ಕಾರ್ಯಕ್ರಮಗಳು
Puttur-ಪುತ್ತೂರು: ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ದೇವರಿಗೆ 108 ಕಾಯಿ ಗಣಪತಿ ಹೋಮ; ಸಂಜೆ ಮೂಡಪ್ಪ ಸೇವೆ, ರಂಗಪೂಜೆ; ಹೂವಿನ ಅಲಂಕಾರದಿಂದ ಸಜ್ಜುಗೊಂಡ ದೇವರ ಗುಡಿ
ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟ ಚತುರ್ಥಿ ಪ್ರಯುಕ್ತ ಇಂದು ಶ್ರೀ ಮಹಾಗಣಪತಿ ದೇವರಿಗೆ 108 ಕಾಯಿ ಗಣಪತಿ ಹೋಮ ನಡೆಯಲಿದ್ದು, ಆ ಪ್ರಯುಕ್ತ ಬೆಳಗ್ಗೆ9-30ರಿಂದ ಹೋಮದ ಸಂಕಲ್ಪ ಪ್ರಾರಂಭಗೊಂಡು, ಗಣಪತಿ ಹೋಮ ಆರಂಭಗೊಂಡಿದೆ.
ಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟ ಚತುರ್ಥಿ ಪ್ರಯುಕ್ತ ಇಂದು ಶ್ರೀ ಮಹಾಗಣಪತಿ ದೇವರಿಗೆ 108 ಕಾಯಿ ಗಣಪತಿ ಹೋಮ ನಡೆಯಲಿದ್ದು, ಆ ಪ್ರಯುಕ್ತ ಬೆಳಗ್ಗೆ9-30ರಿಂದ ಹೋಮದ ಸಂಕಲ್ಪ ಪ್ರಾರಂಭಗೊಂಡು, ಗಣಪತಿ ಹೋಮ ಆರಂಭಗೊಂಡಿದೆ.
ಸಂಜೆ ಮೂಡಪ್ಪ ಸೇವೆ ಹಾಗೂ ರಂಗಪೂಜೆ ನಡೆಯಲಿದ್ದು ಶ್ರೀ ಮಹಾಗಣಪತಿ ದೇವರ ಗುಡಿ ಹೂವಿನ ಅಲಂಕಾರದೊಂದಿಗೆ ಸಜ್ಜಾಗಿದೆ.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ದಿನೇಶ್ ಕೊಡಾಲ್ ಪಿ.ವಿ., ನಳಿನಿ ಪಿ. ಶೆಟ್ಟಿ, ಈಶ್ವರ್ ಬಡೆಕಾರ್, ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀನಿವಾಸ್ ಅವರು ಉಪಸ್ಥಿತರಿದ್ದರು.
ಅರ್ಚಕರಾದ ವಸಂತ ಕೆದಿಲಾಯ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
108 ಗಣಪತಿ ಹೋಮ
ಪ್ರಾತ:ಕಾಲದಲ್ಲಿ 108 ಗಣಪತಿ ಹೋಮ ಮಾಡಿ ಅಗ್ನಿಯಲ್ಲಿ ಅಷ್ಟದ್ರವ್ಯ, ತುಪ್ಪ, ಗರಿಕೆಯಿಂದ ಆಹುತಿ ಕೊಟ್ಟು, ಸಂಧ್ಯಾ ಕಾಲದಲ್ಲಿ ರಂಗಪೂಜೆ, ದೀಪಾರಾಧನೆ ಮಾಡಿ ನಂತರ ಗಣಪತಿಗೆ ಮೂಡಪ್ಪ ಸೇವೆಯನ್ನು ಮಾಡಲಾಗುವುದು.
ಏನಿದು ಮೂಡಪ್ಪ ಸೇವೆ?
ಮಹಾಗಣಪತಿಯ ಗರ್ಭಗೃಹದೊಳಗೆ ಕಬ್ಬಿನ ಮಂಟಪವನ್ನು ರಚಿಸಿ ಆ ಕಬ್ಬಿನ ಬೇಲಿಯೊಳಗೆ ಅಪೂಪ(ಮೂಡಪ್ಪ)ಭಕ್ಷವನ್ನು ತುಂಬಲಾಗುವುದು. ತೆಂಗಿನಕಾಯಿ, ಹಣ್ಣುಹಂಪಲು, ಒಣದ್ರಾಕ್ಷಿ, ಜೇನು, ತುಪ್ಪವನ್ನು ಗಣಪತಿಯ ಜಿಹ್ವಾಗ್ರದವರೆಗೆ ತುಂಬಲಾಗುವುದು.
ನಂತರ ಪೂಜಿಸಿ, ಮಂಗಳಾರತಿ ಮಾಡಿ, ಪ್ರಾರ್ಥಿಸಿ, ಕವಾಟ ಬಂಧನ ಮಾಡಲಾಗುವುದು. ಮರುದಿನ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಮಾಡಿ, ಪೇದ ಘೋಷಗಳೊಂದಿಗೆ, ಚೆಂಡೆವಾದ್ಯ, ಪುರಸರ ಕವಾಟ ಉದ್ಘಾಟನೆ ಮಾಡಲಾಗುವುದು.

ಸೇವೆ ಮಾಡಿಸಿದವರಿಗೆ ಮತ್ತು ಭಕ್ತರಿಗೆ ಬರುವ ಎಲ್ಲಾ ಕಷ್ಟನಷ್ಟಗಳನ್ನು ಗಣಪತಿ ಪರಿಹರಿಸುತ್ತಾರೆ. ಮಕ್ಕಳಿಗೆ ವಿದ್ಯೆ, ಉದ್ಯೋಗ, ವಿವಾಹ ಭಾಗ್ಯ, ಕೇತುದೋಷ ಪರಿಹಾರ, ಆಯುಷ್ಯ, ಆರೋಗ್ಯ ಭಾಗ್ಯವನ್ನು ದೇವರು ಕರುಣಿಸುತ್ತಾರೆ.ಈ ದಿನ ನಡೆಯುವ ಮೂಡಪ್ಪ ಸೇವೆಯಲ್ಲಿ ಊರಿನ ಹತ್ತು ಸಮಸ್ತರು ಭಾಗವಹಿಸಿ ಸೇವೆ ಕೊಟ್ಟು ಗಣಪತಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ನಳಿನಿಸುತ ಕೆದಿಲಾಯ, ಅಕಿರೆಬರೆಯವರು ವಿನಂತಿಸಿದ್ದಾರೆ.

7 ವರ್ಷದ ಬಳಿಕ ಮೂಡಪ್ಪ ಸೇವೆ
2018ರ ಡಿ.25ಕ್ಕೆ ವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದ ಎನ್.ಸುಧಾಕರ್ ಶೆಟ್ಟಿಯವರು ಮೂಡಪ್ಪ ಸೇವೆ ಮಾಡಿಸಿದ್ದರು.ಇದೀಗ ಮತ್ತೆ ದೇವಳದ ತಂತ್ರಿ
ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಮಹಾಲಿಂಗೇಶ್ವರ ದೇವರ ಪ್ರೇರಣೆಯಂತೆ ಮೂಡಪ್ಪ ಸೇವೆ ನಡೆಯಲಿದೆ.
-ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಮಹಾಲಿಂಗೇಶ್ವರ ದೇವಸ್ಥಾನ
ಕಾರ್ಯಕ್ರಮಗಳ ವಿವರ
ಬೆಳಗ್ಗೆ ಗಂಟೆ 9-30ಕ್ಕೆ ಗಣಪತಿ ಹೋಮ, 11-30ಕ್ಕೆ ಪೂರ್ಣಾಹುತಿ,
ಸಂಜೆ ಗಂಟೆ 6ಕ್ಕೆ ರಂಗಪೂಜೆ, 6-45ಕ್ಕೆ ಮೂಡಪ್ಪ ಸೇವೆ
ಜ.7ರಂದು ಬೆಳಿಗ್ಗೆ ಗಂಟೆ 6ಕ್ಕೆ ಮೂಡಪ್ಪ ಪ್ರಸಾದ ವಿತರಣೆ.
ಕಾರ್ಯಕ್ರಮಗಳು
Vitla-ವಿಟ್ಲ: ನ.25ರಂದು ಮೈತ್ರೇಯಿ ಆಯುರ್ವೇದ ಗುರುಕುಲಂ ಮತ್ತು ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭ; 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭ; ಆಯುರ್ವೇದದ ಅಮೂಲ್ಯವಾದ ಸನಾತನ ಜ್ಞಾನವನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಅಜೇಯ ಟ್ರಸ್ಟ್‌ನ ಪ್ರಮುಖ ಉದ್ದೇಶವಾಗಿದೆ- ಡಾ. ಸುಧಾರಾವ್
ಅಜೇಯ ಟ್ರಸ್ಟ್ ವತಿಯಿಂದ ಮೈತ್ರೇಯಿ ಆಯುರ್ವೇದ ಗುರುಕುಲಂ (ಪೂರ್ವ ಆಯುರ್ವೇದ ಶಿಕ್ಷಣ ಹಾಗೂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ) ಮತ್ತು ನೂತನವಾಗಿ ನಿರ್ಮಾಣಗೊಳ್ಳಲಿರುವ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭದ ಜೊತೆಗೆ, ಈಗಾಗಲೇ ಸಿದ್ಧಗೊಂಡಿರುವ 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ಬಂಟ್ವಾಳ ತಾಲೂಕಿನ ಕೊಡಂಗಾಯಿ ಮೂರುಕಜೆಯಲ್ಲಿ ನ.25, ಬುಧವಾರ ಬೆಳಿಗ್ಗೆ 9.30 ಗಂಟೆಗೆ ನಡೆಯಲಿದೆ.
ವಿಟ್ಲ: ಅಜೇಯ ಟ್ರಸ್ಟ್ ವತಿಯಿಂದ ಮೈತ್ರೇಯಿ ಆಯುರ್ವೇದ ಗುರುಕುಲಂ (ಪೂರ್ವ ಆಯುರ್ವೇದ ಶಿಕ್ಷಣ ಹಾಗೂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ) ಮತ್ತು ನೂತನವಾಗಿ ನಿರ್ಮಾಣಗೊಳ್ಳಲಿರುವ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭದ ಜೊತೆಗೆ, ಈಗಾಗಲೇ ಸಿದ್ಧಗೊಂಡಿರುವ 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ಬಂಟ್ವಾಳ ತಾಲೂಕಿನ ಕೊಡಂಗಾಯಿ ಮೂರುಕಜೆಯಲ್ಲಿ ನ.25, ಬುಧವಾರ ಬೆಳಿಗ್ಗೆ 9.30 ಗಂಟೆಗೆ ನಡೆಯಲಿದೆ. ಈ ಬಗ್ಗೆ ಮೈತ್ರೇಯಿ ಗುರುಕುಲದ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಯಿತು.
ಮೈತ್ರೇಯಿ ಆಯುರ್ವೇದ ಗುರುಕುಲಂನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಸುಧಾರಾವ್ ಮಾತನಾಡಿ “1994ರಲ್ಲಿ ಸ್ಥಾಪನೆಯಾದ ಮೈತ್ರೇಯಿ ಗುರುಕುಲಂನ ಸುದೀರ್ಘ ಸೇವಾ ಪರಂಪರೆಯಿಂದ ಪ್ರೇರಣೆ ಪಡೆದು, ಅಜೇಯ ಟ್ರಸ್ಟ್‌ನ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಮೈತ್ರೇಯಿ ಆಯುರ್ವೇದ ಗುರುಕುಲಂರೂಪುಗೊಳ್ಳುತ್ತಿದೆ. ಹೆಣ್ಣುಮಕ್ಕಳಿಗೆ ಮೌಲ್ಯಾಧಾರಿತ ವಸತಿ ಸಹಿತ ಶಿಕ್ಷಣವನ್ನು ನೀಡುತ್ತಾ ಬಂದಿರುವ ಸಂಸ್ಥೆಯು ಇದೀಗ ಆಯುರ್ವೇದ ಶಿಕ್ಷಣ ಕ್ಷೇತ್ರಕ್ಕೂತನ್ನ ಸೇವೆಯನ್ನು ವಿಸ್ತರಿಸುತ್ತಿದೆ.

ಮೈತ್ರೇಯಿ ಆಯುರ್ವೇದ ಗುರುಕುಲಂ ಮಹಿಳೆಯರಿಗಾಗಿ ಮೀಸಲಾದ ವಸತಿ ಸಹಿತ ಶಿಕ್ಷಣ ಸಂಸ್ಥೆಯಾಗಿದ್ದು, ಒಟ್ಟು 7½ ವರ್ಷಗಳ ಸಮಗ್ರ ಶಿಕ್ಷಣ ಕಾರ್ಯಕ್ರಮವನ್ನು ರೂಪಿಸಿದೆ. ಇದರಲ್ಲಿ 2 ವರ್ಷಗಳ ಪೂರ್ವ ಆಯುರ್ವೇದ ಶಿಕ್ಷಣ, 4½ ವರ್ಷಗಳ BAMS ಪದವಿ ಶಿಕ್ಷಣ ಹಾಗೂ 1 ವರ್ಷದ ಕಡ್ಡಾಯ ಇಂಟರ್ನ್‌ಶಿಪ್ ಒಳಗೊಂಡಿರುತ್ತದೆ. ಮೈತ್ರೇಯಿ ಆಯುರ್ವೇದ ಗುರುಕುಲಂ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ ಇದರ ಸಂಯೋಜನೆ ಹೊಂದಿದ್ದು, ಭಾರತ ಸರ್ಕಾರದ ಆಯುಷ್ ಸಚಿವಾಲಯ ಹಾಗೂ ನವದೆಹಲಿಯ ಭಾರತೀಯ ವೈದ್ಯಕೀಯ ಪದ್ಧತಿಗಳ ರಾಷ್ಟ್ರೀಯ ಆಯೋಗದ (NCISM) ಮಾನ್ಯತೆ ಮತ್ತು ಅನ್ವಯಿಸುವ ನಿಯಂತ್ರಣಾತ್ಮಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ. ಈ ಶಿಕ್ಷಣ ಕಾರ್ಯಕ್ರಮವು ಸಂಸ್ಕೃತ, ಯೋಗ, ಭಾರತೀಯ ಜ್ಞಾನಪರಂಪರೆ, ಶಿಸ್ತು ಮತ್ತು ನೈತಿಕ ಮೌಲ್ಯಗಳೊಂದಿಗೆ ಆಯುರ್ವೇದ ಶಿಕ್ಷಣವನ್ನು ಸಂಯೋಜಿಸುವ ಉದ್ದೇಶವನ್ನು ಹೊಂದಿದೆ. ಆಯುರ್ವೇದದ ಶಾಸ್ತ್ರೀಯ ಗ್ರಂಥಗಳನ್ನು ಸಂಸ್ಕೃತ ಭಾಷೆಯಲ್ಲಿ ಅಧ್ಯಯನ ಮಾಡುವುದಕ್ಕೆ ವಿಶೇಷ ಒತ್ತು ನೀಡುವುದರ ಜೊತೆಗೆ, ಜ್ಞಾನವಂತ, ಕೌಶಲ್ಯ ಪೂರ್ಣ ಹಾಗೂ ಕರುಣಾಮಯಿ ಆಯುರ್ವೇದ ವೈದ್ಯರನ್ನು ರೂಪಿಸುವುದು ಸಂಸ್ಥೆಯ ಪ್ರಮುಖ ಆಶಯವಾಗಿದೆ. ಆಯುರ್ವೇದದ ಅಮೂಲ್ಯವಾದ ಸನಾತನ ಜ್ಞಾನವನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಅಜೇಯ ಟ್ರಸ್ಟ್‌ನ ಪ್ರಮುಖ ಉದ್ದೇಶವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಮಹಿಳೆಯರಿಗೆ ಗುಣಮಟ್ಟದ ವಸತಿ ಸಹಿತ ಶಿಕ್ಷಣವನ್ನು ಒದಗಿಸುವುದರ ಜೊತೆಗೆ, ಜನಸಾಮಾನ್ಯರಿಗೆ ಗುಣಮಟ್ಟದ ಆಯುರ್ವೇದ ಆರೋಗ್ಯ ಸೇವೆಗಳನ್ನು ನೀಡುವ ಆಶಯವನ್ನು ಸಂಸ್ಥೆ ಹೊಂದಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರು ರಾಜೇಶ್ ನಾಯಕ್ ವಹಿಸಲಿದ್ದಾರೆ.ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಬೆಂಗಳೂರಿನ ಸೆಂಚುರಿ ಗ್ರೂಪ್ ಆಫ್ ಕಂಪನೀಸ್‌ನ ಅಧ್ಯಕ್ಷರು ಡಾ. ಪಿ. ದಯಾನಂದ ಪೈ, ಮೈಸೂರು ಮಂಗಳೂರು ಗಣೇಶ್ ಬೀಡಿ ವರ್ಕ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜಗನ್ನಾಥ ಶೆಣೈ, ಬರೋಡಾದ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶಶಿಧರ ಶೆಟ್ಟಿ ಮತ್ತು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್. ಅಹಲ್ಯಾ ಅವರು ಉಪಸ್ಥಿತರಿರಲಿದ್ದಾರೆ.
ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರು ಹಾಗೂ ಸಂಸ್ಕೃತ ಭಾರತಿ ಸಂಘಟನೆಯ ದಿನೇಶ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಜೇಯ ಟ್ರಸ್ಟ್‌ನ ಅಧ್ಯಕ್ಷರಾದ ಸುಬ್ರಾಯ ಪೈ, ಮೈತ್ರೇಯಿ ಆಯುರ್ವೇದ ಗುರುಕುಲಂನ ಪ್ರಾಂಶುಪಾಲರಾದ ಡಾ. ರವಿಗಣೇಶ್ ಮೊಗ್ರ ಉಪಸ್ಥಿತರಿದ್ದರು.
ಸ್ಥಳೀಯ
Wedding-ಕ್ಯಾಸೆಟ್‌ಗಳ ಅಬ್ಬರವಿಲ್ಲ, ಡ್ಯಾನ್ಸ್‌ಗಳ ಹಂಗಿಲ್ಲ; ಅದ್ದೂರಿತನಕ್ಕೆ ಬ್ರೇಕ್ ಹಾಕಿ ಸರಳತೆಯಲ್ಲೇ ಮದುವೆ ಸಂಭ್ರಮ..!
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ಸಿ.ಇ.ಒ. ಕೆ.ಎನ್. ಜನಾರ್ಧನ ಮತ್ತು ಉಷಾಜನಾರ್ಧನ ತಮ್ಮ ಎರಡನೆ ಪುತ್ರ ಕೆ.ಜೆ. ಸುದರ್ಶನ್ ಅವರ ಮದುವೆಯನ್ನು ದಿವ್ಯಾ ಜೊತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ್ದು, ಸ್ಥಳೀಯ ಆಪ್ತರು, ಅಭಿಮಾನಿಗಳು ಹಾಗೂ ಸಿಬ್ಬಂದಿಯನ್ನು ಆದರದಿಂದ ಆಹ್ವಾನಿಸಿ ಬೆಳ್ತಂಗಡಿಯಲ್ಲಿರುವ ಮಂಜುನಾಥಸ್ವಾಮಿ ಕಲಾಭವನದಲ್ಲಿ ಭಾನುವಾರ ವಿವಾಹ ಸಂಭ್ರಮದ “ಸರಳ ಸ್ನೇಹಕೂಟ”ವನ್ನು ಅತ್ಯಂತ ಶಿಸ್ತುಬದ್ಧಾಗಿ ಆಯೋಜಿಸಿ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರರಾದರು.
ಉಜಿರೆ: ಕ್ಯಾಸೆಟ್‌ಗಳ ಅಬ್ಬರ, ಮೈಕಾಸುರನ ಹಾವಳಿಯಿಂದ ಶಬ್ದ ಮಾಲಿನ್ಯವಿಲ್ಲ. ಸಿನೆಮಾ ಹಾಡು, ಬ್ರೇಕ್‌ಡ್ಯಾನ್ಸ್ ಉಪಟಳವಿಲ್ಲ. ಅತ್ಯಂತ ಸರಳವಾಗಿ, ಶಿಸ್ತುಬದ್ಧವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ಸಿ.ಇ.ಒ. ಕೆ.ಎನ್. ಜನಾರ್ಧನ ಮತ್ತು ಉಷಾಜನಾರ್ಧನ ತಮ್ಮ ಎರಡನೆ ಪುತ್ರ ಕೆ.ಜೆ. ಸುದರ್ಶನ್ ಅವರ ಮದುವೆಯನ್ನು ದಿವ್ಯಾ ಜೊತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ್ದು, ಸ್ಥಳೀಯ ಆಪ್ತರು, ಅಭಿಮಾನಿಗಳು ಹಾಗೂ ಸಿಬ್ಬಂದಿಯನ್ನು ಆದರದಿಂದ ಆಹ್ವಾನಿಸಿ ಬೆಳ್ತಂಗಡಿಯಲ್ಲಿರುವ ಮಂಜುನಾಥಸ್ವಾಮಿ ಕಲಾಭವನದಲ್ಲಿ ಭಾನುವಾರ ವಿವಾಹ ಸಂಭ್ರಮದ “ಸರಳ ಸ್ನೇಹಕೂಟ”ವನ್ನು ಅತ್ಯಂತ ಶಿಸ್ತುಬದ್ಧಾಗಿ ಆಯೋಜಿಸಿ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರರಾದರು.
ಮದುಮಗ ಕೆ.ಜೆ. ಸುದರ್ಶನ್ ತಾಯಿ-ತಂದೆ ಬಗ್ಯೆ ಅಪಾರ ಗೌರವ, ಪ್ರೀತಿ-ವಿಶ್ವಾಸವನ್ನು ವ್ಯಕ್ತಪಡಿಸಿ ಅವರೇ ತನಗೆ ಪ್ರತ್ಯಕ್ಷ ದೇವರು ಎಂದು ಗೌರವ ಸಲ್ಲಿಸಿದರು.
ಕೆ.ಎನ್. ಜನಾರ್ಧನ ಮತ್ತು ಉಷಾಜನಾರ್ಧನ ಭಾವುಕರಾಗಿ ಆನಂದಭಾಷ್ಪ ಸುರಿಸಿದರು. ಇಂತಹ ಮಗನನ್ನು ಪಡೆದ ತಾವೇ ಭಾಗ್ಯವಂತರು ಎಂದು ಸಂತಸವ್ಯಕ್ತಪಡಿಸಿದರು.
ಉಷಾಜನಾರ್ಧನ ಗಣೇಶನ ಸ್ತುತಿಯನ್ನು ಸುಶ್ರಾವ್ಯವಾಗಿ ಹಾಡಿದರು. ಸೊಸೆಯನ್ನು ಕೂಡಾ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳುವುದಾಗಿ ತಿಳಿಸಿದರು.
ಹಿರಿಯ ದಂಪತಿ ಮತ್ತು ನವದಂಪತಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿ, ಗೌರವಿಸಿದರು. ಎಲ್ಲರಿಗೂ ಸರಳ, ಶುದ್ಧ ಹಾಗೂ ಶುಚಿ-ರುಚಿಯಾದ ಶಾಕಾಹಾರ ಭೋಜನ ನೀಡಿದರು.
ಉಜಿರೆ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೇಟ್ನಾಯ, ಶಾಸಕ ಕೆ. ಹರೀಶ್ ಪೂಂಜ, ಮಾಜಿ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೂಡಬಿದ್ರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮತ್ತು ರಶ್ಮಿತಾ ಜೈನ್ ನಾರಾವಿ ಸೇರಿದಂತೆ ಅನೇಕ ಗಣ್ಯರು, ಹಿರಿಯರು ಆಗಮಿಸಿ ನೂತನ ದಂಪತಿಗೆ ಶುಭ ಹಾರೈಸಿದರು.
ಕಾರ್ಯಕ್ರಮಗಳು
Puttur-ಪುತ್ತೂರಿನಲ್ಲಿ ‘ಸಾಮರಸ್ಯದ ತುಡರ್’ ಕಾರ್ಯಕ್ರಮ: ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಮನೆಗೆ ದೀಪದ ಬೆಳಕು
ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುತ್ತೂರು: ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ದೇವಸ್ಥಾನದಲ್ಲಿ ಬೆಳಗಿಸಿದ ದೀಪವನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶಗಳ ಸುತ್ತಮುತ್ತಲಿನ ಮನೆಗಳಲ್ಲಿ ದೀಪ ಬೆಳಗಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಸಾಮರಸ್ಯ ಸಂಯೋಜಕ ರವೀಂದ್ರ, ಜಿಲ್ಲಾ ಸಾಮರಸ್ಯ ಸಂಯೋಜಕ ಶ್ರೀಕುಮಾರ್ ಸುಬ್ರಹ್ಮಣ್ಯ, ದಾಮೋದರ ಪಾಟಲಿ, ಅಪ್ಪಯ್ಯ ಮಣಿಯಾಣಿ, ರಮೇಶ್ ಪ್ರಭು, ಸಂತೋಷ್ ಬೊನಂತಾಯ, ರಮೇಶ್ ನೆಗಳಗುಳಿ, ದಯಾನಂದ ಬೋಲ್ವಾರ್, ಸಚಿನ್ ಶೆಣೈ, ರಮೇಶ್ ಉರ್ಲಾಂಡಿ, ಅಶೋಕ್ ಬ್ರಹ್ಮನಗರ ಸೇರಿದಂತೆ ಪ್ರಮುಖರು ಹಾಗೂ ಮಾತೆಯರು ಉಪಸ್ಥಿತರಿದ್ದರು.
-
ಸ್ಥಳೀಯ14 hours agoWedding-ಕ್ಯಾಸೆಟ್‌ಗಳ ಅಬ್ಬರವಿಲ್ಲ, ಡ್ಯಾನ್ಸ್‌ಗಳ ಹಂಗಿಲ್ಲ; ಅದ್ದೂರಿತನಕ್ಕೆ ಬ್ರೇಕ್ ಹಾಕಿ ಸರಳತೆಯಲ್ಲೇ ಮದುವೆ ಸಂಭ್ರಮ..!
-
ಶಿಕ್ಷಣ7 hours agoVidyamata Academy-ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲೂ ಅಮೋಘ ಸಾಧನೆ ಮುಂದುವರಿಸಿದ ವಿದ್ಯಾಮಾತಾ ಅಕಾಡೆಮಿ
-
ಬಿಗ್ ನ್ಯೂಸ್13 hours agoRailway-ರೈಲ್ವೆ ಗುಂಪು ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಬರ್ತ್ಗಳ ಸಂಖ್ಯೆಗೆ ಮಿತಿ ರದ್ದು, ಬೆಳಗ್ಗೆ 9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ..!
-
ಬಿಗ್ ನ್ಯೂಸ್9 hours agoRakesh Shetty-ಸ್ಟಿಂಗ್ ಹೆಸರಿನಲ್ಲಿ ಜನಪ್ರತಿನಿಧಿಗಳ ಬ್ಲ್ಯಾಕ್ಮೇಲ್ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒಳಾಡಳಿತ ಇಲಾಖೆಯಿಂದ ಡಿಜಿಪಿಗೆ ಪತ್ರ
-
ಮಂಗಳೂರು7 hours agoGirish Mattannavar-ಸೌಜನ್ಯ ಪ್ರಕರಣ: ಎಸ್ಐಟಿಗೆ ದಾಖಲೆಗಳ ʼಬ್ಯಾಗ್ʼ ಸಲ್ಲಿಸಿದ ಗಿರೀಶ್ ಮಟ್ಟಣ್ಣನವರ್; ಸೌಜನ್ಯ ಪ್ರಕರಣದಲ್ಲಿ ಆರ್. ಅಶೋಕ್ ಪಾತ್ರದ ಕುರಿತು ಸ್ಪೋಟಕ ಹೇಳಿಕೆ..!
-
ಕಾರ್ಯಕ್ರಮಗಳು8 hours agoVitla-ವಿಟ್ಲ: ನ.25ರಂದು ಮೈತ್ರೇಯಿ ಆಯುರ್ವೇದ ಗುರುಕುಲಂ ಮತ್ತು ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭ; 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭ; ಆಯುರ್ವೇದದ ಅಮೂಲ್ಯವಾದ ಸನಾತನ ಜ್ಞಾನವನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಅಜೇಯ ಟ್ರಸ್ಟ್‌ನ ಪ್ರಮುಖ ಉದ್ದೇಶವಾಗಿದೆ- ಡಾ. ಸುಧಾರಾವ್
-
ಅಪರಾಧ7 hours agoArrest-ಸಾಲದ ಇಎಂಐ ಕಟ್ಟಲು ಸ್ನೇಹಿತನನ್ನೇ ಕೊಂದು ₹63 ಸಾವಿರ ದೋಚಿದ ಆರೋಪ: ಉತ್ತರ ಪ್ರದೇಶದಲ್ಲಿ ಆರೋಪಿ ಬಂಧನ
-
ಶಿಕ್ಷಣ15 hours agoPhilomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮ















