ಪುತ್ತೂರು
ಸಚಿವ ದಿನೇಶ್ ಗುಂಡೂರಾವ್, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ನಟ ಜೆಕೆ ಸೇರಿದಂತೆ ಹಲವು ಪ್ರಮುಖರಿಗೆ ಪುತ್ತೂರು ಕಂಬಳದ ಆಮಂತ್ರಣ ವಿತರಣೆ
ಪುತ್ತೂರು : ಆರೋಗ್ಯ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ , ಮಡಿಕೇರಿಯ ಶಾಸಕ ಡಾ.ಮಂತರ್ ಗೌಡ ಹಾಗೂ ನಟ ಜೆಕೆ ಸೇರಿದಂತೆ ರಾಜ್ಯದ ಹಲವು ಪ್ರಮುಖ ರಾಜಕೀಯ ನೇತಾರರು ಹಾಗೂ ಸಿನಿಮಾ ನಟ ನಟಿಯರಿಗೆ ಪುತ್ತೂರು ಇತಿಹಾಸ ಪ್ರಸಿದ್ದ ಕಂಬಳದ ಆಮಂತ್ರಣ ಪತ್ರ ವಿತರಿಸಲಾಗಿದೆ.
ಇದೇ ಜನವರಿ 27 ಹಾಗೂ 28ರಂದು ಜರಗುವ ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ 31 ನೇ ವರ್ಷಕ್ಕೆ ಕಾಲಿಟ್ಟಿದೆ. ಸಚಿವ ಗುಂಡುರಾವ್ ಹಾಗೂ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಶಾಸಕ ಅಶೋಕ್ ರೈ ನೇತೃತ್ವದ ತಂಡ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದೆ.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ನೇತೃತ್ವದ ತಂಡ ಆಮಂತ್ರಣ ವಿತರಿಸಿದೆ. ಚಂದ್ರಹಾಸ್ ಶೆಟ್ಟಿ , ಉದ್ಯಮಿ ಸುಜಿತ್ ಶೆಟ್ಟಿ ಸವಣೂರು, ವಿಕ್ರಮ್ ಶೆಟ್ಟಿ ಕೋಡಿಂಬಾಡಿ ಮೊದಲಾದವರು ಉಪಸ್ಥಿತರಿದ್ದರು. ನಟ ಜೆಕೆ ಅವರಿಗೆ ಉದ್ಯಮಿ ಅಜಿತ್ ಶೆಟ್ಟಿ ಕಡಬ ಹಾಗೂ ಪ್ರಣಮ್ ಶೆಟ್ಟಿ ಪನಡ್ಕ ಆಮಂತ್ರಣ ನೀಡಿದ್ದಾರೆ.
ಕುಶಾಲನಗರ ಕಾಂಗ್ರೇಸ್‍ನ ಕಚೇರಿಯ ಪ್ರಮುಖರಿಗೆ ಕೂಡ ಪುತ್ತೂರು ಕಂಬಳಕ್ಕೆ ಆಹ್ವಾನ ಪತ್ರ ನೀಡಲಾಗಿದೆ. ಬಂಟ್ವಾಳ RFO ಪ್ರಫುಲ್ ಶೆಟ್ಟಿ , ಪುತ್ತೂರಿನ ಡಿವೈಎಸ್ಪಿ, ಎಸ್ಪಿ ಸಹಿತ ಹಲವರಿಗೆ ಕಂಬಳ ಸಮಿತಿಯ ಶಿವರಾಮ್ ಆಳ್ವ, ಪಂಜಿಗುಡ್ಡೆ ಈಶ್ವರ್ ಭಟ್, ರಂಜಿತ್ ಬಂಗೇರ, ಸನ್ಮಿತ್ಪ ರೈ, ಸನತ್ ರೈ ಒಳತ್ತಡ್ಕ ಸೇರಿದಂತೆ ಪದಾಧಿಕಾರಿಗಳು ಆಮಂತ್ರಣ ನೀಡಿದ್ದಾರೆ.
ಬಿಗ್ ನ್ಯೂಸ್
Puttur-ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ – 9 ರಾಷ್ಟ್ರಗಳ 1500 ಈಜುಪಟುಗಳು ಭಾಗಿ : ಪುತ್ತೂರಿನ ಪಾರ್ಥ ವಾರಣಾಸಿಗೆ ಚಿನ್ನ
ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಎಕ್ಸೆಲೆನ್ಸ್ (ಡಾಲ್ಫಿನ್ ಆಕ್ವಾಟಿಕ್ಸ್)ನಲ್ಲಿ ಅ.4ರಿಂದ 10ರ ತನಕ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ 2026ರಲ್ಲಿ ಭಾಗವಹಿಸಿದ ಭಾರತದ ಪ್ರಮುಖ ಈಜು ಸ್ಪರ್ಧಿ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿ ಮತ್ತು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಪ್ರಧಾನ ಕೋಚ್ ಪಾರ್ಥ ವಾರಣಾಸಿ 50 ಮೀ ಬಟರ್ ಫೈ ನಲ್ಲಿ ಪುಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
ಪುತ್ತೂರು: ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಎಕ್ಸೆಲೆನ್ಸ್ (ಡಾಲ್ಫಿನ್ ಆಕ್ವಾಟಿಕ್ಸ್)ನಲ್ಲಿ ಅ.4ರಿಂದ 10ರ ತನಕ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ 2026ರಲ್ಲಿ ಭಾಗವಹಿಸಿದ ಭಾರತದ ಪ್ರಮುಖ ಈಜು ಸ್ಪರ್ಧಿ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿ ಮತ್ತು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಪ್ರಧಾನ ಕೋಚ್ ಪಾರ್ಥ ವಾರಣಾಸಿ 50 ಮೀ ಬಟರ್ ಫೈ ನಲ್ಲಿ ಪುಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
9 ರಾಷ್ಟ್ರಗಳ 1,500ಕ್ಕೂ ಹೆಚ್ಚು ಈಜುಗಾರರು ಭಾಗಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ. ಏಷ್ಯಾ ಅಕ್ವಾಟಿಕ್ ಮಾರ್ಗದರ್ಶನದಲ್ಲಿ, ಭಾರತೀಯ ಈಜು ಒಕ್ಕೂಟದ ಅಧೀನದಲ್ಲಿ ಹಾಗೂ ಕರ್ನಾಟಕ ಈಜು ಸಂಸ್ಥೆಯ ಆಯೋಜನಾ ಪಾಲುದಾರಿಕೆಯಲ್ಲಿ ಚಾಂಪಿಯನ್‌ಶಿಪ್ ನಡೆಯುತ್ತಿದೆ.
ಭಾರತ ಸೇರಿದಂತೆ ಶ್ರೀಲಂಕಾ, ಇರಾನ್, ಥೈಲ್ಯಾಂಡ್, ಜಪಾನ್, ಚೀನಾ, ಓಮನ್, ಮಲೇಷ್ಯಾ ಸೇರಿದಂತೆ ಒಟ್ಟು 9 ರಾಷ್ಟ್ರಗಳ 1,500ಕ್ಕೂ ಅಧಿಕ ಈಜುಗಾರರು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ಕೂಟದಲ್ಲಿ ಪಾರ್ಥ ವಾರಣಾಸಿ ಚಿನ್ನದ ಪದಕ ಗೆದ್ದಿರುವುದು ಪುತ್ತೂರಿನ ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.
ಉದ್ಯೋಗ
Puttur-Salesನಿಂದ Technicianವರೆಗೆ; ಪುತ್ತೂರಿನ ಶ್ರೀ ತಿರುಮಲಾ TVSನಲ್ಲಿ ಭರ್ಜರಿ Job Opening
ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಉತ್ತಮ ಅವಕಾಶ. ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಪುತ್ತೂರಿನ ಶ್ರೀ ತಿರುಮಲಾ TVS ಸಂಸ್ಥೆಯಲ್ಲಿ ಸೇಲ್ಸ್, ಸರ್ವೀಸ್, ಅಕೌಂಟ್ಸ್, ಫೈನಾನ್ಸ್, ಇನ್ಶೂರೆನ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಪುತ್ತೂರು: ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಉತ್ತಮ ಅವಕಾಶ. ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಪುತ್ತೂರಿನ ಶ್ರೀ ತಿರುಮಲಾ TVS ಸಂಸ್ಥೆಯಲ್ಲಿ ಸೇಲ್ಸ್, ಸರ್ವೀಸ್, ಅಕೌಂಟ್ಸ್, ಫೈನಾನ್ಸ್, ಇನ್ಶೂರೆನ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
TVS ಸಂಸ್ಥೆಯ ಪ್ರೀಮಿಯಂ, EV ಹಾಗೂ IC ವಿಭಾಗಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ‘ಪುತ್ತೂರಿನ ಅತಿದೊಡ್ಡ 2-ವೀಲರ್ ಜಾಬ್ ಓಪನಿಂಗ್’ ಎಂಬ ಘೋಷಣೆಯೊಂದಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಸೇಲ್ಸ್ ವಿಭಾಗದಲ್ಲಿ ಹಲವು ಅವಕಾಶ
ಪುತ್ತೂರು ಸೇಲ್ಸ್ ವಿಭಾಗದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಸೇಲ್ಸ್ ಮ್ಯಾನೇಜರ್, ಎಕ್ಸ್‌ಚೇಂಜ್ ಕೋಆರ್ಡಿನೇಟರ್, ಸೇಲ್ಸ್ ಟೆಲಿಕಾಲಿಂಗ್ (CRE), ಅಕೌಂಟ್ಸ್ ಮ್ಯಾನೇಜರ್, ಫೈನಾನ್ಸ್ ಮ್ಯಾನೇಜರ್, ರಿಸೆಪ್ಷನಿಸ್ಟ್, RTO ಎಕ್ಸಿಕ್ಯೂಟಿವ್, ಇನ್‌ವಾಯ್ಸ್ ಎಕ್ಸಿಕ್ಯೂಟಿವ್, ಅಕೌಂಟ್ಸ್ ಎಕ್ಸಿಕ್ಯೂಟಿವ್, ಫೈನಾನ್ಸ್ ಕೋಆರ್ಡಿನೇಟರ್ ಹಾಗೂ ಇನ್ಶೂರೆನ್ಸ್ ಎಕ್ಸಿಕ್ಯೂಟಿವ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಸರ್ವೀಸ್ ವಿಭಾಗದಲ್ಲೂ ಭರ್ಜರಿ ನೇಮಕಾತಿ
ಸರ್ವೀಸ್ ವಿಭಾಗದಲ್ಲಿ ಅಡ್ವೈಸರ್, ಫ್ಲೋರ್ ಸೂಪರ್‌ವೈಸರ್, ಟೆಕ್ನಿಷಿಯನ್, ಪಾರ್ಟ್ಸ್ ಪಿಕರ್, ಬಿಲ್ಲಿಂಗ್/ರಿಸೆಪ್ಷನಿಸ್ಟ್ ಎಕ್ಸಿಕ್ಯೂಟಿವ್, ಪಾರ್ಟ್ಸ್ ಮ್ಯಾನೇಜರ್, ವಾಷಿಂಗ್ ಸಿಬ್ಬಂದಿ, PDI ಟೆಕ್ನಿಷಿಯನ್, ಸರ್ವೀಸ್ ಮ್ಯಾನೇಜರ್, ನೆಟ್‌ವರ್ಕ್ ಕೋಆರ್ಡಿನೇಟರ್, ವಾರಂಟಿ ಇನ್‌ಚಾರ್ಜ್, ಅಕ್ಸಿಡೆಂಟ್ ಸೂಪರ್‌ವೈಸರ್, CRE ಟೆಲಿಕಾಲಿಂಗ್, CRM, PDI ಸೂಪರ್‌ವೈಸರ್ ಹಾಗೂ ಪೇಂಟರ್ ಮತ್ತು ಡೆಂಟಿಂಗ್ ಹುದ್ದೆಗಳಿಗೆ ಅವಕಾಶವಿದೆ.

ಬೆಳ್ಳಾರೆಯಲ್ಲೂ ಉದ್ಯೋಗದ ಬಾಗಿಲು ತೆರೆದಿದೆ
ಬೆಳ್ಳಾರೆ ಭಾಗದಲ್ಲಿಯೂ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಸರ್ವೀಸ್ ವಿಭಾಗದಲ್ಲಿ ಅಡ್ವೈಸರ್, ಪಾರ್ಟ್ಸ್ ಪಿಕರ್, ಬಿಲ್ಲಿಂಗ್/ರಿಸೆಪ್ಷನಿಸ್ಟ್ ಎಕ್ಸಿಕ್ಯೂಟಿವ್, ಫ್ಲೋರ್ ಸೂಪರ್‌ವೈಸರ್, ಟೆಕ್ನಿಷಿಯನ್ ಹಾಗೂ ವಾಷಿಂಗ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಸೇಲ್ಸ್ ವಿಭಾಗದಲ್ಲಿ 6 ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ 2 ರಿಸೆಪ್ಷನಿಸ್ಟ್ ಹುದ್ದೆಗಳಿಗೂ ಅವಕಾಶವಿದೆ.
PF, ESI ಜೊತೆಗೆ ₹25 ಸಾವಿರದವರೆಗೆ ಗಳಿಕೆ!
ಆಯ್ಕೆಯಾಗುವ ಅಭ್ಯರ್ಥಿಗಳಿಗೆ PF, ESI, ಸ್ಪಾಟ್ ಇನ್ಸೆಂಟಿವ್, ಮಾಸಿಕ ಹಾಗೂ ತ್ರೈಮಾಸಿಕ ಇನ್ಸೆಂಟಿವ್ ಸೌಲಭ್ಯಗಳು ದೊರೆಯಲಿವೆ. 25 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ ಪೆಟ್ರೋಲ್ ವೋಚರ್ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಗೆ ತಿಂಗಳಿಗೆ ₹25,000 ವರೆಗೆ ಗಳಿಸುವ ಅವಕಾಶ ಇದೆ ಎಂದು ಸಂಸ್ಥೆ ತಿಳಿಸಿದೆ.
ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಮಾತ್ರವಲ್ಲದೆ, ಸೇಲ್ಸ್, ಅಕೌಂಟ್ಸ್, ಫೈನಾನ್ಸ್, ಟೆಲಿಕಾಲಿಂಗ್, ಗ್ರಾಹಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕುತ್ತಿರುವವರೂ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.
ಉದ್ಯೋಗಾವಕಾಶ ಸೀಮಿತವಾಗಿರುವುದರಿಂದ ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಬಹುದು.
📞 ಸಂಪರ್ಕ: +91 82965 79206
📍 ವಿಳಾಸ: ಶ್ರೀ ತಿರುಮಲಾ TVS, ಬೈಪಾಸ್ ಜಂಕ್ಷನ್, ಮಂಜಲ್ಪಡ್ಡು, ಮೇನ್ ರೋಡ್, ಬೋಳ್ವಾರ್ ವೆಸ್ಟ್, ಪುತ್ತೂರು–574201.
ಶಿಕ್ಷಣ
Vivekananda-ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ
ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಮುಕ್ರಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಮುಕ್ರಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಕೆ. ವಿ. ನಿಖಿಲ್ ಕುಮಾರ್, ನಿಹಾಲ್ ಸಿ. ರೈ. ದ್ವಿತೀಯ ಪಿಯುಸಿ ಅಭಿಲಾಷ್, ವಿಕ್ರಮ್ ಎ. ಜಿ ಹಾಗೂ ಬಾಲಕಿಯರ ತಂಡದಲ್ಲಿ ದ್ವಿತೀಯ ಪಿಯುಸಿ ಆತ್ಮಿಕಾ, ಎಚ್. ಮನ್ಮಿತಾ, ಶರಣ್ಯಾ ಎಚ್. ಎನ್ ಭಾಗವಹಿಸಿರುತ್ತಾರೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗು ಉಪನ್ಯಾಸಕ ,ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
-
ದಕ್ಷಿಣ ಕನ್ನಡ24 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ಅಪರಾಧ23 hours agoSomasekhar-ನಕಲಿ ದಾಖಲೆ ಸೃಷ್ಟಿಸಿ ಕೈದಿಯ ಬಿಡುಗಡೆ..! ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಡಿಐಜಿ ಎಂ. ಸೋಮಶೇಖರ್
-
ಬಿಗ್ ನ್ಯೂಸ್18 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
ನಿಧನ ವಾರ್ತೆ22 hours agoPuttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು
-
ಶಿಕ್ಷಣ21 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ22 hours agoDead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
-
ನಿಧನ ವಾರ್ತೆ21 hours agoKerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು
-
ಬಿಗ್ ನ್ಯೂಸ್22 hours agoPuttur-ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ‘ಭಕ್ತರನ್ನು ಕಡೆಗಣಿಸಿ ಜೀರ್ಣೋದ್ಧಾರ ಸಮಿತಿ ರಚನೆ’ – ವಿಹಿಂಪ ಆಕ್ಷೇಪ


















