ದಕ್ಷಿಣ ಕನ್ನಡ
Surathkal Toll Gate | ಸುರತ್ಕಲ್ ಟೋಲ್ 6 ವರ್ಷದಲ್ಲಿ ಸಂಗ್ರಹಿಸಿದ ಮೊತ್ತ 450 ಕೋಟಿ – ದಿನದ ಲಾಭ 5 ಲಕ್ಷ – ಬ್ರಹ್ಮರಕೊಟ್ಲು ಬೇರೆಯೇ : ಸುರತ್ಕಲ್ ಟೋಲ್ ತೆರವಿಗೆ ನಡೆದ ಹೋರಾಟದಲ್ಲಿ ಕೇಳಿ ಬಂದ ಗಂಭೀರ ಆರೋಪ
ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ (Surathkal TollGate) ನಲ್ಲಿ 6 ವರ್ಷದಲ್ಲಿ ಸಂಗ್ರಹವಾದ ಮೊತ್ತ 450 ಕೋಟಿ ರೂಪಾಯಿ. ದಿನಕ್ಕೆ 13 ಲಕ್ಷ ರೂಪಾಯಿ ಟೋಲ್ ನವರು ಕಟ್ಟಲು ಇದೆ , ದಿನ ಸಂಗ್ರಹವಾಗುವ ಮೊತ್ತ 18 ಲಕ್ಷ, ದಿನಕ್ಕೆ 5 ಲಕ್ಷ ಗುತ್ತಿಗೆದಾರರಿಗೆ ಉಳಿಯುತ್ತದೆ. ಈ ಹಣ ಯಾರ್ಯಾರಿಗೆ ಎಷ್ಟೆಷ್ಟು ಹೋಗ್ತದೆ ಅಂತ ಗೊತ್ತಿಲ್ಲ. ಇನ್ನೊಂದು ಕಡೆ ಬಿ.ಸಿ ರೋಡ್ ನ ಟೋಲ್ ನಲ್ಲೂ ಹೀಗೆ . ಹೀಗಾಗಿ ಈ ಟೋಲ್ ಗಳ ತೆರವಿಗೆ ಆಸಕ್ತಿ ಹೊಂದಿಲ್ಲ . ಇದಕ್ಕೆ ನೇರ ಕಾರಣ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಭರತ್ ಶೆಟ್ಟಿ ಎಂದು ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಗಂಭೀರ ಆರೋಪ ಮಾಡಿದ್ದಾರೆ.
ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿ ನೇತೃತ್ವದಲ್ಲಿ ಒಂದು ದಿನದ ಧರಣಿ ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಈವರೆಗೂ ಜನಪ್ರತಿನಿಧಿಗಳು ಸುಳ್ಳು ಪಿಳ್ಳು ಭರವಸೆಗಳನ್ನು ನೀಡಿಕೊಂಡು ಬರುತ್ತಿದ್ದಾರೆ. ಆದರೆ, ಇನ್ನು ಯಾವುದೇ ಪೊಳ್ಳು ಭರವಸೆಗಳನ್ನು ನಾವು ನಂಬುವುದೂ ಇಲ್ಲ ಇದನ್ನು ಕೇಳುವುದೂ ಇಲ್ಲ ಎಂದರು. ಅಕ್ಟೋಬರ್ 18 ನೇರ ಕಾರ್ಯಚರಣೆಯ ದಿನ ಅಂದು ಜನರೇ ಸೇರಿ ಟೋಲ್ ತೆರವುಗೊಳಿಸುತ್ತೇವೆ ಎಂದರು.
ಸರಕಾರ ಅಥವಾ ಜಿಲ್ಲಾಡಳಿತ ಇಂದು ಸಂಜೆಯ ಒಳಗೆ ಧರಣಿಯ ಸ್ಥಳಕ್ಕೆ ಭೇಟಿ ನೀಡಿ ಟೋಲ್ ಗೇಟ್ ತೆರವಿನ ದಿನಾಂಕವನ್ನು ಪ್ರಕಟಿಸಬೇಕು. ಇಲ್ಲವಾದರೆ, ಇಂದು ಸಂಜೆ ಹೋರಾಟ ಸಮಿತಿ ಸಭೆನಡೆಸಿ ನಾಗರಿಕರೇ ಟೋಲ್ ತೆರವು ಮಾಡುವ ದಿನಾಂಕವನ್ನು ಪ್ರಕಟಿಲಿದ್ದು ಅದು ಅಕ್ಟೋಬರ್ 18 ಎಂದರು.
ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ, ಟೋಲ್ ಗೇಟ್ ನಿಂದ ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶೇ.40 ಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.
ಅವರು ಕಮಿಷನ್ ಪಡೆಯದಿದ್ದರೆ, ಅವರ ಕ್ಷೇತ್ರದ ಜನರು ನಡೆಸುತ್ತಿರುವ ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಟೋಲ್ ತೆರವಿಗೆ ಬೆಂಬಲವಿದೆ ಎಂದು ಎಲ್ಲೋ ಕುಳಿತು ಶಾಸಕರು, ಸಂಸದರು ಹೇಳುತ್ತಾ ನಮ್ಮನ್ನು ಮೊಸ ಮಾಡುತ್ತಿದ್ದಾರೆ. ಅವರ ಬೆಂಬಲವಿರುವುದೇ ಆಗಿದ್ದರೆ ಇಂದು ಧರಣಿಯಲ್ಲಿ ಭಾಗವಹಿಸುತ್ತಿದ್ದರು ಎಂದು ನುಡಿದರು.
ಅಧಿಕಾರಿಗಳು ದಿನಾಂಕ ಪ್ರಕಟಿಸಬೇಕು ಇಲ್ಲವಾದರೆ ನಾವೇ ಟೋಲ್ ಗೇಟ್ ನ್ನು ತೆಗೆದು ಹತ್ತಿರದಲ್ಲೇ ಇರುವ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆ. ಜೈಲ್ ಬರೋ ಮಾಡಿದರೂ ಅಂಜಲ್ಲ ಎಂದು ಮಿಥುನ್‌ರೈ ಹೇಳಿದರು.
ಸಾಮಾಜಿಕ ಕಾರ್ಯಕರ್ತ ಎಂ.ಜಿ ಹೆಗ್ಡೆ ಮಾತನಾಡಿ, ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ 35 ಕಿಮೀ ರಸ್ತೆಗೆ 380 ಕೋಟಿ ರೂಪಾಯಿ ಅದರಲ್ಲಿ ಪರಿಹಾರದ ವಿಷಯ ಬಿಟ್ಟು ಪರಿಹಾರ ಸೇರಿದರೆ 530 ಕೋಟಿ ಕಳೆಯುತ್ತದೆ , ಡಬಲ್ ರಸ್ತೆ ನಾಲ್ಕು ಮಾರ್ಗ ಅಲ್ಲ , 21 ಕೋಟಿ ರೂಪಾಯಿ ವೆಚ್ಚದಲ್ಲಿ 1 ಕಿಮೀ ಡಾಮಾರು ಚಿನ್ನದ ರಸ್ತೆ ಪ್ರಾರಂಭವಾಗ್ತದೆ ಎಂದರು.
ದಿನಾಂಕ ಪ್ರಕಟಿಸಬೇಕು ಇಲ್ಲವಾದರೆ ಜೈಲ್ ಬರೋ ನಡೆಸಲಾಗುವುದು ಎಂದು ಮಾಜಿ ಸಚಿವ ಅಭಯಚಂದ್ರಜೈನ್ ಸರಕಾರ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಜೈಲ್‌ಬರೋ ಗೆ ಪ್ರಥಮವಾಗಿ ಜೈಲ್ ಹೋಗುವವರಲ್ಲಿ ನಾನು ಮೊದಲಿನಾಗಿರುತ್ತೆನೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಹೋರಾಟ ಸಮಿತಿಯ ಸಹ ಸಂಚಾಲಕ ರಾಘವೇಂದ್ರ, ಪುರುಷೋತ್ತಮ ಚಿತ್ರಾಪುರ, ಪ್ರತಿಭಾ ಕುಳಾಯಿ, ಮೂಸಬ್ಬ ಪಕ್ಷಿಕೆರೆ, ಮೊಯ್ದಿನ್ ಬಾವಾ, ಮಿಥುನ್ ರೈ, ದಿನೇಶ ಕುಂಪಳ, ರಮೇಶ್, ದಿನೇಶ್ ಹೆಗ್ಡೆ ಉಳೆಪಾಡಿ, ರಮೇಶ್ ಶಿಯಾನ್, ಪಿ. ಮೊಹನ್, ಮಾಜಿ ಮೇಯರ್ ಶಶಿದರ ಹೆಗಡೆ, ಗುಲ್ಝಾರ್ ಬಾನು, ಎಂ.ಜಿ. ಹೆಗ್ಡೆ, ವಸಂತ್ ಬರ್ನಾರ್ಡ್, ಶೇಖರ ಹೆಜಮಾಡಿ, ರಾಲ್ಫಿ ಡಿಕೋಸ್ತಾ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಶಿಕ್ಷಣ
Puttur-ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರ
ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಕಲ್ಕೂರ ಪ್ರತಿಷ್ಠಾನ(ರಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ನ 20 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯ ಸಭಾಭವನದಲ್ಲಿ ನಡೆದ ರಾಜ್ಯೋತ್ಸವ ಸಂದೇಶ – ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಪುತ್ತೂರು: ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಕಲ್ಕೂರ ಪ್ರತಿಷ್ಠಾನ(ರಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ನ 20 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯ ಸಭಾಭವನದಲ್ಲಿ ನಡೆದ ರಾಜ್ಯೋತ್ಸವ ಸಂದೇಶ – ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಗೆ
ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಇವರು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ನ ಪ್ರಾಧ್ಯಾಪಕರಾದ ಡಾ.ಪ್ರಶಾಂತ್ ರಾವ್ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುಮನಾ ರಾವ್ ದಂಪತಿಗಳ ಪುತ್ರಿಯಾಗಿದ್ದು, ಪ್ರಸಕ್ತ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ಮಂಗಳೂರು
Mangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ಮಂಗಳೂರು: ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ಏನಿದು ಪ್ರಕರಣ?
ನ.19ರ ಗುರುವಾರ ಸಂಜೆ ಕಾಲೇಜು ಆವರಣದಿಂದ ಕರೆದೊಯ್ಯಲ್ಪಟ್ಟ ಯುವತಿ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಮೂಲದವರಾಗಿದ್ದು, ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ.
ಯುವತಿ ಮಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವ್ಯಾಸಂಗ ಮಾಡುತ್ತಿರುವ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದ ಯುವತಿಯ ಪೋಷಕರು ಹಾಗೂ ಸಂಬಂಧಿಕರು ಕಾಲೇಜು ಆವರಣಕ್ಕೆ ಆಗಮಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಎಳೆದೊಯ್ದು ಮಹೀಂದ್ರಾ ಥಾರ್ ವಾಹನದಲ್ಲಿ ಕರೆದೊಯ್ದಿದ್ದರು. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಘಟನೆಯ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇರಳಂನ ಸಂಬಂಧಿಕರ ಮನೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮಂಗಳೂರಿಗೆ ಕರೆತಂದಿದ್ದಾರೆ.
ಮನೆಯವರ ಜೊತೆ ಹೋಗಲು ನಿರಾಕರಣೆ
ಪೊಲೀಸರು ರಕ್ಷಿಸಿದ ಬಳಿಕ ಯುವತಿಯ ಹೇಳಿಕೆ ದಾಖಲಿಸಿದ್ದು, ತನ್ನ ಪೋಷಕರು ಅಥವಾ ಮನೆಯವರ ಜೊತೆ ಹೋಗಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ ಎನ್ನಲಾಗಿದೆ. ಯುವತಿ ವಯಸ್ಕಳಾಗಿರುವುದರಿಂದ ತಾನು ಎಲ್ಲಿ ವಾಸಿಸಬೇಕು ಎಂಬುದನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕು ಆಕೆಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ವೈದ್ಯಕೀಯ ತಪಾಸಣೆಯ ಬಳಿಕ ಯುವತಿಯ ಇಚ್ಛೆಯ ಸ್ಥಳಕ್ಕೆ ಅಥವಾ ಸಾಂತ್ವನ ಕೇಂದ್ರಕ್ಕೆ ಪೊಲೀಸ್ ರಕ್ಷಣೆಯಲ್ಲಿ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 140(3) ಮತ್ತು 126ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಿಚಾರಣೆಗೆ ಕರೆಸಲಾಗಿದೆ. ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಿರುವ ಅಪರಾಧವಾಗಿರುವ ಹಿನ್ನೆಲೆಯಲ್ಲಿ ಬಿಎನ್‌ಎಸ್‌ಎಸ್ ಅಡಿಯಲ್ಲಿ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಕಾರ್ಯಕ್ರಮಗಳು
Puttur-ಪುತ್ತೂರಿನಲ್ಲಿ ‘ಸಾಮರಸ್ಯದ ತುಡರ್’ ಕಾರ್ಯಕ್ರಮ: ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಮನೆಗೆ ದೀಪದ ಬೆಳಕು
ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುತ್ತೂರು: ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ದೇವಸ್ಥಾನದಲ್ಲಿ ಬೆಳಗಿಸಿದ ದೀಪವನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶಗಳ ಸುತ್ತಮುತ್ತಲಿನ ಮನೆಗಳಲ್ಲಿ ದೀಪ ಬೆಳಗಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಸಾಮರಸ್ಯ ಸಂಯೋಜಕ ರವೀಂದ್ರ, ಜಿಲ್ಲಾ ಸಾಮರಸ್ಯ ಸಂಯೋಜಕ ಶ್ರೀಕುಮಾರ್ ಸುಬ್ರಹ್ಮಣ್ಯ, ದಾಮೋದರ ಪಾಟಲಿ, ಅಪ್ಪಯ್ಯ ಮಣಿಯಾಣಿ, ರಮೇಶ್ ಪ್ರಭು, ಸಂತೋಷ್ ಬೊನಂತಾಯ, ರಮೇಶ್ ನೆಗಳಗುಳಿ, ದಯಾನಂದ ಬೋಲ್ವಾರ್, ಸಚಿನ್ ಶೆಣೈ, ರಮೇಶ್ ಉರ್ಲಾಂಡಿ, ಅಶೋಕ್ ಬ್ರಹ್ಮನಗರ ಸೇರಿದಂತೆ ಪ್ರಮುಖರು ಹಾಗೂ ಮಾತೆಯರು ಉಪಸ್ಥಿತರಿದ್ದರು.
-
ದಕ್ಷಿಣ ಕನ್ನಡ23 hours ago
Ashok janamana 2026 : ಪುತ್ತೂರಿನಲ್ಲಿ ಅದ್ದೂರಿ ‘ಅಶೋಕ ಜನಮನ-2026’ ಸಂಭ್ರಮಕ್ಕೆ ಕ್ಷಣಗಣನೆ ! ಬಿ.ಕೆ. ಹರಿಪ್ರಸಾದ್, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಸಹಿತ ರಾಜಕೀಯ, ಧಾರ್ಮಿಕ ಗಣ್ಯರ ಸಮಾಗಮ
-
ನಿಧನ ವಾರ್ತೆ24 hours agoSavitri Devi-ಸಿಎಂ ಯೋಗಿ ಆದಿತ್ಯನಾಥ್ ತಾಯಿ ಸಾವಿತ್ರಿ ದೇವಿ ನಿಧನ
-
ಅಪರಾಧ23 hours agoMangalore-ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಮನೆ ಮಾಲೀಕನ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬ ಖುಲಾಸೆ
-
ಬಿಗ್ ನ್ಯೂಸ್8 hours agoBail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ
-
ನಿಧನ ವಾರ್ತೆ7 hours agoHeart attack-ಸಾಲಿಗ್ರಾಮ: ಕಚೇರಿಯಲ್ಲೇ ಹೃದಯಾಘಾತ; ಬಹುಮುಖ ಪ್ರತಿಭೆ ದಿನೇಶ್ ಹೊಳ್ಳ ನಿಧನ
-
ನಿಧನ ವಾರ್ತೆ7 hours agoMudbidri-ಮಂಗಳೂರಿನಲ್ಲಿ ಮೇಲ್ಛಾವಣಿ ಕೆಲಸದ ವೇಳೆ ಅವಘಡ: ಮೂಡುಬಿದಿರೆ ತಾ.ಪಂ. ಮಾಜಿ ಉಪಾಧ್ಯಕ್ಷ ಸಾವು
-
ಅಂತರ ರಾಜ್ಯ6 hours agoFormer CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!
-
ಮಂಗಳೂರು24 hours agoSavanuru Cooperative Society-ʻಅತ್ಯುತ್ತಮ ವಿವಿಧೋದ್ದೇಶ ಸಹಕಾರ ಸಂಘʼಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡ ‘ಆದರ್ಶ ವಿವಿಧೋದ್ದೇಶ ಸಹಕಾರ ಸಂಘ’; ಸವಣೂರು ಸೀತಾರಾಮ ರೈ ಅವರಿಗೆ ಜಿ.ಟಿ. ದೇವೇಗೌಡರಿಂದ ಪ್ರಶಸ್ತಿ ಪ್ರಧಾನ















