ಪುತ್ತೂರು
Puttur: ಪುತ್ತೂರು: ಮುಳಿಯ ಗೋಲ್ಡ್ & ಡೈಮಂಡ್ಸ್‌ನಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಪುತ್ತೂರು ಶಾಖೆಯಲ್ಲಿ ಇಂದು 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಹಾಗೂ ದೇಶಭಕ್ತಿಯೊಂದಿಗೆ ಆಚರಿಸಲಾಯಿತು.
ಪುತ್ತೂರು: ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಪುತ್ತೂರು ಶಾಖೆಯಲ್ಲಿ ಇಂದು 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಹಾಗೂ ದೇಶಭಕ್ತಿಯೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ NCC ಅಧಿಕಾರಿ ಕ್ಯಾಪ್ಟನ್ ಶ್ರೀ ಮಹೇಶ್ ರೈ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ ಹಾಗೂ ದೇಶಪ್ರೇಮವನ್ನು ಸ್ಮರಿಸಿದರು. ಯುವಜನತೆ ದೇಶದ ಜವಾಬ್ದಾರಿಯುತ ನಾಗರಿಕರಾಗಿ ರಾಷ್ಟ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಅವರು ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ಅವರು ಹಾಗೂ ಅಶ್ವಿನಿ ಕೃಷ್ಣ ಮುಳಿಯ ಅವರು ಉಪಸ್ಥಿತರಿದ್ದರು.
ನಂತರ ಮಾತನಾಡಿದ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ಅವರು, ಸ್ವಾತಂತ್ರ್ಯಾನಂತರ ಭಾರತವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿ ಹಾಗೂ ಅಭಿವೃದ್ಧಿಯ ಪಯಣವನ್ನು ಸ್ಮರಿಸಿದರು. ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.
ಪುತ್ತೂರು
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್‌ಮ್ಯಾನ್ ಮೃತ್ಯು

ಪುತ್ತೂರು: ಕೆದಿಲ ಶಾಲೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಪವರ್‌ಮ್ಯಾನ್‌ವೊಬ್ಬರು ಮೃತಪಟ್ಟ ಘಟನೆ ಅ.3ರಂದು ನಡೆದಿದೆ.
ಮೃತರನ್ನು ಕೆಮ್ಮಾಯಿ ನಿವಾಸಿ ದಿ. ಗುಡ್ಡಪ್ಪ ಗೌಡರವರ ಪುತ್ರ ರವಿ ಗೌಡ ಎಂದು ಗುರುತಿಸಲಾಗಿದೆ. ಇವರು ಮೆಸ್ಕಾಂ ಬಂಟ್ವಾಳ ತಾಲೂಕಿನ ಮಾಣಿ ಸೆಕ್ಷನ್ ನಲ್ಲಿ ಪವರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮೂಲಗಳ ಪ್ರಕಾರ, ಎಚ್‌ಟಿ (ಹೈಟೆನ್ಶನ್) ವಿದ್ಯುತ್ ಲೈನ್‌ನ ಜಿಒಎಸ್ (ಗ್ಯಾಂಗ್ ಆಪರೇಟಿಂಗ್ ಸ್ವಿಚ್) ತೆರೆಯುವ ಸಂದರ್ಭದಲ್ಲಿ ಅರ್ಥ್ ಆಗಿ ವಿದ್ಯುತ್ ಪ್ರವಹಿಸಿ ರವಿ ಗೌಡ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ.
ಕೆದಿಲ ಪಾಟ್ರಕೋಡಿ, ಮಿತ್ತೂರು ಹಾಗೂ ಗಡಿಯಾರ ಭಾಗಗಳಲ್ಲಿ ಪವರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಗೌಡ ಅವರು, ತಮ್ಮ ಸೇವಾ ಮನೋಭಾವದಿಂದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಅಕಾಲಿಕ ನಿಧನ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಶಿಕ್ಷಣ
Narendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಪುತ್ತೂರಿನ ನಿವಾಸಿಗಳಾದ ಪ್ರದೀಪ್ ಜೈನ್ ಮತ್ತು ಪ್ರೇಕ್ಷ ದಂಪತಿಗಳ ಪುತ್ರಿ.
ಹೈದರಾಬಾದ್ ನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ಕ್ಷೇತ್ರಮಟ್ಟದ ಕ್ರೀಡಾಕೂಟದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಲಿಖಿತ್ ಎನ್. ಇವರು 1500ಮೀ., 3000ಮೀ ರೇಸ್ ನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಇವರು ಪುಣಚ ನಿವಾಸಿಗಳಾದ ಮೋಹನ ನಾಯ್ಕ್ ಎನ್. ಮತ್ತು ಭವ್ಯ ದಂಪತಿಗಳ ಪುತ್ರ.
ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ, ಬಳ್ಳಾರಿಯಲ್ಲಿ ನಡೆದ ಪ್ರಾಂತೀಯ ಮಟ್ಟದ ಗಣಿತ ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವದ ಸ್ಪರ್ಧೆಗಳಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಕುಶಿತ್ ಆರ್. ಗೌಡ ಇವರು ಫಿಸಿಕ್ಸ್ ಎಕ್ಸ್ ಪರಿಮೆಂಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಪುತ್ತೂರಿನ ನಿವಾಸಿಗಳಾದ ರಾಜೇಶ್ ಮತ್ತು ನಳಿನಿ ದಂಪತಿಗಳ ಪುತ್ರ.
ಶಿಕ್ಷಣ
Vivekananda-ವಿವೇಕಾನಂದ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ; ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಅಗತ್ಯ : ಪ್ರತಿಮಾ
ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿಯ ಸಹಯೋಗದೊಂದಿಗೆ ನಡೆದ ಐದು ದಿನಗಳ ‘ಯುಜಿಸಿ-ನೆಟ್/ಕೆ-ಸೆಟ್ ಪರೀಕ್ಷೆಗಳ ಪ್ರಿಪರೇಷನ್ ಟೂಲ್ಸ್’ ವಿಷಯದ ಕುರಿತಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಬೆಳ್ಳಾರೆಯ ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರಾ ಮಾತನಾಡಿದರು.
ಪುತ್ತೂರು,ಅ.1: ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಸರ್ಟಿಫಿಕೇಟ್ ಮಾತ್ರವಲ್ಲ, ಉಜ್ವಲ ಭವಿಷ್ಯ, ಒಳ್ಳೆಯ ವೇತನ ಹಾಗೂ ಹೆಸರು ಇತ್ಯಾದಿಗಳೆಲ್ಲವೂ ಲಭಿಸಲಿದೆ. ಇಂದಿನ ಕಾಲದಲ್ಲಿ ಕಲಿಕೆಗೆ ಬೇಕಾದ ಅನೇಕ ಸಂಪನ್ಮೂಲಗಳು ಲಭ್ಯವಿರುವಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಪೂರ್ವಸಿದ್ಧತೆ ಎಂಬುದು ನಾವು ಉತ್ತೀರ್ಣರಾಗಲು ಅತ್ಯಗತ್ಯ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಸಕ್ರಿಯರಾಗಿ ಅಧ್ಯಯನ ನಡೆಸಿ ಎಲ್ಲಾ ರೀತಿಯಿಂದಲೂ ಸಿದ್ಧರಾಗಿ ಪರೀಕ್ಷೆಯನ್ನು ಜಯಿಸಬೇಕು ಎಂದು ಬೆಳ್ಳಾರೆಯ ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರಾ ತಿಳಿಸಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿಯ ಸಹಯೋಗದೊಂದಿಗೆ ನಡೆದ ಐದು ದಿನಗಳ ‘ಯುಜಿಸಿ-ನೆಟ್/ಕೆ-ಸೆಟ್ ಪರೀಕ್ಷೆಗಳ ಪ್ರಿಪರೇಷನ್ ಟೂಲ್ಸ್’ ವಿಷಯದ ಕುರಿತಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿ ಅಧ್ಯಾಪಕ ವೃತ್ತಿಯನ್ನು ಬಯಸಿ ಹೋಗುವವರಿಗೆ, ಸಂಶೋಧನಾ ಕ್ಷೇತ್ರವನ್ನು ಆರಿಸುವವರಿಗೆ ನೆಟ್ ಹಾಗೂ ಕೆ-ಸೆಟ್ ಪರೀಕ್ಷೆಗಳನ್ನು ಪೂರ್ಣಗೊಳಿಸುವುದು ಅಗತ್ಯ. ಪರೀಕ್ಷೆಗೆ ಸಿದ್ಧರಾಗಲು ನಿರಂತರವಾಗಿ ಓದಿನಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಇವುಗಳ ಪಠ್ಯಕ್ರಮಗಳನ್ನು ಅಭ್ಯಾಸಿಸಿ ಪರಿಣತರಿಂದ ಮಾರ್ಗದರ್ಶನವನ್ನು ಪಡೆದು ಯಶಸ್ಸು ಗಳಿಸಬೇಕಿದೆ ಎಂದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ.ಬಿ ಸ್ವಾಗತಿಸಿ ಪ್ರಥಮ ಎಂಕಾಂ ವಿದ್ಯಾರ್ಥಿ ಧನರಾಜ್ ವಂದಿಸಿದರು. ಪ್ರಥಮ ಎಂಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಯು.ಕೆ ನಿರೂಪಿಸಿದರು.
-
ನಿಧನ ವಾರ್ತೆ24 hours agoKadaba-ಕಡಬ : ಹೆದ್ದಾರಿಯಲ್ಲಿ ದಿಢೀರ್ ಪ್ರತ್ಯಕ್ಷವಾದ ಕಡವೆ; ಕಾರಿಗೆ ಡಿಕ್ಕಿ, ಸ್ಥಳದಲ್ಲೇ ಸಾವು
-
ಬಿಗ್ ನ್ಯೂಸ್18 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಪುತ್ತೂರು15 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್‌ಮ್ಯಾನ್ ಮೃತ್ಯು
-
ಮಂಗಳೂರು18 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
Uncategorized23 hours agoಅ.6: ಮಂಗಳೂರಿನ ಪುರಭವನದಲ್ಲಿ ‘ಲವ್ ಜಿಹಾದ್ ಮತ್ತು ಮತಾಂತರ: ಪ್ರಚಾರ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ
-
ಅಂತರ ರಾಜ್ಯ21 hours agoECI-ಮುಖ್ಯ ಚುನಾವಣ ಆಯುಕ್ತ ವಿರುದ್ಧ ದೇಶಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ‘ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಅಭಿಯಾನ’…! 20 ರಾಜ್ಯಗಳಲ್ಲಿ ಕೈಬಿಟ್ಟ 13 ಕೋಟಿ ಮತದಾರರ ಮರುಸೇರ್ಪಡೆಗೆ ಆಯೋಗ ಅವಕಾಶ
-
ಬಿಗ್ ನ್ಯೂಸ್17 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ರಾಜ್ಯ21 hours agoTemperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!




















