ಶಿಕ್ಷಣ
Vivekananda-ವಿವೇಕಾನಂದ ಕಾಲೇಜಿನಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ; ವಿದ್ಯಾರ್ಥಿ ಶಕ್ತಿ ರಾಷ್ಟ್ರೀಯ ಶಕ್ತಿಯಾಗಬೇಕು – ಡಾ. ಸಿ.ಟಿ ರವಿ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇದರ ಐಕ್ಯೂಎಸಿ ಸಹಯೋಗದಲ್ಲಿ ನಡೆದ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಡಾ. ಸಿ.ಟಿ ರವಿ ಮಾತನಾಡಿದರು.
ಪುತ್ತೂರು, ಆ.7: ಭವಿಷ್ಯದಲ್ಲಿ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಉತ್ತಮ ಕಾರ್ಯನಿರ್ವಹಿಸಿದಾಗ ನಮ್ಮ ರಾಷ್ಟ್ರ ದ ಪ್ರಗತಿಯು ಉತ್ತಮವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಸಮಯವನ್ನು ವ್ಯರ್ಥ ಮಾಡದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಾವು ಮಾಡುವ ಸಾಧನೆಯಿಂದ ಇತರರಿಗೆ ಪ್ರೇರಣೆ ದೊರಕಿದಾಗ ಅದು ಸಾರ್ಥಕ ಸಾಧನೆ ಎಂದೆನಿಸಿಕೊಳ್ಳುತ್ತದೆ. ನಮ್ಮ ಜೀವನವು ಯಶಸ್ಸಿನೊಂದಿಗೆ ಸಾರ್ಥಕತೆಯನ್ನು ಹೊಂದಬೇಕು. ನಮ್ಮ ಬಾಳಿಗೆ ನಾವೇ ಶಿಲ್ಪಿಗಳಾಗಿ ದೇಶದ ಪ್ರಗತಿಯ ನೇತೃತ್ವ ವಹಿಸಿಕೊಳ್ಳುವ ಜೆನ್-ಝಿಗಳು ನೀವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ ರವಿ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇದರ ಐಕ್ಯೂಎಸಿ ಸಹಯೋಗದಲ್ಲಿ ನಡೆದ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿನ ವಿದ್ಯಾರ್ಥಿ ಶಕ್ತಿ ಸಂಘಟಿತವಾದಗ ರಾಷ್ಟ್ರ ವನ್ನು ಉತ್ತಮವಾಗಿ ಮುನ್ನಡೆಸಲು ಸಾಧ್ಯ. ಸಾಧನೆಗಳು ಸಮಾಜಕ್ಕೆ ಸಹಕಾರಿಯಾದಾಗ ಅದು ಸಾಮಾಜಿಕ ಮನ್ನಣೆ ಗಳಿಸುತ್ತದೆ. ಮಾನವನಿಗೆ ವಿದ್ಯೆಯೊಂದಿಗೆ ಸಾಮನ್ಯ ಜ್ಞಾನವು ಮುಖ್ಯ.ಇವೆಲ್ಲವನ್ನು ಹೊಂದಿ ದೇಶವನ್ನು ಸಂಘಟಿತವಾಗಿ ಮುನ್ನಡೆಸುವ ಧ್ಯೇಯ ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಕೃಷ್ಣ ಶೆಟ್ಟಿ ಕಡಬ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ವಿವೇಕಾನಂದ ವಿದ್ಯಾಸಂಸ್ಥೆಯು ಶಿಕ್ಷಣದ ಜೊತೆಗೆ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ರೂಪಿಸಿಕೊಂಡು ಬೆಳೆದಾಗ ಮಾತ್ರ ರಾಷ್ಟ್ರ ನಿರ್ಮಾಣ ಕಾರ್ಯ ಸಾಧ್ಯ. ರಾಷ್ಟ್ರದ ವಿಚಾರ, ಚಿಂತನೆಗಳು ಬಂದಾಗ ಎಲ್ಲಾ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಮುಂದೆ ಬರಬೇಕಾದದ್ದು ಮುಖ್ಯ ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಹಾಗೂ ನ್ಯಾಯವಾದಿ ಮುರಳಿಕೃಷ್ಣ ಕೆ ಎನ್, ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್, ಕಾಲೇಜಿನ ವಿಶೇಷ ಅಧಿಕಾರಿ (ಆಡಳಿತ) ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ ಎಂ ಹಾಗೂ ವಿದ್ಯಾರ್ಥಿ ಸಂಘದ ಜೊತೆಕಾರ್ಯದರ್ಶಿ ತೃತೀಯ ಬಿಎಸ್‌ಸ್ಸಿ ವಿದ್ಯಾರ್ಥಿನಿ ಎ ವಿದ್ಯಾಲಕ್ಷ್ಮೀ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳೊಂದಿಗೆ ತರಗತಿ ಪ್ರತಿನಿಧಿಗಳು ಪ್ರಮಾಣವಚನವನ್ನು ಸ್ವೀಕರಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘದ ಅಧ್ಯಕ್ಷ ತೃತೀಯ ಬಿ.ಕಾಂ ವಿದ್ಯಾರ್ಥಿ ಪ್ರಣಮ್ ಸ್ವಾಗತಿಸಿ, ಕಾರ್ಯದರ್ಶಿ ತೃತೀಯ ಬಿ.ಸಿ.ಎ ವಿದ್ಯಾರ್ಥಿ ಶ್ರೇಯಸ್ ಕೆ.ಆರ್ ವಂದಿಸಿ, ತೃತೀಯ ಬಿ.ಎಸ್.ಸ್ಸಿ ವಿದ್ಯಾರ್ಥಿನಿ ಅವನಿ ಕೆ ನಿರೂಪಿಸಿದರು.
ಶಿಕ್ಷಣ
Vivekananda-ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಕಿಶನ್ ಕೆ ವೈ, ತ್ರಿಶಿಕ್ ಕೆ. ಗೌಡ , ಯಶ್ವಿತ್ ಗೌಡ, ಪವನ್ ಕುಮಾರ್, ಮೋಕ್ಷಿತ್ ಕೆ.ಜೆ, ಅನ್ವಿತ್ ಎಸ್ .ಪಿ, ನಿದೀಶ್ ಶೆಟ್ಟಿ, ಮನ್ವಂತ್ ದ್ವಿತೀಯ ಪಿಯುಸಿ ಪ್ರಣಮ್ ಪಿ ಶೆಟ್ಟಿ ,ಚಿಂತನ್ ಕೆ, ಕೆ ಆರ್ ದಿಶಾಂತ್ ಹಾಗೂ ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿ ವಿನ್ಯಾ ರೈ, ಸೃಷ್ಟಿ ಎಸ್. ಆರ್. ರೈ, ವೀಕ್ಷಾ ಬಿ. ಆರ್, ಧರಣಿ ಕೆ. ಟಿ, ಶ್ರಾವ್ಯ, ಕೆ. ಸುಶಾನಿ, ಸಿ. ಎಸ್. ಚಿನ್ಮಯ್ ಗೌಡ, ಪಾವನಿ ಕೆ. ವಸಿಷ್ಠ, ಸಾನ್ವಿ ಎಸ್, ತನ್ವಿ ದ್ವಿತೀಯ ಪಿಯುಸಿ ಧನ್ವಿ ಎ. ಆರ್ ಭಾಗವಹಿಸಿರುತ್ತಾರೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
ಶಿಕ್ಷಣ
Puttur-ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ವಿದ್ಯಾರ್ಥಿ ನಿಖಿಲ್ ಬಿ.ಕೆ.ಗೆ ಯೋಗಾಸನದಲ್ಲಿ ಚಿನ್ನ; ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಸ್ಪರ್ಧೆಗೆ ಆಯ್ಕೆ
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ವಿದ್ಯಾರ್ಥಿ ನಿಖಿಲ್ ಬಿ.ಕೆ. ಅವರು ಮಂಗಳೂರಿನ ಎಸ್‌ಡಿಎಂನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪುತ್ತೂರು, ಅ. 4: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ವಿದ್ಯಾರ್ಥಿ ನಿಖಿಲ್ ಬಿ.ಕೆ. ಅವರು ಮಂಗಳೂರಿನ ಎಸ್‌ಡಿಎಂನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಯೋಗಾಸನ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಿಖಿಲ್ ಬಿ.ಕೆ. ಅವರ ಸಾಧನೆಯ ಹಿನ್ನೆಲೆಯಲ್ಲಿ ಮುಂದಿನ ಹಂತವಾದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಯೋಗಾಸನ ಸ್ಪರ್ಧೆಗೆ ಅವರು ಆಯ್ಕೆಯಾಗಿದ್ದಾರೆ.
ಅವರಿಗೆ ತರಬೇತುದಾರ ನವೀನ್ ಕುಮಾರ್ ಬಿ. ಕೆಯೂರ್ ತರಬೇತಿ ನೀಡಿದ್ದರು.
ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ನಿಖಿಲ್ ಬಿ.ಕೆ. ಹಾಗೂ ತರಬೇತುದಾರರನ್ನು ಅಭಿನಂದಿಸಿ, ಮುಂದಿನ ಹಂತದ ಸ್ಪರ್ಧೆಯಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.
ಸ್ಥಳೀಯ
Manila-ಮಾಣಿಲದಲ್ಲಿ ಸ್ವಯಂಪ್ರೇರಿತ ಶ್ರಮದಾನ
ಮಾಣಿಲ ಗ್ರಾಮದ ಮುರುವ ಕೊಮ್ಮುಂಜೆ ರಸ್ತೆಯಲ್ಲಿ ಮುರುವ ಬಸ್ ನಿಲ್ದಾಣದಿಂದ ಅಂಗನವಾಡಿ ಬಳಿವರೆಗೆ ”ಸ್ವಚ್ಛತೆಯೇ ಸೇವೆ-2026” ಅಭಿಯಾನದಡಿ ಗುರುವಾರದಂದು ಸ್ವಯಂಪ್ರೇರಿತ ಶ್ರಮದಾನ ಕಾರ್ಯಕ್ರಮ ನಡೆಯಿತು.
ಮಾಣಿಲ : ಮಾಣಿಲ ಗ್ರಾಮದ ಮುರುವ ಕೊಮ್ಮುಂಜೆ ರಸ್ತೆಯಲ್ಲಿ ಮುರುವ ಬಸ್ ನಿಲ್ದಾಣದಿಂದ ಅಂಗನವಾಡಿ ಬಳಿವರೆಗೆ ”ಸ್ವಚ್ಛತೆಯೇ ಸೇವೆ-2026” ಅಭಿಯಾನದಡಿ ಗುರುವಾರದಂದು ಸ್ವಯಂಪ್ರೇರಿತ ಶ್ರಮದಾನ ಕಾರ್ಯಕ್ರಮ ನಡೆಯಿತು.
ಶ್ರಮದಾನದಲ್ಲಿ ಗ್ರಾಮಸ್ಥರಾದ ಚಂದ್ರಶೇಖರ ರಾವ್ ಕೊಮ್ಮುಂಜೆ, ರಾಜಾರಾಮ ನಾಯಕ್ ಮುರುವ, ಬಾಬು ಮೂಲ್ಯ ಮುರುವ, ಭರತ್ ಕುಮಾರ್ ಬೈಕುಂಜ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ ಕಮ್ಮಜೆ, ಗ್ರಾ.ಪಂ ಕಾರ್ಯದರ್ಶಿ ರಾಮ ನಾಯ್ಕ ಎಮ್, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಜಗದೀಶ್ ನಾಯಕ್, ಭವಾನಿ.ಪಿ, ಮಮತಾ ಎಸ್, ಅವಿನಾಶ್ ಯಂ, ನೇತ್ರಾವತಿ ಒಕ್ಕೂಟದ ಪೂರ್ಣಿಮ ಬಿ, ಕೃಷಿ ಸಖಿ ಪಾರ್ವತಿ, ಪಶು ಸಖಿ ಬಾಲಮಣಿ, ದಿಶಾ ಕೊಂದಲಕೋಡಿ ಭಾಗವಹಿಸಿದರು.
-
ನಿಧನ ವಾರ್ತೆ15 hours agoUppinangadi-ಉಪ್ಪಿನಂಗಡಿ: ಸೇತುವೆ ಮೇಲೆ ಬೈಕ್, ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ
-
ಬಿಗ್ ನ್ಯೂಸ್21 hours agoBantwal-Big Breaking-ದ.ಕ. ಜಿಲ್ಲೆಯಲ್ಲಿ ಗುಡುಗು-ಮಿಂಚಿನ ಮಳೆ: ಸಿಡಿಲು ಬಡಿದು ಮನೆ ಜಖಂ-ಮಹಿಳೆ ಅಸ್ವಸ್ಥ
-
ಅಪರಾಧ21 hours agoPuttur-ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ 11 ಗೋವುಗಳ ಸಾಗಾಟ; ವಾಹನ ಪತ್ತೆ, ಇಬ್ಬರು ಪರಾರಿ
-
ಅಂತರ ರಾಜ್ಯ20 hours agoMurder-ಆಸ್ತಿಗಾಗಿ ಬೆಲ್ಟ್ನಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ: ಆಕಸ್ಮಿಕ ಸಾವೆಂದು ನಂಬಿಸಿದ್ದ ಪತ್ನಿ ಅರೆಸ್ಟ್
-
ಸ್ಥಳೀಯ21 hours agoCrop insurance-ಬೆಳೆ ವಿಮೆಯಲ್ಲಿ ಭಾರೀ ಇಳಿಕೆ – ದ.ಕ. ಜಿಲ್ಲೆಯ ಅಡಿಕೆ, ಕಾಳುಮೆಣಸು ಬೆಳೆಗಾರರು ಶಾಕ್..!; ಬೇಗನೆ ಜಮೆಯಾದರೂ ಪರಿಹಾರ ಮೊತ್ತದಲ್ಲಿ ಭಾರೀ ಇಳಿಕೆ; ಲೆಕ್ಕಾಚಾರ ಬಹಿರಂಗಕ್ಕೆ ಆಗ್ರಹ
-
ನಿಧನ ವಾರ್ತೆ19 hours agoAccident-ಹುತಾತ್ಮ ಸೈನಿಕನ ಮೃತದೇಹ ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅಪಘಾತ: ಸೈನಿಕನ ಮಗ, ಸಹೋದರ ಸೇರಿ ನಾಲ್ವರು ಸಾವು
-
Uncategorized9 hours ago
ಪುತ್ತೂರು : ಪರವಾನಿಗೆ ರಹಿತವಾಗಿ ಹಿಂಸಾತ್ಮಕವಾಗಿ 11 ಗೋವುಗಳ ಸಾಗಾಟ; ಶಿವಪ್ರಸಾದ್ ಬಂಧನ
-
ರಾಜಕೀಯ15 hours agoPuttur-ಪುತ್ತೂರು: ಅಲ್ಪಸಂಖ್ಯಾತ ಸೇವಾ ಕೇಂದ್ರ ಉದ್ಘಾಟನೆಗೆ ಬಿಜೆಪಿ ಮೋರ್ಚಾದಿಂದ ಆಗ್ರಹ


















