Connect with us

ಅಪರಾಧ

Political Exclusive : ಸುಳ್ಯ : ಅಂಗಾರ ವಿರೋಧಿ ಬಿಜೆಪಿ ಕಾರ್ಯಕರ್ತರಿಂದ ನಡೆಯುತಿದ್ದೆ ಹೊಸ ನಾಯಕನಿಗೆ ಸಿಂಗಾರ – ಸಾಮಾಜಿಕ ಜಾಲತಾಣದಲ್ಲಿ ನಿರಂತರ ಪ್ರಚಾರ

Published

on

Ad Widget

Ad Widget

Ad Widget

Ad Widget

ಕರ್ನಾಟಕ ಸರಕಾರದ ಸಚಿವ ಹಾಗೂ ಸುಳ್ಯ ವಿಧಾನಸಭಾ (ಮೀಸಲು) ಕ್ಷೇತ್ರದ  ಸತತ 6 ಬಾರಿಯ ಶಾಸಕ ಎಸ್‌ ಅಂಗಾರವರನ್ನು ರಾಜಕೀಯವಾಗಿ ಬದಿಗೆ ಸರಿಸುವ ವ್ಯವಸ್ಥಿತ ಕಾರ್ಯವೊಂದು ಸ್ವಪಕ್ಷೀಯರ ಒಂದು ಬಣದಿಂದ ನಡೆಯುತ್ತಿದೆ ಎನ್ನುವ ಮಾತುಗಳು ಸದ್ಯ ಸುಳ್ಯ ರಾಜಕೀಯ ಪಡಸಾಲೆಯಲ್ಲಿ ಗುಟ್ಟಾಗಿ ಉಳಿದಿಲ್ಲ.

Ad Widget

Ad Widget

Ad Widget

Ad Widget

1994ರಿಂದ ಸುಳ್ಯ ಕ್ಷೇತ್ರದ ಶಾಸಕರಾಗಿರುವ ಅಂಗಾರರು ಜನಾನುರಾಗಿ ಹಾಗೂ ಅಜಾತ ಶತ್ರು ಎಂದೇ ಖ್ಯಾತರು. ಸರಳ ಸಜ್ಜನಿಕೆಯ ಅವರ ವ್ಯಕ್ತಿತ್ವ ಅಲ್ಲಿನ ಜನಸ್ತೋಮಕ್ಕೆ ಮೆಚ್ಚುಗೆಯಾದುದರಿಂದಲೇ ಅವರು ಹೀಗೆ ಸತತವಾಗಿ ಗೆಲುವಿನ ನಗೆ ಬೀರುತ್ತಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. 1990ರ ಬಳಿಕ ಮೊದಲ ಬಾರಿ ಶಾಸಕರಾದ ದ.ಕ ಜಿಲ್ಲೆಯ ಶಾಸಕರುಗಳ ಪೈಕಿ  ಸತತ ಆರು ಬಾರಿ  ಗೆದ್ದ ಉದಾಹರಣೆ ಇರುವುದು ಅಂಗಾರರದು  ಮಾತ್ರ.

Ad Widget

Ad Widget alt="Ad Widget"/>

Ad Widget

ಕಳೆದ 50 ವರ್ಷದ (1972 ರಿಂದ)  ರಾಜಕೀಯ ಇತಿಹಾಸ ನೋಡಿದರೇ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಗೆದ್ದ ಪಾರ್ಟಿಯೇ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತದೆ. ಈ ಎರಡು ಕ್ಷೇತ್ರಗಳ ರಾಜಕೀಯ ಟ್ರೆಂಡ್‌ ಬಹುತೇಕ ಒಂದೇ ರೀತಿ ಇರುವುದು ಅಂಕಿ ಅಂಶಗಳು ಸಾಬೀತು ಮಾಡುತ್ತಾದೆ. ಲೋಕಸಭಾ ಚುನಾವಣೆಯಲ್ಲೂ ಇದೇ ಟ್ರೆಂಡ್‌ ಜಾರಿಯಲ್ಲಿರುತ್ತಾದೆ.  ಇದಕ್ಕೆ ಏಕೈಕ ಅಪವಾದ ಎಂದರೇ 2013ರ ಚುನಾವಣೆ. ಆ ಸಾಲಿನಲ್ಲಿ ಪುತ್ತೂರಿನಲ್ಲಿ ಕಾಂಗ್ರೇಸ್‌ ಗೆಲುವು ಸಾಧಿಸಿದರೂ , ಸುಳ್ಯದಲ್ಲಿ ಅಂಗಾರರನ್ನು ಕಾಂಗ್ರೇಸ್ಸಿಗೆ ಸೋಲಿಸಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂಗಾರರ ವೈಯುಕ್ತಿಕ ವರ್ಚಸ್ಸು.   

Ad Widget

Ad Widget <> Ad Widget

ಆದರೇ 28 ವರ್ಷಗಳ ಸುದೀರ್ಘ ಶಾಸಕತ್ವದ ಅವಧಿಯ ಬಳಿಕ ಮೊದಲ ಬಾರಿಗೆ ಅವರ ವಿರುದ್ದ ಅಡಳಿತ ವಿರೋಧಿ ಅಲೆಯೊಂದು ಬಹುತೇಕ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದು, ಆದರೇ ಕಳೆದ ಹಲವು ಬಾರಿ ಅದು ಸ್ಪೋಟಗೊಂಡು ಬಹಿರಂಗಗೊಂಡ ಉದಾಹರಣೆಯು ಇದೆ.  ಈ ಬಾರಿ ಅವರು ಸಚಿವರೂ  ಆಗಿರುವುದರಿಂದ ಅವರ ಬಗ್ಗೆ ಕ್ಷೇತ್ರದ ಜನತೆಗೆ ಅತೀವವಾದ ನಿರೀಕ್ಷೆಗಳಿವೆ. ಆ ನಿರೀಕ್ಷೆಗೆ ತಕ್ಕ ಕೆಲಸಗಳು ಸುಳ್ಯದಲ್ಲಿ ಆಗಿರುವುದು ಕಂಡು ಬರುವುದಿಲ್ಲ, ಇದರ ಜತೆಗೆ ಅಂಗಾರರು  ಕೂಡ ಜನರ ನಡುವಿನ ಸಂಪರ್ಕವನ್ನು ಕಡಿಮೆ ಮಾಡಿದ್ದಾರೆ. ಕಾರ್ಯಕರ್ತರಿಗೆ ಹಾಗೂ ಜನರಿಗೆ ಸುಲಭದಲ್ಲಿ ಸಿಗುವುದಿಲ್ಲ. ಸಭೆ ಸಮಾರಂಭ ಕಾರ್ಯಕ್ರಮಗಳಲ್ಲಿ ಮೊದಲಿನಷ್ಟು ಭಾಗವಹಿಸುತ್ತಿಲ್ಲ.ಎನ್ನುವ ಆರೋಪಗಳು ಪಕ್ಷದ ಕಾರ್ಯಕರ್ತರ ವಲಯದಲ್ಲಿದೆ ಎನ್ನಲಾಗುತ್ತಿದೆ.

ಸುಳ್ಯ ಗ್ರಾಮೀಣ ಪ್ರದೇಶವಾಗಿದ್ದು , ಇದು ರಾಜ್ಯದ ಉಳಿದ ಅಭಿವೃದ್ದಿ ಹೊಂದಿದ ಕ್ಷೇತ್ರಗಳಿಗೆ , ಅಥಾವ ಪಕ್ಕದ ಪುತ್ತೂರಿಗೆ ಹೋಲಿಸಿದರೇ   ದೊಡ್ಡ ಪ್ರಮಾಣದಲ್ಲಿ  ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಸುಳ್ಯದ ಜೀವನಾಡಿಯಾಗಿರುವ, ಅರ್ಥಿಕತೆಯ ಮೂಲ ಸೆಲೆಯಾಗಿರುವ   ಅಡಿಕೆ ಬೆಳೆಯಲ್ಲಿ ಕಾಣಿಸಿಕೊಂಡ ಹಳದಿ ರೋಗಕ್ಕೆ ಅಂಗಾರರ ಒಟ್ಟು ಶಾಸಕತ್ವದ ಅವಧಿಯಷ್ಟೆ ವಯಸ್ಸಾಗಿದೆ. ಹಾಗಿದ್ದು ಸುಮಾರು 25 ವರ್ಷಗಳ ಕಾಲಾವಧಿಯಲ್ಲಿ  ಆ ಸಮಸ್ಯೆಗೆ  ಪರಿಹಾರ ಕೊಡಿಸುವಲ್ಲಿ, ಕಂಡುಕೊಳ್ಳುವಲ್ಲಿ ,  ಹುಡುಕುವಲ್ಲಿ ಶಾಸಕರ ಪ್ರಯತ್ನ ಗಮನಕ್ಕೆ ಬಂದದ್ದು ಕಮ್ಮಿ . ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಅಡಳಿತವಿದ್ದಾಗಲೂ  ಅಡಳಿತ ಶಾಹಿಯ ಮೇಲೆ ಪ್ರಭಾವ ಭೀರಿ ಕೆಲಸ ಮಾಡಿಸುವಲ್ಲಿ ಅಂಗಾರರು ವಿಫಲರಾಗಿದ್ದಾರೆ ಎಂಬ ಆರೋಪಗಳು ತೊಂದರೆಗೆ ಒಳಗಾದ ರೈತರ  ಮಧ್ಯೆ ಇದೆ

Ad Widget

Ad Widget

ರಸ್ತೆ, ಸೇತುವೆ, ಶಾಲೆ, ಆರೋಗ್ಯ ಇತ್ಯಾದಿ ಮೂಲಭೂತ ಸೌಕರ್ಯದಲ್ಲಿ ಸುಳ್ಯ ಬಹಳಷ್ಟು ಹಿಂದಿದ್ದು, ಇದರ ಪೂರೈಸುವಲ್ಲಿಯೂ ಅಂಗಾರರು ಗಮನಾರ್ಹ ಪ್ರಗತಿ ಸಾಧಿಸಿಲ್ಲ . ರಸ್ತೆ, ಸೇತುವೆಗಾಗಿ ಕಾರ್ಯಕರ್ತರೇ ಬೀದಿಗಿಳಿದು  ಹೋರಾಟ ಮಾಡಬೇಕಾದ ಅನಿವಾರ್ಯತೆ ಕ್ಷೇತ್ರದಲ್ಲಿ  ಒದಗಿ ಬಂದಿರುವುದು ಕಾರ್ಯಕರ್ತರ ಹಾಗೂ ಮತದಾರರ ಭ್ರಮನಿರಸನಕ್ಕೆ ಕಾರಣವಾಗಿದೆ. ಹೀಗಾಗಿ ಅವರನ್ನು ಬದಲಾಯಿಸಬೇಕು ಎಂಬ ಕೂಗು ಬಿಜೆಪಿಯ ತಳ ಮಟ್ಟದ ಕಾರ್ಯಕರ್ತರ  ಮಧ್ಯೆ ಧ್ವನಿಸುತ್ತಿದ್ದು ಇದಕ್ಕೆ ತುಪ್ಪ ಸುರಿಯುವ ಕಾರ್ಯವನ್ನು ಬಿಜೆಪಿಯಲ್ಲಿರುವ ಅಂಗಾರರ ವಿರೋಧಿ ಬಣ ಮಾಡುತ್ತಿದೆ.

ಕಳೆದ ಡಿಸಿಸಿ ಬ್ಯಾಂಕ್‌ ಚುನಾವಣೆ ಬಳಿಕ ಸುಳ್ಯ ಬಿಜೆಪಿ ಒಡೆದ ಮನೆಯಾಗಿತ್ತು.   ಬಳಿಕ ನಡೆದ ಪಂಚಾಯತ್‌  ಚುನಾವಣೆಯಲ್ಲೂ ಇದು ಪ್ರತಿಧ್ವನಿಸಿ ಬಂಡಾಯ, ಅಮಾನತು  ಉಚ್ಚಾಟನೆ   ಇತ್ಯಾದಿಗಳೆಲ್ಲ ನಡೆದು ಕೊನೆಗೆ ಇದಕ್ಕೆ ಮುಲಾಮ್‌ ಹಚ್ಚುವಲ್ಲಿ ನಳಿನ್‌ ಕುಮಾರ್‌ ಕಟೀಲ್‌ ನೇತ್ರತ್ವದ ಜಿಲ್ಲಾ ಬಿಜೆಪಿ ಯಶಸ್ವಿಯಾಗಿತ್ತು. ಆದರೇ ಮೇಲ್ನೋಟಕ್ಕೆ ಗಾಯ ಮಾಸಿದರು, ಗಾಯದ ಗುರುತು ಹಾಗೇ ಉಳಿದುಕೊಂಡಿದೆ.

ಆದರೇ ಈ ಗೊಂದಲದ ಸಂದರ್ಭ ಅಲ್ಲಿನ ಸಂಘದ ಮುಖಂಡರ ಸೂಚನೆಯ ಮೇರೆಗೆ ಅಂಗಾರರು ತನ್ನ ಅತ್ಯಾಪ್ತ ಬಳಗದಲ್ಲಿದ್ದ ವ್ಯಕ್ತಿಯೊಬ್ಬರನ್ನು ದೂರವಿರಿಸಿದ್ದಾರೆ. ಇದರಿಂದ  ಅವರೀಗ ಅಂಗಾರರ ವಿರುದ್ದ ಮುನಿಸಿಕೊಂಡಿದ್ದು  ಅತೃಪ್ತ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.  ಆ ವಿರೋಧಿ ಬಣವು ಬಿಜೆಪಿಯ ಮತ್ತೊಬ್ಬ ಪರಿಶಿಷ್ಟ ಜಾತಿಯ ನಾಯಕನನ್ನು  ಅಂಗಾರ ರ ವಿರುದ್ದ ಅಭ್ಯರ್ಥಿಯಾಗಿ ಬಿಂಬಿಸಲು ಯತ್ನಿಸುತ್ತಿದೆ.

 ತಾಲೂಕು ಪಂಚಾಯತಿನಲ್ಲಿ ಆಯಕಟ್ಟಿನ ಸ್ಥಾನವನ್ನು ಅಲಂಕರಿಸಿದ್ದ ಹಾಗು ಪಕ್ಷದಲ್ಲಿ ಈಗಲೂ ಪ್ರಮುಖ ಹುದ್ದೆಯಲ್ಲಿರುವ ಅವರ ಬಯೋಡೆಟಾ ತಯಾರಿಸಿರುವ ಈ ತಂಡ ಅವರ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಪ್ರಚಾರದಲ್ಲಿ ತೊಡಗಿಸಿದೆ. ಅತ್ಯುತ್ತಮ ಶೈಕ್ಷಣಿಕ ಹಿನ್ನಲೆ ಹಾಗೂ ಅಡಳಿತ ಅನುಭವ ಇರುವ ಮುಖಂಡ ಅಂಗಾರರಿಗಿಂತ ಬೆಟರ್‌ ಕ್ಯಾಂಡಿಡೇಟ್‌ ಎಂದು ಬಿಂಬಿಸಲು ಅಗತ್ಯ ʼ ಸಿಂಗಾರʼ ಮಾಡಿದೆ.

ಭಿನ್ನಮತೀಯ ತಂಡದ ಪ್ರಯತ್ನಕ್ಕೆ ಸಂಘದ ಹಿರಿಯರೊಬ್ಬರು ಕೈ ಜೋಡಿಸಿರುವುದು ಗೊತ್ತಾಗಿದೆ. ಅವರಿಗೆ ಅಂಗಾರರ ಬಗ್ಗೆ ಪ್ರೀತಿ ಇದ್ದರೂ , ಅಂಗಾರರು ಈ ಬಾರಿ ಗೆಲ್ಲುವುದು ಕಷ್ಟ ಎಂಬ ವರದಿ ಅವರ ಕೈ ಸೇರಿದ ಬಳಿಕ , ಕ್ಷೇತ್ರದಲ್ಲಿ ಪಕ್ಷದ ಹಿಡಿತ ಕೊನೆಯಾಗಬಾರದು ಎಂಬ ಹಿನ್ನಲೆಯಲ್ಲಿ ಅವರು ಹೊಸ ನಾಯಕನ ಪ್ರಚಾರದದ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಬಿಜೆಪಿಯ ಕೇಂದ್ರ ಹೈಕಮಾಂಡ್‌ ಎರಡು ಪ್ರತ್ಯೇಕ ಖಾಸಗಿ ತಂಡಗಳ ಮೂಲಕ ರಾಜ್ಯವ್ಯಾಪಿ ಚುನಾವಣಾ ಸಮೀಕ್ಷೆ ನಡೆಸಿದೆ . ಅದರಲ್ಲಿ ಸುಳ್ಯ ಬಿಜೆಪಿಯ ಮಟ್ಟಿಗೆ ಡೆಂಜರ್‌ ಝೋನ್‌ ನಲ್ಲಿ ಕಾಣಿಸಿದೆ. ಸುಳ್ಯದಲ್ಲಿ ಪಕ್ಷ ತಳಮಟ್ಟದಲ್ಲಿ ಗಟ್ಟಿಯಾಗಿದ್ದರೂ ಅಂಗಾರರ ವಿರುದ್ದವಾಗಿರುವ ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಬಹುದು ಎಂದು ಅದು ತಿಳಿಸಿರುವುದಾಗಿ ವರದಿಯಾಗಿದೆ. ಹೀಗಾಗಿಯೇ ಸುಳ್ಯದ ರಾಜಕೀಯ ಪಲ್ಲಟಗಳ ಬಗ್ಗೆ ಹಾಗೂ ಬಿಜೆಪಿಯ ಕಾರ್ಯಶೈಲಿಯ ಬಗ್ಗೆ ಹದ್ದಿನ ಕಟ್ಟಿರುವ ಸಂಘದ ಮುಖಂಡ ಅಭ್ಯರ್ಥಿ ಬದಲಾವಣೆಗೆ ಮನ ಮಾಡಿದ್ದು , ಅವರ ನಿರ್ಧಾರ ಸುಳ್ಯದಲ್ಲಿ  ಪಕ್ಷದ ಮಟ್ಟಿಗೆ ವೇದವಾಕ್ಯ ಎಂದು ಹೇಳಲಾಗುತ್ತಿದೆ  

Ad Widget
Click to comment

Leave a Reply

ಅಂತರ ರಾಜ್ಯ

Arrested-14ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕಾರರ ಬೇಡಿಕೆಯಂತೆ 25ಲಕ್ಷ ರೂ ನೀಡಿದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಮಹತ್ವದ ತಿರುವು..!

Published

on

Ad Widget

Ad Widget

Ad Widget

Ad Widget

14 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ತ್ರಿಪುರದ ಶಾಲಾ ಶಿಕ್ಷಕರ ಅಪಹರಣ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಅಪಹರಣಕಾರರ ಬೇಡಿಕೆಯಂತೆ ಕುಟುಂಬಸ್ಥರು ಸುಮಾರು ₹25 ಲಕ್ಷ ಸುಲಿಗೆ ಹಣ ನೀಡಿದ್ದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರ ಪೊಲೀಸರ ಅಪರಾಧ ತನಿಖಾ ದಳ (CID) ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪ್ರಮುಖ ಶಂಕಿತನೊಬ್ಬನನ್ನು ಬಂಧಿಸಿದೆ.

Ad Widget

Ad Widget

Ad Widget

Ad Widget

ಅಗರ್ತಲಾ: ಬರೋಬ್ಬರಿ 14 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ತ್ರಿಪುರದ ಶಾಲಾ ಶಿಕ್ಷಕರ ಅಪಹರಣ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಅಪಹರಣಕಾರರ ಬೇಡಿಕೆಯಂತೆ ಕುಟುಂಬಸ್ಥರು ಸುಮಾರು ₹25 ಲಕ್ಷ ಸುಲಿಗೆ ಹಣ ನೀಡಿದ್ದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರ ಪೊಲೀಸರ ಅಪರಾಧ ತನಿಖಾ ದಳ (CID) ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪ್ರಮುಖ ಶಂಕಿತನೊಬ್ಬನನ್ನು ಬಂಧಿಸಿದೆ.

Ad Widget

Ad Widget alt="Ad Widget"/>

Ad Widget

ಬಾಜು ಎಂದು ಗುರುತಿಸಲಾಗಿರುವ ಆರೋಪಿಯನ್ನು ಗುರುವಾರ ಬಂಧಿಸಿ ಅಗರ್ತಲಾಗೆ ಕರೆತರಲಾಗಿದೆ. ಬಳಿಕ ಪಶ್ಚಿಮ ತ್ರಿಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ನಾಲ್ಕು ದಿನಗಳ ಕಾಲ ಸಿಐಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Ad Widget

Ad Widget <> Ad Widget

ಏನಿದು 14 ವರ್ಷಗಳ ಹಿಂದಿನ ಪ್ರಕರಣ?
ಅಗರ್ತಲಾದ ಭಾಟಿ ಅಭಯನಗರ ನಿವಾಸಿ ಆಶಿಶ್ ಸೋಮ್ (40) ಎಂಬ ಶಾಲಾ ಶಿಕ್ಷಕರು 2011ರ ಮೇ 28ರಂದು ನಿಗೂಢವಾಗಿ ನಾಪತ್ತೆಯಾಗಿದ್ದರು. ಮರದ ವ್ಯಾಪಾರದಲ್ಲಿಯೂ ತೊಡಗಿಸಿಕೊಂಡಿದ್ದ ಅವರು, ವ್ಯವಹಾರದ ನಿಮಿತ್ತ ಕಾಂಚನ್‌ಪುರಕ್ಕೆ ತೆರಳಿದ ಬಳಿಕ ಮನೆಗೆ ವಾಪಸಾಗಿರಲಿಲ್ಲ.

ಶಿಕ್ಷಕರು ನಾಪತ್ತೆಯಾದ ಕೆಲವೇ ದಿನಗಳಲ್ಲಿ ಅವರನ್ನು ಅಪಹರಿಸಿರುವುದಾಗಿ ಹೇಳಿಕೊಂಡು ಕುಟುಂಬಸ್ಥರಿಗೆ ದೂರವಾಣಿ ಕರೆಗಳು ಬಂದಿದ್ದವು. ಅಪಹರಣಕಾರರು ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿವಿಧ ಹಂತಗಳಲ್ಲಿ ಸುಮಾರು ₹25 ಲಕ್ಷ ಹಣವನ್ನು ನೀಡಿದ್ದಾರೆ. ಆದರೆ ಹಣ ಪಡೆದ ಬಳಿಕವೂ ಶಿಕ್ಷಕರನ್ನು ಬಿಡುಗಡೆ ಮಾಡಿರಲಿಲ್ಲ. ಹಲವು ವರ್ಷಗಳ ಕಾಲ ಅವರ ಸುಳಿವು ಕೂಡ ಪತ್ತೆಯಾಗಿರಲಿಲ್ಲ.

Ad Widget

Ad Widget

ಸಮಾಧಿಗಳಲ್ಲಿ ಪತ್ತೆಯಾದ ಅಸ್ಥಿಪಂಜರದಿಂದ ತನಿಖೆಗೆ ವೇಗ
ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ತನಿಖೆಯ ವೇಳೆ ಶಿಕ್ಷಕ ಆಶಿಶ್ ಸೋಮ್ ಅವರ ವ್ಯಾಪಾರ ಪಾಲುದಾರ ಎನ್ನಲಾದ ಹೊಸೈನ್ ಅಹ್ಮದ್ ಕೂಡ ಅಪಹರಣ ಪ್ರಕರಣದ ಶಂಕಿತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಬಂಧಿತ ಬಾಜುವನ್ನು ವಿಚಾರಣೆ ನಡೆಸಲಾಗುತ್ತಿದ್ದು, ಆತ ಹಲವು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.

ಇದೇ ವರ್ಷದ ಸೆಪ್ಟೆಂಬರ್ 16ರಂದು ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಸೋನ್ಸಿಲ್ ಪ್ರದೇಶದ ಸ್ಮಶಾನವೊಂದರ ಮೂರು ಸಮಾಧಿಗಳಿಂದ ಅಪರಿಚಿತ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಈ ಬೆಳವಣಿಗೆ ಪ್ರಕರಣದ ತನಿಖೆಗೆ ಹೊಸ ವೇಗ ನೀಡಿದೆ.

ಪತ್ತೆಯಾದ ಅಸ್ಥಿಪಂಜರದ ಅವಶೇಷಗಳು ನಾಪತ್ತೆಯಾಗಿರುವ ಆಶಿಶ್ ಸೋಮ್ ಅವರದ್ದೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಅವರ ಕುಟುಂಬ ಸದಸ್ಯರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಸದ್ಯ ಡಿಎನ್‌ಎ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದ್ದು, ಅದರ ಬಳಿಕ ಪ್ರಕರಣದ ಹಲವು ನಿಗೂಢ ಸಂಗತಿಗಳು ಬಯಲಾಗುವ ನಿರೀಕ್ಷೆಯಿದೆ.

Ad Widget
Continue Reading

ಸ್ಥಳೀಯ

Bail-ಬೆಳ್ತಂಗಡಿ: ಯತೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ರಿಲೀಫ್; ಮತ್ತಿಬ್ಬರಿಗೆ ಜಾಮೀನು

Published

on

Ad Widget

Ad Widget

Ad Widget

Ad Widget

ಗುರುವಾಯನಕೆರೆಯ ಅಲಾದಿಕೊಟ್ಟಿಗೆಯಲ್ಲಿ ಕಳೆದ ಜೂನ್ 1ರಂದು ನಡೆದ ಪೆರ್ನೆ ಮೂಲದ ಯತೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಉಳಿದ ಇಬ್ಬರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳಿಗೂ ಜಾಮೀನು ದೊರೆತಂತಾಗಿದೆ.

Ad Widget

Ad Widget

Ad Widget

Ad Widget

ಬೆಳ್ತಂಗಡಿ: ಗುರುವಾಯನಕೆರೆಯ ಅಲಾದಿಕೊಟ್ಟಿಗೆಯಲ್ಲಿ ಕಳೆದ ಜೂನ್ 1ರಂದು ನಡೆದ ಪೆರ್ನೆ ಮೂಲದ ಯತೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಉಳಿದ ಇಬ್ಬರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳಿಗೂ ಜಾಮೀನು ದೊರೆತಂತಾಗಿದೆ.

Ad Widget

Ad Widget alt="Ad Widget"/>

Ad Widget

ಪ್ರಕರಣದ ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಯಶೋಧರ ಹಾಗೂ ಕಡಬ ತಾಲೂಕಿನ ಚಾರ್ವಾಕದ ಮೋಹನ್ ಅವರಿಗೆ ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.

Ad Widget

Ad Widget <> Ad Widget

ಕೆಲ ದಿನಗಳ ಹಿಂದೆಯಷ್ಟೇ ಇದೇ ಪ್ರಕರಣದ ಮತ್ತೊಬ್ಬ ಆರೋಪಿ, ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಇಬ್ರಾಹಿಂ ಅವರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ಪ್ರಕರಣದ ಹಿನ್ನೆಲೆ:
ಜೂನ್ 1ರಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಅಲಾದಿಕೊಟ್ಟಿಗೆ ಎಂಬಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

Ad Widget

Ad Widget

ಬಳಿಕ ಮೃತ ವ್ಯಕ್ತಿ ಪೆರ್ನೆ ಮೂಲದ ಯತೀಶ್ ಗೌಡ ಎಂಬುದು ಗುರುತಿಸಲ್ಪಟ್ಟಿತ್ತು. ಅವರ ಸಹೋದರ ನಿತಿನ್ ಹಾಗೂ ಸಂಬಂಧಿಕರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹದ ಗುರುತು ಪತ್ತೆಹಚ್ಚಿದ್ದರು.

ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಕೊಲೆ ಆರೋಪದಡಿ ಯಶೋಧರ, ಮೋಹನ್ ಹಾಗೂ ಇಬ್ರಾಹಿಂ ಎಂಬ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ಪ್ರಕರಣದ ಮೂವರು ಆರೋಪಿಗಳಿಗೂ ನ್ಯಾಯಾಲಯದಿಂದ ಜಾಮೀನು ದೊರೆತಿದೆ.

Ad Widget
Continue Reading

ಅಪರಾಧ

Mangalore-ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಮನೆ ಮಾಲೀಕನ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬ ಖುಲಾಸೆ

Published

on

Ad Widget

Ad Widget

Ad Widget

Ad Widget

ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

Ad Widget

Ad Widget

Ad Widget

Ad Widget

ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

Ad Widget

Ad Widget alt="Ad Widget"/>

Ad Widget

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಮಲ್ಲಿ ಲೇಔಟ್‌ನಲ್ಲಿರುವ ಸುರೇಂದ್ರನ್ ಅವರ ಮನೆಯಲ್ಲಿ 2020ರ ನವೆಂಬರ್ 3ರಂದು ಈ ಕೊಲೆ ನಡೆದಿತ್ತು.

Ad Widget

Ad Widget <> Ad Widget

ಪ್ರಕರಣದ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್, ತಾನು ಕೆಲಸ ಮಾಡಿದ ಹಣವನ್ನು ಸುರೇಂದ್ರನ್ ನೀಡಿಲ್ಲವೆಂದು ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನೊಂದಿಗೆ ಹಣ ಕೇಳಲು ಅವರ ಮನೆಗೆ ತೆರಳಿದ್ದನು. ಈ ವೇಳೆ ಸಿದ್ದಪ್ಪನ ಪ್ರೇರಣೆಯಿಂದ ಸಂತೋಷ್ ಮನೆಯೊಳಗೆ ಹೋಗಿ ಸುರೇಂದ್ರನ್ ಅವರಲ್ಲಿ ಹಣ ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಜಗಳ ವಿಕೋಪಕ್ಕೆ ತಿರುಗಿದಾಗ ಸಂತೋಷ್ ಪೇಪರ್ ಕತ್ತರಿಸುವ ಬ್ಲೇಡ್‌ನಿಂದ ಸುರೇಂದ್ರನ್ ಅವರ ಕುತ್ತಿಗೆ, ಮುಖ ಹಾಗೂ ತಲೆಯ ಭಾಗಕ್ಕೆ ಕೊಯ್ದಿದ್ದಾನೆ. ಅಲ್ಲದೆ, ವ್ಯಾಯಾಮಕ್ಕೆ ಬಳಸುವ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪ್ರಕರಣದ ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು.

Ad Widget

Ad Widget

ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2020ರಂತೆ ಐಪಿಸಿ ಕಲಂ 302, 392, 201, 114 ಜೊತೆಗೆ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವ್ ಪಡೀಲ್ ಅವರು ಸಂತೋಷ್ ಮತ್ತು ಸಿದ್ದಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆ ಪೂರ್ಣಗೊಳಿಸಿ ಇಬ್ಬರು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು, ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನನ್ನು ಖುಲಾಸೆಗೊಳಿಸಿದ್ದಾರೆ.

ಆರೋಪಿಗೆ ವಿಧಿಸಿದ ಶಿಕ್ಷೆ:

  • ಐಪಿಸಿ ಕಲಂ 302 (ಕೊಲೆ): ಜೀವಾವಧಿ ಶಿಕ್ಷೆ ಹಾಗೂ 25,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ.
  • ಐಪಿಸಿ ಕಲಂ 392 (ದರೋಡೆ): ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ತಿಂಗಳ ಶಿಕ್ಷೆ.
  • ಐಪಿಸಿ ಕಲಂ 201 (ಸಾಕ್ಷ್ಯ ನಾಶ): ಆರು ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 2,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 15 ದಿನಗಳ ಶಿಕ್ಷೆ.

ಒಟ್ಟು 32,000 ರೂ. ದಂಡದ ಮೊತ್ತದಲ್ಲಿ 7,000 ರೂ. ಸರಕಾರಕ್ಕೆ ಹಾಗೂ 25,000 ರೂ.ಗಳನ್ನು ಕೊಲೆಯಾದ ಸುರೇಂದ್ರನ್ ಅವರ ಪತ್ನಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ವಾದ ಮಂಡಿಸಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!