ಸುಳ್ಯ
Sullia-ಸುಳ್ಯ: ಕಾರಿನ ಮೇಲೆ ಕುಳಿತು ಪುಂಡಾಟಿಕೆ; ಆರೋಪಿಗೆ ದಂಡದ ಜೊತೆ ‘ಸಮುದಾಯ ಸೇವೆ’ ಶಿಕ್ಷೆ
ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಅಪಾಯಕಾರಿಯಾಗಿ ವರ್ತಿಸಿ, ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಜಿಬ್ ಎಂಬಾತನಿಗೆ ಸುಳ್ಯದ ನ್ಯಾಯಾಲಯವು 5,000 ರೂಪಾಯಿ ದಂಡ ವಿಧಿಸಿದೆ. ಇದರೊಂದಿಗೆ ಆತನಿಗೆ 10 ದಿನಗಳ ಕಾಲ ಕಡ್ಡಾಯವಾಗಿ ‘ಸಮುದಾಯ ಸೇವೆ’ (Community Service) ಮಾಡುವಂತೆ ಮಹತ್ವದ ಆದೇಶ ನೀಡಿದೆ.
ಸುಳ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಅಪಾಯಕಾರಿಯಾಗಿ ವರ್ತಿಸಿ, ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬರಿಗೆ ಸುಳ್ಯದ ನ್ಯಾಯಾಲಯವು ವಿಶಿಷ್ಟವಾದ ಸಮುದಾಯ ಸೇವೆ ಶಿಕ್ಷೆಯನ್ನು ಪ್ರಕಟಿಸಿದೆ.
ಕೆಲವು ತಿಂಗಳ ಹಿಂದೆ ಮಾಣಿ-ಮೈಸೂರು ಹೆದ್ದಾರಿಯ ಅರಂತೋಡು ಬಳಿ ಕಾರಿನಲ್ಲಿ ತೆರಳುತ್ತಿದ್ದ ಯುವಕರ ಗುಂಪೊಂದು, ಕಾರಿನ ಕಿಟಕಿ ಹಾಗೂ ಮೇಲ್ಭಾಗದಲ್ಲಿ ದೇಹ ಹೊರಹಾಕಿ ಹುಚ್ಚಾಟ ನಡೆಸಿತ್ತು. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅಲ್ಲದೆ, ಸಾರ್ವಜನಿಕ ವಲಯದಲ್ಲಿ ಈ ಪುಂಡಾಟಿಕೆಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂತೋಷ್ ಬಿ.ಪಿ. ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಎಸ್ಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯವು, ಆರೋಪಿ ಸಾಜಿಬ್ ಎಂಬಾತನಿಗೆ 5,000 ರೂಪಾಯಿ ದಂಡ ವಿಧಿಸಿದೆ. ಇದರೊಂದಿಗೆ ಆತನಿಗೆ 10 ದಿನಗಳ ಕಾಲ ಕಡ್ಡಾಯವಾಗಿ ‘ಸಮುದಾಯ ಸೇವೆ’ (Community Service) ಮಾಡುವಂತೆ ಮಹತ್ವದ ಆದೇಶ ನೀಡಿದೆ.
ಸುಳ್ಯ
Sullia-ಸುಳ್ಯ: ಜಾನುವಾರು ಕಳ್ಳತನಕ್ಕೆ ಯತ್ನ: ಇಬ್ಬರು ಪೊಲೀಸ್ ವಶಕ್ಕೆ
ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಸುಳ್ಯ: ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಉದಯ ರವಿ ಅವರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಶಾಲಾ ಮೈದಾನದಲ್ಲಿದ್ದ ಕಂಬವೊಂದಕ್ಕೆ ಎರಡು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿರುವುದು ಕಂಡುಬಂದಿದೆ.
ಸ್ಥಳದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅವರು ಸುಳ್ಯ ಆಲೆಟ್ಟಿ ನಿವಾಸಿಗಳಾದ ಹಾಶಿರ್ (28) ಮತ್ತು ಸಂಶುದ್ದೀನ್ (25) ಎಂದು ತಿಳಿದುಬಂದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಮಾಂಸವನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಲು ಸ್ಥಳಕ್ಕೆ ತಂದಿದ್ದ ದ್ವಿಚಕ್ರ ವಾಹನ ಹಾಗೂ ಎರಡು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 161/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2) ಜೊತೆಗೆ 62 ಹಾಗೂ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯ ಕಲಂ 7 ಮತ್ತು 15ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸುಳ್ಯ
Black pepper-ಕಾಳುಮೆಣಸು ದರದಲ್ಲಿ ಭರ್ಜರಿ ಏರಿಕೆ: ₹750ರ ಗಡಿ ತಲುಪಿದ ಕಪ್ಪು ಚಿನ್ನ
ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡಿದ್ದು, ನಿರಂತರವಾಗಿ ಏರಿಕೆಯಾಗುತ್ತಾ ಇದೀಗ ನ.16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಸುಳ್ಯ: ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತಿ ಕೆ.ಜಿ.ಗೆ ₹750ರ ಗಡಿಯನ್ನು ತಲುಪಿದೆ. ನಿರಂತರ ದರ ಏರಿಕೆಯಿಂದ ಕಾಳುಮೆಣಸು ಬೆಳೆಗಾರರಲ್ಲಿ ಸಂತಸ ಮೂಡಿದೆ.
ಕ್ಯಾಂಪ್ಕೋ ಮಂಗಳೂರು (ಸುಳ್ಯ ಶಾಖೆ) ದರ ಮಾಹಿತಿಯ ಪ್ರಕಾರ, ಕಳೆದ ಅಕ್ಟೋಬರ್ 19ರ ವೇಳೆಗೆ ಕಾಳುಮೆಣಸಿನ ಧಾರಣೆ ₹700ರ ಗಡಿ ದಾಟಿತ್ತು. ಅಕ್ಟೋಬರ್ 29ರ ವೇಳೆಗೆ ₹730ಕ್ಕೆ ಏರಿಕೆಯಾಗಿತ್ತು. ಬಳಿಕ ಕೊಂಚ ಇಳಿಕೆ ಕಂಡು ನವೆಂಬರ್ ತಿಂಗಳ ಆರಂಭದಲ್ಲಿ ₹710ಕ್ಕೆ ತಲುಪಿತ್ತು.
ಆದರೆ, ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡ ಧಾರಣೆ ನಿರಂತರವಾಗಿ ಏರಿಕೆಯಾಗುತ್ತಾ ಸಾಗಿದೆ. ಇದೀಗ ನವೆಂಬರ್ 16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಇತ್ತೀಚಿನ ದಿನಗಳಲ್ಲಿ ಕೊಳೆರೋಗ, ಹಳದಿ ಎಲೆಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಬಾಧೆಗಳಿಂದ ಇಳುವರಿ ಕುಂಠಿತಗೊಳ್ಳುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾಳುಮೆಣಸಿನ ಧಾರಣೆಯಲ್ಲಿನ ಏರಿಕೆ ಕೃಷಿಕರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಆಸರೆಯಾಗುವ ನಿರೀಕ್ಷೆಯಿದೆ.
ಸುಳ್ಯ
Areca nut-ಅಡಿಕೆ ರೇಟ್ ಜಂಪ್ : ಹೊಸ ಅಡಿಕೆಗೆ ₹360; ಒಂದೇ ದಿನದಲ್ಲಿ ₹10 ಏರಿಕೆ! ಡಬಲ್ ಚೋಲ್ ಧಾರಣೆಯಲ್ಲೂ ಹೆಚ್ಚಳ
ಕಳೆದ ಕೆಲ ತಿಂಗಳುಗಳಿಂದ ಏರಿಕೆ ಕಾಣದೆ ನಿಸ್ತೇಜವಾಗಿದ್ದ ಅಡಿಕೆ ಮಾರುಕಟ್ಟೆಯಿಂದೆ ಕೊಂಚ ಸಮಾಧಾನಕರ ಸುದ್ದಿ ಲಭಿಸಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಧಾರಣೆಯಲ್ಲಿ ಏರಿಕೆ ದಾಖಲಾಗಿದ್ದು, ಹೊಸ ಅಡಿಕೆಯ ಗರಿಷ್ಠ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ ₹10 ಹೆಚ್ಚಳವಾಗಿ ₹360ಕ್ಕೆ ತಲುಪಿದೆ. ಡಬಲ್ ಚೋಲ್ ಅಡಿಕೆಯ ಧಾರಣೆಯೂ ₹560ರ ಗಡಿಗೆ ಏರಿಕೆಯಾಗಿದೆ.
ಸುಳ್ಯ, ನ.12: ಕಳೆದ ಕೆಲ ತಿಂಗಳುಗಳಿಂದ ಏರಿಕೆ ಕಾಣದೆ ನಿಸ್ತೇಜವಾಗಿದ್ದ ಅಡಿಕೆ ಮಾರುಕಟ್ಟೆಯಿಂದೆ ಕೊಂಚ ಸಮಾಧಾನಕರ ಸುದ್ದಿ ಲಭಿಸಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಧಾರಣೆಯಲ್ಲಿ ಏರಿಕೆ ದಾಖಲಾಗಿದ್ದು, ಹೊಸ ಅಡಿಕೆಯ ಗರಿಷ್ಠ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ ₹10 ಹೆಚ್ಚಳವಾಗಿ ₹360ಕ್ಕೆ ತಲುಪಿದೆ. ಡಬಲ್ ಚೋಲ್ ಅಡಿಕೆಯ ಧಾರಣೆಯೂ ₹560ರ ಗಡಿಗೆ ಏರಿಕೆಯಾಗಿದೆ.
ನ.11 ಮತ್ತು ನ.12ರ ಮಾರುಕಟ್ಟೆ ದರಗಳನ್ನು ಹೋಲಿಸಿದಾಗ ಹೊಸ ಅಡಿಕೆಯ ಗರಿಷ್ಠ ಧಾರಣೆ ₹350ರಿಂದ ₹360ಕ್ಕೆ ಏರಿಕೆಯಾಗಿದೆ. ಆದರೆ ಕನಿಷ್ಠ ಧಾರಣೆ ₹280ರಲ್ಲೇ ಸ್ಥಿರವಾಗಿದೆ. ಕನಿಷ್ಠ ದರದಲ್ಲಿ ಬದಲಾವಣೆಯಾಗದಿದ್ದರೂ ಗರಿಷ್ಠ ದರದಲ್ಲಿ ಕಂಡುಬಂದಿರುವ ಏರಿಕೆ ಮಾರುಕಟ್ಟೆಯಲ್ಲಿ ಚೇತರಿಕೆಯ ಮುನ್ಸೂಚನೆ ನೀಡಿದೆ.
ಡಬಲ್ ಚೋಲ್ ಅಡಿಕೆಗೂ ಬೆಲೆ ಏರಿಕೆ
ಡಬಲ್ ಚೋಲ್ ಅಡಿಕೆಯ ಮಾರುಕಟ್ಟೆಯಲ್ಲೂ ಉತ್ತಮ ಬೆಳವಣಿಗೆ ಕಂಡುಬಂದಿದೆ. ಹಿಂದಿನ ದಿನ ₹525ರಷ್ಟಿದ್ದ ಕನಿಷ್ಠ ಧಾರಣೆ ₹530ಕ್ಕೆ ಏರಿಕೆಯಾಗಿದ್ದರೆ, ಗರಿಷ್ಠ ಧಾರಣೆ ₹550ರಿಂದ ₹560ಕ್ಕೆ ತಲುಪಿದೆ. ಈ ಮೂಲಕ ಕನಿಷ್ಠ ದರದಲ್ಲಿ ₹5 ಹಾಗೂ ಗರಿಷ್ಠ ದರದಲ್ಲಿ ₹10ರಷ್ಟು ಹೆಚ್ಚಳ ದಾಖಲಾಗಿದೆ.
ಸಿಂಗಲ್ ಚೋಲ್ ಸೇರಿದಂತೆ ಇತರ ಅಡಿಕೆ ದರ ಸ್ಥಿರ
ಹೊಸ ಅಡಿಕೆ ಮತ್ತು ಡಬಲ್ ಚೋಲ್ ಹೊರತುಪಡಿಸಿ ಮಾರುಕಟ್ಟೆಯ ಇತರ ಪ್ರಮುಖ ಅಡಿಕೆ ವರ್ಗಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಿಂಗಲ್ ಚೋಲ್ ಅಡಿಕೆ ಕೆ.ಜಿ.ಗೆ ಕನಿಷ್ಠ ₹450 ಹಾಗೂ ಗರಿಷ್ಠ ₹480ರ ದರದಲ್ಲಿ ವಹಿವಾಟು ನಡೆಸಿದೆ.
ಬೆಳೆಗಾರರ ಕಣ್ಣು ಮುಂದಿನ ಮಾರುಕಟ್ಟೆ ದರದತ್ತ
ಇತ್ತೀಚಿನ ದಿನಗಳಲ್ಲಿ ಅಡಿಕೆ ಧಾರಣೆಯಲ್ಲಿ ಕಂಡುಬರುತ್ತಿರುವ ಏರಿಳಿತಗಳು ಬೆಳೆಗಾರರಲ್ಲಿ ಗೊಂದಲ ಮೂಡಿಸಿದ್ದವು. ಅದರಲ್ಲೂ ಉತ್ಪಾದನಾ ವೆಚ್ಚ, ಕೂಲಿ ವೆಚ್ಚ ಹಾಗೂ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಮಾರುಕಟ್ಟೆ ದರದ ನಿರೀಕ್ಷೆ ಬೆಳೆಗಾರರಲ್ಲಿದೆ.
ಇದೀಗ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯಲ್ಲಿ ದಾಖಲಾಗಿರುವ ಏರಿಕೆ ಮಾರುಕಟ್ಟೆಗೆ ಹೊಸ ಚೈತನ್ಯ ನೀಡಿದೆ. ಆದರೆ ಈ ಏರಿಕೆ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆಯೇ ಅಥವಾ ಮತ್ತೆ ಧಾರಣೆ ಸ್ಥಿರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯದ ಮಟ್ಟಿಗೆ ಅಡಿಕೆ ಬೆಳೆಗಾರರ ಚಿತ್ತ ಮುಂದಿನ ಮಾರುಕಟ್ಟೆ ವಹಿವಾಟಿನತ್ತ ನೆಟ್ಟಿದೆ.
-
ಶಿಕ್ಷಣ18 hours agoVidyamata Academy-ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲೂ ಅಮೋಘ ಸಾಧನೆ ಮುಂದುವರಿಸಿದ ವಿದ್ಯಾಮಾತಾ ಅಕಾಡೆಮಿ
-
ಮಂಗಳೂರು18 hours agoGirish Mattannavar-ಸೌಜನ್ಯ ಪ್ರಕರಣ: ಎಸ್ಐಟಿಗೆ ದಾಖಲೆಗಳ ʼಬ್ಯಾಗ್ʼ ಸಲ್ಲಿಸಿದ ಗಿರೀಶ್ ಮಟ್ಟಣ್ಣನವರ್; ಸೌಜನ್ಯ ಪ್ರಕರಣದಲ್ಲಿ ಆರ್. ಅಶೋಕ್ ಪಾತ್ರದ ಕುರಿತು ಸ್ಪೋಟಕ ಹೇಳಿಕೆ..!
-
ಬಿಗ್ ನ್ಯೂಸ್20 hours agoRakesh Shetty-ಸ್ಟಿಂಗ್ ಹೆಸರಿನಲ್ಲಿ ಜನಪ್ರತಿನಿಧಿಗಳ ಬ್ಲ್ಯಾಕ್ಮೇಲ್ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒಳಾಡಳಿತ ಇಲಾಖೆಯಿಂದ ಡಿಜಿಪಿಗೆ ಪತ್ರ
-
ಕಾರ್ಯಕ್ರಮಗಳು19 hours agoVitla-ವಿಟ್ಲ: ನ.25ರಂದು ಮೈತ್ರೇಯಿ ಆಯುರ್ವೇದ ಗುರುಕುಲಂ ಮತ್ತು ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭ; 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭ; ಆಯುರ್ವೇದದ ಅಮೂಲ್ಯವಾದ ಸನಾತನ ಜ್ಞಾನವನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಅಜೇಯ ಟ್ರಸ್ಟ್ನ ಪ್ರಮುಖ ಉದ್ದೇಶವಾಗಿದೆ- ಡಾ. ಸುಧಾರಾವ್
-
ಅಪರಾಧ18 hours agoArrest-ಸಾಲದ ಇಎಂಐ ಕಟ್ಟಲು ಸ್ನೇಹಿತನನ್ನೇ ಕೊಂದು ₹63 ಸಾವಿರ ದೋಚಿದ ಆರೋಪ: ಉತ್ತರ ಪ್ರದೇಶದಲ್ಲಿ ಆರೋಪಿ ಬಂಧನ
-
ಅಪರಾಧ2 hours agoMangalore-Big Breaking:ಮಂಗಳೂರು: ಕದ್ರಿ ಯುದ್ಧ ಸ್ಮಾರಕದಲ್ಲಿರುವ ಟಿ-55 ಟ್ಯಾಂಕ್ ಮೇಲೆ ಹತ್ತಿ ಯುವಕರ ಹುಚ್ಚಾಟ; ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ
-
ಶಿಕ್ಷಣ17 hours agoVivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
-
ಶಿಕ್ಷಣ17 hours agoAmbika-ಅಂಬಿಕಾ ವಿದ್ಯಾಲಯದಲ್ಲಿ ಆರ್ಟ್ ಆಫ್ ಲಿವಿಂಗ್ನ ಸಹಜ ಸಮಾಧಿ ಧ್ಯಾನ ಶಿಬಿರ















