Uncategorized
Soujanya Case ಅಶ್ರತ್ ಖಾಲೀದ್ ಹೆಣ್ಣೋ ಗಂಡೋ – ತನಿಖಾಧಿಕಾರಿ ಯೋಗೀಶ್ ಗೆ ಮಾಹಿತಿಯಿಲ್ಲ..! ಇದು ತನಿಖೆಯ ಲೆವಲ್ ಅನ್ನು ತೋರಿಸುತ್ತಾದೆ; ಸಂತೋಷ್ ರಾವ್ ಪರ ವಕೀಲ ಮೋಹಿತ್ ಬಿಚ್ಚಿಟ್ಟ ಸೌಜನ್ಯ ತನಿಖೆಯ ವೈಫಲ್ಯಗಳ ಪಟ್ಟಿ – ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ…
Soujanya case : ಸೋಮವಾರ ನೆಲ್ಲಿಕಟ್ಟೆ ಖಾಸಗೀ ಬಸ್ ನಿಲ್ದಾಣದಲ್ಲಿ ಪುತ್ತೂರು ಅಭಿನವ ಭಾರತ ಮಿತ್ರ ಮಂಡಳಿ ಮತ್ತು ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಜಂಟಿ ಆಶ್ರಯದಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಬೃಹತ್ ಕಾಲ್ನಡಿಗೆ ಜಾಥಾ ಮತ್ತು ಜನ ಜಾಗೃತಿ ಸಭೆ ನಡೆಯಿತು. ಇದರಲ್ಲಿ ಸೌಜನ್ಯ ಹತ್ಯೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಪರ ಸಿಬಿಐ ಕೋರ್ಟಿನಲ್ಲಿ ವಾದಿಸಿದ ನ್ಯಾಯಾವಾದಿ ಮೋಹೀತ್ ಅವರು ಮಾತನಾಡಿ ತನಿಖಾ ಸಂಸ್ಥೆಗಳು ಈ ಪ್ರಕರಣದ ತನಿಖೆ ವೇಳೆ ಮಾಡಿದ ಘನ ಘೋರ ತಪ್ಪುಗಳನ್ನು ವಿವರಿಸಿದರು.
ಈ ಪ್ರಕರಣವನ್ನು ಮೊದಲಿಗೆ ಬೆಳ್ತಂಗಡಿ ಪೊಲೀಸರು , ಬಳಿಕ ಸಿಒಡಿ ಪೊಲೀಸರು ಹಾಗೂ ಅಂತಿಮವಾಗಿ ಸಿಬಿಐ ತನಿಖೆ ನಡೆಸಿತ್ತು . ಸಿಒಡಿ ಹಾಗೂ ಸಿಬಿಐ ತನಿಖೆ ಪೂರ್ಣಗೊಳಿಸಿ ಸಂತೋಷ್ ರಾವ್ ಅನ್ನು ಆರೋಪಿ ಎಂದು ಉಲ್ಲೇಖಿಸಿ ನ್ಯಾಯಾಲಯಕ್ಕೆ ಚಾರ್‌ಜ್ ಶೀಟ್ ಕೂಡ ಸಲ್ಲಿಸಿತ್ತು . ಈ ತನಿಖೆಯ ವೇಳೆ ಮೂರು ತನಿಖಾ ಸಂಸ್ಥೆಗಳು ಹಾಗೂ ಮರಣೋತ್ತಾರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ಹಲವು ಗುರುತರ ತಪ್ಪುಗಳನ್ನು ಮಾಡಿದ ಕಾರಣ ಈ ಪ್ರಕೃನದಲ್ಲಿ ಸೌಜನ್ಯ ನ್ಯಾಯದಿಂದ ವಂಚಿತಳಾಗಬೇಕಾಯಿತು ಎಂದು ಅವರು ತಿಳಿಸಿದ್ದರು.
ಮೋಹಿತ್ ಕುಮಾರ್ ಪಟ್ಟಿ ಮಾಡಿದ ಅಂಶಗಳು ಯಾವುದು ?
ಸೌಜನ್ಯ ಪ್ರಕರಣ 2012ರಲ್ಲಿ ನಡೆದಿದ್ದು , ಅಕ್ಟೋಬರ್ 9 ರಂದು ಆಕೆ ಕಾಣೆಯಾಗುತ್ತಾಳೆ ಮರುದಿನ ಆಕೆಯ ಮೃತದೇಹ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಮಣ್ಣಸಂಕ ಎಂಬಲ್ಲಿ ದೊರಯುತ್ತದೆ. ಪ್ರಕರಣದ ತನಿಖೆ ವಿಚಾರಣೆ ನಡೆದು ಜೂ 16 ರಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದ್ದು, ಅದರ ಜಡ್ಜ್ ಮೆಂಟ್ ಪ್ರತಿಯಲ್ಲಿ ಆಕ್ಟೋಬರ್ 10 ಮತ್ತು 11 ರಂದು ಪೊಲೀಸ್ ಇಲಾಖೆ ಹೇಗೆ ಸಾಕ್ಷ್ಯಗಳನ್ನು ಹಂತ ಹಂತವಾಗಿ ನಾಶ ಮಾಡಿತ್ತು ಎನ್ನುವುದನ್ನು ಸ್ಪಷ್ಟವಾಗಿ ಬರೆಯಲಾಗಿದೆ. ನಾನು ಇಲ್ಲಿ ಏನನ್ನು ಹೇಳುತ್ತೇನೆಯೋ ಅದು ಜಡ್ಜ್ ಮೆಂಟ್ ಪ್ರತಿ ಮತ್ತು ಚಾರ್ಜ್ ಶೀಟ್ ನಲ್ಲಿರುವುದು ಮಾತ್ರ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ
ಪ್ರಕರಣದ ತನಿಖೆಯ ಮೊದಲ ದಿನ (ಅ 10 ರಂದು ) ಮಾಡಲಾದ ತನಿಖಾ ವೈಫಲ್ಯದಿಂದಾಗಿ ಈ ಪ್ರಕರಣದಲ್ಲಿ ಯಾವುದೇ ಸಾಕ್ಷಗಳಿಲ್ಲ ಎನ್ನುವುದನ್ನು ನ್ಯಾಯಾದೀಶರು ನಮೋದಿಸಿದ್ದಾರೆ. ಅ. 11 ರಂದು ಬಂಧಿತನಾಗುವ ಸಂತೋಷ್ ರಾವ್ ನನ್ನು ರಕ್ಷಿಸಲು ಅ.10 ರಂದು ಸಾಕ್ಷ್ಯಗಳನ್ನು ನಾಶ ಮಾಡುತ್ತಾರೆ . ಹೀಗೆ ಮಾಡಬೇಕಾದರೇ ಆರೋಪಿ ಪ್ರಭಾವಿ ಆಗಿದ್ದರೇ ಮಾತ್ರ ಸಾಧ್ಯ . ಹಾಗಾದರೇ ಸಂತೋಷ್ ರಾವ್ ಪೊಲೀಸರ ತನಿಖೆಯ ಮೇಲೆ ಪ್ರಭಾವ ಬೀರುವಷ್ಟು ಪ್ರಭಾವಿಯಾಗಿದ್ದನೇ? ಎನ್ನುವುದು ನನ್ನನ್ನೂ ಸೇರಿದಂತೆ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ . ಅಥಾವ ಸಂತೋಷ್ ಪ್ರಭಾವ ಬೀರಿಲ್ಲವಾದರೇ ಬೇರೆ ಯಾವ ಕಾರಣಕ್ಕೆ ಸಾಕ್ಷ್ಯಗಳನ್ನು ನಾಶ ಮಾಡಲಾಯಿತು ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ.
ನಾಶವಾದ ಸಾಕ್ಷ್ಯಗಳ ವಿವರ :
ಪೊಲೀಸ್ ಇಲಾಖೆ, ಸಿಒಡಿ ಮತ್ತು ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ಈ ಪ್ರಕರಣದ ತನಿಖೆ ನಡೆಸಿದ್ದು, ಸಂತೋಷ್ ರಾವ್ ಅವರನ್ನು ಆರೋಪಿ ಎಂದು ಗುರುತಿಸಿ ಚಾರ್ಜ್ ಶೀಟ್ ಹಾಕಿವೆ.
ಸಂತೋಷ್ ರಾವ್ ಟೆಂಟ್
ಚಾರ್ಜ್ ಶೀಟ್ ನಲ್ಲಿ 9 ಮತ್ತು 10 ನೇ ತಾರೀಕು ಕೃತ್ಯ ನಡೆದ ಸ್ಥಳದಲ್ಲಿ ಸಂತೋಷ್ ರಾವ್ ಇದ್ದ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ . ಮೃತದೇಹ ಸಿಕ್ಕ 100 ಮೀ ದೂರದಲ್ಲಿ ಸಂತೋಷ್ ರಾವ್ ಟೆಂಟ್ ಹಾಕಿ ಕೂತಿದ್ದ ಎನ್ನುವುದಾದರೇ 9 ಮತ್ತು 10 ರಂದು ದೊಡ್ಡ ಸಂಖ್ಯೆಯಲ್ಲಿ ಆ ಭಾಗದಲ್ಲಿ ಜನರು ಸೌಜನ್ಯಳಿಗಾಗಿ ಹುಡುಕಾಡಿದ್ದಾರೆ. ಆಗ ಆ ಟೆಂಟ್ ಪತ್ತೆಯಾಗಿರಲಿಲ್ಲ. 10 ನೇ ತಾರೀಕು ಮೃತದೇಹ ಸಿಕ್ಕಾಗ 5 ರಿಂದ 6 ಸಾವಿರ ಮಂದಿ ಅಲ್ಲಿ ಜಮಾಯಿಸಿದ್ದು ಆಗ ಸಂತೋಷ್ ರಾವ್ ಯಾರಿಗೂ ಕಾಣಿಸಿಲ್ಲ ಟೆಂಟ್ ಸಹ ಕಾಣಿಸಿಲ್ಲ ಇದು ಹೇಗೆ ಸಾಧ್ಯ?
ಸಿಸಿಟಿವಿ ಫೊಟೇಜ್
ಸೌಜನ್ಯ ಬಸ್ಸಿಳಿದು ನಡೆದುಕೊಂಡು ಹೋಗುವ ದಾರಿಯಲ್ಲಿ ಪ್ರಕೃತಿ ಚಿಕಿತ್ಸಾಲಾಯವಿದ್ದು, ಅದರಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು ಎಂಬ ಮಾಹಿತಿಯನ್ನು ಸ್ವತ: ಪೊಲೀಸ್ ಅಧಿಕಾರಿಯವರೆ ತಿಳಿಸಿದ್ದಾರೆ. ಹಾಗಿದ್ದೂ ಆ ಸಿಸಿಟಿವಿ ಪೋಟೆಜ್ ಗಳನ್ನು ಸಂಗ್ರಹಿಸಿಲ್ಲ, ಮತ್ತೂ ಸಾಕ್ಷ್ಯವಾಗಿ ಅದನ್ನು ನ್ಯಾಯಾಲಯಕ್ಕೆ ನೀಡದಿರಲು ಕಾರಣವೇನು ? ಇದು ತನಿಖೆಯ ವೈಫಲ್ಯ ಅಲ್ಲವೇ ?
ಕೊಡೆ ಚಪ್ಪಲ್ಲಿ ಎಲ್ಲಿ ?
ಸೌಜನ್ಯ ಆ ದಿವಸ ಕೊಡೆ ಹಿಡಿದುಕೊಂಡು ಮಳೆಯಲ್ಲಿ ನಡೆದುಕೊಂಡು ಹೋಗಿದ್ದು , ಆ ಕೊಡೆ ಪತ್ತೆಯಾಗಿಲ್ಲ. ಕಾಲಲ್ಲಿ ಧರಿಸಿದ ಚಪ್ಪಲಿಗಳ ಪೈಕಿ ಒಂದು ಮಾತ್ರ ಪತ್ತೆಯಾಗಿದ್ದು ಇನ್ನೊಂದಿಲ್ಲ . ಕೃತ್ಯ ಅಲ್ಲಿಯೇ ನಡೆದಿದ್ದರೇ ಕೊಡೆ ಹಾಗೂ ಇನ್ನೊಂದು ಚಪ್ಪಲಿಯು ಅಲ್ಲೆ ಪತ್ತೆಯಾಗಬೇಕಿತ್ತು ಅಲ್ಲವೇ ?
ಹೆಗಲ ಮೇಲೆ ಹೊತ್ತುಕೊಂಡು ತೋಡು ದಾಟಿದ್ದನೇ ?
ಸೌಜನ್ಯ ನಾಪತ್ತೆಯಾದ 9 ರಂದು ವಿಪರೀತ ಮಳೆಯಾಗುತಿತ್ತು ಅನ್ನುವುದನ್ನು ಸ್ಥಳೀಯರು ಹಲವರು ಹೇಳಿದ್ದಾರೆ ಹಾಗೂ ಪೊಲೀಸ್ ಅಧಿಕಾರಿಗಳು ಕೂಡ ಅದನ್ನು ಒಪ್ಪಿಕೊಂಡಿದ್ದಾರೆ. , ಒಬ್ಬ ವ್ಯಕ್ತಿ , ಒಂದು ಹುಡುಗಿಯನ್ನು ಹೆಗಲ ಮೇಲೆ ಹಾಕಿಕೊಂಡು 4 ರಿಂದ 5 ಆಡಿ ಆಳದ ತೋಡಿನಲ್ಲಿ ಈ ಕಡೆಯಿಂದ ಆ ಕಡೆ ಹೊತ್ತುಕೊಂಡು ದಾಟಲು ಸಾಧ್ಯವೇ ? ಒಂದು ವೇಳೆ ಹೊತ್ತುಕೊಂಡು ಹೋದರು , ಆಗ ಯುವತಿ ಪರಿಚಿದ ಗಾಯಗಳು ಆತನ ಮೈ ಮೇಲೆ ಆಗುವುದಿಲ್ಲವೇ ?
ಒಬ್ಬರು ಇನ್ನೊಬ್ಬರನ್ನು ತೋರಿಸುತ್ತಾರೆ
ಈ ರೀತಿಯ ಪ್ರಶ್ನೆಗಳನ್ನು ಪೊಲೀಸರ ಬಳಿ ಕೇಳಿದಾಗ ಅವರ ಬಳಿ ಉತ್ತರವಿಲ್ಲ. ತನಿಖಾಧಿಕಾರಿಯಾಗಿದ್ದ ಯೋಗೀಶ್ ಅವರಲ್ಲಿ ಕೇಳಿದ್ದಾಗ ಅವರು ಭಾಸ್ಕರ್ ರೈಯನ್ನು ತೋರಿಸಿತ್ತಾರೆ, ಅವರಲ್ಲಿ ಕೇಳಿದರೆ ರುದ್ರಮುನಿಯನ್ನು ತೋರಿಸುತ್ತಾರೆ. ಹೀಗೆ ಒಬ್ಬರು ಇನ್ನೊಬ್ಬರನ್ನು ತೋರಿಸುತ್ತ , ತೋರಿಸುತ್ತ ಕೇಸ್ ನ್ನು ಮುಗಿಸಿ ಬಿಟ್ಟಿದ್ದಾರೆ.
ಬೆಳಕಿನ ವ್ಯವಸ್ಥೆ ಇಲ್ಲದೇ ಪೋಸ್ಟ್ ಮಾರ್ಟಮ್
ಅ.10 ರ ಸಂಜೆ 6 ಗಂಟೆಗೆ ದೇಹವನ್ನು ಮರೋಣೋತ್ತಾರ ಪರೀಕ್ಷೆಗೆ ಆಸ್ಫತ್ರೆಗೆ ತರಲಾಗುತ್ತೆ. 7 ಗಂಟೆಗೆ ಪೋಸ್ಟ್ ಮಾರ್ಟಮ್ ನಡೆಸಲಾಗುತ್ತದೆ. ಪೋಸ್ಟ್ ಮಾರ್ಟಮ್ ನಡೆಸುವಾಗ ಸರಿಯಾದ ಬೆಳಕಿನ ವ್ಯವಸ್ಥೆ ಇರಲಿಲ್ಲ ಎಂದು ಅದನ್ನು ಮಾಡಿದ ತನಿಖಾಧಿಕಾರಿ ಆದಂ ರವರು ಹೇಳುತ್ತಾರೆ. ಯಾವ ಕಾರಣಕ್ಕೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದಿದ್ದರೂ ಪೋಸ್ಟ್ ಮಾರ್ಟಮ್ ಮಾಡಲಾಯಿತು ?
ಒಬ್ಬನಲ್ಲ
ಈ ಅಪರಾಧ ಒಬ್ಬ ಮಾಡಿರುವುದಲ್ಲ , ಒಬ್ಬರಿಗಿಂತ ಹೆಚ್ಚು ಜನರು ಸೇರಿ ಕೃತ್ಯ ಎಸಗಿರುವುದಾಗಿ ಗಿ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯಾಧಿಕಾರಿ ಆದಂ ಅವರು ಹೇಳಿದ್ದಾರೆ. ಹಾಗಾದರೇ ಸಂತೋಷ್ ಜತೆಗಿದ್ದ ಉಳಿದ ವ್ಯಕ್ತಿಗಳು ಯಾರು ? ಅವರನ್ಯಾಕೆ ಪೊಲೀಸರು ಪತ್ತೆ ಹಚ್ಚಿಲ್ಲ ಎಂದು ಪ್ರಶ್ನಿಸಿದರು.
ಯಾವುದೇ ಸಾಕ್ಷ್ಯಾದಾರಗಳಿಲ್ಲ
ಸಾಕ್ಷ್ಯಧಾರಗಳ ಕೊರತೆಯಿಂದ (Lack of Evidence) ಸಂತೋಷ್ ರಾವ್ ರವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿದಲ್ಲ, ಈ ಪ್ರಕರಣದಲ್ಲಿ ಸಂತೋಷ್ ರಾವ್ ಕನೆಕ್ಟ್ ಮಾಡಲು ಯಾವುದೇ ಸಾಕ್ಷ್ಯಾದಾರಗಳಿಲ್ಲ (Absolutly No evidence) ಎಂದು ನ್ಯಾಯಾದೀಶರು ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಸಂತೋಷ್ ರಾವ್ ಮತ್ತು ಮಂಪರು ಪರೀಕ್ಷೆ ವಿವಾದ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ್ ರಾವ್ ಮಂಪರು ಪರೀಕ್ಷೆಗೆ ಒಳಪಡಲು ನಿರಾಕರಿಸಿರುವುದಾಗಿ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಒಂದನೇಯದಾಗಿ ಮಂಪರು ಪರೀಕ್ಷೆಗೆ ಒಪ್ಪುವಂತದ್ದು ಬಿಡುವಂತದ್ದು ಸಂವಿಧಾನ ವ್ಯಕ್ತಿಯೊಬ್ಬನಿಗೆ ಕೊಡಮಾಡಿರುವ ಹಕ್ಕು.
ಎರಡನೇಯದು ತನಿಖಾ ಸಂಸ್ಥೆಗಳು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಸಂತೋಷ್ ರಾವ್ ಮಂಪರು ಪರೀಕ್ಷೆಗೆ ಒಪ್ಪದಿರುವುದರಿಂದ ಅಗತ್ಯ ಸಾಕ್ಷ್ಯ ಸಂಗ್ರಹಿಸಲು ಸಾಧ್ಯವಾಗಿಲ್ಲ ಅಥಾವ ಹಿನ್ನಡೆಯಾಗಿಲ್ಲ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ . ಇದರರ್ಥ ಸಂತೋಷ್ ರಾವ್ ಅನ್ನು ಮಂಪರು ಪರೀಕ್ಷೆಗೆ ಒಳಪಡಿಸದಿರುವುದರಿಂದ ಪೊಲೀಸರ ತನಿಖೆಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.
” ಸಂತೋಷ್ ರಾವ್ ಗೆ ಮಂಪರು ಪರೀಕ್ಷೆಗೆ ಒಳಪಡುವಂತೆ ನಾವು ನೊಟೀಸ್ ಕೊಟ್ಟಿದ್ದೇವೆ. ಅದಕ್ಕೆ ಆತ ಉತ್ತರಿಸಿರುವ ಆತ ನಾನು ಮಂಪರು ಪರೀಕ್ಷೆಗೆ ತಯಾರಿಲ್ಲ ಎಂದಿರುವುದಾಗಿ ಮಾತ್ರ ಕೋರ್ಟ್ ಗೆ ಸಲ್ಲಿಸಿರುವ ಚಾರ್ಚ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದ್ದು, ಈ ಕುರಿತ ಬೇರಾವುದೆ ಮಾಹಿತಿ ಅದರಲ್ಲಿ ಇಲ್ಲ. ಆದರೇ ಸಂತೋಷ್ ರಾವ್ ನೀಡಿದ್ದಾನೆಂದು ಹೇಳಲಾಗುತ್ತಿರುವ ರಿಪ್ಲೈ ನೋಟಿಸ್ ಎಲ್ಲಿದೆ ? ಅದನ್ನು ಯಾಕೆ ಚಾರ್ಚ್ ಶೀಟ್ ನೊಂದಿಗೆ ಮಾರ್ಕ್ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ? ಮಾರ್ಕ್ ಮಾಡಿ ಕೋರ್ಟ್ ಗೆ ಸಲ್ಲಿಸುವುದು ತನಿಖಾಧಿಕಾರಿಯ ಕರ್ತವ್ಯವಲ್ಲವೇ ?
ಮಂಪರು ಪರೀಕ್ಷೆಗೆ ನಿಯಮಗಳೇನು ?
ತನಿಖಾ ಸಂಸ್ಥೆ ವ್ಯಕ್ತಿಯ ಮಂಪರು ಪರೀಕ್ಷೆ ನಡೆಸಲು ಉದ್ದೇಶಿಸಿದ್ದರೇ, ಈ ಕುರಿತು ಅರ್ಜಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಬೇಕು. ನೇರವಾಗಿ ವ್ಯಕ್ತಿಯನ್ನು ಸಂಪರ್ಕಿಸಲು ಸಾಧ್ಯವಿಲ್ಲ. ತನಿಖಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೇ, ನ್ಯಾಯಾಲಯವು ಸಂಬಂಧಿತ ವ್ಯಕ್ತಿಗೆ ನೊಟೀಸ್ ಜಾರಿ ಮಾಡಿ ಆತನ ಒಪ್ಪಿಗೆ ಇದೆಯೇ ಇಲ್ಲವೇ ಎನ್ನುವುದನ್ನು ನ್ಯಾಯಪೀಠದ ಮುಂಭಾಗ ನಿರ್ದರಿಸಲಾಗುತ್ತದೆ. ಅಂತಹ ಯಾವುದೇ ಪ್ರಯತ್ನ ಪ್ರಾಷಿಕ್ಯೂಷನ್ ಕಡೆಯಿಂದ ಈ ಪ್ರಕರಣದಲ್ಲಿ ಆಗಿಲ್ಲ ಯಾಕೇ ? ತನಿಖಾಧಿಕಾರಿ ನೇರವಾಗಿ ಸಂಬಂಧಿತ ವ್ಯಕ್ತಿಗೆ ನೋಟಿಸ್ ಕೊಡುವ ಪದ್ದತಿಯಿಲ್ಲ. ಹಾಗೊಂದು ವೇಳೆ ಕೊಟ್ಟಿದ್ದರೂ ಆ ರಿಪ್ಲೈ ಅರ್ಜಿಯನ್ನು ಯಾವ ಕಾರಣಕ್ಕಾಗಿ ಮಾರ್ಕ್ ಮಾಡಿಲ್ಲ ? ಎಂದು ಪ್ರಶ್ನಿಸಿದರು.
ಅಶ್ರತ್ ಖಾಲೀದ್ ಹೆಣ್ಣೋ ಗಂಡೋ – ತನಿಖಾಧಿಕಾರಿಗೆ ಮಾಹಿತಿಯಿಲ್ಲ
1 ಗಂಟೆಯಿಂದ 2 ಗಂಟೆ ಹೊತ್ತಿಗೆ 3- 4 ಜನ ಅಲ್ಲಿದ್ದರು ಎಂಬ ವರ್ಷಾಳ ಹೇಳಿಕೆಯನ್ನು ಸಿಬಿಐನವರು ಯಾಕೇ ಪಡೆದಿಲ್ಲ… ಅದು ಅವರಿಗೆ ಮಹತ್ವದ ಸಾಕ್ಷಿ ಅಂತಾ ಅನಿಸಿಲ್ವಾ ?
ಅಶ್ರತ್ ಖಾಲೀದ್ ಎನ್ನುವ ಹುಡುಗಿ ಆ ದುರಾದೃಷ್ಟಕರ ದಿನ ಸೌಜನ್ಯ ಜತೆ ಬಸ್ಸಿನಿಂದ ಇಳಿದಿದ್ದಾಳೆ. ಆ ದಿನ, ಬಸ್ಸಿನಿಂದ ಇಳಿದ ವ್ಯಕ್ತಿ ಹೆಣ್ಣೋ ಗಂಡೋ ಎನ್ನುವುದು ನಿಮಗೆ ಗೊತ್ತಿಲ್ಲ ಎಂದಾದರೇ ನೀವು ಯಾವ ರೀತಿಯ ತನಿಖಾಧಿಕಾರಿ ? ನಿಮ್ಮದ್ದು ಯಾವ ಮಟ್ಟದ ತನಿಖೆ ? ಯೋಗೀಶ್ ಕುಮಾರ್ ಎಂಬ ತನಿಖಾಧಿಕಾರಿಗೆ ಅಶ್ರತ್ ಖಾಲೀದ್ ಎನ್ನುವ ಹುಡುಗಿ ಹೆಣ್ಣೋ ಗಂಡೋ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಆಕೆ ಸಾಂದರ್ಭಿಕ ಸಾಕ್ಷ್ಯ ಅಲ್ಲ ಅನ್ನುವುದನ್ನು ಯಾವ ಕಾರಣಕ್ಕೆ ಪೊಲೀಸರು ನಿರ್ಧರಿಸಿದರು ?
ಅಶ್ರತ್ ಖಾಲೀದ್ ಮತ್ತು ಸೌಜನ್ಯ ಜತೆಯಾಗಿ ಬಸ್ಸಿನಿಂದ ಇಳಿದಿದ್ದು, ಅದಾದ 5 ನಿಮಿಷದ ಬಳಿಕ ಸೌಜನ್ಯ ಕಾಣೆಯಾಗಿದ್ದಾಳೆ. ಅಶ್ರತ್ ಖಾಲೀದ್ ಮನೆ ಎಲ್ಲಿದೆಯೆಂದು ಆದರೂ ನೀವು ಹುಡುಕಾಡ ನಡೆಸಿದ್ದೀರಾ ? ಅಶ್ರತ್ ಖಾಲೀದ್ ಆಕೆಯ ಮುಂದಿನ ವರ್ಷದ ಶಿಕ್ಷಣವನ್ನು ಕೂಡ ಅದೇ ಕಾಲೇಜಿನಲ್ಲಿ ಮುಂದುವರಿಸಿದ್ದಾಳೆ. ಆಕೆ ಸಿಕ್ಕಿಲ್ಲ , ಎಲ್ಲಿಯೂ ಇಲ್ಲ ಎಂಬ ಬೇಜಾವಬ್ದಾರಿಯುತ ಹೇಳಿಕೆಯನ್ನು ತನಿಖಾಧಿಕಾರಿ ನ್ಯಾಯಾಲಯದ ಮುಂದೆ ನೀಡಿದ್ದು ಇದನ್ನು ನಂಬಲು ಯಾರು ತಯಾರಿಲ್ಲ ಎಂದರು.
ಸ್ಟೇ ತಂದವರು ಯಾರು ? ತಂದದ್ದು ಯಾಕೇ ?
ಸೌಜನ್ಯ ಮನೆಯವರು ನಾಲ್ಕು ಜನರ ಕುರಿತು ಅನುಮಾನ ವ್ಯಕ್ತಪಡಿಸಿ ದೂರು ನೀಡಿ ವಿಚಾರಣೆ ನಡೆಸುವಂತೆ ತಿಳಿಸಿದ್ದು, ಅದು ಹೈ ಕೋರ್ಟು ಮೆಟ್ಟೀಲೇರಿತ್ತು. ಬಳಿಕ ನಾನಾ ಕಾರಣಗಳಿಂದು ಅದು ಬಿದ್ದು ಹೋಯಿತು. ಆ ಬಳಿಕ ಮತ್ತೆ ಆ ಕುರಿತು ತನಿಖೆ ಮುಂದುವರಿದಿದ್ದು (Further Investigation) ಅದಕ್ಕೆ ಸ್ಟೇ ತಂದವರು ಯಾರು ? ಆ ತನಿಖೆ ಯಾರ ಮೇಲೂ ಬೇಕಾದರೂ ಆಗಬಹುದಿತ್ತು . ಅದರಲ್ಲಿ ನಿರ್ದಿಷ್ಟವಾಗಿ ಆರೋಪಿಗಳ ಹೆಸರನ್ನು ಉಲ್ಲೇಖಿಸಿರಲಿಲ್ಲ … ಹಾಗಿದ್ದೂ ಯಾವ ಕಾರಣಕ್ಕಾಗಿ ಆ ತನಿಖೆಗೆ ತಡೆ ತಂದ್ರಿ ? ಮತ್ತು ಆ ತಡೆ ತಂದವರು ಯಾರು ? ಸಂತೋಷ್ ರಾವ್ ಹೊರತು ಪಡಿಸಿ ಬೇರೆ ಯಾರದ್ರೂ ಈ ಪ್ರಕರಣದಲ್ಲಿ ಆರೋಪಿಗಳು ಇದ್ದಾರೆಯೇ ಎಂಬುದನ್ನು ಕಂಡುಕೊಳ್ಳಲಷ್ಟೆ Further Investigation ನಡೆಸಲಾಗುತಿತ್ತು ಹೊರತು ಇಂತಿಂಥವರು ಎಂದು ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿರಲಿಲ್ಲ . ಹಾಗಿದ್ದೂ ಅದಕ್ಕೆ ಸ್ಟೇ ತರುವ ಜರೂರತ್ತು ಏನಿತ್ತು ? ಇದನ್ನು ಸ್ಟೇ ತಂದವರು ಜನತೆಗೆ ವಿವರಿಸಬೇಕು.
ಕೈಯಲ್ಲಿದ್ದ ಬ್ಯಾಗ್ ಗುಡ್ಡದಲ್ಲಿ ಹೇಗೆ ಬಂತು ?
ಆರೋಪಿಯನ್ನು ಹಿಡಿಯುವ ವೇಳೆ ಆತನ ಕೈಯಲ್ಲಿ ಬ್ಯಾಗಿತ್ತು. ಅದನ್ನು ಪೊಲೀಸರು ಸೀಝ್ ಮಾಡುವುದಿಲ್ಲ. ಬ್ಯಾಗಿನಲ್ಲಿ ದುಡ್ಡು , ಜಪ ಮಾಲೆ, ಲುಂಗಿ ಇತ್ತು ಎಂದು ಹಿಡಿದವರು ಸಾಕ್ಷ್ಯ ನುಡಿದಿದ್ದಾರೆ. ನನ್ನಲ್ಲಿ ಬ್ಯಾಗ್ ಇತ್ತು ನಾನು ಸುಬ್ರಹ್ಮಣ್ಯಕ್ಕೆ ಹೋಗಿದ್ದೆ ಅಲ್ಲಿಂದ ಧರ್ಮಸ್ಥಳಕ್ಕೆ ಬಂದಿದ್ದೇನೆ ಅಲ್ಲಿಂದ ಮನೆಗೆ ಹೋಗುವ ಸಂದರ್ಭ ನನ್ನನ್ನೂ ಹಿಡಿದಿರುವುದಾಗಿ ಸಂತೋಷ್ ರಾವ್ ಹೇಳಿದ್ದಾನೆ. ಹಾಗದರೇ ಆ ಬ್ಯಾಗ್ ಕಾಡಿನೊಳಗೆ ಹೇಗೆ ಹೋಯಿತು ? ಜನ ಸಮೂಹ ದಾಳಿ ನಡೆಸಿ ಹಿಡಿದ ವ್ಯಕ್ತಿಯ ಕೈಯಲ್ಲಿದ್ದ ಬ್ಯಾಗ್ ಕಾಡಿನೊಳಗೆ ಹೇಗೆ ಹೋಯಿತು ? ಅದನ್ನು ಯಾರು ತೆಗೆದುಕೊಂಡು ಹೋದರು ?
ಬಟ್ಟೆಯಲ್ಲಿದ್ದ 6 ನೇ ಕೂದಲು ಯಾರದು ?
ಸಂತೋಷ್ ರಾವ್ ಬಟ್ಟೆಯಲ್ಲಿ 6 ಕೂದಲು ಸಿಕ್ಕಿದ್ದು ಅದರಲ್ಲಿ 5 ಕೂದಲು ಆತನದೇ… ಇನ್ನೊಂದು ಕೊದಲು ಗಂಡಸಿದ್ದು ..! ಆ ಕೂದಲು ಯಾರದ್ದು ಎಂದು ಪೊಲೀಸರು ಯಾಕೇ ತನಿಖೆ ಮಾಡಿಲ್ಲ ?
ಸ್ಯಾಂಪಲ್ ಸಂಗ್ರಹದಲ್ಲಿ ಮಾಡಿದ ಎಡವಟ್ಟು ..!
ಮರಣೋತ್ತಾರ ಪರೀಕ್ಷೆ ನಡೆಸಿದ ವೈದ್ಯರು 10 ನೇ ತಾರೀಕಿಗೆ ಮೃತದೇಹದಿಂದ ಯೋನಿ ಸ್ವ್ಯಾಬ್ (vaginal swab) ಸಂಗ್ರಹಿಸಿದ್ದು ಅದನ್ನು 20 ನೇ ತಾರೀಕಿಗೆ FSL ಗೆ ಕಳುಹಿಸುತ್ತಾರೆ. ಕಳುಹಿಸಿದ ಸ್ಯಾಂಪಲನ್ನು ಲ್ಯಾಬ್ ಗೆ ಕಳುಹಿಸುವಾಗ ಅಗತ್ಯ ಕ್ರಮಗಳನ್ನು ಅನುಸರಿಸಿಲ್ಲ. ಸರಿಯಾಗಿ ಒಣಗಿಸದೇ ಕಳುಹಿಸಿದ ಕಾರಣ ಸ್ಯಾಂಪಲ್ ಗೆ ಫಂಗಸ್ ಹಿಡಿದಿದೆ. ಸಂಗ್ರಹಿಸಿದ 72 ಗಂಟೆಯೊಳಗಡೆ ಲ್ಯಾಬ್ ಗೆ ಕಳುಹಿಸಿದರೇ ಮಾತ್ರ ವರದಿ ನೀಡುತ್ತೇವೆ ಎಂದು ಸ್ಯಾಂಪಲ್ ಪರಿಶೀಲಿಸಿದ ವಿಧಿ ವಿಜ್ಞಾನ ಲ್ಯಾಬ್ ನವರು ತಿಳಿಸಿದ್ದಾರೆ. 10 ನೇ ತಾರೀಕಿಗೆ ಸಂತೋಷ್ ರಾವ್ ಪ್ರಕರಣದ ಆರೋಪಿಯೇ ಆಗಿರಲಿಲ್ಲ… ಹಾಗಿದ್ದೂ ಈ ವೈಫಲ್ಯ ಹೇಗಾಯಿತು ? ಮತ್ತು ತನಿಖೆಯ ಮೇಲೆ ಪ್ರಭಾವ ಬೀರಿದವರು ಯಾರು ? ಈ ಎಲ್ಲ ಅಂಶಗಳನ್ನು ತೀರ್ಪಿನಲ್ಲಿ ನ್ಯಾಯಾದೀಶರು ಅಚ್ಚುಕಟ್ಟಾಗಿ ಉಲ್ಲೇಖಿಸಿದ್ದಾರೆ.
ಅನುಮಾನಿತರನ್ನು ತನಿಖೆಗೆ ಒಳಪಡಿಸಿಲ್ಲ
ಜಡ್ಜ್ ಮೆಂಟ್ ಪ್ರತಿಯ 136ನೇ ಪ್ಯಾರಾದಲ್ಲಿ ಮತ್ತೊಂದು ಆಸಕ್ತಿದಾಯಕ ಅಂಶವನ್ನು ನ್ಯಾಯಾದೀಶರು ಉಲ್ಲೇಖಿಸಿದ್ದಾರೆ. ಸೌಜನ್ಯ ಮನೆಯವರು ಅನುಮಾನ ವ್ಯಕ್ತಪಡಿಸರುವ 3-4 ಜನರನ್ನು ತನಿಖೆಗೆ ಒಳಪಡಿಸುವಲ್ಲಿ ಯಾವುದೇ ಪ್ರಯತ್ನ ಪಟ್ಟಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ನಮೊದಿಸಿದ್ದಾರೆ.
ಜೈಲಿಗೆ ಹೋಗುವಲ್ಲಿಯವರೆಗೂ ನನಗೆ ಅಲ್ಲಿ ಇಂತಹದೊಂದು ಕೃತ್ಯ ನಡೆದಿದೆ ಎಂಬ ಮಾಹಿತಿಯೇ ಇರಲಿಲ್ಲ ಎಂದು ಸಂತೋಷ್ ರಾವ್ ನನ್ನಲ್ಲಿ ತಿಳಿಸಿದ್ದರು. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯೂ ಸೇರಿದಂತೆ ಎರೆಡೆರಡು ತನಿಖಾ ಸಂಸ್ಥೆಗಳು ಇಂತಹ ವ್ಯಕ್ತಿಯನ್ನು ಆರೋಪಿಯನ್ನು ಚಾರ್ಜ್ ಶೀಟ್ ನಲ್ಲಿ ಆರೋಪಿಯಾಗಿ ಉಲ್ಲೇಖಿಸಿವೆ. ಭಾರತದಲ್ಲಿ ತನಿಖಾ ಸಂಸ್ಥೆಗಳು ಇಷ್ಟೊಂದು ಬರಗೆಟ್ಟಿವೆಯೇ ?
Uncategorized
ಮಂಗಳುರು : ಸಹಪಾಠಿಯೊಂದಿಗೆ ಜಗಳ: ಬಿಸಿಎ ವಿದ್ಯಾರ್ಥಿಗೆ ಚೂರಿಯಿಂದ ಇರಿತ; ಇಬ್ಬರು ವಶಕ್ಕೆ

ಮಂಗಳೂರು, ಅ.4: ಸಣ್ಣ ವಿಚಾರಕ್ಕೆ ಸಹಪಾಠಿಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯೊಬ್ಬನ ಮೇಲೆ ಸಹಪಾಠಿ ಸೇರಿದಂತೆ ಆರು ಮಂದಿ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಮಹಮ್ಮದ್ ಉನೈಸ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರು ನಗರದ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಅ.3ರಂದು ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿರುವ ಉನೈಸ್ ಅವರು ಬೆಳಿಗ್ಗೆ 11.30ರ ಸುಮಾರಿಗೆ ಕಾಲೇಜಿನ ಸಮೀಪದ ಟರ್ಫ್‌ಗೆ ಕಬಡ್ಡಿ ಆಡಲು ತೆರಳಿದ್ದರು. ಈ ವೇಳೆ ಟರ್ಫ್ ಎದುರಿನ ರಸ್ತೆಯಲ್ಲಿ ಅವರ ಸ್ನೇಹಿತ ಹಾಗೂ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ರಾಯಿಝ್ ಮತ್ತು ಅದೇ ಕಾಲೇಜಿನ ಬಿಕಾಂ ವಿದ್ಯಾರ್ಥಿ, ಕಾಟಿಪಳ್ಳ ನಿವಾಸಿ ರಿಯಾನ್ ನಡುವೆ ಸಣ್ಣ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.
ಜಗಳ ಬಿಡಿಸಲು ಉನೈಸ್ ಸೇರಿದಂತೆ ಕೆಲ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿದಾಗ ರಿಯಾನ್ ಉನೈಸ್‌ಗೆ ಕೈಯಿಂದ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಉನೈಸ್ ಹಾಗೂ ಇತರ ವಿದ್ಯಾರ್ಥಿಗಳು ಕಾಲೇಜಿಗೆ ವಾಪಸಾಗಿದ್ದರು.
ಮಧ್ಯಾಹ್ನ 1.45ರ ಸುಮಾರಿಗೆ ಉನೈಸ್ ಕಾಲೇಜಿನ ಕ್ಯಾಂಟೀನ್ ಬಳಿ ನಿಂತಿದ್ದಾಗ ರಿಯಾನ್ ಹಾಗೂ ಐವರು ಸಹಚರರು ಎರಡು ದ್ವಿಚಕ್ರ ವಾಹನಗಳಲ್ಲಿ ಅಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ. ಆರೋಪಿಗಳು ಉನೈಸ್ ಅವರನ್ನು ಸುತ್ತುವರಿದು ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಈ ವೇಳೆ ಚೂರಿಯಿಂದ ಉನೈಸ್ ಅವರ ತಲೆ, ಬೆನ್ನು, ಎಡ ಕಿವಿ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದು ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಗಾಯಗೊಂಡ ಉನೈಸ್ ಅವರನ್ನು ತಕ್ಷಣ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
Uncategorized
ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಕೀಲ ಮೊಹಿತ್ ಕುಮಾರ್ ಗೆ ಮಾತೃ ವಿಯೋಗ

ಪುತ್ತೂರು: ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಹೈಕೋರ್ಟ್ ವಕೀಲ ಮೊಹಿತ್ ಕುಮಾರ್ ಅವರ ತಾಯಿ, ಕೊಳ್ತಿಗೆ ಗ್ರಾಮದ ಕುಂಡಡ್ಕ ನಿವಾಸಿ ಪಾರ್ವತಿ ಕುಂಡಡ್ಕ ಅವರು ಅಲ್ಪಕಾಲದ ಅಸ್ವಸ್ಥತೆಯಿಂದ ಅ.3ರಂದು ಸ್ವಗೃಹದಲ್ಲಿ ನಿಧನರಾದರು.
ಪಾರ್ವತಿ ಅವರು ಚಾರ್ವಕ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಹಾಗೂ ಪುತ್ತೂರಿನ ಪಶುವೈದ್ಯ ಧರ್ಮಪಾಲ ಕರಂದ್ಲಾಜೆ ಅವರ ಸಹೋದರಿ.
ಮೃತರು ಪುತ್ರರಾದ ತೀರ್ಥಪ್ರಸಾದ್ ಕೆ., ಚಿತ್ರಶೇಖರ್, ಮೊಹಿತ್ ಕುಮಾರ್ ಹಾಗೂ ಚಿರಣ್ ಕುಮಾರ್ ಅವರನ್ನು ಅಗಲಿದ್ದಾರೆ.
ವಕೀಲ ಮೊಹಿತ್ ಕುಮಾರ್ ಅವರು ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಪರ ಸಿಬಿಐ ವಿಶೇಷ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು. ಸೌಜನ್ಯ ಪ್ರಕರಣದ ನ್ಯಾಯಾಂಗ ಹೋರಾಟದಲ್ಲಿ ಅವರು ಪ್ರಮುಖವಾಗಿ ಗುರುತಿಸಿಕೊಂಡಿದ್ದರು.
Uncategorized
Dharmasthala-28ನೇ ವರ್ಷದ ಭಜನಾ ಕಮ್ಮಟದ ಉಪನ್ಯಾಸ ಕಾರ್ಯಕ್ರಮ: ಸಾಮರಸ್ಯದ ಸಂಕೇತವೇ ಈ ಭಜನೆ : ಪ್ರೊ. ಪವನ್ ಕಿರಣಕೆರೆ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.02, ಶುಕ್ರವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ ಆಸೆಮ್ಸ್ ಶಿಕ್ಷಣ ಸಂಸ್ಥೆ ಕಲ್ಮಾಡಿ, ಉಡುಪಿ ಇಲ್ಲಿನ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಮಾತನಾಡಿದರು.

ಧರ್ಮಸ್ಥಳ, ಅ.02 : ಯಾವುದೇ ಮತ ಪಂಥಗಳ ತಾರತಮ್ಯವಿಲ್ಲದೆ ಸಾಮರಸ್ಯದಿಂದ ದೇವರನ್ನು ಸ್ಮರಿಸುವ ಏಕೈಕ ಮಾರ್ಗವೇ ಭಜನೆಯಾಗಿದ್ದು, ಇಡೀ ಸಮಾಜಕ್ಕೆ ಸಾಮರಸ್ಯವನ್ನು ಸಾರುವ ಕಾರ್ಯವನ್ನು ಈ ಭಜನಾ ಕಮ್ಮಟ ಮಾಡುತ್ತಿದೆ ಎಂದು ಪ್ರಸಂಗಕರ್ತರು, ಅರ್ಥಧಾರಿಗಳು ಹಾಗೂ ಆಸೆಮ್ಸ್ ಶಿಕ್ಷಣ ಸಂಸ್ಥೆ ಕಲ್ಮಾಡಿ, ಉಡುಪಿ ಇಲ್ಲಿನ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.02, ಶುಕ್ರವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ ಮಾತನಾಡಿದರು.
ಮನುಷ್ಯನ ಮನಸ್ಸಿನಲ್ಲಿರುವ ಅಸೂಯೆ, ಮತ್ಸರಗಳೇ ದುಃಖದ ಮೂಲವಾಗಿದ್ದು, ಅವೆಲ್ಲವನ್ನೂ ಕಳೆಯಲು ಭಜನೆ ಹಾಗೂ ಆಧ್ಯಾತ್ಮದಿಂದ ಮಾತ್ರ ಸಾಧ್ಯ. ಸುಖದಲ್ಲಿ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಎಲ್ಲವನ್ನೂ ಸಮಚಿತ್ತವಾಗಿ ಸ್ವೀಕರಿಸುವ ಮೂಲಕ ಸಾಮರಸ್ಯದ ಬದುಕನ್ನು ಭಜನೆಯಿಂದ ಕಂಡುಕೊಳ್ಳಬಹುದಾಗಿದೆ. ಭಗವಂತನ ದೃಷ್ಟಿಯಲ್ಲಿ ಭಕ್ತಿಗೆ ಪ್ರಾಧಾನ್ಯತೆಯೇ ಹೊರತು ಯಾವುದೇ ಆಡಂಬರದ ಆಚರಣೆಗಳಿಗಲ್ಲ. ಭಗವಂತನನ್ನು ಒಲಿಸಿಕೊಳ್ಳಲು ಶ್ರದ್ಧೆಯೇ ಅತ್ಯಂತ ಉತ್ತಮ ಹಾದಿಯಾಗಿದೆ ಎಂದು ಎಲ್ಲಾ ಶಿಬಿರಾರ್ಥಿಗಳಿಗೆ ಭೋದಿಸಿದರು.
ರಾಜ್ಯಾದ್ಯಂತ ಎಲ್ಲಾ ಭಕ್ತರನ್ನು ಒಗ್ಗೂಡಿಸಿ ಎಲ್ಲರ ಮಾನಸಿಕ ಶುದ್ಧತೆಯನ್ನು ಕಾಪಾಡುವ ಮೂಲಕ ಭಜನಾ ಕಮ್ಮಟವು ಅತಿ ಮುಖ್ಯ ಪಾತ್ರ ವಹಿಸಿದ್ದು, ಈ ಕಮ್ಮಟವನ್ನು ಪರ್ವವಾಗಿಸುವಲ್ಲಿ ಕಾರಣಿಭೂತರಾದ ಹೆಗ್ಗಡೆ ದಂಪತಿಗಳ ಪರಿಶ್ರಮ ಬಲು ದೊಡ್ಡದು ಎಂದು ಶ್ಲಾಘಿಸಿದರು.
-
ಪುತ್ತೂರು20 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಬಿಗ್ ನ್ಯೂಸ್23 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಮಂಗಳೂರು23 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
ಬಿಗ್ ನ್ಯೂಸ್22 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ಶಿಕ್ಷಣ23 hours agoSpecial classes: ಮಳೆ ರಜೆ ಹೊಂದಾಣಿಕೆ: ಅ.3ರಿಂದ ಅ.7ರವರೆಗೆ ದಸರಾ ರಜೆಯಲ್ಲೂ ವಿಶೇಷ ತರಗತಿ
-
ಅಪರಾಧ21 hours agoMangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
-
ಶಿಕ್ಷಣ22 hours agoNarendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
-
ಶಿಕ್ಷಣ23 hours agoVivekananda-ವಿವೇಕಾನಂದ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ; ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಅಗತ್ಯ : ಪ್ರತಿಮಾ


















