್ಘಾಟಿಸುವರು, ಸುಳ್ಯ ಕೆವಿಜೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕೆ.ವಿ. ಚಿದಾನಂದ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕ ಕೆ.ಪಿ.ಜೋನಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಾಫ, ಸುಳ್ಯ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್, ಅಜ್ಜಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ರಾಮಣ್ಣ ಪೂಜಾರಿ ಪಿ.ಕೆ., ಸುಳ್ಯ ತಾಲೂಕು ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ. ಸುಧಾಕರ ರೈ, ಸುಳ್ಯ ತಾಲೂಕು ಬಿಎಂಎಸ್ ಅಧ್ಯಕ್ಷ ಪ್ರಕಾಶ್ ಎಂ.ಎಸ್., ಆರ್.ಕೆ. ಕಾಂಪ್ಲೆಕ್ಸ್ ಮಾಲಕ ರಾಮಕೃಷ್ಣ ರೈ ವಿಶೇಷ ಅಭ್ಯಾಗತರಾಗಿ ಭಾಗವಹಿಸುವರು.

ಮಹಾಮಂಡಲ ಸ್ಥಾಪನೆಯ ಹಿನ್ನೆಲೆ:
ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲವು 1953ರಲ್ಲಿ ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ವ್ಯಾಪ್ತಿಯನ್ನು ಹೊಂದಿಕೊಂಡು ದ.ಕ. ಜಿಲ್ಲಾ ತಾಳೆ ಮತ್ತು ತೆಂಗು ಬೆಲ್ಲ ಮಾರಾಟ ಸಂಯುಕ್ತ ಸಂಘ ಹೆಸರಿನಲ್ಲಿ, ದಿ.ದಾಮೋದರ ಆರ್. ಸುವರ್ಣ ನಾಯಕತ್ವದಲ್ಲಿ 130 ತಾಳೆಬೆಲ್ಲ ಪ್ರಾಥಮಿಕ ಸಹಕಾರಿ ಸಂಘಗಳ ಸದಸ್ಯತ್ವದಿಂದ 9 ಜನ ನಿರ್ದೇಶಕರ ಆಡಳಿತ ಮಂಡಳಿಯೊಂದಿಗೆ ಸ್ಥಾಪನೆಯಾಯಿತು. ಆರಂಭದಲ್ಲಿ ಮಂಗಳೂರು ಕೊಡಿಯಾಲ್ ಬೈಲ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಟ್ಟಡದಲ್ಲಿ ಕಛೇರಿ ಹೊಂದಿ ನಂತರ ಮಂಗಳೂರು ಪಂಪ್‌ವೆಲ್‌ಗೆ ಸ್ಥಳಾಂತರಗೊಂಡಿತು. ಮೂರ್ತೆದಾರಿಕೆಯನ್ನು ನಿಷೇಧಿಸುವ ಸಂದರ್ಭ ಬಂದಾಗ ಕೋಟ ಶ್ರೀನಿವಾಸ ಪೂಜಾರಿ, ಶ್ರೀಧರ್ ಕಲ್ಯಾಡಿ, ರಾಜಕೀಯ ಹಾಗೂ ಬಿಲ್ಲವ ಪ್ರಮುಖರ ನೇತೃತ್ವದಲ್ಲಿ ಮೂರ್ತೆದಾರರರು ನಡೆಸಿದ ಹೋರಾಟದ ಫಲವಾಗಿ 1991ರಲ್ಲಿ ಹಾಲು ಉತ್ಪಾದನಾ ಸಹಕಾರಿ ಸಂಘ ಮಾದರಿಯಲ್ಲಿ ಶೇಂದಿ ಉತ್ಪಾದನೆ-ಮಾರಾಟಕ್ಕೆ ಸಹಕಾರಿ ಸಂಘದ ಮೂಲಕ ಬಂಗಾರಪ್ಪ ಸರಕಾರ ಅವಕಾಶ ನೀಡಿದ್ದು 2007-08 ಸಾಲಿನಲ್ಲಿ ಅಬಕಾರಿ ಕಾಯ್ದೆಯಂತೆ ಅನುಮತಿ ನೀಡಲಾಯಿತು. ಮುಂದೆ ಪಿ.ಕೆ ಸದಾನಂದ ಅಧ್ಯಕ್ಷತೆಯಲ್ಲಿ ಮೂರ್ತೆದಾರರ ಸಹಕಾರಿ ಸಂಘಕ್ಕೆ ಚಾಲನೆ ದೊರೆತು ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲವಾಗಿ ಪರಿವರ್ತನೆಗೊಂಡು ಉಡುಪಿ ಜಿಲ್ಲೆಯಲ್ಲಿ 16 ಮತ್ತು ದ.ಕ.ಜಿಲ್ಲೆಯಲ್ಲಿ 27 ಸಹಿತ ಒಟ್ಟು 43 ಮೂರ್ತೆದಾರರ ಪ್ರಾಥಮಿಕ ಸಹಕಾರಿ ಸಂಘಗಳ ಸ್ಥಾಪನೆಯಾಯಿತು, ಉಡುಪಿ, ದ.ಕ ಜಿಲ್ಲೆ ವಿಭಜನೆಯಾದಾಗ ಪ್ರತ್ಯೇಕ ಮಹಾಮಂಡಲಗಳು ಅಸ್ಥಿತ್ವಗೊಂಡು ಬಳಿಕದ ಜಿಲ್ಲೆಯ ಪ್ರಥಮ ಅಧ್ಯಕ್ಷರಾಗಿ ಕೆ.ನಾರಾಯಣ, ನಂತರ ವಿಜಯ್ ಕುಮಾರ್ ಸೊರಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಹಾಮಂಡಲದ ಅಧ್ಯಕ್ಷರಾಗಿ ದಾಮೋದರ ಆರ್. ಸುವರ್ಣ, ಗಂಗಾಧರ ವಾಸ್, ಕೆ.ನಾರಾಯಣ, ನವೀನ್ ಡಿ. ಸುವರ್ಣ, ಪ್ರಭಾಕರ ಬಂಗೇರ, ಪಿ.ಕೆ.ಸದಾನಂದ, ವಿಜಯ ಕುಮಾರ್ ಸೊರಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಹಂತ ಹಂತವಾಗಿ ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ್ದಾರೆ.
ಕಳೆದ ವರದಿ ವರ್ಷದ ಅಂತ್ಯಕ್ಕೆ ಮಹಾಮಂಡಲದಲ್ಲಿ ಈವರೆಗೆ 31 ‘ಎ’ ವರ್ಗದ ಮೂರ್ತೆದಾರರ ಸಹಕಾರ ಸಂಘ ಗಳು. 1,800 ‘ಏ’ ವರ್ಗದ ಸದಸ್ಯರು, ‘ಸಿ’ ಮತ್ತು ‘ಇ’ ವರ್ಗದ 1197 ಸದಸ್ಯರು ಇದ್ದಾರೆ. ವರದಿ ಸಾಲಿನಲ್ಲಿ 45 ಕೋಟಿ ವ್ಯವಹಾರ ನಡೆಸಿ ರೂ 11.44 ಲಕ್ಷ ಲಾಭವನ್ನು ಗಳಿಸಿದೆ. 13 ಕೋಟಿ ಠೇವಣೆ ಹೊಂದಿದ್ದು ಒಟ್ಟು 7,00,31,874 ರೂ. ಸಾಲವನ್ನು ನೀಡಿದೆ.
ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿಯವರು ಸಂಘದ ಯಶಸ್ಸಿನ ಹಿಂದಿರುವ ಪ್ರೇರಕ ಶಕ್ತಿ, ಉದ್ಯಮಿಯಾಗಿ, ಜನಸ್ನೇಹಿ ರಾಜಕಾರಣಿಯಾಗಿ, ಧಾರ್ಮಿಕ ಮುಂದಾಳುವಾಗಿ, ಸಾಮಾಜಿಕ ನೇತಾರನಾಗಿ, ಶೈಕ್ಷಣಿಕ ಪ್ರೋತ್ಸಾಹಕರಾಗಿ, ಸಹಕಾರಿ ಧುರೀಣರಾಗಿ ವಿವಿಧ ಕ್ಷೇತ್ರಗಳಲ್ಲಿ ಇವರ ಸೇವೆ ಹಾಗೂ ಸಾಧನೆ ವಿಶಿಷ್ಟವಾದುದು. ಮೆಲ್ಕಾರ್ ಹಾಗೂ ನೆಲ್ಯಾಡಿಯ ಬಿರ್ವ ಸೆಂಟರ್ ಹಾಗೂ ಉಪ್ಪಿನಂಗಡಿಯ ಬಿರ್ವ ಉಬಾರ್ ಬಾರ್ ಎಂಡ್ ರೆಸ್ಟೋರೆಂಟ್ ಸಂಸ್ಥಾಪಕರಾಗಿ, ಸುರಭಿ ಹಾಗೂ ಸಾಥೀ ಬೀಡಿ ಉದ್ಯಮ ಸ್ಥಾಪಿಸಿ ಹಲವು ಮಂದಿಗೆ ಉದ್ಯೋಗದಾತರಾಗಿದ್ದಾರೆ. ಇವರು ಬಂಟ್ವಾಳ ತಾಲೂಕು. ಪಂಚಾಯತಿ ಸದಸ್ಯರಾಗಿ, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದ ಮಾಜಿ ಮೊಕೇಸರರಾಗಿ, ನಗ್ರಿ ಯುವಕ ಮಂಡಲದ ಅಧ್ಯಕ್ಷರಾಗಿ, ಸಜೀಪಮೂಡ ಗ್ರಾಪಂನ ಪೂರ್ವಾಧ್ಯಕ್ಷರಾಗಿ, 20 ವರ್ಷಗಳಿಂದ ಗ್ರಾ.ಪಂ.ಸದಸ್ಯರಾಗಿ, ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯ ಎರಡು ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಾದ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ, ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷರಾಗಿ ಇದರ ಸಮಗ್ರ ಪ್ರಗತಿಯ ರುವಾರಿಯಾಗಿದ್ದಾರೆ.
ಉದ್ದೇಶಗಳು
ಸಂಘದ ಕಾರ್ಯವ್ಯಾಪ್ತಿಯು ದ.ಕ.ಜಿಲ್ಲೆಗೆ ಸೀಮಿತಗೊಂಡಿದ್ದು, ಎಲ್ಲಾ ಮೂರ್ತೆದಾರರನ್ನು ಒಗ್ಗೂಡಿಸಿ, ಮೂರ್ತೆಗಾರಿಕೆಗೆ ಕಡಿಮೆ ಸಾಲ ಸೌಲಭ್ಯ, ಮೂರ್ತೆದಾರರ ಶ್ರೇಯೋಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸಂಘದ ಮೂಲ ಉದ್ದೇಶವಾಗಿದೆ.
ಮೂರ್ತೆದಾರರ ಎಲ್ಲಾ ಸಂಘಗಳನ್ನು ಬ್ಯಾಂಕಿಂಗ್ ವ್ಯವಹಾರಿಕ ಸಂಘಗಳಾಗಿ ಪರಿವರ್ತಿಸುವುದು, ಹಿಂದೆ ಶೇಂದಿ ಮಾರಾಟ ಸಹಕಾರಿ ಸಂಘಗಳಿಗೆ ಗ್ರಾಮ ಮಟ್ಟದಲ್ಲಿ ಸರಕಾರವು ಜಮೀನು ಕಾದಿರಿಸಿದ್ದು ಅವುಗಳನ್ನು ಸಂಘದ ಸುಪರ್ದಿಯಲ್ಲಿ ಪಡೆದು ಪುನರ್ ಸಕ್ರಿಯಗೊಳಿಸುವ ಚಿಂತನೆಯನ್ನು ಕೂಡಾ ಇದೆ ಎಂದು ಅಧ್ಯಕ್ಷ ಸಂಜೀವ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
Uncategorized7 hours ago
ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಕೀಲ ಮೋಹಿತ್ ಕುಮಾರ್ ಗೆ ಮಾತೃ ವಿಯೋಗ
-
Uncategorized6 hours ago
ಮಂಗಳೂರು : ಸಹಪಾಠಿಯೊಂದಿಗೆ ಜಗಳ: ಬಿಸಿಎ ವಿದ್ಯಾರ್ಥಿಗೆ ಚೂರಿಯಿಂದ ಇರಿತ; ಇಬ್ಬರು ವಶಕ್ಕೆ
-
ದಕ್ಷಿಣ ಕನ್ನಡ28 minutes ago
Raod Accident : ಮಂತ್ರಾಲಯ ಯಾತ್ರೆ ವೇಳೆ ಬಣಕಲ್ ನಲ್ಲಿ ಭೀಕರ ಅಪಘಾತ: ಗಂಭೀರ ಗಾಯಗೊಂಡಿದ್ದ ಶಿಶಿಲದ ಯುವಕ ಸಾವು


















