ಸಿನೆಮಾ
Kantara : ಕಾಂತಾರದ “ವರಾಹ ರೂಪಂ” ಹಾಡಿಗೆ ಮುಂದುವರಿದ ಸಂಚಕಾರ – ಜಿಲ್ಲಾ ನ್ಯಾಯಾಲಯದ ಮೆಟ್ಟಿಲಲ್ಲಿ ಆದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟು ಮೆಟ್ಟಿಲೆರಿದ ʼನವರಸಂʼ ಟೀಂ – ಹಾಡಿನ ಬಳಕೆಗೆ ಮತ್ತೆ ತಡೆ
ಕೊಚ್ಚಿ: ಕನ್ನಡದ ಬ್ಲಾಕ್ ಬ್ಲಾಸ್ಟರ್ ಮೂವಿ ಕಾಂತಾರ ಹಾಗೂ ಅದರ ಜನಪ್ರಿಯ ಹಾಡು “ವರಾಹ ರೂಪಂ”ಹಾಡಿನ ಕುರಿತಾಗಿ ಉಂಟಾಗಿರುವ ವಿವಾದ ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಹಕ್ಕುಸ್ವಾಮ್ಯ ಉಲ್ಲಂಘನೆ ಕುರಿತು ಥೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ ಸಲ್ಲಿಸಿದ ಅರ್ಜಿಯನ್ನು ‘ನಾಟ್ ಇನ್ ಜ್ಯೂರಿಸ್ಡಿಕ್ಷನ್’ (ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ) ಉಲ್ಲೇಖದೊಂದಿಗೆ ಕೋಝಿಕೋಡ್ ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ವಜಾಮಾಡಿತ್ತು.
ಆದರೇ ಸೆಷನ್ಸ್ ಕೋರ್ಟು ಆದೇಶವನ್ನು ಪ್ರಶ್ನಿಸಿ ಥೈಕುಡಂ ಬ್ರಿಡ್ಜ್ ಹೈಕೋರ್ಟ್ನಲ್ಲಿ ದಾವೆ ಹೂಡಿತ್ತು. ಇದೀಗ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಆದೇಶಕ್ಕೆ ಕೇರಳ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ನೀಡಿ ನ್ಯಾಯಮೂರ್ತಿ ಪಿ. ಸೋಮರಾಜನ್ ಅವರ ಏಕ ಪೀಠ. ಹೊಂಬಾಳೆ ಬ್ಯಾನರ್, ರಿಷಬ್ ಶೆಟ್ಟಿ, ಪೃಥ್ವಿರಾಜ್ ಫಿಲ್ಮ್ಸ್, ಅಮೆಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ಗೂಗಲ್ ಇಂಡಿಯಾ ಹೆಡ್ ಆಫೀಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇತರರಿಗೆ ಕೇರಳ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕಾಂತಾರ ಸಿನಿಮಾದ ವರಾಹ ರೂಪಂ ಎಂಬ ಹಾಡು ಸಖತ್ ಹಿಟ್ ಆಗಿತ್ತು. ಸಿನಿಮಾ ಮುಗಿದ ಮೇಲೂ ಪ್ರೇಕ್ಷಕರ ನಾಲಿಗೆ ಮೇಲೆ ಅದು ನಲಿಯುತ್ತಾ ಇತ್ತು. ಆದರೆ ಈ ಹಾಡು ಮಲಯಾಳಂ ಹಾಡಿನ ನಕಲು ಅದನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಕಾಪಿ ಮಾಡಿದ್ದಾರೆ ಎಂಬ ಆರೋಪ ಎದುರಾಗಿತ್ತು.
ಈ ಬಗ್ಗೆ ನವರಸಂ ಹಾಡಿನ ಮೂಲಕರ್ತ ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್’ ತಂಡ . ಹಕ್ಕುಸ್ವಾಮ್ಯ ಉಲ್ಲಂಘನೆ ಕುರಿತು ಕೋಝಿಕ್ಕೋಡ್ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೇ ವರಾಹರೂಪಂ” ಹಾಡಿನ ಮೂಲ ರೂಪ ಎನ್ನಲಾದ “ನವರಸಂ” ಹಾಡಿನ ಹಕ್ಕುಸ್ವಾಮ್ಯ ಮಾಲೀಕ ಎಂದು ಹೇಳಿಕೊಂಡಿರುವ ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂಪನಿ ಲಿಮಿಟೆಡ್ ಪಾಲಕ್ಕಾಡ್ ಕೋರ್ಟು ನಲ್ಲಿ ದಾವೆ ಹೂಡಿತ್ತು.
ಈ ಸಂಬಂಧ ವರಾಹರೂಪಂ” ಹಾಡಿನ ಬಳಕೆ ವಿರುದ್ಧ ಪಾಲಕ್ಕಾಡ್ ಹಾಗೂ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ತಡೆಯಾಜ್ಞೆ ನೀಡಿತ್ತು. ಇದನ್ನು ತೆರವುಗೊಳಿಸುವಂತೆ ಹೋಂಬಾಳೆ ಫಿಲ್ಮ್ಸ್ ಹೈಕೋರ್ಟು ಮೆಟ್ಟೀಲೆರಿತ್ತು. ಆದರೇ ಸಿವಿಲ್ ಪ್ರೊಸಿಜರ್ ಕೋಡ್ ಸಂಹಿತೆಯಡಿ ಜಿಲ್ಲಾ ನ್ಯಾಯಾಲಯಗಳು ನೀಡಿದ ತಡೆಯಾಜ್ಞೆ ಆದೇಶದ ವಿರುದ್ಧ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲು ಕೇರಳ ಹೈಕೋರ್ಟ್ ನಿರಾಕರಸಿ ಹೊಂಬಾಳೆ ಫಿಲಂಸ್ ನ ಅರ್ಜಿಯನ್ನು ವಜಾಗೊಳಿಸಿತ್ತು.
ಪುತ್ತೂರಿನ ಮಹಿಳೆ ಉಪ್ಪಳದ ಪತಿಯ ಮನೆಯಲ್ಲಿ ಕೆರೆಗೆ ಬಿದ್ದು ಮೃತ್ಯು
ಅದರ ಮರುದಿನ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಥೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ ಸಲ್ಲಿಸಿದ ಅರ್ಜಿಯನ್ನು ‘ನಾಟ್ ಇನ್ ಜ್ಯೂರಿಸ್ಡಿಕ್ಷನ್ ಎಂದು ಹೇಳಿ ವಜಾಗೊಳಿಸಿತ್ತು. ಆದರೇ ಈ ತೀರ್ಪಿನ ಬಳಿಕವೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ನ.2ರಂದು ನೀಡಿದ್ದ ಮಧ್ಯಂತರ ಆದೇಶವೂ ಜಾರಿಯಲ್ಲಿತ್ತು.
ಹೀಗಾಗಿ .ನವೆಂಬರ್ 24 ರಂದು, ಅಮೆಜಾನ್ ಪ್ರೈಮ್ನಲ್ಲಿ ಕಾಂತಾರ ಸಿನಿಮಾ ಬಿಡುಗಡೆಗೊಂಡಾಗ “ವರಾಹರೂಪಂ” ಮೂಲ ಹಾಡನ್ನು ಬದಲಾಯಿಸಿಲಾಗಿತ್ತು. ಆದರೇ ಕೋಝಿಕ್ಕೋಡ್ ನ್ಯಾಯಾಲಯ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದ ಬಳಿಕ ಮೂಲ ಹಾಡು ಅಮೆಜಾನ್ ಪ್ರೈಮ್ನಲ್ಲಿ ಮತ್ತೆ ಕಾಣಿಸಿಕೊಂಡಿತ್ತು. ಇದರ ವಿರುದ್ದ ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂಪನಿ ಲಿಮಿಟೆಡ್ ಸಲ್ಲಿಸಿದ ಅರ್ಜಿಯಲ್ಲಿ ಹೈಕೋರ್ಟ್ ಹೊಸ ಆದೇಶ ನೀಡಿದೆ.
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಸೆಪ್ಟೆಂಬರ್ 30 ರಂದು ಬಿಡುಗಡೆಗೊಂಡು ಕರ್ನಾಟಕದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು.ಚಿತ್ರದ ತೆಲುಗು, ಹಿಂದಿ ಮತ್ತು ಮಲಯಾಳಂ ಆವೃತ್ತಿಗಳನ್ನು ಅನೇಕ ಪ್ರೇಕ್ಷಕರು ವೀಕ್ಷಿಸಿದ್ದಾರೆ.ಚಿತ್ರದ ಮಲಯಾಳಂ ಆವೃತ್ತಿಯನ್ನು ಪೃಥ್ವಿರಾಜ್ ಪ್ರೊಡಕ್ಷನ್ಸ್ ಹೊರ ತಂದಿದೆ.
ಸಿನೆಮಾ
Rajinikanth-ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ತಲೈವಾ: ರಜಿನಿಕಾಂತ್ ನೋಡಲು ಮುಗಿಬಿದ್ದ ಅಭಿಮಾನಿಗಳು
‘ಧರ್ಮನ್’ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಬುಧವಾರ (ಸೆ.30) ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.
ಮೈಸೂರು: ‘ಧರ್ಮನ್’ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಬುಧವಾರ (ಸೆ.30) ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.
ಮೈಸೂರಿನ ಸುತ್ತಮುತ್ತ ‘ಧರ್ಮನ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ರಜಿನಿಕಾಂತ್ ಅವರು ನಗರದಲ್ಲಿರುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ʻತಲೈವಾʼನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಶೂಟಿಂಗ್ ಸ್ಥಳಗಳು ಹಾಗೂ ಅವರು ಭೇಟಿ ನೀಡುವ ಪ್ರದೇಶಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.
ಚಾಮುಂಡೇಶ್ವರಿ ದೇವಾಲಯಕ್ಕೆ ರಜಿನಿಕಾಂತ್ ಭೇಟಿ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಅವರನ್ನು ನೋಡಲು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳನ್ನು ಕಂಡ ರಜಿನಿಕಾಂತ್ ಅವರು ಪ್ರೀತಿಯಿಂದ ಕೈಬೀಸಿ ಅಭಿಮಾನಿಗಳ ಖುಷಿಗೆ ಕಾರಣರಾದರು.
ಇದಕ್ಕೂ ಮುನ್ನ ಮಂಗಳವಾರ (ಸೆ.29) ಸೋಮನಾಥಪುರದಲ್ಲಿ ‘ಧರ್ಮನ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಟ ವಿಷ್ಣುವರ್ಧನ್ ಅವರ ಕುಟುಂಬದ ಸದಸ್ಯರು ರಜಿನಿಕಾಂತ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದ್ದು, ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಕರ್ನಾಟಕದಲ್ಲಿ ರಜಿನಿಕಾಂತ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಅವರು ರಾಜ್ಯಕ್ಕೆ ಆಗಮಿಸಿದಾಗಲೆಲ್ಲ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆಯುತ್ತದೆ. ಇದೀಗ ಮೈಸೂರಿನಲ್ಲಿ ನಡೆಯುತ್ತಿರುವ ‘ಧರ್ಮನ್’ ಚಿತ್ರದ ಚಿತ್ರೀಕರಣದ ಹಿನ್ನೆಲೆಯಲ್ಲಿ ತಲೈವಾ ನಗರದಲ್ಲಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ.
ರಜಿನಿಕಾಂತ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘ಜೈಲರ್-2’ ಕೂಡ ಸದ್ಯ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಕನ್ನಡದ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ. ‘ಜೈಲರ್-2’ ಅಕ್ಟೋಬರ್ 15ರಂದು ತೆರೆಗೆ ಬರಲಿದೆ.
ಸಿನೆಮಾ
Bethlehem Family Unit-ಮಲಯಾಳಂ ಚಿತ್ರರಂಗದಲ್ಲಿ ದಾಖಲೆ ಬರೆದ ‘ಬೆತ್ಲೆಹೆಮ್ ಕುಟುಂಬ ಯೂನಿಟ್’: ಅ.2ಕ್ಕೆ ಒಟಿಟಿ ಎಂಟ್ರಿ
ಮಲಯಾಳಂ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ (Bethlehem Kudumba Unit) ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ನಿವಿನ್ ಪೌಲಿ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಅ.2ರಿಂದ ಜಿಯೋಹಾಟ್‌ಸ್ಟಾರ್ (JioHotstar) ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ (Bethlehem Kudumba Unit) ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ನಿವಿನ್ ಪೌಲಿ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಅ.2ರಿಂದ ಜಿಯೋಹಾಟ್‌ಸ್ಟಾರ್ (JioHotstar) ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಗಿರೀಶ್ ಎ.ಡಿ. ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 326 ಕೋಟಿ ರೂ. ಗಳಿಸುವ ಮೂಲಕ ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ನಿರ್ಮಿಸಿದೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ‘ಲೋಕಾ ಚಾಪ್ಟರ್ 1: ಚಂದ್ರ’ ಚಿತ್ರ 304 ಕೋಟಿ ರೂ. ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿತ್ತು. ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಈ ದಾಖಲೆಯನ್ನು ಹಿಂದಿಕ್ಕಿದೆ.
ಚಿತ್ರವು ಕೇರಳದಲ್ಲಿ ಮೊದಲ ಬಾರಿಗೆ 150 ಕೋಟಿ ರೂ. ಗಳಿಕೆ ದಾಖಲಿಸಿದ ಮಲಯಾಳಂ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅತಿ ವೇಗವಾಗಿ 300 ಕೋಟಿ ರೂ. ಕ್ಲಬ್ ಸೇರಿದ ಚಿತ್ರ ಎಂಬ ದಾಖಲೆಗೂ ಪಾತ್ರವಾಗಿದೆ.
ಸಿನೆಮಾ
Hanuman Ansh-₹2 ಕೋಟಿ ಬಜೆಟ್ ಸಿನಿಮಾ ₹347 ಕೋಟಿ ಗಳಿಕೆ; ‘ಪೆದ್ದಿ’, ‘ಟಾಕ್ಸಿಕ್’ ದಾಖಲೆ ಹಿಂದಿಕ್ಕಿದ ‘ಹನುಮಾನ್ ಅಂಶ್ʼ
ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ‘ಹನುಮಾನ್ ಅಂಶ್’ (Hanuman Ansh) ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದೆ. ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ವಿಶ್ವದಾದ್ಯಂತ ₹300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇದೀಗ ₹347 ಕೋಟಿಯ ಗಡಿ ದಾಟಿದೆ ಎಂದು ವರದಿಯಾಗಿದೆ.
ಮುಂಬಯಿ: ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ‘ಹನುಮಾನ್ ಅಂಶ್’ (Hanuman Ansh) ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದೆ.
ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ವಿಶ್ವದಾದ್ಯಂತ ₹300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇದೀಗ ₹347 ಕೋಟಿಯ ಗಡಿ ದಾಟಿದೆ ಎಂದು ವರದಿಯಾಗಿದೆ. ಸಿನಿಮಾ ಬಿಡುಗಡೆಯಾಗಿ 45 ದಿನಗಳು ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮುಂದುವರಿದಿರುವುದು ವಿಶೇಷವಾಗಿದೆ.
‘ಪೆದ್ದಿ’, ‘ಟಾಕ್ಸಿಕ್’ ದಾಖಲೆ ಹಿಂದಿಕ್ಕಿದ ಸಿನಿಮಾ
ಭಾನುವಾರ (ಸೆ.20) ‘ಹನುಮಾನ್ ಅಂಶ್’ ಭಾರತದಲ್ಲಿ ₹13.75 ಕೋಟಿ ಹಾಗೂ ವಿದೇಶದಲ್ಲಿ ₹1.50 ಕೋಟಿ ಗಳಿಕೆ ಮಾಡಿದೆ. ಇದರೊಂದಿಗೆ ಚಿತ್ರದ ಒಟ್ಟು ಜಾಗತಿಕ ಗಳಿಕೆ ₹347.05 ಕೋಟಿಗೆ ತಲುಪಿದೆ ಎಂದು ಸ್ಯಾಕ್‌ನಿಲ್ಕ್ ವರದಿ ಮಾಡಿದೆ.
ಈ ಮೂಲಕ ರಾಮ್ ಚರಣ್ ಅಭಿನಯದ ‘ಪೆದ್ದಿ’ ಹಾಗೂ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗಳ ವಿಶ್ವದಾದ್ಯಂತದ ಗಳಿಕೆಯನ್ನು ‘ಹನುಮಾನ್ ಅಂಶ್’ ಹಿಂದಿಕ್ಕಿದೆ.
‘ಪೆದ್ದಿ’ ₹341.90 ಕೋಟಿ ಹಾಗೂ ‘ಟಾಕ್ಸಿಕ್’ ₹341.99 ಕೋಟಿ ಗಳಿಕೆ ಮಾಡಿದ್ದರೆ, ‘ಹನುಮಾನ್ ಅಂಶ್’ ₹347.05 ಕೋಟಿ ಗಳಿಕೆಯೊಂದಿಗೆ ಈ ಎರಡೂ ಸಿನಿಮಾಗಳನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಂಗ್ಲಾ’ ಸಿನಿಮಾದ ಗಳಿಕೆಯನ್ನೂ ಹಿಂದಿಕ್ಕಿರುವ ‘ಹನುಮಾನ್ ಅಂಶ್’, ಈ ವರ್ಷದ ಹಿಂದಿ ಸಿನಿಮಾಗಳ ಪೈಕಿ ಅತಿ ಹೆಚ್ಚು ಗಳಿಕೆ ಕಂಡ ಮೂರನೇ ಚಿತ್ರವಾಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ.
ಇತರ ಭಾಷೆಯ ಸಿನಿಮಾಗಳನ್ನೂ ಹಿಂದಿಕ್ಕಿದ ‘ಹನುಮಾನ್ ಅಂಶ್’
ಕಳೆದ ವಾರದಲ್ಲಿಯೂ ಸಿನಿಮಾ ತನ್ನ ಗಳಿಕೆಯ ಓಟ ಮುಂದುವರಿಸಿದ್ದು, ‘ಜನಾ ನಾಯಕನ್’, ‘ಬೆತ್ತೆಹೇಮ್ ಕುಟುಂಬ ಯೂನಿಟ್’, ‘ಮಾನ ಶಂಕರ ವರಪ್ರಸಾದ್ ಗಾರು’ ಹಾಗೂ ‘ಕರುಪ್ಪು’ ಸೇರಿದಂತೆ ವಿವಿಧ ಚಿತ್ರರಂಗಗಳ ಪ್ರಮುಖ ಸಿನಿಮಾಗಳ ಜಾಗತಿಕ ಗಳಿಕೆಯನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.
ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಚಿತ್ರವು ‘ಮಹಾರಾಜ್ ಜಿ’ ಎಂದೇ ಜನಪ್ರಿಯರಾಗಿದ್ದ ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದೆ.
ಸ್ವಯಂಭೂ ಮೀಡಿಯಾ ನೆಟ್‌ವರ್ಕ್, ರಾಗಿಣಿ ಎಸ್., ನಮ್ರತಾ ಜಿ.ಎಸ್. ಹಾಗೂ ಅನುಪ್ರಿಯಾ ಎ. ನಗರ್ ನಿರ್ಮಿಸಿರುವ ಚಿತ್ರದಲ್ಲಿ ಚಂದನ್ ಕೆ. ಆನಂದ್ ಮತ್ತು ಶೋಭಿನವ್ ಸತ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಖಿಲ್ ದುಬೆ, ಉದಯಸಿಂಹ ರಜಪೂತ್, ಪೂರ್ಣಿಮಾ ತಿವಾರಿ ಹಾಗೂ ಮನೀಶ್ ಚೌಧರಿ ಸೇರಿದಂತೆ ಹಲವು ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


















