Connect with us

Uncategorized

ಭಜನಾ ಕಮ್ಮಟದ ರಜತ ಮಹೋತ್ಸವ ಸಂಭ್ರಮದಲ್ಲಿ ಭಜನಾ ತರಬೇತಿ – ಕುಟುಂಬದಲ್ಲಿ ಲಿಂಗ ಸಮಾನತೆ ತಂದ ಸಾಧನೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯದ್ದಾಗಿದೆ :ಡಾ| ಎಲ್. ಎಚ್. ಮಂಜುನಾಥ್

Published

on



Ad Widget

Ad Widget

Ad Widget

Ad Widget


ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಜನಾ ಕಮ್ಮಟದ ರಜತ ಮಹೋತ್ಸವದಲ್ಲಿ ದಿನಾಂಕ
ಸೆ 28 ರಂದು ಸಂಪನ್ಮೂಲ ವ್ಯಕ್ತಿಗಳಾಗಿ ರಾಗ, ತಾಳ, ಶ್ರುತಿಗಳ ಬಗ್ಗೆ ಶ್ರೀಮತಿ ಮನೋರಮಾ
ತೋಳ್ಪಾಡಿತ್ತಾಯ ಅವರು ತರಗತಿ ನಡೆಸಿದರು, ಶ್ರೀಮತಿ ಉಷಾ ಹೆಬ್ಬಾರ್ ಸಂಗೀತ ವಿದುಷಿ ಅವರಿಂದ
ಭಜನಾ ಅಭ್ಯಾಸ ಹಾಗೂ ಶ್ರೀ ಸುನಿಲ್ ಶೆಟ್ಟಿ ಕಲ್ಕೊಪ್ಪ ಅವರಿಂದ ಜನಪದ ಹಾಡುಗಳು ಮತ್ತು ರಂಗಗೀತೆಗಳ
ತರಬೇತಿಯನ್ನು ನಡೆಸಿಕೊಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳದ ಕ್ಷೇತ್ರ ಪರಿಚಯವನ್ನು ಸುಬ್ರಹ್ಮಣ್ಯ ಪ್ರಸಾದ್
ನಡೆಸಿಕೊಟ್ಟರು.ಹಾಗೂ ಸೆ 29 ರಂದು ಕಮ್ಮಟದ ಎರಡನೇ ದಿನ ಭಜನಾ ಕಾರ್ಯಕ್ರಮವನ್ನು ಶ್ರೀಮತಿ ಸಂಗೀತ ಬಾಲಚಂದ್ರ ನಡೆಸಿಕೊಟ್ಟರು. ಶ್ರೀಮತಿ ಸೌಮ್ಯ ಸುಭಾಷ್ ಅವರು ಭಜನೆ, ಶೋಭಾನೆ, ಸಂಪ್ರದಾಯ
ಹಾಡುಗಳನ್ನು ಹೇಳಿಕೊಟ್ಟರು.

Ad Widget

Ad Widget

Ad Widget

Ad Widget

ಪುರುಷ ಶಿಬಿರಾರ್ಥಿಗಳಿಗೆ ರಾಜ್ಯಮಟ್ಟದ ನೃತ್ಯ ಭಜನಾ ತರಬೇತುದಾರರಾದ ಶ್ರೀ ರಮೇಶ್ ಕಲ್ಮಾಡಿ ಹಾಗೂ
ಶ್ರೀ ಶಂಕರ್, ಅವರಿಂದ ಕುಣಿತ ಭಜನಾ ತರಬೇತಿ, ಮಹಿಳಾ ಶಿಬಿರಾರ್ಥಿಗಳಿಗೆ ವಿದುಷಿ ಚೈತ್ರಾ ಧರ್ಮಸ್ಥಳ
ಇವರಿಂದ ನೃತ್ಯ ಭಜನಾ ತರಬೇತಿಯನ್ನು ನಡೆಸಲಾಗುತ್ತಿದೆ.

Ad Widget

Ad Widget

Ad Widget alt="Ad Widget"/>

Ad Widget

ಮದ್ಯಾಹ್ನ 12 ಘಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಮಾಜ ಇತರ ಕ್ಷೇತ್ರಗಳಿಗೆ ನೀಡಿದ ಧಾರ್ಮಿಕ,
ಸಾಮಾಜಿಕ ಕೊಡುಗೆಗಳು ಎಂಬ ವಿಚಾರದ ಕುರಿತು ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್. ಎಚ್. ಮಂಜುನಾಥ್ ಇವರು ಉಪನ್ಯಾಸ ನೀಡಿದರು. ಅವರು ” ಚತುರ್ದಾನ ಪರಂಪರೆಯುಳ್ಳ ಕ್ಷೇತ್ರ ಧರ್ಮಸ್ಥಳ, ವಿಶ್ವದ ಎಲ್ಲಿಯು ಇಲ್ಲದ ಅಭಯದಾನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿದೆ. ಅಭಯದಾನ ಎಂದರೆ ಕೇವಲ ಧೈರ್ಯ ತುಂಬುವುದು ಮಾತ್ರವಲ್ಲ, ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡುವ ಕೆಲಸ ಶ್ರೀ ಕ್ಷೇತ್ರದಿಂದ ಆಗುತ್ತಿದೆ. 25 ವರ್ಷಗಳ ಹಿಂದೆ ಅಬಲೆಯರಾಗಿದ್ದ ಮಹಿಳೆಯರು ಸಬಲೆಯರಾಗಿದ್ದಾರೆ. ಇದಕ್ಕೆ ಕಾರಣ ಗ್ರಾಮಾಭಿವೃದ್ಧಿ ಯೋಜನೆ ಎಂದರು.

Ad Widget

Ad Widget <> Ad Widget

ಕುಟುಂಬದಲ್ಲಿ ಲಿಂಗ ಸಮಾನತೆ ತಂದ ಸಾಧನೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯದ್ದಾಗಿದೆ. ವೈಯಕ್ತಿಕ ಕುಟುಂಬಗಳ ಅಭಿವೃದ್ಧಿಯ ಜೊತೆಗೆ ಗ್ರಾಮಗಳ ಅಭಿವೃದ್ದಿ, ಮೂಲ ಸೌಕರ್ಯಗಳ ಅಭಿವೃದ್ದಿಗೆ ಸಹಾಯಧನ ಕ್ಷೇತ್ರದ ಮೂಲಕ ಆಗಿದೆ. 350 ಕೋಟಿ ಮೊತ್ತದ ಧನ ಸಹಾಯ ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ಆಗಿದೆ. ದುರಾಭ್ಯಾಸ ವಿರುದ್ಧ ಜಾಗೃತಿ ಮೂಡಿಸುವ ಕೆಲಸ, 125000 ಮಂದಿ ವ್ಯಸನ ಮುಕ್ತರಾಗಿದ್ದಾರೆ. ರಾಜ್ಯದ 106 ತಾಲೂಕು ಗಳಲ್ಲಿ 10,000 ಮಂದಿ ವಿಪತ್ತು ನಿರ್ವಹಣಾ ಸದಸ್ಯರಿದ್ದಾರೆ. 3.5 ಲಕ್ಷ ಮಹಿಳೆಯರು ಜ್ಞಾನವಿಕಾಸ ಕೇಂದ್ರದ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಕ್ಷೇತ್ರದ ಎಲ್ಲಾ ಸಧನೆಗಳಲ್ಲಿ, ಅಭಿವೃದ್ದಿಯಲ್ಲಿ ಶ್ರೀ ಅಣ್ಣಪ್ಪಸ್ವಾಮಿ, ಶ್ರೀ ಧರ್ಮದೇವತೆಗಳ ಪ್ರೇರಣೆ ಇದೆ. ಎಂದರು



Ad Widget


ಎಸ್.ಡಿ.ಎಂ. ‘ಕಲಾಕೇಂದ್ರ’ ಉಜಿರೆ ಕಾಲೇಜಿನ ವಿದ್ಯಾರ್ಥಿಗಳು ವೈವಿದ್ಯಮಯ ಸಾಂಸ್ಕೃ ತಿಕ
ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಭಜನಾ ಕಮ್ಮಟದಲ್ಲಿ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರು, ಶ್ರೀ
ಮೋಹನದಾಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ. ಮಾತೃಶ್ರೀ ಡಾ| ಹೇಮಾವತಿ ವೀ. ಹೆಗ್ಗಡೆಯವರು,
ಕಮ್ಮಟದ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಶ್ರೀ ಸುರೇಶ್ ಮೊಲಿ, ಪರಿಷತ್‌ನ
ಅಧ್ಯಕ್ಷರಾದ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಪುರುಷೋತ್ತಮ ಪಿ.ಕೆ. ಕಮ್ಮಟದ ಸದಸ್ಯರಾದ ಶ್ರೀ ರತ್ನವರ್ಮ
ಜೈನ್, ಶ್ರೀ ಭುಜಬಲಿ, ಶ್ರೀ ಶ್ರೀನಿವಾಸ್‌ರಾವ್, ಕೋಶಾಧಿಕಾರಿ ಶ್ರೀ ಧರ್ಣಪ್ಪ, ಶ್ರೀಮತಿ ಭವಾನಿ, ಶ್ರೀಮತಿ
ಸಂಗೀತ, ಶ್ರೀ ಶ್ರೀನಿವಾಸ್, ಶ್ರೀ ಜನಾರ್ಧನ್, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Click to comment

Leave a Reply

Uncategorized

ಮಂಗಳೂರು : ಸಹಪಾಠಿಯೊಂದಿಗೆ ಜಗಳ: ಬಿಸಿಎ ವಿದ್ಯಾರ್ಥಿಗೆ ಚೂರಿಯಿಂದ ಇರಿತ; ಇಬ್ಬರು ವಶಕ್ಕೆ

Published

on



Ad Widget

Ad Widget

Ad Widget

Ad Widget
ಚಿತ್ರ : AI

ಮಂಗಳೂರು, ಅ.4: ಸಣ್ಣ ವಿಚಾರಕ್ಕೆ ಸಹಪಾಠಿಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯೊಬ್ಬನ ಮೇಲೆ ಸಹಪಾಠಿ ಸೇರಿದಂತೆ ಆರು ಮಂದಿ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Ad Widget

Ad Widget

Ad Widget

Ad Widget

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಮಹಮ್ಮದ್ ಉನೈಸ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರು ನಗರದ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಘಟನೆ ಅ.3ರಂದು ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿರುವ ಉನೈಸ್ ಅವರು ಬೆಳಿಗ್ಗೆ 11.30ರ ಸುಮಾರಿಗೆ ಕಾಲೇಜಿನ ಸಮೀಪದ ಟರ್ಫ್‌ಗೆ ಕಬಡ್ಡಿ ಆಡಲು ತೆರಳಿದ್ದರು. ಈ ವೇಳೆ ಟರ್ಫ್ ಎದುರಿನ ರಸ್ತೆಯಲ್ಲಿ ಅವರ ಸ್ನೇಹಿತ ಹಾಗೂ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ರಾಯಿಝ್ ಮತ್ತು ಅದೇ ಕಾಲೇಜಿನ ಬಿಕಾಂ ವಿದ್ಯಾರ್ಥಿ, ಕಾಟಿಪಳ್ಳ ನಿವಾಸಿ ರಿಯಾನ್ ನಡುವೆ ಸಣ್ಣ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.

Ad Widget

Ad Widget <> Ad Widget

ಜಗಳ ಬಿಡಿಸಲು ಉನೈಸ್ ಸೇರಿದಂತೆ ಕೆಲ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿದಾಗ ರಿಯಾನ್ ಉನೈಸ್‌ಗೆ ಕೈಯಿಂದ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಉನೈಸ್ ಹಾಗೂ ಇತರ ವಿದ್ಯಾರ್ಥಿಗಳು ಕಾಲೇಜಿಗೆ ವಾಪಸಾಗಿದ್ದರು.



Ad Widget

ಮಧ್ಯಾಹ್ನ 1.45ರ ಸುಮಾರಿಗೆ ಉನೈಸ್ ಕಾಲೇಜಿನ ಕ್ಯಾಂಟೀನ್ ಬಳಿ ನಿಂತಿದ್ದಾಗ ರಿಯಾನ್ ಹಾಗೂ ಐವರು ಸಹಚರರು ಎರಡು ದ್ವಿಚಕ್ರ ವಾಹನಗಳಲ್ಲಿ ಅಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ. ಆರೋಪಿಗಳು ಉನೈಸ್ ಅವರನ್ನು ಸುತ್ತುವರಿದು ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

Ad Widget

Ad Widget

ಈ ವೇಳೆ ಚೂರಿಯಿಂದ ಉನೈಸ್ ಅವರ ತಲೆ, ಬೆನ್ನು, ಎಡ ಕಿವಿ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದು ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಗಾಯಗೊಂಡ ಉನೈಸ್ ಅವರನ್ನು ತಕ್ಷಣ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Ad Widget
Continue Reading

Uncategorized

ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಕೀಲ ಮೋಹಿತ್‌ ಕುಮಾರ್‌ ಗೆ ಮಾತೃ ವಿಯೋಗ

Published

on



Ad Widget

Ad Widget

Ad Widget

Ad Widget


ಪುತ್ತೂರು: ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಹೈಕೋರ್ಟ್‌ ವಕೀಲ ಮೊಹಿತ್‌ ಕುಮಾರ್‌ ಅವರ ತಾಯಿ, ಕೊಳ್ತಿಗೆ ಗ್ರಾಮದ ಕುಂಡಡ್ಕ ನಿವಾಸಿ ಪಾರ್ವತಿ ಕುಂಡಡ್ಕ ಅವರು ಅಲ್ಪಕಾಲದ ಅಸ್ವಸ್ಥತೆಯಿಂದ ಅ.3ರಂದು ಸ್ವಗೃಹದಲ್ಲಿ ನಿಧನರಾದರು.

Ad Widget

Ad Widget

Ad Widget

Ad Widget

ಪಾರ್ವತಿ ಅವರು ಚಾರ್ವಕ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಹಾಗೂ ಪುತ್ತೂರಿನ ಪಶುವೈದ್ಯ ಧರ್ಮಪಾಲ ಕರಂದ್ಲಾಜೆ ಅವರ ಸಹೋದರಿ.
ಮೃತರು ಪುತ್ರರಾದ ತೀರ್ಥಪ್ರಸಾದ್‌ ಕೆ., ಚಿತ್ರಶೇಖರ್‌, ಮೋಹಿತ್‌ ಕುಮಾರ್‌ ಹಾಗೂ ಚಿರಣ್‌ ಕುಮಾರ್‌ ಅವರನ್ನು ಅಗಲಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ವಕೀಲ ಮೋಹಿತ್‌ ಕುಮಾರ್‌ ಅವರು ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್‌ ರಾವ್‌ ಪರ ಸಿಬಿಐ ವಿಶೇಷ ನ್ಯಾಯಾಲಯ, ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು. ಸೌಜನ್ಯ ಪ್ರಕರಣದ ನ್ಯಾಯಾಂಗ ಹೋರಾಟದಲ್ಲಿ ಅವರು ಪ್ರಮುಖವಾಗಿ ಗುರುತಿಸಿಕೊಂಡಿದ್ದರು.

Ad Widget

Ad Widget <> Ad Widget

ಸೌಜನ್ಯ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಹಲವು ನಾಯಕರು ಅಂತಿಮ ನಮನ ಸಲ್ಲಿಸಿದರು.



Ad Widget
Ad Widget
Continue Reading

Uncategorized

Dharmasthala-28ನೇ ವರ್ಷದ ಭಜನಾ ಕಮ್ಮಟದ ಉಪನ್ಯಾಸ ಕಾರ್ಯಕ್ರಮ: ಸಾಮರಸ್ಯದ  ಸಂಕೇತವೇ ಈ ಭಜನೆ : ಪ್ರೊ. ಪವನ್ ಕಿರಣಕೆರೆ

Published

on



Ad Widget

Ad Widget

Ad Widget

Ad Widget

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.02, ಶುಕ್ರವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ ಆಸೆಮ್ಸ್ ಶಿಕ್ಷಣ ಸಂಸ್ಥೆ ಕಲ್ಮಾಡಿ, ಉಡುಪಿ ಇಲ್ಲಿನ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಮಾತನಾಡಿದರು.

Ad Widget

Ad Widget

Ad Widget

Ad Widget

ಧರ್ಮಸ್ಥಳ, ಅ.02 : ಯಾವುದೇ ಮತ ಪಂಥಗಳ ತಾರತಮ್ಯವಿಲ್ಲದೆ ಸಾಮರಸ್ಯದಿಂದ ದೇವರನ್ನು ಸ್ಮರಿಸುವ ಏಕೈಕ ಮಾರ್ಗವೇ ಭಜನೆಯಾಗಿದ್ದು, ಇಡೀ ಸಮಾಜಕ್ಕೆ ಸಾಮರಸ್ಯವನ್ನು ಸಾರುವ ಕಾರ್ಯವನ್ನು ಈ ಭಜನಾ ಕಮ್ಮಟ ಮಾಡುತ್ತಿದೆ ಎಂದು ಪ್ರಸಂಗಕರ್ತರು, ಅರ್ಥಧಾರಿಗಳು ಹಾಗೂ ಆಸೆಮ್ಸ್ ಶಿಕ್ಷಣ ಸಂಸ್ಥೆ ಕಲ್ಮಾಡಿ, ಉಡುಪಿ  ಇಲ್ಲಿನ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಅಭಿಪ್ರಾಯಪಟ್ಟರು.

Ad Widget

Ad Widget

Ad Widget alt="Ad Widget"/>

Ad Widget

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.02, ಶುಕ್ರವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ  ಮಾತನಾಡಿದರು.

Ad Widget

Ad Widget <> Ad Widget

  ಮನುಷ್ಯನ ಮನಸ್ಸಿನಲ್ಲಿರುವ ಅಸೂಯೆ, ಮತ್ಸರಗಳೇ ದುಃಖದ ಮೂಲವಾಗಿದ್ದು, ಅವೆಲ್ಲವನ್ನೂ  ಕಳೆಯಲು ಭಜನೆ ಹಾಗೂ ಆಧ್ಯಾತ್ಮದಿಂದ ಮಾತ್ರ ಸಾಧ್ಯ. ಸುಖದಲ್ಲಿ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಎಲ್ಲವನ್ನೂ ಸಮಚಿತ್ತವಾಗಿ ಸ್ವೀಕರಿಸುವ ಮೂಲಕ ಸಾಮರಸ್ಯದ ಬದುಕನ್ನು ಭಜನೆಯಿಂದ ಕಂಡುಕೊಳ್ಳಬಹುದಾಗಿದೆ. ಭಗವಂತನ ದೃಷ್ಟಿಯಲ್ಲಿ ಭಕ್ತಿಗೆ ಪ್ರಾಧಾನ್ಯತೆಯೇ ಹೊರತು ಯಾವುದೇ ಆಡಂಬರದ ಆಚರಣೆಗಳಿಗಲ್ಲ. ಭಗವಂತನನ್ನು ಒಲಿಸಿಕೊಳ್ಳಲು ಶ್ರದ್ಧೆಯೇ ಅತ್ಯಂತ ಉತ್ತಮ ಹಾದಿಯಾಗಿದೆ ಎಂದು ಎಲ್ಲಾ ಶಿಬಿರಾರ್ಥಿಗಳಿಗೆ ಭೋದಿಸಿದರು.



Ad Widget

   ರಾಜ್ಯಾದ್ಯಂತ ಎಲ್ಲಾ ಭಕ್ತರನ್ನು ಒಗ್ಗೂಡಿಸಿ ಎಲ್ಲರ ಮಾನಸಿಕ ಶುದ್ಧತೆಯನ್ನು ಕಾಪಾಡುವ ಮೂಲಕ ಭಜನಾ ಕಮ್ಮಟವು ಅತಿ ಮುಖ್ಯ ಪಾತ್ರ ವಹಿಸಿದ್ದು, ಈ ಕಮ್ಮಟವನ್ನು ಪರ್ವವಾಗಿಸುವಲ್ಲಿ ಕಾರಣಿಭೂತರಾದ  ಹೆಗ್ಗಡೆ ದಂಪತಿಗಳ ಪರಿಶ್ರಮ ಬಲು ದೊಡ್ಡದು ಎಂದು ಶ್ಲಾಘಿಸಿದರು.

Ad Widget

Ad Widget

 ಈ ಸಂದರ್ಭದಲ್ಲಿ ಹಿಂದಿನ 27ನೇ ವರ್ಷದ ಭಜನಾ ಕಮ್ಮಟದಲ್ಲಿ ಭಾಗಿಯಾಗಿ ಸಾರ್ಥಕತೆಯನ್ನು ಕಂಡ ಹೇಮಂತ್ ಸುಳ್ಯ ತನ್ನ ಅನುಭವದ ಮಾತುಗಳನ್ನಾಡಿದರು.

ಈ ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ಉಷಾ ಹೆಬ್ಬಾರ್, ಭಜನಾ ಕಮ್ಮಟ ಸಮಿತಿ ಸಂಚಾಲಕ ಸುಬ್ರಮಣ್ಯ ಪ್ರಸಾದ್, ಸಮಿತಿಯ ಸರ್ವ ಸದಸ್ಯರು ಹಾಗೂ ಶಿಬಿರಾರ್ಥಿಗಳು ಭಾಗಿಯಾಗಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading