Uncategorized
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಸರಿ ಸುಮಾರು 15 ಸಾವಿರ ಮತಗಳ ಕೊರತೆ – ಈ ಬಾರಿ ಮತಗಣಿತ ಹಿಂದೆಂದಿಗಿಂತಲೂ ತುಸು ಕಷ್ಟ | ಎಲ್ಲರ ಚಿತ್ತ ಬಿಜೆಡಿ , ವೈಎಸ್ ಆರ್ ಪಿ ಪಕ್ಷಗಳತ್ತ | ಏನಿದು ಮತ ಲೆಕ್ಕಚಾರ – ಇಲ್ಲಿದೆ ಸವಿವರ

ಹಾಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ, ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ಜುಲೈ 18 ರಂದು ನಡೆಯಲಿದೆ . ಈ ಬಾರಿಯ ರಾಷ್ಟ್ರಪತಿ ಚುನಾವಣೆ ಹಿಂದೆಂದಿಗಿಂತಲೂ ಅತೀ ತುರುಸಿನ ಸ್ಪರ್ಧೆಯಾಗುವ ಸಾಧ್ಯತೆ ಗೋಚರಿಸಿದೆ.
ಅಡಳಿತರೂಢ ಎನ್ ಡಿಎ ಬಳಿ ರಾಷ್ಟ್ರಪತಿ ಚುನಾವಣೆ ಗೆಲ್ಲಲ್ಲು ಬೇಕಾದಷ್ಟು ಸಂಪೂರ್ಣ ಬಹುಮತ ಇಲ್ಲದಿರುವುದು ಇಡಿ ಚುನಾವಣೆಯನ್ನು ಕ್ಲಿಷ್ಟಕರವಾಗಿಸಿದೆ. ಎನ್ ಡಿ ಎಯೇತರ ಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಫಲರಾದರೇ ಆಗ ಈ ಚುನಾವಣೆ 1969ರ ರಾಷ್ಟ್ರಪತಿ ಚುನಾವಣೆಯನ್ನು ನೆನಪಿಸುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿದೆ.
ಆ ಬಾರಿ ಇಂದಿರಾ ಗಾಂಧಿ ತನ್ನದೇ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ದ ಬಂಡೆದ್ದು , ತನ್ನಪಕ್ಷದ ಸದಸ್ಯರಲ್ಲಿ ಆತ್ಮ ಸಾಕ್ಷಿಯ ಮತ ನೀಡುವಂತೆ ಸೂಚಿಸಿ ತನ್ನ ಪಕ್ಷೇತರ ಅಭ್ಯರ್ಥಿ ವಿವಿಗಿರಿಯನ್ನು ಸಣ್ಣ ಅಂತರದಲ್ಲಿ ಗೆಲ್ಲಿಸುಕೊಳ್ಳುವಲ್ಲಿ ಸಫಲರಾಗಿದ್ದರು. ನೀಲಂ ಸಂಜೀವ ರೆಡ್ಡಿ ಆಗ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದರು. ರಾಷ್ಟ್ರಪತಿ ಚುನಾವಣೆಯಲ್ಲಿ ವಿಪ್ ಮಾನ್ಯವಾಗುವುದಿಲ್ಲವಾದುದರಿಂದ ಪಕ್ಷದ ಸೂಚನೆಯನ್ನು ಮೀರಿ ಮತ ಚಲಾಯಿಸಿದರು ಪಕ್ಷಾಂತರ ನಿಷೇಧ ಕಾಯಿದೆ ಸಂಸದ/ ಶಾಸಕನ ಮೇಲೆ ಪರಿಣಾಮ ಬೀರುವುದಿಲ್ಲ
15 ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಚುನಾವಣೆಯ ಅಧಿಸೂಚನೆ ಜೂ 15 ರಂದು ಹೊರಡಿಸಲಾಗುತ್ತದೆ. ಜೂನ್ 29 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿರಲಿದೆ. ಜುಲೈ 18ರಂದು ಚುನಾವಣೆ ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ.
ಯಾರು ಮತದಾರರು ?
ದೇಶದ ಎಲೆಕ್ಟೋರಲ್ ಕಾಲೇಜಿನ ಸದಸ್ಯರು ಮಾತ್ರ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕಲು ಆರ್ಹರಾಗಿದ್ದಾರೆ. ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆಯಾಗಿರುವ ಸಂಸತ್ತಿನ ಉಭಯ ಸದನಗಳ ಸಂಸದರು ಮತ್ತು ದೆಹಲಿ ಮತ್ತು ಪುದುಚೇರಿ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಶಾಸನ ಸಭೆಗಳ ಎಲೆಕ್ಟೋರಲ್ ಕಾಲೇಜಿನ ಸದಸ್ಯರಾಗಿದ್ದಾರೆ. ಲೋಕಸಭೆ, ರಾಜ್ಯಸಭೆ ಹಾಗೂ ಶಾಸನ ಸಬೆಯಗೆ ನಾಮ ನಿರ್ದೇಶನರಾದವರಿಗೆಈ ಚುನಾವಣೆಗೆ ಮತ ಹಾಕುವ ಅವಕಾಶ ಇರುವುದಿಲ್ಲ.
ಅದೇ ರೀತಿ, ರಾಜ್ಯಗಳ ವಿಧಾನ ಪರಿಷತ್ತಿನ ಸದಸ್ಯರು ರಾಷ್ಟ್ರಪತಿ ಚುನಾವಣೆಯಲ್ಲೂ ಮತ ಚಲಾಯಿಸುವಂತಿಲ್ಲ. ಲೋಕಸಭೆಯು ಇಬ್ಬರು ಮತ್ತು ರಾಜ್ಯಸಭೆಯು 12 ನಾಮನಿರ್ದೇಶಿತ ಸದಸ್ಯರನ್ನು ಹೊಂದಿದ್ದು ಅವರನ್ನು ಹೊರತುಪಡಿಸಿ ಲೋಕಸಭೆಯ 543 ಮತ್ತು ರಾಜ್ಯಸಭೆಯ 233 ಸದಸ್ಯರು ಸೇರಿದಂತೆ , ಸಂಸತ್ತಿನ ಎರಡು ಸದನದ ಒಟ್ಟು 776 ಸದಸ್ಯರು ಎಲೆಕ್ಟೋರಲ್ ಕಾಲೇಜಿನ ಸದಸ್ಯರು.
ಇದರ ಜತೆಗೆ ದೆಹಲಿ ಮತ್ತು ಪುದುಚೇರಿ ಸೇರಿದಂತೆ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಡಾಳಿತ ಪ್ರದೇಶಗಳ ಶಾಸನ ಸಭೆಗಳ ಒಟ್ಟು 4,033 ಸದಸ್ಯರು ಎಲೆಕ್ಟೋರಲ್ ಕಾಲೇಜಿನ ಸದಸ್ಯರಾಗಿದ್ದಾರೆ. ಹೀಗಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುವ ಎಲೆಕ್ಟೋರಲ್ ಕಾಲೇಜಿನ ಒಟ್ಟು ಸದಸ್ಯರ ಸಂಖ್ಯೆ 4,809 ( 776 ಎಂಪಿಗಳು +4033 ಎಂಎಲ್ ಎ ಗಳು ) ಆಗಿರುತ್ತಾರೆ.
ಒಬ್ಬ ವ್ಯಕ್ತಿ – ಒಂದು ಮತ ಅಲ್ಲ
ರಾಷ್ಟ್ರಪತಿ ಚುನಾವಣೆಯಲ್ಲಿ ಉಳಿದೆಲ್ಲಾ ಚುನಾವಣೆಗಳಂತೆ ಒಬ್ಬ ವ್ಯಕ್ತಿಯ ಮತದ ಮೌಲ್ಯ ಒಂದು ವೋಟು ಆಗಿರುವುದಿಲ್ಲ. ಹಾಗೂ ಸಂಸತ್ ಸದಸ್ಯರ ಹಾಗೂ ವಿಧಾನಸಭೆಯ ಸದಸ್ಯರ ಮತಗಳ ಮೌಲ್ಯವು ಬೇರೆ ಬೇರೆ ಯಾಗಿರುತ್ತದೆ. ಇನ್ನು ವಿಧಾನಸಭೆಯ ಸದಸ್ಯರ ಮತಗಳ ಮೌಲ್ಯ ಅಯಾಯಾ ರಾಜ್ಯದ 1971ರ ಜನಸಂಖ್ಯೆಯನ್ನು ಅವಲಂಬಿಸಿದೆ.
ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರಕಾರ ಇಲ್ಲದಿರುವುದರಿಂದ, ಸಂಸತ್ ಸದಸ್ಯರ ಮತಗಳ ಮೌಲ್ಯಗಳಲ್ಲಿ ಕೊಂಚ ಕಡಿತವಾಗಿದೆ. ಈ ಹಿಂದಿನ ರಾಷ್ಟ್ರಪತಿ ಚುನಾವಣೆಗಳಲ್ಲಿ ಸಂಸತ್ ಸದಸ್ಯರ ಮತಗಳ ಮೌಲ್ಯ 708 ಇದ್ದರೇ , ಈ ಬಾರಿ ಜಮ್ಮು ಕಾಶ್ಮೀರದಲ್ಲಿ ಶಾಸನ ಸಭೆ ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಅವುಗಳ ಮೌಲ್ಯ 700 ಎಂದು ನಿಗದಿಗೊಳಿಸಲಾಗಿದೆ.ಇದನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮತಗಳ ಮೌಲ್ಯವನ್ನು ಚುನಾಯಿತ ಸಂಸದರ ಒಟ್ಟು ಸಂಖ್ಯೆಯಿಂದ ಭಾಗಿಸುವ ಮೂಲಕ ಲೆಕ್ಕಹಾಕಲಾಗುತ್ತದೆ.
ಎಂಎಲ್ʼಎ ಗಳ ಮತ ಮೌಲ್ಯ ಹೇಗೆ ?
ಶಾಸಕರ ಮತ ಮೌಲ್ಯವು ಆತ ಪ್ರತಿನಿಧಿಸುವ ರಾಜ್ಯದ ಒಟ್ಟು ವಿಧಾನ ಸಭೆಯ ಸದಸ್ಯರ ಸಂಖ್ಯೆಗೆ 1000 ದಿಂದ ಗುಣಿಸಿ ಬರುವ ಮೊತ್ತದಿಂದ ಆ ರಾಜ್ಯದ ಜನಸಂಖ್ಯೆ (1971ರ ಜನಗಣತಿಯಂತೆ)ಯನ್ನು ಭಾಗಿಸಿದಾಗ ದೊರಕುವ ಮೊತ್ತ. ಇದನ್ನ ಸಣ್ಣ ಉದಾಹರಣೆಯಿಂದ ತಿಳಿದುಕೊಳ್ಳುವ. 1971 ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ 29,299,014. ಕರ್ನಾಟಕ ವಿಧಾನ ಸಭೆಯ ಒಟ್ಟು ಸದಸ್ಯರ ಸಂಖ್ಯೆ 224
ಲೆಕ್ಕ : 29,299,014/ (224 x 100) = 130.7 ಇದರ ಹತ್ತಿರದ ಪೂರ್ಣ ಸಂಖ್ಯೆ 131 ನ್ನು ಕರ್ನಾಟಕದ ಓರ್ವ ಶಾಸಕನ ಮತ ಮೌಲ್ಯ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿ ಬೇರೆ ಬೇರೆ ರಾಜ್ಯದ ಲೆಕ್ಕಚಾರ ನಡೆಯುತ್ತದೆ.
ಉತ್ತರ ಪ್ರದೇಶ ಜನಸಂಖ್ಯಾ ಬಾಹುಳ್ಯ ಪ್ರದೇಶವಾಗಿದ್ದು ಇಲ್ಲಿಯ ಪ್ರತಿ ಶಾಸಕನ ಮೌಲ್ಯ 208 . ದ್ವಿತೀಯ ಸ್ಥಾನ ಜಾರ್ಖಂಡ್ ಹಾಗೂ ತಮಿಳುನಾಡು 176. ತೃತೀಯ ಸ್ಥಾನ ಮಹರಾಷ್ಟ್ರ 175 ಹಾಗೂ 173 ಮತ ಮೌಲ್ಯದೊಂದಿಗೆ ಬಿಹಾರ ನಾಲ್ಕನೇ ಸ್ಥಾನದಲ್ಲಿದೆ.
7 ಮತ ಮೌಲ್ಯಗಳೊಂದಿಗೆ ಸಿಕ್ಕಿಂ ಕೊನೆಯ ಸ್ಥಾನದಲ್ಲಿದ್ದು, ಅರುಣಾಚಲ ಪ್ರದೇಶ ಹಾಗೂ ಮಿಜೋರಂ 8 ಹಾಗೂ ನಾಗಲ್ಯಾಂಡ್ 9 ಮತ ಮೌಲ್ಯಗಳೊಂದಿಗೆ ಸಿಂಗಲ್ ಸಂಖ್ಯೆಯ ಮತ ಮೌಲ್ಯ ಹೊಂದಿರುವ ರಾಜ್ಯಗಳು
ಒಟ್ಟು ಮತ ಮೌಲ್ಯಗಳ ಸಂಖ್ಯೆ ಎಷ್ಟು ?
ಪ್ರತಿ ಸಂಸದರ ಮತದ ಮೌಲ್ಯ 700 ಆಗಿದ್ದು ಉಭಯ ಸದನಗಳ ಎಲೆಕ್ಟ್ರೋರೆಟ್ ಸದಸ್ಯರ ಸಂಖ್ಯೆ 776 ಆಗಿದು, ಪ್ರತಿ ಸದಸ್ಯನ ಮೌಲ್ಯ 700 ಆಗಿದ್ದು ಹೀಗಾಗಿ ಒಟ್ಟು ಮತ ಮೌಲ್ಯ 5,43,200 ಆಗಿದೆ. ಇನ್ನು ದೇಶದ ಎಲೆಕ್ಟ್ರೋರಲ್ ಕಾಲೇಜಿನ ಒಟ್ಟು ಶಾಸಕರ ಮತ ಮೌಲ್ಯ 5,43,231 ಆಗಿದೆ. ಈ ಮೂಲಕ ರಾಷ್ಟ್ರಪತಿ ಚುನಾವಣೆಗೆ ಚಲಾವಣೆಯಾಗಲಿರುವ ಒಟ್ಟು ಮತಗಳ ಮೌಲ್ಯ 10,86,431 ಆಗಲಿದೆ ಎಂದು ಗುರುವಾರ ಚುನಾವಣಾ ಆಯೋಗವು ತಿಳಿಸಿದೆ
ಇತ್ತೀಚೆಗಷ್ಟೇ ಮುಗಿದ ರಾಜ್ಯಸಭಾ ಚುನಾವಣೆಯ ಫಲಿತಾಂಶಗಳು ಸೇರಿದಂತೆ ಆಡಳಿತಾರೂಢ ಎನ್‌ಡಿಎ ಉಭಯ ಸದನಗಳಲ್ಲಿ 440 ಸಂಸದರನ್ನು ಹೊಂದಿದೆ. ಇನ್ನು ರಾಜ್ಯಗಳ ಪೈಕಿ, 273 ಶಾಸಕರನ್ನು ಹೊಂದಿರುವ ಯುಪಿಯಿಂದ ಬಿಜೆಪಿ ಗರಿಷ್ಠ 56,784 ಮತಗಳನ್ನು ಪಡೆಯಲಿದೆ. ಬಿಹಾರದಲ್ಲಿ ಎನ್‌ಡಿಎ ಯು 127 ಶಾಸಕರನ್ನು ಹೊಂದಿದ್ದು, ಅದು ಒಟ್ಟು 21,971 ಮತಗಳನ್ನು ಪಡೆಯುತ್ತದೆ, 105 ಶಾಸಕರನ್ನು ಹೊಂದಿರುವ ಮಹಾರಾಷ್ಟ್ರದಿಂದ ಅದು 18,375 ಮತಗಳನ್ನು ಪಡೆಯಲಿದ್ದು 131 ಶಾಸಕರನ್ನು ಹೊಂದಿರುವ ಮಧ್ಯಪ್ರದೇಶದಿಂದ 17,161 ಮತಗಳನ್ನು, ಗುಜರಾತ್‌ನ 112 ಶಾಸಕರ ಮೂಲಕ 16,464 ಮತಗಳನ್ನು ಸಂಪಾದಿಸಲಿದೆ. ಹೀಗೆ ಒಂದು ಅಂದಾಜು ಲೆಕ್ಕಚಾರದ ಪ್ರಕಾರ ಎನ್ ಡಿ ಎ ಬಳಿ ಒಟ್ಟು 5,30,000 (48%) ಮತಗಳಿವೆ. ಹೀಗಾಗಿ ಅದಕ್ಕೆ ಗೆಲುವಿಗೆ ಬೇಕಾದ 50% ಕ್ಕಿಂತ ಹೆಚ್ಚಿನ ಮತ ಸಂಪಾದಿಸಲು ಇನ್ನು 13 ರಿಂದ 15 ಸಾವಿರ ಮತಗಳ ಅಗತ್ಯ ಬೀಳುತ್ತದೆ.
ಬಿಜೆಪಿ ಹಿನ್ನಡೆಗೆ ಕಾರಣ
2017 ರಲ್ಲಿ ಬಿಜೆಪಿ ಬಳಿಯೆ 53% ಎಲೆಕ್ಟ್ರೋಲ್ ಮತಗಳಿದ್ದವು. ಆದರೇ ಈ ಬಾರಿ ಲೆಕ್ಕಚಾರ ಬಿಜೆಪಿಯ ಮಟ್ಟಿಗೆ ಕಳೆದ ಬಾರಿಗಿಂತ ತುಸು ಕಠಿಣವಿದೆ. 2019ರ ಲೋಕಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಗಣನೀಯವಾಗಿ ಹೆಚ್ಚಿದೆ. ಆದರೆ ಪ್ರಾದೇಶಿಕ ಪಕ್ಷಗಳ ಜತೆಗಿನ ಅದರ ಹೊಂದಾಣಿಕೆಯಲ್ಲಿ ಬದಲಾವಣೆಗಳಾಗಿವೆ. ಶಿವಸೇನಾ ಮತ್ತು ಅಕಾಲಿದಳದ ಜತೆಗಿನ ಮೈತ್ರಿ ಕಡಿದುಹೋಗಿದೆ. ತಮಿಳುನಾಡಿನಲ್ಲಿ ಮಿತ್ರಪಕ್ಷ ಎಐಎಡಿಎಂಕೆ ಸದಸ್ಯರ ಸಂಖ್ಯೆಯಲ್ಲಿ ಭಾರಿ ಕುಸಿತ ಉಂಟಾಗಿದೆ.
ಈ ವರ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡಿದ್ದರೂ ಅದರ ಶಾಸಕರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಅಲ್ಲದೆ, ರಾಜಸ್ಥಾನ, ಛತ್ತೀಸಗಡ ಕೂಡ ಸೋಲು ಕಂಡಿತ್ತು. ಮಧ್ಯಪ್ರದೇಶದಲ್ಲಿ ಕೂಡ 2017ರ ರಾಷ್ಟ್ರಪತಿ ಚುನಾವಣೆಗೆ ಹೋಲಿಸಿದರೆ ಸಂಖ್ಯೆ ಕಡಿಮೆಯಾಗಿದೆ.
ವೈಎಸ್ಆರ್‌ಸಿಪಿ ಹಾಗೂ ಬಿಜೆಡಿ ನಿರ್ಣಾಯಕ
ಹೀಗಾಗಿ ಎನ್ ಡಿಎ ತನ್ನ ಅಭ್ಯರ್ಥಿಯ ಗೆಲುವಿಗೆ ವೈಎಸ್ಆರ್‌ಸಿಪಿ ಹಾಗೂ ಬಿಜೆಡಿ ಪಕ್ಷಗಳ ಮೇಲೆ ಅವಲಂಬನೆ ಹೊಂದುವಂತಾಗಿದೆ. ಇತ್ತೀಚೆಗಷ್ಟೇ ಒಡಿಶಾ ಸಿಎಂ ಹಾಗೂ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ಸಿಪಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಆದರೆ ಈ ಸಭೆಗಳಲ್ಲಿ ಚರ್ಚೆಯಾದ ವಿಷಯ ಬಹಿರಂಗವಾಗಿಲ್ಲ.
ಎಲೆಕ್ಟೊರಲ್ ಕಾಲೇಜಿನಲ್ಲಿ ವೈಎಸ್‌ಆರ್‌ಪಿ ಸುಮಾರು 43,000 ಮತಗಳು ಮತ್ತು ಬಿಜೆಡಿ ಸುಮಾರು 31,000 ಮತಗಳ ಸಂಖ್ಯೆಯನ್ನು ಹೊಂದಿವೆ. ಹೀಗಾಗಿ ಈ ಎರಡು ಪಕ್ಷಗಳಲ್ಲಿ ಒಂದು ಪಕ್ಷದ ಬೆಂಬಲ ಸಿಕ್ಕರೂ ಬಿಜೆಪಿ ಮೈತ್ರಿಕೂಟ ಸುಗಮ ಗೆಲುವು ಕಾಣಲಿದೆ
ಇಷ್ಟಾದರೂ, ಚುನಾವಣೆಯಲ್ಲಿ ಎನ್‌ಡಿಎ ಒಂದು ಹೆಜ್ಜೆ ಮುಂದೆ ಇದೆ. ಎನ್ ಡಿಎ ಯೇತರ ವಿರೋಧ ಪಕ್ಷಗಳು ತನ್ನ ಅಭ್ಯರ್ಥಿಯ ಆಯ್ಕೆಯಲ್ಲಿ ಇನ್ನಷ್ಟೆ ಒಮ್ಮತದ ತೀರ್ಮಾನಕ್ಕೆ ಬರಬೇಕಿದೆ. ಸಕ್ರಿಯ ಮತ್ತು ಜನಪ್ರಿಯ ರಾಜಕಾರಣಿ ಅಥವಾ ಹೆಸರಾಂತ ವ್ಯಕ್ತಿಯನ್ನು ಆಯ್ದುಕೊಳ್ಳಬೇಕಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ಸೇತರ ಜಂಟಿ ಬಣ ನಿರ್ಮಾಣಕ್ಕಾಗಿ ಟಿಎಂಸಿ, ಟಿಆರ್‌ಎಸ್ ಮತ್ತು ಎಎಪಿಯಂತಹ ಪ್ರಾದೇಶಿಕ ಪಕ್ಷಗಳ ಮಧ್ಯೆ ಹಗ್ಗ ಜಗ್ಗಾಟ ನಡೆದಿದೆ. ಇನ್ನು ಜೂ 15 ರಂದು ತೃಣಮೂಲ ಕಾಂಗ್ರೇಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಬಿಜೆಪಿಯೇತರ ಪಕ್ಷಗಳ ಸಭೆ ಕರೆದಿದ್ದು ಅದರಲ್ಲಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಎಲ್ಲರ ಚಿತ್ತ ನಾಳಿನ ಸಭೆ ಹಾಗೂ ವೈಎಸ್‌ಆರ್‌ಪಿ ಹಾಗು ಬಿಜೆಡಿ ಪಕ್ಷಗಳ ನಿಲುವಿನ ಮೇಲೆ ನಿಂತಿದೆ
Uncategorized
ಹಿರಿಯ ಸಹಕಾರಿ ಧುರೀಣ ಕೆ.ಕೆ. ನಾರಾಯಣ ಚಳ್ಳಂಗಾರು ನಿಧನ

ಕಲ್ಮಡ್ಕ: ತಾಲೂಕಿನ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ, ಬಹುಮುಖ ಚಿಂತಕ ಕಲ್ಮಡ್ಕ ಗ್ರಾಮದ ಚಳ್ಳಂಗಾರು ಕೆ.ಕೆ. ನಾರಾಯಣ (88) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.
ಮಂಡಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದ್ದರು. ಕಲ್ಮಡ್ಕ ಸಹಕಾರಿ ಸಂಘದ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.
ಕಲ್ಮಡ್ಕ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದ ಅವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಅರ್ಥಧಾರಿಯಾಗಿ ಕಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ನಾರಾಯಣ ಅವರು, ಸಂಗಮ ಕಲಾ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಓದುಗ ಹಾಗೂ ವಿಮರ್ಶಕರಾಗಿದ್ದ ಅವರು ಸಾಹಿತ್ಯ, ಕಲೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಮೃತರು ಪತ್ನಿ ಸುಬ್ಬಮ್ಮ, ಪುತ್ರಿಯರಾದ ವಿದ್ಯಾ, ಜಯಶ್ರೀ, ದೀಪಿಕಾ, ಪುತ್ರ, ಕ್ಯಾಂಪ್ಕೋ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು, ಸೊಸೆ ರಮ್ಯಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Uncategorized
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಚಾಲನೆ ನೀಡಿದರು.
ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.
ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.
Uncategorized
Puttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡೂರು ಗ್ರಾಮದ ಕೃಷ್ಣನಗರದಲ್ಲಿ ನಡೆದಿದೆ.
ಪುತ್ತೂರು: ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡೂರು ಗ್ರಾಮದ ಕೃಷ್ಣನಗರದಲ್ಲಿ ನಡೆದಿದೆ.
ಕೃಷ್ಣನಗರದಲ್ಲಿ ಉದಯ ಕುಮಾರ್ ಅವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಹಿರೇಬಂಡಾಡಿ ಮೂಲದ ಯತೀಶ್ ಅವರು ಕುಟುಂಬ ಸಮೇತರಾಗಿ ವಾಸವಾಗಿದ್ದಾರೆ. ಸಹೋದರ ತಿಲಕ್ ಅವರ ಮದುವೆ ಕಾರ್ಯಕ್ರಮದ ನಿಮಿತ್ತ ನ.12ರಂದು ರಾತ್ರಿ ಮನೆಗೆ ಬೀಗ ಹಾಕಿ ಕುಟುಂಬದೊಂದಿಗೆ ಹಿರೇಬಂಡಾಡಿ ಗ್ರಾಮದ ಕೆಮ್ಮಾರದಲ್ಲಿರುವ ತಮ್ಮ ಮನೆಗೆ ತೆರಳಿದ್ದರು.
ಮದುವೆ ಕಾರ್ಯಕ್ರಮ ಮುಗಿಸಿ, ನ.16ರಂದು ರಾತ್ರಿ ನಡೆಯಲಿದ್ದ ಔತಣಕೂಟಕ್ಕೆ ತೆರಳುವ ಮೊದಲು ಮಗುವಿನ ಬಟ್ಟೆ ಹಾಗೂ ಇತರ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಂಜೆ ವೇಳೆ ಬಾಡಿಗೆ ಮನೆಗೆ ಬಂದಾಗ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಮನೆಯೊಳಗೆ ತೆರಳಿ ಪರಿಶೀಲಿಸಿದಾಗ ಎರಡು ಕಬ್ಬಿಣದ ಕಪಾಟುಗಳ ಬಾಗಿಲುಗಳನ್ನು ಯಾವುದೋ ಸಾಧನದಿಂದ ಮೀಟಿ ತೆರೆಯಲಾಗಿತ್ತು. ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಮೂರು ಜೊತೆ ಚಿನ್ನದ ಬೆಂಡೋಲೆ (12 ಗ್ರಾಂ), ಒಂದು ಮೂಗುತಿ (1 ಗ್ರಾಂ), ಮಗುವಿನ ಎರಡು ಜೊತೆ ಕಿವಿಯೋಲೆಗಳು (ಒಟ್ಟು 5 ಗ್ರಾಂ), ಎರಡು ಮಗುವಿನ ಬಳೆಗಳು (4 ಗ್ರಾಂ), 40 ಸಾವಿರ ರೂ. ಮೌಲ್ಯದ ಡೈಮಂಡ್ ಪೆಂಡೆಂಟ್ ಹಾಗೂ 3 ಸಾವಿರ ರೂ. ನಗದು ಹಣವನ್ನು ಕಳವು ಮಾಡಿದ್ದಾರೆ.
ಕಳವಾದ ಚಿನ್ನಾಭರಣಗಳ ಒಟ್ಟು ತೂಕ ಸುಮಾರು 22 ಗ್ರಾಂ ಆಗಿದ್ದು, ನಗದು ಹಣ ಹಾಗೂ ಡೈಮಂಡ್ ಪೆಂಡೆಂಟ್ ಸೇರಿದಂತೆ ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 2.19 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಅಪರಾಧ19 hours agoMangalore-ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಅಪಹರಣ..! ಹಿಂದೂ ಯುವಕ ಲವ್ ಆರೋಪ – ವಿಡಿಯೋ ವೈರಲ್ : ತನಿಖೆಗೆ ಕಮಿಷನರ್ ಸೂಚನೆ
-
ರಾಜಕೀಯ19 hours agoBJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
-
ಬಿಗ್ ನ್ಯೂಸ್18 hours agoHigh Court-Social Media ಅಕೌಂಟ್ ಇದ್ದ ಮಾತ್ರಕ್ಕೆ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡುವ Free Licence ಇಲ್ಲ : ಬೆಳ್ತಂಗಡಿಯ ಮೋಹನ್ ಬೋಳಂಗಡಿ – ಶುಭಾ ರೈ ವಿರುದ್ಧ ದಾಖಲಾದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಎಚ್ಚರಿಕೆ
-
ಸಿನೆಮಾ24 hours agoArjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
-
ನಿಧನ ವಾರ್ತೆ18 hours agoSavitri Devi-ಸಿಎಂ ಯೋಗಿ ಆದಿತ್ಯನಾಥ್ ತಾಯಿ ಸಾವಿತ್ರಿ ದೇವಿ ನಿಧನ
-
ದಕ್ಷಿಣ ಕನ್ನಡ16 hours ago
Ashok janamana 2026 : ಪುತ್ತೂರಿನಲ್ಲಿ ಅದ್ದೂರಿ ‘ಅಶೋಕ ಜನಮನ-2026’ ಸಂಭ್ರಮಕ್ಕೆ ಕ್ಷಣಗಣನೆ ! ಬಿ.ಕೆ. ಹರಿಪ್ರಸಾದ್, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಸಹಿತ ರಾಜಕೀಯ, ಧಾರ್ಮಿಕ ಗಣ್ಯರ ಸಮಾಗಮ
-
ಅಪರಾಧ17 hours agoMangalore-ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಮನೆ ಮಾಲೀಕನ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬ ಖುಲಾಸೆ
-
ಬಿಗ್ ನ್ಯೂಸ್22 hours agoMuraleedhar Rai-ಮೆಸ್ಕಾಂ ನಿರ್ದೇಶಕರಾಗಿ ಮುರಳೀಧರ ರೈ ಮಠಂತಬೆಟ್ಟು ಸರ್ಕಾರದಿಂದ ನೇಮಕ















