Connect with us

ಸುಳ್ಯ

Kedambadi Ramayya Gowda | ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ 20 ವರ್ಷದ ಮೊದಲೇ ತುಳುನಾಡಿಗೆ ಸಿಕ್ಕಿತು 13 ದಿನ ಸ್ವಾತಂತ್ರ್ಯ..! ಹೋರಾಟಕ್ಕೆ ಕುದುರೆ, ಫಿರಂಗಿ ಬಲ ಕೊಟ್ಟರು ಧರ್ಮಸ್ಥಳದ ಆಗಿನ ಧರ್ಮಾಧಿಕಾರಿಗಳು – ಹೋರಾಟದ ಹಿಂದಿನ ಶಕ್ತಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಆ.29 ರಂದು ಆಂಧ್ರದಿಂದ ಮಂಗಳೂರಿಗೆ ಪುರಪ್ರವೇಶ

Published

on

Ad Widget

Ad Widget

Ad Widget

Ad Widget

ಮಂಗಳೂರು: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ (First War Of Indian Independence) 20 ವರ್ಷ ಮೊದಲೇ ದಕ್ಷಿಣ ಕನ್ನಡ ಜಿಲ್ಲೆಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ ಮಹಾನ್ ನಾಯಕ ಸುಳ್ಯದ ಕೆದಂಬಾಡಿ ರಾಮಯ್ಯ ಗೌಡರ (Kedambadi Ramayya Gowda) ಕಂಚಿನ ಪ್ರತಿಮೆ ಆಂಧ್ರಪ್ರದೇಶದಲ್ಲಿ ತಯಾರಾಗುತಿದ್ದು, ಮಂಗಳೂರಿನ (Mangalore) ‘ಬಾವುಟ’ಗುಡ್ಡೆಯಲ್ಲಿ ಪ್ರತಿಷ್ಠಾಪನೆಯಾಗಲಿದೆ. ಇವರು ಬ್ರಿಟೀಷರೊಂದಿಗೆ ಯಾವಾ ರೀತಿ ಹೋರಾಡಿದರು? ತುಳುನಾಡನ್ನು ಎಷ್ಟು ದಿನ ಬ್ರಿಟೀಷರ ದಾಸ್ಯದಿಂದ ಕೊನೆಗೊಳಿಸಿದರು? ಇವರಿಗೆ ಬ್ರಿಟೀಷರಿಗೆ ಕೊಟ್ಟ ಶಿಕ್ಷೆ ಏನೂ ಇಲ್ಲಿದೆ ವಿವರ

Ad Widget

Ad Widget

Ad Widget

Ad Widget

ರಾಮಯ್ಯ ಗೌಡರ ಪುತ್ಥಳಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಕಂಚಿನಿಂದ ತಯಾರಾಗಿದ್ದು ಇದರ ಎತ್ತರ ಸುಮಾರು 11 ಅಡಿ ಇದ್ದು ಚಿನ್ನದ ಬಣ್ಣದಿಂದ ಕೂಡಿದೆ.

Ad Widget

Ad Widget alt="Ad Widget"/>

Ad Widget

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ 20 ವರ್ಷ ಮೊದಲೇ ಬ್ರಿಟಿಷರ‌ ದಾಸ್ಯದ ಪದ್ಧತಿಯನ್ನು ವಿರೋಧಿಸಿ, ಸ್ವಾತಂತ್ರ್ಯದ ರಣ ಕಹಳೆ ಮೊಳಗಿಸಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸುಳ್ಯದ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪಿಸಲು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯು ಸರಕಾರಕ್ಕೆ ಮನವಿ ಮಾಡಿಕೊಂಡ ಮೇರೆಗೆ ಸರಕಾರದಿಂದ ಅನುಮೋದನೆ ದೊರೆತಿದ್ದು ಇದೀಗ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪುತ್ಥಳಿ ಅವರ ಹುಟ್ಟೂರು ಸುಳ್ಯಕ್ಕೆ ಆಗಸ್ಟ್ 29ರಂದು ಬರಲಿದೆ.

Ad Widget

Ad Widget <> Ad Widget

ಸುಳ್ಯದಿಂದ ಮಂಗಳೂರಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ.
ಸಕಲ ಕಾರ್ಯಕ್ರಮಗಳ ಬಳಿಕ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಅನಾವರಣಗೊಳ್ಳಲಿದೆ.

ಆ.27ರಂದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರಕ್ಕೆ ತಲುಪುವ ಪ್ರತಿಮೆ ಅಲ್ಲಿಂದ ಆಗಸ್ಟ್ 28 ರಂದು ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಚಾಲನೆ ದೊರೆತು ಸಂಜೆ ವೇಳೆ ಮಡಿಕೇರಿ ತಲುಪಲಿದೆ.

Ad Widget

Ad Widget

ಆಗಸ್ಟ್ 29ರಂದು ಬೆಳಿಗ್ಗೆ 9 ಗಂಟೆಗೆ ಸಂಪಾಜೆ ಗೇಟಿನ ಬಳಿಗೆ ಬರಲಿದ್ದು ಪ್ರತಿಮೆ ಇರುವ ವಾಹನವನ್ನು ಬಹಳ ಅದ್ದೂರಿಯಿಂದ ಸ್ವಾಗತ ಮಾಡಲು ಬೃಹತ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮಾರ್ಗದುದ್ದಕ್ಕೂ ಬೃಹತ್ ವಾಹನ ಜಾಥಾ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಸಚಿವರು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಹಾಗೂ ಸಾರ್ವಜನಿಕರು ಈ ವೇಳೆ ಅಲ್ಲಿ ಜೊತೆಯಾಗಿ ಸ್ವಾಗತ ಕೋರಲಿದ್ದಾರೆ. ಬಳಿಕ ಸುಮಾರು 300ಕ್ಕೂ ಮಿಕ್ಕ ವಿವಿಧ ವಾಹನಗಳ ಜಾಥಾದ ಮೂಲಕ ಪ್ರತಿಮೆ ಸುಳ್ಯದತ್ತ ಬರಲಿದೆ.

ಪ್ರತಿಮೆಯ ವಾಹನ ಸುಳ್ಯಕ್ಕೆ ಬರುತ್ತಿದ್ದಂತೆ ಗಾಂಧಿನಗರದ ಕಾಯರ್ತೋಡಿ ದೇವಸ್ಥಾನಕ್ಕೆ ತೆರಳುವ ಕೇಂದ್ರದಲ್ಲಿ ವಿಶೇಷವಾಗಿ ಉಬರಡ್ಕ ಮಿತ್ತೂರು ಜನತೆ ಹಾಗೂ ಕೆದಂಬಾಡಿ ಮನೆತನದವರಿಂದ ವಿಶೇಷ ಸ್ವಾಗತ ನೀಡುವ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮುನ್ನ ಅರಂತೋಡು, ಪೆರಾಜೆ ಕೇಂದ್ರಗಳಲ್ಲಿ ಪುಷ್ಪಾರ್ಚನೆ ಮಾಡಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ.

ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ನೆಹರು ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿಗಳಿಂದ ಇತ್ತೀಚಿಗೆ ರಾಜ್ಯ ಪ್ರಶಸ್ತಿ ಪಡೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಕಿರು ನಾಟಕ ಪ್ರದರ್ಶನ ನಡೆಯಲಿದೆ.

ಇದಾದ ಬಳಿಕ ಪೈಚಾರು, ಜಾಲ್ಸೂರು, ಕನಕ ಮಜಲು ಮಾರ್ಗದ ಮೂಲಕ ಪ್ರತಿಮೆ ಪುತ್ತೂರಿಗೆ ತೆರಳಲಿದೆ. ಬಳಿಕ ಮುಂದೆ ಸಾಗಿ, ಮಾಣಿ, ಬಿಸಿ ರೋಡ್, ಫರಂಗಿಪೇಟೆ ಮೂಲಕ ಸಂಜೆಯ ವೇಳೆಗೆ ಮಂಗಳೂರಿನ ಬಾವುಟ ಗುಡ್ಡೆಗೆ ಪ್ರತಿಮೆ ಆಗಮಿಸಲಿದೆ.

ಮಂಗಳೂರಿನ ಬಾವುಟಗುಡ್ಡೆಗೆ ಪ್ರತಿಮೆ ತಲುಪುತ್ತಿದ್ದಂತೆ ಸಹಸ್ರಾರು ಸಾರ್ವಜನಿಕರ ಸಮ್ಮುಖದಲ್ಲಿ ರಾಮಯ್ಯ ಗೌಡರವರ ಕಂಚಿನ ಪುತ್ಥಳಿಗೆ ವಿಜೃಂಭಣೆಯ ಸ್ವಾಗತ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯು ರಾಮಯ್ಯ ಗೌಡರವರ ಕಂಚಿನ ಪ್ರತಿಮೆಯನ್ನು ಬಾವುಟಗುಡ್ಡೆಯಲ್ಲಿ ಸ್ಥಾಪಿಸಲು ಅನುದಾನ ಮಂಜೂರು ಮಾಡಿ ಪ್ರತಿಮೆ ನಿರ್ಮಾಣ ಕಾರ್ಯ ಕೈಗೊಂಡಿದೆ. ಈಗಾಗಲೇ ಪ್ರತಿಮೆ ನಿರ್ಮಾಣ ಸ್ಥಳದ ಅಂಗಣದ ಮತ್ತು ಪ್ರತಿಮೆಯ ಅಡಿಪಾಯದ ಕಾಮಗಾರಿ ಪೂರ್ಣಗೊಂಡಿದೆ.
ಈ ಪ್ರತಿಮೆಯು ಅಕ್ಟೋಬರ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಮುಖ್ಯಮಂತ್ರಿ, ಇನ್ನಿತರ ಸಚಿವರು ಹಾಗೂ ಶಾಸಕರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ಮಂತ್ರಿಗಳನ್ನು ಕರೆತರುವ ಪ್ರಯತ್ನ ನಡೆಯುತ್ತಿದ್ದು ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಂದಿಲ್ಲ ಎಂದು ಕೆದಂಬಾಡಿ ರಾಮಯ್ಯ ಗೌಡರವರ ಸ್ಮಾರಕ ರಚನೆಯ ಸಮಿತಿಯ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ತಿಳಿಸಿದ್ದಾರೆ.

ಅಲ್ಲದೇ ಈ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದ ಯಶಸ್ಸಿಗೆ ಮಂಗಳೂರಿನ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಕೆದಂಬಾಡಿ ರಾಮಯ್ಯ ಗೌಡರವರ ಸ್ಮಾರಕ ರಚನೆಯ ಸಮಿತಿಯ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಹಾಗೂ ಎಲ್ಲಾ ಪದಾಧಿಕಾರಿಗಳು ಅವಿರತ ಶ್ರಮಿಸುತ್ತಿದ್ದಾರೆ.

ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಪರಾಕ್ರಮದ ಹಿನ್ನೋಟ:

1837ರಲ್ಲಿ ತುಳುನಾಡಿನ ವೀರ ರೈತರು ಬ್ರಿಟಿಷ್ ಕಂಪನಿಯ ರೈತ ವಿರೋಧಿ ಕಾರ್ಯಗಳ ವಿರುದ್ಧ ಹೋರಾಟ ನಡೆಸಿ ಬ್ರಿಟಿಷ್ ಸೈನ್ಯವನ್ನು ಹಿಮ್ಮೆಟ್ಟಿಸಿ ಸಮಸ್ತ ಕೆನರಾ ಜಿಲ್ಲೆಯ ಆಡಳಿತದ ಚುಕ್ಕಾಣಿ ಹಿಡಿದ ಈ ಹೋರಾಟ ನಮ್ಮ ಜಿಲ್ಲೆಯ ಜನ ಆತ್ಮಭಿಮಾನದಿಂದ ಬೀಗಬೇಕಾದ ಹೆಮ್ಮೆಯ ವಿಚಾರವಾಗಿದೆ. ಈ ಹೋರಾಟದ ಮುಖ್ಯ ರೂವಾರಿ ಕೆದಂಬಾಡಿಯ ರಾಮಯ್ಯ ಗೌಡರು. ಈ ಐತಿಹಾಸಿಕ ಹೋರಾಟ ನಮ್ಮ ಪವಿತ್ರ ನೆಲದಲ್ಲಿ ನಡೆದಿದ್ದು ಸಮಸ್ತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಬ್ಬರು ನೆನಪಿಡುವುದರ ಮೂಲಕ ಅವರ ತ್ಯಾಗ, ಬಲಿದಾನಕ್ಕೆ ನಾವು ಸಲ್ಲಿಸುವ ಕೃತಜ್ಞತೆಯಾಗಿದೆ.

ಕೆದಂಬಾಡಿ ರಾಮಯ್ಯ ಗೌಡರು ಒಬ್ಬ ಶ್ರೇಷ್ಠ ಸಂಘಟಕರಾಗಿದ್ದು ತನ್ನ ಅಸಾಧಾರಣ ಮತ್ತು ಅತ್ಯದ್ಭುತ ನಾಯಕತ್ವದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ 13 ದಿನಗಳಷ್ಟು ಕಾಲ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟು ತನ್ನ ಜೀವವನ್ನು ಅರ್ಪಣೆ ಮಾಡಿದ ವೀರೋದ್ಧಾತ ನಾಯಕರಾಗಿದ್ದರು. ಈ 13 ದಿನಗಳ ಆಡಳಿತ ಅವಧಿಯನ್ನು ಸ್ವತಂತ್ರ ಸ್ಥಾಪಿತ ಸರಕಾರ ಎಂದು ಉಲ್ಲೇಖಿಸಲಾಗಿದೆ.

ಈ ಹೋರಾಟದ 20 ವರ್ಷಗಳ ನಂತರ ಜರಗಿದ 1857 ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಬಿಂಬಿಸಿದ್ದು, 1837ರ ಹೋರಾಟ ಇತಿಹಾಸದ ಕಡೆಗಣನೆಗೆ ಒಳಗಾಗಿದೆ. ಪ್ರಮುಖವಾಗಿ ಹೋರಾಟ ಪ್ರಾರಂಭವಾಗಿರುವುದು ರೈತರ ಬೆಲೆಗೆ ಅತಿಯಾಗಿ ತೆರಿಗೆ ಹೇರಿರುವುದರಿಂದ 1837ರ ಮಾರ್ಚ್ 31ರಂದು ಬ್ರಿಟಿಷ್‌ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಹೋರಾಟದ ಮಹಾನ್ ನಾಯಕ ಕೆದಂಬಾಡಿ ರಾಮಯ್ಯ ಗೌಡರಿಗೆ ಸೇರಿದ ಸುಳ್ಯದ ಮದುವೆ ಗದ್ದೆ ಎಂಬ ಸ್ಥಳದಲ್ಲಿ ಸುಮಾರು 2000ಕ್ಕಿಂತ ಹೆಚ್ಚು ರೈತಾಪಿ ಜನರನ್ನು ಸಂಘಟಿಸಿದ್ದು ಅದಕ್ಕೆ ಪೂರ್ವ ತಯಾರಿಯಾಗಿ ಸುಮಾರು 1500 ಖಡ್ಗವನ್ನು ಕೊಡ್ಲಿಪೇಟೆಯಿಂದ ತರಿಸಿದ್ದರು.

ಮದುವೆ ಗದ್ದೆಯಿಂದ ಹೊರಟ ದಂಡು ಬೆಳ್ಳಾರೆಯತ್ತ ಸಾಗುತ್ತದೆ. ಅಲ್ಲಿ ಸೈನ್ಯವು ಬ್ರಿಟಿಷ್ ಕಂಪೆನಿಯ ಖಜಾನೆಯನ್ನು ವಶಪಡಿಸಿ ನಾಲ್ಕು ತಂಡಗಳಾಗಿ ವಿಂಗಡಿಸಿ ಬೇರೆ ಬೇರೆ ಪ್ರದೇಶಕ್ಕೆ ಕಳುಹಿಸಲಾಗುತ್ತದೆ. ರಾಮಯ್ಯ ಗೌಡರ ನೇತೃತ್ವದ ಹೋರಾಟಗಾರರ ಮುಖ್ಯ ದಂಡು ಪುತ್ತೂರನ್ನು ವಶಪಡಿಸಿ ಮಂಗಳೂರಿನತ್ತ ಮುನ್ನಡೆಯುತ್ತದೆ.

ಪುತ್ತೂರಿನಲ್ಲಿ ರೈತ ಹೋರಾಟಗಾರರ ಬೃಹತ್‌ ದಂಡನ್ನು ಕಣ್ಣಾರೆ ನೋಡಿದ ಕ್ಯಾಪ್ಟನ್ ಲೆವಿನ್ ಯುದ್ಧ ನಡೆಸಲು ಎದೆಗಾರಿಕೆಯಿಲ್ಲದೆ ಮಂಗಳೂರನ್ನು ರಕ್ಷಿಸುವುದು ಮುಖ್ಯವೆಂದು ಬಗೆದು ಯಾವ ಪ್ರತಿರೋಧ ತೋರದೆ ಮಂಗಳೂರಿಗೆ ಹಿಂತಿರುಗಿದರು.
ಹೋರಾಟದ ಸೈನ್ಯವು ಮಂಗಳೂರಿನ ಕಡೆ ಸಾಗುತ್ತಿದ್ದಂತೆ ಅದಕ್ಕೆ ದಾರಿಯುದ್ದಕ್ಕೂ ಆಪಾರವಾದ ಜನ ಬೆಂಬಲ ಸಿಕ್ಕಿತು . ದಂಡಿನ ಗಾತ್ರ ವಿಶಾಲವಾಗಿ ಹಿಗ್ಗುತ್ತದೆ.

ಧರ್ಮಸ್ಥಳದ ಆಗಿನ ಧರ್ಮಾಧಿಕಾರಿ ಮಂಜಯ್ಯ ಹೆಗ್ಗಡೆ ಫಿರಂಗಿ, ಕುದುರೆ ಹಾಗೂ ಅಪಾರ ಪ್ರಮಾಣದ ಹಣವನ್ನು ನೀಡುತ್ತಾರೆ. ನಂದಾವರದಲ್ಲಿದ್ದ ಬಂಗಾಡಿ ಅರಸು ಮನೆತನದ ಲಕ್ಷಪ್ಪ ಬಂಗರಸ ದೊಡ್ಡ ಸಂಖ್ಯೆಯ ಯೋಧರೊಂದಿಗೆ ನೇರವಾಗಿ ಯುದ್ಧಕ್ಷೇತ್ರಕ್ಕೆ ಧಾವಿಸುತ್ತಾರೆ. ಉಪ್ಪಿನಂಗಡಿಯಲ್ಲಿ ಕಂಪನಿಯ ಉದ್ಯೋಗಿ ಮಂಜ ದಂಡಿಗೆ ಜನರನ್ನು ಜಮಾವಣೆಗೊಳಿಸುತ್ತಾರೆ.
ಹೋರಾಟದೊಂದಿಗೆ ಮಂಗಳೂರಿಗೆ ಆಗಮಿಸಿದ ರೈತ ಹೋರಾಟಗಾರರು ಬ್ರಿಟಿಷ್ ಸೇನೆಗೆ ಬಹಳ ದೊಡ್ಡ ಪ್ರತಿರೋಧ ಒಡ್ಡಿದರು.

ರಾತ್ರೋರಾತ್ರಿ ಹೆದರಿದ ಬ್ರಿಟಿಷ್ ಅಧಿಕಾರಿಗಳು ಕಣ್ಣಿನೂರಿಗೆ ಪಲಾಯನ ಮಾಡಿದರು. ಏಪ್ರಿಲ್ 5ರಂದು ಮಂಗಳೂರನ್ನು ವಶಪಡಿಸಿದ ಹೋರಾಟಗಾರರು ಬಾವುಟ ಗುಡ್ಡೆಯ ಬ್ರಿಟಿಷ್ ನಿಯಂತ್ರಣದ ಸ್ಥಳವಾದ ಲೈಟ್ ಹೌಸ್ ಪ್ರದೇಶದ ಬ್ರಿಟಿಷ್ ಬಂಗಲೆಗಳಿಗೆ ಬೆಂಕಿ ಹಚ್ಚಿದರು. ಅಲ್ಲಿನ ಈಸ್ಟ್ ಇಂಡಿಯಾ ಕಂಪನಿಯ ಬಾವುಟವನ್ನು ಕಿತ್ತೆಸೆದು ರಾಜ ಲಾಂಛನದ ಬಾವುಟವನ್ನು ಹಾರಿಸಿ ಮಂಗಳೂರು ಸ್ವತಂತ್ರಗೊಂಡ ಬಗ್ಗೆ ಸಂಭ್ರಮವನ್ನು ಆಚರಿಸಿದ್ದರು ಹಾಗೂ 13 ದಿನಗಳ ಕಾಲ ರಾಜ್ಯಭಾರ ಮಾಡಿದ್ದರು. ಆದ್ದರಿಂದ ಈ ಪ್ರದೇಶಕ್ಕೆ ಬಾವುಟಗುಡ್ಡೆ ಎಂಬ ಹೆಸರು ಬಂದಿದೆ.


ರಾಮಯ್ಯಗೌಡ ನೇತೃತ್ವದಲ್ಲಿ ಹೋರಾಟಗಾರರು ತಮ್ಮದೊಂದು ಸ್ಥಾಪಿತ ಸರಕಾರವೆಂದು ಬಹಳ ಪ್ರಬುದ್ಧವಾಗಿ ನಡೆದುಕೊಂಡರು. ಮಂಗಳೂರಿನ ನಿವಾಸಿಗಳಿಗೆ ಸಾಹುಕಾರರಿಗೆ 5 ನೇ ಏಪ್ರಿಲ್ 1837 ರಂದು ಪತ್ರ ಬರೆದು ಎಲ್ಲರೂ ಸ್ಥಾಪಿತ ಸರಕಾರದ ಜೊತೆ ಕೈ ಜೋಡಿಸಬೇಕೆಂದು ಕರೆ ನೀಡಲಾಯಿತು. ಹಾಗೆಯೇ ಈ ಭಾಗದ ಜನರಿಗೆ ಅನುಕೂಲವಾಗುವಂತೆ ತೆರಿಗೆ ಮನ್ನಾ ಮಾಡಲಾಯಿತು. 6ನೇ ದಿವಸ ಮಂಗಳೂರಿನ ಸಹಾಯಕ್ಕೆ ಮುಂಬಯಿ, ಗೋವಾ, ಕಣ್ಣನೂರುನಿಂದ ಬಂದ ಸುಸಜ್ಜಿತ ಬ್ರಿಟಿಷ್ ಸೈನ್ಯಕ್ಕೂ, ರೈತ ಹೋರಾಟಗಾರರಿಗೂ ರಕ್ತ ಸಿಕ್ತ ಹೋರಾಟ ನಡೆದು ಹೋರಾಟಗಾರರಿಗೆ ಮಂಗಳೂರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಮಯ್ಯಗೌಡರು ಸೇರಿದಂತೆ ಪ್ರಮುಖ ನಾಯಕರುಗಳು ಬ್ರಿಟಿಷರ ಕೈವಶರಾದರು. ಒಟ್ಟು 1115 ಜನರನ್ನು ಬಂಧಿಸಲಾಯಿತು.


ಮಂಗಳೂರಿನಲ್ಲಿ ಕಲ್ಯಾಣ ಸ್ವಾಮಿ (ಪುಟ್ಟ ಬಸಪ್ಪ) ಉಪ್ಪಿನಂಗಡಿ ಮಂಜ, ಲಕ್ಷ್ಮಪ್ಪ ಬಂಗರಸ ಬಂಟ ಆದಿಯಾಗಿ ಹಲವಾರು ಮುಖಂಡರುಗಳನ್ನು ಅರಳಿ ಮರಕ್ಕೆ ನೇಣುಹಾಕಿ ಕೆಲವು ದಿನ ಅಲ್ಲೇ ಇರಿಸಿ ಹದ್ದುಗಳಿಗೆ ತಿನ್ನಲು ಬಿಟ್ಟ ಭೀಕರ ಘಟನೆ ನಡೆದಿದ್ದು, ಆದ್ದರಿಂದ ಈ ಸ್ಥಳಕ್ಕೆ ಭೀಕರವಾದ ಕಟ್ಟೆ ಮುಂದೆ ಬಿಕರ್ನಕಟ್ಟೆ ಎಂದು ಹೆಸರಿಸಲಾಯಿತು.

ರಾಜವೇಷದೊಂದಿಗೆ ಹೋರಾಟದಲ್ಲಿ ರಾಜನಾಗಿ ಬಂದ ಪುಟ್ಟಬಸಪ್ಪ (ಕಲ್ಯಾಣಸ್ವಾಮಿ) ಬಿಕರ್ನಕಟ್ಟೆ ಯಲ್ಲಿ ಗಲ್ಲು ಶಿಕ್ಷೆಗೆ ಒಳಗದಾಗ ನಾನು ಕೆದಂಬಾಡಿ ರಾಮಯ್ಯ ಗೌಡರ ನಿರ್ದೇಶನದಂತೆ ಈ ಹೋರಾಟದಲ್ಲಿ ರಾಜವೇಷವನ್ನು ಧರಿಸಿದೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚಿರುತ್ತಾರೆ, ಆದರೂ ಗಲ್ಲು ಶಿಕ್ಷೆಗೆ ಒಳಗಾಗುತ್ತಾರೆ.
ಬ್ರಿಟಿಷರು ಬಹಳ ಜಾಣತನದಿಂದ ಹೋರಾಟವನ್ನು ಸಂಪೂರ್ಣವಾಗಿ ಮಟ್ಟಹಾಕಿ ಸಮಾಧಿ ಮಾಡಿದಂತೆ ಕೆದಂಬಾಡಿ ರಾಮಯ್ಯ ಗೌಡ, ಅವರ ಮಗ ಸಣ್ಣಯ್ಯ ಗೌಡ, ಚೆಟ್ಟಿ ಕುಡಿಯ, ಕುಕ್ಕುನೂರು, ಚೆನ್ನಯ್ಯ, ಕೂಜುಗೋಡು ಮಲ್ಲಪ್ಪ ಗೌಡ, ಬೀರಣ್ಣ ಬಂಟ, ಕಾರಕಾರ ಸುಬೇದಾ‌ ಕೃಷ್ಣಯ್ಯ, ಗುಡ್ಡೆಮನೆ ತಮ್ಮಯ್ಯ ಮೊದಲಾದವರನ್ನು ಪ್ರಾಣಿಗಳಂತೆ ಬೋನಿನಲ್ಲಿ ತುಂಬಿಸಿ ಸಿಂಗಾಪುರ, ಬರ್ಮಾ ಮುಂತಾದ ಸಮುದ್ರದಾಚೆಗಿನ ಊರುಗಳಿಗೆ ಸಾಗಹಾಕಿ ಜೀವನದುದ್ದಕ್ಕೂ ಕೈಕಾಲುಗಳಿಗೆ ಕೋಳ ಮತ್ತು ಸಂಕೋಲೆ ತೊಡಿಸಿ ಘೋರವಾದ ಶಿಕ್ಷೆಯನ್ನು ಕೊಟ್ಟಿದ್ದರು.


ಉಳುವಾರು ಕೃಷ್ಣ, ಗೌಡಳ್ಳಿ ಸುಬ್ಬಷ್ಟು, ಕುಟ್ಟಿ ಸುಬ್ಬ, ಶೇಕ್, ದೇರಾಜೆ ಬಚ್ಚ ಪಟೇಲ, ನೆಡುಂಪಳ್ಳಿ ದೇವಪ್ಪ ರೈ, ಗುಂಡ ಸುಬ್ಬಪ್ಪ ಮತ್ತು ಇತರ ಕೆಲವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಇನ್ನು ಹಲವು ಮಂದಿಗೆ 14 ವರ್ಷ, 10 ವರ್ಷ ಮತ್ತು 7 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ. ಮಾನ್ಯದ ರಂಗಪ್ಪ ರಣರಂಗದಲ್ಲಿ ಮೃತ ಪಟ್ಟರೆ, ಚರಂಜಿ ಸುಬ್ರಾಯ ಗಾಯಾಳುವಾಗಿ ಸೆರೆ ಸಿಕ್ಕಾಗ ಜೈಲಿನಲ್ಲಿ ಸಾವನ್ನಪ್ಪುತ್ತಾರೆ, ಮಹಾನ್ ಸಂಚುಕೋರ ಹುಲಿಕಂದ ನಂಜಯ್ಯನ ಬಗ್ಗೆ ಯಾವುದೇ ಸುಳಿವು ಸಿಗುವುದಿಲ್ಲ.


ತುಳುನಾಡಿನ ಹಳ್ಳಿಯಲ್ಲಿ ಹುಟ್ಟಿ ಸಾಮಾಜ್ಯಶಾಹಿ ಬ್ರಿಟಿಷರ ವಿರುದ್ಧ ಸಿಡಿದ್ದೆದ್ದು, ಇಂದಿನ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪೂರ್ಣವಾಗಿ ಮತ್ತು ಈಗಿನ ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಭಾಗಶಃ ಗೆದ್ದು, ತನ್ನ ಅಸಾಧಾರಣ ಮತ್ತು ಅತ್ಯದ್ಭುತ ಮುಂದಾಳುತನದ ಮೂಲಕ ಈ ಭೂಪ್ರದೇಶಕ್ಕೆ ಎರಡು ವಾರಗಳಷ್ಟು ಕಾಲ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಧೀರೋದಾತ್ತ ನಾಯಕ ಕೆದಂಬಾಡಿ ರಾಮಯ್ಯ ಗೌಡ ಮತ್ತವರ ಕುಟುಂಬವರ್ಗ ಕೊನೆಗೆ ಯಾವುದೋ ಗುರುತು ಪರಿಚಯವಿಲ್ಲದ ಕಡಲಿನಾಚೆಗಿನ ಪರದೇಶದಲ್ಲಿ ತಮ್ಮ ಜೀವನದ ಅಂತ್ಯವನ್ನು ಕಾಣುವಂತಾಯಿತು. ಇವರುಗಳಲ್ಲದೆ ಇನ್ನೂ ಹಲವು ಜನ ದಾಸ್ಯದ ಸಂಕೊಲೆಯನ್ನು ಕಳಚುವ ಅದ್ಭುತ ಕನಸುಗಳನ್ನು ನನಸಾಗಿಸಲು ಪಣತೊಟ್ಟು ತಮ್ಮದೆಲ್ಲವನ್ನು ನಾಡಿಗಾಗಿ ತ್ಯಾಗ ಮಾಡಿದ್ದಾರೆ.

Ad Widget
Click to comment

Leave a Reply

ಸುಳ್ಯ

Sullia-ಸುಳ್ಯ: ಜಾನುವಾರು ಕಳ್ಳತನಕ್ಕೆ ಯತ್ನ: ಇಬ್ಬರು ಪೊಲೀಸ್ ವಶಕ್ಕೆ

Published

on

Ad Widget

Ad Widget

Ad Widget

Ad Widget

ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.

Ad Widget

Ad Widget

Ad Widget

Ad Widget

ಸುಳ್ಯ: ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಜಾನುವಾರುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಉದಯ ರವಿ ಅವರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಶಾಲಾ ಮೈದಾನದಲ್ಲಿದ್ದ ಕಂಬವೊಂದಕ್ಕೆ ಎರಡು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿರುವುದು ಕಂಡುಬಂದಿದೆ.

Ad Widget

Ad Widget <> Ad Widget

ಸ್ಥಳದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅವರು ಸುಳ್ಯ ಆಲೆಟ್ಟಿ ನಿವಾಸಿಗಳಾದ ಹಾಶಿರ್ (28) ಮತ್ತು ಸಂಶುದ್ದೀನ್ (25) ಎಂದು ತಿಳಿದುಬಂದಿದೆ.

ಜಾನುವಾರುಗಳನ್ನು ಕಳ್ಳತನ ಮಾಡಿ ಮಾಂಸವನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Ad Widget

Ad Widget

ಕೃತ್ಯಕ್ಕೆ ಬಳಸಲು ಸ್ಥಳಕ್ಕೆ ತಂದಿದ್ದ ದ್ವಿಚಕ್ರ ವಾಹನ ಹಾಗೂ ಎರಡು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 161/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2) ಜೊತೆಗೆ 62 ಹಾಗೂ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯ ಕಲಂ 7 ಮತ್ತು 15ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ad Widget
Continue Reading

ಸುಳ್ಯ

Black pepper-ಕಾಳುಮೆಣಸು ದರದಲ್ಲಿ ಭರ್ಜರಿ ಏರಿಕೆ: ₹750ರ ಗಡಿ ತಲುಪಿದ ಕಪ್ಪು ಚಿನ್ನ

Published

on

Ad Widget

Ad Widget

Ad Widget

Ad Widget

ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡಿದ್ದು, ನಿರಂತರವಾಗಿ ಏರಿಕೆಯಾಗುತ್ತಾ ಇದೀಗ ನ.16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Ad Widget

Ad Widget

Ad Widget

Ad Widget

ಸುಳ್ಯ: ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತಿ ಕೆ.ಜಿ.ಗೆ ₹750ರ ಗಡಿಯನ್ನು ತಲುಪಿದೆ. ನಿರಂತರ ದರ ಏರಿಕೆಯಿಂದ ಕಾಳುಮೆಣಸು ಬೆಳೆಗಾರರಲ್ಲಿ ಸಂತಸ ಮೂಡಿದೆ.

Ad Widget

Ad Widget alt="Ad Widget"/>

Ad Widget

ಕ್ಯಾಂಪ್ಕೋ ಮಂಗಳೂರು (ಸುಳ್ಯ ಶಾಖೆ) ದರ ಮಾಹಿತಿಯ ಪ್ರಕಾರ, ಕಳೆದ ಅಕ್ಟೋಬರ್ 19ರ ವೇಳೆಗೆ ಕಾಳುಮೆಣಸಿನ ಧಾರಣೆ ₹700ರ ಗಡಿ ದಾಟಿತ್ತು. ಅಕ್ಟೋಬರ್ 29ರ ವೇಳೆಗೆ ₹730ಕ್ಕೆ ಏರಿಕೆಯಾಗಿತ್ತು. ಬಳಿಕ ಕೊಂಚ ಇಳಿಕೆ ಕಂಡು ನವೆಂಬರ್ ತಿಂಗಳ ಆರಂಭದಲ್ಲಿ ₹710ಕ್ಕೆ ತಲುಪಿತ್ತು.

Ad Widget

Ad Widget <> Ad Widget

ಆದರೆ, ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡ ಧಾರಣೆ ನಿರಂತರವಾಗಿ ಏರಿಕೆಯಾಗುತ್ತಾ ಸಾಗಿದೆ. ಇದೀಗ ನವೆಂಬರ್ 16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಇತ್ತೀಚಿನ ದಿನಗಳಲ್ಲಿ ಕೊಳೆರೋಗ, ಹಳದಿ ಎಲೆಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಬಾಧೆಗಳಿಂದ ಇಳುವರಿ ಕುಂಠಿತಗೊಳ್ಳುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾಳುಮೆಣಸಿನ ಧಾರಣೆಯಲ್ಲಿನ ಏರಿಕೆ ಕೃಷಿಕರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಆಸರೆಯಾಗುವ ನಿರೀಕ್ಷೆಯಿದೆ.

Continue Reading

ಸುಳ್ಯ

Areca nut-ಅಡಿಕೆ ರೇಟ್‌ ಜಂಪ್‌ : ಹೊಸ ಅಡಿಕೆಗೆ ₹360; ಒಂದೇ ದಿನದಲ್ಲಿ ₹10 ಏರಿಕೆ! ಡಬಲ್ ಚೋಲ್ ಧಾರಣೆಯಲ್ಲೂ ಹೆಚ್ಚಳ

Published

on

Ad Widget

Ad Widget

Ad Widget

Ad Widget

ಕಳೆದ ಕೆಲ ತಿಂಗಳುಗಳಿಂದ ಏರಿಕೆ ಕಾಣದೆ ನಿಸ್ತೇಜವಾಗಿದ್ದ ಅಡಿಕೆ ಮಾರುಕಟ್ಟೆಯಿಂದೆ ಕೊಂಚ ಸಮಾಧಾನಕರ ಸುದ್ದಿ ಲಭಿಸಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಧಾರಣೆಯಲ್ಲಿ ಏರಿಕೆ ದಾಖಲಾಗಿದ್ದು, ಹೊಸ ಅಡಿಕೆಯ ಗರಿಷ್ಠ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ ₹10 ಹೆಚ್ಚಳವಾಗಿ ₹360ಕ್ಕೆ ತಲುಪಿದೆ. ಡಬಲ್ ಚೋಲ್ ಅಡಿಕೆಯ ಧಾರಣೆಯೂ ₹560ರ ಗಡಿಗೆ ಏರಿಕೆಯಾಗಿದೆ.

Ad Widget

Ad Widget

Ad Widget

Ad Widget

ಸುಳ್ಯ, ನ.12: ಕಳೆದ ಕೆಲ ತಿಂಗಳುಗಳಿಂದ ಏರಿಕೆ ಕಾಣದೆ ನಿಸ್ತೇಜವಾಗಿದ್ದ ಅಡಿಕೆ ಮಾರುಕಟ್ಟೆಯಿಂದೆ ಕೊಂಚ ಸಮಾಧಾನಕರ ಸುದ್ದಿ ಲಭಿಸಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಧಾರಣೆಯಲ್ಲಿ ಏರಿಕೆ ದಾಖಲಾಗಿದ್ದು, ಹೊಸ ಅಡಿಕೆಯ ಗರಿಷ್ಠ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ ₹10 ಹೆಚ್ಚಳವಾಗಿ ₹360ಕ್ಕೆ ತಲುಪಿದೆ. ಡಬಲ್ ಚೋಲ್ ಅಡಿಕೆಯ ಧಾರಣೆಯೂ ₹560ರ ಗಡಿಗೆ ಏರಿಕೆಯಾಗಿದೆ.

Ad Widget

Ad Widget alt="Ad Widget"/>

Ad Widget

ನ.11 ಮತ್ತು ನ.12ರ ಮಾರುಕಟ್ಟೆ ದರಗಳನ್ನು ಹೋಲಿಸಿದಾಗ ಹೊಸ ಅಡಿಕೆಯ ಗರಿಷ್ಠ ಧಾರಣೆ ₹350ರಿಂದ ₹360ಕ್ಕೆ ಏರಿಕೆಯಾಗಿದೆ. ಆದರೆ ಕನಿಷ್ಠ ಧಾರಣೆ ₹280ರಲ್ಲೇ ಸ್ಥಿರವಾಗಿದೆ. ಕನಿಷ್ಠ ದರದಲ್ಲಿ ಬದಲಾವಣೆಯಾಗದಿದ್ದರೂ ಗರಿಷ್ಠ ದರದಲ್ಲಿ ಕಂಡುಬಂದಿರುವ ಏರಿಕೆ ಮಾರುಕಟ್ಟೆಯಲ್ಲಿ ಚೇತರಿಕೆಯ ಮುನ್ಸೂಚನೆ ನೀಡಿದೆ.

Ad Widget

Ad Widget <> Ad Widget

ಡಬಲ್ ಚೋಲ್ ಅಡಿಕೆಗೂ ಬೆಲೆ ಏರಿಕೆ
ಡಬಲ್ ಚೋಲ್ ಅಡಿಕೆಯ ಮಾರುಕಟ್ಟೆಯಲ್ಲೂ ಉತ್ತಮ ಬೆಳವಣಿಗೆ ಕಂಡುಬಂದಿದೆ. ಹಿಂದಿನ ದಿನ ₹525ರಷ್ಟಿದ್ದ ಕನಿಷ್ಠ ಧಾರಣೆ ₹530ಕ್ಕೆ ಏರಿಕೆಯಾಗಿದ್ದರೆ, ಗರಿಷ್ಠ ಧಾರಣೆ ₹550ರಿಂದ ₹560ಕ್ಕೆ ತಲುಪಿದೆ. ಈ ಮೂಲಕ ಕನಿಷ್ಠ ದರದಲ್ಲಿ ₹5 ಹಾಗೂ ಗರಿಷ್ಠ ದರದಲ್ಲಿ ₹10ರಷ್ಟು ಹೆಚ್ಚಳ ದಾಖಲಾಗಿದೆ.

ಸಿಂಗಲ್ ಚೋಲ್ ಸೇರಿದಂತೆ ಇತರ ಅಡಿಕೆ ದರ ಸ್ಥಿರ
ಹೊಸ ಅಡಿಕೆ ಮತ್ತು ಡಬಲ್ ಚೋಲ್ ಹೊರತುಪಡಿಸಿ ಮಾರುಕಟ್ಟೆಯ ಇತರ ಪ್ರಮುಖ ಅಡಿಕೆ ವರ್ಗಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಿಂಗಲ್ ಚೋಲ್ ಅಡಿಕೆ ಕೆ.ಜಿ.ಗೆ ಕನಿಷ್ಠ ₹450 ಹಾಗೂ ಗರಿಷ್ಠ ₹480ರ ದರದಲ್ಲಿ ವಹಿವಾಟು ನಡೆಸಿದೆ.

Ad Widget

Ad Widget

ಬೆಳೆಗಾರರ ಕಣ್ಣು ಮುಂದಿನ ಮಾರುಕಟ್ಟೆ ದರದತ್ತ
ಇತ್ತೀಚಿನ ದಿನಗಳಲ್ಲಿ ಅಡಿಕೆ ಧಾರಣೆಯಲ್ಲಿ ಕಂಡುಬರುತ್ತಿರುವ ಏರಿಳಿತಗಳು ಬೆಳೆಗಾರರಲ್ಲಿ ಗೊಂದಲ ಮೂಡಿಸಿದ್ದವು. ಅದರಲ್ಲೂ ಉತ್ಪಾದನಾ ವೆಚ್ಚ, ಕೂಲಿ ವೆಚ್ಚ ಹಾಗೂ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಮಾರುಕಟ್ಟೆ ದರದ ನಿರೀಕ್ಷೆ ಬೆಳೆಗಾರರಲ್ಲಿದೆ.

ಇದೀಗ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯಲ್ಲಿ ದಾಖಲಾಗಿರುವ ಏರಿಕೆ ಮಾರುಕಟ್ಟೆಗೆ ಹೊಸ ಚೈತನ್ಯ ನೀಡಿದೆ. ಆದರೆ ಈ ಏರಿಕೆ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆಯೇ ಅಥವಾ ಮತ್ತೆ ಧಾರಣೆ ಸ್ಥಿರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯದ ಮಟ್ಟಿಗೆ ಅಡಿಕೆ ಬೆಳೆಗಾರರ ಚಿತ್ತ ಮುಂದಿನ ಮಾರುಕಟ್ಟೆ ವಹಿವಾಟಿನತ್ತ ನೆಟ್ಟಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!