ಮೇ 9ರಂದು ಒಂದು ವಾರದ ಮಟ್ಟಿಗೆ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಗಿತ್ತು. ಶನಿವಾರ ಯುದ್ಧ ಸ್ವರೂಪದ […]" /> ಮೇ 9ರಂದು ಒಂದು ವಾರದ ಮಟ್ಟಿಗೆ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಗಿತ್ತು. ಶನಿವಾರ ಯುದ್ಧ ಸ್ವರೂಪದ […]"> IPL-ಮೇ16 -17ರಂದು ಸ್ಥಗಿತಗೊಂಡಿದ್ದ ಐಪಿಎಲ್‌ ಪುನರಾರಂಭ ಸಾಧ್ಯತೆ ; ಫೈನಲ್ ಪಂದ್ಯ ಕೋಲ್ಕತ್ತದಿಂದ ಸ್ಥಳಾಂತರ? - Nikhara News | Kannada News Website
Connect with us

ಕ್ರೀಡೆ

IPL-ಮೇ16 -17ರಂದು ಸ್ಥಗಿತಗೊಂಡಿದ್ದ ಐಪಿಎಲ್‌ ಪುನರಾರಂಭ ಸಾಧ್ಯತೆ ; ಫೈನಲ್ ಪಂದ್ಯ ಕೋಲ್ಕತ್ತದಿಂದ ಸ್ಥಳಾಂತರ?

Published

on

Ad Widget

Ad Widget

Ad Widget

Ad Widget

ಭಾರತ-ಪಾಕಿಸ್ತಾನ ಸೇನಾ ಸಂಘರ್ಷದ ಕಾರಣ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಬರುವ ಮೇ16 ಅಥವಾ 17ರಂದು ಆರಂಭಗೊಳ್ಳುವ ಸಾಧ್ಯತೆಯಿದ್ದು, ಫೈನಲ್ ಪಂದ್ಯವನ್ನು ಕೋಲ್ಕತ್ತದಿಂದ ಸ್ಥಳಾಂತರಿಸುವ ಸಂಭವವಿದೆ.

Ad Widget

Ad Widget

Ad Widget

Ad Widget

ನವದೆಹಲಿ: ಭಾರತ-ಪಾಕಿಸ್ತಾನ ಸೇನಾ ಸಂಘರ್ಷದ ಕಾರಣ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಬರುವ ಮೇ16 ಅಥವಾ 17ರಂದು ಆರಂಭಗೊಳ್ಳುವ ಸಾಧ್ಯತೆಯಿದ್ದು, ಫೈನಲ್ ಪಂದ್ಯವನ್ನು ಕೋಲ್ಕತ್ತದಿಂದ ಸ್ಥಳಾಂತರಿಸುವ ಸಂಭವವಿದೆ.

Ad Widget

Ad Widget alt="Ad Widget"/>

Ad Widget

ಮೇ 9ರಂದು ಒಂದು ವಾರದ ಮಟ್ಟಿಗೆ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಗಿತ್ತು. ಶನಿವಾರ ಯುದ್ಧ ಸ್ವರೂಪದ ಸಂಘರ್ಷ ಕೊನೆಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ಲೀಗ್ ಮತ್ತೆ ಮುಂದುವರಿಯಲು ಅವಕಾಶವಾಗಿದೆ.

Ad Widget

Ad Widget <> Ad Widget

ಭಾನುವಾರ ಐಪಿಎಲ್ ಆಡಳಿತ ಮಂಡಳಿ ಮತ್ತು ಬಿಸಿಸಿಐ ಅಧಿಕಾರಿಗಳು ಲೀಗ್ ಪುನರಾರಂಭಕ್ಕೆ ಸಂಬಂಧಿಸಿ ಯೋಜನೆ ರೂಪಿಸಲು ಸಭೆ ಸೇರಿದ್ದರು. ‘ಸೂಕ್ತ ವೇಳಾಪಟ್ಟಿ ರೂಪಿಸಲು ಮಂಡಳಿಯು ಕಾರ್ಯಪ್ರವೃತ್ತವಾಗಿದೆ’ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ ಶುಕ್ಲಾ ತಿಳಿಸಿದರು.

‘ಐಪಿಎಲ್‌ಗೆ ಸಂಬಂಧಿಸಿ ಇದುವವರೆಗೆ ನಿರ್ಧಾರ ಕೈಗೊಂಡಿಲ್ಲ. ಪರಿಹಾರ ಕಂಡುಕೊಳ್ಳಲು ಮಂಡಳಿ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ. ಬಿಸಿಸಿಐ ಕಾರ್ಯದರ್ಶಿ, ಐಪಿಎಲ್‌ ಅಧ್ಯಕ್ಷರು ಪ್ರಾಂಚೈಸಿಗಳು ಮತ್ತು ಇತರ ಭಾಗೀಕದಾರರ ಜೊತೆ ಮಾತುಕತೆಯಲ್ಲಿ ಇದ್ದಾರೆ. ಶೀಘ್ರವೇ ನಿರ್ಧಾರಕ್ಕೆ ಬರಲಾಗುವುದು. ಸಾಧ್ಯವಾದಷ್ಟು ಬೇಗ ಟೂರ್ನಿ ಆರಂಭಕ್ಕೆ ಪ್ರಯತ್ನ ನಡೆದಿದೆ’ ಎಂದರು.

Ad Widget

Ad Widget

ಮೇ 9ರಂದು ನಿಗದಿಯಾಗಿದ್ದ ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದೊಂದಿಗೆ ಐಪಿಎಲ್ ಪುನರಾರಂಭಗೊಳ್ಳಲಿದೆ ಎಂದು ಮೂಲವೊಂದು ತಿಳಿಸಿದೆ. ಎಲ್ಲ ತಂಡಗಳಿಗೆ ಆಟಗಾರರನ್ನು ಕರೆಸಿಕೊಳ್ಳುವಂತೆ ತಿಳಿಸಲಾಗಿದೆ. ಅಂತಿಮ ವೇಳಾಪಟ್ಟಿ ಸೋಮವಾರ ಹಂಚಿಕೊಳ್ಳಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

‘ಉಳಿದ ಎಲ್ಲ ಪಂದ್ಯಗಳು ನಾಲ್ಕು ಕ್ರೀಡಾಂಗಣಗಳಲ್ಲಿ ನಡೆಯಲಿವೆ. ದೆಹಲಿ ಮತ್ತು ಧರ್ಮಶಾಲಾಕ್ಕೆ ಉಳಿದ ಪಂದ್ಯಗಳ ಆತಿಥ್ಯ ಲಭ್ಯವಾಗುವುದಿಲ್ಲ. ಈ ಕ್ರೀಡಾಂಗಣದಿಂದ ಎಲ್ಲ ಸಲಕರಣೆಗಳನ್ನು ತೆಗೆದುಹಾಕಲಾಗಿದೆ’ ಎಂದೂ ತಿಳಿಸಿದೆ.

ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳ ಸ್ಥಳದಲ್ಲಿ ಬದಲಾವಣೆಯಾಗುವುದಿಲ್ಲ. ಈ ಪಂದ್ಯಗಳು ನಿಗದಿಯಂತೆ ಹೈದರಾಬಾದಿನಲ್ಲೇ ನಡೆಯಲಿವೆ. ಆದರೆ ಫೈನಲ್ ಪಂದ್ಯದ ಆತಿಥ್ಯ ಕೋಲ್ಕತ್ತದ ಬದಲು ಬೇರೆ ಕಡೆ ನಡೆಯುವ ಸಾಧ್ಯತೆಯಿದೆ. ಅಂದು ಕೋಲ್ಕತ್ತದಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಒಂದು ವೇಳೆ ಫೈನಲ್ ಸ್ಥಳ ಬದಲಾದರೆ ಅದು ಅಹಮದಾಬಾದಿನಲ್ಲಿ ನಿಗದಿಯಾಗಲಿದೆ ಎಂದು ಮೂಲ ತಿಳಿಸಿದೆ.

ಉಳಿದ ಪಂದ್ಯಗಳ ಪುನರಾರಂಭಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರಕ್ಕೆ ಬರಲು ಇನ್ನು ಕೆಲ ದಿನಗಳಲ್ಲೇ ಮಂಡಳಿಯು ಫ್ರಾಂಚೈಸಿಗಳು, ಪ್ರಸಾರಕ ಸಂಸ್ಥೆ, ಪ್ರಾಯೋಜಕರು ಮತ್ತು ಆತಿಥ್ಯ ವಹಿಸುವ ರಾಜ್ಯ ಸಂಸ್ಥೆಗಳ ಜೊತೆ ಸಮಾಲೋಚನೆ ಆರಂಭಿಸಲಿದೆ.

ಪಂಜಾಬ್ ಕಿಂಗ್ಸ್-ಡೆಲ್ಲಿ ಕ್ಯಾಪಿಟಲ್ಸ್ ಗೆ ತಲಾ ಒಂದೊಂದು ಅಂಕ?
ಗಡಿಯಲ್ಲಿ ಉದ್ವಿಗ್ನತೆಯ ಕಾರಣ, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ಧರ್ಮಶಾಲಾದಲ್ಲಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಈ ಎರಡೂ ತಂಡಹಳಿಗಹೆ ತಲಾ ಒಂದೊಂದು ಪಾಯಿಂಟ್ ನೀಡುವ ಸಾಧ್ಯತೆಯಿದೆ. ತಂಡಗಳು ಅಂದು ಜಲಂಧರ್‌ಗೆ ಬಸ್‌ನಲ್ಲಿ ತೆರಳಿ ಡೆಲ್ಲಿಗೆ ರೈಲಿನ ಮೂಲಕ ದೆಹಲಿಗೆ ತೆರಳಿದ್ದವು.

ಕೇವಲ ನಾಲ್ಕು ಕ್ರೀಡಾಂಗಣಗಳಿಗೆ ಮಾತ್ರ ಉಳಿದ 16 ಪಂದ್ಯಗಳ ಆತಿಥ್ಯ ವಹಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತವರು ಪಂದ್ಯಗಳನ್ನು ಕಳೆದುಕೊಳ್ಳಲಿವೆ. ಇದರ ಅರ್ಥ ಲೀಗ್‌ನ ಉಳಿದ ಪಂದ್ಯಗಳು ಹೈದರಾಬಾದ್, ಚೆನ್ನೈ, ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ.

ಚೆನ್ನೈ, ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ತಂಡಗಳು ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿವೆ. ಏಳು ತಂಡಗಳು ನಾಲ್ಕು ಪ್ಲೇ ಆಫ್ ಸ್ಥಾನಗಳಿಗೆ ಪೈಪೋಟಿಯಲ್ಲಿವೆ.

ಸದ್ಯ ಗುಜರಾತ್ ಟೈಟನ್ಸ್ (16 ಅಂಕ, ನೆಟ್‌ರನ್ ರೇಟ್ 0.793) ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (16 ಪಾಯಿಂಟ್ಸ್, 0.482), ಪಂಜಾಬ್ ಕಿಂಗ್ಸ್ (15), ಮುಂಬೈ ಇಂಡಿಯನ್ಸ್ (14), ಡೆಲ್ಲಿ ಕ್ಯಾಪಿಟಲ್ಸ್ (13), ಕೋಲ್ಕತ್ತ ನೈಟ್ ರೈಡರ್ಸ್ (11) ಮತ್ತು ಲಖನೌ ಸೂಪರ್ ಜೈಂಟ್ಸ್ (10) ನಂತರದ ಸ್ಥಾನಗಳಲ್ಲಿವೆ.

Ad Widget
Click to comment

Leave a Reply

ಕ್ರೀಡೆ

Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಭುವನ್‌ರಾಮ್ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಟಿಯು ತಂಡಕ್ಕೆ ಆಯ್ಕೆ

Published

on

Ad Widget

Ad Widget

Ad Widget

Ad Widget

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಭುವನ್‌ರಾಮ್ ಜಗದೀಶ್ ಭಂಡಾರಿ ಇವರು ಅಖಿಲ ಭಾರತ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ 75 ಕೆಜಿ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಭುವನ್‌ರಾಮ್ ಜಗದೀಶ್ ಭಂಡಾರಿ ಇವರು ಅಖಿಲ ಭಾರತ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ 75 ಕೆಜಿ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

Ad Widget

Ad Widget alt="Ad Widget"/>

Ad Widget

ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿರುವ ಇವರು ಚೆನ್ನೈನ ವಿನಾಯಕ ಮಿಶನ್ಸ್ ರೀಸರ್ಚ್ ಫೌಂಡೇಶನ್ ಆಶ್ರಯದಲ್ಲಿ ನವೆಂಬರ್ 21 ರಿಂದ 23 ರವರೆಗೆ ನಡೆಯುವ ಈ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ.

Ad Widget

Ad Widget <> Ad Widget

ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ತಿಳಿಸಿದ್ದಾರೆ.

Ad Widget
Continue Reading

ಕ್ರೀಡೆ

IPL 2027-ಐಪಿಎಲ್ 2027 ಮಿನಿ ಹರಾಜು ಡಿ.16ಕ್ಕೆ ಫಿಕ್ಸ್: ಆರ್‌ಸಿಬಿ ಸೇರಿ 10 ತಂಡಗಳ ಪರ್ಸ್ ವಿವರ ಇಲ್ಲಿದೆ..

Published

on

Ad Widget

Ad Widget

Ad Widget

Ad Widget

ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು, ನ.18: ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.

Ad Widget

Ad Widget alt="Ad Widget"/>

Ad Widget

ಲಕ್ನೋ ಸೂಪರ್ ಜೈಂಟ್ಸ್ ಬಳಿ ಅತಿ ಹೆಚ್ಚು ಹಣ!
ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅತಿ ಹೆಚ್ಚು ಹಣದೊಂದಿಗೆ ಕಣಕ್ಕಿಳಿಯಲಿದೆ. ಆಟಗಾರರನ್ನು ಉಳಿಸಿಕೊಂಡ ಬಳಿಕ ತಂಡದ ಪರ್ಸ್‌ನಲ್ಲಿ ಬರೋಬ್ಬರಿ ₹47.45 ಕೋಟಿ ಉಳಿದಿದೆ.

Ad Widget

Ad Widget <> Ad Widget

ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ₹40.15 ಕೋಟಿ ಹಣದೊಂದಿಗೆ ನಂತರದ ಸ್ಥಾನಗಳಲ್ಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಬಳಿ ₹39.50 ಕೋಟಿ ಹಾಗೂ ಮುಂಬೈ ಇಂಡಿಯನ್ಸ್ ಬಳಿ ₹32.60 ಕೋಟಿ ಹಣವಿದೆ.

ಇನ್ನೊಂದೆಡೆ, ಗುಜರಾತ್ ಟೈಟಾನ್ಸ್ ತಂಡದ ಬಳಿ ಕೇವಲ ₹8.75 ಕೋಟಿ ಮಾತ್ರ ಉಳಿದಿದ್ದು, 10 ತಂಡಗಳ ಪೈಕಿ ಅತ್ಯಂತ ಕಡಿಮೆ ಮೊತ್ತ ಹೊಂದಿರುವ ತಂಡವಾಗಿದೆ.

Ad Widget

Ad Widget

ಡೆಲ್ಲಿ, ಮುಂಬೈಗೆ ಹೆಚ್ಚು ಆಟಗಾರರ ಖರೀದಿ ಅವಕಾಶ
ಖಾಲಿ ಇರುವ ಆಟಗಾರರ ಸ್ಥಾನಗಳ ಲೆಕ್ಕಾಚಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಂಚೂಣಿಯಲ್ಲಿವೆ. ಈ ಎರಡೂ ತಂಡಗಳು ತಲಾ 9 ಆಟಗಾರರನ್ನು ಖರೀದಿಸಲು ಅವಕಾಶ ಹೊಂದಿವೆ.

ಕೋಲ್ಕತ್ತಾ ನೈಟ್ ರೈಡರ್ಸ್ 8, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಲಾ 7 ಆಟಗಾರರನ್ನು ಖರೀದಿಸಬಹುದು. ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಲ್ಲಿ ತಲಾ 6 ಸ್ಥಾನಗಳು ಖಾಲಿಯಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6 ಆಟಗಾರರನ್ನು ಖರೀದಿಸುವ ಅವಕಾಶವಿದ್ದು, ಗುಜರಾತ್ ಟೈಟಾನ್ಸ್ ತಂಡದಲ್ಲಿ ಕೇವಲ 3 ಸ್ಥಾನಗಳು ಮಾತ್ರ ಖಾಲಿಯಿವೆ.

10 ತಂಡಗಳ ಪರ್ಸ್ ಮೊತ್ತ ಮತ್ತು ಖಾಲಿ ಸ್ಥಾನಗಳ ವಿವರ
ತಂಡ ಉಳಿದ ಹಣ ಖಾಲಿ ಸ್ಥಾನ ವಿದೇಶಿ ಆಟಗಾರರ ಸ್ಥಾನ
ಲಕ್ನೋ ಸೂಪರ್ ಜೈಂಟ್ಸ್ ₹47.45 ಕೋಟಿ 7 3
ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ 8 3
ಸನ್‌ರೈಸರ್ಸ್ ಹೈದರಾಬಾದ್ ₹40.15 ಕೋಟಿ 7 3
ಡೆಲ್ಲಿ ಕ್ಯಾಪಿಟಲ್ಸ್ ₹39.50 ಕೋಟಿ 9 4
ಮುಂಬೈ ಇಂಡಿಯನ್ಸ್ ₹32.60 ಕೋಟಿ 9 2
ಚೆನ್ನೈ ಸೂಪರ್ ಕಿಂಗ್ಸ್ ₹28.05 ಕೋಟಿ 6 2
ರಾಜಸ್ಥಾನ್ ರಾಯಲ್ಸ್ ₹27.05 ಕೋಟಿ 6 2
ಪಂಜಾಬ್ ಕಿಂಗ್ಸ್ ₹18.60 ಕೋಟಿ 6 2
ರಾಯಲ್ ಚಾಲೆಂಜರ್ಸ್ ಬೆಂಗಳೂರು ₹14.15 ಕೋಟಿ 6 1
ಗುಜರಾತ್ ಟೈಟಾನ್ಸ್ ₹8.75 ಕೋಟಿ 3 2

ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು
ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16, 2026ರಂದು ಗೋವಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ 10 ತಂಡಗಳು ತಮ್ಮ ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಖರೀದಿಸಲು ಪೈಪೋಟಿ ನಡೆಸಲಿವೆ.

2025ರಿಂದ 2027ರವರೆಗಿನ ಮೂರು ವರ್ಷಗಳ ಅವಧಿಯ ಆರಂಭದಲ್ಲಿ ಪ್ರತಿ ತಂಡಕ್ಕೆ ಆಟಗಾರರ ಖರೀದಿಗಾಗಿ ₹120 ಕೋಟಿ ಪರ್ಸ್ ನಿಗದಿಪಡಿಸಲಾಗಿತ್ತು. ನಿಯಮದ ಪ್ರಕಾರ ಪ್ರತಿ ಮಿನಿ ಹರಾಜಿಗೂ ಮುನ್ನ ಈ ಮೊತ್ತಕ್ಕೆ ಹೆಚ್ಚುವರಿಯಾಗಿ ₹5 ಕೋಟಿ ಸೇರ್ಪಡೆಯಾಗುತ್ತದೆ. ಹೀಗಾಗಿ 2027ರ ಮಿನಿ ಹರಾಜಿನಲ್ಲಿ ಪ್ರತಿ ತಂಡದ ಒಟ್ಟು ಪರ್ಸ್ ಮೊತ್ತ ₹130 ಕೋಟಿಗೆ ಏರಿಕೆಯಾಗಲಿದೆ.

ಡಿಸೆಂಬರ್ 16ರಂದು ನಡೆಯಲಿರುವ ಹರಾಜಿನಲ್ಲಿ ಯಾವ ತಂಡ ಯಾವ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಮತ್ತು ಯಾವ ತಂಡ ಬಲಿಷ್ಠ ಪಡೆಯನ್ನು ಕಟ್ಟಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿದೆ.

Ad Widget
Continue Reading

ಅಂತರ ರಾಜ್ಯ

Mohammed Shami: ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ

Published

on

Ad Widget

Ad Widget

Ad Widget

Ad Widget

ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಶಮಿ, ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಶಮಿ, ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ.

Ad Widget

Ad Widget alt="Ad Widget"/>

Ad Widget

‘ನಾನು ಬಿಳಿ ಜೆರ್ಸಿಗೆ ವಿದಾಯ ಹೇಳುತ್ತಿದ್ದೇನೆ. ಆದರೆ ಅದರೊಂದಿಗೆ ಬೆಸೆದುಕೊಂಡಿರುವ ನೆನಪುಗಳಿಗೆ ಎಂದಿಗೂ ವಿದಾಯ ಹೇಳುವುದಿಲ್ಲ’ ಎಂದು ಶಮಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Ad Widget

Ad Widget <> Ad Widget

ಭಾರತದ ಟೆಸ್ಟ್ ಜೆರ್ಸಿಯನ್ನು ಮೊದಲ ಬಾರಿಗೆ ಧರಿಸಿದ ಕ್ಷಣವನ್ನು ನೆನಪಿಸಿಕೊಂಡಿರುವ ಅವರು, ‘ಮೊದಲ ಬಾರಿಗೆ ಭಾರತದ ಟೆಸ್ಟ್ ಜೆರ್ಸಿ ಧರಿಸಿದಾಗ ನನ್ನಲ್ಲಿದ್ದದ್ದು ಒಂದೇ ಕನಸು. ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದಾಗಿತ್ತು. ಅಂದಿನಿಂದ ಪ್ರತಿಯೊಂದು ವಿಕೆಟ್, ಪ್ರತಿಯೊಂದು ಹೋರಾಟ, ಪ್ರತಿಯೊಂದು ಗಾಯ ಹಾಗೂ ಪ್ರತಿಯೊಂದು ಪುನರಾಗಮನವೂ ನನಗೆ ಹೊಸ ಪಾಠ ಕಲಿಸಿದೆ’ ಎಂದು ಬರೆದುಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನನ್ನ ಜೀವನದ ವಿಶೇಷ ಭಾಗವಾಗಿತ್ತು
‘ನನ್ನ ಪಾಲಿಗೆ ಟೆಸ್ಟ್ ಕ್ರಿಕೆಟ್ ಕೇವಲ ಒಂದು ಮಾದರಿಯಾಗಿರಲಿಲ್ಲ. ಅದು ನನ್ನ ಜೀವನದ ಅತ್ಯಂತ ವಿಶೇಷ ಭಾಗವಾಗಿತ್ತು. ಇಂದು ಭಾರವಾದ ಹೃದಯ ಹಾಗೂ ಅಸಂಖ್ಯಾತ ಸುಂದರ ನೆನಪುಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದೇನೆ’ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

Ad Widget

Ad Widget

ಇದೇ ವೇಳೆ, ತಮ್ಮ ಕ್ರಿಕೆಟ್ ಪಯಣದಲ್ಲಿ ಬೆಂಬಲವಾಗಿ ನಿಂತ ಸಹ ಆಟಗಾರರು, ತರಬೇತುದಾರರು ಹಾಗೂ ಕುಟುಂಬ ಸದಸ್ಯರಿಗೆ ಶಮಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ಒಳ್ಳೆಯ ಹಾಗೂ ಕಷ್ಟದ ಸಮಯಗಳಲ್ಲೂ ತಮ್ಮ ಮೇಲೆ ನಂಬಿಕೆ ಇಟ್ಟ ಲಕ್ಷಾಂತರ ಭಾರತೀಯ ಅಭಿಮಾನಿಗಳಿಗೂ ಕೃತಜ್ಞತೆ ತಿಳಿಸಿದ್ದಾರೆ.

ತಮ್ಮ ಪ್ರತಿಭೆಯನ್ನು ಗುರುತಿಸಿ, ಬೆಳೆಯಲು ಅವಕಾಶ ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಸಂಸ್ಥೆಗಳಿಗೂ ಧನ್ಯವಾದ ಅರ್ಪಿಸಿದ್ದಾರೆ. ಈ ಸಂಸ್ಥೆಗಳು ನೀಡಿದ ಬೆಂಬಲ ಹಾಗೂ ವಿಶ್ವಾಸ ಸದಾ ತಮ್ಮ ಪಾಲಿಗೆ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ.

Ad Widget
Continue Reading
Uncategorized6 minutes ago

Vitla-ವಿಟ್ಲ: ನ.25ರಂದು ಮೈತ್ರೇಯಿ ಆಯುರ್ವೇದ ಗುರುಕುಲಂ ಮತ್ತು ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭ; 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭ; ಆಯುರ್ವೇದದ ಅಮೂಲ್ಯವಾದ ಸನಾತನ ಜ್ಞಾನವನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಅಜೇಯ ಟ್ರಸ್ಟ್‌ನ ಪ್ರಮುಖ ಉದ್ದೇಶವಾಗಿದೆ- ಡಾ. ಸುಧಾರಾವ್

ಬಿಗ್ ನ್ಯೂಸ್33 minutes ago

Rakesh Shetty-ಸ್ಟಿಂಗ್ ಹೆಸರಿನಲ್ಲಿ ಜನಪ್ರತಿನಿಧಿಗಳ ಬ್ಲ್ಯಾಕ್‌ಮೇಲ್ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒಳಾಡಳಿತ ಇಲಾಖೆಯಿಂದ ಡಿಜಿಪಿಗೆ ಪತ್ರ

ಬಿಗ್ ನ್ಯೂಸ್5 hours ago

Railway-ರೈಲ್ವೆ ಗುಂಪು ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ: ಬರ್ತ್‌ಗಳ ಸಂಖ್ಯೆಗೆ ಮಿತಿ ರದ್ದು, ಬೆಳಗ್ಗೆ 9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ..!

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!