ಅಂತರ ರಾಜ್ಯ
GST-ಜನರಿಗೆ GST ಬಂಪರ್ : ಆರೋಗ್ಯ, ವಿಮೆ ಕ್ಷೇತ್ರ ಸೇರಿದಂತೆ ಹಲವು ಶೂನ್ಯ; 2 ಸ್ಲಾಬ್ ಗಳು ಕಡಿತ – ಹಾನಿಕಾರಕ ವಸ್ತುಗಳಿಗೆ ಬರೋಬ್ಬರಿ 40%..!
ಇನ್ಮುಂದೆ ಜನರ ಜೀವವನ್ನು ರಕ್ಷಿಸುವ ಔಷಧಗಳು, ದೈನಂದಿನ ಆಹಾರ ಪದಾರ್ಥಗಳು, ವಿದ್ಯಾಭ್ಯಾಸಕ್ಕೆ ಬಳಸುವ ವಸ್ತುಗಳು ತೆರಿಗೆ ಮುಕ್ತವಾಗಲಿವೆ. ಕೇವಲ ಶೇ. 5ರಷ್ಟು ಜಿಎಸ್‌ಟಿಯನ್ನು ಮಾತ್ರ ಜನಸಾಮಾನ್ಯರು ಬಳಸುವ ಬಹುತೇಕ ಸರಕುಗಳ ಮೇಲೆ ವಿಧಿಸಲಾಗುತ್ತದೆ.
ಹೊಸದಿಲ್ಲಿ: ಇನ್ಮುಂದೆ ಜನರ ಜೀವವನ್ನು ರಕ್ಷಿಸುವ ಔಷಧಗಳು, ದೈನಂದಿನ ಆಹಾರ ಪದಾರ್ಥಗಳು, ವಿದ್ಯಾಭ್ಯಾಸಕ್ಕೆ ಬಳಸುವ ವಸ್ತುಗಳು ತೆರಿಗೆ ಮುಕ್ತವಾಗಲಿವೆ. ಕೇವಲ ಶೇ. 5ರಷ್ಟು ಜಿಎಸ್‌ಟಿಯನ್ನು ಮಾತ್ರ ಜನಸಾಮಾನ್ಯರು ಬಳಸುವ ಬಹುತೇಕ ಸರಕುಗಳ ಮೇಲೆ ವಿಧಿಸಲಾಗುತ್ತದೆ.
ಜಿಎಸ್‌ಟಿಯಲ್ಲಿ ಮುಂದಿನ ತಲೆಮಾರಿನ ಸುಧಾರಣೆಗಳನ್ನು ತರವುದಕ್ಕಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಬುಧವಾರ ನಡೆದ ಜಿಎಸ್‌ಟಿ ಮಂಡಳಿಯ 56ನೇ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಂತೆ “ದೀಪಾವಳಿ’ಗೆ ಜನ ರಿಗೆ ದೊರೆಯಬೇಕಿದ್ದ ಬಂಪರ್ ಕೊಡುಗೆ’ಯನ್ನು ನವರಾತ್ರಿ’ಯಿಂದಲೇ ನೀಡಲಾಗಿದೆ. ಜಿಎಸ್‌ಟಿಯಲ್ಲಿ ತಂದ ಸುಧಾರಣೆಗಳು ಸೆ. 22ರಿಂದ ಜಾರಿಗೆ ಬರ ಲಿವೆ. ತೆರಿಗೆ ವಲಯದಲ್ಲಿ ದೇಶದಲ್ಲಿ “ಸೆಪ್ಟೆಂಬರ್ ಕ್ರಾಂತಿ’ ನಡೆದಿದೆ.
ಬುಧವಾರ ಸುಮಾರು ಹತ್ತೂವರೆ ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ, “ಜಿಎ ಸ್‌ಟಿ ಸುಧಾರಣೆಗಳಿಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ. ಇದಕ್ಕೆ ಯಾವುದೇ ರಾಜ್ಯಗಳು ವಿರೋಧ ವ್ಯಕ್ತಪ ಡಿಸಿಲ್ಲ’ ಎಂದರು.
ದೀಪಾವಳಿಗೆ ಜಿಎಸ್‌ಟಿ ಬಂಪರ್ ಕೊಡುಗೆ ನೀಡಲಾಗುವುದು ಎಂದು ಮೋದಿ ಸ್ವಾತಂತ್ರೋತ್ಸವ ಭಾಷಣದಲ್ಲಿ ಹೇಳಿದ್ದರು.
ಜಿಎಸ್‌ಟಿಯಲ್ಲಿ ಸರಳೀಕರಣ
ಜನಸಾಮಾನ್ಯರನ್ನು ಗುರಿಯಾಗಿಸಿಕೊಂಡು ಎಲ್ಲ ಸುಧಾರಣೆಯನ್ನು ತರಲಾಗಿದೆ. ಜಿಎಸ್‌ಟಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗಿದೆ. ನೋಂದಣಿ, ರಿಟ ರ್ನ್ಸ್ ಫೈಲಿಂಗ್ ಮತ್ತು ಮರು ಪಾವತಿಗಳನ್ನು ಸರಳಗೊಳಿಸಿದ್ದೇವೆ. ಜಿಎಸ್‌ಟಿ ಜಾರಿಯಾದಾಗ ತರಲಾಗಿದ್ದ ಶೇ. 5, ಶೇ. 12, ಶೇ. 18 ಮತ್ತು ಶೇ. 28ರ ಸ್ಟ್ರಾಬ್‌ಗಳ ಬದಲಿಗೆ ಕೇವಲ ಶೇ. 5 ಮತ್ತು ಶೇ. 18ರ ಸ್ಟ್ರಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ ಎಂದರು.
ಆರ್ಥಿಕತೆ ಮೇಲೆತ್ತಲು ನಿರ್ಧಾರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕ ವಿಧಿಸಿದ ಬಳಿಕ ಸಂಕಷ್ಟಕ್ಕೀಡಾಗಿರುವ ಆರ್ಥಿಕತೆಯನ್ನು ಮೇಲೆತ್ತಲು ಜಿಎಸ್‌ಟಿ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದೆ ಎನ್ನಲಾಗಿದೆ. ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಇಳಿಕೆ ಮಾಡಿರುವುದರಿಂದ ದೇಶೀಯವಾಗಿ ಕೊಳ್ಳುವಿಕೆ ಪ್ರಮಾಣ ಹೆಚ್ಚಲಿದ್ದು, ಹಣಕಾಸಿನ ವಹಿವಾಟು ಹೆಚ್ಚಳವಾಗಿ ಆರ್ಥಿಕತೆ ಹೆಚ್ಚಲಿದೆ ಎನ್ನಲಾಗಿದೆ.
ಹಲವು ವಸ್ತುಗಳ ಜಿಎಸ್‌ಟಿ ಶೂನ್ಯಕ್ಕಿಳಿಕೆ ಔಷಧಗಳು ಸೇರಿದಂತೆ ಹಲವು ವಸ್ತುಗಳ ಮೇಲಿನ ತೆರಿಯನ್ನು ಶೂನ್ಯಕ್ಕಿಳಿಸಲಾಗಿದೆ ಎಂದು ವಿತ್ತ ಸಚಿವೆ ಘೋಷಿಸಿದರು. ಇವುಗಳಲ್ಲಿ 33 ಜೀವರಕ್ಷಕ ಔಷಧಗಳು, ವೈಯಕ್ತಿಕ ಜೀವ ವಿಮೆ, ಆರೋಗ್ಯ ವಿಮೆ, ನಕ್ಷೆ ಚಾರ್ಟ್‌ಗಳು ಗ್ಲೋಬ್, ಪೆನ್ಸಿಲ್, ಹಾಲು ಕುದಿಸಿ ಸಂಸ್ಕರಿಸಿದ), ಪನೀರ್‌ಗಳು ಸೇರಿವೆ.
( ದೈನಂದಿನ ಬಳಕೆ ವಸ್ತುಗಳ ತೆರಿಗೆ ಇಳಿಕೆ ಜನರು ದೈನಂದಿನ ಬದುಕಿನಲ್ಲಿ ಬಳಸುವ ಬಹುತೇಕ ವಸ್ತುಗಳ ಮೇಲಿನ ತೆರಿಗೆಯನ್ನು ಶೇ. 5ರ ಫ್ಲ್ಯಾಬ್‌ಗೆ ಇಳಿಸ ಲಾಗಿದೆ. ಇದರಲ್ಲಿ ಕೇಶ ತೈಲ, ಶಾಂಪೂ, ಟೂಥ್‌ಪೇಸ್ಟ್, ಬೆಣ್ಣೆ, ತುಪ್ಪ, ಕುರುಕಲು ತಿಂಡಿ, ಹಾಲುಣಿಸುವ ಬಾಟಲಿ, ಹೊಲಿಗೆಯಂತ್ರ ಸೇರಿ ಹಲವು ವಸ್ತುಗ ಇವೆ. ತೋಟಗಾರಿಕೆ ವಸ್ತುಗಳನ್ನು ಸಹ ಸೇರಿಸಲಾಗಿದೆ.
ಹಾನಿಕಾರಕ ವಸ್ತುಗಳ ತೆರಿಗೆ ಹೆಚ್ಚಳ
ಜನರ ಆರೋಗ್ಯಕ್ಕೆ ಹಾನಿಕಾರಕವಾಗಿರುವ ವಸ್ತುಗಳ ಮೇಲೆ ಶೇ. 40ರಷ್ಟು ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ. ಪಾನ್ ಮಸಾಲ, ಸಿಗರೇಟ್, ಗುಟ್ಕಾ, ಅಗಿಯುವ ತಂಬಾಕು, ಬೀಡಿ, ಇಂಗಾಲಯುಕ್ತ ಪಾನೀಯಗಳು, ಕೆಫೀನ್‌ಯುಕ್ತ ಪಾನೀಯಗಳು, ಆಲೋಹಾಲ್‌ರಹಿತ ಪಾನೀಯಗಳು, ವಿಹಾರ ನೌಕೆ, ರಿವಾಲ್ವರ್‌ಗಳು, ಪಿಸ್ತೂಲ್ ಗಳ ಮೇಲೆ 40% ತೆರಿಗೆ ವಿಧಿಸಲಾಗಿದೆ.
ಶೂನ್ಯ ಜಿಎಸ್‌ಟಿ ಯಾವುದು?
- 33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಗಳು, ಅಪರೂಪದ ಕಾಯಿಲೆಗಳ ಔಷಧ
- ವೈಯಕ್ತಿಕ ಜೀವ ವಿಮೆ, ಆರೋಗ್ಯ ವಿಮೆಗಳು
- ನಕ್ಷೆ, ಚಾರ್ಟ್‌ಗಳು, ಗ್ಲೋಬ್, ಪೆನ್ಸಿಲ್, ಕಾರ್ಪ್ ನರ್, ಕ್ರಿಯಾನ್. ಎಕ್ಸರ್ ಸೈಸ್ ಬುಕ್‌ಗಳು, ನೋಟ್‌ಬುಕ್, ಇರೇಸರ್‌ಗಳು
ಹಾಲು (ಕುದಿಸಿ ಸಂಸ್ಕರಿಸಿದ), ಪನೀರ್, ಪ್ಯಾಕೇಜ್ ಮಾಡಲಾದ ಪಿಜ್ಜಾ ಬ್ರೆಡ್, ಖಾಬ್ರಾ, ಚಪಾತಿ ಅಥವಾ ರೋಟಿ - ಶೇ. 5 ಜಿಎಸ್‌ಟಿ ವಸ್ತುಗಳು
ಹೇರ್ ಆಯಿಲ್, ಶಾಂಪೂ, ಟೂಥ್‌ಪೇಸ್ಟ್, ಟಾಯ್ಲೆಟ್ ಸೋಪ್, ಟೂಥ್ ಬ್ರಷ್, ಶೇವಿಂಗ್ ಕ್ರೀಮ್ - ಬೆಣ್ಣೆ, ತುಪ್ಪ, ಚೀಸ್ ಮತ್ತು ಡೇರಿ ಸೈಡ್, ಕುರುಕಲು ತಿಂಡಿ, ಪಾತ್ರೆಗಳು
-ಹಾಲುಣಿಸುವ ಬಾಟಲಿಗಳು, ಶಿಶುಗಳ ನ್ಯಾಪಿನ್‌ಗಳು ಮತ್ತು ಕ್ಲಿನಿಕಲ್ ಡಯಾಪರ್‌ಗಳು - ಹೊಲಿಗೆಯಂತ್ರ ಮತ್ತು ಅವುಗಳ ಬಿಡಿಭಾಗಗಳು.
ಥರ್ಮೋಮೀಟರ್, ಮೆಡಿಕಲ್ ಗ್ರೇಡ್ ಆಮ್ಲಜನಕ, ರೋಗಪತ್ತೆ ಕಿಟ್‌ಗಳು, ಗ್ಲುಕೋಮೀಟರ್ ಮತ್ತು ಪರೀಕ್ಷಾ ಸ್ಕ್ರಿಪ್
ಕನ್ನಡಕಗಳು - ಟ್ರ್ಯಾಕ್ಟರ್ ಟೈರ್‌ಗಳು, ಅವುಗಳ ಬಿಡಿಭಾಗಗಳು, ಟ್ರ್ಯಾಕ್ಟರ್
- ಜೈವಿಕ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳು
-ಹನಿ ನೀರಾವರಿ ವ್ಯವಸ್ಥೆ ಮತ್ತು ಸ್ಪಿಂಕ್ಸರ್‌ಗಳು - ಕೃಷಿ, ತೋಟಗಾರಿಕೆಯಲ್ಲಿ ಬಳಸುವ ಮಣ್ಣು ಹದಗೊಳಿಸುವ ಯಂತ್ರಗಳು
ಶೇ. 18 ಜಿಎಸ್‌ಟಿ ವಸ್ತುಗಳು
- ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್, ಎಲ್‌ಪಿಜಿ, ಸಿಎನ್‌ಸಿ ಕಾರುಗಳು (1200 ಸಿಸಿ ಮತ್ತು 4000 ಎಂಎಂ ಮೀರದ)
ಡೀಸೆಲ್, ಡೀಸೆಲ್ ಹೈಬ್ರಿಡ್ ಕಾರುಗಳು (1500 ಸಿಸಿ ಮತ್ತು 4000 ಎಂಎಂ ಮೀರದ) - ತ್ರಿಚಕ್ರ ವಾಹನಗಳು
- ಮೋಟಾರು ಸೈಕಲ್‌ಗಳು (350 ಸಿಸಿ ಮತ್ತು ಅದಕ್ಕಿಂತ ಕೆಳಗಿನ)
ಸರಕು ಸಾಗಣೆಯ ಮೋಟಾರು ವಾಹನಗಳು
ಏರ್ ಕಂಡೀಷನರ್‌ಗಳು
ಟಿವಿ (32 ಇಂಚುಗಳಿಗಿಂತ ದೊಡ್ಡದು) (ಎಲ್ ಇಡಿ, ಎಲ್‌ಸಿಡಿ ಟಿವಿ ಸೇರಿ) - ಮಾನಿಟಗರ್‌ಗಳು ಮತ್ತು ಪ್ರಾಜೆಕ್ಟರ್‌ಗಳು
- ಪಾತ್ರೆ ತೊಳಿಯುವ ಯಂತ್ರ
1800 ಸಿಸಿ ಮೀರಿದ ಎಂಜಿನ್ ಸಾಮರ್ಥ್ಯವಿರುವ ಟ್ರ್ಯಾಕ್ಟರ್‌ಗಳು
ಶೇ. 40 ಜಿಎಸ್‌ಟಿ ವಸ್ತುಗಳು ಯಾವುವು?
ಪಾನ್ ಮಸಾಲ, ಸಿಗರೇಟ್, ಗುಟ್ಕಾ, ಅಗಿಯುವ ತಂಬಾಕು, ಬೀಡಿ- ಇಂಗಾಲಯುಕ್ತ ಪಾನೀಯಗಳು, ಕೆಫೀನ್‌ಯುಕ್ತ ಪಾನೀಯಗಳು, ಅಲೋಹಾಲ್ ರಹಿತ ಪಾನೀಯಗಳು
ಧೂಮಪಾನ ಕೊಳವೆಗಳು
350 ಸಿಸಿ ಮೀರಿದ ಮೋಟಾರು ಸೈಕಲ್ - ವೈಯಕ್ತಿಕ ಬಳಕೆಯ ವಿಮಾನ
ವಿಹಾರ ನೌಕೆ
ರಿವಾಲ್ವರ್‌ಗಳು ಪಿಸ್ತೂಲ್
ಎಲ್ಲರಿಗೂ ಪ್ರಯೋಜನ
ಜಿಎಸ್‌ಟಿ ಸುಧಾರಣೆಯು ಜನರು, ರೈತರು, ಸಣ್ಣ ಉದ್ದಿಮೆಗಳು, ಮಹಿಳೆಯರು. ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ. ಸ್ವಾತಂತ್ರೋತ್ಸವ ಭಾಷಣದ ಲ್ಲಿ ನಾನು ನೀಡಿದ್ದ ಭರವಸೆಗಳು ಈಗ ಜಾರಿಯಾಗಿವೆ. ನರೇಂದ್ರ ಮೋದಿ, ಪ್ರಧಾನಿ
ಜಿಡಿಪಿ ವೃದ್ಧಿಗೆ ಸಹಾಯ
ಜಿಎಸ್‌ಟಿ ದರವನ್ನು ಗಣನೀಯವಾಗಿ ಇಳಿಕೆ ಮಾಡಿ ಶ್ರೀಸಾಮಾನ್ಯನಿಗೆ ಅನುಕೂಲ ಕಲ್ಪಿಸಿದ್ದೇವೆ. ಇದು ದೇಶದ ಜಿಡಿಪಿ ಮೇಲೆ ಧನಾತ್ಮಕ ಪರಿಣಾಮ ಬೀರ
ಲಿದೆ. – ನಿರ್ಮಲಾ ಸೀತಾರಾಮನ್, ಕೇಂದ್ರ ವಿತ್ತ ಸಚಿವೆ
ಅಂತರ ರಾಜ್ಯ
ECI-ಮುಖ್ಯ ಚುನಾವಣ ಆಯುಕ್ತ ವಿರುದ್ಧ ದೇಶಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ‘ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಅಭಿಯಾನ’…! 20 ರಾಜ್ಯಗಳಲ್ಲಿ ಕೈಬಿಟ್ಟ 13 ಕೋಟಿ ಮತದಾರರ ಮರುಸೇರ್ಪಡೆಗೆ ಆಯೋಗ ಅವಕಾಶ
ಮುಖ್ಯ ಚುನಾವಣ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೇಶಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ನಾಗರಿಕರನ್ನು ಮರುಸೇರ್ಪಡೆ ಮಾಡಲು, ಭಾರತೀಯ ಚುನಾವಣಾ ಆಯೋಗವು (ECI) ದೇಶಾದ್ಯಂತ ಸಮಗ್ರ ಪರಿಶೀಲನಾ ಅಭಿಯಾನಕ್ಕೆ ಆದೇಶಿಸಿದೆ.
ಹೊಸದಿಲ್ಲಿ: ಮುಖ್ಯ ಚುನಾವಣ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೇಶಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ನಾಗರಿಕರನ್ನು ಮರುಸೇರ್ಪಡೆ ಮಾಡಲು, ಭಾರತೀಯ ಚುನಾವಣಾ ಆಯೋಗವು (ECI) ದೇಶಾದ್ಯಂತ ಸಮಗ್ರ ಪರಿಶೀಲನಾ ಅಭಿಯಾನಕ್ಕೆ ಆದೇಶಿಸಿದೆ.
ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರಡು ಪಟ್ಟಿಯಿಂದ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ಭಾರಿ ರಾಜಕೀಯ ವಿವಾದ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಈ ತಿದ್ದುಪಡಿ ಕ್ರಮ ಕೈಗೊಳ್ಳಲಾಗಿದೆ.
ನಿನ್ನೆ (ಅ.1-ಗುರುವಾರ) ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯ ಬಳಿಕ, ಚುನಾವಣಾ ಆಯೋಗವು ಈ ಸ್ಪಷ್ಟ ನಿರ್ದೇಶನ ನೀಡಿದೆ. ಮತದಾರರ ನೋಂದಣಿಯು ನಿರಂತರ ಪ್ರಕ್ರಿಯೆಯಾಗಿದ್ದು, ಎಸ್‌ಐಆರ್ ಅವಧಿಯಲ್ಲಿ ನೋಂದಣಿಯಾಗದ ಕಾರಣಕ್ಕೆ ಯಾವುದೇ ಅರ್ಹ ನಾಗರಿಕನಿಗೆ ಹಕ್ಕು ನಿರಾಕರಿಸಬಾರದು ಎಂದು ಆಯೋಗವು ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಿ ಅಧಿಕಾರಿಗಳಿಗೆ (ERO) ಸೂಚಿಸಿದೆ. ಎಸ್‌ಐಆರ್ ಅಕ್ರಮ ವಿರೋಧಿಸಿ ಸಿಎಂ ಡಿಕೆ ಶಿವಕುಮಾರ್ ಪ್ರತಿಭಟನೆ ನಡೆಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
ಮನೆ-ಮನೆ ಪರಿಶೀಲನೆ ಮತ್ತು ಮರುನೋಂದಣಿ ಪ್ರಕ್ರಿಯೆ:
ಈ ವಿಶೇಷ ಅಭಿಯಾನದಡಿ ಬೂತ್ ಮಟ್ಟದ ಅಧಿಕಾರಿಗಳು (BLO) ಹಾಲಿ ಮತದಾರರ ಪಟ್ಟಿಯನ್ನು ಎಸ್‌ಐಆರ್ ಪೂರ್ವ ಪಟ್ಟಿಯೊಂದಿಗೆ ಹೋಲಿಸಿ, ಹೆಸರು ಕಾಣೆಯಾಗಿರುವ ಮತದಾರರ ಬೂತ್‌ವಾರು ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಮತದಾರರ ಪ್ರಸ್ತುತ ಸ್ಥಿತಿಗತಿಯನ್ನು ಪರಿಶೀಲಿಸಲಿದ್ದಾರೆ. ಪ್ರತಿ ಅಧಿಕಾರಿಗೆ ವಾರಕ್ಕೆ ಕನಿಷ್ಠ 20 ರಿಂದ 25 ಮತದಾರರ ಮನೆಗಳಿಗೆ ಭೇಟಿ ನೀಡಿ, ಸುಮಾರು ಒಂದು ತಿಂಗಳೊಳಗೆ ಈ ಕಾರ್ಯ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.
ಅರ್ಹತೆ ಹೊಂದಿರುವ ಮತದಾರರಿಂದ ನಮೂನೆ-6ಪಡೆದು, ಮರುನೋಂದಣಿಗೆ ಅಧಿಕಾರಿಗಳು ನೆರವಾಗಲಿದ್ದಾರೆ. ಪರಿಶೀಲನೆ ವೇಳೆ ಮೊದಲ ಬಾರಿಗೆ ಮತ ಚಲಾಯಿಸಲಿರುವವರು, ಯುವ ಮತದಾರರು ಹಾಗೂ ಅಂಚಿನಲ್ಲಿರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ನೋಂದಣಿ ಮಾಡಿಕೊಳ್ಳಲಾಗುತ್ತದೆ.
ಅಂಚಿನ ಸಮುದಾಯಗಳಿಗೆ ಆದ್ಯತೆ:
ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಬಿಎಲ್‌ಒಗಳು ಸಿದ್ಧಪಡಿಸಿದ ಪಟ್ಟಿಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಸ್ವೀಕೃತವಾದ ಅರ್ಜಿಗಳನ್ನು ಜನಪ್ರತಿನಿಧಿ ಕಾಯ್ದೆ-1950 ಹಾಗೂ ಮತದಾರರ ನೋಂದಣಿ ನಿಯಮಗಳು-1960ರ ಅಡಿಯಲ್ಲಿ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಇದರ ಜೊತೆಗೆ, ರಾತ್ರಿ ಆಶ್ರಯ ಕೇಂದ್ರಗಳು, ಕಾರ್ಮಿಕರ ವಸತಿ ಪ್ರದೇಶಗಳು ಹಾಗೂ ನಿರಾಶ್ರಿತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ವಿಶೇಷ ನೋಂದಣಿ ಶಿಬಿರಗಳನ್ನು ಆಯೋಜಿಸಲು ಸೂಚಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ‘ಸ್ವೀಪ್’ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ನಿರಂತರವಾಗಿ ಸಾಗಲಿದೆ.
ವಿವಾದ ಮತ್ತು ರಾಜಕೀಯ ಸಂಘರ್ಷ:
ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಅರ್ಹ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದವು. ಅಂಕಿ-ಅಂಶಗಳ ಪ್ರಕಾರ, ಎಸ್‌ಐಆರ್ ಬಳಿಕ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಒಟ್ಟಾರೆ ಶೇ.10.2ರಷ್ಟು ಕಡಿತ ಕಂಡುಬಂದಿದ್ದು, ಇದರಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಮೃತ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಚುನಾವಣಾ ಆಯೋಗದ ಆಂತರಿಕ ನಿರ್ಧಾರಗಳ ಕುರಿತು ಭಿನ್ನಾಭಿಪ್ರಾಯ ಎಂಬ ವರದಿಗಳು ಹರಿದಾಡಿದ್ದರೂ, ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಪ್ರಸ್ತುತ ಆರಂಭವಾಗಿರುವ ಈ ವಿಶೇಷ ಅಭಿಯಾನವು ಪಟ್ಟಿಯಿಂದ ಹೊರಬಿದ್ದ ಅರ್ಹ ಮತದಾರರಿಗೆ ತಮ್ಮ ಸಾಂವಿಧಾನಿಕ ಹಕ್ಕನ್ನು ಮರಳಿ ಪಡೆಯಲು ಮಹತ್ವದ ಅವಕಾಶ ಕಲ್ಪಿಸಿದೆ.
ಅಂತರ ರಾಜ್ಯ
Jantar Mantar-ಜಂತರ್ ಮಂತರ್ ಪ್ರತಿಭಟನೆ: 500ಕ್ಕೂ ಹೆಚ್ಚು ಪ್ರತಿಭಟನಾಕಾರರು ವಶ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲು ಮುಂದಾದ ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕರು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ 500ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲು ಮುಂದಾದ ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕರು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ 500ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಲು ಜಂತರ್ ಮಂತರ್‌ನತ್ತ ತೆರಳುತ್ತಿದ್ದ ಎಎಪಿ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್, ಸಂಜೀವ್ ಝಾ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಸೌರಭ್ ಭಾರದ್ವಾಜ್, ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ತಮ್ಮನ್ನು ಪೊಲೀಸರು ತಡೆದಿರುವುದು ಅಪ್ರಜಾಸತ್ತಾತ್ಮಕ ಕ್ರಮ ಎಂದು ಆರೋಪಿಸಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಖಂಡಿಸಿ ಎಎಪಿ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA), ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (SFI) ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಜಂಟಿಯಾಗಿ ಪ್ರತಿಭಟನೆಗೆ ಕರೆ ನೀಡಿದ್ದವು.
ಅಶೋಕ ರಸ್ತೆಯ ಮೂಲಕ ಜಂತರ್ ಮಂತರ್‌ಗೆ ತೆರಳಲು ಯತ್ನಿಸಿದ ಎಸ್‌ಎಫ್‌ಐನ ಸುಮಾರು 700ಕ್ಕೂ ಹೆಚ್ಚು ಸದಸ್ಯರನ್ನು ಪೊಲೀಸರು ಮಾರ್ಗಮಧ್ಯೆಯೇ ತಡೆದಿದ್ದಾರೆ. ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಐಶೆ ಘೋಷ್ ಸೇರಿದಂತೆ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಫಿರೋಜ್ ಶಾ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ದಾಟಿ ಮುನ್ನುಗ್ಗಲು ಯತ್ನಿಸಿದ ಎನ್‌ಎಸ್‌ಯುಐ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆಗೆ ಯಾವುದೇ ಪೂರ್ವಾನುಮತಿ ಪಡೆಯಲಾಗಿರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ಪ್ರತಿಭಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿತ್ತು.
ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (DMRC) ದೆಹಲಿ ವ್ಯಾಪ್ತಿಯ 11 ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಂದಿನ ಆದೇಶದವರೆಗೆ ಮುಚ್ಚಿದೆ.
ಅಂತರ ರಾಜ್ಯ
Jantar Mantar-ಪ್ರತಿಭಟನೆಯ ಹಿನ್ನೆಲೆ ಜಂತರ್ ಮಂತರ್‌ನಲ್ಲಿ ಇಂಟರ್‌ನೆಟ್ ಸ್ಥಗಿತ: ‘ಸರ್ವಾಧಿಕಾರಿ ನಿಜಕ್ಕೂ ಭಯಭೀತಗೊಂಡಿದ್ದಾರೆ’-ದೀಪ್ಕೆ
ದೆಹಲಿ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ‘ಸರ್ವಾಧಿಕಾರಿ ನಿಜಕ್ಕೂ ಭಯಭೀತಗೊಂಡಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.
ನವದೆಹಲಿ: ದೆಹಲಿ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ‘ಸರ್ವಾಧಿಕಾರಿ ನಿಜಕ್ಕೂ ಭಯಭೀತಗೊಂಡಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.
ದೆಹಲಿಯ 12 ಮೆಟ್ರೊ ನಿಲ್ದಾಣಗಳಲ್ಲಿ ಪ್ರವೇಶ ನಿರ್ಬಂಧ:
ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ವಿದ್ಯಾರ್ಥಿ ಸಂಘಟನೆಗಳು ಜಂತರ್ ಮಂತರ್‌ನಲ್ಲಿ ಶುಕ್ರವಾರ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಸೇರಿದಂತೆ ದೆಹಲಿಯ ಪ್ರಮುಖ 12 ಮೆಟ್ರೊ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ತಾತ್ಕಾಲಿಕವಾಗಿ ಮುಚ್ಚಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮುಂದಿನ ಆದೇಶದವರೆಗೆ ಜನಪಥ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ರಾಜೀವ್ ಚೌಕ್, ಬಾರಾಖಂಬಾ, ಸೇವಾ ತೀರ್ಥ, ಮಂಡಿ ಹೌಸ್, ಲೋಕ ಕಲ್ಯಾಣ ಮಾರ್ಗ, ಐಎನ್‌ಎ, ಚಾವಿ ಬಜಾರ್, ರಾಮಕೃಷ್ಣ ಆಶ್ರಮ ಮಾರ್ಗ ಹಾಗೂ ನವದೆಹಲಿ ಮೆಟ್ರೊ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿದೆ ಎಂದು ಡಿಎಂಆರ್‌ಸಿ ‘ಎಕ್ಸ್’ನಲ್ಲಿ ತಿಳಿಸಿದೆ.
ಎಎಪಿ ಜತೆಗೆ ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ), ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಮತ್ತೊಂದೆಡೆ ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.


















