Connect with us

Uncategorized

Soujanya Case : ಸುನೀಲ್‌ ಅವರೇ ಸುಚಿತ್ರ ಶೆಟ್ಟಿ ಕೊಲೆ ಪ್ರಕರಣ ಏನಾಯಿತು ? ಸೌಜನ್ಯ ಪ್ರಕರಣದ ಸಿಬಿಐ ತನಿಖಾಧಿಕಾರಿ ಮುರುಗನನ್ನು ಬದಲಾಯಿಸಿದ್ದು ಯಾರು? ನನಗೆ ರಕ್ಷಣೆ ಕೊಡುವುದಾಗಿ ಹೇಳಿದ ನಳಿನ್‌ ಮೊನ್ನೆ ಬ್ಯಾರಿಕೇಡ್‌ ನಲ್ಲಿ ನೇತಾಡುತ್ತಿದ್ದರು  : ವಸಂತ ಬಂಗೇರ

Published

on



Ad Widget

Ad Widget

Ad Widget

Ad Widget

Soujanya Case : ಮಂಗಳೂರು : ಭಾನುವಾರ ಮಿನಿ ವಿಧಾನಸೌಧಕ್ಕೆ ಬೀಗ ಹಾಕಿದ ಸಂಧರ್ಭದಲ್ಲಿ ಬಿಜೆಪಿಯವರು ಇಲ್ಲಿ  ಪ್ರತಿಭಟನೆ ಮಾಡಿದರು. ನಳಿನ್ ಕುಮಾರ್ ಕಟೀಲ್ ರವರೇ ನೀವು ಕಳೆದ 3 ಅವಧಿಗೆ ಮಂಗಳೂರಿನ ಸಂಸದರಾಗಿ ಇದ್ದೀರಿ.  ಸೌಜನ್ಯಳ ಸಾವಾಗಿ ಹನ್ನೊಂದು ವರ್ಷ ವಾಯಿತು. ಇಷ್ಟು ಸಮಯ ಎಲ್ಲಿ ಹೋಗಿದ್ರಿ? ಪಾರ್ಲಿಮೆಂಟ್ ನಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ವಾ? ಅಥಾವ ಕೇಳಲಿಲ್ವಾ? ಅಥಾವ ಮೋದಿ ನಿಮ್ಮ ಬಾಯಿ ಮುಚ್ಚಿಸಿದ್ರಾ ಎಂದು ವಸಂತ ಬಂಗೇರ ಸಾರ್ವಜನಿಕ ವೇದಿಕೆಯಲ್ಲಿ ಮೂದಲಿಸಿದ್ದಾರೆ.

Ad Widget

Ad Widget

Ad Widget

Ad Widget

ಸೌಜನ್ಯ ಅತ್ಯಾಚಾರ ಕೊಲೆ ಮತ್ತು ಧರ್ಮಸ್ಥಳ ಪರಿಸರದಲ್ಲಿ ನಡೆದ ಅನುಮಾನಸ್ಪದ ಸಾವಿನ  ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು  ಎಂದು ಆಗ್ರಹಿಸಿ  ಜನಪರ ಒಕ್ಕೂಟಗಳ ಸಂಘಟನೆ  ಚಲೋ ಬೆಳ್ತಂಗಡಿ ಮಹಾಧರಣಿ  ಪ್ರತಿಭಟನಾ ಸಮಾವೇಶವನ್ನು ಬೆಳ್ತಂಗಡಿ ಯಲ್ಲಿ ಆ 28 ರಂದು ಆಯೋಜಿಸಿದ್ದು ಅದರಲ್ಲಿ  ಮಾಜಿ ಶಾಸಕ ವಸಂತ ಬಂಗೇರ  ಮಾತನಾಡಿದ್ದರು.

Ad Widget

Ad Widget

Ad Widget alt="Ad Widget"/>

Ad Widget

ಎಂದು ಓದದ ಮಾಣಿ ಅಮಾವಸ್ಯೆಯಂದು ಓದಿದ ಎಂಬಂತೆ ಬಿಜೆಪಿಯವರು ಸೌಜನ್ಯ ಪ್ರಕರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ಮೊನಿ ವಿಧಾನ ಸೌಧಕ್ಕೆ ಬೀಗ ಹಾಕಲಾಗಿತ್ತು.  ತಾಲೂಕು ಕಛೇರಿ ಬಂದ್‌ ಇದ್ದ ದಿನ  ಹೆದರಿ ಪ್ರತಿಭಟನೆ ನಡೆಸಿದ್ದಾರೆ.ನೀವು ಆದಿತ್ಯವಾರ ಪ್ರತಿಭಟನೆ ಮಾಡಲು ಲಾಯಕ್ಕು  ಕರಾವಳಿ ಜಿಲ್ಲೆಯ ಬಿಜೆಪಿ ಶಾಸಕರನ್ನು ಅವರು ಜರೆದಿದ್ದಾರೆ

Ad Widget

Ad Widget <> Ad Widget

ಸೌಜನ್ಯ ಪ್ರಕರಣ ಹಳ್ಳ ಹಿಡಿಯಲು ಏನು ಕಾರಣ ಎಂದು ನಾವು ತಿಳಿದುಕೊಳ್ಳಬೇಕು. ಹನ್ನೊಂದು ವರ್ಷಗಳ ಹಿಂದೆ ಸೌಜನ್ಯ ಳ ಹತ್ಯೆಯಾಗಿದೆ ಹನ್ನೊಂದು ವರ್ಷಗಳಿಂದ ಪ್ರತಿಭಟನೆಗಳು ನಿರಂತರವಾಗಿ ನಡೆದಿದೆ. ಸೌಜನ್ಯ ಅತ್ಯಾಚಾರ ಸಂಧರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಪ್ರಾರಂಭದಲ್ಲಿ ಪೊಲೀಸ್ ತನಿಖೆ ಬಳಿಕ ಸಿಐಡಿ ತನಿಖೆಯಾಯಿತು.ಆದರೆ ಈ ತನಿಖೆಗಳು ಹಳ್ಳ ಹಿಡಿಯಿತು. ಆದರೆ ನಿನ್ನೆ ನಿನ್ನೆ ಬಿಜೆಪಿ ಯವರು ಇದೇ ಸ್ಥಳದಲ್ಲಿ ಪ್ರತಿಭಟನೆ ಮಾಡಿದ್ದರು ಎಂದರು.



Ad Widget

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ವೇಳೆ ಸಿಬಿಐಗೆ ವಹಿಸಲಾಯಿತು. ಆರು ತಿಂಗಳ ಕಾಲ ಸಿಬಿಐ   ತನಿಖಾಧಿಕಾರಿ ಮುರುಗನ್ ರ ನೇತ್ರತ್ವದಲ್ಲಿ ಸಿಬಿಐ ಅಧಿಕಾರಿಗಳು ಒಳ್ಳೆಯ ತನಿಖೆ ನಡೆಸಿದ್ದರು. ಆದರೇ ಯಾವಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂತೋ ಆವಾಗ  ತನಿಖಾಧಿಕಾರಿ ಮುರುಗನ್ ರ ಬದಲಾವಣೆ ಮಾಡಲಾಯಿತು. ಬಳಿಕ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ತನಿಖೆ ಹಳ್ಳ ಹಿಡಿಯಿತು. ಹನ್ನೊಂದು ವರ್ಷಗಳ ತನಿಖೆ ಬಳಿಕ ಸಿಬಿಐ ಸಂತೋಷ್ ರಾವ್ ನನ್ನು ನಿರಾಪರಾಧಿ ಎಂದು ತಿಳಿಸಿದೆ.

Ad Widget

Ad Widget

ನಿನ್ನೆಯ ಪ್ರತಿಭಟನೆಯಿಂದ ಸೌಜನ್ಯನಿಗೆ ಯಾವ ನ್ಯಾಯ ಸಿಗುತ್ತದೆ ಸಿಬಿಐ ತನಿಖೆಯನ್ನು ಚೆನ್ನಾಗಿ ಮಾಡಿ ಸೌಜನ್ಯನಿಗೆ ನ್ಯಾಯ ಕೊಡಿಸಬಹುದಿತ್ತು. ಸೌಜನ್ಯ ಪ್ರಕರಣ ಈಗ ಕೇಂದ್ರ ಸರ್ಕಾರದ ವಶದಲ್ಲಿದೆ .ರಾಜ್ಯ ಸರ್ಕಾರ ಈ ಪ್ರಕರಣವನ್ನು ನೇರ ತನಿಖೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಈ ಪ್ರಕರಣವನ್ನು ಬಿಟ್ಟು ಕೊಡಬೇಕು. ಆದರೆ ಕರಾವಳಿಯ ಬಿಜೆಪಿ ಶಾಸಕರು ಹಾಗೂ ಸಂಸದರಿಗೆ ಮೋದಿ ಸರಕಾರದ ನಂಬಿಕೆಯಿಲ್ಲ. ಅದಕ್ಕಾಗಿ ಸಿದ್ದರಾಮಯ್ಯ ಸರಕಾರವನ್ನು ಪ್ರಕರಣದ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದೆ. ಸಿದ್ದರಾಮಯ್ಯನವರ ಮೇಲೆ ನಂಬಿಕೆ ಇರುವ ನೀವು ಕಾಂಗ್ರೆಸ್‌ ಸೇರಿ ನಿಮಗೆ ನಾನುಭವ್ಯ ಸ್ವಾಗತ ಮಾಡುತ್ತೇವೆ. ಮತ್ತೆ ಒಟ್ಟಾಗಿ ಸೌಜನ್ಯಳಿಗೆ ನ್ಯಾಯ ದೊರಕಿಸಿ ಕೊಡಲು ಹೋರಾಡುವ ಎಂದು ವ್ಯಂಗ್ಯವಾಡಿದರು.

ಕಾರ್ಕಳದ ಸುನಿಲ್ ಕುಮಾರ್ ಶಾಸಕ ಮತ್ತು ಮಂತ್ರಿ ಆಗಿದ್ದವರು. ಯಾಕೆ ಸದನದಲ್ಲಿ ಯಾಕೆ ಅವರು ಸೌಜನ್ಯ ಪ್ರಕರಣ ವಿಷಯ ಎತ್ತಿಲ್ಲ ? ಏನು ಸುನಿಲ್ ಕುಮಾರ್ ಸೊಪ್ಪು ಕಡಿಯಲು ಹೋಗಿದ್ರಾ?”   ಹರೀಶ್ ಪೂಂಜಾ ಕೂಡಾ ಸದನದಲ್ಲಿ ಯಾವತ್ತೂ ಪ್ರಸ್ತಾಪಿಸಿಲ್ಲ.  40% ಕಮೀಷನ್‌ ಹೊಡೆಯುವುದರಲ್ಲಿ ನಿಷ್ಣಾತ ರಾಗಿರುವ ಪೂಂಜಾ ಸಿಎಂಗಿಂತಲೂ ಮಿಗಿಲಾದ ಗಣ್ಯರು ಎಂದರು

2013 ರಲ್ಲಿ ಬೆಳ್ತಂಗಡಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಸಿಬಿಐಗೆ ಕೊಡದೆ ನಾನು ಬೆಳ್ತಂಗಡಿಗೆ ಬರಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ ‘ ನೋಡಿ ಬಂಗೇರ, ಇದೆಲ್ಲ ಬೇಡ ‘ ಎಂದಿದ್ದರು. ಆ ನಂತರ ನನ್ನನ್ನು ಕರೆದು ಸಿದ್ದರಾಮಯ್ಯ ಒಂದೂವರೇ ಗಂಟೆ ಮಾತಾಡಿದ್ರು. ನಾನು ಸರಿಯಾಗಿ ವಿವರಿಸಿದೆ. ನಂತರ ಮತ್ತೆ ಸದನ ಶುರುವಾಯಿತು. ಅಲ್ಲಿ ಸಿದ್ದರಾಮಯ್ಯ ನೇರವಾಗಿ ಬಂದು ಸಿಬಿಐ ತನಿಖೆಗೆ ಆದೇಶ ಕೊಟ್ರು. ಆಗ ಕಾಂಗ್ರೆಸ್ ಸರ್ಕಾರ ಕೂಡಾ ಕೇಂದ್ರದಲ್ಲಿ ಇತ್ತು. 

ಬಿಜೆಪಿ ಶಾಸಕರು ನನಗೆ ರಕ್ಷಣೆ ಕೊಡುವ ಮಾತುಗಳನ್ನು ಆಡಿದ್ದಾರೆ. ಬಿಜೆಪಿ ಮುಖಂಡರಿಗೆ ಮೋದಿ ಬಳಿ ಹೋಗಲು ಧೈರ್ಯ ಇಲ್ವಾ?  ನಾನು ನಿಮ್ಮನ್ನು ಮೋದಿ ಬಳಿ ಕರೆದುಕೊಂಡು ಹೋಗುತ್ತೇನೆ ಹೆದರಿ ಓಡುವ‌ ನಿಮಗೆ ಮೋದಿ ಎದುರು ನಿಲ್ಲುವ ಶಕ್ತಿ ಇಲ್ಲ ಮೋದಿ ನೋಡಲು ನಳಿನ್ ಬ್ಯಾರಿಕೇಡ್ ನಲ್ಲಿ ನೇತಾಡುತ್ತಾರೆ ಎಂದು ಕಟಕಿಯಾಡಿದರು.

ಮಾಜಿ ಸಚಿವ ಸುನೀಲ್ ಕುಮಾರ್ ಹೆಬ್ರಿಯ ಸುಚಿತ್ರ ಶೆಟ್ಟಿ ಹತ್ಯೆ  ಪ್ರಕರಣವನ್ನು ಮುಂದಿಟ್ಟುಕೊಂಡು ನ್ಯಾಯ ದೊರಕಿಸಿ ಕೊಡುವುದಾಗಿ  ಹೇಳಿ  ಚುನಾವಣೆಯಲ್ಲಿ ಗೆದ್ದಿದ್ರು. ಸುನೀಲ್ ಕುಮಾರ್ ಹತ್ಯೆಯಾದ ಹೆಬ್ರಿಯ ಸುಚಿತ್ರ ಶೆಟ್ಟಿಗೆ ನ್ಯಾಯ ಕೊಟ್ಟಿದ್ದಾರಾ? ಎಂದರು.

ಒಡನಾಡಿ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶುರಾಮ , ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಸಾಹಿತಿ ಮತ್ತು ಕಾಮ್ರೇಡ್ ನೀಲಾ, ಛಲವಾದಿ ಸಂಘಟನೆ ನಾಯಕ ಮೀನಾಕ್ಷಿ, ಮುನೀರ್ ಕಾಟಿಪಳ್ಳ, ಸುರೇಂದ್ರ ರಾವ್, ಮಹಿಳಾ ಚಳವಳಿ ನಾಯಕಿ ಸಂಗಾತಿ ಗೌರಮ್ಮ, ರೈತ ಸಂಘ ಮುಖಂಡ ಭರತ್ ರಾಜ್, ಪತ್ರಕರ್ತ ವಿಠಲ್ ಮಲೆಕುಡಿಯ, ಸಿಪಿಐ ನಾಯಕರು, ಪ್ರಭಾ ಬೆಳವಂಗಳ, ವಿಚಾರವಾದಿ ನರೇಂದ್ರ ನಾಯಕ್, ಬೆಂಗಳೂರು ವಿವಿಯ ಮಾಜಿ ಸೆನೆಟ್ ಸದಸ್ಯೆ ಲಕ್ಷ್ಮೀ, ಸಬೀಹಾ ಭೂಮಿಗೌಡ, ಪ್ರಗತಿಪರ ಸಂಘಟನೆಗಳು, ಹೈ ಕೋರ್ಟ್ ವಕೀಲ ಶ್ರೀನಿವಾಸ್,ಬಿ.ಎಂ.ಭಟ್ ಮುಂತಾದ 100 ಕ್ಕೂ ಹೆಚ್ಚು ಸಂಘಟನೆಗಳು ಈ ಬೃಹತ್ ಚಳವಳಿಗೆ ತಮ್ಮ ಬೆಂಬಲ ನೀಡಿ ಆಗಮಿಸಿದ್ದರು.

Ad Widget
Click to comment

Leave a Reply

Uncategorized

ಮಂಗಳೂರು : ಸಹಪಾಠಿಯೊಂದಿಗೆ ಜಗಳ: ಬಿಸಿಎ ವಿದ್ಯಾರ್ಥಿಗೆ ಚೂರಿಯಿಂದ ಇರಿತ; ಇಬ್ಬರು ವಶಕ್ಕೆ

Published

on



Ad Widget

Ad Widget

Ad Widget

Ad Widget
ಚಿತ್ರ : AI

ಮಂಗಳೂರು, ಅ.4: ಸಣ್ಣ ವಿಚಾರಕ್ಕೆ ಸಹಪಾಠಿಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯೊಬ್ಬನ ಮೇಲೆ ಸಹಪಾಠಿ ಸೇರಿದಂತೆ ಆರು ಮಂದಿ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Ad Widget

Ad Widget

Ad Widget

Ad Widget

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಮಹಮ್ಮದ್ ಉನೈಸ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರು ನಗರದ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಘಟನೆ ಅ.3ರಂದು ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿರುವ ಉನೈಸ್ ಅವರು ಬೆಳಿಗ್ಗೆ 11.30ರ ಸುಮಾರಿಗೆ ಕಾಲೇಜಿನ ಸಮೀಪದ ಟರ್ಫ್‌ಗೆ ಕಬಡ್ಡಿ ಆಡಲು ತೆರಳಿದ್ದರು. ಈ ವೇಳೆ ಟರ್ಫ್ ಎದುರಿನ ರಸ್ತೆಯಲ್ಲಿ ಅವರ ಸ್ನೇಹಿತ ಹಾಗೂ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ರಾಯಿಝ್ ಮತ್ತು ಅದೇ ಕಾಲೇಜಿನ ಬಿಕಾಂ ವಿದ್ಯಾರ್ಥಿ, ಕಾಟಿಪಳ್ಳ ನಿವಾಸಿ ರಿಯಾನ್ ನಡುವೆ ಸಣ್ಣ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.

Ad Widget

Ad Widget <> Ad Widget

ಜಗಳ ಬಿಡಿಸಲು ಉನೈಸ್ ಸೇರಿದಂತೆ ಕೆಲ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿದಾಗ ರಿಯಾನ್ ಉನೈಸ್‌ಗೆ ಕೈಯಿಂದ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಉನೈಸ್ ಹಾಗೂ ಇತರ ವಿದ್ಯಾರ್ಥಿಗಳು ಕಾಲೇಜಿಗೆ ವಾಪಸಾಗಿದ್ದರು.



Ad Widget

ಮಧ್ಯಾಹ್ನ 1.45ರ ಸುಮಾರಿಗೆ ಉನೈಸ್ ಕಾಲೇಜಿನ ಕ್ಯಾಂಟೀನ್ ಬಳಿ ನಿಂತಿದ್ದಾಗ ರಿಯಾನ್ ಹಾಗೂ ಐವರು ಸಹಚರರು ಎರಡು ದ್ವಿಚಕ್ರ ವಾಹನಗಳಲ್ಲಿ ಅಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ. ಆರೋಪಿಗಳು ಉನೈಸ್ ಅವರನ್ನು ಸುತ್ತುವರಿದು ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

Ad Widget

Ad Widget

ಈ ವೇಳೆ ಚೂರಿಯಿಂದ ಉನೈಸ್ ಅವರ ತಲೆ, ಬೆನ್ನು, ಎಡ ಕಿವಿ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದು ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಗಾಯಗೊಂಡ ಉನೈಸ್ ಅವರನ್ನು ತಕ್ಷಣ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Ad Widget
Continue Reading

Uncategorized

ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಕೀಲ ಮೋಹಿತ್‌ ಕುಮಾರ್‌ ಗೆ ಮಾತೃ ವಿಯೋಗ

Published

on



Ad Widget

Ad Widget

Ad Widget

Ad Widget


ಪುತ್ತೂರು: ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಹೈಕೋರ್ಟ್‌ ವಕೀಲ ಮೊಹಿತ್‌ ಕುಮಾರ್‌ ಅವರ ತಾಯಿ, ಕೊಳ್ತಿಗೆ ಗ್ರಾಮದ ಕುಂಡಡ್ಕ ನಿವಾಸಿ ಪಾರ್ವತಿ ಕುಂಡಡ್ಕ ಅವರು ಅಲ್ಪಕಾಲದ ಅಸ್ವಸ್ಥತೆಯಿಂದ ಅ.3ರಂದು ಸ್ವಗೃಹದಲ್ಲಿ ನಿಧನರಾದರು.

Ad Widget

Ad Widget

Ad Widget

Ad Widget

ಪಾರ್ವತಿ ಅವರು ಚಾರ್ವಕ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಹಾಗೂ ಪುತ್ತೂರಿನ ಪಶುವೈದ್ಯ ಧರ್ಮಪಾಲ ಕರಂದ್ಲಾಜೆ ಅವರ ಸಹೋದರಿ.
ಮೃತರು ಪುತ್ರರಾದ ತೀರ್ಥಪ್ರಸಾದ್‌ ಕೆ., ಚಿತ್ರಶೇಖರ್‌, ಮೋಹಿತ್‌ ಕುಮಾರ್‌ ಹಾಗೂ ಚಿರಣ್‌ ಕುಮಾರ್‌ ಅವರನ್ನು ಅಗಲಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ವಕೀಲ ಮೋಹಿತ್‌ ಕುಮಾರ್‌ ಅವರು ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್‌ ರಾವ್‌ ಪರ ಸಿಬಿಐ ವಿಶೇಷ ನ್ಯಾಯಾಲಯ, ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು. ಸೌಜನ್ಯ ಪ್ರಕರಣದ ನ್ಯಾಯಾಂಗ ಹೋರಾಟದಲ್ಲಿ ಅವರು ಪ್ರಮುಖವಾಗಿ ಗುರುತಿಸಿಕೊಂಡಿದ್ದರು.

Ad Widget

Ad Widget <> Ad Widget

ಸೌಜನ್ಯ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಹಲವು ನಾಯಕರು ಅಂತಿಮ ನಮನ ಸಲ್ಲಿಸಿದರು.



Ad Widget
Ad Widget
Continue Reading

Uncategorized

Dharmasthala-28ನೇ ವರ್ಷದ ಭಜನಾ ಕಮ್ಮಟದ ಉಪನ್ಯಾಸ ಕಾರ್ಯಕ್ರಮ: ಸಾಮರಸ್ಯದ  ಸಂಕೇತವೇ ಈ ಭಜನೆ : ಪ್ರೊ. ಪವನ್ ಕಿರಣಕೆರೆ

Published

on



Ad Widget

Ad Widget

Ad Widget

Ad Widget

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.02, ಶುಕ್ರವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ ಆಸೆಮ್ಸ್ ಶಿಕ್ಷಣ ಸಂಸ್ಥೆ ಕಲ್ಮಾಡಿ, ಉಡುಪಿ ಇಲ್ಲಿನ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಮಾತನಾಡಿದರು.

Ad Widget

Ad Widget

Ad Widget

Ad Widget

ಧರ್ಮಸ್ಥಳ, ಅ.02 : ಯಾವುದೇ ಮತ ಪಂಥಗಳ ತಾರತಮ್ಯವಿಲ್ಲದೆ ಸಾಮರಸ್ಯದಿಂದ ದೇವರನ್ನು ಸ್ಮರಿಸುವ ಏಕೈಕ ಮಾರ್ಗವೇ ಭಜನೆಯಾಗಿದ್ದು, ಇಡೀ ಸಮಾಜಕ್ಕೆ ಸಾಮರಸ್ಯವನ್ನು ಸಾರುವ ಕಾರ್ಯವನ್ನು ಈ ಭಜನಾ ಕಮ್ಮಟ ಮಾಡುತ್ತಿದೆ ಎಂದು ಪ್ರಸಂಗಕರ್ತರು, ಅರ್ಥಧಾರಿಗಳು ಹಾಗೂ ಆಸೆಮ್ಸ್ ಶಿಕ್ಷಣ ಸಂಸ್ಥೆ ಕಲ್ಮಾಡಿ, ಉಡುಪಿ  ಇಲ್ಲಿನ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಅಭಿಪ್ರಾಯಪಟ್ಟರು.

Ad Widget

Ad Widget

Ad Widget alt="Ad Widget"/>

Ad Widget

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.02, ಶುಕ್ರವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ  ಮಾತನಾಡಿದರು.

Ad Widget

Ad Widget <> Ad Widget

  ಮನುಷ್ಯನ ಮನಸ್ಸಿನಲ್ಲಿರುವ ಅಸೂಯೆ, ಮತ್ಸರಗಳೇ ದುಃಖದ ಮೂಲವಾಗಿದ್ದು, ಅವೆಲ್ಲವನ್ನೂ  ಕಳೆಯಲು ಭಜನೆ ಹಾಗೂ ಆಧ್ಯಾತ್ಮದಿಂದ ಮಾತ್ರ ಸಾಧ್ಯ. ಸುಖದಲ್ಲಿ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಎಲ್ಲವನ್ನೂ ಸಮಚಿತ್ತವಾಗಿ ಸ್ವೀಕರಿಸುವ ಮೂಲಕ ಸಾಮರಸ್ಯದ ಬದುಕನ್ನು ಭಜನೆಯಿಂದ ಕಂಡುಕೊಳ್ಳಬಹುದಾಗಿದೆ. ಭಗವಂತನ ದೃಷ್ಟಿಯಲ್ಲಿ ಭಕ್ತಿಗೆ ಪ್ರಾಧಾನ್ಯತೆಯೇ ಹೊರತು ಯಾವುದೇ ಆಡಂಬರದ ಆಚರಣೆಗಳಿಗಲ್ಲ. ಭಗವಂತನನ್ನು ಒಲಿಸಿಕೊಳ್ಳಲು ಶ್ರದ್ಧೆಯೇ ಅತ್ಯಂತ ಉತ್ತಮ ಹಾದಿಯಾಗಿದೆ ಎಂದು ಎಲ್ಲಾ ಶಿಬಿರಾರ್ಥಿಗಳಿಗೆ ಭೋದಿಸಿದರು.



Ad Widget

   ರಾಜ್ಯಾದ್ಯಂತ ಎಲ್ಲಾ ಭಕ್ತರನ್ನು ಒಗ್ಗೂಡಿಸಿ ಎಲ್ಲರ ಮಾನಸಿಕ ಶುದ್ಧತೆಯನ್ನು ಕಾಪಾಡುವ ಮೂಲಕ ಭಜನಾ ಕಮ್ಮಟವು ಅತಿ ಮುಖ್ಯ ಪಾತ್ರ ವಹಿಸಿದ್ದು, ಈ ಕಮ್ಮಟವನ್ನು ಪರ್ವವಾಗಿಸುವಲ್ಲಿ ಕಾರಣಿಭೂತರಾದ  ಹೆಗ್ಗಡೆ ದಂಪತಿಗಳ ಪರಿಶ್ರಮ ಬಲು ದೊಡ್ಡದು ಎಂದು ಶ್ಲಾಘಿಸಿದರು.

Ad Widget

Ad Widget

 ಈ ಸಂದರ್ಭದಲ್ಲಿ ಹಿಂದಿನ 27ನೇ ವರ್ಷದ ಭಜನಾ ಕಮ್ಮಟದಲ್ಲಿ ಭಾಗಿಯಾಗಿ ಸಾರ್ಥಕತೆಯನ್ನು ಕಂಡ ಹೇಮಂತ್ ಸುಳ್ಯ ತನ್ನ ಅನುಭವದ ಮಾತುಗಳನ್ನಾಡಿದರು.

ಈ ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ಉಷಾ ಹೆಬ್ಬಾರ್, ಭಜನಾ ಕಮ್ಮಟ ಸಮಿತಿ ಸಂಚಾಲಕ ಸುಬ್ರಮಣ್ಯ ಪ್ರಸಾದ್, ಸಮಿತಿಯ ಸರ್ವ ಸದಸ್ಯರು ಹಾಗೂ ಶಿಬಿರಾರ್ಥಿಗಳು ಭಾಗಿಯಾಗಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading