Connect with us

ವಿದೇಶ

iPhone-20 ಪ್ರಿಯಕರರಿಂದ ಐಫೋನ್ ಗಿಫ್ಟ್ ; 20 ಐಫೋನ್‌ಗಳನ್ನು ಮಾರಿ ಹೊಸ ಮನೆ ಖರೀದಿ

Published

on



Ad Widget

Ad Widget

Ad Widget

Ad Widget

ಸಿಟಿಯಲ್ಲಿ ಹೊಸ ಮನೆ ಖರೀದಿಸಲು ಯುವತಿಯೊಬ್ಬಳು 20 ಯುವಕರ ಜೊತೆಗೆ ಪ್ರೇಮದ ನಾಟಕವಾಡಿದ್ದಾಳೆ. 20 ಯುವಕರನ್ನು ತನ್ನ ಬಲೆಗೆ ಬೀಳಿಸಿ ಅವರಿಂದ ದುಬಾರಿ ಬೆಲೆಯ ಐಫೋನ್ಗಳನ್ನು ಗಿಫ್ಟ್ ಆಗಿ ಪಡೆದುಕೊಂಡಿದ್ದಾಳೆ. ಬಳಿಕ ಅವರೊಂದಿಗೆ ಬ್ರೇಕ್ ಅಪ್ ಮಾಡಿಕೊಂಡು ಲಕ್ಷ ಲಕ್ಷ ಬೆಲೆ ಬಾಳುವ ಬರೋಬ್ಬರಿ 20 ಐಫೋನ್ಗಳನ್ನು ಮಾರಿ ಹೊಸ ಮನೆ ಖರೀದಿಸಿದ್ದಾಳೆ. ಈ ಘಟನೆ ಚೀನಾದಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget

ಚೀನಾದ ಮೂಲದ ಈ ಯುವತಿಯ ಹೆಸರು Xiaoli. ಸದ್ಯ ಈಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್ಗಳು ಹರಿದಾಡುತ್ತಿದೆ. ವಾಸ್ತವವಾಗಿ ಈ ಘಟನೆ 2016ರಲ್ಲಿ ನಡೆದಿದೆ. @tech_grammm ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈಕೆಯ ಕುರಿತು ಹಾಕಲಾದ ಫೋಸ್ಟ್ ಒಂದು ಸದ್ಯ ಎಲ್ಲೆಡೆ ವೈರಲ್ ಆಗಿದೆ. ಮೇ 06ರಂದು ಹಂಚಿಕೊಂಡಿರುವ ಈ ಪೋಸ್ಟ್ ಇಲ್ಲಿಯವರೆಗೆ 187,016 ಲೈಕ್ಸ್ಗಳನ್ನು ಪಡೆದುಕೊಂಡಿದೆ.

Ad Widget

Ad Widget

Ad Widget alt="Ad Widget"/>

Ad Widget

ಸ್ವಂತ ಮನೆ ಖರೀದಿಸಲು ಬಡ ಕುಟುಂಬದಿಂದ ಬಂದ ಈಕೆ ಈ ರೀತಿ ಪ್ಲ್ಯಾನ್ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ತನ್ನ ಎಲ್ಲ ಐಫೋನ್ಗಳನ್ನು ಭಾರತದ ಕರೆನ್ಸಿಯ ಅಂದಾಜಿನ ಪ್ರಕಾರ 14 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಿ ಡೌನ್ ಪೇಮೆಂ

Ad Widget

Ad Widget <> Ad Widget

Ad Widget
Click to comment

Leave a Reply

ಬಿಗ್ ನ್ಯೂಸ್

Nepal-40 ದಿನಗಳ ಬಳಿಕ ನೇಪಾಳ ಪ್ರವಾಹದ ಶೋಧ ಕಾರ್ಯಾಚರಣೆ ಸ್ಥಗಿತ: 189 ಭಾರತೀಯರು ಸೇರಿ 5200 ಮಂದಿ ಇನ್ನೂ ನಾಪತ್ತೆ..!

Published

on



Ad Widget

Ad Widget

Ad Widget

Ad Widget

ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ್ದ ಭೋಟೆಕೋಶಿ–ತ್ರಿಶೂಲಿ ಪ್ರವಾಹಕ್ಕೆ ಸಂಬಂಧಿಸಿದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು 40 ದಿನಗಳ ಬಳಿಕ ಸೋಮವಾರ ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಭೀಕರ ಪ್ರವಾಹದಲ್ಲಿ 1,455 ಮಂದಿ ಮೃತಪಟ್ಟಿದ್ದು, ಇನ್ನೂ 5,285 ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ನೇಪಾಳ ಸರ್ಕಾರವು ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಗಳತ್ತ ಗಮನ ಹರಿಸಲು ಮುಂದಾಗಿದೆ.

Ad Widget

Ad Widget

Ad Widget

Ad Widget

ಕಠ್ಮಂಡು: ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ್ದ ಭೋಟೆಕೋಶಿ–ತ್ರಿಶೂಲಿ ಪ್ರವಾಹಕ್ಕೆ ಸಂಬಂಧಿಸಿದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು 40 ದಿನಗಳ ಬಳಿಕ ಸೋಮವಾರ ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಭೀಕರ ಪ್ರವಾಹದಲ್ಲಿ 1,455 ಮಂದಿ ಮೃತಪಟ್ಟಿದ್ದು, ಇನ್ನೂ 5,285 ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ನೇಪಾಳ ಸರ್ಕಾರವು ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಗಳತ್ತ ಗಮನ ಹರಿಸಲು ಮುಂದಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ನಾಪತ್ತೆಯಾಗಿರುವವರಲ್ಲಿ 189 ಮಂದಿ ಭಾರತೀಯರಾಗಿದ್ದಾರೆ. ಅಲ್ಲದೆ, ವಿದೇಶಿ ಪಾಸ್‌ಪೋರ್ಟ್ ಹೊಂದಿರುವ ಭಾರತೀಯ ಮೂಲದ ನೂರಾರು ಮಂದಿ ಕೂಡ ನಾಪತ್ತೆಯಾಗಿರುವವರ ಪಟ್ಟಿಯಲ್ಲಿದ್ದಾರೆ.

Ad Widget

Ad Widget <> Ad Widget

ಪ್ರಧಾನಿ ಬಾಲೇಂದ್ರ ಶಾ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಮಂಡಳಿ ಸಭೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಗಳು, ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಂಡಗಳ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.



Ad Widget

ಇದೇ ವೇಳೆ, ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಕ್ರಮಗಳಿಗಾಗಿ 559 ಕೋಟಿ ನೇಪಾಳಿ ರೂಪಾಯಿ ಬಿಡುಗಡೆಗೆ ಅನುಮೋದನೆ ನೀಡುವಂತೆ ಹಣಕಾಸು ಸಚಿವಾಲಯಕ್ಕೆ ಮಂಡಳಿ ಶಿಫಾರಸು ಮಾಡಿದೆ. ಇನ್ನೂ ಮೌಲ್ಯಮಾಪನ ಪೂರ್ಣಗೊಳ್ಳದ ಯೋಜನೆಗಳಿಗೆ ಅಗತ್ಯವಿರುವ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವಹಿಸಲಾಗಿದೆ.

Ad Widget

Ad Widget

ನೇಪಾಳ ಪ್ರವಾಸೋದ್ಯಮ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 36 ದೇಶಗಳ 606 ವಿದೇಶಿ ಪ್ರವಾಸಿಗರು ಇನ್ನೂ ನಾಪತ್ತೆಯಾಗಿದ್ದಾರೆ. ಇವರಲ್ಲಿ 189 ಭಾರತೀಯರು, 65 ಅಮೆರಿಕನ್ನರು, 55 ಮಲೇಷಿಯನ್ನರು, 54 ಉಕ್ರೇನಿಯನ್ನರು, 37 ಚೀನೀಯರು, ಆಸ್ಟ್ರೇಲಿಯಾ ಮತ್ತು ಲಾಟ್ವಿಯಾದ ತಲಾ 33 ಮಂದಿ, 32 ಬ್ರಿಟಿಷರು ಹಾಗೂ 30 ಕೆನಡಾ ಪ್ರಜೆಗಳು ಸೇರಿದ್ದಾರೆ.

ಇದರ ಜೊತೆಗೆ 188 ಮಂದಿ ನೇಪಾಳಿ ಪ್ರವಾಸಿಗರೂ ನಾಪತ್ತೆಯಾಗಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಮಾಹಿತಿ ತಿಳಿಸಿದೆ.

Ad Widget
Continue Reading

ಬಿಗ್ ನ್ಯೂಸ್

Singapore-ಜನನ ಪ್ರಮಾಣ ಹೆಚ್ಚಿಸಲು ಸಿಂಗಾಪುರ ಸರ್ಕಾರದ ವಿನೂತನ ಯೋಜನೆ; ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್‌’ ಆ್ಯಪ್‌

Published

on



Ad Widget

Ad Widget

Ad Widget

Ad Widget

ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸಿಂಗಾಪುರ ಸರ್ಕಾರ ವಿನೂತನ ಯೋಜನೆಗೆ ಮುಂದಾಗಿದೆ. ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್‌’ ಎಂಬ ಡೇಟಿಂಗ್ ಆ್ಯಪ್‌ ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ.

Ad Widget

Ad Widget

Ad Widget

Ad Widget

ಸಿಂಗಾಪುರ: ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸಿಂಗಾಪುರ ಸರ್ಕಾರ ವಿನೂತನ ಯೋಜನೆಗೆ ಮುಂದಾಗಿದೆ. ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್‌’ ಎಂಬ ಡೇಟಿಂಗ್ ಆ್ಯಪ್‌ ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಈ ಆ್ಯಪ್‌ನಲ್ಲಿ 21ರಿಂದ 35 ವರ್ಷದೊಳಗಿನ ಸರ್ಕಾರಿ ನೌಕರರು ಪರಸ್ಪರ ಪರಿಚಯವಾಗಿ, ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಯುವಜನರು ಸಂಬಂಧ ಬೆಳೆಸಿಕೊಂಡು ಕುಟುಂಬ ಆರಂಭಿಸಲು ಹಾಗೂ ಮಕ್ಕಳನ್ನು ಹೊಂದಲು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ.

Ad Widget

Ad Widget <> Ad Widget

ಸಿಂಗಾಪುರದ ಸರ್ಕಾರಿ ತಂತ್ರಜ್ಞಾನ ಸಂಸ್ಥೆ ಗವ್‌ಟೆಕ್‌ ಈ ಆ್ಯಪ್‌ ಅಭಿವೃದ್ಧಿಪಡಿಸಿದೆ. ಆ್ಯಪ್‌ ಬಳಸುವವರು ತಮ್ಮ ಆಸಕ್ತಿಗಳು, ಅಭ್ಯಾಸಗಳು ಹಾಗೂ ವೈಯಕ್ತಿಕ ಆದ್ಯತೆಗಳಿಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಭರ್ತಿ ಮಾಡಬೇಕು. ಅದರ ಆಧಾರದ ಮೇಲೆ ಬಳಕೆದಾರರಿಗೆ ಸೂಕ್ತ ಸಂಗಾತಿಯನ್ನು ಆ್ಯಪ್‌ ಸೂಚಿಸುತ್ತದೆ.



Ad Widget

ಸೂಚಿಸಲಾದ ವ್ಯಕ್ತಿಯೊಂದಿಗೆ ಸಂಪರ್ಕ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಇಬ್ಬರೂ ಪರಸ್ಪರ ಒಪ್ಪಿಕೊಂಡ ಬಳಿಕವಷ್ಟೇ ಸಂಪರ್ಕ ವಿವರಗಳನ್ನು ಪಡೆಯಲು ಅವಕಾಶವಿರುತ್ತದೆ. ಹೊಂದಾಣಿಕೆ ಆಗದಿದ್ದರೆ ಮತ್ತೊಬ್ಬ ವ್ಯಕ್ತಿಯನ್ನು ಆ್ಯಪ್‌ ಸೂಚಿಸುತ್ತದೆ.

Ad Widget

Ad Widget

ಸಿಂಗಾಪುರದಲ್ಲಿ ಜನನ ಪ್ರಮಾಣ ನಿರಂತರವಾಗಿ ಕುಸಿಯುತ್ತಿದ್ದು, ಒಟ್ಟು ಫಲವತ್ತತೆ ಪ್ರಮಾಣ 0.87ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಜನನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ‘ಫಸ್ಟ್‌ಡೇಟ್‌’ ಆ್ಯಪ್‌ ಕೂಡ ಅದರ ಭಾಗವಾಗಿದೆ.

Ad Widget
Continue Reading

ಬಿಗ್ ನ್ಯೂಸ್

Fly Dubai plane-ಫ್ಲೈ ದುಬೈ ವಿಮಾನದಲ್ಲಿ ಕಾಕ್‌ಪಿಟ್‌ ಗಲಾಟೆ; ಯುಎಇ ಅಧಿಕಾರಿಗಳಿಂದ ತನಿಖೆ ಆರಂಭ – ಪ್ರಯಾಣಿಕರ ಕರೆದೊಯ್ಯಲು ಇಸ್ರೇಲ್ ವಿಮಾನ ಪ್ರವೇಶಕ್ಕೆ ಸೌದಿ ಅನುಮತಿ ನಿರಾಕರಣೆ

Published

on



Ad Widget

Ad Widget

Ad Widget

Ad Widget

ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈ ದುಬೈ ಎಫ್‌ಝಡ್1073 ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿ ನಡೆದ ಪ್ರಕರಣದ ಕುರಿತು ಯುಎಇ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಘಟನೆಯ ತನಿಖೆಯನ್ನು ಯುಎಇಯ ನ್ಯಾಯಾಂಗ ಪ್ರಾಧಿಕಾರಗಳು ನಡೆಸಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Ad Widget

Ad Widget

Ad Widget

Ad Widget

ದುಬೈ: ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈ ದುಬೈ ಎಫ್‌ಝಡ್1073 ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿ ನಡೆದ ಪ್ರಕರಣದ ಕುರಿತು ಯುಎಇ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಘಟನೆಯ ತನಿಖೆಯನ್ನು ಯುಎಇಯ ನ್ಯಾಯಾಂಗ ಪ್ರಾಧಿಕಾರಗಳು ನಡೆಸಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಬುಧವಾರ ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಜಗಳದ ಹಿನ್ನೆಲೆಯಲ್ಲಿ ವಿಮಾನವನ್ನು ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಬಳಿಕ ಒಮನ್ ಮೂಲದವನೆಂದು ಹೇಳಲಾಗಿರುವ ಸಹ-ಪೈಲಟ್‌ನನ್ನು ಸೌದಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Ad Widget

Ad Widget <> Ad Widget

ವರದಿಗಳ ಪ್ರಕಾರ, ವಿಮಾನವನ್ನು ಪತನಗೊಳಿಸಲು ಸಹ-ಪೈಲಟ್ ಯತ್ನಿಸಿದ್ದಾರೆ ಎನ್ನಲಾಗಿದ್ದು, ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತಡೆಯಲು ಮುಂದಾದಾಗ ಕಾಕ್‌ಪಿಟ್‌ನಲ್ಲಿ ಹೋರಾಟ ನಡೆದಿದೆ. ಈ ವೇಳೆ ಮಚ್ಚರ್ ಅವರಿಗೆ ಚಾಕುವಿನಿಂದ ಇರಿತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.



Ad Widget

ಘಟನೆ ನಡೆದಾಗ ವಿಮಾನದಲ್ಲಿ 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರು ಇದ್ದರು. ವಿಮಾನದಲ್ಲಿದ್ದ ಫ್ಲೈ ದುಬೈ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ವಿಮಾನವನ್ನು ಸುರಕ್ಷಿತಗೊಳಿಸಿದರು ಎಂದು ಸಂಸ್ಥೆ ತಿಳಿಸಿದೆ.

Ad Widget

Ad Widget

ಘಟನೆಯ ಸಂಪೂರ್ಣ ಸಂದರ್ಭ ಹಾಗೂ ಕಾರಣಗಳನ್ನು ಪರಿಶೀಲಿಸಲು ಪಬ್ಲಿಕ್ ಪ್ರಾಸಿಕ್ಯೂಷನ್‌ನ ವಿಶೇಷ ಸದಸ್ಯರ ತಂಡವನ್ನು ರಚಿಸುವಂತೆ ಯುಎಇ ಅಟಾರ್ನಿ ಜನರಲ್ ಆದೇಶಿಸಿದ್ದಾರೆ. ವಿಮಾನವು ಯುಎಇಯಲ್ಲಿ ನೋಂದಣಿಯಾಗಿದ್ದು, ಯುಎಇ ಧ್ವಜವನ್ನು ಹೊಂದಿರುವ ಹಿನ್ನೆಲೆಯಲ್ಲಿ ಅನ್ವಯವಾಗುವ ಕಾನೂನಿನಡಿ ತನಿಖೆ ನಡೆಸುವ ಅಧಿಕಾರ ಯುಎಇ ನ್ಯಾಯಾಂಗ ಪ್ರಾಧಿಕಾರಗಳಿಗೆ ಇದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಘಟನೆಯ ಹಿಂದೆ ಭಯೋತ್ಪಾದಕ ಚಟುವಟಿಕೆ ಅಥವಾ ಉದ್ದೇಶವಿದೆಯೇ, ಪೂರ್ವನಿಯೋಜಿತ ಕೃತ್ಯವೇ ಎಂಬುದೂ ಸೇರಿದಂತೆ ಎಲ್ಲ ಸಾಧ್ಯತೆಗಳನ್ನು ತನಿಖಾ ತಂಡ ಪರಿಶೀಲಿಸಲಿದೆ. ಯುಎಇ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಸೇರಿದಂತೆ ಸಂಬಂಧಿತ ಅಧಿಕಾರಿಗಳ ಸಹಕಾರದೊಂದಿಗೆ ತನಿಖೆ ಆರಂಭಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತನಿಖೆ ಪೂರ್ಣಗೊಳ್ಳುವವರೆಗೆ ಅಧಿಕೃತ ಮೂಲಗಳು ಬಿಡುಗಡೆ ಮಾಡುವ ಮಾಹಿತಿಯನ್ನು ಮಾತ್ರ ನಂಬಬೇಕು. ಊಹಾಪೋಹಗಳು ಹಾಗೂ ನಂಬಲರ್ಹವಲ್ಲದ ವರದಿಗಳನ್ನು ತಪ್ಪಿಸುವಂತೆ ವಿದೇಶಾಂಗ ಸಚಿವಾಲಯ ಮನವಿ ಮಾಡಿದೆ.

ಇಸ್ರೇಲ್‌ನ ಕೋರಿಕೆ ತಿರಸ್ಕಾರ

ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಫ್ಲೈ ದುಬೈ ವಿಮಾನದ ಪ್ರಯಾಣಿಕರನ್ನು ವಾಪಸ್ ಕರೆತರಲು ತನ್ನ ವಿಮಾನಗಳಿಗೆ ಸೌದಿ ವಾಯುಪ್ರದೇಶದಲ್ಲಿ ಹಾರಾಟ ನಡೆಸಲು ಅನುಮತಿ ನೀಡಬೇಕೆಂಬ ಇಸ್ರೇಲ್‌ನ ಕೋರಿಕೆಯನ್ನು ಸೌದಿ ಅರೇಬಿಯಾ ತಿರಸ್ಕರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಇಸ್ರೇಲಿ ಪ್ರಯಾಣಿಕರನ್ನು ಕರೆತರಲು ತನ್ನ ಮಿಲಿಟರಿ ವಿಮಾನಗಳಿಗೆ ಅನುಮತಿ ನೀಡುವಂತೆ ಇಸ್ರೇಲ್ ಮನವಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಕಾಕ್‌ಪಿಟ್‌ನಲ್ಲಿ ನಡೆದ ಘಟನೆಯ ಕುರಿತು ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫ್ಲೈ ದುಬೈ ಸಂಸ್ಥೆಯು ಇಸ್ರೇಲ್‌ಗೆ ಹಾಗೂ ಇಸ್ರೇಲ್‌ನಿಂದ ತನ್ನ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading