Connect with us

ಬಿಗ್ ನ್ಯೂಸ್

American warplane-ಮೂರನೇ ದಿನಕ್ಕೆ ಕಾಲಿಟ್ಟ ಸಂಘರ್ಷ: ಕುವೈತ್ ಆಗಸದಲ್ಲಿ ಅಮೆರಿಕ ಯುದ್ಧ ವಿಮಾನ ಉಡೀಸ್

Published

on

Ad Widget

Ad Widget

Ad Widget

Ad Widget

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಇರಾನ್ ಮತ್ತು ಅಮೆರಿಕ ಬೆಂಬಲಿತ ಇಸ್ರೇಲ್ ನಡುವಿನ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದೆ. ಯುದ್ಧವು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದರ ನಡುವೆಯೇ ಕುವೈತ್ ಆಗಸದಲ್ಲಿ ಹಾರಾಡುತ್ತಿದ್ದ ಶಕ್ತಿಶಾಲಿ ಎಫ್‌-15 (F-15) ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಘೋಷಿಸಿದೆ.

Ad Widget

Ad Widget

Ad Widget

Ad Widget

ಕುವೈತ್‌ ಸಿಟಿ/ಟೆಹರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಇರಾನ್ ಮತ್ತು ಅಮೆರಿಕ ಬೆಂಬಲಿತ ಇಸ್ರೇಲ್ ನಡುವಿನ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದೆ. ಯುದ್ಧವು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದರ ನಡುವೆಯೇ ಕುವೈತ್ ಆಗಸದಲ್ಲಿ ಹಾರಾಡುತ್ತಿದ್ದ ಶಕ್ತಿಶಾಲಿ ಎಫ್‌-15 (F-15) ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಘೋಷಿಸಿದೆ.

Ad Widget

Ad Widget alt="Ad Widget"/>

Ad Widget

ಖಮೇನಿ ಹತ್ಯೆ ಧೃಡಪಟ್ಟಿದೆ:
ಯುದ್ಧದ ಆರಂಭದ ದಿನವೇ ಟೆಹರಾನ್‌ನಲ್ಲಿರುವ ತಮ್ಮ ನಿವಾಸದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ. ಈ ವಿಷಯವನ್ನು ಇರಾನ್ ಮಾಧ್ಯಮಗಳು ಖಚಿತಪಡಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಯ ಅಂತ್ಯವಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.

Ad Widget

Ad Widget <> Ad Widget

ಯುದ್ಧ ವಿಮಾನ ಪತನ:
ಸೋಮವಾರ ಬೆಳಿಗ್ಗೆ ಕುವೈತ್ ವಾಯುಗಡಿಯಲ್ಲಿ ಎಫ್‌-15 ವಿಮಾನದ ಹಿಂಭಾಗಕ್ಕೆ ಬೆಂಕಿ ಹೊತ್ತಿಕೊಂಡು ಸುರುಳಿ ಸುತ್ತುತ್ತಾ ಕೆಳಗೆ ಬೀಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಮಾನ ಅಮೆರಿಕ ಅಥವಾ ಇಸ್ರೇಲ್ ಪಡೆಗೆ ಸೇರಿದ್ದೇ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ. ಇದು ಇರಾನ್ ದಾಳಿಯೋ ಅಥವಾ ತಾಂತ್ರಿಕ ದೋಷವೋ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

ಶಾಲೆಯ ಮೇಲೆ ದಾಳಿ- 150 ಸಾವು:
ದಕ್ಷಿಣ ಇರಾನ್‌ನ ಮಿನಾಬ್ ಪಟ್ಟಣದ ಶಾಲೆಯೊಂದರ ಮೇಲೆ ನಡೆದ ಭೀಕರ ದಾಳಿಯಲ್ಲಿ 150ಕ್ಕೂ ಹೆಚ್ಚು ಮುಗ್ಧ ಮಕ್ಕಳು ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಟೆಹರಾನ್ ಗಂಭೀರ ಆರೋಪ ಮಾಡಿದೆ. ಕಳೆದ ಮೂರು ದಿನಗಳಲ್ಲಿ ಒಟ್ಟು ಸಾವಿನ ಸಂಖ್ಯೆ 200ರ ಗಡಿ ದಾಟಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

Ad Widget

Ad Widget

ವಿಮಾನಗಳ ಹಾರಾಟ ರದ್ದು:
ಇರಾನ್ ನಡೆಸಿದ ಪ್ರತಿದಾಳಿಯ ಪರಿಣಾಮ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಅಸ್ತವ್ಯಸ್ತಗೊಂಡಿದೆ. ದಾಳಿಯಿಂದ ಅಲ್ಲಿನ ಐಷಾರಾಮಿ ಹೋಟೆಲ್‌ಗೂ ಹಾನಿಯಾಗಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳಬೇಕಿದ್ದ 24ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಭಾರತೀಯರಿಗೆ ಎಚ್ಚರಿಕೆ:
ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ಮತ್ತು ಇಸ್ರೇಲ್‌ನಲ್ಲಿರುವ ಭಾರತೀಯರು ಮನೆಯಿಂದ ಹೊರಬರದಂತೆ ಮತ್ತು ರಾಯಭಾರ ಕಚೇರಿಯ ಸಂಪರ್ಕದಲ್ಲಿರುವಂತೆ ಭಾರತ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕುವೈತ್, ಬಹ್ರೇನ್ ಮತ್ತು ಕತಾರ್‌ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ಇರಾನ್ ಡ್ರೋನ್ ದಾಳಿ ನಡೆಸುತ್ತಿರುವುದರಿಂದ ಇಡೀ ಗಲ್ಫ್ ಪ್ರದೇಶದಲ್ಲಿ ಆತಂಕ ಮನೆಮಾಡಿದೆ.

Ad Widget
Click to comment

Leave a Reply

ಬಿಗ್ ನ್ಯೂಸ್

Muraleedhar Rai-ಮೆಸ್ಕಾಂ ನಿರ್ದೇಶಕರಾಗಿ ಮುರಳೀಧರ ರೈ ಮಠಂತಬೆಟ್ಟು ಸರ್ಕಾರದಿಂದ ನೇಮಕ

Published

on

Ad Widget

Ad Widget

Ad Widget

Ad Widget

ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ 81 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಪೈಕಿ ಮೆಸ್ಕಾಂ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಅವರು ನೇಮಕಗೊಂಡಿದ್ದಾರೆ.

Ad Widget

Ad Widget

Ad Widget

Ad Widget

ಉಪ್ಪಿನಂಗಡಿ: ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ 81 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಪೈಕಿ ಮೆಸ್ಕಾಂ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಅವರು ನೇಮಕಗೊಂಡಿದ್ದಾರೆ.

Ad Widget

Ad Widget alt="Ad Widget"/>

Ad Widget

ಕೋಡಿಂಬಾಡಿ ಮಠಂತಬೆಟ್ಟುವಿನ ಪ್ರತಿಷ್ಠಿತ ಬಂಟ ಕುಟುಂಬದ ಹಿರಿಯ ಕಾಂಗ್ರೆಸ್ ಮುಖಂಡ ಅನಂತ ರೈಯವರ ಪುತ್ರ ಮುರಳೀಧರ ರೈ ಮಠಂತಬೆಟ್ಟು ಅವರು ಹಿರಿಯರ ಕಾಲದಿಂದಲೇ ಕಾಂಗ್ರೆಸ್ ಕುಟುಂಬದಲ್ಲಿ ಬೆಳೆದು ಬಂದವರು.ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಸುಮಾರು ವರ್ಷಗಳ ಕಾಲ ವಲಯ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಜನ ಸೇವೆ ಆರಂಭಿದ ಇವರು ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಪ್ರಸ್ತುತ ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿರುವ ಮುರಳೀಧರ ರೈಯವರನ್ನು ಇದೀಗ ಕರ್ನಾಟಕ ಸರಕಾರ ಮೆಸ್ಕಾಂ ನಿರ್ದೇಶಕರಾಗಿ ನೇಮಕ ಮಾಡಿದೆ.

Ad Widget

Ad Widget <> Ad Widget

Ad Widget
Continue Reading

ಬಿಗ್ ನ್ಯೂಸ್

Shashikumar Bhat-ಶಶಿಕುಮಾರ್ ಭಟ್ ಪಡಾರು ಅವರಿಗೆ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿ

Published

on

Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಅವರು ಗೋವಾ ರಾಜ್ಯ ತೋಟಗಾರಿಕೆ ನಿಗಮ ಹಾಗೂ ಕನ್ನಡ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ಗೋವಾ – ಕರ್ನಾಟಕ ಸಂಸ್ಥೆ ಕೊಡಮಾಡುವ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಅವರು ಗೋವಾ ರಾಜ್ಯ
ತೋಟಗಾರಿಕೆ ನಿಗಮ ಹಾಗೂ ಕನ್ನಡ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ಗೋವಾ – ಕರ್ನಾಟಕ ಸಂಸ್ಥೆ ಕೊಡಮಾಡುವ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Ad Widget

Ad Widget alt="Ad Widget"/>

Ad Widget

ಪುತ್ತೂರು ಕೇಂದ್ರಿತವಾಗಿ ಹಲವು ಕೃಷಿ ಸಂಬಂಧಿ ಸಮಾವೇಶಗಳನ್ನೂ ಆಯೋಜಿಸುತ್ತಿರುವ ಶಶಿಕುಮಾರ್ ಭಟ್ಪ ಡಾರು ಅವರು ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ, ತರಬೇತಿ, ಸಲಹೆ – ಮಾರ್ಗದರ್ಶನಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಕೊಡಮಾಡಕಲಾಗುತ್ತಿದೆ. ಪ್ರಶಸ್ತಿ ಪ್ರದಾನ
ಸಮಾರಂಭ ನವೆಂಬರ್ 22ರಂದು ವಾಸ್ಕೋ ಗೋವಾದ ಬೈನಾದಲ್ಲಿನ ರವೀಂದ್ರ ಭವನದಲ್ಲಿ ನಡೆಯಲಿದೆ.

Ad Widget

Ad Widget <> Ad Widget

ಶಶಿಕುಮಾರ್ ಭಟ್ ಪಡಾರು ಅವರ ಸಾಧನೆಯ ಹಾದಿ:
ಕರಾವಳಿಯ ಜೀವನಾಡಿಯಾದ ಅಡಿಕೆ ಕೃಷಿ ಇಂದು ಹಳದಿ ಎಲೆ ರೋಗ, ಮಾರುಕಟ್ಟೆ ಅಸ್ಥಿರತೆ, ಹವಾಮಾನ ವೈಪರೀತ್ಯ, ಕೂಲಿ ಸಮಸ್ಯೆ ಮೊದಲಾದ ನಾನಾ ಸಂಕಷ್ಟಗಳಿಂದ ನಲುಗಿ ಹೋಗುತ್ತಿರುವ ಈ ಆಧುನಿಕ ದಿನಮಾನಗಳಲ್ಲಿ, ಕೃಷಿಕರಿಗೆ ಹೊಸ ದಾರಿ, ಹೊಸ ಸಾಧ್ಯತೆಯ ಬೆಳಕನ್ನು ತೋರಿಸಿದ ದೀಪಸ್ತಂಭ ಶಶಿಕುಮಾರ ಭಟ್ ಪಡಾರು.

ಕಾಳುಮೆಣಸಿನ ಕ್ರಾಂತಿಯ ಹರಿಕಾರ:
ಅಡಿಕೆಯೊಂದಿಗೆ ಕಾಳುಮೆಣಸು ಬೆಳೆದರೆ ರೈತನ ಆದಾಯ ದ್ವಿಗುಣವಾಗುತ್ತದೆ ಎಂಬ ಸತ್ಯವನ್ನು ಮನಗಂಡು, ಅದನ್ನು ಕೇವಲ ತಮ್ಮ ತೋಟಕ್ಕೆ ಸೀಮಿತಗೊಳಿಸದೆ ಸಾವಿರಾರು ರೈತರಿಗೆ
ಮನದಟ್ಟು ಮಾಡಿದವರು. ಕಾಳುಮೆಣಸು ಕೃಷಿಯ ಬಗ್ಗೆ ಮಾಹಿತಿ ವಿನಿಮಯಕ್ಕಾಗಿ ವಾಟ್ಸಾಪ್ ತಂಡಗಳನ್ನು ರಚಿಸಿ, ಸಾವಿರಾರು ಮಂದಿಯನ್ನು ಒಗ್ಗೂಡಿಸಿ, ಪ್ರತಿನಿತ್ಯ ತಳಿ ಆಯ್ಕೆ, ನಾಟಿ ವಿಧಾನ,
ರೋಗ ನಿರ್ವಹಣೆ, ಇಳುವರಿ ಹೆಚ್ಚಳದ ಬಗ್ಗೆ ಚರ್ಚಿಸಿ, ಅವರಲ್ಲಿ ಕಾಳುಮೆಣಸಿನ ಬಗೆಗೆ ಆಸಕ್ತಿ ಹಚ್ಚಿಸಿದ ಅಪರೂಪದ ಸಂಘಟಕರು. ಇಂದು ಕರಾವಳಿಯ ಸಾವಿರಾರು ಯುವ ರೈತರು ಅವರ ವಾಟ್ಸಾಪ್ ತಂಡಗಳಿಂದಲೇ ಕೃಷಿಗೆ ಮರಳಿದ್ದಾರೆ.

Ad Widget

Ad Widget

ಮನೆ ಬಾಗಿಲಿಗೆ ಕೃಷಿ ಸೇವೆ – ಕೇವಲ ಮಾರಾಟವಲ್ಲ ಬದ್ಧತೆ:
ಕೇವಲ ಪ್ರೇರಣೆ ನೀಡುವುದಕ್ಕೆ ಸೀಮಿತವಾಗದೆ, ಆಸಕ್ತ ಕೃಷಿಕರ ಮನೆ ಬಾಗಿಲಿಗೇ ಗುಣಮಟ್ಟದ, ರೋಗ ನಿರೋಧಕ ಶಕ್ತಿಯುಳ್ಳ ಕಾಳುಮೆಣಸಿನ ಗಿಡಗಳನ್ನು ತಲುಪಿಸುವುದು, ನಂತರ ತಜ್ಞರ ಮೂಲಕ ಬೆಳೆಸುವ ವೈಜ್ಞಾನಿಕ ವಿಧಾನವನ್ನು ತಿಳಿಸಿಕೊಡುವುದು ಮತ್ತು ಫಸಲು ಬರುವವರೆಗೂ ದೀರ್ಘಕಾಲಿಕ ಮಾರ್ಗದರ್ಶನ ನೀಡುವುದರ ಮೂಲಕ ಹೊಸಬರೂ ಧೈರ್ಯದಿಂದ ಕೃಷಿಗಿಳಿಯುವಂತೆ ಮಾಡಿದ್ದಾರೆ. ರೈತರು ಗಿಡಗಳಿಗೆ ಉಂಟಾದ ತೊಂದರೆಗೆ ಸಂಬಂಧಿಸಿದಂತೆ ಫೋಟೋ ಕಳುಹಿಸಿದರೆ ತಕ್ಷಣ ಪರಿಹಾರ ಸೂಚಿಸುವ ಅವರ ಕಾಳಜಿ ಅನನ್ಯ.

ದಾಖಲೆಯ ಸಾಧನೆ – ಮೂವತ್ತು ಲಕ್ಷದತ್ತ ಪಯಣ:
ಕಳೆದ ಬೆರಳೆಣಿಕೆಯ ವರ್ಷಗಳಲ್ಲಿ ಸರಿಸುಮಾರು ಇದುವರೆಗೆ ಮೂವತ್ತು ಲಕ್ಷಕ್ಕಿಂತಲೂ ಅಧಿಕ ಕಾಳುಮೆಣಸಿನ ಗಿಡಗಳನ್ನು ಕೃಷಿಕರ ತೋಟಗಳಿಗೆ ತಲುಪಿಸುವ ಮೂಲಕ ಕರಾವಳಿ
ಜಿಲ್ಲೆಗಳಲ್ಲಿ ಕಾಳುಮೆಣಸಿನ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಇದು ಕೇವಲ ಸಂಖ್ಯೆಯಲ್ಲ, ಕರಾವಳಿಯ ಕೃಷಿ ಭೂಪಟವನ್ನೇ ಬದಲಾಯಿಸಿದ ಸಾಧನೆ.

ಅಡಿಕೆಯೊಂದಿಗೆ ಸಮಗ್ರ ಸಹಬೆಳೆಗಳ ಕನಸು:
ಕಾಳುಮೆಣಸಿಗೆ ಮಾತ್ರ ಸೀಮಿತವಾಗದೆ, ಇವರು ಅಡಿಕೆಯ ಸಹಬೆಳೆಗಳಾಗಿ ಕಾಫಿ, ಏಲಕ್ಕಿ ಬೆಳೆಯುವುದಕ್ಕೂ ರೈತರನ್ನು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ. ಅಡಿಕೆ ತೋಟದಲ್ಲಿ ಖಾಲಿ
ಇರುವ ಜಾಗದಲ್ಲಿ ಕಾಫಿ ಮತ್ತು ಏಲಕ್ಕಿ ಬೆಳೆದು ಹೆಚ್ಚುವರಿ ಆದಾಯ ಗಳಿಸುವ ವೈಜ್ಞಾನಿಕ ಮಾದರಿಯನ್ನು ಪರಿಚಯಿಸಿದ್ದಾರೆ. ಅದಕ್ಕಾಗಿ ಗುಣಮಟ್ಟದ ಕಾಫಿ ಮತ್ತು ಏಲಕ್ಕಿ ಗಿಡಗಳನ್ನೂ ರೈತರಿಗೆ
ಒದಗಿಸುತ್ತಿದ್ದಾರೆ.

ಸಮಗ್ರ ತೋಟಗಾರಿಕಾ ಸೇವೆ:

ಇದೀಗ ಸಮಾನ ಮನಸ್ಕ ಸ್ನೇಹಿತರನ್ನು ಕೂಡಿಕೊಂಡು, ಗುಣಮಟ್ಟದ ಕಾಫಿ, ಅಡಿಕೆ, ತೆಂಗು, ಅತ್ಯಧಿಕ ಇಳುವರಿಯ ಲಿಂಬೆ, ಏಪಲ್, ಏಲಕ್ಕಿ ಮುಂತಾದ ತೋಟಗಾರಿಕಾ ಬೆಳೆಗಳ ಗಿಡಗಳನ್ನು
ಒದಗಿಸುವ ಮಹತ್ಕಾರ್ಯದಲ್ಲೂ ನಿರತರಾಗಿದ್ದಾರೆ. ರೈತನಿಗೆ ಬೇಕಾದ ಎಲ್ಲಾ ಗಿಡಗಳು – ಮಾಹಿತಿಗಳನ್ನು ಒಂದೇ ಸೂರಿನಡಿ, ಒಂದೇ ವಿಶ್ವಾಸಾರ್ಹ ಮೂಲದಲ್ಲಿ ಸಿಗುವಂತಹ ವ್ಯವಸ್ಥೆಯನ್ನು
ಕಟ್ಟಿದ್ದಾರೆ.

Ad Widget
Continue Reading

ಬಿಗ್ ನ್ಯೂಸ್

Neralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ

Published

on

Ad Widget

Ad Widget

Ad Widget

Ad Widget

ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ವಿಟ್ಲ: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ. ಈಕೆ ಕಂಬಳಬೆಟ್ಟು ಶಾಲೆಯ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ.

Ad Widget

Ad Widget <> Ad Widget

ಬಾಲಕಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!