Connect with us

Uncategorized

ಕರಾವಳಿಯ ಡಿಸೈನಿಂಗ್ ಕ್ಷೇತ್ರದಲ್ಲಿ ಹೊಸತನದ ಅಲೆಯೆಬ್ಬಿಸಿದ ಆರ್ವಿ ಇಂಟರ್ ಗ್ರಾಫಿಕ್ಸ್‌ ನ ವಿಸ್ತೃತ ಕಛೇರಿ ಶುಭಾರಂಭ ; ಸೃಜನಶೀಲತೆ ಹಾಗೂ ದಣಿವರಿಯದ ಶ್ರಮದ ಮಿಶ್ರಣ ಆರ್ವಿ : ಬಲರಾಮ ಆಚಾರ್ಯ , ನನ್ನ ಸಂಸ್ಥೆಯ ಗೆಲುವಿನಲ್ಲಿ ಆರ್ವಿ ಪಾತ್ರ ದೊಡ್ಡದಿದೆ : ಚೇತನ್‌ ಪ್ರಕಾಶ್‌

Published

on

Ad Widget

Ad Widget

Ad Widget

Ad Widget

ಕಳೆದ 13 ವರ್ಷಗಳಿಂದ ಕಾರ್ಯಾಚರಿಸುತ್ತ ವೈಶಿಷ್ಟ್ಯಪೂರ್ಣ ಹಾಗೂ  ಪರಿಣಮಕಾರಿ ಡಿಸೈನ್‌ ಮೂಲಕ  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮನೆ ಮಾತಾಗಿರುವ ಆರ್ವಿ ಗ್ರಾಫಿಕ್ಸ್‌  ಪುತ್ತೂರಿನ ಹೃದಯ ಭಾಗದಲ್ಲಿರುವ ಶ್ರೀ ದರ್ಮಸ್ಥಳ ಕಟ್ಟಡಕ್ಕೆ ಸ್ಥಳಾಂತರಗೊಂಡು ಡಿ 10 ರಂದು ಶುಭಾರಂಭಗೊಂಡಿತ್ತು. ಈ ಮೊದಲು ಈ ಸಂಸ್ಥೆ ಅದೇ ಕಟ್ಟಡದ ಪ್ರಥಮ ಮಹಡಿಯಲ್ಲಿ ಕೊನೆಯಲ್ಲಿದ್ದ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತಿತ್ತು. ಈಗ ಅದಕ್ಕಿಂತ ವಿಶಾಲವಾದ ಹಾಗೂ ಎದುರಿಗೆ ಸಿಗುವ ರೂಮ್‌ಗೆ ಸ್ಥಳಾಂತರಗೊಂಡಿತು..

Ad Widget

Ad Widget

Ad Widget

Ad Widget

“ಆರ್ವಿ ಗ್ರಾಫಿಕ್ಸ್‌ ಅತ್ಯುತ್ತಮ ಸೇವೆ ನೀಡುವ ಮೂಲಕ ಪುತ್ತೂರು ಆಸುಪಾಸಿನಲ್ಲಿ ಜನಪ್ರಿಯತೆಗೊಳಿಸಿದ್ದು, ಮುಂದಿನ ದಿನಗಳಲ್ಲಿ ಇದರ ಸೇವೆ ಜಿಲ್ಲೆಗೂ ವ್ಯಾಪಿಸಬೇಕು. ಈ ಕ್ಷೇತ್ರ ಸೃಜನಶೀಲತೆಯನ್ನು ಬೇಡುತ್ತದೆ. ಅದಕ್ಕೆ ಕಠಿಣ ಪರಿಶ್ರಮವನ್ನು ಅಚ್ಚುಕಟ್ಟಾಗಿ ಬೆರೆಸಿದ್ದು ಈ ಸಂಸ್ಥೆಯ ಯಶಸ್ಸಿಗೆ ಕಾರಣವಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇವರ ಬಳಿ ಡಿಸೈನ್‌ ಗಳಿದ್ದು,ಯಾರಿಗೆ ಯಾವುದು ಬೇಕು ಅದು ಇಲ್ಲಿ ಸಿಗುತ್ತದೆ” ಎಂದು ಕಛೇರಿ ಉಧ್ಘಾಟಿಸಿ ಮಾತನಾಡಿದ  ಜಿ ಎಲ್‌ ಆಚಾರ್ಯ ಜ್ಯುವೆಲ್ಲರ್ಸ ನ ಚೇರ್‌ ಮ್ಯಾನ್‌ ಬಲರಾಮ ಆಚಾರ್ಯ ತಿಳಿಸಿದರು.

Ad Widget

Ad Widget alt="Ad Widget"/>

Ad Widget

ಮುಖ್ಯ ಅತಿಥಿಯಾಗಿ ಭಾಗವಹಿಸಿದ ದನ್ವಂತರಿ ಕ್ಲಿನಿಕಲ್‌ ಲ್ಯಾಬೋರೇಟರಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಮುಖ್ಯಸ್ಥ ಚೇತನ್‌ ಪ್ರಕಾಶ್‌ ಮಾತನಾಡಿ  “ ಡಿಜಿಟಿಲ್‌ ಕಂಟೆಟ್‌ ಗಳನ್ನು ಪರಿಣಮಕಾರಿಯಾಗಿ ಹಾಗೂ ಗ್ರಾಹಕರ ಮನ ಮುಟ್ಟುವಂತೆ ತಯಾರಿಸಿ ಕೊಡುವವರ ಕೊರತೆ ಪುತ್ತೂರಿನಲ್ಲಿ ಇದ್ದಾಗ ಆರ್ವಿ ಗ್ರಾಫಿಕ್ಸ್‌ ಆರಂಭಗೊಂಡು ಆ ನಿರ್ವಾತವನ್ನು ತುಂಬಿದೆ. ದನ್ವಂತರಿ ಲ್ಯಾಬ್‌ ನ ಮಾರ್ಕೇಂಟಿಗ್‌ ನಲ್ಲಿ ದೊಡ್ಡ ಪಾತ್ರ ಈ ಸಂಸ್ಥೆಯದು ಇದ್ದು , ನಮ್ಮ ಸಂಸ್ಥೆಯ ಯಶಸ್ಸಿನಲ್ಲಿ ಅವರ ಪಾಲೂ ಇದೆ ಎಂದರು.

Ad Widget

Ad Widget <> Ad Widget

ನೂತನವಾಗಿ ಆರಂಭವಾದ ವಿಸ್ತೃತ ಕಛೇರೀಯಲ್ಲಿ ಸದಾ ಹೊಸತನಕ್ಕೆ ತುಡಿಯುವ ಆರ್ವಿ ಗ್ರಾಫಿಕ್ಸ್‌ ಆರ್ವಿ ಮೈಪ್ರಿಂಟ್‌ ಎಂಬ ಹೊಸ ಪರಿಕಲ್ಪನೆಯನ್ನು ಪುತ್ತೂರಿಗೆ ಪರಿಚಯಿಸಿದೆ.

ಆರ್ವಿ ʼಮೈಪ್ರಿಂಟ್‌ʼ ಏನಿದು..?
ಸುಮಾರು 25 ಲಕ್ಷ ವೆಚ್ಚದ ಡಿಜಿಟಲ್‌ ಪ್ರಿಂಟಿಂಗ್ ಮೆಷಿನ್‌, ಲ್ಯಾಮಿನೇಶನ್‌, ಪ್ರೋಗ್ರಾಮೀಂಗ್‌ ಕಟ್ಟಿಂಗ್‌ ಮೆಷಿನ್‌ ಜತೆಗೆ ಕ್ರೀಸಿಂಗ್‌, ಪರ್ಪೋರೇಷನ್‌ ಮೆಷಿನ್‌, ಯಾವುದೇ ಶೇಪ್‌ ಕಟ್ಟಿಂಗ್‌ ಮೆಷಿನ್‌ ಮುಂತಾದ ಮೆಷಿನರಿಗಳನ್ನೊಳಗೊಂಡ ಡಿಜಿಟಲ್‌ ಪ್ರಿಂಟಿಂಗ್‌ನ ಯುನಿಟ್‌. ವಿವಿಧ ಜಿಎಸ್‌ಎಂನ ಪೇಪರ್‌, ಪ್ಲಾಸ್ಟಿಕ್‌ ಪೇಪರ್‌, ಪ್ಯಾಕೇಜಿಂಗ್‌ ಲೇಬಲ್ಸ್‌, ಸ್ಟಿಕರ್ಸ್‌, ಪ್ಲಾಸ್ಟಿಕ್‌ ಸ್ಟಿಕರ್ಸ್‌, ಗೋಲ್ಡ್‌ ಸ್ಟಿಕರ್ಸ್‌ ಮುಂತಾದುವುಗಳ ಮೇಲೆ ಇಲ್ಲಿ ಪ್ರಿಂಟ್‌ ತೆಗೆಯಬಹುದು. ಜತೆಗೆ ನಿಮ್ಮ ಶೇಪ್‌ಗೆ ತಕ್ಕಂತೆ ಸ್ಟಿಕ್ಕರ್‌ ಅನ್ನು ಹಾಫ್‌ ಕಟ್ಟಿಂಗ್‌ ಮಾಡಿ ಕೊಡಲಾಗುತ್ತದೆ. ಮದುವೆ, ಬ್ರಹ್ಮೋಪದೇಶ, ಸೀಮಂತ, ಗೃಹಪ್ರವೇಶ ಮುಂತಾದ ಎಲ್ಲಾ ಸಮಾರಂಭಗಳಿಗೆ ಬೇಕಾದ ಆಮಂತ್ರಣ ಪತ್ರಿಕೆಗಳು, ಪೋಸ್ಟರ್‌, ಬ್ರೋಷರ್‌, ಡ್ಯಾಂಗ್ಲರ್‌, ಕರಪತ್ರ ಇತ್ಯಾದಿಗಳನ್ನು ನಿಮ್ಮೂರಲ್ಲೇ ಪ್ರಿಂಟ್‌ ಮಾಡುವ ಸೌಲಭ್ಯವಿದೆ.

Ad Widget

Ad Widget

ಪ್ರಗತಿ ಸ್ಟಡಿ ಸೆಂಟರ್‌ ಸಂಚಾಲಕರಾದ ಗೋಕುಲ್‌ನಾಥ್‌ ಪಿ.ವಿ., ಪ್ರಾಂಶುಪಾಲರಾದ ಹೇಮಲತಾ ಗೋಕುಲ್‌, ಮೈತ್ರಿ ಎಲೆಕ್ಟ್ರಿಕ್‌ ನ ರವಿನಾರಾಯಣ ಎಂ., ಮಾಜಿ ಶಾಸಕರಾದ ಸಂಜೀವ ಮಠಂದೂರು, ಟ್ರೈಡೆಂಟ್‌ ಕ್ರಿಯೇಟಿವ್ಸ್‌ನ ಚರಣ್‌ ರಾಜ್‌, ಕೆನರಾ ಪ್ರೆಸ್‌ನ ಅರ್ಷದ್‌, ಅಡಿಕೆ ಪತ್ರಿಕೆಯ ನಾ ಕಾರಂತ ಪೆರಾಜೆ, ಎ.ವಿ. ನಾರಾಯಣ, ಕಾರ್ಕಳ ನ್ಯೂಸ್‌ನ ರಾಮಚಂದ್ರ ಬರೆಪ್ಪಾಡಿ, ಭಾವನಾ ಕಲಾ ಆರ್ಟ್ಸ್‌ನ ವಿಘ್ನೇಶ್‌ ವಿಶ್ವಕರ್ಮ, ಶರ್ಮಾ ಪ್ರಿಂಟಿಂಗ್‌ನ ರಾಜೇಶ ಕೃಷ್ಣಪ್ರಸಾದ್‌,   ವಿಟ್ಲದ ನಿವೃತ್ತ ಕೃಷಿ ಅಭಿವೃದ್ಧಿ ಅಧಿಕಾರಿ ದಾಮೋದರ ಆಚಾರ್ಯ, ಸಿಡ್ಕೋ ಸೊಸೈಟಿಯ ಅಧ್ಯಕ್ಷ ರವೀಂದ್ರ ದೇವಾ ಟ್ರೇಡರ್ಸ್‌, ಸಿಡ್ಕೋ ಸೊಸೈಟಿ ಮ್ಯಾನೇಜರ್‌ ಭಟ್‌ ಹಾಗೂ ಸಿಬ್ಬಂದಿಗಳು, ಶ್ರೀಮಾ ಪಾರ್ಲರ್‌ ಮ್ಹಾಲಕಿ ಮಾಧವಿ ಮನೋಹರ್‌ ರೈ, ಉದಯವಾಣಿಯ ಹರ್ಷ ಎ ಪುತ್ತೂರು , ಸುದ್ದಿ ಬಿಡುಗಡೆಯ ಶ್ರೀಧರ್‌, ಲೋಕೇಶ್‌, ಆದಿತ್ಯ, ಚಂದ್ರಕಾಂತ, ನರೇಶ್‌ ಜೈನ್‌, ಜ್ಞಾನದೀಪ ಶಿಕ್ಷಣ ಸಂಸ್ಥೆಯ ಉಮೇಶ್‌ ಮಣಿಕ್ಕರ, ಅಧ್ಯಾಪಕ ಗಣೇಶ್‌ ನಾಯಕ್‌, ಸಾಯಿ ಡಿಸ್ಟ್ರಿಬ್ಯೂಟರ್ಸ್‌ನ ಮ್ಹಾಲಕ‌ ಶೈಲೇಶ್, ಪ್ರಸನ್ನ ರೈ ತಿಂಗಳಾಡಿ ಮುಂತಾದವರು ಭೇಟಿ ನೀಡಿ ಸಂಸ್ಥೆಗೆ ಶುಭಹಾರೈಸಿದರು.

ಅಂಬಿಕಾ ಬಾಲವಿದ್ಯಾಲಯದ ದಿನೇಶ್‌ ವಿಶ್ವಕರ್ಮರವರ ಕೈಚಳಕದಲ್ಲಿ ಮೂಡಿಬಂದ ಮರ ಎಲ್ಲರ ಗಮನ ಸೆಳೆದಿತ್ತು.

ಆರ್ವಿ ಸಿಬ್ಬಂದಿಗಳಾದ ಅನಿಲ್‌, ರಾಮ್‌ಗಣೇಶ್‌, ಶ್ವೇತಾ, ಚೈತ್ರಾ, ಸ್ಪರ್ಷ, ಲಹರಿ, ಮೌಲ್ಯ, ಶಮಿತಾ, ಸುಮಂತ್‌, ಧನ್ಯ, ದೀಕ್ಷಾ ಸಹಕರಿಸಿದರು. ಶ್ರೀಮತಿ ದೀವಿತಾ ಜ್ಞಾನೇಶ್‌,  ಮಾ| ಧ್ರುವಿಜ್‌ ವಿಶ್ವಕರ್ಮ, ಕುಮಾರಿ ಚಿಂತನಾ, ಬೇಬಿ ಧ್ರುವಿ, ಸುದಿನ್‌ ವಿಶ್ವಕರ್ಮ, ವಿನಿಲ್‌ ವಿಶ್ವಕರ್ಮ ಸಾಥ್  ನೀಡಿದರು. ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿದರು.

 ಆರ್ವಿ ಬೆಳೆದು ಬಂದ ಹಾದಿ :

ಆರ್ವಿ ಇಂಟರ್ ಗ್ರಾಫಿಕ್ಸ್! ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲಾ..!  ಇದು ಕರಾವಳಿಯ ಡಿಸೈನಿಂಗ್ ಕ್ಷೇತ್ರದಲ್ಲಿ ಹೊಸತನದ ಅಲೆಯೆಬ್ಬಿಸಿದ ಗಟ್ಟಿ ಹೆಸರು.. ಈ ಡಿಜಿಟಲ್ ದುನಿಯಾದಲ್ಲಿ ಪ್ರತಿಯೊಂದನ್ನೂ ಜನರ ಮನದೊಳಗೆ ಶಾಶ್ವತವಾಗಿ ಅಚ್ಚೊತ್ತುವಂತೆ ವಿಭಿನ್ನವಾಗಿ ವಿಶಿಷ್ಟವಾಗಿ ರೂಪಿಸುವ ಈ ಸಂಸ್ಥೆಯ ಇತಿಹಾಸವೂ ಅಷ್ಟೇ ಕಲರ್ ಫುಲ್..!

ಬೆಳೆಯುತ್ತಿರುವ ಮುತ್ತಿನ ನಗರಿ ಪುತ್ತೂರಿನ ಡಿಸೈನಿಂಗ್‌ ಕ್ಷೇತ್ರದಲ್ಲಿ ಕಲಾತ್ಮಕತೆ-ಸೃಜನಶೀಲತೆ, ಹೊಸತನವನ್ನು ಇನ್ನಷ್ಟು ವಿನೂತನವಾಗಿಸಬೇಕೆಂಬ ಉದ್ದೇಶದಿಂದ ಗಿರೀಶ್ ರಾಜ್ ಹಾಗೂ ಜ್ಞಾನೇಶ್‌ ವಿಶ್ವಕರ್ಮರವರ ಕ್ರಿಯಾಶೀಲ ಮನಸ್ಸುಗಳು ಒಂದಾಗಿ ಪುತ್ತೂರಿಗರ ಕನಸಿಗೆ ಬಣ್ಣ ತುಂಬುವಂತಹ ಕ್ರಿಯೇಟಿವ್ ಡಿಸೈನಿಂಗ್ ಸಂಸ್ಥೆಯೊಂದನ್ನು ತೆರೆಯಲೇಬೇಕೆಂಬ ಛಲದಿಂದ 2010ನೇ ಇಸವಿಯಲ್ಲಿ ಆರ್ವಿ ಇಂಟರ್ ಗ್ರಾಫಿಕ್ಸ್ ಸಂಸ್ಥೆ ಪುತ್ತೂರಿನ ಏಳ್ಮುಡಿಯ ಪಾಯಸ್(pais) ಬಿಲ್ಡಿಂಗಿನಲ್ಲಿ ತಲೆಯೆತ್ತಿತು.

ಡಿಜಿಟಲ್ ಡಿಸೈನಿಂಗ್ ಕ್ಷೇತ್ರದಲ್ಲಿ ಅಕ್ಷರಶಃ ಕ್ರಾಂತಿ ಮಾಡುತ್ತಾ ಆರ್ವಿಯು ಪುತ್ತೂರು ಮತ್ತು ಆಸುಪಾಸಿನ ಊರುಗಳ ಜನತೆ ಮತ್ತು ಸಂಸ್ಥೆಗಳನ್ನು ತನ್ನ ಅದ್ಭುತ ಕ್ರಿಯೇಟಿವಿಟಿಯಿಂದ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತು. ಶುಭ ಸಮಾರಂಭಗಳ ಆಮಂತ್ರಣ ಪತ್ರಿಕೆ, ಶಿಕ್ಷಣ-ವಾಣಿಜ್ಯ ಸಂಸ್ಥೆಗಳ ಲೋಗೋ, ಬ್ರೋಷರ್ಸ್, ಜಾಹೀರಾತು, ಡಿಜಿಟಲ್‌ ಎಲ್.ಇ.ಡಿ. ಬೋರ್ಡುಗಳು ಹೀಗೆ ಎಲ್ಲವನ್ನೂ, ಎಲ್ಲರೂ ‘ವಾವ್ಹ್!’ ಎಂದು ಕಣ್ಣರಳಿಸಿ ನೋಡುವಂತೆ ರೂಪಿಸುತ್ತಾ ಕ್ರಿಯೇಟಿವ್ ಡಿಸೈನ್ ಅಂದರೆ ಆರ್ವಿ ಎನ್ನುವಂತಾಯಿತು..

ಹೀಗೆ ಪುತ್ತೂರಿನಲ್ಲಿ ಹುಟ್ಟಿ ಮುಂದೆ ತನ್ನೊಳಗಿನ ಕಂಟೆಂಟು- ಕಮಿಟ್ಮೆಂಟುಗಳ ಮೂಲಕ ಅಸಂಖ್ಯಾತ ಗ್ರಾಹಕ ಮನಸುಗಳೊಂದಿಗೆ ಬೆಳೆದ ಆರ್ವಿ ಸಂಸ್ಥೆ ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ 2013ನೇ ಇಸವಿಯಲ್ಲಿ ಪುತ್ತೂರಿನ ಶ್ರೀ ಧರ್ಮಸ್ಥಳ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ತನ್ನ ಕ್ರಿಯಾಶೀಲತೆಯ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಿಕೊಂಡಿತು. ಬ್ರಾಂಡ್‌ಗೆ ಪ್ರಚಾರಕ್ಕೆ ಪೂರಕವಾದ ಮಾರ್ಕೆಟಿಂಗ್‌ ಮೆಟೀರಿಯಲ್‌ ಮಾತ್ರವಲ್ಲ  ಡಿಜಿಟಲ್ ಮಾಧ್ಯಮದ A to Z ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಿರುವುದು ಆರ್ವಿಯ ಹೆಚ್ಚುಗಾರಿಕೆ.

ಈ ಥರ ಬೆಳೆಯುತ್ತಾ ಪುತ್ತೂರಿನಲ್ಲಿ ಸುಸಜ್ಜಿತ ರೆಕಾರ್ಡಿಂಗ್‌ ಸ್ಟುಡಿಯೋ ʼಆರ್ವಿ ವೋಕಲ್‌ ಸ್ಟುಡಿಯೋʼ ವನ್ನು 2020ರ ಮಾರ್ಚ್‌ನಲ್ಲಿ ಆರಂಭಿಸಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ, ಅನುಭವಿ ತಂತ್ರಜ್ಞರ ಮುಖೇನ ಗುಣಮಟ್ಟದ ಕವರ್‌ ಸಾಂಗ್‌, ರೆಕಾರ್ಡಿಂಗ್, ಮ್ಯೂಸಿಕ್‌ ಪ್ರೊಡಕ್ಷನ್‌, ಡಬ್ಬಿಂಗ್, ಮಾಸ್ಟರಿಂಗ್ ಸೌಲಭ್ಯ ನೀಡುತ್ತ ಬಂದಿದೆ.‌ ತಾಂತ್ರಿಕ ಕಾರಣಗಳಿಂದ ಸದ್ಯ ಈ ಸೇವೆ ಲಭ್ಯವಿರುವುದಿಲ್ಲ.

2021ರಲ್ಲಿ ಕಸ್ಟಮೈಸ್‌ಡ್‌  ಉಡುಗೊರೆಗಳನ್ನೊಳಗೊಂಡ ಆರ್ವಿ ಗಿಫ್ಟ್‌ ಗ್ಯಾಲರಿಯನ್ನು ತೆರೆದು ವಿಭಿನ್ನವಾದ ಉಡುಗೊರೆಯನ್ನು ಅರಸಿ ಬರುವ ಗ್ರಾಹಕರಿಗೆ ಬೇಡಿಕೆಯಂತೆ  ಉಡುಗೊರೆಗಳನ್ನು ಪೂರೈಸುತ್ತಾ ಇನ್ನಷ್ಟು ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಂಡಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಸದಾ ಕಾಲ ಹೊಸತನದ ಹುಡುಕಾಟದಲ್ಲಿ ಪ್ರಯೋಗಶೀಲವಾಗಿರುವ ಆರ್ವಿ ಇದೀಗ ಕರಾವಳಿಯ ಡಿಸೈನಿಂಗ್ ಕ್ಷೇತ್ರದ ಬಾನಂಗಳದಲ್ಲಿ ತನ್ನದೇ ಆದ ‘ಆರ್ವಿಸಂ’ ಅನ್ನು ಸೃಷ್ಟಿಸಿದೆ.

We Make Brands Powerful.!

Aarvi Intergraphics. First Floor, Shri Dharmasthala Building, Main Road, Puttur

Call : 9483833824, 8970802040

www.aarvi.in
Ad Widget
Click to comment

Leave a Reply

Uncategorized

Philomena-ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಾಗಾರ

Published

on

Ad Widget

Ad Widget

Ad Widget

Ad Widget

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು  ಕಾಲೇಜು ಸಭಾಂಗಣದಲ್ಲಿ  ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.

Ad Widget

Ad Widget

Ad Widget

Ad Widget

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು  ಕಾಲೇಜು ಸಭಾಂಗಣದಲ್ಲಿ  ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.

Ad Widget

Ad Widget alt="Ad Widget"/>

Ad Widget

ಸಂಪನ್ಮೂಲ ವ್ಯಕ್ತಿಗಳಾಗಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ವಂದನ ಶಂಕರ್ ಮಾತನಾಡಿ, ಪಿ ಯು ಸಿ ನಂತರದ ಅವಕಾಶಗಳು, ಇಂಜಿನಿಯರಿಂಗ್ ವಿಭಾಗಗಳಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿದರು.

Ad Widget

Ad Widget <> Ad Widget

ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಚೇತನ್ ಮಾತನಾಡಿ, ಮಾದಕ ವಸ್ತುಗಳು ಹಾಗೂ ದೂಮಪಾನದ ವ್ಯಸನ ನಮ್ಮ ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ನಮ್ಮ ಏಕಾಗ್ರತೆಯನ್ನು ಭಂಗ ಗೊಳಿಸುತ್ತದೆ ಎಂದು ಹೇಳಿದರು.

ವೃತ್ತಿ ಮಾರ್ಗದರ್ಶನ ವಿಭಾಗದ ನಿರ್ದೇಶಕರಾದ ರವಿಪ್ರಸಾದ್ ಬಿ. ಜಿ ನಿರಂಜನ್ ಜಿ. ಯು, ಕವಿತಾ ಕೆ ಹಾಗೂ ಕಾಲೇಜಿನ ಬೋಧಕ /ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Ad Widget

Ad Widget

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿ ಮೊಹಮ್ಮದ್ ಶಯಾನ್ ಅಬ್ಬಾಸ್ ಸ್ವಾಗತಿಸಿ, ವಂದಿಸಿ,
ಕಾರ್ಯಕ್ರಮವನ್ನು ನಿರೂಪಿಸಿದರು.

Ad Widget
Continue Reading

Uncategorized

ಹಿರಿಯ ಸಹಕಾರಿ ಧುರೀಣ ಕೆ.ಕೆ. ನಾರಾಯಣ ಚಳ್ಳಂಗಾರು ನಿಧನ

Published

on

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಲ್ಮಡ್ಕ: ತಾಲೂಕಿನ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ, ಬಹುಮುಖ ಚಿಂತಕ ಕಲ್ಮಡ್ಕ ಗ್ರಾಮದ ಚಳ್ಳಂಗಾರು ಕೆ.ಕೆ. ನಾರಾಯಣ (88) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.

Ad Widget

Ad Widget alt="Ad Widget"/>

Ad Widget

ಮಂಡಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದ್ದರು. ಕಲ್ಮಡ್ಕ ಸಹಕಾರಿ ಸಂಘದ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.

Ad Widget

Ad Widget <> Ad Widget

ಕಲ್ಮಡ್ಕ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದ ಅವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಅರ್ಥಧಾರಿಯಾಗಿ ಕಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ನಾರಾಯಣ ಅವರು, ಸಂಗಮ ಕಲಾ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಓದುಗ ಹಾಗೂ ವಿಮರ್ಶಕರಾಗಿದ್ದ ಅವರು ಸಾಹಿತ್ಯ, ಕಲೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಮೃತರು ಪತ್ನಿ ಸುಬ್ಬಮ್ಮ, ಪುತ್ರಿಯರಾದ ವಿದ್ಯಾ, ಜಯಶ್ರೀ, ದೀಪಿಕಾ, ಪುತ್ರ, ಕ್ಯಾಂಪ್ಕೋ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು, ಸೊಸೆ ರಮ್ಯಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Continue Reading

Uncategorized

ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕ‌ರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

Published

on

Ad Widget

Ad Widget

Ad Widget

Ad Widget

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕ‌ರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆ‌ರ್.ಅಶೋಕ್ ಅವರು ಚಾಲನೆ ನೀಡಿದರು.

Ad Widget

Ad Widget

Ad Widget

Ad Widget

ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.

Ad Widget

Ad Widget alt="Ad Widget"/>

Ad Widget

ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

Ad Widget

Ad Widget <> Ad Widget

ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧ‌ರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!