ಶಿಕ್ಷಣ
Dr. Virupaksha-ಉತ್ತಮ ಪೋಷಕತ್ವವು ಅತ್ಯಂತ ಶ್ರೇಷ್ಠವಾದ ದೇಶಸೇವೆ : ಡಾ. ವಿರೂಪಾಕ್ಷ ದೇವರಮನೆ; ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ʼವಿವೇಕ ಸಂಕಲ್ಪ-2024ʼ ಪೋಷಕರ ಸಮಾವೇಶ ಹಾಗೂ ಕಾಲೇಜು ಪ್ರಾರಂಭೋತ್ಸವ; ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ.
ಇಂದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲುಗಳಿವೆ. ಪರಿಸರದ ವಿವಿಧ ಆಕರ್ಷಣೆಗಳ ಮಧ್ಯದಲ್ಲಿ ವಿದ್ಯಾರ್ಥಿಗಳು ಬದುಕಬೇಕಾಗಿದೆ. ಪೋಷಕರು ವಿದ್ಯಾರ್ಥಿಗಳ ಅಂತರಂಗವನ್ನು ಅರಿತುಕೊಳ್ಳುತ್ತಾ, ಅವರು ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ಸಹಕಾರವನ್ನು ನೀಡಬೇಕಾಗಿದೆ.

ಯಾವ ಮಗುವಿಗೆ ತಂದೆ, ತಾಯಿಯ ಪ್ರೀತಿ, ಮಮತೆ, ವಿಶ್ವಾಸ ದೊರಕುವುದೋ, ಆ ಮಗು ಯಾವುದೇ ದುಷ್ಚಟಗಳಿಗೆ ಬಲಿಯಾಗುವುದಿಲ್ಲ. ಆದುದರಿಂದ ಉತ್ತಮ ಪೋಷಕತ್ವವು ಅತ್ಯಂತ ಶ್ರೇಷ್ಠವಾದ ದೇಶಸೇವೆ” ಎಂದು ಖ್ಯಾತ ಮನೋವೈದ್ಯರು ಹಾಗೂ ಲೇಖಕರಾದ ಡಾ.ವಿರೂಪಾಕ್ಷ ದೇವರಮನೆ ಅವರು ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳ ವಿದ್ಯಾರ್ಥಿ-ಪೋಷಕರ ಸಮಾವೇಶ ʼವಿವೇಕ ಸಂಕಲ್ಪ-2024ʼ ರಲ್ಲಿ ಪಾಲ್ಗೊಂಡು ಪೋಷಕರನ್ನುದ್ದೇಶಿಸಿ ಮಾತನಾಡಿದರು. ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಸಾಕಷ್ಟು ಶಾರೀರಿಕ ಹಾಗೂ ಮಾನಸಿಕ ಬದಲಾವಣೆಗಳು ಆಗುತ್ತಿರುತ್ತವೆ. ಈ ಹಂತದಲ್ಲಿ ಪೋಷಕರು ಮಕ್ಕಳ ಮಾನಸಿಕ ಬದಲಾವಣೆಗಳನ್ನು ಅರ್ಥೈಸಿಕೊಂಡು ಅವರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತದೆ. ಪೋಷಕರು ತಮ್ಮ ಕೆಲಸದ ಒತ್ತಡಗಳನ್ನು ಬದಿಗಿರಿಸಿ ಅವರ ಜತೆ ನಿರಂತರ ಸಂಪರ್ಕ, ಸಂವಹನವನ್ನು ಮಾಡಬೇಕು. ಮಕ್ಕಳು ಮುಕ್ತವಾಗಿ ತಮ್ಮ ಭಾವನೆಗಳನ್ನು ಪೋಷಕರಲ್ಲಿ ಹಂಚಿಕೊಳ್ಳಬೇಕು. ಇಂತಹ ಪರಿಸರವನ್ನು ಪೋಷಕರು ಮಾತ್ರ ನಿರ್ಮಿಸಲು ಸಾಧ್ಯ. ಮಕ್ಕಳನ್ನು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರಿಸದೆ, ಸಮಾಜದಲ್ಲಿ ನೆನಪಿಡುವಂತಹ ಕಾರ್ಯಗಳನ್ನು ಮಾಡಿಸುವಲ್ಲಿ ಪೋಷಕರ ಬೆಂಬಲ ಅತೀ ಅಗತ್ಯವಾಗಿರುತ್ತದೆ ಎಂದು ಕಿವಿಮಾತನ್ನು ಹೇಳಿದರು. ವಿಶೇಷ ಉಪನ್ಯಾಸದ ಬಳಿಕ ಪೋಷಕರೊಂದಿಗೆ ಸಂವಾದವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಪಿ.ರವೀಂದ್ರ ಇವರು ಮಾತನಾಡಿ ಪ್ರತಿ ವಿದ್ಯಾರ್ಥಿಯು ವಿಭಿನ್ನ ರೀತಿಯಲ್ಲಿ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆಂಬ ಪೋಷಕರ ಕನಸಿಗೆ ವಿದ್ಯಾಸಂಸ್ಥೆ, ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಬೆಂಬಲ ಕೊಡುವಲ್ಲಿ, ಉತ್ತಮ ಸಹಕಾರದ ಭರವಸೆಯನ್ನಿತ್ತರು. ಭಾರತೀಯ ಆಚಾರ-ವಿಚಾರ, ಸಂಸ್ಕೃತಿಯ ಮೇಲೆ ತಲೆಯೆತ್ತಿದ ಸಂಸ್ಥೆಗೆ ಸುಮಾರು ಏಳಕ್ಕಿಂತಲೂ ಹೆಚ್ಚಿನ ರಾಜ್ಯಗಳಿಂದ ಇಪ್ಪತ್ತೇಳು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಸೇರ್ಪಡೆಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.
ವಿದ್ಯಾರ್ಥಿಗಳು ವಯಸ್ಸಿನ ಆಕರ್ಷಣೆಯ ದೌರ್ಬಲ್ಯದ ಇಳಿಜಾರಿಗೆ ಕಾಲಿಡದೆ, ಉತ್ತಮ ಬದುಕನ್ನು ರೂಪಿಸಿಕೊಳ್ಳುವ ಬಗೆಗೆ ಗಮನಹರಿಸಬೇಕೆಂದು ನೈಜ ಉದಾಹರಣೆಯೊಂದಿಗೆ ಮಕ್ಕಳಿಗೆ ಮನವರಿಕೆ ಮಾಡಿದರು. ಪಿಯುಸಿಯು ಬಹಳ ನಿರ್ಣಾಯಕ ಹಂತವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರಜ್ಞಾವಂತ ಪೋಷಕರು ಈ ಸಂಸ್ಥೆಯನ್ನು ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ನಿಟಿಲಾಪುರ ಅವರು ವಿದ್ಯಾರ್ಥಿಗಳಿಗೆ ಕಾಲೇಜು ವ್ಯವಸ್ಥೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಕಾಲೇಜು ವಿದ್ಯಾರ್ಥಿಗಳು, ಸಂಸ್ಥೆಯ ಧ್ಯೇಯ ಮತ್ತು ಶಿಕ್ಷಣಾವಕಾಶಗಳನ್ನು ಪರಿಚಯಿಸುವ ವಿವೇಕಾಂತರಂಗ-ಯಕ್ಷ-ಗಾನ ತರಂಗ ಎಂಬ ಸಂದರ್ಭೋಚಿತ ಸಾಂಸ್ಕೃತಿಕ ತುಣುಕನ್ನು ಪ್ರದರ್ಶಿಸಿದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವೈದೇಹಿ ಸಭಾಂಗಣದಲ್ಲಿ ಹಾಗೂ ವಾಣಿಜ್ಯ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ನೇತಾಜಿ ಸಭಾಭವನದಲ್ಲಿ ಮುಂದಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿವರವಾದ ಸೂಚನೆಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ವತ್ಸಲಾ ರಾಜ್ಞಿ, ಡಾ. ಕೆ.ಎನ್.ಸುಬ್ರಹ್ಮಣ್ಯ, ವಸತಿ ನಿಲಯದ ಆಡಳಿತ ಮಂಡಳಿ ಅದ್ಯಕ್ಷರಾದ ರಮೇಶ್ಪ್ರಭು, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ರಾವ್ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸರಸ್ವತೀ ವಂದನೆಯೊಂದಿಗೆ ಪ್ರಾರಂಭಿಸಲಾಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ದೇವಿಚರಣ್ರೈ ನೆರೆದವರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕಿಯರಾದ ಪುಷ್ಪಲತಾ ಹಾಗೂ ಸವಿತಾ ಕುಮಾರಿ ಇವರು ನಿರೂಪಿಸಿ, ವಂದಿಸಿದರು.
ಶಿಕ್ಷಣ
Vivekananda-ಸದ್ದಿಲ್ಲದೆ ಸಾಹಿತ್ಯ ಸೇವೆಗೈಯ್ಯುತ್ತಿದೆ ಪುಸ್ತಕ ಅವಲೋಕನ ಬಳಗ
ಈ ಬಾರಿಯ ಕನ್ನಡ ರಾಜ್ಯೋತ್ಸವವು ಅನೇಕ ಓದುಗ ಮತ್ತು ಬರೆಹಗಾರರಿಗೆ
ವಿಶೇಷವಾದುದು. ಪುಸ್ತಕ ಅವಲೋಕನ – ಓದುಬರಹದ ಸುತ್ತಮುತ್ತ ಎಂಬ
ಹೆಸರಿನ ಫೇಸ್ ಬುಕ್ ಬಳಗವೊಂದು ನವೆಂಬರ್ ಇಡೀ ತಿಂಗಳು ಪ್ರತಿದಿನವೂ ಒಬ್ಬೊಬ್ಬ ಲೇಖಕರ ಕುರಿತು ಪುಸ್ತಕ ಪರಿಚಯ ಅಭಿಯಾನವನ್ನು ನಡೆಸುತ್ತಿದೆ.
ಈ ಬಾರಿಯ ಕನ್ನಡ ರಾಜ್ಯೋತ್ಸವವು ಅನೇಕ ಓದುಗ ಮತ್ತು ಬರೆಹಗಾರರಿಗೆ
ವಿಶೇಷವಾದುದು. ಪುಸ್ತಕ ಅವಲೋಕನ – ಓದುಬರಹದ ಸುತ್ತಮುತ್ತ ಎಂಬ
ಹೆಸರಿನ ಫೇಸ್ ಬುಕ್ ಬಳಗವೊಂದು ನವೆಂಬರ್ ಇಡೀ ತಿಂಗಳು ಪ್ರತಿದಿನವೂ ಒಬ್ಬೊಬ್ಬ
ಲೇಖಕರ ಕುರಿತು ಪುಸ್ತಕ ಪರಿಚಯ ಅಭಿಯಾನವನ್ನು ನಡೆಸುತ್ತಿದೆ.
ಗುಂಪಿನ ನಿರ್ವಾಹಕರಾದ ವೀಣಾ ನಾಯಕ್ ಮತ್ತು ವಸಂತ ಗಣೇಶ್ ಅವರ ಕನ್ನಡಪರ ಮನಸ್ಸಿನ ಬಹಳ ದೊಡ್ಡ ಯೋಜನೆಯಿದು. ಮೂವತ್ತು ದಿನಕ್ಕೆ ಮೂವತ್ತು ಸಾಹಿತಿಗಳ ಪಟ್ಟಿಯನ್ನು ಮೊದಲೇ
ನೀಡಲಾಗಿದ್ದು ನವೋದಯ ಪೂರ್ವ, ನವೋದಯದಿಂದ ತೊಡಗಿ ಇತ್ತೀಚಿನವರೆಗಿನ ಪ್ರಮುಖ ಸಾಹಿತಿಗಳು, ಎಲೆಮರೆಯ ಕಾಯಿಯಂತಿದ್ದ ಸಾಧಕ ಸಾಹಿತಿಗಳ ಮತ್ತು ಪ್ರಮುಖ ಅನುವಾದ ಸಾಹಿತಿಗಳ ಪರಿಚಯ ಮತ್ತು ಅವರ ಕೃತಿಗಳನ್ನು ಅವಲೋಕಿಸುವ ಅಭಿಯಾನವಿದು.
ಪಂಜೆ ಮಂಗೇಶರಾವ್, ರಾಶಿ, ವಂಶಿ, ವ್ಯಾಸರಾವ್ ನಿಂಜೂರ್, ಕೆರೂರು ವಾಸುದೇವಾಚಾರ್ಯ, ಶ್ರೀರಂಗ, ಗಳಗನಾಥ, ಆಲೂರ ವೆಂಕಟರಾವ್, ಕಮಲಾ ಹಂಪನ, ಕುವೆಂಪು, ಮೊಗಳ್ಳಿ ಗಣೇಶ್, ಸುಬ್ರಾಯ ಚೊಕ್ಕಾಡಿ, ವೀರ ಕೇಸರಿ ಸೀತಾರಾಮಶಾಸ್ತ್ರಿ, ಗೌರೀಶ್ ಕಾಯ್ಕಿಣಿ, ಎಸ್.ವಿ.ಪಿ., ವಿವೇಕ ಶಾನಭಾಗ, ಡಾ. ಸಿ.ಆರ್. ಚಂದ್ರಶೇಖರ್, ಡಿ.ವಿ.ಜಿ, ಸಂತೋಷ ಕುಮಾರ ಮೆಹೆಂದಳೆ ಹೀಗೆ ಸಾಹಿತ್ಯದ
ಬೇರೆಬೇರೆ ಕಾಲಘಟ್ಟದ ಮೂವತ್ತು ಜನ ಅಪೂರ್ವ ಸಾಹಿತಿ, ಕವಿಗಳ ಪರಿಚಯ
ನಡೆಯುತ್ತಿದೆ. ದಿನಂಪ್ರತಿ ಈ ಬಳಗದ ಸುಮಾರು 40 – 45 ರಷ್ಟು ಸದಸ್ಯರು
ಆಯಾ ಕವಿಗಳ, ಕೃತಿಗಳ ಕುರಿತು ಪರಿಚಯಾತ್ಮಕ ಲೇಖನಗಳನ್ನು ಬರೆಯುತ್ತಿರುವುದು ಗಮನಾರ್ಹವಾದುದು.
2021 ರಲ್ಲಿ ರಚನೆಯಾದ ಈ ಫೇಸ್ ಬುಕ್ ಬಳಗವು ಯಶಸ್ವಿಯಾಗಿ ಆರು ವರ್ಷಗಳನ್ನು ಪೂರೈಸುತ್ತಿದ್ದು ನಾಡಿನ ಅನೇಕ ಗಣ್ಯಾತಿಗಣ್ಯರನ್ನು, ಹಿರಿಯ ಸಾಹಿತಿಗಳನ್ನು ಸೇರಿದಂತೆ 21,600 ಕ್ಕಿಂತಲೂ ಹೆಚ್ಚು ಸದಸ್ಯರನ್ನು ಒಳಗೊಂಡು ಸಕ್ರಿಯವಾಗಿ ಸಾಹಿತ್ಯ ಚಟುವಟಿಕೆಗಳನ್ನು ನಿರಂತರ ನಡೆಸಿಕೊಂಡು ಬರುತ್ತಿದೆ. ಉಮಾಶಂಕರ್ ಟಿ.ಆರ್. ಅವರು ಸಂಸ್ಥಾಪಕರಾಗಿ, ನಿರ್ವಾಹಕರಾಗಿ (ಅಡ್ಮಿನ್)
ಆರಂಭಗೊಳಿಸಿದ ಈ ಪುಸ್ತಕ ಬಳಗವು ಪ್ರಸ್ತುತ ಉಮಾಶಂಕರ್ ಟಿ. ಆರ್. (ಸಂಸ್ಥಾಪಕರು ಮತ್ತು ಮುಖ್ಯ ನಿರ್ವಾಹಕರು), ದೇವಿಶ್ರೀ ಪ್ರಸಾದ್, ವೀಣಾ ನಾಯಕ್, ವಸಂತ ಗಣೇಶ್, ಶಶಿ ಶಂಕರ್, ಪವಿತ್ರ ಹೆತ್ತೂರು ಈ ಆರು ಜನ ನಿರ್ವಾಹಕರನ್ನು ಒಳಗೊಂಡು ಕಾರ್ಯ ನಿರ್ವಹಿಸುತ್ತಿದೆ.
ಪುಸ್ತಕದ ಕುರಿತಾಗಿಯೇ ಚರ್ಚೆಗಳು ನಡೆಯುವ, ಪುಸ್ತಕದ ಓದು ಮತ್ತು ಬರೆಹಕ್ಕಷ್ಟೇ ಇರುವಂತಹ ಈ ಬಳಗದಲ್ಲಿ ಕನ್ನಡದ ವಿವಿಧ ಕೃತಿಗಳ ಕುರಿತು ರಸಪ್ರಶ್ನೆ, ಪದಬಂಧ ಇತ್ಯಾದಿ ಸ್ಪರ್ಧೆಗಳು ಕೂಡ ನಡೆಯುತ್ತವೆ. ವಿವಿಧ ವಸ್ತುಗಳನ್ನು ನೀಡಿ ಬರೆಯಿಸುವ ಲೇಖನ ಅಭಿಯಾನಗಳು ಕೂಡ ಸಾಕಷ್ಟು
ನಡೆಯುತ್ತವೆ. ಸದಸ್ಯರು ತಾವು ಓದಿದ ಪುಸ್ತಕದ ಪರಿಚಯವನ್ನು ಮಾಡುವ, ವಿಮರ್ಶಾತ್ಮಕ ಲೇಖನಗಳನ್ನು ಪೋಸ್ಟ್ ಮಾಡುವ ಮೂಲಕ ಸ್ವಾರಸ್ಯಕರ ಚರ್ಚೆಯನ್ನು ನಡೆಸುತ್ತಿದ್ದಾರೆ. ಡಾ. ನಾ. ಮೊಗಸಾಲೆ, ಚಿತ್ರಲೇಖಾ ಶಶೀಂದ್ರನ್, ಲಕ್ಷ್ಮಣ ಕೌಂಟೆ, ವಿಠಲ ಶೆಣೈ, ರಮೇಶ್ ಶೆಟ್ಟಿಗಾರ, ಮನೋಹರ ಪೈ, ಪಾರ್ವತಿ ಐತಾಳ, ಉಷಾ ನರಸಿಂಹನ್ ಮೊದಲಾದ ಲೇಖಕರು ಸ್ವತಃ ಈ ಚರ್ಚೆಯಲ್ಲಿ
ಭಾಗವಹಿಸುತ್ತಿರುವುದು ಸಾಹಿತ್ಯದ ವಿಚಾರ ವಿನಿಮಯಕ್ಕೆ ಪೂರಕವಾಗಿದೆ. ಗುಂಪಿನ
ಸದಸ್ಯರ ನಡುವೆ ಪುಸ್ತಕಗಳ ವಿನಿಮಯವೂ ನಡೆಯುತ್ತದೆ. ಒಬ್ಬರು ಪರಿಚಯಿಸಿದ ಪುಸ್ತಕವು ಕುತೂಹಲ ಮೂಡಿಸಿ ಅನೇಕರು ಆ ಪುಸ್ತಕವನ್ನು
ಖರೀದಿಸಲು ಪ್ರೇರಣೆ ನೀಡಿದೆ. ಇದರಿಂದ ಲೇಖಕರ ವೈಯಕ್ತಿಕ ಪರಿಚಯವೂ
ಆದದ್ದಿದೆ. ತನ್ಮೂಲಕ ಲೇಖಕರಿಗೂ ಪ್ರೇರಣೆ ದೊರಕಿದಂತಾಗಿದೆ.
ಲೇಖನಗಳನ್ನು ಬರೆದವರಿಗೆ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ, ಪ್ರತಿ ತಿಂಗಳು ಅತ್ಯುತ್ತಮ ಲೇಖನ ಬರೆದವರಿಗೆ ಪುಸ್ತಕಗಳನ್ನೇ ಬಹುಮಾನವಾಗಿ ನೀಡುವ ವಿಶಿಷ್ಟ ಯೋಜನೆ ಇಲ್ಲಿದೆ. ಈ ಬಳಗದ ಸದಸ್ಯರಲ್ಲೇ ಕೆಲವರು ಪ್ರಾಯೋಜಕತ್ವವನ್ನು ವಹಿಸಿಕೊಂಡು ಪ್ರತಿ ವರ್ಷವೂ ನಿಗದಿತ ಮೊತ್ತವನ್ನು ಈ
ಬಳಗಕ್ಕೆ ಪುಸ್ತಕ ಬಹುಮಾನ ನೀಡಲೆಂದು ನೀಡುವವರಿದ್ದಾರೆ. ಸ್ವತಃ ಲೇಖಕರೂ ತಮ್ಮ ಪುಸ್ತಕಗಳನ್ನು ಪ್ರಾಯೋಜಿಸುವ ಅವಕಾಶ ಇಲ್ಲಿದ್ದು ಅನೇಕರು ತಮ್ಮ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ನೀಡಿರುತ್ತಾರೆ. ಅಲ್ಲದೆ, ಅನೇಕ ವಿಶೇಷ ಅಭಿಯಾನಗಳಲ್ಲಿ ನಗದು ಬಹುಮಾನವನ್ನೂ ನೀಡಿ
ಪ್ರೊತ್ಸಾಹಿಸಲಾಗುತ್ತಿದೆ. ಬಹುಮಾನದ ಮೊತ್ತವನ್ನು ವಿಜೇತರಿಗೆ ನೀಡುವ ಜವಾಬ್ದಾರಿಯನ್ನು, ಬಹುಮಾನದ ಪುಸ್ತಕಗಳನ್ನು ವಿಳಾಸ ಬರೆದು ಅಚ್ಚುಕಟ್ಟಾಗಿ ಅಂಚೆ ಮುಖೇನ (ಅಂಚೆ ವೆಚ್ಚವನ್ನು ಸೇರಿಸಿ) ಬರೆಹಗಾರರಿಗೆ ತಲುಪಿಸುವ ಏರ್ಪಾಡನ್ನು ಬಳಗದ ಹಿರಿಯ ನಿರ್ವಾಹಕಿ ವೀಣಾ ನಾಯಕ್ ಅವರು ಮಾಡಿಕೊಂಡು ಬರುತ್ತಿದ್ದಾರೆ.
ಬರೆಹಗಾರರ ಆಸಕ್ತಿ ಮತ್ತು ಅಭಿರುಚಿಯನ್ನು ಗುರುತಿಸಿ ಅಂತಹ ಪುಸ್ತಕವನ್ನೆ ಬಹುಮಾನ ರೂಪದಲ್ಲಿ ಕಳುಹಿಸುವುದು ಅವರ ವೈಶಿಷ್ಟ್ಯವಾಗಿದೆ. ಹಾಗೆ ನೀಡುವ ಪುಸ್ತಕದ ಒಳಪುಟದಲ್ಲಿ ಅಭಿಯಾನದ
ಹೆಸರು ಮತ್ತು ಪ್ರಾಯೋಜಕರ ಮಾಹಿತಿ ಇದ್ದು ಅದೊಂದು ದಾಖಲೆಯಾಗಿ ಸದಾ
ನೆನಪಿನಲ್ಲಿ ಉಳಿಯುವಂತಿದೆ. ಪ್ರತಿಯೊಬ್ಬರು ನೀಡಿದ ಹಣಕ್ಕೆ ಲೆಕ್ಕಾಚಾರ
ಇಡುತ್ತಾರಾದರೂ ಯಾವುದೇ ರೀತಿಯ ಹಣಕಾಸಿನ ಲೆಕ್ಕಾಚಾರದ ಚರ್ಚೆ ಇಲ್ಲಿ
ನಡೆಯುವುದಿಲ್ಲ. ಕಡಿಮೆಯಾದ ಮೊತ್ತವನ್ನು ಅಡ್ಮಿನ್ ಅವರೇ ಭರಿಸುವುದೂ ಇದೆ.
ಲೇಖನಗಳನ್ನು ಬರೆದವರೆಲ್ಲರಿಗೂ ಪುಸ್ತಕ ಬಹುಮಾನ ನೀಡುವ ಪತ್ರವನ್ನು ಕೂಡ ನೀಡಲಾಗುತ್ತಿದೆ. ಅಭಿನಂದನಾ ಪತ್ರವು ಅಭಿಯಾನದ ಹೆಸರು, ಪ್ರಾಯೋಜಕರ ಮತ್ತು ಬಹುಮಾನ ವಿಜೇತರ ಭಾವಚಿತ್ರವನ್ನು ಒಳಗೊಂಡ ದಾಖಲೆಯಾಗಿ ರೂಪುಗೊಂಡು ಒಳ್ಳೆಯ ನೆನಪಾಗಿ, ಸಂಭ್ರಮವನ್ನು
ಹೆಚ್ಚಿಸುವಂತಿದೆ.
ಕನ್ನಡ ಪುಸ್ತಕಗಳ ಓದು ಮತ್ತು ಬರೆವಣಿಗೆಗೆ ಪ್ರೇರಣೆ ಮತ್ತು ಪ್ರೋತ್ಸಾಹ ಕೊಡುವುದು ಈ ಅಭಿಯಾನಗಳ ಉದ್ದೇಶವಾಗಿದ್ದು ಅನೇಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬರೆವಣಿಗೆಯ ಕೌಶಲವನ್ನು ಪಡೆಯುತ್ತಿರುವುದು ಈ ಬಳಗದ ಸಾಧನೆಯಾಗಿದೆ. ಗುಂಪಿನ ಸದಸ್ಯರೇ
ಪರಸ್ಪರ ಸಹಕಾರವನ್ನು ನೀಡುವ ಮೂಲಕ ಮುನ್ನಡೆಯುತ್ತಿರುವ ಈ ಫೇಸ್
ಬುಕ್ ಬಳಗವು ಸಾಮಾಜಿಕ ಜಾಲತಾಣವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು
ಎಂಬುದಕ್ಕೆ ಸಾಕ್ಷಿಯಾಗಿದೆ.
ಫೇಸ್ ಬುಕ್ ಎಂಬುದು ಇಲ್ಲಿ ಬುಕ್ ಫೇಸ್ ಆಗಿದೆ. ಬಹಳಷ್ಟು ಜನ ಮಹಿಳೆಯರು ಓದಿ
ಬರೆಯುತ್ತಿದ್ದಾರೆ. ಯುವ ತಲೆಮಾರಿಗೆ ಪುಸ್ತಕ ಓದುವ ಹವ್ಯಾಸವನ್ನು ದಾಟಿಸುವ, ಓದಿದ್ದನ್ನು ಬರೆಯುವ ಕೌಶಲ ಬೆಳೆಸುವ ನಿಟ್ಟಿನಲ್ಲಿ ಈ ಪುಸ್ತಕ ಅವಲೋಕನ ಬಳಗವು ಕೊಡುಗೆಯನ್ನು ನೀಡುತ್ತಿದೆ. ಯಾವುದೇ ಹೊಗಳಿಕೆ, ಪ್ರತಿಫಲದ ನಿರೀಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಕನ್ನಡದ ಸೇವೆಯನ್ನು
ಮಾಡುತ್ತಿರುವ ಪುಸ್ತಕ ಅವಲೋಕನ ಬಳಗದ ಎಲ್ಲ ನಿರ್ವಾಹಕರಿಗೆ ಅಭಿನಂದನೆಗಳು. ಸಹಕರಿಸುತ್ತಿರುವ ಸದಸ್ಯರಿಗೆ ಶುಭಾಶಯಗಳು. ಈ ಬಳಗ ಇನ್ನಷ್ಟು ಚೈತನ್ಯಪೂರ್ಣವಾಗಿ, ಲವಲವಿಕೆಯಿಂದ ಮುಂದುವರಿಯಲಿ.
ಡಾ. ಗೀತಾ ಕುಮಾರಿ ಟಿ.
ಕನ್ನಡ ಸಹಾಯಕ ಪ್ರಾಧ್ಯಾಪಕಿ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ),
ಪುತ್ತೂರು
ಶಿಕ್ಷಣ
Ambika-ನ.21 : ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ವಿದ್ವಾನ್ ಲಕ್ಷ್ಮೀಶ ತೋಳ್ಪಾಡಿಯವರಿಂದ ಭಗವದ್ಗೀತಾ ಪ್ರವಚನ
ಹಿರಿಯ ಚಿಂತಕ ವಿದ್ವಾನ್ ಲಕ್ಷ್ಮೀಶ ತೋಳ್ಪಾಡಿಯವರಿಂದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ನವೆಂಬರ್ 21ರಂದು ಭಗವದ್ಗೀತಾ ಪ್ರವಚನ ನಡೆಯಲಿದೆ.
ಪುತ್ತೂರು: ಹಿರಿಯ ಚಿಂತಕ ವಿದ್ವಾನ್ ಲಕ್ಷ್ಮೀಶ ತೋಳ್ಪಾಡಿಯವರಿಂದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ನವೆಂಬರ್ 21ರಂದು ಭಗವದ್ಗೀತಾ ಪ್ರವಚನ ನಡೆಯಲಿದೆ.
ಪ್ರವಚನ ಸಂಜೆ 4ರಿಂದ 5ರವರೆಗೆ ನಡೆಯಲಿದೆ. ಈ ಕಾರ್ಯಕ್ರಮ ನವೆಂಬರ್ 7ರಂದು ಆರಂಭಗೊಂಡಿದ್ದು, ಪ್ರತಿ ಮೊದಲನೆಯ ಹಾಗೂ ಮೂರನೇ ಶನಿವಾರಗಳಂದು ನಡೆಯುತ್ತಿವೆ.
ಶಿಕ್ಷಣ
Philomena-ಸಾಂಸ್ಕೃತಿಕ ಸ್ಪರ್ಧೆ: ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಸೃಜನಾ ಪಿ.ಸಿ. ರಾಜ್ಯ ಮಟ್ಟಕ್ಕೆ ಆಯ್ಕೆ
ದಕ್ಷಿಣ ಕನ್ನಡ ಪ ಪೂ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಸೃಜನಾ ಪಿ ಸಿ ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ದ. ಕ ಸಹಯೋಗದಲ್ಲಿ ಗೋವಿಂದ ದಾಸ ಪದವಿ ಪೂರ್ವ ಕಾಲೇಜು ಸುರತ್ಕಲ್ ಆಯೋಜಿಸಿದ ದಕ್ಷಿಣ ಕನ್ನಡ ಪ ಪೂ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಸೃಜನಾ ಪಿ ಸಿ ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ಉಷಾ ರೈ, ಅವಿನಾ ಮಾಡ್ತಾ, ಡಾ. ಲತಾ
ಹಾಗೂ ಸಂದೇಶ್ ಜಾನ್ ಲೋಬೋ ಉಪಸ್ಥಿತರಿದ್ದರು.
-
ಬಿಗ್ ನ್ಯೂಸ್18 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಆರೋಗ್ಯ20 hours agoPuttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ
-
ಶಿಕ್ಷಣ3 hours agoVivekananda-ವಿವೇಕಾನಂದ ಪಾಲಿಟೆಕ್ನಿಕ್ – ನೂತನ ಆಡಳಿತ ಮಂಡಳಿಯ ರಚನೆ : ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ
-
ಬಿಗ್ ನ್ಯೂಸ್24 hours agoPuttur-ಎಸ್ಡಿಪಿಐ ನಿರಂತರ ಪ್ರಯತ್ನ: ಪುತ್ತೂರಿನ ಅಲ್ಪಸಂಖ್ಯಾತರ ಸೇವಾ ಕೇಂದ್ರ ಪುನರಾರಂಭ
-
ಅಪರಾಧ2 hours agoMangalore-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಧರ್ಮಗುರು ಮರುಬಂಧನ
-
ಸ್ಥಳೀಯ2 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
ಅಪರಾಧ2 hours agoManipal police-ಪಟಾಕಿ ಪ್ರಕರಣ: ಮಣಿಪಾಲ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ: ಸಿಎಂಗೆ ಇ-ಮೇಲ್ ಮಾಡಿದ ವಿದ್ಯಾರ್ಥಿಗಳು
-
Uncategorized4 hours ago
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ















