ಬಿಗ್ ನ್ಯೂಸ್
ಬಸ್ರೂರು ಬಳಕೆದಾರರ ವೇದಿಕೆಯ ದ.ಕ ಜಿಲ್ಲಾಧ್ಯಕ್ಷರಾಗಿ ದಿನಗೂಲಿ ಕಾರ್ಮಿಕ ಸಂಜೀವ ಕಬಕ – ಪ್ರಾ. ಶಿಕ್ಷಣ ಪೂರ್ತಿಗೊಳಿಸದ ಇವರ ಸಾಮಾಜಿಕ ಹೋರಾಟ ಉನ್ನತ ಶಿಕ್ಷಣ ಪಡೆದವರು ನಾಚುವಂತಹದು…!ಎಂಡೋಸಲ್ಪಾನ್ ವಿರೋಧಿ ಹೋರಾಟದ ಭಾಗವಾಗಿ ಇವರು ಸಂಗ್ರಹಿಸಿದ 5000 ಪುಟದ ಸರಕಾರಿ ದಾಖಲೆ ಹೈಕೋರ್ಟು – ಸುಪ್ರೀಂ ಕೋರ್ಟ್ʼನಲ್ಲಿ ಬಳಸಲ್ಪಟ್ಟಿತ್ತು…!
ವಿಟ್ಲ: ಈ ವ್ಯಕಿ ಓದಿದ್ದು ಕೇವಲ 6 ನೇ ತರಗತಿ, ಮಾಡುತ್ತಿರುವ ವೃತ್ತಿ ಖಾಸಗಿ ಕಂಪೆನಿಯೊಂದರಲ್ಲಿ ದಿನಗೂಲಿ ನೌಕರ, ಸಾಮಾನ್ಯರಲ್ಲಿ ಸಾಮಾನ್ಯರಾಗಿರಬೇಕಿದ್ದ ಈ ವ್ಯಕ್ತಿಯು ತನ್ನಲ್ಲಿ ಬೆಳೆಸಿಕೊಂಡ ಮಾನವೀಯ ಮೌಲ್ಯ, ಶುದ್ದ ಅಂತ:ಕರಣ, ಅನ್ಯಾಯದ ವಿರುದ್ದ ಸಿಡಿಯುವ ಗುಣ, ಸಮಾಜದ ಒಲಿತಿಗಾಗಿ, ಶೋಷಿತರ ಉನ್ನತಿಗಾಗಿ ಮಿಡಿಯುವ ಮನದಿಂದಾಗಿ, ಸಹಸ್ರಾರು ಕುಟುಂಬಗಳ ಭರವಸೆಯ ಬೆಳಕಾಗಿ , ದೌರ್ಜನ್ಯ, ದಬ್ಬಾಳಿಕೆ, ಶೋಷಣೆಗೆ ತುತ್ತಾಗಿ ಜರ್ಜರಿತರಾದ ಅಸಹಾಯಕರಿಗೆ ಊರುಗೋಲಾಗಿದ್ದಾರೆ. ಇವರೇ ದುರ್ಬಲರನ್ನು ಅಸಹಾಯಕರನ್ನು ನಿರಂತರವಾಗಿ ಶೋಷಿಸುತ್ತಿರುವ ಭ್ರಷ್ಟ ಅಡಳಿತ ವ್ಯವಸ್ಥೆ ವಿರುದ್ದ ಕಾನೂನು ಮಾರ್ಗದಲ್ಲಿ ಹೋರಾಟ ನಡೆಸಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುತ್ತಿರುವ ಭ್ರಷ್ಟಚಾರ ವಿರೋಧಿ ಹೋರಾಟದ ಕ್ರೂಸೆಡರ್ ಸಂಜೀವ ಕಬಕ.
ಬಳಕೆದಾರ ವೇದಿಕೆ ಬಸೂರು ಮತ್ತು ಉಡುಪಿ ಮಾನವ ಹಕ್ಕು ಪ್ರತಿಷ್ಠಾನದ ಡಾ. ರವೀಂದ್ರನಾಥ್ ಶಾನುಭೋಗ್ ರವರದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ದೊಡ್ಡ ಹೆಸರು. ಹತ್ತು ಹಲವು ಅಹಿಂಸತ್ಮಾಕ ಹೋರಾಟಗಳ ಮೂಲಕ ಅಡಳಿತ ಶಾಹಿಯಿಂದ ಅನ್ಯಾಯಕ್ಕೆ ಒಳಗಾದ ವ್ಯಕ್ತಿಗಳಿಗೆ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ನ್ಯಾಯ ದೊರಕಿಸಿಕೊಟ್ಟ ಮಹಾನ್ ಸಾಮಾಜಿಕ ಹೋರಾಟಗಾರ ಅವರು. ಅವರ ಪರಿಸರ ಕಾಳಜಿಯ ಹೋರಾಟಗಳು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಕಾಣಿಕೆಗಳು ನೀಡಿವೆ. ರಾಜ್ಯದ ಪ್ರತಿಷ್ಟಿತ ಪತ್ರಿಕೆ ಉದಯವಾಣಿಯಲ್ಲಿ ಅಂಕಣ ಬರೆಯುವ ಮೂಲಕ ಅಧಿಕಾರಿಶಾಹಿಯ ಬೇಜವಬ್ದಾರಿ ಹಾಗೂ ಜನಸಾಮಾನ್ಯರ ಮೇಲಿನ ಅಧಿಕಾರಿಗಳ ದೌರ್ಜನ್ಯ ಶೋ಼ಷಣೆಯ ಬಗ್ಗೆ ಜನಾಭಿಪ್ರಾಯ ಮೂಡಿಸಿ ಸರಕಾರದಿಂದ ಕೆಲಸ ಆಗುವಂತೆ ನೋಡಿಕೊಂಡವರು ಶಾನುಭೋಗರು.
ಶಾನುಭೋಗರ ಗರಡಿಯಲ್ಲಿ ಪಳಗಿದ ಸಂಜೀವ ಕಬಕರವರು ಅವರದೇ ಹಾದಿಯಲ್ಲಿ ನಡೆದು ಸಾಮಾಜಿಕ ಹೋರಾಟಗಳನ್ನು ನಡೆಸುತ್ತಿರುವವರು. ಕಾರ್ಮಿಕರಿಗೆ, ವೃದ್ಧರಿಗೆ , ಅಂಗವಿಕಲರಿಗೆ ವಿಧವಾ ಮಹಿಳೆಯರಿಗೆ ಸರಕಾರದಿಂದ ಸಿಗಬೇಕಾದ ಸವಲತ್ತುಗಳು ಸಿಗದೇ ಹೋದಾಗ ಅವರಿಗೆ ನೈತಿಕ ಸ್ಥೈರ್ಯ ತುಂಬಿ ಅವರ ಜತೆ ನಿಂತು ಆ ಹೋರಾಟವನ್ನು ಮುನ್ನಡೆಸಿ ಅವರ ಬದುಕಿನಲ್ಲಿ ಬೆಳಕು ಹರಿಯುವಂತೆ ನೋಡಿಕೊಂಡವರು. ಇವರು ಮಾಡಿದ ಅತೀ ದೊಡ್ಡ ಸಾಧನೆಯೆಂದರೇ ಕೀಟನಾಶಕದ ಹೆಸರಿನಲ್ಲಿ ಬಳಸಲ್ಪಡುತ್ತಿದ್ದ ಎಂಡೋಸಲ್ಪಾನ್ ಎಂಬ ಮಾರಕ ವಿಷವನ್ನು ಕೊನೆಗಾಣಿಸಲು ನಡೆಸಿದ ಅವಿರತ ಹೋರಾಟ.
ಅದು 1991ರ ಇಸವಿ. ಸಿಮೆಂಟಿನ ಸಿದ್ಧ ವಸ್ತುಗಳ ನಿರ್ಮಾಣ ಘಟಕದಲ್ಲಿ ದುಡಿಯುತ್ತಿದ್ದ ಇವರಿಗೆ ಸ್ವಂತವಾಗಿ ಉದ್ದಿಮೆ ಸ್ಥಾಪಿಸಬೇಕೆಂಬ ಕನಸ್ಸೊಂದು ಹುಟ್ಟಿಕೊಂಡಿತ್ತು. ಆ ವೇಳೆಗಾಗಲೇ ಅವರು ಭೂಮಿ ಸಂಪತ್ತು ಎಲ್ಲವನ್ನು ಕಳಕೊಂಡಿದ್ದರು. ಹಾಗಾಗಿ ಉದ್ದಿಮೆ ಸ್ಥಾಪನೆಗೆ ಬೇಕಾದ ಭೂಮಿಗಾಗಿ ಸರಕಾರಕ್ಕೆ ಖರೀದಿ ಪ್ರಸ್ತಾವನೆ ಸಲ್ಲಿಸಿದ್ದರು. ಸರಕಾರಕ್ಕೆ ಸಲ್ಲಬೇಕಾದ ಅಗತ್ಯ ಹಣ ಪಾವತಿಸುವುದಾಗಿ ತಿಳಿಸಿ ಸರಕಾರಿ ಭೂಮಿಗೆ ಅರ್ಜಿ ಗುಜರಾಯಿಸಿದ ಅವರನ್ನು ಸರಕಾರದ ಕಂದಾಯ ಇಲಾಖೆ ಕಾಡಿದು ಅಷ್ಟಿಷ್ಟಲ್ಲ. ಫೈಲ್ ಮೂವ್ ಆಗಲು ಲಂಚಕ್ಕಾಗಿ ಅಧಿಕಾರಿಗಳು ಕೈಯೊಡ್ಡಿದ್ದಾಗ ಅದರ ವಿರುದ್ದ ಸೆಟೆದು ನಿಂತವರು ಸಂಜೀವರು. 20 ಸೆಂಟ್ಸ್ ಭೂಮಿಗಾಗಿ ಅರ್ಜಿ ಗುಜರಾಯಿಸಿ 5 ವರ್ಷ ಕಳೆದರು ಭೂಮಿ ಸಿಗದಿದ್ದಾಗ 96-97ನೇ ಸಾಲಿನಲ್ಲಿ ಅವರು ಡಾ. ರವೀಂದ್ರನಾಥ್ ಶಾನುಭೋಗ್ ́ರವರ ಬಸ್ರೂರು ಬಳಕೆದಾರ ಸಂಘಟನೆಯ ನೆರವು ಯಾಚಿಸುತ್ತಾರೆ.

ಆ ಬಳಿಕ ಬಸ್ರೂರು ಬಳೆಕೆದಾರರ ವೇದಿಕೆಯ ಆಶ್ರಯದಲ್ಲಿ ಅವರ ಹೋರಾಟ ಮುಂದುವರಿಯುತ್ತದೆ. ಇದ್ಯಾವುದಕ್ಕೂ ಅಧಿಕಾರಿಗಳು ಬಗ್ಗದಿದ್ದಾಗ ಉದಯವಾಣಿ ಪತ್ರಿಕೆಯಲ್ಲಿ ಶಾನ್ ಬೋಗರು ತಾನು ಬರೆಯುತ್ತಿದ್ದ ʼಬಹುಜನ ಹಿತಾಯ ಬಹುಜನ ಸುಖಾಯʼ ಅಂಕಣದಲ್ಲಿ ಸಂಜೀವ ಕಬಕರವರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಈ ಅಂಕಣ ಓದಿದ ಹಲವು ಓದುಗರು ಕಂದಾಯ ಇಲಾಖೆಗೆ ಪತ್ರ ಬರೆದು ಸಂಜೀವರವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಜನಾಭಿಪ್ರಾಯಕ್ಕೆ ಮಣಿದ ಅಂದಿನ ಡಿಸಿ ಅವರಿಗೆ ಅಗತ್ಯ ಜಾಗವನ್ನು ಮಂಜೂರು ಮಾಡಿದರು. 10 ವರ್ಷಗಳ ಹೋರಾಟದ ಬಳಿಕ ಜಾಗ ಸಿಕ್ಕಿತಾದರೂ ಆ ವೇಳೆಗೆ ಆರೋಗ್ಯ ಸಮಸ್ಯೆಗೆ ತುತ್ತಾದ ಸಂಜೀವರಿಗೆ ತನ್ನದೇ ಆದ ಉದ್ದಿಮೆ ಸ್ಥಾಪಿಸುವ ಕನಸ್ಸಿಗೆ ತಿಲಾಂಜಲಿ ಇಡಬೇಕಾಗಿ ಬಂತು.
ತನ್ನ ಜಾಗಕ್ಕಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಕಬಕದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಹಾಗೂ ಇದರಿಂದ ಸ್ಥಳೀಯರಿಗೆ ಆಗುತ್ತಿದ್ದ ತೊಂದರೆ ಬಗ್ಗೆ ಸಂಜೀವರವರು ಡಾ| ಶಾನುಭೋಗರವರ ಗಮನಕ್ಕೆ ತರುತ್ತಾರೆ. ಆಗ ಆ ಹೋರಾಟವನ್ನು ಸಂಜೀವರಲ್ಲಿಯೇ ನಡೆಸಲು ಡಾ| ಶಾನುಭೋಗರು ಸೂಚಿಸುತ್ತಾರೆ. ತಾನು ಪಡೆದ ಕಡಿಮೆ ಶಿಕ್ಷಣದ ಕಾರಣ ತನಗೆ ಅಷ್ಟು ದೊಡ್ಡ ಹೋರಾಟ ನಡೆಸಲು ಮಾಹಿತಿ ಹಾಗೂ ಜ್ಙಾನದ ಕೊರತೆಯಾಗಬಹುದು ಎಂಬ ಹಿಂಜರಿಕೆ ಹಾಗೂ ಅಳುಕನ್ನು ಸಂಜೀವರು ವ್ಯಕ್ತಪಡಿಸಿತ್ತಾರೆ. ಆಗ “ಹೇಗೆ ನೀವು ನಿಮ್ಮ ಜಾಗದ ಹೋರಾಟವನ್ನು ನಡೆಸುತ್ತೀರಿ? “ಎಂದು ಡಾ| ಶಾನುಭೋಗರು ಮರು ಪ್ರಶ್ನಿಸಿದ್ದು, ಆಗ ಸಂಜೀವರು “ ಅದು ನನ್ನದೇ ಜಾಗ ಹಾಗಾಗಿ ನನಗೆ ಅದರ ಮಾಹಿತಿ ಇದೆ” ಎನ್ನುತ್ತಾರೆ. “ಈ ಕಲ್ಲು ಗಣಿಗಾರಿಕೆಯ ಸಮಸ್ಯೆಯು ನಿಮ್ಮದೇ ಸಮಸ್ಯೆ ಎಂಬ ನೆಲೆಯಲ್ಲಿ ಮಾಡಿ ಆಗ ನಿಮಗೆ ಇದು ಕೂಡ ಸಾಧ್ಯವಾಗುತ್ತದೆ” ಎಂದು ಅವರು ತಿಳಿಸಿದ್ದು ಇದು ಸಂಜೀವರ ಬದುಕಿನ ದಿಕ್ಕನ್ನೆ ಬದಲಾಯಿಸುತ್ತದೆ.ಕಲ್ಲು ಗಣಿಗಾರಿಕೆ ವಿರುದ್ದದ ಹೋರಾಟದಲ್ಲಿ ಸಕ್ಸಸ್ ಆದ ಅವರು ಬಳಿಕ ಹಲವು ನೊಂದವರಿಗೆ ಬೆನ್ನೆಲುಬಾಗಿ ನಿಂತು ಅವರ ಹೋರಾಟಕ್ಕೆ ಮಾರ್ಗದರ್ಶನ ನೀಡಿ ನ್ಯಾಯ ದೊರಕುವಂತೆ ಮಾಡಿದ್ದಾರೆ.
ಎಂಡೋಸಲ್ಪಾನ್ ವಿರೋಧಿ ಹೋರಾಟ
2009ರಲ್ಲಿ ಕರ್ನಾಟಕದ ಪ್ರಖ್ಯಾತ ಪತ್ರಿಕೆ ವಿಜಯ ಕರ್ನಾಟಕದಲ್ಲಿ ಎಂಡೋಸಲ್ಪಾನ್ ದುಷ್ಟರಿಣಾಮದ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ- ಪಟ್ರಮೆ – ನಿಡ್ಲೆ ಭಾಗದಲ್ಲಿ ಎಂಡೋಸಲ್ಪಾನ್ ನಿಂದ ಹಲವು ಸಾವು ನೋವುಗಳು ಸಂಭವಿಸಿದ್ದ ಬಗೆಗಿನ ವರದಿ ಇದಾಗಿತ್ತು. ಈ ವರದಿಯಲ್ಲಿ ಶಿಕ್ಷಕನಾಗಬೇಕೆಂಬ ಕನಸು ಕಂಡಿದ್ದ ಹಾಗೂ ದೃಷ್ಟಿ ಕಳಕೊಂಡಿದ್ದ ಶ್ರೀಧರ ಗೌಡ ಅವರು ಎಂಡೋಸಲ್ಪಾನ್ ವಿರದ್ದ ನಡೆಸುತ್ತಿದ್ದ ಪ್ರತಿಭಟನೆ, ಧರಣಿಯ ಉಲ್ಲೇಖವಿತ್ತು. ಒಬ್ಬ ಕಣ್ಣಿಲ್ಲದ ಅಂಧ ಇಂತಹದೊಂದು ಹೋರಾಟ ನಡೆಸುತ್ತಿರುವಾಗ ಇವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಸಂಜೀವರವರ ಅಂತರಾತ್ಮ ಹೇಳಿತ್ತು. ಅಂತರಾತ್ಮದ ಮಾತು ಕೇಳಿದ ಸಂಜೀವರು ಆ ಹೋರಾಟಕ್ಕೆ ಕಾನೂನಾತ್ಮಕ ಚೌಕಟ್ಟು ನೀಡಲು ಅಗತ್ಯ ದಾಖಲೆಗಳ ಸಂಗ್ರಹದಲ್ಲಿ ತೊಡಗಿಕೊಂಡರು.
ಸಂಜೀವರ ದಾಖಲೆ ಸಂಗ್ರಹದ ಭಗೀರಥ ಹೋರಾಟದ ಬಳಿಕ ಮಾರಕದ ವಿಷದ ವ್ಯಾಪ್ತಿಯ ಅಗಾಧತೆ ಜನರಿಗೆ ಅರಿವಿಗೆ ಬಂತು. ದ.ಕ ಜಿಲ್ಲೆಯ 92 ಗ್ರಾಮದ ಸಹಿತ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವು ಗ್ರಾಮಗಳು ಈ ಮಾರಕ ವಿಷದ ಪ್ರಭಾವಕ್ಕೆ ಒಳಗಾಗಿದ್ದ ಹಾಗೂ ಇದರಿಂದಾಗಿ ಸಾವಿರಾರು ಮಂದಿ ನರಕಯಾತನೆ ಪಡುತ್ತಿರುವ ವಿಚಾರ ಬಹಿರಂಗವಾಯಿತು. ಇದು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಯಿತು, ಕರ್ನಾಟಕ ಹೈ ಕೋರ್ಟಿನ ನ್ಯಾಯಮೂರ್ತಿ ಕೆ ಎಲ್ ಮಂಜುನಾಥ್ ಅವರು ಈ ವರದಿ ಓದಿ ಇದರ ಬಗ್ಗೆ ತನಿಖೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದರು. ಇನ್ನು ಹತ್ತು ಹಲವು ಸಮಾನ ಮನಸ್ಕರು ಎಂಡೋಸಲ್ಫಾನ್ ವಿರುದ್ದ ನಿರಂತರ ಹೋರಾಟದ ನಡೆಸಿದರು. ಇದೆಲ್ಲದರ ಫಲಸ್ವರೂಪ ಎಂಡೋಸಲ್ಪಾನನ್ನು ಸರಕಾರ ಕೊನೆಗೂ ನಿಷೇಧಿಸಿತ್ತು.
ಆದರೆ ಸರಕಾರದ ಈ ನಿರ್ಧಾರದ ವಿರುದ್ದ ಎಂಡೋ ಸಲ್ಫಾನ್ ಉತ್ಪಾದಕ ಕಂಪೆನಿಗಳು ನ್ಯಾಯಾಲಯದ ಮೆಟ್ಟಿಲು ಏರಿದರು . ಆಗ ನ್ಯಾಯಾಲಯದಲ್ಲಿ ಸಂಜೀವರು ಸಂಗ್ರಹಿಸಿದ್ದ 5 ಸಾವಿರ ಪುಟದ ಸಮಗ್ರ ಮಾಹಿತಿಯನ್ನು ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಲಯಕ್ಕೆ ಸಲ್ಲಿಸಿದರು. ಇದು ಈ ಪ್ರಕರಣದ ನ್ಯಾಯ ನಿರ್ಣಯದಲ್ಲಿ ಬಹು ದೊಡ್ಡ ಪಾತ್ರ ವಹಿಸಿತು ಎಂಡೋಸಲ್ಪಾನ್ ದುರಂತದ ವಿಚಾರವನ್ನು ಬಯಲಿಗೆ ತರಲು 200ಕ್ಕೂ ಮಿಕ್ಕಿ ಮಾಹಿತಿ ಹಕ್ಕಿನ ಅರ್ಜಿಯನ್ನು ಸುಮಾರು 7 ಇಲಾಖೆಗಳಿಗೆ ಹಾಕಿ ಇಷ್ಟು ಅಗಾಧ ಮಾಹಿತಿಯನ್ನು ಅವರು ಸಂಗ್ರಹಿಸಿದ್ದರು.
ಈಗಲೂ ಪುತ್ತೂರಿನ ಹೊರವಲಯದ ಸಿಮೆಂಟಿನ ಸಿದ್ಧ ವಸ್ತುಗಳ ನಿರ್ಮಾಣ ಘಟಕದಲ್ಲಿ ದಿನಗೂಲಿ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ಸಂಜೀವ ಅವರು ತನ್ನ ಸಿಮೀತ ಅದಾಯದಲ್ಲಿ ಪುಟ್ಟ ಸಂಸಾರವನ್ನು ಸಾಗಿಸುತ್ತಿದ್ದಾರೆ. ಸಂಜೀವ ಅವರು ಯಾವತ್ತೂ ಸಾಮಾಜಿಕ ಹೋರಾಟವನ್ನು ಹಣಕ್ಕಾಗಿಯೋ, ಇನ್ಯಾವುದೋ ಆಸೆಗಾಗಿ ಪಣಕ್ಕಿಟ್ಟವರಲ್ಲ. ಶಾನುಭೋಗ್ ಅವರ ಬಳಕೆದಾರರ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಶಿಕ್ಷಣವನ್ನು ಇಂದು ಸಮಾಜದ ಏಳಿಗೆಗಾಗಿ ಉಪಯೋಗಿಸುತ್ತಿದ್ದಾರೆ.
ಸುದೀರ್ಘ ಸೇವೆ:
ಸುಮಾರು 3 ದಶಕಗಳಿಂದ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಅವರು ಕಳೆದ 14 ವರ್ಷಗಳಿಂದ ಮಾಹಿತಿ ಹಕ್ಕು ಕಾಯ್ದೆಯಡಿಲ್ಲಿ ದಾಖಲೆಗಳನ್ನು ಕೆದಕಿ ತೆಗೆಯುವ ಕಾರ್ಯ ಮಾಡಿದ್ದಾರೆ. ಇಲ್ಲಿಯವರೆಗೆ 2 ಸಾವಿರಕ್ಕೂ ಮಿಕ್ಕಿದ ಮಾಹಿತಿ ಹಕ್ಕುಗಳ ಅರ್ಜಿಗಳನ್ನು ಹಾಕಿ ಸರ್ಕಾರದ ವಿವಿಧ ಇಲಾಖೆಗಳಿಂದ ಮಾಹಿತಿ ತೆಗೆದಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಬರುವ ಮೊದಲು ಸರಕಾರಿ ಇಲಾಖೆಗಳಿಗೆ ಪತ್ರ ಬರೆದು ಅಲ್ಲಿ ನೀಡುವ ಹಿಂಬರಹದ ಅಧಾರದಲ್ಲಿ ತಮ್ಮ ಹೋರಾಟಗಳನ್ನು ಸಂಘಟಿಸುತ್ತಿದ್ದರು
ಜೀವನದಲ್ಲಿ ಮರೆಯಲಾಗದ್ದು!
ಕಳೆದ ಭಾನುವಾರ ಬಸ್ರೂರು ಬಳಕೆದಾರರ ವೇದಿಕೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಉಡುಪಿ ಇದರ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಸಂಜೀವ ಕಬಕ ಅವರನ್ನು ಆಯ್ಕೆಮಾಡಲಾಗಿದೆ. ಈ ಹಿನ್ನಲೆಯಲ್ಲಿ ನಿಖರ ನ್ಯೂಸ್ ಅವರನ್ನು ಮಾತನಾಡಿಸಿತ್ತು.
ಈ ವೇಳೆ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬವೊಂದರ ಮನೆಯನ್ನು ಅರಣ್ಯ ಇಲಾಖೆ ಒಡೆದು ಹಾಕಿದ ಲೇಖನವನ್ನು ಪತ್ರಿಕೆಯಲ್ಲಿ ಓದಿ, ಆ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿತ್ತು. ಪತ್ರಿಕೆಯ ಓದುಗನಾಗಿ ವರದಿಯನ್ನು ಸಂಬಂಧಪಟ್ಟವರಿಗೆ ತಲುಪಿಸುವ ಕಾರ್ಯ ಮಾಡಿದ್ದು ಮಾತ್ರ. ವಿಚಾರಣೆ ನಡೆಸಿ ಅರಣ್ಯ ಇಲಾಖೆಗೆ ೫೦ ಸಾವಿರ ದಂಡ ವಿಧಿಸಿದ ಘಟನೆ ಎಂದೂ ಮರೆಯಲಾಗದು ಎಂದು ಹೇಳಿದರು.
ಹಲವು ರೀತಿಯಲ್ಲಿ ದಾಖಲೆಗಳನ್ನು ಕೆದಕಿದ ಪರಿಣಾಮ ಸಣ ಸಂಖ್ಯೆಯಲ್ಲಿದ್ದ ಎಂಡೋ ಪೀಡಿತರು ಪ್ರತೀ ಊರಿನಲ್ಲಿರುವುದು ಹೊರ ಬಂದಿದೆ. ಉಡುಪಿಯಲ್ಲಿ ಎಂಡೋ ಪ್ರಕರಣವೇ ಇಲ್ಲ ಎಂದು ಅಂದಿನ ಡಿಸಿ ತನಿಖಾ ಪ್ರಾಧಿಕಾರಕ್ಕೆ ವರದಿ ನೀಡಿದ್ದರು. ಆದರೇ ಇದೀಗ ಆ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯೇ ಸಾವಿರಾರು ಪ್ರಕರಣ ಇರುವುದನ್ನು ಅಧಿಕೃತವಾಗಿ ಒಪ್ಪಿಕೊಂಡು ಅವರಿಗೆ ಸರಕಾರದ ಸವಲತ್ತು ನೀಡುತ್ತಿದೆ ಕೆದಕುವ ಕಾರ್ಯದಿಂದ ಯಶಸ್ಸು ಹಾಗೂ ನ್ಯಾಯ ಸಿಗುತ್ತದೆ ಎಂದು ಸಂಜೀವ ಕಬಕರವರು ತಿಳಿಸಿದರು.
ಅಹಿಂಸತ್ಮಾಕ ಮಾರ್ಗದ ಮೂಲಕ ಸಂವಿಧಾನದಲ್ಲಿ ಒದಗಿಸಲಾದ ಅವಕಾಶದಲ್ಲಿ ಪತ್ರ ಹಾಗೂ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯುವುದು ನಮ್ಮ ಹೋರಾಟದ ಒಟ್ಟಾರೆ ಚಿತ್ರಣ. ನ್ಯಾಯ ಸಿಗುವುದು ಇಲ್ಲಿ ನಿಧಾನವಾದರೂ ಬೇರೆ ಯಾರಿಗೂ ತೊಂದರೆಯಾಗದ ರೀತಿ ಹೋರಾಟ ನಡೆಯಬೇಕು ಎನ್ನುವ ಕಡೆ ನಮ್ಮದ್ದು ಗರಿಷ್ಟ ಗಮನ. ಇದೇ ಮಾರ್ಗದಲ್ಲಿ ನೊಂದವರ ಹೋರಾಟಕ್ಕೆ ನಮ್ಮ ಬೆಂಬಲ ಮಾರ್ಗದರ್ಶನ ಇರುತ್ತಾದೆ. ಆದರೇ ಹೋರಾಟವನ್ನು ನೊಂದವರೇ ಮಾಡಬೇಕು ಎನ್ನುವುದು ನಮ್ಮ ಈ ಹೋರಾಟದ ಜೀವಾಳ ಎಂದು ತಮ್ಮ ಹೋರಾಟದ ರೂಪುರೇಶೆಯನ್ನು ಅವರು ವಿವರಿಸಿದರು
ನನ್ನ ಈ ಹೋರಟದಿಂದ ಸ್ಪೂರ್ತಿ ಪಡೆದು ಇನ್ನೊಂದಿಬ್ಬರು ಸ್ವಾರ್ಥ ರಹಿತವಾಗಿ ಈ ಹೋರಾಟದಲ್ಲಿ ತೊಡಗಿಸಿಕೊಂಡರೇ ಅದೇ ನನಗೆ ಅತೀ ದೊಡ್ಡ ಗೆಲುವು ಎಂದು ಎಲೆಮರೆಯಕಾಯಿಯಂತೆ ಬದುಕುತ್ತಿರುವ ಸಂಜೀವ ಕಬಕರವರ ಒಡಲಾಳದ ಮಾತು
ಕರ್ನಾಟಕದಲ್ಲಿರುವ ಗೇರುತೋಟಗಳ ವಿಸ್ತೀರ್ಣ ಹಾಗೂ ಅಲ್ಲಿ ಸುರಿದ ಎಂಡೋಸಲ್ಫಾನ್ ವಿಷದ ಪ್ರಮಾಣವನ್ನು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಸಂಜೀವಣ್ಣ ಪಡೆದ ಕಾರಣದಿಂದ ಸರ್ವೋಚ್ಛ ನ್ಯಾಯಾಲಯ ದೇಶದಲ್ಲಿ ಎಂಡೋಸಲ್ಪಾನ್ ನಿಷೇಧಿಸಿತು. ನೊಂದವರಿಗೆ ಸಹಾಯಹಸ್ತ ನೀಡಲು ಹಣವಂತನಾಗಬೇಕಾಗಿಲ್ಲ, ಪದವಿಶಿಕ್ಷಣವೂಬೇಕಾಗಿಲ್ಲ ಎಂದು ಸಾಧಿಸಿರುವ ಸಂಜೀವ ಕಬಕ ಸಾವಿರಾರು ನಾಗರೀಕರಿಗೆ ಮಾರ್ಗದರ್ಶನ ನೀಡಿ ನ್ಯಾಯವೊದಗಿಸಿದ್ದಾರೆ.
ಡಾ. ರವೀಂದ್ರನಾಥ್ ಶ್ಯಾನ್ ಭಾಗ್
ಮಾನವ ಹಕ್ಕುಗಳ ಪ್ರತಿಷ್ಠಾನ, ಉಡುಪಿ
ಮಂಗಳೂರು
Mangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ಮಂಗಳೂರು: ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ಏನಿದು ಪ್ರಕರಣ?
ನ.19ರ ಗುರುವಾರ ಸಂಜೆ ಕಾಲೇಜು ಆವರಣದಿಂದ ಕರೆದೊಯ್ಯಲ್ಪಟ್ಟ ಯುವತಿ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಮೂಲದವರಾಗಿದ್ದು, ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ.
ಯುವತಿ ಮಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವ್ಯಾಸಂಗ ಮಾಡುತ್ತಿರುವ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದ ಯುವತಿಯ ಪೋಷಕರು ಹಾಗೂ ಸಂಬಂಧಿಕರು ಕಾಲೇಜು ಆವರಣಕ್ಕೆ ಆಗಮಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಎಳೆದೊಯ್ದು ಮಹೀಂದ್ರಾ ಥಾರ್ ವಾಹನದಲ್ಲಿ ಕರೆದೊಯ್ದಿದ್ದರು. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಘಟನೆಯ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇರಳಂನ ಸಂಬಂಧಿಕರ ಮನೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮಂಗಳೂರಿಗೆ ಕರೆತಂದಿದ್ದಾರೆ.
ಮನೆಯವರ ಜೊತೆ ಹೋಗಲು ನಿರಾಕರಣೆ
ಪೊಲೀಸರು ರಕ್ಷಿಸಿದ ಬಳಿಕ ಯುವತಿಯ ಹೇಳಿಕೆ ದಾಖಲಿಸಿದ್ದು, ತನ್ನ ಪೋಷಕರು ಅಥವಾ ಮನೆಯವರ ಜೊತೆ ಹೋಗಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ ಎನ್ನಲಾಗಿದೆ. ಯುವತಿ ವಯಸ್ಕಳಾಗಿರುವುದರಿಂದ ತಾನು ಎಲ್ಲಿ ವಾಸಿಸಬೇಕು ಎಂಬುದನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕು ಆಕೆಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ವೈದ್ಯಕೀಯ ತಪಾಸಣೆಯ ಬಳಿಕ ಯುವತಿಯ ಇಚ್ಛೆಯ ಸ್ಥಳಕ್ಕೆ ಅಥವಾ ಸಾಂತ್ವನ ಕೇಂದ್ರಕ್ಕೆ ಪೊಲೀಸ್ ರಕ್ಷಣೆಯಲ್ಲಿ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 140(3) ಮತ್ತು 126ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಿಚಾರಣೆಗೆ ಕರೆಸಲಾಗಿದೆ. ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಿರುವ ಅಪರಾಧವಾಗಿರುವ ಹಿನ್ನೆಲೆಯಲ್ಲಿ ಬಿಎನ್‌ಎಸ್‌ಎಸ್ ಅಡಿಯಲ್ಲಿ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಅಂತರ ರಾಜ್ಯ
Former CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್‌ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!
ಉನ್ನತ ಸರ್ಕಾರಿ ಹುದ್ದೆ, ಕೈತುಂಬಾ ಸಂಬಳ, ಕಾರು, ಬಂಗಲೆಯಂತಹ ಐಷಾರಾಮಿ ಸೌಲಭ್ಯಗಳಿದ್ದರೂ ನೆಮ್ಮದಿ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿ ಸನ್ಯಾಸ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅರಣ್ಯದ ಗುಹೆಗಳಲ್ಲಿ ಸರಳ ಜೀವನ ನಡೆಸುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ನವದೆಹಲಿ: ಉನ್ನತ ಸರ್ಕಾರಿ ಹುದ್ದೆ, ಕೈತುಂಬಾ ಸಂಬಳ, ಕಾರು, ಬಂಗಲೆಯಂತಹ ಐಷಾರಾಮಿ ಸೌಲಭ್ಯಗಳಿದ್ದರೂ ನೆಮ್ಮದಿ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿ ಸನ್ಯಾಸ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅರಣ್ಯದ ಗುಹೆಗಳಲ್ಲಿ ಸರಳ ಜೀವನ ನಡೆಸುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಆಧುನಿಕ ಜಗತ್ತಿನ ಸಕಲ ಸೌಕರ್ಯಗಳಿಂದ ದೂರವಾಗಿ ಗುಹೆಗಳಲ್ಲಿ ವಾಸಿಸುತ್ತಿರುವ ಮಾಜಿ ಅಧಿಕಾರಿಯು, ತಮ್ಮ ಆಧ್ಯಾತ್ಮಿಕ ಪಯಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅರಣ್ಯದ ವಾತಾವರಣದಲ್ಲಿ ಬದುಕಲು ಆರಂಭಿಸಿದ ಬಳಿಕ ಜೀವನದ ನೈಜ ಅರ್ಥ ಹಾಗೂ ನೆಮ್ಮದಿಯ ಮಹತ್ವ ಅರಿವಾಯಿತು ಎಂದು ಅವರು ಹೇಳಿದ್ದಾರೆ.
ಸಿಬಿಐ ಇನ್ಸ್‌ಪೆಕ್ಟರ್ ಹುದ್ದೆ ದೊರೆತ ಆರಂಭದಲ್ಲಿ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಭಾವಿಸಿದ್ದ ಅವರು, ಕಾಲಕ್ರಮೇಣ ಆ ವ್ಯವಸ್ಥೆಯೊಳಗೆ ಮಾನಸಿಕ ಒತ್ತಡ ಅನುಭವಿಸಲಾರಂಭಿಸಿದರು. ಕಾನೂನು ಪಾಲನೆಯ ಹೆಸರಿನಲ್ಲಿ ಜನರೊಂದಿಗೆ ಕಠಿಣವಾಗಿ ಹಾಗೂ ಒರಟಾಗಿ ವರ್ತಿಸಬೇಕಾದ ಪರಿಸ್ಥಿತಿ ತಮ್ಮ ಸ್ವಭಾವಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಹಣ, ಮನೆ, ಕಾರು ಸೇರಿದಂತೆ ಎಲ್ಲ ಸೌಲಭ್ಯಗಳಿದ್ದರೂ ಮನಸ್ಸಿಗೆ ಬೇಕಾದ ನೆಮ್ಮದಿ ಮತ್ತು ಸ್ವಾತಂತ್ರ್ಯ ಸಿಗುತ್ತಿಲ್ಲ ಎಂಬ ಅರಿವಾದ ಬಳಿಕ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದರು.
ನಂತರ ಹಲವು ರಾಜ್ಯಗಳಲ್ಲಿ ಸಂಚರಿಸಿದ ಅವರು, ಕೊನೆಗೆ ಮಧ್ಯಪ್ರದೇಶದ ಓಂಕಾರೇಶ್ವರದ ಸಮೀಪ ನರ್ಮದಾ ನದಿ ತೀರಕ್ಕೆ ತಲುಪಿದರು. ಅಲ್ಲಿ ಸರಳ ಜೀವನ ಆರಂಭಿಸಿ, ಚಪ್ಪಲಿ ಇಲ್ಲದೆ, ಮಲಗಲು ಚಾಪೆಯನ್ನೂ ಬಳಸದೆ, ದೊರೆಯುವ ಆಹಾರವನ್ನು ಸೇವಿಸುತ್ತಾ ಧ್ಯಾನ ಮತ್ತು ದೇವಿಯ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.
ಬಳಿಕ ಬೆಟ್ಟದ ಮೇಲಿರುವ ದೇವಸ್ಥಾನವೊಂದರಲ್ಲಿ ಸಾಧುಗಳೊಂದಿಗೆ ಕೆಲವು ವರ್ಷಗಳನ್ನು ಕಳೆದರು. ಈ ಸಂದರ್ಭದಲ್ಲಿ ಗ್ರಾಮದ ಮಕ್ಕಳಿಗೆ ಪ್ರಕೃತಿಯೊಂದಿಗೆ ಬೆರೆಯುವ ಪಾಠವನ್ನೂ ಕಲಿಸಿದರು. ಸದ್ಯ ದಟ್ಟ ಅರಣ್ಯದ ಗುಹೆಗಳಲ್ಲಿ ವಾಸಿಸುತ್ತಿರುವ ಅವರು, ಒಲೆಯ ಮೇಲೆ ಅಡುಗೆ ಮಾಡಿಕೊಂಡು ಧ್ಯಾನದಲ್ಲಿ ಕಾಲ ಕಳೆಯುತ್ತಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಅವರ ಅಭಿಪ್ರಾಯವೇನು?
ಸಮಾಜದಲ್ಲಿನ ಭ್ರಷ್ಟಾಚಾರದ ಕುರಿತು ಮಾತನಾಡಿರುವ ಮಾಜಿ ಅಧಿಕಾರಿ, ಭ್ರಷ್ಟಾಚಾರದ ಬೀಜ ಮನೆಯಲ್ಲಿಯೇ ಬಿತ್ತನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ನೆರೆಹೊರೆಯವರ ಶ್ರೀಮಂತಿಕೆಯೊಂದಿಗೆ ಹೋಲಿಕೆ ಮಾಡುವುದು ಮಕ್ಕಳಲ್ಲಿ ಹಣ ಮತ್ತು ಐಷಾರಾಮಿ ಜೀವನದ ಮೇಲಿನ ಅತಿಯಾದ ಆಸೆ ಬೆಳೆಸುತ್ತದೆ. ಇಂತಹ ಮನೋಭಾವದಲ್ಲಿ ಬೆಳೆಯುವ ಮಕ್ಕಳು ಮುಂದೆ ಜಿಲ್ಲಾಧಿಕಾರಿ, ವೈದ್ಯ ಅಥವಾ ಎಂಜಿನಿಯರ್‌ನಂತಹ ಉನ್ನತ ಸ್ಥಾನಕ್ಕೇರಿದರೂ ಸಮಾಜವನ್ನು ಶೋಷಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಆದ್ದರಿಂದ ಮಕ್ಕಳನ್ನು ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿ ಅಥವಾ ಸನ್ಯಾಸಿಗಳನ್ನಾಗಿ ರೂಪಿಸುವುದಕ್ಕಿಂತ ಮೊದಲು ಅವರನ್ನು ಉತ್ತಮ ಮನುಷ್ಯರನ್ನಾಗಿ ಬೆಳೆಸುವುದು ಪೋಷಕರ ಆದ್ಯತೆಯಾಗಬೇಕು ಎಂದು ಸಲಹೆ ನೀಡಿದ್ದಾರೆ.
ಕೇವಲ ಬಟ್ಟೆ ಅಥವಾ ವೇಷ ಬದಲಾಯಿಸಿಕೊಳ್ಳುವುದರಿಂದ ಸನ್ಯಾಸಿಯಾಗಲು ಸಾಧ್ಯವಿಲ್ಲ. ತಾನು ಮಾಡುವ ಕೆಲಸದಲ್ಲಿ ಸಂಪೂರ್ಣ ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವ ಹೊಂದಿರುವುದೇ ನಿಜವಾದ ಪವಿತ್ರತೆ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.
ಬಿಗ್ ನ್ಯೂಸ್
Bail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ನಡೆಸಲಾಗಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವಿಡಿಯೋ ಕುರಿತು ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ತನಿಖೆ ಕೈಗೊಂಡಿದ್ದರು.
ಪ್ರಕರಣದ ತನಿಖೆಯ ಭಾಗವಾಗಿ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ, ಕಾಂಗ್ರೆಸ್‌ನಿಂದ ಉಚ್ಚಾಟಿತರಾಗಿರುವ ಕೃಪಾ ಆಳ್ವಾ, ಪ್ರಜ್ವಲ್ ಪ್ರಸಾದ್, ಚಂದನ್ ಎಚ್.ಎಸ್., ಕೆ.ವಿ. ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಆರು ಮಂದಿ ಆರೋಪಿಗಳು ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಗಳ ವಿಚಾರಣೆ ನಡೆಯುವವರೆಗೆ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಆದರೆ, ನವೆಂಬರ್ 20ರಂದು ವಿಚಾರಣೆ ಪೂರ್ಣಗೊಳಿಸಿದ 66ನೇ ಸಿಸಿಎಚ್ ನ್ಯಾಯಾಲಯ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ. ಈ ಹಿಂದೆ ಮಧ್ಯಂತರ ರಕ್ಷಣೆ ನೀಡುವಾಗ, ಅಂತಿಮವಾಗಿ ನಿರೀಕ್ಷಣಾ ಜಾಮೀನು ದೊರೆಯದಿದ್ದಲ್ಲಿ ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು ಎನ್ನಲಾಗಿದೆ.
ಇದೀಗ ಜಾಮೀನು ಅರ್ಜಿಗಳು ವಜಾಗೊಂಡಿರುವುದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಿದ್ದು, ಇಲ್ಲವಾದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಎದುರಾಗಿದೆ.
-
ಮಂಗಳೂರು19 hours agoMangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
-
ಅಂತರ ರಾಜ್ಯ24 hours agoFormer CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್‌ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!
-
ಅಂತರ ರಾಜ್ಯ18 hours agoArrested-14ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕಾರರ ಬೇಡಿಕೆಯಂತೆ 25ಲಕ್ಷ ರೂ ನೀಡಿದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಮಹತ್ವದ ತಿರುವು..!
-
ಸಿನೆಮಾ24 hours agoDawood-‘ಧುರಂಧರ್ ‘ ನಲ್ಲಿ ದಾವೂದ್ ನ ತೋರಿಸಿದ ರೀತಿ ವಾಸ್ತವವಲ್ಲ…! ಮೋಸ್ಟ್ ವಾಂಟೆಡ್ ಪಾತಕಿ ಈಗ ಹೇಗಿದ್ದಾನೆ ಗೊತ್ತೇ..? ಮಾಜಿ FBI ಅಧಿಕಾರಿ ಹೇಳಿದ್ದೇನೂ..?
-
ಕಾರ್ಯಕ್ರಮಗಳು19 hours agoPuttur-ಪುತ್ತೂರಿನಲ್ಲಿ ‘ಸಾಮರಸ್ಯದ ತುಡರ್’ ಕಾರ್ಯಕ್ರಮ: ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಮನೆಗೆ ದೀಪದ ಬೆಳಕು
-
ದಕ್ಷಿಣ ಕನ್ನಡ13 hours ago
Puttur Medical College : ಮೆಡಿಕಲ್ ಕಾಲೇಜು ಆರಂಭಕ್ಕೆ ಪುತ್ತೂರು ಸಜ್ಜು; ಪ್ಲಾನ್ “ಬಿ” ಗೆ ವೇಗ; ಮೂಲಸೌಕರ್ಯ ಪರಿಶೀಲಿಸಿದ ತಜ್ಞರ ತಂಡ – ನವೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ
-
ಶಿಕ್ಷಣ18 hours agoPuttur-ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರ
-
Uncategorized20 hours agoPhilomena-ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಾಗಾರ















