Connect with us

ದಕ್ಷಿಣ ಕನ್ನಡ

karnataka Bank Locker Break : ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಲಾಕರ್ ಬ್ರೇಕ್ ಪ್ರಕರಣ – ಪೊಲೀಸರಿಗೆ ಸಿಕ್ತು ಮಹತ್ವದ ಸುಳಿವು;

Published

on

Ad Widget

Ad Widget

Ad Widget

Ad Widget

ಬಂಟ್ವಾಳ: ಅಡ್ಯನಡ್ಕ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ ಸುಳಿವೇ ಇಲ್ಲದೇ ಒದ್ದಾಡುತ್ತಿದ್ದ ಕರ್ನಾಟಕ ಪೊಲೀಸರ ನೆರವಿಗೆ ಕೇರಳ ರಾಜ್ಯಕ್ಕೆ ಸೇರಿದ ಪೆರ್ಲದಲ್ಲಿ ಅಳವಡಿಸಿದ ಸಿಸಿ ಕ್ಯಾಮಾರ ಮಹತ್ವದ ಸುಳಿವು ಒದಗಿಸಿದೆ. ಕೇರಳ ಸರ್ಕಾರ ರಸ್ತೆ ಬದಿ ಅಳವಡಿಸಿದ ಅತ್ಯಾಧುನಿಕ ಕ್ಯಾಮರಾ ಕಣ್ಣುಗಳಲ್ಲಿ ಲಾಕರ್ ಬ್ರೇಕ್ ನಡೆದವತ್ತು ರಾತ್ರಿ ಹಾಗೂ ನಸುಕಿನ ವೇಳೆ ಬ್ರೀಝಾ ಕಾರೊಂದು ಅನುಮಾನಸ್ಪದವಾಗಿ ಆ ರಸ್ತೆಯಲ್ಲಿ ಓಡಾಡಿದ್ದು ಸೆರೆಯಾಗಿದೆ.

Ad Widget

Ad Widget

Ad Widget

Ad Widget


ಫೆ 8 ರಂದು ನಸುಕಿನ ವೇಳೆ ಕಾಂಞಗಾಡ್ – ಕಲ್ಲಡ್ಕ ಅಂತರಾಜ್ಯ ಹೆದ್ದಾರಿಯ ಅಂಚಿನಲ್ಲಿ ಅಡ್ಯನಡ್ಕ ಪೇಟೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಶಾಖೆಯ ಲಾಕರ್ ಬ್ರೇಕ್ ಮಾಡಿ ಕಳ್ಳತನ ನಡೆಸಲಾಗಿತ್ತು. ಸಾರಡ್ಕ ಚೆಕ್ ಪೋಸ್ಟ್ ನ ಒಂದು ಕಿಮೀ ದೂರದಲ್ಲಿ ಈ ಕೃತ್ಯ ನಡೆದಿತ್ತು. ಬ್ಯಾಂಕಿನ ಸುತ್ತ ಮುತ್ತಾ ಹಾಗೂ ಅಡ್ಯನಡ್ಕ ಪೇಟೆಯಲ್ಲಿ ಹೈ ಎಂಡ್ ಸಿಸಿಟಿವಿಗಳು ಇಲ್ಲದಿದ್ದುದರಿಂದ ಕಳ್ಳರು ಬಳಸಿದ ವಾಹನ ಕತ್ತಲಿನಲ್ಲಿ ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಬೇಧಿಸುವುದು ಕ್ಲಿಷ್ಟಕರವಾಗಿ ಕಂಡು ಬಂದಿತ್ತು.

Ad Widget

Ad Widget alt="Ad Widget"/>

Ad Widget


ಹೀಗಾಗಿ ಪೆರ್ಲ- ಅಡ್ಯನಡ್ಕ ರಸ್ತೆಯಲ್ಲಿರುವ ಹೈ ಎಂಡ್ ಸಿಸಿ ಕ್ಯಾಮರಾದಲ್ಲಿ ಸಿಸಿ ಕ್ಯಾಮರಾಗಳ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ವೇಳೆ ಕೇರಳ ಭಾಗದಿಂದ ಕಾರಿನಲ್ಲಿ ಆಗಮಿಸಿದ ಕಳ್ಳರು ಮತ್ತೆ ಅತ್ತ ಕಡೆಯೇ ಸಾಗಿದ ಬಗ್ಗೆ ದೃಶ್ಯಾವಳಿ ಕಾಣಿಸಿದೆ. ಈ ವಾಹನದ ನೋಂದಣಿ ಸಂಖ್ಯೆಯನ್ನು ಸಿಸಿಟಿವಿ ದೃಶ್ಯದ ಆಧಾರದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೇ ಕಾರಿಗೆ ಅಳವಡಿಸಿದ ನಂಬರ್ಪ್ಲೇಟ್ ನಕಲಿಯೋ ಅಸಲಿಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Ad Widget

Ad Widget <> Ad Widget


ಮೇಲ್ನೋಟಕ್ಕೆ ಕಳ್ಳರು ಮಾರುತಿ ಬ್ರೀಝಾ ಕಾರನ್ನು ಕೃತ್ಯಕ್ಕೆ ಬಳಸಿದಂತೆ ಗೋಚರಿಸುತ್ತಿದೆ. ಕೃತ್ಯ ನಡೆದ ರಾತ್ರಿ ಆ ಕಾರು ಕಾಸರಗೋಡು ಭಾಗದಿಂದ ಪೆರ್ಲದತ್ತ ಆಗಮಿಸಿದೆ. ಬಳಿಕ ನಸುಕಿನ ವೇಳೆ ಆ ಕಾರು ಅದೇ ರಸ್ತೆ ಮೂಲಕ ಆಗಮಿಸಿದ್ದು, ಪೆರ್ಲ ಆರ್ಟಿಒ ತಪಾಸಣಾ ಕೇಂದ್ರದ ಮೂಲಕ ಸಾಗಿ ಬಳಿಕ ಬದಿಯಡ್ಕಕ್ಕೆ ತೆರಳದೆ ಪುತ್ತಿಗೆ ಸೀತಾಂಗೋಳಿ ರಸ್ತೆಗೆ ತಿರುಗಿದ ದೃಶ್ಯ ಸೆರೆಯಾಗಿದೆ. ಈ ಕಾರು ಯಾರದ್ದು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.


2 ಕೆ.ಜಿ.ಗೂ ಅಧಿಕ ಚಿನ್ನ ಹಾಗೂ 17 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ಕಳ್ಳರು ಬ್ಯಾಂಕಿನಿಂದ ದೋಚಿದ್ದಾರೆ ಎಂದು ಹೇಳಲಾಗುತ್ತಿದೆ. ಕೇರಳಕ್ಕೆ ಪರಾರಿಯಾದ ಕಳ್ಳರು ಬಳಿಕ ಅಲ್ಲಿಂದ ಉತ್ತರ ಭಾರತ ಅಥಾವ ಗೋವಾಕ್ಕೆ ತೆರಳಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೇ ಜಿಲ್ಲೆಯ ಪೊಲೀಸರ ಒಂದು ಕಾಸರಗೋಡು ಅಸುಪಾಸಿನಲ್ಲಿ ಬೀಡು ಬಿಟ್ಟು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.

Ad Widget

Ad Widget

ಮುಖ್ಯ ರಸ್ತೆಯನ್ನೇ ಬಳಕೆ?
ಕುದ್ದುಪದವು ಪೆಟ್ರೋಲ್ ಪಂಪ್ ನಗದು ಲಾಕರ್ ಕದ್ದೂಯ್ಯ ಪ್ರಕರಣದಲ್ಲಿ ಲಾಕರ್ ಇಟ್ಟ ಆಪೆ ರಿಕ್ಷಾವನ್ನು ಸಾರಡ್ಕ ಗಡಿ ಮೂಲಕ ಮುಖ್ಯ ರಸ್ತೆಯಲ್ಲೇ ತೆಗೆದುಕೊಂಡೋಗಲಾಗಿತ್ತು. ಈ ಬಾರಿಯೂ ಬ್ರಿಝಾ ಕಾರು ಇದೇ ಮುಖ್ಯ ರಸ್ತೆಯನ್ನು ಬಳಸಿ ಹೋಗಿರುವುದು ಸಿಸಿಟಿವಿ ದೃಶ್ಯದಿಂದ ದೃಢಪಟ್ಟಿದೆ.


ಕಾಗದ ನಡುವೆ ಉಳಿದ ಚಿನ್ನ!
ಕಳ್ಳರು ಲಾಕರ್ ಒಂದನ್ನು ತುಂಡರಿಸಿದ್ದು ಅದರಲ್ಲಿ ಕಾಗದ ಪತ್ರಗಳು ಕಾಣುತ್ತಿದ್ದಂತೆ ಅದನ್ನು ಅಲ್ಲಿಗೇ ಬಿಟ್ಟಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಕಾಗದಗಳ ನಡುವೆ ಇಟ್ಟ ಚಿನ್ನ ಉಳಿದುಕೊಂಡಿದೆ. ಹೀಗೆ ಸುಮಾರು 2.5ಕೆ.ಜಿ. ಚಿನ್ನ ಕಳ್ಳರಿಂದ ಭದ್ರವಾಗಿ ಉಳಿದಿದೆ.

Ad Widget
Click to comment

Leave a Reply

ಶಿಕ್ಷಣ

Ambika-ಅಂಬಿಕಾ ವಿದ್ಯಾಲಯದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಸಹಜ ಸಮಾಧಿ ಧ್ಯಾನ ಶಿಬಿರ

Published

on

Ad Widget

Ad Widget

Ad Widget

Ad Widget

ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪುತ್ತೂರು ಘಟಕದ ವತಿಯಿಂದ “ಸಹಜ ಸಮಾಧಿ ಧ್ಯಾನ ಯೋಗ” ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

Ad Widget

Ad Widget

Ad Widget

Ad Widget

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪುತ್ತೂರು ಘಟಕದ ವತಿಯಿಂದ “ಸಹಜ ಸಮಾಧಿ ಧ್ಯಾನ ಯೋಗ” ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

Ad Widget

Ad Widget alt="Ad Widget"/>

Ad Widget

ಅಷ್ಟಾಂಗ ಯೋಗದ ಪ್ರಕಾರ ಧ್ಯಾನದ ಅತ್ಯಂತ ಆಳವಾದ ಸ್ಥಿತಿಯಾದ ಸಮಾಧಿ ಸ್ಥಿತಿಯನ್ನು ಅನಾಯಾಸವಾಗಿ ಸರಳವಾಗಿ ನಿತ್ಯವೂ ಅನುಭವಿಸಲು ಸಹಕಾರಿಯಾದ ಈ ಯೋಗ ಶಿಬಿರವನ್ನು ಆರ್ಟ್ ಆಫ್ ಲಿವಿಂಗ್‌ನ ಅಂತರಾಷ್ಟ್ರೀಯ ಶಿಕ್ಷಕ ಯಾದವ ಜೀ ನಡೆಸಿಕೊಟ್ಟರು. ಶಿಬಿರದಲ್ಲಿ ೮೮ ಮಂದಿ ಭಾಗವಹಿಸಿ ಧ್ಯಾನ ಮಾಡುವ ಕ್ರಮವನ್ನು ಕಲಿತುಕೊಂಡರು.

Ad Widget

Ad Widget <> Ad Widget

ಸಹಾಯಕ ಶಿಕ್ಷಕರಾಗಿ ಮಂಗಳೂರಿನ ರಜನಿ ರೈ ಸಹಕರಿಸಿದರು. ಸಹಜ ಸಮಾಧಿ ಧ್ಯಾನವನ್ನು ಕಲಿಸುವುದಕ್ಕಾಗಿ ತರಬೇತಿಯನ್ನು ಪಡೆಯುತ್ತಿರುವ ಶರಾವತಿ ರವಿ ನಾರಾಯಣ, ಆರ್ಟ್ ಆಫ್ ಲಿವಿಂಗ್ ಪುತ್ತೂರಿನ ಮುಖ್ಯಸ್ಥರಾದ ಕುಮಾರ ಸುಬ್ರಹ್ಮಣ್ಯ ಭಟ್, ಸತ್ಯವತಿ ಕೆ ಎಸ್, ಸುಧಾ ಹೆಬ್ಬಾರ್, ಭಾರತಿ ಜಯರಾಮ್ ಹಾಗೂ ಸಂಸ್ಥೆಯ ಎಲ್ಲಾ ಸ್ವಯಂಸೇವಕರು ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದರು.

ಸಮಾರೋಪ ಸಮಾರಂಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಭಾಗವಹಿಸಿ, ಪ್ರೇರಣೆ ನೀಡಿದರು.

Continue Reading

ಶಿಕ್ಷಣ

Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Published

on

Ad Widget

Ad Widget

Ad Widget

Ad Widget

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಲಹರಿ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೊಜನಾ ಘಟಕ ಹಾಗೂ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಲಾದ ಒಂದು ವಾರದ ಕನ್ನಡ ಕಾರ್ಯಕ್ರಮಗಳ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿಕ ಹಾಗೂ ಅಂಕಣಕಾರ ಮಹೇಶ್ ಪುಚ್ಚಪ್ಪಾಡಿ ಮಾತಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಇಂದಿನ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆಯ ಅನಿವಾರ್ಯತೆ ಹೆಚ್ಚಾಗುತ್ತಿದೆ. ಇಂಗ್ಲಿಷ್ ಕೌಶಲ ಎಷ್ಟಿದ್ದರೂ ಕಡಿಮೆಯೇ ಎನ್ನುವ ಸ್ಪರ್ಧಾತ್ಮಕ ಜಗತ್ತು ನಮ್ಮ ಮುಂದಿರುವ ಇಂತಹ ಸಂದರ್ಭದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಯೊಂದರಲ್ಲಿ ಕನ್ನಡ ಸಂಘ ಇರುವುದು ಆಶಾದಾಯಕ. ಇದು ಕೇವಲ ಭಾಷಾ ಚಟುವಟಿಕೆಗಳಿಗೆ ಸೀಮಿತವಾಗದೆ ಹೊಸ ಸಾಧ್ಯತೆಗಳ ವೇದಿಕೆಯಾಗಲಿ ಎಂದು ಕೃಷಿಕ ಹಾಗೂ ಅಂಕಣಕಾರ ಮಹೇಶ್ ಪುಚ್ಚಪ್ಪಾಡಿ ಹೇಳಿದರು.

Ad Widget

Ad Widget alt="Ad Widget"/>

Ad Widget

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಲಹರಿ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೊಜನಾ ಘಟಕ ಹಾಗೂ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಲಾದ ಒಂದು ವಾರದ ಕನ್ನಡ ಕಾರ್ಯಕ್ರಮಗಳ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು.

Ad Widget

Ad Widget <> Ad Widget

ಕನ್ನಡ ನಮ್ಮ ಬೇರು, ತಂತ್ರಜ್ಞಾನ ನಮ್ಮ ರೆಕ್ಕೆ, ಜಗತ್ತಿನ ಯಾವುದೇ ತಂತ್ರಜ್ಞಾನವನ್ನು ಕಲಿಯಬಹುದು. ಆದರೆ ನಮ್ಮ ಬೇರುಗಳನ್ನು ಮರೆಯಬಾರದು. ಜಾಗತಿಕವಾಗಿ ಬೆಳೆಯಲು ಇಂಗ್ಲಿಷ್ ಬೇಕಾದರೆ ನಮ್ಮ ನೆಲದೊಂದಿಗೆ ಬೆಸೆಯಲು ಕನ್ನಡ ಬೇಕು ಎಂದರು. ಕೈಯಲ್ಲಿ ಮೊಬೈಲಿದೆ, ತಲೆಯಲ್ಲಿ ತಂತ್ರಜ್ಞಾನವಿದೆ, ಮುಂದೆ ವಿಶಾಲ ಜಗತ್ತಿದೆ ಈ ಮೂರರ ನಡುವೆ ಕನ್ನಡವನ್ನು ಕಳೆದುಕೊಳ್ಳಬೇಡಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ ಪ್ರತಿಯೊಬ್ಬನಿಗೂ ಮಾತೃ ಭಾಷೆಯ ಮೇಲೆ ಅಪಾರ ಅಭಿಮಾನವಿರಬೇಕು. ನಾವು ಎಲ್ಲಿ ಹೋದರು, ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ನಮ್ಮತನವನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದರು. ದೇಶ-ಭಾಷೆ, ನಾಡು-ನುಡಿ, ನೆಲ-ಜಲದ ವಿಷಯದಲ್ಲಿ ಎಲ್ಲರೂ ಒಂದಾಗಿ ಅದರ ಸಾರ್ವಭೌಮತೆಯನ್ನು ಎತ್ತಿಹಿಡಿಯಬೇಕು ಎಂದು ಹೇಳಿದರು.

Ad Widget

Ad Widget

ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಡೆಸಲಾದ ವಾಗ್-ವೈಖರಿ, ಸಮ್‌ವಾದ, ಜಸ್ಟ್ಮಾತು, ಮೇಧಮಂಥನ, ಪಿಕ್ಸೆಲ್‌ಪುಟ, ಭಾವಕುಂಚ ಮತ್ತು ಅನ್ವೇಷಣಾ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಲಹರಿ ಕನ್ನಡ ಸಂಘದ ಸಂಯೋಜಕ ಪ್ರೊ.ನವೀನ್.ಸಿ ಮತ್ತು ವಿದ್ಯಾರ್ಥಿ ಸಂಯೋಜಕ ಆದಿತ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಗೀತೆಗಳ ಗಾಯನದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರೊ.ನವೀನ್.ಸಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಆದಿತ್ಯ ವಂದಿಸಿದರು. ಅನಿತಾ ಕಾರ್ಯಕ್ರಮ ನಿರ್ವಹಿಸಿದರು.

Ad Widget
Continue Reading

ಶಿಕ್ಷಣ

Sahyadri-ಸಹ್ಯಾದ್ರಿಯಲ್ಲಿ ವಿಟಿಯು ಕನ್ಸೋರ್ಟಿಯಂ ಇ-ಸಂಪನ್ಮೂಲಗಳ ಪ್ರಾದೇಶಿಕ ತರಬೇತಿ ಕಾರ್ಯಕ್ರಮ

Published

on

Ad Widget

Ad Widget

Ad Widget

Ad Widget

ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ (SCEM),ಮಂಗಳೂರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಸಹಯೋಗದೊಂದಿಗೆ, ನವೆಂಬರ್ 20 ರಂದು ಕಾಲೇಜಿನ ನೆಲ ಮಹಡಿಯ ಸೆಮಿನಾರ್ ಹಾಲ್‌ನಲ್ಲಿ VTU ಕನ್ಸೋರ್ಟಿಯಂ ಇ-ಸಂಪನ್ಮೂಲ ತರಬೇತಿ ಕಾರ್ಯಕ್ರಮ 2026–27 ಅನ್ನು ಆಯೋಜಿಸಲಾಯಿತು.

Ad Widget

Ad Widget

Ad Widget

Ad Widget

ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ (SCEM),ಮಂಗಳೂರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಸಹಯೋಗದೊಂದಿಗೆ, ನವೆಂಬರ್ 20 ರಂದು ಕಾಲೇಜಿನ ನೆಲ ಮಹಡಿಯ ಸೆಮಿನಾರ್ ಹಾಲ್‌ನಲ್ಲಿ VTU ಕನ್ಸೋರ್ಟಿಯಂ ಇ-ಸಂಪನ್ಮೂಲ ತರಬೇತಿ ಕಾರ್ಯಕ್ರಮ 2026–27 ಅನ್ನು ಆಯೋಜಿಸಲಾಯಿತು.

Ad Widget

Ad Widget alt="Ad Widget"/>

Ad Widget

ವಿಟಿಯು ಕನ್ಸೋರ್ಟಿಯಂ ಮೂಲಕ ಲಭ್ಯವಿರುವ ಡಿಜಿಟಲ್ ಶೈಕ್ಷಣಿಕ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸಲು ಮತ್ತು ಜಾಗೃತಿಯನ್ನು ಹೆಚ್ಚಿಸಲು ಕರ್ನಾಟಕದಾದ್ಯಂತ ಎಂಜಿನಿಯರಿಂಗ್ ಸಂಸ್ಥೆಗಳ ಗ್ರಂಥಪಾಲಕರು, ಅಧ್ಯಾಪಕರು ಮತ್ತು ಶೈಕ್ಷಣಿಕ ವೃತ್ತಿಪರರನ್ನು ಪ್ರಾದೇಶಿಕ ಮಟ್ಟದ ಕಾರ್ಯಕ್ರಮವು ಒಟ್ಟುಗೂಡಿಸಿತು.

Ad Widget

Ad Widget <> Ad Widget

ಉದ್ಘಾಟನಾ ಸಮಾರಂಭವು ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಕುಮಾರಿ ಪೂರ್ವಿ ಶೆಟ್ಟಿ ಪಿ. ಜಿ. ಮತ್ತು ಕುಮಾರಿ ಗೌತಮಿ ಆರ್. ಅವರು ನಡೆಸಿಕೊಟ್ಟ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ಅವರು ಸ್ವಾಗತ ಭಾಷಣ ಮಾಡಿದರು.

ನಂತರ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಸಿಇಎಂ (SCEM) ನ ಸಹಾಯಕ ಗ್ರಂಥಪಾಲಕರಾದ ಡಾ. ಶ್ವೇತಾ ಕುಮಾರಿ ಕೆ. ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಮಂಗಳೂರಿನ ವಿಟಿಯು (VTU) ವಿಸ್ತರಣಾ ಕೇಂದ್ರದ ವಿಶೇಷ ಅಧಿಕಾರಿ ಡಾ. ದಾಮೋದರ ನಾರಲ್ ಅವರು ಕಾರ್ಯಕ್ರಮದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.

Ad Widget

Ad Widget

ಎಸ್‌ಸಿಇಎಂನ ಸಹ ಪ್ರಾಧ್ಯಾಪಕರಾದ ಡಾ. ಚಂದನಾ ಬಿ. ಆರ್. ಅವರು ಮುಖ್ಯ ಅತಿಥಿಗಳಾದ ಎನ್‌ಐಟಿಕೆ (NITK) ಸುರತ್ಕಲ್‌ನ ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಅಂಗಡಿ ಅವರನ್ನು ಪರಿಚಯಿಸಿದರು; ಬಳಿಕ ಡಾ. ಮಲ್ಲಿಕಾರ್ಜುನ ಅಂಗಡಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಎಸ್‌ಸಿಇಎಂನ ಆಡಳಿತಾಧಿಕಾರಿ ಹಾಗೂ ಟ್ರಸ್ಟಿ ಶ್ರೀ ಕೃಷ್ಣ ಹೆಗಡೆ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಗ್ರಂಥಪಾಲಕರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ. ಭಾರತಿ ಕೆ. ಅವರು ವಂದನಾರ್ಪಣೆ ಸಲ್ಲಿಸಿದರು. ತಾಂತ್ರಿಕ ಅವಧಿಗಳಲ್ಲಿ IEEE, PAT ಟೆಕ್ನಾಲಜಿ, GATEtutor, ProQuest, Elsevier ScienceDirect, Taylor & Francis, Emerald Publishing, Cambridge University Press, Pearson, DrillBit ಮತ್ತು Quiklrn ಸೇರಿದಂತೆ ಪ್ರಮುಖ ಶೈಕ್ಷಣಿಕ ಪ್ರಕಾಶಕರು ಮತ್ತು ಡಿಜಿಟಲ್ ಸಂಪನ್ಮೂಲ ಪೂರೈಕೆದಾರರ ಪ್ರತಿನಿಧಿಗಳಿಂದ ಪ್ರಸ್ತುತಿಗಳು ಮತ್ತು ಪ್ರದರ್ಶನಗಳು ನಡೆದವು. ಅವಧಿಗಳಲ್ಲಿ ಎಲ್ಸೆವಿಯರ್ ಅವರ ಸ್ಕೋಪಸ್ ಡೇಟಾಬೇಸ್ ಕುರಿತು ಪ್ರಸ್ತುತಿ ಮತ್ತು MAP ಸಿಸ್ಟಮ್ಸ್ ಅವರ MAP My Access System ನ ಅವಲೋಕನವೂ ಸೇರಿತ್ತು.

ಸಂಪನ್ಮೂಲ ವ್ಯಕ್ತಿಗಳು ವಿದ್ವತ್ಪೂರ್ಣ ಜರ್ನಲ್‌ಗಳು, ಇ-ಪುಸ್ತಕಗಳು, ಸಂಶೋಧನಾ ಡೇಟಾಬೇಸ್‌ಗಳು, ಪರೀಕ್ಷಾ ತಯಾರಿ ಸಂಪನ್ಮೂಲಗಳು, ಕೃತಿಚೌರ್ಯ ಪತ್ತೆ ಪರಿಕರಗಳು ಮತ್ತು ಡಿಜಿಟಲ್ ಕಲಿಕಾ ವೇದಿಕೆಗಳನ್ನು ಪ್ರವೇಶಿಸುವ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಿದರು. ಬೋಧನೆ, ಕಲಿಕೆ ಮತ್ತು ಸಂಶೋಧನೆಯಲ್ಲಿ ಈ ಸಂಪನ್ಮೂಲಗಳ ವೈಶಿಷ್ಟ್ಯಗಳು, ಹುಡುಕಾಟ ಸೌಲಭ್ಯಗಳು ಮತ್ತು ಪ್ರಾಯೋಗಿಕ ಅನ್ವಯಿಕೆಗಳನ್ನು ಅರ್ಥಮಾಡಿಕೊಳ್ಳಲು ಭಾಗವಹಿಸುವವರಿಗೆ ಸಂವಾದಾತ್ಮಕ ಅವಧಿಗಳು ಸಹಾಯ ಮಾಡಿದವು.

ಈ ಕಾರ್ಯಕ್ರಮದಲ್ಲಿ ವಿವಿಧ ಎಂಜಿನಿಯರಿಂಗ್ ಸಂಸ್ಥೆಗಳನ್ನು ಪ್ರತಿನಿಧಿಸುವ ಗ್ರಂಥಪಾಲಕರು ಮತ್ತು ಅಧ್ಯಾಪಕರು ಉತ್ಸಾಹದಿಂದ ಭಾಗವಹಿಸಿದ್ದರು. ಇದು ಜ್ಞಾನ ಹಂಚಿಕೆ, ವೃತ್ತಿಪರ ಸಂವಹನ ಮತ್ತು ಡಿಜಿಟಲ್ ಸಂಪನ್ಮೂಲಗಳೊಂದಿಗೆ ಶೈಕ್ಷಣಿಕ ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸಿತು.

ಈ ವಿಟಿಯು ಒಕ್ಕೂಟದ ಪ್ರಾದೇಶಿಕ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ, ಸಹ್ಯಾದ್ರಿ ಕಾಲೇಜು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವುದು, ಸಂಶೋಧನಾ ಸಾಮರ್ಥ್ಯಗಳನ್ನು ಬಲಪಡಿಸುವುದು ಮತ್ತು ಶೈಕ್ಷಣಿಕ ಇ-ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯ ಮೂಲಕ
ಗುಣಮಟ್ಟದ ಉನ್ನತ ಶಿಕ್ಷಣವನ್ನು ಬೆಂಬಲಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.
ಈ ಕಾರ್ಯಕ್ರಮವನ್ನು ಸಹ್ಯಾದ್ರಿ ಕಾಲೇಜಿನ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಡಾ. ಭಾರತಿ ಕೆ. ಸಂಯೋಜಿಸಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!