ಕಾರ್ಯಕ್ರಮಗಳು
Puttur-ಪುತ್ತೂರು: (ಜು.24) ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ-ಸನ್ಮಾನ
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಜು.24ರಂದು ನಡೆಯಲಿದೆ.
ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಜು.24ರಂದು ನಡೆಯಲಿದೆ.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ಸಂಜೆ 4 ಗಂಟೆಗೆ ಕೆಯ್ಯೂರು ದೇರ್ಲದಲ್ಲಿರುವ ಡಾ. ನರೇಂದ್ರ ರೈ ದೇರ್ಲ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಪುತ್ತೂರಿನ ರೋಯಲ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕಾಧ್ಯಕ್ಷರಾದ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ ಸನ್ಮಾನ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜರ್ನಲಿಸ್ಟ್ ಯೂನಿಯನ್ ಸದಸ್ಯರಿಗೆ ಎಸ್‌ಎಲ್‌ವಿ ಬುಕ್‌ಹೌಸ್ ವತಿಯಿಂದ ಲ್ಯಾಪ್‌ಟಾಪ್ ಬ್ಯಾಗ್ ವಿತರಣೆ ನಡೆಯಲಿದೆ. ಜರ್ನಲಿಸ್ಟ್ ಯೂನಿಯನ್ ತಾಲೂಕು ಘಟಕದ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ, ಉಪಾಧ್ಯಕ್ಷರಾದ ಚೈತ್ರ ಬಂಗೇರ, ಸುಮಿತ್ರಾ ಬಿ., ಕಾರ್ಯದರ್ಶಿ ಕವಿತಾ ಮಾಣಿ, ಜತೆ ಕಾರ್ಯದರ್ಶಿ ಚಿನ್ಮಯಕೃಷ್ಣ ಮತ್ತು ಕೋಶಾಧಿಕಾರಿ ಪ್ರಜ್ವಲ್ ಕೋಟ್ಯಾನ್ ತಿಳಿಸಿದ್ದಾರೆ.

ಡಾ. ದೇರ್ಲರವರಿಗೆ ಜರ್ನಲಿಸ್ಟ್ ಯೂನಿಯನ್‌ನಿಂದ ವಿಶೇಷ ಗೌರವ-ರಾಮದಾಸ್ ಶೆಟ್ಟಿ:
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಪರಿಸರಾಸಕ್ತರು, ಅಂಕಣಕಾರರು ಮತ್ತು ಕೃಷಿಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರನ್ನು ಅವರ ಮನೆಯಲ್ಲಿಯೇ ಸನ್ಮಾನಿಸಿ ಗೌರವಿಸುವ ಮೂಲಕ ವಿಶೇಷ ಗೌರವ ನೀಡಲಾಗುತ್ತಿದೆ ಎಂದು ಯೂನಿಯನ್ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ತಿಳಿಸಿದ್ದಾರೆ. ತರಂಗ ವಾರಪತ್ರಿಕೆಯಲ್ಲಿ ಏಳು ವರ್ಷಗಳ ಕಾಲ ಸಹಸಂಪಾದಕ ಹುದ್ದೆ ಅಲಂಕರಿಸಿದ್ದಲ್ಲದೆ ಉನ್ನತ ಶಿಕ್ಷಣ ಇಲಾಖೆಯ ರಾಜ್ಯದ ವಿವಿಧ ಸರಕಾರಿ ಪದವಿ ಕಾಲೇಜುಗಳಲ್ಲಿ 28 ವರ್ಷಗಳ ಸೇವೆ ಸಲ್ಲಿಸಿರುವ ಡಾ. ದೇರ್ಲ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಬೇಟೆ ಪರಿಕಲ್ಪನೆ ಮತ್ತು ಧೋರಣೆಗಳು ಎಂಬ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡಿದವರು. ಸಾಹಿತ್ಯ, ಪತ್ರಿಕೋದ್ಯಮ, ಪರಿಸರ, ಕೃಷಿ, ಜಾನಪದ, ಗ್ರಾಮ ಅಧ್ಯಯನ ಇತ್ಯಾದಿಗಳಲ್ಲಿ ಆಸಕ್ತಿ ಹೊಂದಿರುವ ಡಾ. ನರೇಂದ್ರ ರೈ ಅವರಿಗೆ ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಅನುವಾದ ಪ್ರಶಸ್ತಿ, ಪ.ಗೋ.ಪತ್ರಿಕೋದ್ಯಮ ಪ್ರಶಸ್ತಿ, ಅಕ್ಷರ ಪ್ರತಿಷ್ಠಾನ ಪ್ರಶಸ್ತಿ, ಎರಡು ಬಾರಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ, ಡಾ. ಹಾ.ಮಾ ನಾಯಕ ಅಂಕಣ ಪ್ರಶಸ್ತಿ ಒಲಿದಿದೆ. ಪ್ರಜಾವಾಣಿಯ ಅಜ್ಜನ ಜಗಲಿ, ವಿಜಯವಾಣಿ ಹಸಿರು ಉಸಿರು, ವಾರ್ತಾಭಾರತಿಯ ತನ್ಮಯ, ವಾರೆ ಕೋರೆ-ಮಣ್ಣು ಮಸಿ ಇವರ ಗಮನ ಸೆಳೆದ ಕೃತಿಗಳಾಗಿದೆ. ಕರಾವಳಿ ಕರ್ನಾಟಕದ ಕೃಷಿ ಪಲ್ಲಟ ಮತ್ತು ಪರಿಣಾಮ ಎಂಬ ಸಂಶೋಧನೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಂಶೋಧನಾ ಫೆಲೋಶಿಪ್ ಪಡೆದಿರುವ ಡಾ. ದೇರ್ಲ ಅವರ 1200ಕ್ಕಿಂತ ಹೆಚ್ಚು ನುಡಿ ಚಿತ್ರಗಳು ರಾಜ್ಯದ ಬೇರೆ ಬೇರೆ ನಿಯತಕಾಲಿಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇವರು ಬರೆದಿರುವ ಸುಮಾರು 18 ಕೃಷಿ ಪರಿಸರ ಪರ ಲೇಖನಗಳು ಕರ್ನಾಟಕ ಮತ್ತು ಕೇರಳದ ಪ್ರೌಢ ಮತ್ತು ಪದವಿ ಪಠ್ಯಗಳಲ್ಲಿ ಪಾಠಗಳಾಗಿ ಸೇರಿವೆ. ಕರ್ನಾಟಕದ ಪಿಯು ಪಠ್ಯ, ಕರ್ನಾಟಕದ ಮಂಗಳೂರು, ಬೆಂಗಳೂರು, ಧಾರವಾಡ ವಿಶ್ವವಿದ್ಯಾನಿಲಯಗಳ ಪದವಿ ಪಠ್ಯಗಳಲ್ಲಿ ಇವರ ಲೇಖನಗಳು ಪಠ್ಯಗಳಾಗಿವೆ.
ಹಂಪಿ ವಿಶ್ವವಿದ್ಯಾನಿಲಯದ ಪಿಎಚ್‌ಡಿ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸುತ್ತಿರುವ ನರೇಂದ್ರ ರೈ ಅವರು ರಾಜ್ಯದ ಬೇರೆ ಬೇರೆ ಕಾಲೇಜುಗಳ ಪಠ್ಯ ರಚನಾ ಸಮಿತಿಯಲ್ಲೂ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಈವರೆಗೆ ಸುಮಾರು 40ಕ್ಕಿಂತ ಹೆಚ್ಚು ಕೃತಿಗಳನ್ನು ಬರೆದು ಸಂಪಾದಿಸಿರುವ ದೇರ್ಲ ಅವರ ತೇಜಸ್ವಿ ಪತ್ರಗಳು ಬಹಳ ಜನಪ್ರಿಯವಾದ ಸಂಪಾದನಾ ಕೃತಿಯಾಗಿದೆ. ಕುವೆಂಪು, ಕಾರಂತ, ತೇಜಸ್ವಿ, ಅನಂತಮೂರ್ತಿ, ಲಂಕೇಶ್, ದೇವನೂರು, ಶಿವರುದ್ರಪ್ಪ ಮೊದಲಾದವರು ಪರಸ್ಪರ ಬರೆದುಕೊಂಡ ಸುಮಾರು 700 ಪತ್ರಗಳು ಈ ಕೃತಿಯಲ್ಲಿ ಸಂಪಾದನೆಗೊಂಡು ಇದು ಒಂದು ಕಾಲದ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯೂ ಆಗಿದೆ. ಕರ್ನಾಟಕ ಕೃಷಿ ಕಥನ ಮಾಲಿಕೆ ದೇರ್ಲ ಅವರ ಒಂದು ವಿಶಿಷ್ಟ ಅಧ್ಯಯನ ದಾಖಲಾತಿಯಾಗಿದ್ದು ಈ ದೇಶದಲ್ಲಿ ಮುತ್ಸದ್ಧಿಗಳ, ರಾಜಕಾರಣಿಗಳ, ಸಮಾಜ ಸುಧಾರಕರ ಸಾಹಿತಿಗಳ, ವಿಜ್ಞಾನಿಗಳ ಆತ್ಮ ಚರಿತ್ರೆಗಳು ಜೀವನ ಚರಿತ್ರೆಗಳು ಯಥೇಚ್ಛವಾಗಿ ಪ್ರಕಟವಾಗುತ್ತವೆ. ಆದರೆ ಎಲ್ಲರ ಹೊಟ್ಟೆ ತುಂಬಿಸುವ ರೈತರ ಸಾಧನೆಯನ್ನು ಯಶೋಗಾಥೆಯನ್ನು ದಾಖಲಿಸುವ ದೃಷ್ಟಿಯಲ್ಲಿ ಈಗಾಗಲೇ ಈ ರಾಜ್ಯದ ಆರು ಜನ ಅನಾಮಿಕ ರೈತರನ್ನು ಪುಸ್ತಕ ರೂಪದಲ್ಲಿ ‘ಕರ್ನಾಟಕ ಕೃಷಿ ಕಥನ ಮಾಲಿಕೆ’ ಎಂಬ ಸರಣಿಯಲ್ಲಿ ನರೇಂದ್ರ ರೈ ಅವರು ಅವರು ದಾಖಲಿಸಿದ್ದಾರೆ. ಈ ಸರಣಿ ಮತ್ತಷ್ಟು ರೈತರ ಜೀವನ ಚರಿತ್ರೆಯನ್ನು ದಾಖಲಿಸಲಿದೆ.
ಈ ಭೂಮಿ ನಮ್ಮದಲ್ಲ ಮುಂದೆ ಹುಟ್ಟಬೇಕಾದ ಮಕ್ಕಳದ್ದು ಎಂಬ ಇರಾದೆಯಿಂದ ನೀರು ಗಾಳಿ ಮಣ್ಣು ಹಾಳಾಗುವ ದಿನಮಾನದಲ್ಲಿ ರೈ ಅವರು ಹೆಚ್ಚು ಬರೆಯುತ್ತಿರುವುದು ಪರಿಸರದ ಬಗ್ಗೆ. ಅವರ 40 ಕೃತಿಗಳ ಪೈಕಿ ಸುಮಾರು 18 ಕೃತಿಗಳು ಪರಿಸರ ಸಂಬಂಧಿಸಿದ ಕೃತಿಗಳೇ ಆಗಿವೆ. ‘ದಿ ಹಿಂದು’ ರಾಷ್ಟ್ರೀಯ ದೈನಿಕ ಪ್ರಕಟಿಸುವ ವಾರ್ಷಿಕ ಕೃಷಿ ವಿಶೇಷಾಂಕದಲ್ಲಿ ‘ಕರ್ನಾಟಕದ ಕೃಷಿ ಸಾಧನೆ ಸಾಧ್ಯತೆ’ ಎನ್ನುವ ವಿಶೇಷ ಲೇಖನ ಪ್ರಕಟವಾಗಿದೆ.
ತರಂಗದಲ್ಲಿ ಇವರು ಸಹಸಂಪಾದಕರಾಗಿದ್ದಾಗ ಕನ್ನಡದ ಸಾಹಿತ್ಯ ದಿಗ್ಗಜರಾದ ತೇಜಸ್ವಿ, ಪುತಿನ, ಕೆಎಸ್ ನರಸಿಂಹಸ್ವಾಮಿ, ಎಸ್‌ಎಲ್ ಭೈರಪ್ಪ, ಚದುರಂಗ ಚೆನ್ನವೀರ ಕಣವಿ, ವೈಎನ್ಕೆ, ಕೈಯಾರ ಮೊದಲಾದವರ ವಿಶೇಷ ಸಂದರ್ಶನವನ್ನು ನಡೆಸಿದ್ದರು. ಇವರ ಕೃತಿಗಳಲ್ಲಿ ನೆಲದವರು, ಕೃಷಿ-ದೇಸೀ ಚಿಂತನೆ, ಹಸಿರು-ಉಸಿರು (ಅತ್ಯುತ್ತಮ ಕೃಷಿ ಪುಸ್ತಕ-ಬೆಂಗಳೂರು ಕೃಷಿ ವಿವಿ ಪ್ರಶಸ್ತಿ)., ನೆಲಮುಖಿ (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ. ಹಾ.ಮಾ. ನಾಯಕ ಅಂಕಣ ಪ್ರಶಸ್ತಿ ಪಡೆದ ಕೃತಿ) ಬೀಜಧ್ಯಾನ, ಹಳ್ಳಿಯ ಆತ್ಮಕಥೆ, ಬೇರು-ಬದುಕು (ಅತ್ಯುತ್ತಮ ಕೃಷಿ ಪುಸ್ತಕ ಬೆಂಗಳೂರು ಕೃಷಿ ವಿವಿ ಪ್ರಶಸ್ತಿ), ಕೊರೋನಾ ನಂತರದ ಗ್ರಾಮ ಭಾರತ, ಕಾಂಕ್ರೀಟ್ ಕಾಡಿನ ಪುಟ್ಟ ಕಿಟಕಿ, ಬೊಗಸೆ ತುಂಬಾ ಬೀಜ, ಸಾವಯವ ಕೃಷಿ (8ನೇ ಮುದ್ರಣ), ಹಸಿರು ಕೃಷಿಯ ನಿಟ್ಟುಸಿರುಗಳು (2ನೇ ಮುದ್ರಣ) ನಂದನವನ ಚೌಟರ ತೋಟ ಹಣ್ಣುಗಳ ಆಗರ-ಸಸ್ಯಕಾಶಿ ಸೋನ್ಸ್‌ಫಾರ್ಮ್, ಮನಮೋಹನ-ಜೇನೇ ಜೀವನ, ಬಿ.ಕೆ. ದೇವರಾವ್-ಅನ್ನದಾರಿಯ ಅನಂತ ಹೆಜ್ಜೆ, ಬದನಾಜೆ ಶಂಕರ ಭಟ್-ಅಡಿಕೆ ಮೌಲ್ಯವರ್ಧನೆಯ ನೆಲವಿಜ್ಞಾನಿ, ಎಂಟು ಲೋಕ, ವಿಶುಕುಮಾರ್ ಬದುಕು ಬರಹ, ಹೊನ್ನಯ್ಯ ಶೆಟ್ಟಿ ಬದುಕು ಬರಹ ಡಾ. ಮೋಹನ ಆಳ್ವ, ಬದುಕು ಬರಹ ತೇಜಸ್ವಿಯೊಳಗೊಬ್ಬ ಕಲಾವಿದ, ಕೃಷಿಕ ಕವಿ, ಮೇಧಾವಿ ಕಯ್ಯಾರ ಕಿಂಞ್ಞಣ್ಣ ರೈ, ಬೇಟೆಗಾರನ ಹುಲಿಹೆಜ್ಜೆ ಕೆದಂಬಾಡಿ ಬದುಕು ಬರಹ ತೊದಲು, ಬೆಳ್ಳಿ ಗುರುತು, ಇದೂ ಪತ್ರಿಕೋದ್ಯಮ, ಕನ್ನಡದಲ್ಲಿ ಬೇಟೆ ಸಾಹಿತ್ಯ, ಕರ್ವಾಲೊ (ತುಳು ಅನುವಾದ) (ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಾಶನ)-ಕುವೆಂಪು ಭಾಷಾಭಾರತಿ ಪ್ರಶಸ್ತಿ ಪಡೆದ ಕೃತಿ, ಕರಾವಳಿ ಕನ್ನಡದ ಪತ್ರ ಸಾಹಿತ್ಯ, ಪೂರ್ಣಚಂದ್ರ ತೇಜಸ್ವಿ ನಮ್ಮೆಲ್ಲರ ತೇಜಸ್ವಿ, ಹಸಿರು ಅಧ್ಯಾತ್ಮ ಪ್ರಮುಖವಾಗಿದೆ. ಲಂಕೇಶ್ ನೆನಪು, ನೆಲೆ, ಶ್ರೀದುರ್ಗಾ, ಪಂಚದುರ್ಗಾ, ಮಂಟಮೆ, ರಥಲೋಕ, ಸಿರಿ ಹೆಜ್ಜೆ, ಅಮೃತಬಿಂದು-ಶಾಶ್ವತಿ, ಬಾಳ್ವೆಯೇ ಬೆಳಕು. ಅಜಾತಶತ್ರು ಪಾಲ್ತಾಡಿ ನೆನಪು ಇವುಗಳು ಡಾ. ದೇರ್ಲ ಅವರ ಸಂಪಾದನೆಗಳಾಗಿದೆ. ಇಂತಹ ಸಾಧಕರನ್ನು ಗೌರವಿಸಲು ಜರ್ನಲಿಸ್ಟ್ ಯೂನಿಯನ್ ಸಂತಸ ಪಡುತ್ತದೆ ಎಂದು ರಾಮದಾಸ್ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು
Mangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ
ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು: ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಬೆಳೆ ವಿಮೆ ಯೋಜನೆಯಡಿ ರೈತರಿಗೆ ಸೂಕ್ತ ಪರಿಹಾರ ದೊರೆಯದಿರುವುದು ಸೇರಿದಂತೆ ವಿಮೆ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಭೆಯಲ್ಲಿ ಧ್ವನಿ ಎತ್ತಲಾಗುತ್ತದೆ.
ಬೆಳೆ ವಿಮೆ ಯೋಜನೆಯಡಿ ರೈತರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು ಹಾಗೂ ವಿಮೆ ಪಾವತಿಯಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು ಸೇರಿದಂತೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಳೆ ವಿಮೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹಕ್ಕೊತ್ತಾಯ ಮಂಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಸ್ಥಳೀಯ
Dharmasthala-ಅ. 11 ರಿಂದ 19 : ಧರ್ಮಸ್ಥಳದಲ್ಲಿ ನವರಾತ್ರಿ ವೈಭವ
ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಇದೇ 11 ರಿಂದ 19 ರ ವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಇದೇ 11 ರಿಂದ 19 ರ ವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ದೇವಸ್ಥಾನದ ಎದುರು ಇರುವ ಪ್ರವಚನಮಂಟಪದಲ್ಲಿ ಸಂಜೆ ಆರು ಗಂಟೆಯಿಂದ ಒಂಭತ್ತು ಗಂಟೆ ವರೆಗೆ ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ. 11: ಭಾನುವಾರ: ಕುಮಾರಿ ಪ್ರಾಪ್ತಿ ಶೆಟ್ಟಿ, ಧರ್ಮಸ್ಥಳ ಮತ್ತು ಕುಮಾರಿ ಆದ್ವಿ, ನಿಡಿಗಲ್ (ಭಕ್ತಿಸಂಗೀತ), ಅ. 12: ಸೋಮವಾರ: ಪವಿತ್ರವಿನಯ್ ಮಯ್ಯ ಅರ್ಕುಳ, ಮಂಗಳೂರು (ಸುಗಮ ಸಂಗೀತ), ಅ. 13: ಮಂಗಳವಾರ: ಕುಮಾರಿ ಮಾನ್ಸಿ, ಮೈಸೂರು (ಭಕ್ತಿಸಂಗೀತ), ಅ. 14: ಬುಧವಾರ: ಮಾಸ್ಟರ್ ಆಗಮ, ಪೆರ್ಲ, ಮಂಗಳೂರು (ಕರ್ನಾಟಕ ಶಾಸ್ತ್ರೀಯ ಸಂಗೀತ), ಅ. 15: ಗುರುವಾರ: ಕುಮಾರಿ ಧೃತಿ ಬಿ. ಆತ್ರೇಯಾಸ್, ಕುಮಾರಿ ಧನ್ವಿ ಬಿ. ಆತ್ರೇಯಾಸ್ ಮತ್ತು ಮಾಸ್ಟರ್ ಅಸ್ರಮೇಯ ಗುರುಪ್ರಸಾದ್, ಬೆಂಗಳೂರು (ನೃತ್ಯ, ಗಾನಲಹರಿ), ಅ. 16: ಶುಕ್ರವಾರ: ಸನತ್‌ಕುಮಾರ್, ಬೆಂಗಳೂರು (ವಯಲಿನ್ ವಾದನ), ಅ. 17: ಶನಿವಾರ: ಕುಮಾರಿ ಮಯೂರಿ ಭಟ್ ಪೊಳಲಿ, ಬಂಟ್ವಾಳ (ಕರ್ನಾಟಕ ಶಾಸ್ತ್ರೀಯ ಸಂಗೀತ), ಅ. 18: ಆದಿತ್ಯವಾರ: ಕುಮಾರಿ ಐಶ್ವರ್ಯ ಜೋಗಿ ಮತ್ತು ತಂಡ, ಕುಂದಾಪುರ (ಸುಮಧುರ ಗಾನವೈಭವ), ಅ. 19: ಸೋಮವಾರ: ಕುಮಾರಿ ಅರ್ಚಿಷಾ ರಾವ್ ಮತ್ತು ಬಳಗ, ಬೆಂಗಳೂರು (ಸಂಜೆ ಗಂಟೆ 6.30 ರಿಂದ 8.30). ಮಲ್ಲಿಕಾಮಟ್ಟಿ ಮತ್ತು ಬಳಗ, ಪೊಳಲಿ (ರಾತ್ರಿ ಗಂಟೆ 9 ರಿಂದ 11.30) ಭಕ್ತಿ ಸಂಗೀತ.
ಸ್ಥಳೀಯ
Excel-ಎಕ್ಸೆಲ್ ಗುರು ನಮನ 2026: ಸಾಮರಸ್ಯವೇ ಸಮಾಜದ ಉನ್ನತಿಗೆ ತಳಪಾಯ: ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
ಎಕ್ಸೆಲ್ ಗುರುವಾಯನ ಕೆರೆಯಲ್ಲಿ ನಡೆದ ಗುರು ನಮನ 2026 ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾತನಾಡಿದರು.
ಗುರುವಾಯನಕೆರೆ, ಅ.4 : “ಸಮಾಜದಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ. ಪ್ರತಿಯೊಂದು ವರ್ಗ, ಸಮುದಾಯಕ್ಕೂ ಈ ಸಮಾಜ ಆಶ್ರಯ ನೀಡಿದೆ. ಪ್ರತಿಯೊಬ್ಬರ ನಂಬಿಕೆ ಆಚರಣೆಗಳು ಬೇರೆ ಬೇರೆಯಾಗಿರುತ್ತವೆ. ಅವರವರ ನಂಬಿಕೆ ಮತ್ತು ಆಚರಣೆಗಳನ್ನು ತಿರಸ್ಕರಿಸಿದಾಗ ಸಮಾಜದಲ್ಲಿ ಘರ್ಷಣೆಗಳು ಏರ್ಪಡುತ್ತವೆ. ಪ್ರತಿಯೊಬ್ಬರನ್ನೂ ಸಾಮರಸ್ಯದಿಂದ ನೋಡುವ ಗುಣ ನಮ್ಮದಾಗಬೇಕು. ಸಾಮರಸ್ಯವೇ ಸಮಾಜದ ಉನ್ನತಿಗೆ ಅಡಿಪಾಯವಿದ್ದಂತೆ” ಎಂದು ಎಕ್ಸೆಲ್ ಗುರುವಾಯನ ಕೆರೆಯಲ್ಲಿ ನಡೆದ ಗುರು ನಮನ 2026 ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.
ಸ್ವಾಮೀಜಿಯವರು ಮಾತನಾಡುತ್ತಾ ಎಕ್ಸೆಲ್ ವಿದ್ಯಾಸಂಸ್ಥೆಯು ಸುಂದರ ಪರಿಸರದಲ್ಲಿ ನಿರ್ಮಾಣಗೊಂಡಿದೆ. ಈ ವಿದ್ಯಾಸಂಸ್ಥೆಯಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಗೊಳ್ಳುತ್ತದೆ. ವಿದ್ಯಾರ್ಥಿಗಳು ಪರಸ್ಪರ ಗೌರವಿಸಿರಿ. ಈ ಸಮಾಜಕ್ಕೆ ಒಳ್ಳೆಯದನ್ನು ಬಯಸಿ. ನೀವು ಓದಿದ ವಿದ್ಯಾ ಸಂಸ್ಥೆಗೆ ಚಿರಋಣಿಯಾಗಿರಬೇಕೆಂದು, ಈ ಸಂಸ್ಥೆಯು ಸಾವಿರಾರು ಶಿಕ್ಷಕರನ್ನು ನಿರಂತರವಾಗಿ ಗೌರವಿಸುತ್ತಾ ಬಂದಿರುವುದು ನಿಜವಾಗಿಯೂ ಅತ್ಯುತ್ತಮ ಬೆಳವಣಿಗೆಯಾಗಿದೆ. ಇದು ಸುಮಂತ್ ಕುಮಾರ್ ಅವರ ಈ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ ಎಂದರು.
ಸುಬ್ರಮಣ್ಯದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ್ ನಾಯಕ್ ಇವರು ಮಾತನಾಡುತ್ತಾ ” ವಿದ್ಯಾರ್ಥಿಗಳು ಕಷ್ಟಕರ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಡಬೇಕು. ನೀವೆಲ್ಲ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವುದು ನಿಮ್ಮೆಲ್ಲರ ಅದೃಷ್ಟವೇ ಸರಿ. ಈ ಸಂಸ್ಥೆಯ ಅಧ್ಯಕ್ಷರಾದ ನುಮಂತ್ ಕುಮಾರ್ ಜೈನ್ ಇವರು ಉದಾರ ವ್ಯಕ್ತಿತ್ವದ ವ್ಯಕ್ತಿ. ಅವರ ಸೇವಾ ಮನೋಭಾವದಿಂದಲೇ ಈ ಶಿಕ್ಷಣ ಸಂಸ್ಥೆಯು ಎತ್ತರಕ್ಕೆ ಬೆಳೆಯುತ್ತಿದೆ. ಜಿಲ್ಲೆಯ ಯಾವುದೇ ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಸುಮಂತ್ ಅವರ ಕೊಡುಗೆ ಅಪಾರವಾದದ್ದು. ಈ ಸಂಸ್ಥೆಗೆ ನನ್ನನ್ನು ಆಹ್ವಾನಿಸಿ ಸನ್ಮಾನಿಸಿದ್ದೀರಿ. ನನ್ನಲ್ಲಿ ಕೃತಾರ್ಥತೆ ಭಾವ ಮೂಡುತ್ತಿದೆ. ಎಕ್ಸೆಲ್ ವಿದ್ಯಾಸಂಸ್ಥೆಗೆ ನಾನು ಚಿರಋಣಿ” ಎಂದು ಸಂತಸ ವ್ಯಕ್ತಪಡಿಸಿದರು.
ಮೂಲ್ಕಿಯ ವಿಜಯ ಕಾಲೇಜಿನ ವಿಶ್ರಾಂತ ಪಾಚಾರ್ಯರಾದ ಡಾ .ನಾರಾಯಣ ಪೂಜಾರಿ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಾದ ಸಂತೋಷ್ ಕುಮಾರ್ ಕಾಪಿನಡ್ಕ ಇವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಕೋರಿದರು.
ಎಕ್ಸೆಲ್ ವಿದ್ಯಾ ಸಂಸ್ಥೆಯ ಹಿತೈಷಿಗಳಾದ ರತ್ನರಾಜ್ ಜೈನ್ ಮತ್ತು ಪತ್ರಿಕೋದ್ಯಮಿಗಳಾದ ಸಂತೋಷ್ ಕೋಟ್ಯಾನ್ ಇವರು ಈ ಕಾರ್ಯಕ್ರಮದ ಭಾಗವಾಗಿ ಸನ್ಮಾನ ಸ್ವೀಕರಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡುತ್ತಾ “ನಮ್ಮ ಎಕ್ಸೆಲ್ ಸಂಸ್ಥೆಯ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಮಾಡುತ್ತಿದ್ದಾರೆ . ಇಲ್ಲಿ ಓದಿದ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳಾಗಿ ರೂಪಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುರುಗಳನ್ನು ಗೌರವಿಸುವ ಮೂಲಕ ನಮ್ಮಲ್ಲಿ ಧನ್ಯತಾಭಾವ ಮೂಡಿದೆ. ಶಿಕ್ಷಕರು ಜಗತ್ತಿನ ಪ್ರಥಮ ಪೂಜ್ಯರು . ಅಂತಹ ಶಿಕ್ಷಕರನ್ನು ಸನ್ಮಾನಿಸುವುದು ನಮ್ಮ ಸೌಭಾಗ್ಯ” ಎಂದು ಹೇಳಿದರು.
ಕಾಲೇಜಿನ ಬ್ರೋಚರ್ಸ್ ಅನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಗ್ರಾಮಗಳಲ್ಲಿ ಶಿಕ್ಷಕ ವೃತ್ತಿಯನ್ನು ಮಾಡುತ್ತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ 300 ಹೆಚ್ಚು ಶಿಕ್ಷಕರನ್ನು ಗೌರವಿಸಿದ್ದು ಅತ್ಯಂತ ವಿರಳ ಮತ್ತು ಸೃಜನಾತ್ಮಕ ಕಾರ್ಯಕ್ರಮವಾಗಿತ್ತು. ಎಲ್ಲ ಶಿಕ್ಷಕರಿಗೆ ಹಾರ , ಶಾಲು, ಪೇಟ ಮತ್ತು ಸ್ಮರಣಿಕೆ, ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಡಾ ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರಿನ ಮುಖ್ಯೋಪಾಧ್ಯಯರಾದ ಶಾಂತಿರಾಜ್ ಜೈನ್ ವಂದಿಸಿದರು.
ಉಪನ್ಯಾಸಕರಾದ ಪ್ರಸನ್ನ ಭೋಜ, ತಿಪ್ಪೇಸ್ವಾಮಿ, ಪ್ರಜ್ವಿತ್ ರೈ, ಅನನ್ಯ ಜೈನ್, ವೈಷ್ಣವಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿಗಳು ಪ್ರಾರ್ಥನೆ ಹಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಆರಂಭವನ್ನು ಒದಗಿಸಿದರು.
ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ, ಡಾ. ಪ್ರಜ್ವಲ್, ಉಪ ಪ್ರಾಚಾರ್ಯರಾದ ರೋಹಿತ್, ಹರೀಶ್ ಕುಮಾರ್ ಗುರುವಾಯನಕೆರೆ ಟೆಕ್ನೋ ಸ್ಕೂಲಿನ ಮುಖ್ಯ ಶಿಕ್ಷಕಿ ಸುಮಿತ್ರ, ವೇಣೂರು ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಿರಾಜ್ ಜೈನ್, ವಿದ್ಯಾರ್ಥಿಗಳು, ಪೋಷಕರು, ಬೋಧಕ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.
ಎಕ್ಸೆಲ್ ಸಿಬ್ಬಂದಿಯಿಂದ ಸಾಂಸ್ಕೃತಿಕ ವೈಭವ: ಗಿರಿಜಾ ಕಲ್ಯಾಣ ಹಾಗೂ ತಾರಕಾಸುರ ವಧೆ ಯಕ್ಷಗಾನ ಪ್ರದರ್ಶನ
ಗುರು ನಮನ ಕಾರ್ಯಕ್ರಮದ ಅಂಗವಾಗಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಎಕ್ಸೆಲ್ ಪಿಯು ಕಾಲೇಜಿನ ಸಿಬ್ಬಂದಿಯ ಜೊತೆಗೆ ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆ ಮತ್ತು ವೇಣೂರು ಶಾಲೆಗಳ ಸಿಬ್ಬಂದಿಯವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರು ವಿವಿಧ ನೃತ್ಯ,ಹಾಡು, ರೂಪಕ, ಭರತನಾಟ್ಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಸರ್ವರನ್ನು ರೋಮಾಂಚನಗೊಳಿಸಿದರು. ಗಿರಿಜಾ ಕಲ್ಯಾಣ ಮತ್ತು ತಾರಕಾಸುರ ವಧೆ ಎನ್ನುವ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು.
-
Uncategorized17 hours ago
Naana Paatekar No More : ವ್ಯವಸ್ಥೆಯ ವಿರುದ್ಧದ ಧ್ವನಿಗೆ ರೂಪ ನೀಡಿದ, ತನ್ನ ಡೈಲಾಗ್ ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಅಭಿಜಾತ ಕಲಾವಿದ ನಾನಾಪಾಟೇಕರ್ ಇನ್ನಿಲ್ಲ
-
ಬಿಗ್ ನ್ಯೂಸ್11 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಮಂಗಳೂರು14 hours agoMangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ
-
Uncategorized15 hours agoAshok Rai-ಬದ್ಯಾರ್ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
-
ನಿಧನ ವಾರ್ತೆ15 hours agoBeltangadi-ಬೆಳ್ತಂಗಡಿ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು
-
ಅಪರಾಧ16 hours agoUppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ
-
ನಿಧನ ವಾರ್ತೆ14 hours agoAccident-ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
-
ಬಿಗ್ ನ್ಯೂಸ್15 hours agoHalf helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ


















