Connect with us

ಶಿಕ್ಷಣ

Varshini Aalva-ದ್ವಿತೀಯ ಪಿಯುಸಿ 2ನೇ ಪರೀಕ್ಷೆಯಲ್ಲಿ 593 ಅಂಕ ಪಡೆದು ರಾಜ್ಯಕ್ಕೆ 8ನೇ ಸ್ಥಾನ ಪಡೆದ ಅಂಬಿಕಾದ ವರ್ಷಿಣಿ ಆಳ್ವ

Published

on



Ad Widget

Ad Widget

Ad Widget

Ad Widget

ದ್ವಿತೀಯ ಪಿಯುಸಿ 2ನೇ ಪರೀಕ್ಷೆಯಲ್ಲಿ ಪುತ್ತೂರಿನ ಉದ್ಯಮಿ ಶಿವರಾಮ್ ಆಳ್ವ ಪುತ್ರಿ ಅಂಬಿಕಾ ನೆಲ್ಲಿಕಟ್ಟೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವರ್ಷಿಣಿ ಆಳ್ವ ಅಮೋಘ ಸಾಧನೆ ಮೆರೆದಿದ್ದಾರೆ. ಪ್ರಥಮ ಪರೀಕ್ಷೆಯಲ್ಲಿ 584 ಅಂಕ ಪಡೆದ ವರ್ಷಿಣಿ ಆಳ್ವ ಎರಡನೇ ಪರೀಕ್ಷೆ ಬರೆದು 593 ಅಂಕ ಪಡೆದಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ದ್ವಿತೀಯ ಪಿಯುಸಿ 2ನೇ ಪರೀಕ್ಷೆಯಲ್ಲಿ ಪುತ್ತೂರಿನ ಉದ್ಯಮಿ ಶಿವರಾಮ್ ಆಳ್ವ ಪುತ್ರಿ ಅಂಬಿಕಾ ನೆಲ್ಲಿಕಟ್ಟೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವರ್ಷಿಣಿ ಆಳ್ವ ಅಮೋಘ ಸಾಧನೆ ಮೆರೆದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಪ್ರಥಮ ಪರೀಕ್ಷೆಯಲ್ಲಿ 584 ಅಂಕ ಪಡೆದ ವರ್ಷಿಣಿ ಆಳ್ವ ಎರಡನೇ ಪರೀಕ್ಷೆ ಬರೆದು 593 ಅಂಕ ಪಡೆದಿದ್ದಾರೆ.

Ad Widget

Ad Widget <> Ad Widget

ಇವರಿಗೆ ಎರಡನೇ ಪರೀಕ್ಷೆಯಲ್ಲಿ ಇಂಗ್ಲೀಷ್ ನಲ್ಲಿ 96, ಹಿಂದಿಯಲ್ಲಿ 99, ಫಿಸಿಕ್ಸ್ ಮತ್ತು ಬಯೋಲಜಿಯಲ್ಲಿ 100, ಕೆಮೆಸ್ಟ್ರಿ ಮತ್ತು ಮೆಥೆಮೆಟಿಕ್ಸ್ ನಲ್ಲಿ 99 ಅಂಕ ಪಡೆದು ರಾಜ್ಯಕ್ಕೆ ಎಂಟನೇ ಸ್ಥಾನ ಪಡೆದಿದ್ದಾರೆ.



Ad Widget

ಎಸ್ ಎಸ್ ಎಲ್ ಸಿಯಲ್ಲಿ ಬೆಥನಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಶಾಲೆಗೆ ಟಾಪರ್ ಆಗಿದ್ದಾರೆ.

Ad Widget

Ad Widget

ವರ್ಷಿಣಿ ಆಳ್ವ ಇವರು ಉದ್ಯಮಿ, ಕಾಂಗ್ರೆಸ್ ಮುಖಂಡ ಕುರಿಯ ಬಲ್ಲಮಂಜಗುತ್ತು ಶಿವರಾಮ್ ಆಳ್ವ ಹಾಗೂ ಸೀಮಾ ದಂಪತಿಯ ಪುತ್ರಿ.

Ad Widget
Click to comment

Leave a Reply

ಶಿಕ್ಷಣ

Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ಕನ್ನಡ ಭಾಷಾ ಕಾರ್ಯಾಗಾರ

Published

on



Ad Widget

Ad Widget

Ad Widget

Ad Widget

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಅ 7 ರಂದು ಭಾಷಣ ಕಲೆ, ಕವನ ರಚನೆ, ಕಥಾ ರಚನೆ, ಕಾರ್ಯಕ್ರಮ ನಿರೂಪಣೆ ಹಾಗೂ ಪತ್ರಿಕಾ ವರದಿಯ ಕುರಿತು ಕಾರ್ಯಾಗಾರವು ಕಾಲೇಜು ಸಭಾಂಗಣದಲ್ಲಿ ನಡೆಯಿತು.

Ad Widget

Ad Widget

Ad Widget

Ad Widget

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಅ 7 ರಂದು ಭಾಷಣ ಕಲೆ, ಕವನ ರಚನೆ, ಕಥಾ ರಚನೆ, ಕಾರ್ಯಕ್ರಮ ನಿರೂಪಣೆ ಹಾಗೂ ಪತ್ರಿಕಾ ವರದಿಯ ಕುರಿತು ಕಾರ್ಯಾಗಾರವು ಕಾಲೇಜು ಸಭಾಂಗಣದಲ್ಲಿ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಸುಳ್ಯದ ಸಾಹಿತಿ ಹಾಗೂ ಡಿಜಿಟಲ್ ಆರ್ಟ್ ನ ಉದಯ ಭಾಸ್ಕರ್ ಮಾತನಾಡಿ, ಸಾಹಿತ್ಯವು ನಮ್ಮೊಳಗಿನಿಂದ ಅಭಿವ್ಯಕ್ತಿಗೊಳ್ಳುವ ಮಾಧ್ಯಮ. ಸಾಹಿತ್ಯ ಲೋಕದ ಬರಹಗಳು ಮನುಷ್ಯನ ಕಲ್ಪನೆ ಮತ್ತು ಚಿಂತನೆಗಳ ಫಲಶ್ರುತಿ. ಸಾಹಿತಿಗೆ ಮುಖ್ಯವಾಗಿ ಶಬ್ದ ಸಂಪತ್ತು ಇರಬೇಕು. ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Ad Widget

Ad Widget <> Ad Widget

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಪ್ರತಿಯೊಂದು ಭಾಷೆಗೂ ಸಮಾನ ಗೌರವವನ್ನು ನೀಡುವುದು ಅತ್ಯಂತ ಅಗತ್ಯವಿದ್ದು, ವಿವಿಧ ಭಾಷೆಗಳನ್ನು ಕಲಿಯುವುದರಿಂದ ನಮ್ಮ ಯೋಚನಾ ಶಕ್ತಿ ವೃದ್ಧಿಸುತ್ತದೆ. ಕನ್ನಡ ಒಂದು ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಕನ್ನಡವನ್ನು ಕಲಿಯುವುದರ ಜೊತೆಗೆ, ಕನ್ನಡ ಭಾಷೆಯ ಅಭಿವೃದ್ಧಿಗೆ ನಿಮ್ಮ ಕೊಡುಗೆಗಳನ್ನು ನೀಡಬೇಕೆಂದು ತಿಳಿಸಿದರು.



Ad Widget

ವೇದಿಕೆಯಲ್ಲಿ ಕನ್ನಡ ಸಂಘದ ನಿರ್ದೇಶಕರಾದ ಉಷಾ ಎ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ವರ್ಗ  ಉಪಸ್ಥಿತರಿದ್ದರು.

Ad Widget

Ad Widget

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಸಿಂಚನ ಸ್ವಾಗತಿಸಿ, ಗೌತಮ್ ವಂದಿಸಿ, ಗ್ರೀಷ್ಮ ಕಾರ್ಯಕ್ರಮ ನಿರೂಪಿಸಿದರು.

Ad Widget
Continue Reading

ಶಿಕ್ಷಣ

Vivekananda-ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಶಾಲಾ ರಕ್ಷಕ-ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿಣಿ ಸಮಿತಿಯ ಸಭೆಯು ದಿನಾಂಕ 02-10-2026 ರಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶಿವಪ್ರಕಾಶ್ ಎಂ ಅವರ ಅಧ್ಯಕ್ಷತೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಭಾಸ್ಕರ ಬಲ್ಯಾಯರವರ ಉಪಸ್ಥಿತಿಯಲ್ಲಿ ನಡೆಯಿತು.

Ad Widget

Ad Widget

Ad Widget

Ad Widget

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿಣಿ ಸಮಿತಿಯ ಸಭೆಯು ದಿನಾಂಕ 02-10-2026 ರಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶಿವಪ್ರಕಾಶ್ ಎಂ ಅವರ ಅಧ್ಯಕ್ಷತೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಭಾಸ್ಕರ ಬಲ್ಯಾಯರವರ ಉಪಸ್ಥಿತಿಯಲ್ಲಿ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ಸಭೆಯಲ್ಲಿ 2026-27 ನೇ ಶೈಕ್ಷಣಿಕ ಸಾಲಿನ ರಕ್ಷಕ- ಶಿಕ್ಷಕ ಸಂಘದ ಪದಾಧಿಕಾರಿಗಳಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.

Ad Widget

Ad Widget <> Ad Widget

ಅಧ್ಯಕ್ಷರಾಗಿ ಹತ್ತನೆಯ ತರಗತಿಯ ವಿದ್ಯಾರ್ಥಿಯ ಪೋಷಕರದ ಪ್ರತಿಭಾರವರು ಆಯ್ಕೆಯಾದರು.



Ad Widget

ಉಪಾಧ್ಯಕ್ಷರುಗಳಾಗಿ ಚೇತನ, ರವೀಂದ್ರ, ವಿದ್ಯಾ ಅವರುಗಳು ಆಯ್ಕೆಯಾದರು.

Ad Widget

Ad Widget

2025-2026 ನೇ ಸಾಲಿನ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ ಅವರು ನಿಯೋಜಿತ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ, ನೂತನ ತಂಡಕ್ಕೆ ಶುಭಾಶಯಗಳನ್ನು ಕೋರಿದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಸಮರ್ಪಿಸಿ ಸಂಸ್ಥೆಯ ಶ್ರೇಯಾಭಿವೃದ್ಧಿಗೆ ಭರವಸೆಯ ಮಾತುಗಳನ್ನಾಡಿದರು.

ಸಭೆಯಲ್ಲಿ ಕಾರ್ಯಕಾರಿಣಿ ಸಮಿತಿಯ ಪ್ರತಿನಿಧಿಗಳು ಹಾಗೂ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Ad Widget
Continue Reading

ಶಿಕ್ಷಣ

Vivekananda-ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆ ವತಿಯಿಂದ ಕ್ಯಾಂಪಸ್ ಸಂದರ್ಶನ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆಯ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ 14 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆಯ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ 14 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಕಂಪನಿಯ ಹೆಚ್.ಆರ್. ಅಧಿಕಾರಿ ಸುನಿಲ್ ಹಾಗೂ ನೇಮಕಾತಿ ಅಧಿಕಾರಿ ಸಂತೋಷ್.ವಿ.ಜೋಸ್ ಸಂದರ್ಶನ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Ad Widget

Ad Widget <> Ad Widget

ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆಗಿರುವ ಸಂತೋಷ್.ವಿ.ಜೋಸ್ ಅವರು ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಜೀವನ ರೂಪಿಸಿಕೊಳ್ಳುವ ಕುರಿತು ಮತ್ತು ಭವಿಷ್ಯದ ಅವಕಾಶಗಳ ಬಗ್ಗೆ ವಿವರಿಸಿದರು.



Ad Widget

ಈ ಸಂದರ್ಭದಲ್ಲಿ ಸಂಸ್ಥೆಯ ಪ್ಲೇಸ್‌ಮೆಂಟ್ ವಿಭಾಗದ ಅಧಿಕಾರಿ ಉಷಾಕಿರಣ್ ಹಾಗೂ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading