ಬಿಗ್ ನ್ಯೂಸ್
Hotel Pancharatna-ಹೊಟೇಲ್ ಪಂಚರತ್ನ : ಪುತ್ತೂರಿನಲ್ಲಿ ಫೈವ್ ಸ್ಟಾರ್ ರುಚಿ, ಮನೆ ಊಟದ ಸವಿ..! ವಿಭಿನ್ನ ಶೈಲಿಯ ‘ಫಿಶ್ ತವಾ ಪ್ರೈ’ಗೆ ಗ್ರಾಹಕರು ಫಿದಾ
ಪುತ್ತೂರಿನ ಹೃದಯಭಾಗದಲ್ಲಿ, ಕೋರ್ಟ್ ರಸ್ತೆಯ ಬಂಗಾರದ ಕಟ್ಟೆ ಜ್ಯುವೆಲ್ಲರಿ ಮುಂಭಾಗದಲ್ಲಿ ‘ಪಂಚರತ್ನ’ ಎಂಬ ಹೆಸರಿನ ಒಂದು ಅದ್ಭುತ ಹೋಟೆಲ್ ತಲೆ ಎತ್ತಿದೆ. ಇಲ್ಲಿ ಸಿಗುವ ಊಟ ಕೇವಲ ಹೊಟ್ಟೆ ತುಂಬಿಸುವುದಲ್ಲ, ಮನಸ್ಸು ತುಂಬಿಸುತ್ತದೆ. ಶುದ್ಧ, ಆರೋಗ್ಯಕರ ಮತ್ತು ಘಮಘಮ ಪರಿಮಳದೊಂದಿಗೆ ಮನೆ ಊಟದ ಅನುಭವ ನೀಡುವ ಈ ಹೋಟೆಲ್, ಪುತ್ತೂರಿನ ನಿತ್ಯ ಉದ್ಯೋಗಿಗಳಿಗೆ ಮತ್ತು ಹೊರಗಿನಿಂದ ಬರುವವರಿಗೆ ನೆಚ್ಚಿನ ತಾಣವಾಗಿದೆ.
ಪುತ್ತೂರು: ಪುತ್ತೂರಿನ ಹೃದಯಭಾಗದಲ್ಲಿ, ಕೋರ್ಟ್ ರಸ್ತೆಯ ಬಂಗಾರದ ಕಟ್ಟೆ ಜ್ಯುವೆಲ್ಲರಿ ಮುಂಭಾಗದಲ್ಲಿ ‘ಪಂಚರತ್ನ’ ಎಂಬ ಹೆಸರಿನ ಒಂದು ಅದ್ಭುತ ಹೋಟೆಲ್ ತಲೆ ಎತ್ತಿದೆ. ಇಲ್ಲಿ ಸಿಗುವ ಊಟ ಕೇವಲ ಹೊಟ್ಟೆ ತುಂಬಿಸುವುದಲ್ಲ, ಮನಸ್ಸು ತುಂಬಿಸುತ್ತದೆ. ಶುದ್ಧ, ಆರೋಗ್ಯಕರ ಮತ್ತು ಘಮಘಮ ಪರಿಮಳದೊಂದಿಗೆ ಮನೆ ಊಟದ ಅನುಭವ ನೀಡುವ ಈ ಹೋಟೆಲ್, ಪುತ್ತೂರಿನ ನಿತ್ಯ ಉದ್ಯೋಗಿಗಳಿಗೆ ಮತ್ತು ಹೊರಗಿನಿಂದ ಬರುವವರಿಗೆ ನೆಚ್ಚಿನ ತಾಣವಾಗಿದೆ.
ಶಿವಪ್ರಸಾದ್ ಅವರ ಪರಿಕಲ್ಪನೆ: 23 ವರ್ಷಗಳ ಅನುಭವದ ಕಮಲ
ಪಂಚರತ್ನದ ರೂವಾರಿ ಶಿವಪ್ರಸಾದ್ ಅವರು, ಕರ್ನಾಟಕದ ವಿವಿಧೆಡೆ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ 23 ವರ್ಷಗಳ ಕಾಲ ಫುಡ್ ಕನ್ಸಲ್ಟೆನ್ಸಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಬೆಂಗಳೂರಿನ ಫೈವ್‌ಸ್ಟಾರ್, ತ್ರಿಸ್ಟಾರ್ ಹೋಟೆಲ್‌ಗಳಿಂದ ಹಿಡಿದು ಮಂಗಳೂರಿನ ಹೋಟೆಲ್ ನಾರಾಯಣ, ಕೆನರಾ ಕ್ಲಬ್‌ಗಳಲ್ಲಿ ತಮ್ಮ ಪಾಕ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಈಗ ತಮ್ಮದೇ ಊರಿನಲ್ಲಿ, ಪುತ್ತೂರಿಗರಿಗೆ ಅತ್ಯುತ್ತಮ ಗುಣಮಟ್ಟದ ಊಟ ನೀಡಬೇಕೆಂಬ ಮಹದಾಸೆಯಿಂದ ಪಂಚರತ್ನವನ್ನು ಪ್ರಾರಂಭಿಸಿದ್ದಾರೆ. ಯಾವುದೇ ಕೃತಕ ಬಣ್ಣ ಅಥವಾ ರಾಸಾಯನಿಕಗಳನ್ನು ಬಳಸದೆ, ಮನೆಯಲ್ಲೇ ಕುಟ್ಟಿ ಪುಡಿ ಮಾಡಿದ ಮಸಾಲೆ ಮತ್ತು ಶುದ್ಧಗಾಣದ ತೆಂಗಿನ ಎಣ್ಣೆಯಲ್ಲಿ ತಯಾರಿಸಿದ ಇವರ ‘ತವಾ ಫ್ರೈ’ ಹಾಗೂ ಅಡುಗೆ ಇಲ್ಲಿನ ವಿಶೇಷತೆ.
‘ಗುಣಮಟ್ಟದಲ್ಲಿ ರಾಜಿ ಇಲ್ಲದಿದ್ದರೆ, ರುಚಿ ಅದ್ಭುತವಾಗಿ ಬರುತ್ತದೆ’ ಎಂಬುದು ಶಿವಪ್ರಸಾದ್ ಅವರ ದೃಢ ನಂಬಿಕೆ.
*ಗ್ರಾಹಕರ ಮನಗೆದ್ದ ಫಿಶ್ ತವಾ ಫ್ರೈ
ಪಂಚರತ್ನದಲ್ಲಿ, ಮನೆಯಲ್ಲೇ ಕುಟ್ಟಿ ಪುಡಿ ಮಾಡಿದ ಮಸಾಲೆ ಮತ್ತು ಶುದ್ಧ ತೆಂಗಿನ ಎಣ್ಣೆಯಲ್ಲಿ ಕರಿದ ಫಿಶ್ ತವಾ ಫ್ರೈ ಗ್ರಾಹಕರ ಮನಸ್ಸು ಗೆದ್ದಿದೆ. ಮಿತವಾದ ದರದಲ್ಲಿ ಸಿಗುವ ಈ ಫಿಶ್ ಫ್ರೈಗೆ ಗ್ರಾಹಕರು ಫಿದಾ ಆಗಿದ್ದಾರೆ. ಬಂಗುಡೆ, ಅಂಜಲ್‌ನಂತಹ ಫ್ರೆಶ್ ಮೀನುಗಳಿಂದ ತಯಾರಿಸುವ ಈ ಫ್ರೈ, ಮಸಾಲೆಯ ಅದ್ಭುತ ರುಚಿ ಮತ್ತು ಆರೋಗ್ಯಕರ ಗುಣಮಟ್ಟದಿಂದಾಗಿ ಮತ್ತೊಮ್ಮೆ ಭೇಟಿ ನೀಡುವಂತೆ ಮಾಡುತ್ತದೆ.
ಮಹಿಳಾ ಸಬಲೀಕರಣಕ್ಕೆ ಒತ್ತು: ಸ್ತ್ರೀಶಕ್ತಿ ಸಾರಥ್ಯದಲ್ಲಿ ಪಂಚರತ್ನ
ಪಂಚರತ್ನ ಹೋಟೆಲ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿವಪ್ರಸಾದ್ ಅವರ ಪತ್ನಿ ಅನಿತಾ ಮತ್ತು ನಾದಿನಿ ಅಶ್ವಿನಿ ಅವರು ಮುಂಭಾಗದಲ್ಲಿ ಸರ್ವಿಂಗ್ ಮತ್ತು ಬಿಲ್ಲಿಂಗ್ ಅನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ನಗುಮೊಗದೊಂದಿಗೆ ಪಾದರಸದಂತೆ ಓಡಾಡುವ ಮಹಿಳಾ ಸರ್ವರ್‌ಗಳು ಇಲ್ಲಿನ ವಿಶೇಷತೆ. ಇದು ಹೋಟೆಲ್‌ನಲ್ಲಿ ಮನೆಯ ವಾತಾವರಣವನ್ನು ಸೃಷ್ಟಿಸುವುದರ ಜೊತೆಗೆ, ಮಹಿಳಾ ಸಬಲೀಕರಣಕ್ಕೂ ಉತ್ತಮ ಉದಾಹರಣೆಯಾಗಿದೆ.
ಏಳೂ ದಿನ ಏಳು ಬಗೆಯ ಬಿರಿಯಾನಿ ಸ್ಪೆಷಲ್..!
ಪಂಚರತ್ನದಲ್ಲಿ ಮಧ್ಯಾಹ್ನದ ಊಟದಲ್ಲಿ ಫಿಶ್ ಮೀಲ್, ತಾಲಿ, ಗಂಜಿ ಊಟ, ವೆಜ್ ತಾಲಿ, ನಾನ್‌ವೆಜ್ ತಾಲಿ, ಚಿಕನ್ ಮತ್ತು ಮಟನ್ ಬಿರಿಯಾನಿ ಐಟಂಗಳು ಲಭ್ಯ. ವಾರದ ಏಳೂ ದಿನ ಬೇರೆ ಬೇರೆ ರೀತಿಯ ಬಿರಿಯಾನಿ ಸ್ಪೆಷಲ್ ಇರುತ್ತದೆ. ಪಂಚರತ್ನ ಸ್ಪೆಷಲ್ ಬಿರಿಯಾನಿ, ಅಂಬೂರು ಬಿರಿಯಾನಿ, ಬೆಳಗಾವಿ ಬಿರಿಯಾನಿ, ಭಟ್ಕಳ ಬಿರಿಯಾನಿ, ಮಡಿಕೇರಿ ಕೂರ್ಗ್ ಬಿರಿಯಾನಿ, ಆಂಧ್ರ, ಚೆನ್ನೈ ಮಾದರಿಯ ಬಿರಿಯಾನಿ ಹೀಗೆ ನಾನಾ ವಿಧದ ಬಿರಿಯಾನಿ ಇಲ್ಲಿ ಲಭ್ಯ. ಮಧ್ಯಾಹ್ನ 3 ಗಂಟೆಯೊಳಗಡೆ ಬಿರಿಯಾನಿ ಖಾಲಿಯಾಗುತ್ತಿದೆ ಎಂದರೆ ಅದರ ಜನಪ್ರಿಯತೆಯನ್ನು ಊಹಿಸಬಹುದು..!
ಚಿಕನ್ ಕಡಿಪತ್ತ ಸ್ಪೆಷಲ್ ಮತ್ತು ಸಾಂಪ್ರದಾಯಿಕ ರುಚಿಗಳು
ಚಿಕನ್ ಚಿಲ್ಲಿ, ಘೀ ರೋಸ್ಟ್, ಆಂಧ್ರ ಚಿಕನ್, ಪೆಪ್ಪರ್ ಚಿಕನ್‌ನಂತಹ ಚಿಕನ್ ಐಟಂಗಳು ಇಲ್ಲಿ ಲಭ್ಯ. ಪುತ್ತೂರಿಗರಿಗೆ ಗ್ರೀನ್ ಚಿಕನ್ ಸುಕ್ಕ ಫೇವರೀಟ್ ಆಗಿದೆ. ಆದರೆ ‘ಚಿಕನ್ ಕಡಿಪತ್ತ’ ಪಂಚರತ್ನದ ವಿಶೇಷ ಚಿಕನ್ ರೆಸಿಪಿ. ಪಂಚತಾರಾ ರೆಸಿಪಿ ಐಟಂಗಳಿದ್ದರೂ ಇಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಹಾರ ಶೈಲಿ ಕಾಣುತ್ತದೆ. ಟೇಬಲ್‌ಗೆ ಪ್ರಥಮವಾಗಿ ಸರ್ವ್ ಆಗುವುದೇ ತುಳುನಾಡಿನ ಗಂಜಿ ತೆಲಿ.
ಪಂಚರತ್ನದಲ್ಲಿ ನಿಮ್ಮ ದಿನದ ವೇಳಾಪಟ್ಟಿ ಹೀಗಿರಲಿ:
• ಬೆಳಿಗ್ಗೆ 9.30 ರಿಂದ 11.30: ಬ್ರೇಕ್‌ಫಾಸ್ಟ್ – ಇಡ್ಲಿ, ಪಜೆ ಮಡಿಕೆಯಂತಹ ಸಾಂಪ್ರದಾಯಿಕ ತಿಂಡಿಗಳು.
• ಮಧ್ಯಾಹ್ನ 11.30 – 4.30: ಊಟ – ಫಿಶ್ ಮೀಲ್, ತೆಂಗಿನ ಎಣ್ಣೆಯಲ್ಲಿ ಕಾಯಿಸಿದ ಮೀನು ತವಾ ಫ್ರೈಗಳು, ಪ್ರತಿದಿನ ವಿವಿಧ ಬಗೆಯ ಬಿರಿಯಾನಿಗಳು ಮತ್ತು ಇತರ ತಿನಿಸುಗಳು.
• ಸಂಜೆ: ತುಳುನಾಡಿನ ಫೇವರೀಟ್ ಪುಂಡಿ ಗಸಿ, ದೋಸೆ, ಸಾಲ್ಟ್ ಪೆಪ್ಪರ್ ಕ್ರಿಸ್ಟಿ ಕಾರ್ನ್ (ಇವಿನಿಂಗ್ ಚಾಟ್ಸ್ ಸ್ಪೆಷಲ್).
• ರಾತ್ರಿ 7 ರಿಂದ 10.00: ರಾತ್ರಿ ಊಟ.
ಪಾರ್ಸೆಲ್ ಸರ್ವಿಸ್ ಮತ್ತು ಕ್ಯಾಟರಿಂಗ್ ಸರ್ವಿಸ್ ಕೂಡಾ ಲಭ್ಯವಿದೆ. ಜನ್ಮದಿನ ಪಾರ್ಟಿ ಅಥವಾ ಯಾವುದೇ ಸೆಲೆಬ್ರೇಷನ್‌ಗಾಗಿ ಐಟಂಗಳನ್ನು ಮಾಡಿಕೊಡುವ ವ್ಯವಸ್ಥೆ ಕೂಡ ಇಲ್ಲಿದೆ.
ಸುಲಭ ಪಾರ್ಕಿಂಗ್ ವ್ಯವಸ್ಥೆ
ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಪಾರ್ಕಿಂಗ್ ಕಷ್ಟ ಎಂಬ ಚಿಂತೆ ಬೇಡ. ಹೋಟೆಲ್ ಪಕ್ಕದಲ್ಲಿ ದ್ವಿಚಕ್ರ ಮತ್ತು ಕಾರುಗಳ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶವಿದೆ.
ನೀವು ನಾನ್‌ವೆಜ್ ಪ್ರಿಯರಾಗಿದ್ದರೆ, ಮಂಗಳೂರು ಶೈಲಿಯ ಮೀನು ಊಟವನ್ನು ಸವಿಯಲು ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಪಂಚರತ್ನ ಹೋಟೆಲ್‌ಗೆ ಒಮ್ಮೆ ಭೇಟಿ ನೀಡಿ. ಅಲ್ಲಿನ ವಿಭಿನ್ನ ಶೈಲಿಯ ಫಿಶ್ ತವಾ ಫ್ರೈ ಮತ್ತು ಮನೆಯೂಟದ ರುಚಿಗೆ ನೀವು ಖಂಡಿತಾ ಫಿದಾ ಆಗುತ್ತೀರಿ.
ಹೊಟೇಲ್ ಪಂಚರತ್ನ
ಶ್ರೀಬಂಗಾರದ ಕಟ್ಟೆ ಮುಂಭಾಗ
ಕೋರ್ಟ್ ರೋಡ್ ಪುತ್ತೂರು: 8050457329
ಅಂತರ ರಾಜ್ಯ
Nana Patekar-ಕಾರ್ಗಿಲ್ ಯುದ್ಧದ ವೇಳೆ ಸೈನಿಕನಾಗಿಯೂ ದೇಶ ಸೇವೆ ಮಾಡಿದ್ದ ನಾನಾ ಪಾಟೇಕರ್
ರಂಗಭೂಮಿ, ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಹಿರಿಯ ನಟ ನಾನಾ ಪಾಟೇಕರ್ (75) ಗುರುವಾರ ಮುಂಜಾನೆ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗೋವಾದ ತಮ್ಮ ನಿವಾಸದಲ್ಲಿ ಅಸ್ವಸ್ಥರಾಗಿ ಪತ್ತೆಯಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರ ಪ್ರಯತ್ನ ಫಲಿಸದೆ ಬೆಳಗ್ಗೆ 5.20ರ ಸುಮಾರಿಗೆ ನಿಧನರಾದರು.
ನವದೆಹಲಿ: ರಂಗಭೂಮಿ, ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಹಿರಿಯ ನಟ ನಾನಾ ಪಾಟೇಕರ್ (75) ಗುರುವಾರ ಮುಂಜಾನೆ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗೋವಾದ ತಮ್ಮ ನಿವಾಸದಲ್ಲಿ ಅಸ್ವಸ್ಥರಾಗಿ ಪತ್ತೆಯಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರ ಪ್ರಯತ್ನ ಫಲಿಸದೆ ಬೆಳಗ್ಗೆ 5.20ರ ಸುಮಾರಿಗೆ ನಿಧನರಾದರು.
ನಾನಾ ಪಾಟೇಕರ್ ಕೇವಲ ಬೆಳ್ಳಿತೆರೆಯ ನಟನಾಗಿ ಮಾತ್ರ ಗುರುತಿಸಿಕೊಂಡವರಲ್ಲ. ಸರಳತೆ, ಸಾಮಾಜಿಕ ಕಳಕಳಿ ಹಾಗೂ ದೇಶಪ್ರೇಮಕ್ಕೂ ಅವರು ಹೆಸರಾಗಿದ್ದರು. ಭಾರತೀಯ ಸೇನೆಯೊಂದಿಗೆ ಅವರಿಗಿದ್ದ ನಂಟು ಕೂಡ ಅವರ ಬದುಕಿನ ಪ್ರಮುಖ ಅಧ್ಯಾಯವಾಗಿತ್ತು.
ಸೇನಾ ತರಬೇತಿ ಪಡೆದು ಟೆರಿಟೋರಿಯಲ್ ಆರ್ಮಿಗೆ ಸೇರ್ಪಡೆ
1991ರಲ್ಲಿ ತೆರೆಕಂಡ ತಮ್ಮ ಪ್ರಸಿದ್ದ ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ಸಿನಿಮಾದ ಕಮಾಂಡೋ ಪಾತ್ರಕ್ಕಾಗಿ ನಾನಾ ಪಾಟೇಕರ್ ಅವರು ಯಾವುದೇ ಶಾರ್ಟ್‌ಕಟ್ ಬಳಸದೆ, ಮರಾಠಾ ಲೈಟ್ ಇನ್ವೆಂಟ್ರಿ ಜೊತೆ ಮೂರು ವರ್ಷಗಳ ಕಾಲ ಕಠಿಣ ಮಿಲಿಟರಿ ತರಬೇತಿ ಪಡೆದಿದ್ದರು. ಈ ತರಬೇತಿಯ ನಂತರ ಅವರು 1980ರ ದಶಕದ ಉತ್ತರಾರ್ಧದಲ್ಲಿ ಟೆರಿಟೋರಿಯಲ್ ಆರ್ಮಿಗೆ (ಪ್ರಾದೇಶಿಕ ಸೇನೆ) ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು.
1999ರಲ್ಲಿ ಕಾರ್ಗಿಲ್ ಯುದ್ಧ ಆರಂಭವಾದಾಗ ಗಡಿಯಲ್ಲಿ ಸೈನಿಕರೊಂದಿಗೆ ಸೇವೆ ಸಲ್ಲಿಸುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದರು. ಅನುಮತಿ ಪಡೆದ ಬಳಿಕ ತಮ್ಮ ನಟನಾ ವೃತ್ತಿಜೀವನವನ್ನು ಕೆಲಕಾಲ ಬದಿಗೊತ್ತಿ ಸೇನೆಯ ಕ್ವಿಕ್ ರಿಯಾಕ್ಷನ್ ಟೀಮ್‌ನೊಂದಿಗೆ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು.
ಶ್ರೀನಗರ, ಡ್ರಾಸ್ ಹಾಗೂ ಲೇಹ್ ಸೇರಿದಂತೆ ಕಠಿಣ ಹವಾಮಾನವಿರುವ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಸುಮಾರು ಎರಡು ತಿಂಗಳು ಕಳೆದಿದ್ದರು. ಈ ಅವಧಿಯಲ್ಲಿ ಸುಮಾರು 20 ಕೆ.ಜಿ. ತೂಕ ಕಳೆದುಕೊಂಡಿದ್ದಾಗಿ ಅವರು ಹಿಂದಿನ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ಗಣ್ಯರಿಂದ ಸಂತಾಪ
ನಾನಾ ಪಾಟೇಕರ್ ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ರಿತೇಶ್ ದೇಶ್‌ಮುಖ್ ಸೇರಿದಂತೆ ದೇಶದ ಪ್ರಮುಖ ರಾಜಕಾರಣಿಗಳು, ಚಲನಚಿತ್ರ ರಂಗದ ಗಣ್ಯರು ಹಾಗೂ ಕ್ರೀಡಾಪಟುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ”ಎಕ್ಸ್”ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ನಾನಾ ಪಾಟೇಕರ್‌ಜಿ ಅವರ ಅಭಿನಯದಲ್ಲಿನ ವಿಶಿಷ್ಟತೆ, ತೀವ್ರತೆ ಹಾಗೂ ಪ್ರಭಾವಶಾಲಿ ವ್ಯಕ್ತಿತ್ವ ಕೆಲವೇ ಕೆಲವು ಕಲಾವಿದರಲ್ಲಿ ಮಾತ್ರ ಕಾಣಸಿಗುತ್ತದೆ. ತಮ್ಮ ಪಾತ್ರಗಳ ಮೂಲಕ ಜ್ವಾಲಾಮುಖಿಯಂತೆ ಸ್ಫೋಟಿಸುವ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಅವರು ಪ್ರದರ್ಶಿಸುತ್ತಿದ್ದರು. ಬೆಳ್ಳಿತೆರೆಯ ಮೇಲೆ ಅವರು ಜೀವ ತುಂಬಿದ ಪಾತ್ರಗಳು ಹಲವು ತಲೆಮಾರುಗಳ ನೆನಪಿನಲ್ಲಿ ಶಾಶ್ವತವಾಗಿ ಉಳಿಯಲಿವೆ. ನೇರ ಹಾಗೂ ಸ್ಪಷ್ಟ ಅಭಿಪ್ರಾಯಗಳಿಗೆ ಹೆಸರಾಗಿದ್ದ ನಾನಾ ಪಾಟೇಕರ್ ಅವರದು ಅದೇ ವಿಶಿಷ್ಟ ಛಾಪು. ತಾವು ಕಂಡ ಸಂಗತಿಗಳ ಕುರಿತು ಯಾವುದೇ ಮುಚ್ಚುಮರೆಯಿಲ್ಲದೆ ಅತ್ಯಂತ ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು’ ಎಂದು ಹೇಳಿದ್ದಾರೆ.
ಅವರ ಅಗಲಿಕೆಗೆ ಸಂತಾಪ ಸೂಚಿಸಿರುವ ನಟ ಅಕ್ಷಯ್ ಕುಮಾರ್, “ಅವರ ಗಂಭೀರ ಧ್ವನಿ, ನಟನೆಯಲ್ಲಿನ ತೀವ್ರತೆ ಹಾಗೂ ಪ್ರಾಮಾಣಿಕತೆ ಅವರನ್ನು ಅನನ್ಯ ವ್ಯಕ್ತಿಯನ್ನಾಗಿ ಮಾಡಿತ್ತು. ವೆಲ್ಕಮ್ ಹಾಗೂ ಇತ್ತೀಚಿನ ಹೌಸ್‌ಫುಲ್ 5 ಚಿತ್ರಗಳಲ್ಲಿ ಅವರೊಂದಿಗೆ ಕೆಲಸ ಮಾಡಿದ ನೆನಪುಗಳು ಎಂದಿಗೂ ನನ್ನೊಂದಿಗಿರುತ್ತವೆ” ಎಂದಿದ್ದಾರೆ.
ನಟ ರಿತೇಶ್ ದೇಶ್‌ಮುಖ್ ಪ್ರತಿಕ್ರಿಯಿಸಿ, “ನಾನಾ ಪಾಟೇಕರ್ ಅವರು ಬೆಳ್ಳಿಪರದೆಯ ಮೇಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಒಬ್ಬ ರಿಯಲ್ ಹೀರೋ ಆಗಿದ್ದರು. ಅವರು ಕೈಗೊಂಡ ಸಾಮಾಜಿಕ ಕಾರ್ಯಗಳು ಅಪಾರವಾದವು. ನಾಯಕನಾಗಿ, ಖಳನಾಯಕನಾಗಿ ಹಾಗೂ ಹಾಸ್ಯನಟನಾಗಿ ಎಲ್ಲಾ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಅವರ ಅಗಲಿಕೆ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ” ಎಂದು ಸ್ಮರಿಸಿದ್ದಾರೆ.
ಬಿಗ್ ನ್ಯೂಸ್
Reservation-ದ.ಕ. ಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಮಹಿಳೆಯರಿಗೆ ತಾ.ಪಂ. 65, ಜಿ.ಪಂ. 18 ಸ್ಥಾನ ಮೀಸಲು
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ವರ್ಗವಾರು ಮೀಸಲಾತಿ ವಿವರ ಪ್ರಕಟಗೊಂಡಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಆರಂಭವಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ವರ್ಗವಾರು ಮೀಸಲಾತಿ ವಿವರ ಪ್ರಕಟಗೊಂಡಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಆರಂಭವಾಗಿದೆ.
ಜಿಲ್ಲೆಯ ವಿವಿಧ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದಡಿ ಮೀಸಲಿಡಲಾಗಿದೆ.
ತಾಲೂಕು ಪಂಚಾಯಿತಿ:
ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯಿತಿಗಳಲ್ಲಿ ಒಟ್ಟು 126 ಸ್ಥಾನಗಳಿದ್ದು, 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 13 ಸ್ಥಾನಗಳಿದ್ದು, ಈ ಪೈಕಿ 9 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ 10 ಸ್ಥಾನಗಳಿದ್ದು, 9 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಹಿಂದುಳಿದ ವರ್ಗ ‘ಎ’ಗೆ 29 ಸ್ಥಾನಗಳು ಮೀಸಲಾಗಿದ್ದು, 16 ಸ್ಥಾನಗಳು ಮಹಿಳೆಯರಿಗೆ ಮೀಸಲು. ಹಿಂದುಳಿದ ವರ್ಗ ‘ಬಿ’ಗೆ 7 ಸ್ಥಾನಗಳಿದ್ದು, 4 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಸಾಮಾನ್ಯ ವರ್ಗದ 67 ಸ್ಥಾನಗಳ ಪೈಕಿ 27 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ತಾಲೂಕುವಾರು ಗಮನಿಸಿದರೆ ಮೂಲ್ಕಿಯಲ್ಲಿ 7, ಮೂಡುಬಿದಿರೆಯಲ್ಲಿ 9, ಸುಳ್ಯದಲ್ಲಿ 11, ಉಳ್ಳಾಲದಲ್ಲಿ 12, ಪುತ್ತೂರಿನಲ್ಲಿ 12, ಮಂಗಳೂರಿನಲ್ಲಿ 14, ಬೆಳ್ತಂಗಡಿಯಲ್ಲಿ 14, ಕಡಬದಲ್ಲಿ 22 ಹಾಗೂ ಬಂಟ್ವಾಳದಲ್ಲಿ 25 ತಾಲೂಕು ಪಂಚಾಯಿತಿ ಕ್ಷೇತ್ರಗಳಿವೆ. ಬಂಟ್ವಾಳದಲ್ಲಿ ಅತಿ ಹೆಚ್ಚು 25 ಹಾಗೂ ಮೂಲ್ಕಿಯಲ್ಲಿ ಅತಿ ಕಡಿಮೆ 7 ಕ್ಷೇತ್ರಗಳಿವೆ.
ಜಿಲ್ಲಾ ಪಂಚಾಯಿತಿ:
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 35 ಸ್ಥಾನಗಳಿದ್ದು, 18 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 3 ಸ್ಥಾನಗಳಿದ್ದು, 2 ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಪಂಗಡಕ್ಕೆ 2 ಸ್ಥಾನಗಳಿದ್ದು, 1 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ.
ಹಿಂದುಳಿದ ವರ್ಗ ‘ಎ’ಗೆ 10 ಸ್ಥಾನಗಳಿದ್ದು, 5 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಹಿಂದುಳಿದ ವರ್ಗ ‘ಬಿ’ಗೆ 2 ಸ್ಥಾನಗಳಿದ್ದು, 1 ಸ್ಥಾನ ಮಹಿಳೆಯರಿಗೆ ಮೀಸಲು. ಸಾಮಾನ್ಯ ವರ್ಗದ 18 ಸ್ಥಾನಗಳ ಪೈಕಿ 9 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಮೀಸಲಾತಿ ವಿವರ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಆರಂಭವಾಗಿದೆ. ಯಾವ ಕ್ಷೇತ್ರದಲ್ಲಿ ಯಾವ ವರ್ಗಕ್ಕೆ ಮೀಸಲಾತಿ ದೊರೆತಿದೆ ಎಂಬುದನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ.
ಅಂತರ ರಾಜ್ಯ
CEC Jnanesh Kumar-ವಿಪಕ್ಷಗಳ ಪ್ರತಿಭಟನೆ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ನಿವಾಸಕ್ಕೆ ತೀವ್ರ ಭದ್ರತೆ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದಂತೆ ವಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ನಿವಾಸದ ಹೊರಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಗಿದೆ.
ಹೊಸದಿಲ್ಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದಂತೆ ವಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ನಿವಾಸದ ಹೊರಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಗಿದೆ.
ಜ್ಞಾನೇಶ್ ಕುಮಾರ್ ಅವರಿಗೆ ಈಗಾಗಲೇ Z-ಪ್ಲಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇತ್ತೀಚಿನ ಗುಪ್ತಚರ ಮಾಹಿತಿ ಹಾಗೂ ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಗಮನದಲ್ಲಿಟ್ಟುಕೊಂಡು ಅವರ ನಿವಾಸದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ವಿವಿಧ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಭದ್ರತಾ ಏಜೆನ್ಸಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಭಟನೆಗಳು ದೇಶದ ವಿವಿಧೆಡೆ ತೀವ್ರಗೊಳ್ಳುತ್ತಿರುವ ನಡುವೆಯೇ ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
-
Uncategorized23 hours ago
ಪುತ್ತೂರು : ಬಾಡಿಗೆ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಯುವಕ ಸಾವು
-
Uncategorized11 hours ago
Naana Paatekar No More : ವ್ಯವಸ್ಥೆಯ ವಿರುದ್ಧದ ಧ್ವನಿಗೆ ರೂಪ ನೀಡಿದ, ತನ್ನ ಡೈಲಾಗ್ ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಅಭಿಜಾತ ಕಲಾವಿದ ನಾನಾಪಾಟೇಕರ್ ಇನ್ನಿಲ್ಲ
-
ಮಂಗಳೂರು9 hours agoMangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ
-
Uncategorized10 hours agoAshok Rai-ಬದ್ಯಾರ್ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
-
ಅಪರಾಧ10 hours agoUppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ
-
ನಿಧನ ವಾರ್ತೆ9 hours agoBeltangadi-ಬೆಳ್ತಂಗಡಿ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು
-
ಬಿಗ್ ನ್ಯೂಸ್5 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ನಿಧನ ವಾರ್ತೆ9 hours agoAccident-ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು


















