ನಗರದ ಗಣೇಶ್ ಮೈದಾನದಲ್ಲಿ ಭಾನುವಾರ […]" /> ನಗರದ ಗಣೇಶ್ ಮೈದಾನದಲ್ಲಿ ಭಾನುವಾರ […]"> Santosh Lad-ಛತ್ರಪತಿ ಶಿವಾಜಿ ಜಗತ್ತಿನ ಅತಿದೊಡ್ಡ 'ಸೆಕ್ಯುಲರ್' ನಾಯಕ: ಸಚಿವ ಸಂತೋಷ್ ಲಾಡ್ ಪ್ರತಿಪಾದನೆ - Nikhara News | Kannada News Website
Connect with us

ಸ್ಥಳೀಯ

Santosh Lad-ಛತ್ರಪತಿ ಶಿವಾಜಿ ಜಗತ್ತಿನ ಅತಿದೊಡ್ಡ ‘ಸೆಕ್ಯುಲರ್’ ನಾಯಕ: ಸಚಿವ ಸಂತೋಷ್ ಲಾಡ್ ಪ್ರತಿಪಾದನೆ

Published

on

Ad Widget

Ad Widget

Ad Widget

Ad Widget

“ಛತ್ರಪತಿ ಶಿವಾಜಿ ಮಹಾರಾಜರು ಜಗತ್ತಿನ ಅತಿದೊಡ್ಡ ಜಾತ್ಯತೀತ (ಸೆಕ್ಯುಲರ್) ನಾಯಕರಾಗಿದ್ದರು. ಅವರು ಹೋರಾಡಿದ್ದು ಮೊಘಲರ ವಿರುದ್ಧವೇ ಹೊರತು ಮುಸ್ಲಿಮರ ವಿರುದ್ಧವಲ್ಲ ಎಂಬುದನ್ನು ಮರಾಠಿಗರು ಅರಿತುಕೊಳ್ಳಬೇಕು,” ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

Ad Widget

Ad Widget

Ad Widget

Ad Widget

ಬೀದರ್‌: “ಛತ್ರಪತಿ ಶಿವಾಜಿ ಮಹಾರಾಜರು ಜಗತ್ತಿನ ಅತಿದೊಡ್ಡ ಜಾತ್ಯತೀತ (ಸೆಕ್ಯುಲರ್) ನಾಯಕರಾಗಿದ್ದರು. ಅವರು ಹೋರಾಡಿದ್ದು ಮೊಘಲರ ವಿರುದ್ಧವೇ ಹೊರತು ಮುಸ್ಲಿಮರ ವಿರುದ್ಧವಲ್ಲ ಎಂಬುದನ್ನು ಮರಾಠಿಗರು ಅರಿತುಕೊಳ್ಳಬೇಕು,” ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

Ad Widget

Ad Widget alt="Ad Widget"/>

Ad Widget

ನಗರದ ಗಣೇಶ್ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಮರಾಠಾ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Ad Widget

Ad Widget <> Ad Widget

ಶಿವಾಜಿ ಮತ್ತು ಫುಲೆಗೆ ಸಮಾನ ಗೌರವ:
ಶಿವಾಜಿ ಮಹಾರಾಜರ ಸಮಾಧಿಯನ್ನು ಪತ್ತೆ ಹಚ್ಚಿದವರು ಸಮಾಜ ಸುಧಾರಕ ಜ್ಯೋತಿಬಾ ಫುಲೆ. ಹಾಗಾಗಿ, ಶಿವಾಜಿಯವರಿಗೆ ನೀಡುವಷ್ಟೇ ಗೌರವವನ್ನು ಫುಲೆ ಅವರಿಗೂ ನೀಡಬೇಕು. ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಎಲ್ಲಾ ಮಹಾನ್ ಪುರುಷರ ಜಯಂತಿಯನ್ನು ಮರಾಠಾ ಸಮಾಜ ಆಚರಿಸಿದರೆ, ಬೇರೆ ಸಮುದಾಯದವರು ಶಿವಾಜಿ ಜಯಂತಿಯನ್ನು ಆಚರಿಸುತ್ತಾರೆ. ಇದರಿಂದ ಸಹೋದರತ್ವ ಬೆಳೆಯುತ್ತದೆ ಎಂದು ಲಾಡ್ ಕಿವಿಮಾತು ಹೇಳಿದರು.

ಸಿಎಂ ಕುರ್ಚಿ ಆಸೆಯಿಲ್ಲ:
ಸಮಾವೇಶದಲ್ಲಿ ಮುಖಂಡ ಪದ್ಮಾಕರ್ ಪಾಟೀಲ್ ಅವರು ‘ಸಂತೋಷ್ ಲಾಡ್ ಮುಂದಿನ ಸಿಎಂ ಆಗಬೇಕು’ ಎಂದು ಪ್ರಸ್ತಾಪಿಸಿದ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಚಿವರು, “ಮುಖ್ಯಮಂತ್ರಿ ಆಗುವುದು ನನಗೆ ಬೇಕಿಲ್ಲ, ಅದರಲ್ಲಿ ಆಸಕ್ತಿಯೂ ಇಲ್ಲ. ಈಗಾಗಲೇ ನಾಲ್ಕು ಬಾರಿ ಶಾಸಕನಾಗಿ, ಮೂರು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಮರಾಠಾ ಸಮಾಜ ಕಷ್ಟದಲ್ಲಿದ್ದು, ಅದನ್ನು ಮೇಲೆತ್ತುವ ಉದ್ದೇಶದಿಂದ ಒಗ್ಗಟ್ಟು ಪ್ರದರ್ಶಿಸಲು ಈ ಕಾರ್ಯಕ್ರಮ ಮಾಡಲಾಗಿದೆಯೇ ಹೊರತು, ಇದು ರಾಜಕೀಯ ಶಕ್ತಿ ಪ್ರದರ್ಶನವಲ್ಲ,” ಎಂದು ಸ್ಪಷ್ಟಪಡಿಸಿದರು.

Ad Widget

Ad Widget

ಜೀಜಾಮಾತಾ ಟ್ರಸ್ಟ್ ಸ್ಥಾಪನೆಗೆ ಕರೆ:
ಮರಾಠಾ ಸಮಾಜದ ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗಾಗಿ ತಕ್ಷಣವೇ ‘ಜೀಜಾಮಾತಾ’ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುವಂತೆ ಕರೆ ನೀಡಿದ ಲಾಡ್, ಅದಕ್ಕೆ ತಮ್ಮ ಫೌಂಡೇಶನ್‌ನಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ದಾದಾ ಮಹಾರಾಜ್ ನಗರಕರ್ ಅವರು ಪುಣೆ ಬಿಟ್ಟು ಬೀದರ್‌ನಲ್ಲೇ ಮಠ ಸ್ಥಾಪಿಸಿ, ಸಮಾಜ ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ಮರಾಠಾ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ಮಾತನಾಡಿ, ಹಿಂದುಳಿದಿರುವ ಮರಾಠಾ ಸಮಾಜವನ್ನು ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಂಘಟಿಸಲು ರಾಜ್ಯಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮರಾಠಾ ಪರಿಷತ್ ಮುಖಂಡರಾದ ಸುರೇಶ ಸಾರೆ, ದಿಗಂಬರರಾವ್ ಮಾನಕಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಶಿವಾಜಿ ಮಹಾರಾಜ್ ವೃತ್ತದಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

Ad Widget
Click to comment

Leave a Reply

ಶಿಕ್ಷಣ

Vivekananda-ಸದ್ದಿಲ್ಲದೆ ಸಾಹಿತ್ಯ ಸೇವೆಗೈಯ್ಯುತ್ತಿದೆ ಪುಸ್ತಕ ಅವಲೋಕನ ಬಳಗ

Published

on

Ad Widget

Ad Widget

Ad Widget

Ad Widget

ಈ ಬಾರಿಯ ಕನ್ನಡ ರಾಜ್ಯೋತ್ಸವವು ಅನೇಕ ಓದುಗ ಮತ್ತು ಬರೆಹಗಾರರಿಗೆ
ವಿಶೇಷವಾದುದು. ಪುಸ್ತಕ ಅವಲೋಕನ – ಓದುಬರಹದ ಸುತ್ತಮುತ್ತ ಎಂಬ
ಹೆಸರಿನ ಫೇಸ್ ಬುಕ್ ಬಳಗವೊಂದು ನವೆಂಬರ್ ಇಡೀ ತಿಂಗಳು ಪ್ರತಿದಿನವೂ ಒಬ್ಬೊಬ್ಬ ಲೇಖಕರ ಕುರಿತು ಪುಸ್ತಕ ಪರಿಚಯ ಅಭಿಯಾನವನ್ನು ನಡೆಸುತ್ತಿದೆ.

Ad Widget

Ad Widget

Ad Widget

Ad Widget

ಈ ಬಾರಿಯ ಕನ್ನಡ ರಾಜ್ಯೋತ್ಸವವು ಅನೇಕ ಓದುಗ ಮತ್ತು ಬರೆಹಗಾರರಿಗೆ
ವಿಶೇಷವಾದುದು. ಪುಸ್ತಕ ಅವಲೋಕನ – ಓದುಬರಹದ ಸುತ್ತಮುತ್ತ ಎಂಬ
ಹೆಸರಿನ ಫೇಸ್ ಬುಕ್ ಬಳಗವೊಂದು ನವೆಂಬರ್ ಇಡೀ ತಿಂಗಳು ಪ್ರತಿದಿನವೂ ಒಬ್ಬೊಬ್ಬ
ಲೇಖಕರ ಕುರಿತು ಪುಸ್ತಕ ಪರಿಚಯ ಅಭಿಯಾನವನ್ನು ನಡೆಸುತ್ತಿದೆ.

Ad Widget

Ad Widget alt="Ad Widget"/>

Ad Widget

ಗುಂಪಿನ ನಿರ್ವಾಹಕರಾದ ವೀಣಾ ನಾಯಕ್ ಮತ್ತು ವಸಂತ ಗಣೇಶ್ ಅವರ ಕನ್ನಡಪರ ಮನಸ್ಸಿನ ಬಹಳ ದೊಡ್ಡ ಯೋಜನೆಯಿದು. ಮೂವತ್ತು ದಿನಕ್ಕೆ ಮೂವತ್ತು ಸಾಹಿತಿಗಳ ಪಟ್ಟಿಯನ್ನು ಮೊದಲೇ
ನೀಡಲಾಗಿದ್ದು ನವೋದಯ ಪೂರ್ವ, ನವೋದಯದಿಂದ ತೊಡಗಿ ಇತ್ತೀಚಿನವರೆಗಿನ ಪ್ರಮುಖ ಸಾಹಿತಿಗಳು, ಎಲೆಮರೆಯ ಕಾಯಿಯಂತಿದ್ದ ಸಾಧಕ ಸಾಹಿತಿಗಳ ಮತ್ತು ಪ್ರಮುಖ ಅನುವಾದ ಸಾಹಿತಿಗಳ ಪರಿಚಯ ಮತ್ತು ಅವರ ಕೃತಿಗಳನ್ನು ಅವಲೋಕಿಸುವ ಅಭಿಯಾನವಿದು.

Ad Widget

Ad Widget <> Ad Widget

ಪಂಜೆ ಮಂಗೇಶರಾವ್, ರಾಶಿ, ವಂಶಿ, ವ್ಯಾಸರಾವ್ ನಿಂಜೂರ್, ಕೆರೂರು ವಾಸುದೇವಾಚಾರ್ಯ, ಶ್ರೀರಂಗ, ಗಳಗನಾಥ, ಆಲೂರ ವೆಂಕಟರಾವ್, ಕಮಲಾ ಹಂಪನ, ಕುವೆಂಪು, ಮೊಗಳ್ಳಿ ಗಣೇಶ್, ಸುಬ್ರಾಯ ಚೊಕ್ಕಾಡಿ, ವೀರ ಕೇಸರಿ ಸೀತಾರಾಮಶಾಸ್ತ್ರಿ, ಗೌರೀಶ್ ಕಾಯ್ಕಿಣಿ, ಎಸ್.ವಿ.ಪಿ., ವಿವೇಕ ಶಾನಭಾಗ, ಡಾ. ಸಿ.ಆರ್. ಚಂದ್ರಶೇಖರ್, ಡಿ.ವಿ.ಜಿ, ಸಂತೋಷ ಕುಮಾರ ಮೆಹೆಂದಳೆ ಹೀಗೆ ಸಾಹಿತ್ಯದ
ಬೇರೆಬೇರೆ ಕಾಲಘಟ್ಟದ ಮೂವತ್ತು ಜನ ಅಪೂರ್ವ ಸಾಹಿತಿ, ಕವಿಗಳ ಪರಿಚಯ
ನಡೆಯುತ್ತಿದೆ. ದಿನಂಪ್ರತಿ ಈ ಬಳಗದ ಸುಮಾರು 40 – 45 ರಷ್ಟು ಸದಸ್ಯರು
ಆಯಾ ಕವಿಗಳ, ಕೃತಿಗಳ ಕುರಿತು ಪರಿಚಯಾತ್ಮಕ ಲೇಖನಗಳನ್ನು ಬರೆಯುತ್ತಿರುವುದು ಗಮನಾರ್ಹವಾದುದು.

2021 ರಲ್ಲಿ ರಚನೆಯಾದ ಈ ಫೇಸ್ ಬುಕ್ ಬಳಗವು ಯಶಸ್ವಿಯಾಗಿ ಆರು ವರ್ಷಗಳನ್ನು ಪೂರೈಸುತ್ತಿದ್ದು ನಾಡಿನ ಅನೇಕ ಗಣ್ಯಾತಿಗಣ್ಯರನ್ನು, ಹಿರಿಯ ಸಾಹಿತಿಗಳನ್ನು ಸೇರಿದಂತೆ 21,600 ಕ್ಕಿಂತಲೂ ಹೆಚ್ಚು ಸದಸ್ಯರನ್ನು ಒಳಗೊಂಡು ಸಕ್ರಿಯವಾಗಿ ಸಾಹಿತ್ಯ ಚಟುವಟಿಕೆಗಳನ್ನು ನಿರಂತರ ನಡೆಸಿಕೊಂಡು ಬರುತ್ತಿದೆ. ಉಮಾಶಂಕರ್ ಟಿ.ಆರ್. ಅವರು ಸಂಸ್ಥಾಪಕರಾಗಿ, ನಿರ್ವಾಹಕರಾಗಿ (ಅಡ್ಮಿನ್)
ಆರಂಭಗೊಳಿಸಿದ ಈ ಪುಸ್ತಕ ಬಳಗವು ಪ್ರಸ್ತುತ ಉಮಾಶಂಕರ್ ಟಿ. ಆರ್. (ಸಂಸ್ಥಾಪಕರು ಮತ್ತು ಮುಖ್ಯ ನಿರ್ವಾಹಕರು), ದೇವಿಶ್ರೀ ಪ್ರಸಾದ್, ವೀಣಾ ನಾಯಕ್, ವಸಂತ ಗಣೇಶ್, ಶಶಿ ಶಂಕರ್, ಪವಿತ್ರ ಹೆತ್ತೂರು ಈ ಆರು ಜನ ನಿರ್ವಾಹಕರನ್ನು ಒಳಗೊಂಡು ಕಾರ್ಯ ನಿರ್ವಹಿಸುತ್ತಿದೆ.

Ad Widget

Ad Widget

ಪುಸ್ತಕದ ಕುರಿತಾಗಿಯೇ ಚರ್ಚೆಗಳು ನಡೆಯುವ, ಪುಸ್ತಕದ ಓದು ಮತ್ತು ಬರೆಹಕ್ಕಷ್ಟೇ ಇರುವಂತಹ ಈ ಬಳಗದಲ್ಲಿ ಕನ್ನಡದ ವಿವಿಧ ಕೃತಿಗಳ ಕುರಿತು ರಸಪ್ರಶ್ನೆ, ಪದಬಂಧ ಇತ್ಯಾದಿ ಸ್ಪರ್ಧೆಗಳು ಕೂಡ ನಡೆಯುತ್ತವೆ. ವಿವಿಧ ವಸ್ತುಗಳನ್ನು ನೀಡಿ ಬರೆಯಿಸುವ ಲೇಖನ ಅಭಿಯಾನಗಳು ಕೂಡ ಸಾಕಷ್ಟು
ನಡೆಯುತ್ತವೆ. ಸದಸ್ಯರು ತಾವು ಓದಿದ ಪುಸ್ತಕದ ಪರಿಚಯವನ್ನು ಮಾಡುವ, ವಿಮರ್ಶಾತ್ಮಕ ಲೇಖನಗಳನ್ನು ಪೋಸ್ಟ್ ಮಾಡುವ ಮೂಲಕ ಸ್ವಾರಸ್ಯಕರ ಚರ್ಚೆಯನ್ನು ನಡೆಸುತ್ತಿದ್ದಾರೆ. ಡಾ. ನಾ. ಮೊಗಸಾಲೆ, ಚಿತ್ರಲೇಖಾ ಶಶೀಂದ್ರನ್, ಲಕ್ಷ್ಮಣ ಕೌಂಟೆ, ವಿಠಲ ಶೆಣೈ, ರಮೇಶ್ ಶೆಟ್ಟಿಗಾರ, ಮನೋಹರ ಪೈ, ಪಾರ್ವತಿ ಐತಾಳ, ಉಷಾ ನರಸಿಂಹನ್ ಮೊದಲಾದ ಲೇಖಕರು ಸ್ವತಃ ಈ ಚರ್ಚೆಯಲ್ಲಿ
ಭಾಗವಹಿಸುತ್ತಿರುವುದು ಸಾಹಿತ್ಯದ ವಿಚಾರ ವಿನಿಮಯಕ್ಕೆ ಪೂರಕವಾಗಿದೆ. ಗುಂಪಿನ
ಸದಸ್ಯರ ನಡುವೆ ಪುಸ್ತಕಗಳ ವಿನಿಮಯವೂ ನಡೆಯುತ್ತದೆ. ಒಬ್ಬರು ಪರಿಚಯಿಸಿದ ಪುಸ್ತಕವು ಕುತೂಹಲ ಮೂಡಿಸಿ ಅನೇಕರು ಆ ಪುಸ್ತಕವನ್ನು

ಖರೀದಿಸಲು ಪ್ರೇರಣೆ ನೀಡಿದೆ. ಇದರಿಂದ ಲೇಖಕರ ವೈಯಕ್ತಿಕ ಪರಿಚಯವೂ
ಆದದ್ದಿದೆ. ತನ್ಮೂಲಕ ಲೇಖಕರಿಗೂ ಪ್ರೇರಣೆ ದೊರಕಿದಂತಾಗಿದೆ.

ಲೇಖನಗಳನ್ನು ಬರೆದವರಿಗೆ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ, ಪ್ರತಿ ತಿಂಗಳು ಅತ್ಯುತ್ತಮ ಲೇಖನ ಬರೆದವರಿಗೆ ಪುಸ್ತಕಗಳನ್ನೇ ಬಹುಮಾನವಾಗಿ ನೀಡುವ ವಿಶಿಷ್ಟ ಯೋಜನೆ ಇಲ್ಲಿದೆ. ಈ ಬಳಗದ ಸದಸ್ಯರಲ್ಲೇ ಕೆಲವರು ಪ್ರಾಯೋಜಕತ್ವವನ್ನು ವಹಿಸಿಕೊಂಡು ಪ್ರತಿ ವರ್ಷವೂ ನಿಗದಿತ ಮೊತ್ತವನ್ನು ಈ
ಬಳಗಕ್ಕೆ ಪುಸ್ತಕ ಬಹುಮಾನ ನೀಡಲೆಂದು ನೀಡುವವರಿದ್ದಾರೆ. ಸ್ವತಃ ಲೇಖಕರೂ ತಮ್ಮ ಪುಸ್ತಕಗಳನ್ನು ಪ್ರಾಯೋಜಿಸುವ ಅವಕಾಶ ಇಲ್ಲಿದ್ದು ಅನೇಕರು ತಮ್ಮ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ನೀಡಿರುತ್ತಾರೆ. ಅಲ್ಲದೆ, ಅನೇಕ ವಿಶೇಷ ಅಭಿಯಾನಗಳಲ್ಲಿ ನಗದು ಬಹುಮಾನವನ್ನೂ ನೀಡಿ
ಪ್ರೊತ್ಸಾಹಿಸಲಾಗುತ್ತಿದೆ. ಬಹುಮಾನದ ಮೊತ್ತವನ್ನು ವಿಜೇತರಿಗೆ ನೀಡುವ ಜವಾಬ್ದಾರಿಯನ್ನು, ಬಹುಮಾನದ ಪುಸ್ತಕಗಳನ್ನು ವಿಳಾಸ ಬರೆದು ಅಚ್ಚುಕಟ್ಟಾಗಿ ಅಂಚೆ ಮುಖೇನ (ಅಂಚೆ ವೆಚ್ಚವನ್ನು ಸೇರಿಸಿ) ಬರೆಹಗಾರರಿಗೆ ತಲುಪಿಸುವ ಏರ್ಪಾಡನ್ನು ಬಳಗದ ಹಿರಿಯ ನಿರ್ವಾಹಕಿ ವೀಣಾ ನಾಯಕ್ ಅವರು ಮಾಡಿಕೊಂಡು ಬರುತ್ತಿದ್ದಾರೆ.

ಬರೆಹಗಾರರ ಆಸಕ್ತಿ ಮತ್ತು ಅಭಿರುಚಿಯನ್ನು ಗುರುತಿಸಿ ಅಂತಹ ಪುಸ್ತಕವನ್ನೆ ಬಹುಮಾನ ರೂಪದಲ್ಲಿ ಕಳುಹಿಸುವುದು ಅವರ ವೈಶಿಷ್ಟ್ಯವಾಗಿದೆ. ಹಾಗೆ ನೀಡುವ ಪುಸ್ತಕದ ಒಳಪುಟದಲ್ಲಿ ಅಭಿಯಾನದ
ಹೆಸರು ಮತ್ತು ಪ್ರಾಯೋಜಕರ ಮಾಹಿತಿ ಇದ್ದು ಅದೊಂದು ದಾಖಲೆಯಾಗಿ ಸದಾ
ನೆನಪಿನಲ್ಲಿ ಉಳಿಯುವಂತಿದೆ. ಪ್ರತಿಯೊಬ್ಬರು ನೀಡಿದ ಹಣಕ್ಕೆ ಲೆಕ್ಕಾಚಾರ
ಇಡುತ್ತಾರಾದರೂ ಯಾವುದೇ ರೀತಿಯ ಹಣಕಾಸಿನ ಲೆಕ್ಕಾಚಾರದ ಚರ್ಚೆ ಇಲ್ಲಿ
ನಡೆಯುವುದಿಲ್ಲ. ಕಡಿಮೆಯಾದ ಮೊತ್ತವನ್ನು ಅಡ್ಮಿನ್ ಅವರೇ ಭರಿಸುವುದೂ ಇದೆ.

ಲೇಖನಗಳನ್ನು ಬರೆದವರೆಲ್ಲರಿಗೂ ಪುಸ್ತಕ ಬಹುಮಾನ ನೀಡುವ ಪತ್ರವನ್ನು ಕೂಡ ನೀಡಲಾಗುತ್ತಿದೆ. ಅಭಿನಂದನಾ ಪತ್ರವು ಅಭಿಯಾನದ ಹೆಸರು, ಪ್ರಾಯೋಜಕರ ಮತ್ತು ಬಹುಮಾನ ವಿಜೇತರ ಭಾವಚಿತ್ರವನ್ನು ಒಳಗೊಂಡ ದಾಖಲೆಯಾಗಿ ರೂಪುಗೊಂಡು ಒಳ್ಳೆಯ ನೆನಪಾಗಿ, ಸಂಭ್ರಮವನ್ನು
ಹೆಚ್ಚಿಸುವಂತಿದೆ.

ಕನ್ನಡ ಪುಸ್ತಕಗಳ ಓದು ಮತ್ತು ಬರೆವಣಿಗೆಗೆ ಪ್ರೇರಣೆ ಮತ್ತು ಪ್ರೋತ್ಸಾಹ ಕೊಡುವುದು ಈ ಅಭಿಯಾನಗಳ ಉದ್ದೇಶವಾಗಿದ್ದು ಅನೇಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬರೆವಣಿಗೆಯ ಕೌಶಲವನ್ನು ಪಡೆಯುತ್ತಿರುವುದು ಈ ಬಳಗದ ಸಾಧನೆಯಾಗಿದೆ. ಗುಂಪಿನ ಸದಸ್ಯರೇ
ಪರಸ್ಪರ ಸಹಕಾರವನ್ನು ನೀಡುವ ಮೂಲಕ ಮುನ್ನಡೆಯುತ್ತಿರುವ ಈ ಫೇಸ್
ಬುಕ್ ಬಳಗವು ಸಾಮಾಜಿಕ ಜಾಲತಾಣವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು
ಎಂಬುದಕ್ಕೆ ಸಾಕ್ಷಿಯಾಗಿದೆ.

ಫೇಸ್ ಬುಕ್ ಎಂಬುದು ಇಲ್ಲಿ ಬುಕ್ ಫೇಸ್ ಆಗಿದೆ. ಬಹಳಷ್ಟು ಜನ ಮಹಿಳೆಯರು ಓದಿ
ಬರೆಯುತ್ತಿದ್ದಾರೆ. ಯುವ ತಲೆಮಾರಿಗೆ ಪುಸ್ತಕ ಓದುವ ಹವ್ಯಾಸವನ್ನು ದಾಟಿಸುವ, ಓದಿದ್ದನ್ನು ಬರೆಯುವ ಕೌಶಲ ಬೆಳೆಸುವ ನಿಟ್ಟಿನಲ್ಲಿ ಈ ಪುಸ್ತಕ ಅವಲೋಕನ ಬಳಗವು ಕೊಡುಗೆಯನ್ನು ನೀಡುತ್ತಿದೆ. ಯಾವುದೇ ಹೊಗಳಿಕೆ, ಪ್ರತಿಫಲದ ನಿರೀಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಕನ್ನಡದ ಸೇವೆಯನ್ನು
ಮಾಡುತ್ತಿರುವ ಪುಸ್ತಕ ಅವಲೋಕನ ಬಳಗದ ಎಲ್ಲ ನಿರ್ವಾಹಕರಿಗೆ ಅಭಿನಂದನೆಗಳು. ಸಹಕರಿಸುತ್ತಿರುವ ಸದಸ್ಯರಿಗೆ ಶುಭಾಶಯಗಳು. ಈ ಬಳಗ ಇನ್ನಷ್ಟು ಚೈತನ್ಯಪೂರ್ಣವಾಗಿ, ಲವಲವಿಕೆಯಿಂದ ಮುಂದುವರಿಯಲಿ.

ಡಾ. ಗೀತಾ ಕುಮಾರಿ ಟಿ.
ಕನ್ನಡ ಸಹಾಯಕ ಪ್ರಾಧ್ಯಾಪಕಿ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ),
ಪುತ್ತೂರು

Ad Widget
Continue Reading

ಬಿಗ್ ನ್ಯೂಸ್

Shashikumar Bhat-ಶಶಿಕುಮಾರ್ ಭಟ್ ಪಡಾರು ಅವರಿಗೆ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿ

Published

on

Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಅವರು ಗೋವಾ ರಾಜ್ಯ ತೋಟಗಾರಿಕೆ ನಿಗಮ ಹಾಗೂ ಕನ್ನಡ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ಗೋವಾ – ಕರ್ನಾಟಕ ಸಂಸ್ಥೆ ಕೊಡಮಾಡುವ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಅವರು ಗೋವಾ ರಾಜ್ಯ
ತೋಟಗಾರಿಕೆ ನಿಗಮ ಹಾಗೂ ಕನ್ನಡ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ಗೋವಾ – ಕರ್ನಾಟಕ ಸಂಸ್ಥೆ ಕೊಡಮಾಡುವ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Ad Widget

Ad Widget alt="Ad Widget"/>

Ad Widget

ಪುತ್ತೂರು ಕೇಂದ್ರಿತವಾಗಿ ಹಲವು ಕೃಷಿ ಸಂಬಂಧಿ ಸಮಾವೇಶಗಳನ್ನೂ ಆಯೋಜಿಸುತ್ತಿರುವ ಶಶಿಕುಮಾರ್ ಭಟ್ಪ ಡಾರು ಅವರು ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ, ತರಬೇತಿ, ಸಲಹೆ – ಮಾರ್ಗದರ್ಶನಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಕೊಡಮಾಡಕಲಾಗುತ್ತಿದೆ. ಪ್ರಶಸ್ತಿ ಪ್ರದಾನ
ಸಮಾರಂಭ ನವೆಂಬರ್ 22ರಂದು ವಾಸ್ಕೋ ಗೋವಾದ ಬೈನಾದಲ್ಲಿನ ರವೀಂದ್ರ ಭವನದಲ್ಲಿ ನಡೆಯಲಿದೆ.

Ad Widget

Ad Widget <> Ad Widget

ಶಶಿಕುಮಾರ್ ಭಟ್ ಪಡಾರು ಅವರ ಸಾಧನೆಯ ಹಾದಿ:
ಕರಾವಳಿಯ ಜೀವನಾಡಿಯಾದ ಅಡಿಕೆ ಕೃಷಿ ಇಂದು ಹಳದಿ ಎಲೆ ರೋಗ, ಮಾರುಕಟ್ಟೆ ಅಸ್ಥಿರತೆ, ಹವಾಮಾನ ವೈಪರೀತ್ಯ, ಕೂಲಿ ಸಮಸ್ಯೆ ಮೊದಲಾದ ನಾನಾ ಸಂಕಷ್ಟಗಳಿಂದ ನಲುಗಿ ಹೋಗುತ್ತಿರುವ ಈ ಆಧುನಿಕ ದಿನಮಾನಗಳಲ್ಲಿ, ಕೃಷಿಕರಿಗೆ ಹೊಸ ದಾರಿ, ಹೊಸ ಸಾಧ್ಯತೆಯ ಬೆಳಕನ್ನು ತೋರಿಸಿದ ದೀಪಸ್ತಂಭ ಶಶಿಕುಮಾರ ಭಟ್ ಪಡಾರು.

ಕಾಳುಮೆಣಸಿನ ಕ್ರಾಂತಿಯ ಹರಿಕಾರ:
ಅಡಿಕೆಯೊಂದಿಗೆ ಕಾಳುಮೆಣಸು ಬೆಳೆದರೆ ರೈತನ ಆದಾಯ ದ್ವಿಗುಣವಾಗುತ್ತದೆ ಎಂಬ ಸತ್ಯವನ್ನು ಮನಗಂಡು, ಅದನ್ನು ಕೇವಲ ತಮ್ಮ ತೋಟಕ್ಕೆ ಸೀಮಿತಗೊಳಿಸದೆ ಸಾವಿರಾರು ರೈತರಿಗೆ
ಮನದಟ್ಟು ಮಾಡಿದವರು. ಕಾಳುಮೆಣಸು ಕೃಷಿಯ ಬಗ್ಗೆ ಮಾಹಿತಿ ವಿನಿಮಯಕ್ಕಾಗಿ ವಾಟ್ಸಾಪ್ ತಂಡಗಳನ್ನು ರಚಿಸಿ, ಸಾವಿರಾರು ಮಂದಿಯನ್ನು ಒಗ್ಗೂಡಿಸಿ, ಪ್ರತಿನಿತ್ಯ ತಳಿ ಆಯ್ಕೆ, ನಾಟಿ ವಿಧಾನ,
ರೋಗ ನಿರ್ವಹಣೆ, ಇಳುವರಿ ಹೆಚ್ಚಳದ ಬಗ್ಗೆ ಚರ್ಚಿಸಿ, ಅವರಲ್ಲಿ ಕಾಳುಮೆಣಸಿನ ಬಗೆಗೆ ಆಸಕ್ತಿ ಹಚ್ಚಿಸಿದ ಅಪರೂಪದ ಸಂಘಟಕರು. ಇಂದು ಕರಾವಳಿಯ ಸಾವಿರಾರು ಯುವ ರೈತರು ಅವರ ವಾಟ್ಸಾಪ್ ತಂಡಗಳಿಂದಲೇ ಕೃಷಿಗೆ ಮರಳಿದ್ದಾರೆ.

Ad Widget

Ad Widget

ಮನೆ ಬಾಗಿಲಿಗೆ ಕೃಷಿ ಸೇವೆ – ಕೇವಲ ಮಾರಾಟವಲ್ಲ ಬದ್ಧತೆ:
ಕೇವಲ ಪ್ರೇರಣೆ ನೀಡುವುದಕ್ಕೆ ಸೀಮಿತವಾಗದೆ, ಆಸಕ್ತ ಕೃಷಿಕರ ಮನೆ ಬಾಗಿಲಿಗೇ ಗುಣಮಟ್ಟದ, ರೋಗ ನಿರೋಧಕ ಶಕ್ತಿಯುಳ್ಳ ಕಾಳುಮೆಣಸಿನ ಗಿಡಗಳನ್ನು ತಲುಪಿಸುವುದು, ನಂತರ ತಜ್ಞರ ಮೂಲಕ ಬೆಳೆಸುವ ವೈಜ್ಞಾನಿಕ ವಿಧಾನವನ್ನು ತಿಳಿಸಿಕೊಡುವುದು ಮತ್ತು ಫಸಲು ಬರುವವರೆಗೂ ದೀರ್ಘಕಾಲಿಕ ಮಾರ್ಗದರ್ಶನ ನೀಡುವುದರ ಮೂಲಕ ಹೊಸಬರೂ ಧೈರ್ಯದಿಂದ ಕೃಷಿಗಿಳಿಯುವಂತೆ ಮಾಡಿದ್ದಾರೆ. ರೈತರು ಗಿಡಗಳಿಗೆ ಉಂಟಾದ ತೊಂದರೆಗೆ ಸಂಬಂಧಿಸಿದಂತೆ ಫೋಟೋ ಕಳುಹಿಸಿದರೆ ತಕ್ಷಣ ಪರಿಹಾರ ಸೂಚಿಸುವ ಅವರ ಕಾಳಜಿ ಅನನ್ಯ.

ದಾಖಲೆಯ ಸಾಧನೆ – ಮೂವತ್ತು ಲಕ್ಷದತ್ತ ಪಯಣ:
ಕಳೆದ ಬೆರಳೆಣಿಕೆಯ ವರ್ಷಗಳಲ್ಲಿ ಸರಿಸುಮಾರು ಇದುವರೆಗೆ ಮೂವತ್ತು ಲಕ್ಷಕ್ಕಿಂತಲೂ ಅಧಿಕ ಕಾಳುಮೆಣಸಿನ ಗಿಡಗಳನ್ನು ಕೃಷಿಕರ ತೋಟಗಳಿಗೆ ತಲುಪಿಸುವ ಮೂಲಕ ಕರಾವಳಿ
ಜಿಲ್ಲೆಗಳಲ್ಲಿ ಕಾಳುಮೆಣಸಿನ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಇದು ಕೇವಲ ಸಂಖ್ಯೆಯಲ್ಲ, ಕರಾವಳಿಯ ಕೃಷಿ ಭೂಪಟವನ್ನೇ ಬದಲಾಯಿಸಿದ ಸಾಧನೆ.

ಅಡಿಕೆಯೊಂದಿಗೆ ಸಮಗ್ರ ಸಹಬೆಳೆಗಳ ಕನಸು:
ಕಾಳುಮೆಣಸಿಗೆ ಮಾತ್ರ ಸೀಮಿತವಾಗದೆ, ಇವರು ಅಡಿಕೆಯ ಸಹಬೆಳೆಗಳಾಗಿ ಕಾಫಿ, ಏಲಕ್ಕಿ ಬೆಳೆಯುವುದಕ್ಕೂ ರೈತರನ್ನು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ. ಅಡಿಕೆ ತೋಟದಲ್ಲಿ ಖಾಲಿ
ಇರುವ ಜಾಗದಲ್ಲಿ ಕಾಫಿ ಮತ್ತು ಏಲಕ್ಕಿ ಬೆಳೆದು ಹೆಚ್ಚುವರಿ ಆದಾಯ ಗಳಿಸುವ ವೈಜ್ಞಾನಿಕ ಮಾದರಿಯನ್ನು ಪರಿಚಯಿಸಿದ್ದಾರೆ. ಅದಕ್ಕಾಗಿ ಗುಣಮಟ್ಟದ ಕಾಫಿ ಮತ್ತು ಏಲಕ್ಕಿ ಗಿಡಗಳನ್ನೂ ರೈತರಿಗೆ
ಒದಗಿಸುತ್ತಿದ್ದಾರೆ.

ಸಮಗ್ರ ತೋಟಗಾರಿಕಾ ಸೇವೆ:

ಇದೀಗ ಸಮಾನ ಮನಸ್ಕ ಸ್ನೇಹಿತರನ್ನು ಕೂಡಿಕೊಂಡು, ಗುಣಮಟ್ಟದ ಕಾಫಿ, ಅಡಿಕೆ, ತೆಂಗು, ಅತ್ಯಧಿಕ ಇಳುವರಿಯ ಲಿಂಬೆ, ಏಪಲ್, ಏಲಕ್ಕಿ ಮುಂತಾದ ತೋಟಗಾರಿಕಾ ಬೆಳೆಗಳ ಗಿಡಗಳನ್ನು
ಒದಗಿಸುವ ಮಹತ್ಕಾರ್ಯದಲ್ಲೂ ನಿರತರಾಗಿದ್ದಾರೆ. ರೈತನಿಗೆ ಬೇಕಾದ ಎಲ್ಲಾ ಗಿಡಗಳು – ಮಾಹಿತಿಗಳನ್ನು ಒಂದೇ ಸೂರಿನಡಿ, ಒಂದೇ ವಿಶ್ವಾಸಾರ್ಹ ಮೂಲದಲ್ಲಿ ಸಿಗುವಂತಹ ವ್ಯವಸ್ಥೆಯನ್ನು
ಕಟ್ಟಿದ್ದಾರೆ.

Ad Widget
Continue Reading

ಶಿಕ್ಷಣ

Ambika-ನ.21 : ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ವಿದ್ವಾನ್ ಲಕ್ಷ್ಮೀಶ ತೋಳ್ಪಾಡಿಯವರಿಂದ ಭಗವದ್ಗೀತಾ ಪ್ರವಚನ

Published

on

Ad Widget

Ad Widget

Ad Widget

Ad Widget

ಹಿರಿಯ ಚಿಂತಕ ವಿದ್ವಾನ್ ಲಕ್ಷ್ಮೀಶ ತೋಳ್ಪಾಡಿಯವರಿಂದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ನವೆಂಬರ್ 21ರಂದು ಭಗವದ್ಗೀತಾ ಪ್ರವಚನ ನಡೆಯಲಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಹಿರಿಯ ಚಿಂತಕ ವಿದ್ವಾನ್ ಲಕ್ಷ್ಮೀಶ ತೋಳ್ಪಾಡಿಯವರಿಂದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ನವೆಂಬರ್ 21ರಂದು ಭಗವದ್ಗೀತಾ ಪ್ರವಚನ ನಡೆಯಲಿದೆ.

Ad Widget

Ad Widget alt="Ad Widget"/>

Ad Widget

ಪ್ರವಚನ ಸಂಜೆ 4ರಿಂದ 5ರವರೆಗೆ ನಡೆಯಲಿದೆ. ಈ ಕಾರ್ಯಕ್ರಮ ನವೆಂಬರ್ 7ರಂದು ಆರಂಭಗೊಂಡಿದ್ದು, ಪ್ರತಿ ಮೊದಲನೆಯ ಹಾಗೂ ಮೂರನೇ ಶನಿವಾರಗಳಂದು ನಡೆಯುತ್ತಿವೆ.

Ad Widget

Ad Widget <> Ad Widget

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!