Connect with us

Uncategorized

ದೇಶದಲ್ಲಿ ಪ್ರತಿದಿನ 38 ಕೋಟಿ ಜನರು ಅರೆಹೊಟ್ಟೆಯಲ್ಲಿ ಮಲಗುತ್ತಿದ್ದು ಅದರಲ್ಲಿ ಜಾತಿ ಧರ್ಮದ ವಿಭಜನೆಯಿಲ್ಲ – ಇನ್ನು ಇದೇ ಕಾರಣಕ್ಕೆ ಸಂಘರ್ಷ ಮುಂದುವರಿದರೆ ಜನರ ಬದುಕು ಸುಧಾರಣೆ ಯಾವಾಗ ? ಅಣ್ಣಾ ವಿನಯಚಂದ್ರ

Published

on

Ad Widget

Ad Widget

Ad Widget

Ad Widget

ಈ ದೇಶದಲ್ಲಿ ದಿನವೂ 38 ಕೋಟಿ ಜನರು ದಿನನಿತ್ಯ ಅರೆಹೊಟ್ಟೆಯಲ್ಲಿ ಮಲಗುತ್ತಾರೆ ಎಂಬ ಅಂಕಿಅಂಶ ಇದೆ.ಅನೇಕರಿಗೆ ಉದ್ಯೋಗ, ಸೂರಿನ ಕೊರತೆ ಇದೆ. ಭವಿಷ್ಯದ ಆತಂಕ ಅವರಿಗೆ ಇದೆ. ಅದರಲ್ಲಿ ಧರ್ಮ, ಜಾತಿಯ ವಿಭಜನೆಯೇ ಇಲ್ಲ. ಈಗಲೂ ಸಂಘರ್ಷ ಮುಂದುವರಿದರೆ ಈ ಜನರ ಬದುಕು ಸುಧಾರಣೆ ಹೇಗೆ ? ಈ ಬಗ್ಗೆ ಯೋಚನೆ ಆರಂಭವಾಗಬೇಕಿದೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ, ಗಾಂಧಿವಿಚಾರ ವೇದಿಕೆ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಹೇಳಿದರು.

Ad Widget

Ad Widget

Ad Widget

Ad Widget

ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಐವತ್ತೊಕ್ಲು ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಜಿದ್‌ ನ ಸಫಾ ಅಡಿಟೋರಿಯಂನಲ್ಲಿ ಶನಿವಾರ  ನಡೆದ ಧಾರ್ಮಿಕತೆಯ ಅರಿವು ವಿಚಾರ ಸಂಕಿರಣದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಧರ್ಮಗಳ ಸಾರ ಜನರ ಉನ್ನತೀಕರಣ, ಜೀವನ ಉನ್ನತೀಕರಣ. ಇದಕ್ಕಾಗಿ ವಿವಿಧ ಪೂಜಾ ಪದ್ಧತಿಗಳು. ಹೀಗಾಗಿ ಪೂಜಾ ಪದ್ಧತಿಗಳಲ್ಲಿ ಸಂಘರ್ಷ ಇರಬಾರದಿತ್ತು, ಆದರೆ ಎಲ್ಲೆಡೆಯೂ ಇಂದು ಇದಕ್ಕಾಗಿಯೇ ಸಂಘರ್ಷ ನಡೆಯುತ್ತಿದೆ. ಇದಕ್ಕೆ ಕಾರಣ ಧರ್ಮಗಳ ಅಧ್ಯಯನ ಕೊರತೆ.  ವೈಚಾರಿಕತೆಗಳು ಚಿಂತನೆ ಮಾತ್ರಾ ಆಗಬಾರದು, ಅದು ಪ್ರಾಕ್ಟಿಕಲ್‌ ಆಗುವತ್ತ ಹೆಜ್ಜೆಗಳು ಇಡಬೇಕು. ಸಮಾಜದ ಸ್ವಾಸ್ಥ್ಯದ ಕಡೆಗೆ ಎಲ್ಲರ ದೃಷ್ಟಿ ಅಗತ್ಯ ಎಂದು ವಿನಯಚಂದ್ರ ಹೇಳಿದರು.

Ad Widget

Ad Widget alt="Ad Widget"/>

Ad Widget

ಅತಿಥಿಯಾಗಿದ್ದ ಲೇಖಕ ಮುಸ್ತಾಕ್‌ ಹೆನ್ನಾಬೈಲು ಮಾತನಾಡಿ,  ಇತಿಹಾಸ, ಪುರಾಣಗಳನ್ನು ಗಮನಿಸಿದರೆ  ಪ್ರತೀ‌ ಕಾಲಘಟ್ಟದಲ್ಲೂ ಸಂಘರ್ಷ ನಡೆದಿದೆ. ಸಂಘರ್ಷ ಇಲ್ಲದೆಯೇ ಮನುಷ್ಯ ಬದುಕಿದ ಇತಿಹಾಸ ಇಲ್ಲ. ಆದರ್ಶ ಪುರುಷರ ನೆರಳಲ್ಲಿಯೇ ಜಗಳವಾಗಿದೆ.ಪ್ರತೀ ಕಾಲಘಟ್ಟದಲ್ಲೂ ಸರ್ವ ಸಮ್ಮತ ವ್ಯಕ್ತಿ ಸಿಗಲಿಲ್ಲ. ಇದೇ ವೇಳೆಯೇ ಈ ಸಂಘರ್ಷಗಳನ್ನು ತಡೆಯುವ ವ್ತಕ್ತಿಗಳೂ ಹುಟ್ಟಿಕೊಂಡಿದ್ದಾರೆ. ಇಂದು ಧರ್ಮಗಳ ನಡುವಿನ ಹೊಡೆದಾಟ ಇರುವುದು ರಾಜಕೀಯ ಪ್ರೇರಿತ. ಧರ್ಮ, ದೇವರು ಎರಡು ಎನ್ನುವುದೇ ಅಜ್ಞಾನದ ಆರಾಧನೆ, ವಿವೇಚನೆ ಇದ್ದಾಗ ಯಾವ ಸಂಘರ್ಷವೂ ನಡೆಯದು ಎಂದರು.

Ad Widget

Ad Widget <> Ad Widget

ಧರ್ಮ ಎನ್ನುವುದು ವಿಸ್ತಾರ, ಅಲ್ಲಿ ಜಗಳಕ್ಕೆ ಆಸ್ಪದವೇ ಇಲ್ಲ,  ಇದಕ್ಕೆ ಧರ್ಮ ಕಾರಣ ಅಲ್ಲ, ಧರ್ಮದ ಅರಿವು ಕಾರಣವಾಗಿದೆ. ಧರ್ಮವನ್ನು ಅನುಸರಿಸುವವರು ಧರ್ಮವನ್ನು ವಿಕಾರ ಮಾಡುತ್ತಿರುವುದು ಸಮಸ್ಯೆ ಎಂದರು. ಯಾವತ್ತೂ ಹಿಂದೂಗಳಿಂದ ಮುಸ್ಲಿಂಮರಿಗೆ, ಮುಸ್ಲಿಂಮರಿಂದ ಹಿಂದೂಗಳಿಗೆ ಅನ್ಯಾಯಗಳು ನಡೆಯುವುದಿಲ್ಲ. ಆದರೆ ರಾಜಕೀಯ ಶೋಷಣೆಗಳು ಇದನ್ನು ಹುಟ್ಟುಹಾಕುತ್ತವೆ. ಒಂದು ದೇಶದ ಯಾವುದೇ ಆಂತರಿಕ ಗಲಭೆಗೆ ಸರ್ಕಾರವೇ ಕಾರಣ ,ಯಾರೇ ಇರಲಿ ಗಲಭೆ ನಡೆದಾಗ ಏಕೆ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುವುದಿಲ್ಲ  ಎಂದು ಪ್ರಶ್ನಿಸಿದ ಅವರು ಇಂದು  ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ  ಏನಾದರೂ ಮಾತನಾಡುವುದೇ ಸಮಸ್ಯೆಯಾಗಿದೆ.ಸಂಘರ್ಷಕ್ಕೆ ಕಾರಣವಾಗುತ್ತಿದೆ. ಅದರಿಂದ ಸಾಧನೆಯಾದರೂ ಏನು ಎಂದು ಹೇಳಿದರು.

ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಲೋಕದ ಉಪಯೋಗಕ್ಕೆ ಧರ್ಮ. ಧರ್ಮದ ಮರ್ಮ ಅರಿತರೆ ಹತ್ತು ಜನರಿಗೆ  ಉಪಯೋಗ. ಅಹಂಕಾರಿ, ಕ್ರೋಧ, ಲೊಬಿ ,‌ಹುಚ್ಚ ಸೇರಿದಂತೆ ಇಂತಹ ಮನೋವೃತ್ತಿಯವರಿಗೆ ಧರ್ಮದ ತಿರುಳು ಅರಿಯದು, ಅವರಿಗೆ ತಿಳಿಹೇಳಲೂ ಬಾರದು ಎಂದು ಜ್ಞಾನಿಗಳು ಹೇಳಿದ್ದಾರೆ.  ಸಕಾರಾತ್ಮಕ ಚಿಂತನೆಯವನಿಗೆ ಧರ್ಮ ಅರಿವು ಸಾಧ್ಯವಾಗುತ್ತದೆ, ಅಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

Ad Widget

Ad Widget

ಐವತ್ತೊಕ್ಲು ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಜಿದ್‌ ಧರ್ಮಗುರು ಅಹ್ಮದ್ ಕಬೀರ್ ಅಮ್ಜಡಿ ಮಾತನಾಡಿ  ಸಮಾಜವು  ತಪ್ಪನ್ನು‌ತಪ್ಪಾಗಿಯೇ ನೋಡಬೇಕು. ತಪ್ಪನ್ನು ಸಮರ್ಥನೆಯೂ ಸರಿಯಲ್ಲ. ಉತ್ತಮ ಕಾರ್ಯಕ್ಕೆ ಪ್ರೋತ್ಸಾಹಿಸಬೇಕು. ಧರ್ಮಗಳ ತಿರುಳು ಗೌರವಿಸುವ ಮನೋಭಾವ ಬೆಳೆಯಬೇಕು, ನೋಡುವ ನೋಟಗಳು ಬದಲಾಗಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ್‌ ಪಂಜ ಮಾತನಾಡಿ ಮನುಷ್ಯರನ್ನು ಅರ್ಥ ಮಾಡಿಕೊಂಡು ಹೆಜ್ಜೆ ಇರಿಸಿದಾಗ ಬದಲಾವಣೆ ಸಾಧ್ಯ ಇದೆ. ಧರ್ಮ ಎನ್ನುವುದು  ಅರಿವು, ಈ ಅರಿವು ಪ್ರತಿಯೊಬ್ಬನಲ್ಲೂ ಬೆಳೆದಾಗ ಪರಿವರ್ತನೆ ಸಾಧ್ಯವಿದೆ. ಈ ಜಗದ ಸೃಷ್ಟಿ ಅಂದವಾಗಿದೆ, ಆದರೆ ಅದನ್ನು ವಿರೂಪ ಮಾಡಲಾಗುತ್ತಿದೆ, ಜಗತ್ತನ್ನು ನೋಡುವ ದೃಷ್ಟಿಯ ಕಡೆಗೆ ಗಮನಿಸಬೇಕು ಎಂದರು.

ಪತ್ರಕರ್ತ ಇಕ್ಬಾಲ್‌ ಬಾಳಿಲ ಮಾತನಾಡಿ ರಾಜಕೀಯ ಕಾರಣಕ್ಕಾಗಿ ಧರ್ಮವನ್ನು ಬಳಕೆ ಮಾಡಲಾಗುತ್ತಿದೆ.  ಧರ್ಮದ ಆಚರಣೆಯಲ್ಲಿ ಇರುವವರಿಗೆ ಕೋಮುವಾದ ಸಾಧ್ಯವಿಲ್ಲ. ಮಕ್ಕಳ ಹೃದಯಲ್ಲಿ ಗಾಂಧಿ ವಿಚಾರ ಇಂದು  ತರಬೇಕಾಗಿದೆ. ಇಂದಿನ ದಿನ ಕ್ಯಾಂಪಸ್ ಒಳಗಡೆ ಗಾಂಧಿ ಚಿಂತನೆಗಳು ಬೆಳೆಯಬೇಕು ಎಂದರು.

ಸಭೆಯಲ್ಲಿ ಗಾಂಧಿ ವಿಚಾರ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಉಪಸ್ಥಿತರಿದ್ದರು. ಗಾಂಧಿ ವಿಚಾರ ವೇದಿಕೆ ಕೋಶಾಧಿಕಾರಿ ಕರುಣಾಕರ ಪಲ್ಲತ್ತಡ್ಕ, ಸಲಹಾ ಸಮಿತಿ ಸದಸ್ಯ ಪೂವಪ್ಪ ಕಣಿಯೂರು, ಪಂಜ ವಲಯಾಧ್ಯಕ್ಷ ಭೀಷ್ಮಕ್‌ ಜಾಕೆ, ಮೊದಲಾದವರಿದ್ದರು.

ಗಾಂಧಿ ವಿಚಾರ ವೇದಿಕೆ ಸುಳ್ಯ ಘಟಕದ ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ರಫೀಕ್‌ ಐವತ್ತೊಕ್ಲು ನಿರೂಪಿಸಿದರು. ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ವಂದಿಸಿದರು.

Ad Widget
Click to comment

Leave a Reply

Uncategorized

Philomena-ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಾಗಾರ

Published

on

Ad Widget

Ad Widget

Ad Widget

Ad Widget

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು  ಕಾಲೇಜು ಸಭಾಂಗಣದಲ್ಲಿ  ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.

Ad Widget

Ad Widget

Ad Widget

Ad Widget

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು  ಕಾಲೇಜು ಸಭಾಂಗಣದಲ್ಲಿ  ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.

Ad Widget

Ad Widget alt="Ad Widget"/>

Ad Widget

ಸಂಪನ್ಮೂಲ ವ್ಯಕ್ತಿಗಳಾಗಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ವಂದನ ಶಂಕರ್ ಮಾತನಾಡಿ, ಪಿ ಯು ಸಿ ನಂತರದ ಅವಕಾಶಗಳು, ಇಂಜಿನಿಯರಿಂಗ್ ವಿಭಾಗಗಳಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿದರು.

Ad Widget

Ad Widget <> Ad Widget

ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಚೇತನ್ ಮಾತನಾಡಿ, ಮಾದಕ ವಸ್ತುಗಳು ಹಾಗೂ ದೂಮಪಾನದ ವ್ಯಸನ ನಮ್ಮ ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ನಮ್ಮ ಏಕಾಗ್ರತೆಯನ್ನು ಭಂಗ ಗೊಳಿಸುತ್ತದೆ ಎಂದು ಹೇಳಿದರು.

ವೃತ್ತಿ ಮಾರ್ಗದರ್ಶನ ವಿಭಾಗದ ನಿರ್ದೇಶಕರಾದ ರವಿಪ್ರಸಾದ್ ಬಿ. ಜಿ ನಿರಂಜನ್ ಜಿ. ಯು, ಕವಿತಾ ಕೆ ಹಾಗೂ ಕಾಲೇಜಿನ ಬೋಧಕ /ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Ad Widget

Ad Widget

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿ ಮೊಹಮ್ಮದ್ ಶಯಾನ್ ಅಬ್ಬಾಸ್ ಸ್ವಾಗತಿಸಿ, ವಂದಿಸಿ,
ಕಾರ್ಯಕ್ರಮವನ್ನು ನಿರೂಪಿಸಿದರು.

Ad Widget
Continue Reading

Uncategorized

ಹಿರಿಯ ಸಹಕಾರಿ ಧುರೀಣ ಕೆ.ಕೆ. ನಾರಾಯಣ ಚಳ್ಳಂಗಾರು ನಿಧನ

Published

on

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಲ್ಮಡ್ಕ: ತಾಲೂಕಿನ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ, ಬಹುಮುಖ ಚಿಂತಕ ಕಲ್ಮಡ್ಕ ಗ್ರಾಮದ ಚಳ್ಳಂಗಾರು ಕೆ.ಕೆ. ನಾರಾಯಣ (88) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.

Ad Widget

Ad Widget alt="Ad Widget"/>

Ad Widget

ಮಂಡಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದ್ದರು. ಕಲ್ಮಡ್ಕ ಸಹಕಾರಿ ಸಂಘದ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.

Ad Widget

Ad Widget <> Ad Widget

ಕಲ್ಮಡ್ಕ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದ ಅವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಅರ್ಥಧಾರಿಯಾಗಿ ಕಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ನಾರಾಯಣ ಅವರು, ಸಂಗಮ ಕಲಾ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಓದುಗ ಹಾಗೂ ವಿಮರ್ಶಕರಾಗಿದ್ದ ಅವರು ಸಾಹಿತ್ಯ, ಕಲೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಮೃತರು ಪತ್ನಿ ಸುಬ್ಬಮ್ಮ, ಪುತ್ರಿಯರಾದ ವಿದ್ಯಾ, ಜಯಶ್ರೀ, ದೀಪಿಕಾ, ಪುತ್ರ, ಕ್ಯಾಂಪ್ಕೋ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು, ಸೊಸೆ ರಮ್ಯಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Continue Reading

Uncategorized

ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕ‌ರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

Published

on

Ad Widget

Ad Widget

Ad Widget

Ad Widget

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕ‌ರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆ‌ರ್.ಅಶೋಕ್ ಅವರು ಚಾಲನೆ ನೀಡಿದರು.

Ad Widget

Ad Widget

Ad Widget

Ad Widget

ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.

Ad Widget

Ad Widget alt="Ad Widget"/>

Ad Widget

ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

Ad Widget

Ad Widget <> Ad Widget

ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧ‌ರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!