Connect with us

ನಿಧನ ವಾರ್ತೆ

Wife and child Rejected : ಮಗ ಮರಣವನ್ನಪ್ಪಿದ ಬೆನ್ನಲೆ ಸೊಸೆ ಹಾಗೂ 20 ದಿನದ ಮಗುವನ್ನು ತಿರಸ್ಕರಿಸಿದ ಕುಟುಂಬ

Published

on



Ad Widget

Ad Widget

Ad Widget

Ad Widget

ಉಡುಪಿ Udupi ಆ26 : ಪತಿ ಮೃತಪಟ್ಟ (Death) ಬೆನ್ನಲೆ, ಸೊಸೆ ಹಾಗೂ20 ದಿನದ  ಮಗುವನ್ನು ಪತಿಯ ಕುಟುಂಬ ತಿರಸ್ಕರಿಸಿದ ಅಘಾತಕಾರಿ ಘಟನೆ (Shocking Incident) ಉಡುಪಿಯಲ್ಲಿ ನಡೆದಿದೆ. ಒಂದು ಕಡೆ ಪತಿಯನ್ನು ಕಳಕೊಂಡು, ಇನ್ನೊಂದು ಕಡೆ 20 ದಿನದ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡ ಆ ಮಹಿಳೆಯ ಬಗ್ಗೆ ಪತಿಯ ಮನೆಯವರು ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.  ಬಳಿಕ ಸಮಾಜ ಸೇವಕರೊಬ್ಬರ ಕಾಳಜಿಯಿಂದ ಮಗು ಮತ್ತು ತಾಯಿಗೆ ಉಡುಪಿ ಬಳಿಯ ನಿಟ್ಟೂರಿನ ಸಖೀ ಕೇಂದ್ರದ ಆಶ್ರಯ ಕಲ್ಪಿಸಲಾಗಿದೆ.

Ad Widget

Ad Widget

Ad Widget

Ad Widget

ಉಡುಪಿಯಲ್ಲಿ  ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದ ಬಾದಾಮಿ ಮೂಲದ ಅಯ್ಯಪ್ಪ (28) ಅವರು ಗುರುವಾರ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಗುರುವಾರ ಬೆಳಗ್ಗೆ  ಅವರು ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದರು . ಕೂಡಲೇ ಅವರನ್ನು  ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯಘಾತಕ್ಕೆ ತುತ್ತಾಗಿದ್ದ ಅವರು  ಚಿಕಿತ್ಸೆಗೆ ಸ್ಪಂದಿಸದೆ  ಮೃತಪಟ್ಟಿದ್ದರು.

Ad Widget

Ad Widget

Ad Widget alt="Ad Widget"/>

Ad Widget

Road Issue: ಸೂಕ್ತ ರಸ್ತೆ ಸೇತುವೆಯಿಲ್ಲದೆ ವಯೋವೃದ್ದೆಯನ್ನು ಬಡಿಗೆಗೆ ಕಟ್ಟಿ ಆಸ್ಪತ್ರೆಗೆ ಹೊತ್ತೊಯ್ದ ಅಘಾತಕಾರಿ ಘಟನೆಗೆ ಸಾಕ್ಷಿಯಾದ ಸುಳ್ಯ – ವಿಡಿಯೋ ವೈರಲ್‌ | ಪಿಡಿಒ ಹಾಗೂ ಮನೆಯವರು ಹೇಳಿದ್ದೆನು ?

Ad Widget

Ad Widget <> Ad Widget

ಅಯ್ಯಪ್ಪ ಎರಡು ವರ್ಷಗಳ ಹಿಂದೆ ಗಂಗಾವತಿಯ ಯುವತಿಯನ್ನು ಪ್ರೀತಿಸಿ ವಿವಾಹ (Love Marriage) ವಾಗಿದ್ದರು. ಇವರ ಮದುವೆಗೆ ಎರಡೂ ಕಡೆಯಿಂದಲೂ ವಿರೋಧವಿತ್ತು ಎನ್ನಲಾಗಿದೆ. ಅಯ್ಯಪ್ಪ ಅವರು ನಿಧನರಾದ ಸುದ್ದಿಯನ್ನು ಅವರ ಮನೆಯವರಿಗೆ ತಿಳಿಸಿದಾಗ ಮೃತದೇಹವನ್ನು ಸ್ವೀಕರಿಸಲು ಒಪ್ಪಿಸಿದ್ದಾರೆ. ಆದರೆ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗುವನ್ನು ಸ್ವೀಕರಿಸಿಲು ನಿರಾಕರಿಸಿದ್ದಾರೆ.



Ad Widget

 ಇದರಿಂದ ಅಶ್ರಯ ಇಲ್ಲದೇ ಕಂಗಲಾಗಿದ್ದ ಮಹಿಳೆ ಮತ್ತು ಮಗುವನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ನಿಟ್ಟೂರಿನ ಸಖೀ ಕೇಂದ್ರದ ಆಶ್ರಯ ತಾತ್ಕಾಲಿಕ  ಸಿಗುವಂತೆ ಮಾಡಿದ್ದಾರೆ.  

Ad Widget

Ad Widget

NHAI Recruitment 2022 : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಹಲವು ಉದ್ಯೋಗ – ನೇಮಕಾತಿಗೆ ಅರ್ಜಿ ಅಹ್ವಾನ | Job Search

ಹೆರಿಗೆಯಾಗಿ ಕೇವಲ 20 ದಿನಗಳಾಗಿದೆ. ಬಾಣಂತನದ ಆರೈಕೆಯಲ್ಲಿರಬೇಕಾದ ಮಹಿಳೆ ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಈಕೆಯ ಔಷಧೋಪಾಚಾರ ಹಾಗೂ ಸೂಕ್ತ ಆರೈಕೆ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಗಮನ ಹರಿಸಬೇಕು. ಪ್ರೇಮ ವಿವಾಹವಾಗಿರುವುದರಿಂದ ಎರಡೂ ಕಡೆಯ ಕುಟುಂಬದ ಜತೆಗೆ ಮಾತುಕತೆ ನಡೆಸಿ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗು ಬೀದಿ ಪಾಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರು ಒತ್ತಾಯಿಸಿದ್ದಾರೆ.

Nelyadi Accident : ಮರಳು ಸಾಗಾಟದ ಟಿಪ್ಪರ್ ಹಾಗೂ ಸ್ಕೂಟಿ ಮಧ್ಯೆ  ಡಿಕ್ಕಿ : ಕ್ರೇನ್‌ ನ ಸಹಾಯದಿಂದ ಟಿಪ್ಪರ್‌ ನಡಿಗೆ ಬಿದ್ದ ಮಹಿಳೆಯ ರಕ್ಷಣೆ – ವಿಡಿಯೋ ನೋಡಿ

Ad Widget
Click to comment

Leave a Reply

ನಿಧನ ವಾರ್ತೆ

Kerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು

Published

on



Ad Widget

Ad Widget

Ad Widget

Ad Widget

ಕೇರಳದ ದೇವಾಲಯ ಉತ್ಸವಗಳಲ್ಲಿ ತನ್ನ ಭವ್ಯ ನಿಲುವು ಹಾಗೂ ಸೌಮ್ಯ ಸ್ವಭಾವದಿಂದ ಲಕ್ಷಾಂತರ ಆನೆ ಪ್ರಿಯರ ಮನಗೆದ್ದಿದ್ದ ಪ್ರಸಿದ್ಧ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ಸಿಡಿಲು ಬಡಿದು ದಾರುಣವಾಗಿ ಮೃತಪಟ್ಟಿದೆ. ಎರಟ್ಟುಪೆಟ್ಟಾ ಸಮೀಪದ ಮೇಲಂಪಾರದಲ್ಲಿ ಭಾನುವಾರ ಈ ಘಟನೆ ನಡೆದಿದೆ.

Ad Widget

Ad Widget

Ad Widget

Ad Widget

ಕೊಟ್ಟಾಯಂ (ಕೇರಳ): ಕೇರಳದ ದೇವಾಲಯ ಉತ್ಸವಗಳಲ್ಲಿ ತನ್ನ ಭವ್ಯ ನಿಲುವು ಹಾಗೂ ಸೌಮ್ಯ ಸ್ವಭಾವದಿಂದ ಲಕ್ಷಾಂತರ ಆನೆ ಪ್ರಿಯರ ಮನಗೆದ್ದಿದ್ದ ಪ್ರಸಿದ್ಧ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ಸಿಡಿಲು ಬಡಿದು ದಾರುಣವಾಗಿ ಮೃತಪಟ್ಟಿದೆ. ಎರಟ್ಟುಪೆಟ್ಟಾ ಸಮೀಪದ ಮೇಲಂಪಾರದಲ್ಲಿ ಭಾನುವಾರ ಈ ಘಟನೆ ನಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಕಳೆದ ಒಂದು ತಿಂಗಳಿನಿಂದ ಮಾಲೀಕ ರಾಜೇಶ್ ಪಲ್ಲಟ್ ಅವರ ನಿವಾಸದ ಸಮೀಪದ ತಾತ್ಕಾಲಿಕ ಶೆಡ್‌ನಲ್ಲಿ ಬ್ರಹ್ಮದತ್ತನ್ ವಿಶ್ರಾಂತಿ ಪಡೆಯುತ್ತಿತ್ತು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದೆ ಎನ್ನಲಾಗಿದೆ.

Ad Widget

Ad Widget <> Ad Widget

ಸುಮಾರು 28 ವರ್ಷಗಳ ಹಿಂದೆ ಅರುಣಾಚಲ ಪ್ರದೇಶದ ದಟ್ಟ ಕಾಡುಗಳಲ್ಲಿ ಮರದ ಆನೆಯಾಗಿ ಕೆಲಸ ಮಾಡುತ್ತಿದ್ದ ಬ್ರಹ್ಮದತ್ತನ್‌ನ್ನು ಕೊಟ್ಟಾಯಂನ ಪುತುಪ್ಪಳ್ಳಿಯ ಪೋಥನ್ ವರ್ಗೀಸ್ ಹಾಗೂ ಚಾಕೊ ಸಹೋದರರು ಕೇರಳಕ್ಕೆ ಕರೆತಂದಿದ್ದರು. ಆರಂಭದಲ್ಲಿ ‘ಪುತುಪ್ಪಳ್ಳಿ ಬ್ರಹ್ಮದತ್ತನ್’ ಎಂದು ಕರೆಯಲಾಗುತ್ತಿದ್ದ ಆನೆಯನ್ನು 16 ವರ್ಷಗಳ ಹಿಂದೆ ಪಲ್ಲಟ್ ಕುಟುಂಬ ಖರೀದಿಸಿದ ಬಳಿಕ ‘ಪಲ್ಲಟ್ಟು ಬ್ರಹ್ಮದತ್ತನ್’ ಎಂದು ಮರುನಾಮಕರಣ ಮಾಡಲಾಗಿತ್ತು.



Ad Widget

10 ಅಡಿ 2 ಇಂಚು ಎತ್ತರ, ಅಗಲವಾದ ಹಣೆ ಹಾಗೂ ಉದ್ದನೆಯ ದಂತಗಳನ್ನು ಹೊಂದಿದ್ದ ಬ್ರಹ್ಮದತ್ತನ್ ಮಧ್ಯ ಕೇರಳದ ಪ್ರಮುಖ ದೇವಾಲಯ ಉತ್ಸವಗಳಲ್ಲಿ ಪ್ರಸಿದ್ಧಿ ಪಡೆದಿತ್ತು. ತ್ರಿಶೂರ್ ಪೂರಂನ ಪರಮೆಕ್ಕಾವು ದೇವಸ್ಥಾನದ ‘ರಾತ್ರಿ ಪೂರಂ’ನಲ್ಲಿ ದೇವರ ವಿಗ್ರಹವನ್ನು ಹೊತ್ತು ಸಾಗುತ್ತಿದ್ದ ಇದು, ಎಟ್ಟುಮನೂರು ಎಝರಪೊನ್ನನ ಹಾಗೂ ವೈಕಥಷ್ಟಮಿ ಉತ್ಸವಗಳ ಪ್ರಮುಖ ಆಕರ್ಷಣೆಯಾಗಿತ್ತು.

Ad Widget

Ad Widget

ತ್ರಿಶೂರ್ ಪೂರಂ ಬಳಿಕ ಗುರುವಾಯೂರು ದೇವಸ್ಥಾನಕ್ಕೆ ತೆರಳಿ ದೇವರಿಗೆ ಸೊಂಡಿಲೆತ್ತಿ ನಮಸ್ಕರಿಸುತ್ತಿದ್ದ ದೃಶ್ಯವೂ ಭಕ್ತರ ಗಮನ ಸೆಳೆಯುತ್ತಿತ್ತು. ಸಾಮಾಜಿಕ ಜಾಲತಾಣದಲ್ಲೂ ‘ಗಜಕೌಸ್ತುಭಂ ಪಲ್ಲಟ್ಟು ಬ್ರಹ್ಮದತ್ತನ್’ ಹೆಸರಿನ ಇನ್‌ಸ್ಟಾಗ್ರಾಂ ಪುಟದ ಮೂಲಕ ಆನೆಗೆ ಅಪಾರ ಅಭಿಮಾನಿಗಳಿದ್ದರು.

ಮಾವುತನೊಂದಿಗೆ ಅಪರೂಪದ ಬಾಂಧವ್ಯ

ಬ್ರಹ್ಮದತ್ತನ್ ತನ್ನ ದೀರ್ಘಕಾಲದ ಮಾವುತ ದಾಮೋದರನ್ ನಾಯರ್ ಅವರೊಂದಿಗೆ ವಿಶೇಷ ಭಾವನಾತ್ಮಕ ಬಾಂಧವ್ಯ ಹೊಂದಿತ್ತು. ಆರಂಭದಲ್ಲಿ ಮಲಯಾಳಂ ಅರ್ಥವಾಗದಿದ್ದ ಆನೆಗೆ ದಾಮೋದರನ್ ಪ್ರೀತಿಯಿಂದ ಹಿಂದಿ ಭಾಷೆಯ ಮೂಲಕ ತರಬೇತಿ ನೀಡಿದ್ದರು.

ವಡನಪ್ಪಳ್ಳಿ ಗಣೇಶಮಂಗಲಂ ಉತ್ಸವದ ವೇಳೆ ಮತ್ತೊಂದು ಆನೆ ದಾಮೋದರನ್ ನಾಯರ್ ಅವರ ಮೇಲೆ ದಾಳಿ ಮಾಡಲು ಮುಂದಾದಾಗ, ಬ್ರಹ್ಮದತ್ತನ್ ಮಧ್ಯಪ್ರವೇಶಿಸಿ ಆ ಆನೆಯನ್ನು ಓಡಿಸಿ ತನ್ನ ಮಾವುತನನ್ನು ರಕ್ಷಿಸಿತ್ತು ಎನ್ನಲಾಗಿದೆ.

2021ರ ಜೂನ್‌ನಲ್ಲಿ ದಾಮೋದರನ್ ನಾಯರ್ (74) ನಿಧನರಾದಾಗ, ಬ್ರಹ್ಮದತ್ತನ್ ಅವರ ಪಾರ್ಥಿವ ಶರೀರದ ಬಳಿ ಸೊಂಡಿಲೆತ್ತಿ ಅಂತಿಮ ನಮನ ಸಲ್ಲಿಸಿದ್ದ ದೃಶ್ಯ ಭಾರೀ ವೈರಲ್ ಆಗಿತ್ತು. ಈ ಘಟನೆ ಆನೆ ಮತ್ತು ಮಾವುತನ ನಡುವಿನ ಅಪರೂಪದ ಬಾಂಧವ್ಯಕ್ಕೆ ಸಾಕ್ಷಿಯಾಗಿತ್ತು.

ಇದೀಗ ಬ್ರಹ್ಮದತ್ತನ್ ನಿಧನದ ಸುದ್ದಿ ತಿಳಿದು ಸಾವಿರಾರು ಅಭಿಮಾನಿಗಳು ಹಾಗೂ ಸ್ಥಳೀಯರು ಮೇಲಂಪಾರಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಗಜರಾಜನ ಅಕಾಲಿಕ ನಿಧನಕ್ಕೆ ಕೇರಳದ ದೇವಸ್ವಂ ಮಂಡಳಿ ಹಾಗೂ ಉತ್ಸವ ಪ್ರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಶಾಂತ ಸ್ವಭಾವದ ಬ್ರಹ್ಮದತ್ತನ್ ಜೊತೆ ಮಾವುತರು ಸಾಮಾನ್ಯವಾಗಿ ಅಂಕುಶ ಬಳಸುತ್ತಿರಲಿಲ್ಲ. ಜಾತ್ರೆ ಹಾಗೂ ಉತ್ಸವಗಳ ಸಂದರ್ಭಗಳಲ್ಲಿ ಮಾತ್ರ ನೆಪಕ್ಕಾಗಿ ಅಂಕುಶವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದರು ಎನ್ನಲಾಗಿದೆ. ಗಾಂಭೀರ್ಯದ ನಡೆ ಹಾಗೂ ಸೌಮ್ಯ ಸ್ವಭಾವದಿಂದ ‘ಗಜರಾಜ’ ಎಂಬ ಹೆಸರಿಗೆ ಅನ್ವರ್ಥವಾಗಿದ್ದ ಬ್ರಹ್ಮದತ್ತನ್‌ನ ದುರಂತ ಅಂತ್ಯ ಆನೆ ಪ್ರಿಯರಲ್ಲಿ ತೀವ್ರ ನೋವು ಮೂಡಿಸಿದೆ.

Ad Widget
Continue Reading

ನಿಧನ ವಾರ್ತೆ

Puttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು

Published

on



Ad Widget

Ad Widget

Ad Widget

Ad Widget

ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರ್ಯಾಪು ಗ್ರಾಮದ ಕಾರ್ಪಾಡಿ ದೇವಸ್ಥಾನದ ದ್ವಾರದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕುರಿಯ ಮುಲಾರು ನಿವಾಸಿ, ಮರದ ಕೆಲಸ ನಿರ್ವಹಿಸುತ್ತಿದ್ದ ಸುಂದರ ಆಚಾರ್ಯ ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರ್ಯಾಪು ಗ್ರಾಮದ ಕಾರ್ಪಾಡಿ ದೇವಸ್ಥಾನದ ದ್ವಾರದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಮೃತರನ್ನು ಕುರಿಯ ಮುಲಾರು ನಿವಾಸಿ, ಮರದ ಕೆಲಸ ನಿರ್ವಹಿಸುತ್ತಿದ್ದ ಸುಂದರ ಆಚಾರ್ಯ ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಮೂರು ದಿನಗಳ ಹಿಂದೆ ಸುಂದರ ಆಚಾರ್ಯ ಅವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಕಾರ್ಪಾಡಿ ದೇವಸ್ಥಾನದ ದ್ವಾರದ ಬಳಿ ಅಪರಿಚಿತ ವಾಹನವೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ವಾಹನ ನಿಲ್ಲಿಸದೆ ಪರಾರಿಯಾಗಿತ್ತು.



Ad Widget

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುಂದರ ಆಚಾರ್ಯ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅ.6ರಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

Ad Widget

Ad Widget

ಮೃತರು ಪತ್ನಿ ಶಶಿಕಲಾ, ಪುತ್ರರಾದ ಹರ್ಷಿತ್ ಹಾಗೂ ರಕ್ಷಿತ್, ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ.

Ad Widget
Continue Reading

ನಿಧನ ವಾರ್ತೆ

Dead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ

Published

on



Ad Widget

Ad Widget

Ad Widget

Ad Widget

ಮಂಗಳೂರಿನ ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಬೆಳ್ತಂಗಡಿಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್‌ ಎಸ್. ಕುಂಬಾರ (14) ಅವರ ಮೃತದೇಹ ಶೋಧ ಕಾರ್ಯಾಚರಣೆ ವೇಳೆ ಅ.6ರಂದು ಸಂಜೆ ಪತ್ತೆಯಾಗಿದೆ.

Ad Widget

Ad Widget

Ad Widget

Ad Widget

ಬೆಳ್ತಂಗಡಿ: ಮಂಗಳೂರಿನ ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಬೆಳ್ತಂಗಡಿಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್‌ ಎಸ್. ಕುಂಬಾರ (14) ಅವರ ಮೃತದೇಹ ಶೋಧ ಕಾರ್ಯಾಚರಣೆ ವೇಳೆ ಅ.6ರಂದು ಸಂಜೆ ಪತ್ತೆಯಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಬೆಳ್ತಂಗಡಿ ತಾಲೂಕಿನ ರಂಕದಗುತ್ತು, ಕಸಬಾ ಗ್ರಾಮದ ಮೂಲದ ಶ್ರೇಯಸ್‌ ಅ.4ರಂದು ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿಗೆ ತೆರಳಿದ್ದರು. ನಾಲ್ವರು ಅಪ್ರಾಪ್ತ ಸ್ನೇಹಿತರೊಂದಿಗೆ ಬೆಳಗ್ಗೆ ಸುಮಾರು 10 ಗಂಟೆಗೆ ಮಂಗಳೂರಿಗೆ ಬಂದು ಹುಲಿ ವೇಷದ ತರಬೇತಿಯಲ್ಲಿ ಭಾಗವಹಿಸಿದ್ದರು.

Ad Widget

Ad Widget <> Ad Widget

ತರಬೇತಿ ಮುಗಿದ ಬಳಿಕ ಶ್ರೇಯಸ್‌ ಹಾಗೂ ಸ್ನೇಹಿತರು ಸ್ಟೇಟ್‌ ಬ್ಯಾಂಕ್‌ನಿಂದ ಪಣಂಬೂರು ಬೀಚ್‌ಗೆ ತೆರಳಿದ್ದರು. ಸಂಜೆ ಸುಮಾರು 4.30ರಿಂದ 5 ಗಂಟೆಯ ವೇಳೆಗೆ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿದ್ದು, ಸುಮಾರು 6 ಗಂಟೆಗೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಶ್ರೇಯಸ್‌ ನೀರಿನಲ್ಲಿ ಮುಳುಗಿದ್ದಾರೆ. ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು.



Ad Widget

ಶ್ರೇಯಸ್‌ ನೀರು ಪಾಲಾದ ವಿಚಾರವನ್ನು ಆತನ ಅಪ್ರಾಪ್ತ ಸ್ನೇಹಿತರು ಭಯಗೊಂಡು ಮನೆಯವರಿಗೆ ತಿಳಿಸಿರಲಿಲ್ಲ. ಅ.5ರಂದು ಬೆಳಗ್ಗೆ ಈ ವಿಚಾರ ಶ್ರೇಯಸ್‌ ಕುಟುಂಬಸ್ಥರಿಗೆ ತಿಳಿದುಬಂದಿದೆ.

Ad Widget

Ad Widget

ಬಾಲಕನ ತಂದೆ ಶೇಷಪ್ಪ ನೀಡಿದ ದೂರಿನ ಆಧಾರದಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಬಾಲಕನ ಪತ್ತೆಗಾಗಿ ಕೋಸ್ಟ್‌ ಗಾರ್ಡ್‌, ಕರಾವಳಿ ಕಾವಲು ಪಡೆ ಹಾಗೂ ಸಮುದ್ರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿತ್ತು. ಲೈಫ್‌ಗಾರ್ಡ್‌ಗಳು, ಮುಳುಗು ತಜ್ಞರು ಹಾಗೂ ಸ್ಥಳೀಯ ಮೀನುಗಾರರ ಸಹಕಾರದಿಂದ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading