ಕಾರ್ಯಕ್ರಮಗಳು
G.L. Acharya Jeweller-ಮೂಡುಬಿದರೆ : ಎ.12ರಂದು ಪ್ರತಿಷ್ಠಿತ ‘ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್’ ನ ಐದನೇ ಶೋರೂಂ ಲೋಕಾರ್ಪಣೆ
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಯಾದ ‘ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್’ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿದ್ದು, ಮೂಡುಬಿದಿರೆಯಲ್ಲಿ ತನ್ನ ನೂತನ ವಿಶಾಲ ಮಳಿಗೆಯನ್ನು ಏಪ್ರಿಲ್ 12ರಂದು ಉದ್ಘಾಟಿಸಲಿದೆ.
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಯಾದ ‘ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್’ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿದ್ದು, ಮೂಡುಬಿದಿರೆಯಲ್ಲಿ ತನ್ನ ನೂತನ ವಿಶಾಲ ಮಳಿಗೆಯನ್ನು ಏಪ್ರಿಲ್ 12ರಂದು ಉದ್ಘಾಟಿಸಲಿದೆ.
ಮೂಡುಬಿದಿರೆಯ ಬಸ್ಸ್ಟ್ಯಾಂಡ್ ಎದುರಿನ ‘ನವಮಿ ಪ್ಲಾಜಾ’ದಲ್ಲಿ ಸಜ್ಜುಗೊಂಡಿರುವ ಈ ಸುಸಜ್ಜಿತ ಮಳಿಗೆಯ ಉದ್ಘಾಟನಾ ಸಮಾರಂಭವು 2026ರ ಏಪ್ರಿಲ್ 12, ಭಾನುವಾರದಂದು ನಡೆಯಲಿದೆ.
ಈ ಅದ್ಧೂರಿ ಸಮಾರಂಭದಲ್ಲಿ ಉಮಾನಾಥ ಕೋಟ್ಯಾನ್ (ಶಾಸಕರು, ಮೂಡುಬಿದಿರೆ ಕ್ಷೇತ್ರ), ಅಭಯಚಂದ್ರ ಜೈನ್ (ಮಾಜಿ ಸಚಿವರು, ಕರ್ನಾಟಕ ಸರ್ಕಾರ),ಡಾ. ಎಂ. ಮೋಹನ್ ಆಳ್ವ (ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ), ಶ್ರೀಪತಿ ಭಟ್ (ಶ್ರೀ ಧನಲಕ್ಷ್ಮಿ ಕ್ಯಾಶ್ಯೂ ಎಕ್ಸ್ಪೋರ್ಟ್ಸ್), ಕುಲದೀಪ್ ಎಂ. (ಚೌಟರ ಅರಮನೆ, ಮೂಡುಬಿದಿರೆ), ನಂದ ಕುಮಾರ್ ಕುಡ್ವ (ಆಡಳಿತ ನಿರ್ದೇಶಕರು, ನವಮಿ ಗ್ರೂಪ್) ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಸ್ಥೆಯ ಚೇರ್ಮನ್ ಜಿ. ಎಲ್. ಬಲರಾಮ್ ಆಚಾರ್ಯ ಹಾಗೂ ನಿರ್ದೇಶಕರಾದ ಲಕ್ಷ್ಮೀಕಾಂತ್ ಬಿ. ಆಚಾರ್ಯ ಮತ್ತು ಸುಧನ್ವ ಬಿ. ಆಚಾರ್ಯ ಅವರು ಸಮಸ್ತ ಗ್ರಾಹಕ ಬಂಧುಗಳನ್ನು ಈ ಸಮಾರಂಭಕ್ಕೆ ಆದರದಿಂದ ಸ್ವಾಗತಿಸಿದ್ದಾರೆ.
ಕಾರ್ಯಕ್ರಮಗಳು
Puttur-ಪುತ್ತೂರಿನಲ್ಲಿ ‘ಸಾಮರಸ್ಯದ ತುಡರ್’ ಕಾರ್ಯಕ್ರಮ: ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಮನೆಗೆ ದೀಪದ ಬೆಳಕು
ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುತ್ತೂರು: ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ದೇವಸ್ಥಾನದಲ್ಲಿ ಬೆಳಗಿಸಿದ ದೀಪವನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶಗಳ ಸುತ್ತಮುತ್ತಲಿನ ಮನೆಗಳಲ್ಲಿ ದೀಪ ಬೆಳಗಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಸಾಮರಸ್ಯ ಸಂಯೋಜಕ ರವೀಂದ್ರ, ಜಿಲ್ಲಾ ಸಾಮರಸ್ಯ ಸಂಯೋಜಕ ಶ್ರೀಕುಮಾರ್ ಸುಬ್ರಹ್ಮಣ್ಯ, ದಾಮೋದರ ಪಾಟಲಿ, ಅಪ್ಪಯ್ಯ ಮಣಿಯಾಣಿ, ರಮೇಶ್ ಪ್ರಭು, ಸಂತೋಷ್ ಬೊನಂತಾಯ, ರಮೇಶ್ ನೆಗಳಗುಳಿ, ದಯಾನಂದ ಬೋಲ್ವಾರ್, ಸಚಿನ್ ಶೆಣೈ, ರಮೇಶ್ ಉರ್ಲಾಂಡಿ, ಅಶೋಕ್ ಬ್ರಹ್ಮನಗರ ಸೇರಿದಂತೆ ಪ್ರಮುಖರು ಹಾಗೂ ಮಾತೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮಗಳು
Puttur-ಡಿ.8ರಂದು ಪುತ್ತೂರು ದೀಪೋತ್ಸವ: ದೇವಸ್ಥಾನದ ಮುಂಭಾಗದಲ್ಲಿ ಚಪ್ಪರ ಮುಹೂರ್ತ
ಪುತ್ತೂರು ದೀಪೋತ್ಸವ ಸಮಿತಿಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಡಿ.8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಸಮಾರಂಭ ಬುಧವಾರ ನಡೆಯಿತು.
ಪುತ್ತೂರು, ನ.18: ಪುತ್ತೂರು ದೀಪೋತ್ಸವ ಸಮಿತಿಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಡಿ.8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಸಮಾರಂಭ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ಉದ್ಯಮಿ ವಾಮನ ಪೈ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ದೀಪೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಶ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ದೇವಸ್ಥಾನದ ಮುಂಭಾಗದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೂ ವ್ಯವಸ್ಥಾಪನಾ ಸಮಿತಿಯ ಸಂಪೂರ್ಣ ಸಹಕಾರ ಇರಲಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದರು.

ದೀಪೋತ್ಸವ ಸಮಿತಿ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ದೀಪೋತ್ಸವವನ್ನು ಉತ್ಸವದ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಐದು ಸಾವಿರಕ್ಕೂ ಅಧಿಕ ಮಂದಿ ದೀಪ ಬೆಳಗಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಉತ್ತಮ ಸಮಿತಿ ರಚಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಗಳು
Puttur-ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ ರಾಷ್ಟ್ರೀಯ ಈಜು ಚಾಂಪಿಯನ್ಶಿಪ್-2026
ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ 37ನೇ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್ಶಿಪ್-2026 ನವೆಂಬರ್ 20ರಿಂದ 22ರವರೆಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಭರತ್ ಪೈ ತಿಳಿಸಿದರು.
ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ 37ನೇ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್ಶಿಪ್-2026 ನವೆಂಬರ್ 20ರಿಂದ 22ರವರೆಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಭರತ್ ಪೈ ತಿಳಿಸಿದರು.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿದ್ಯಾಭಾರತಿಯ ಅಧೀನದಲ್ಲಿರುವ ದೇಶದ ವಿವಿಧ ರಾಜ್ಯಗಳ ಆರು ಕ್ಷೇತ್ರಗಳ ಒಟ್ಟು 162 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ 30 ಎಸ್ಕಾರ್ಟ್ಗಳು ಹಾಗೂ ತರಬೇತುದಾರರು ಭಾಗವಹಿಸಲಿದ್ದು, ಒಟ್ಟು 104 ಸ್ಪರ್ಧಾ ವಿಭಾಗಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ನವೆಂಬರ್ 20ರಂದು ಸಂಜೆ 6 ಗಂಟೆಗೆ ವಿವೇಕಾನಂದ ಸೆಂಟ್ರಲ್ ಸ್ಕೂಲ್ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಈಜುಪಟು ರಾಧಾಕೃಷ್ಣ ನಾಯಕ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿದ್ಯಾಭಾರತಿ ಕರ್ನಾಟಕದ ರಾಜ್ಯಾಧ್ಯಕ್ಷ ಪರಮೇಶ್ವರ ಹೆಗ್ಡೆ ಭಾಗವಹಿಸಲಿದ್ದು, ಮನಮೋಹನ್ ರೈ ಚೆಲ್ಯಡ್ಕ, ವಸಂತ ಮಾಧವ, ಯು.ಪಿ. ಹರಿದಾಸ್ ಹಾಗೂ ಬಿ.ಡಿ. ಮಣಿ ಉಪಸ್ಥಿತರಿರಲಿದ್ದಾರೆ.
ನವೆಂಬರ್ 21ರಂದು ಪುತ್ತೂರಿನ ಬಾಲವನ ಈಜುಕೊಳದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.
ನವೆಂಬರ್ 22ರಂದು ಬೆಳಗ್ಗೆ 11.30ಕ್ಕೆ ವಿವೇಕಾನಂದ ಸೆಂಟ್ರಲ್ ಸ್ಕೂಲ್ನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರದ ಜಂಟಿ ಕಾರ್ಯದರ್ಶಿ ವಸಂತ ಮಾಧವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬ್ರಾಂಡ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀಕಾಂತ್ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಸಂತಿ ಕೆ. ಹಾಗೂ ಪ್ರತಿಮಾ ಹೆಗ್ಡೆ ಉಪಸ್ಥಿತರಿರಲಿದ್ದಾರೆ ಎಂದು ಭರತ್ ಪೈ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ವಿಷ್ಣು ಪ್ರಸಾದ್ ಸಿ., ಪ್ರಾಂಶುಪಾಲೆ ಸಿಂಧು ವಿ.ಜಿ., ರವಿನಾರಾಯಣ, ಶ್ಯಾಮಲಾ ಹಾಗೂ ವೆಂಕಟರಮಣ ಮಂಕುಡೆ ಉಪಸ್ಥಿತರಿದ್ದರು















