Uncategorized
ರಾತ್ರಿ ಬೀಳುವ ಪ್ರತಿ ಕನಸಿಗೂ ಅರ್ಥವಿದೆ- ಪ್ರಾಣಿಗಳ ಕನಸು ಬೀಳುವವರು ಈ ಲೇಖನವನ್ನೊಮ್ಮೆ ಓದಿ

ನಿಮಗೆ ಬೀಳುವ ಕನಸುಗಳಲ್ಲಿ ಬರುವ ಆಯಾ ಪ್ರಾಣಿ ಏನನ್ನು ಸೂಚಿಸುತ್ತೆ. ಅನ್ನೋದನ್ನ ತಿಳಿಯೋಣ ಬನ್ನಿ.ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ನಿಮಗೆ ಏನಾಗುತ್ತೆ ಗೊತ್ತಾ.ಕನಸುಗಳು ಎಲ್ಲರಿಗೂ ಬೀಳೋದು ಸಹಜ. ಇದು ಪ್ರತಿಯೊಬ್ಬರಿಗೂ ಜರುಗುವ ಸಂಗತಿ.ಪ್ರತಿಯೊಬ್ಬ ಮನುಷ್ಯ ರಾತ್ರಿ ಕನಸಿನಲ್ಲಿ 9 ನಿಮಿಷಗಳಿಂದ ಎರಡು ಗಂಟೆಗಳವರೆಗೆ ಪ್ರತಿ ರಾತ್ರಿ ಕನಸಿನಲ್ಲಿ ಜೀವಿಸುತ್ತಾ ಇರುತ್ತಾನಂತೆ.ಈ ಕನಸಿನಲ್ಲಿ ನಾವು ಸ್ನೇಹಿತರು,ಪ್ರೀತಿ ಪ್ರೇಮ ಮಾಡುವವರು,ಪ್ರಾಣಿಗಳು ಬರಬಹುದು. ವಿದೇಶದಲ್ಲಿ ಸಂದರ್ಶನಗಳು ಜರುಗಬಹುದು.ದೇವರ ಶ್ರೀ ಕ್ಷೇತ್ರ ದರ್ಶನ ಹೇಗೆ ಇತ್ಯಾದಿ ಇತ್ಯಾದಿ ಅನೇಕ ಕನಸುಗಳು ಬೀಳೋದು ಸಹಜ.ನಿಮಗೆ ಬೀಳುವ ಕನಸುಗಳನ್ನು ಆಧರಿಸಿ ಅದರ ಅರ್ಥ ಏನು ಅನ್ನೋದನ್ನ ಹೇಳಬಹುದು.ಆಯಾ ಕನಸುಗಳಿಗೆ ಅದರದ್ದೇ ಆದ ಅರ್ಥ ಇರತ್ತೆ.ಕನಸುಗಳಲ್ಲಿ ಬರುವ ಆಯಾ ಪ್ರಾಣಿ ಏನನ್ನು ಸೂಚಿಸುತ್ತೆ. ಅನ್ನೋದನ್ನ ತಿಳಿಯೋಣ ಬನ್ನ 1. ಜಿಂಕೆ:- ಜಿಂಕೆಯನ್ನು ಕನಸಿನಲ್ಲಿ ಕಂಡರೆ ಒಂದು ಉನ್ನತ ಮಟ್ಟದ ಕೆಲಸವನ್ನು ಪ್ರಯಾಸವಾದರೂ
ಸಾಧಿಸಿ ತೀರುತ್ತೀರ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ . ಜಿಂಕೆ ಕನಸಿನಲ್ಲಿ ಸತ್ತು ಹೋದ ಹಾಗೆ ಕಂಡರೆ ಪ್ರೇಮ,ಪ್ರೀತಿಯಲ್ಲಿ ವೈಫಲ್ಯಗಳನ್ನು ಕಾಣುತ್ತಾರೆ. 2. ಬೆಕ್ಕು:- ಬೆಕ್ಕನ್ನು ಕನಸಿನಲ್ಲಿ ಕಂಡರೆ ದೂರಾದೃಷ್ಟ ಅಂತ ಹೇಳಲಾಗತ್ತೆ.ಬೆಕ್ಕನ್ನು ಸಾಕಿ ಪ್ರೀತಿಸುವವರು ಮಾತ್ರ ಸೃಜನಾತ್ಮಕ ಶಕ್ತಿಯ ಸಂಕೇತ ಎಂದು ಭಾವಿಸುತ್ತಾರೆ. ಬಿಳಿ ಬೆಕ್ಕನ್ನು ಕನಸಿನಲ್ಲಿ ಕಂಡರೆ ಕಷ್ಟಗಳು ಬರುತ್ತವೆ. ಕರಿ ಬೆಕ್ಕನ್ನು ಕನಸಿನಲ್ಲಿ ನೋಡಿದರೆ ನಿಮ್ಮ ಶಕ್ತಿ ಮತ್ತು ಮಾನಸಿಕ ಸಾಮರ್ಥ್ಯವನ್ನು ತೋರಿಸಲು ಭಯ ಪಡುತ್ತೀರಿ. ಬೆಕ್ಕು ನಿಮ್ಮನ್ನು ಕಚ್ಚುವಂತೆ ಕನಸು ಬಿದ್ದರೆ ನೀವು ಬೇರೆಯವರ ಬಳಿ ಕೈ ಚಾಚಿ ಬೇರೆಯವರಿಂದ ಹಣ ಮತ್ತು ಎಲ್ಲವನ್ನು ಪಡೆದುಕೊಳ್ಳುತ್ತೀರ ಮತ್ತು ಕೊಡುವವರು ಸಹ ಬೇಸರ ಮಾಡಿಕೊಳ್ಳುತ್ತಾರೆ.ನಿಮ್ಮ ಯೋಜನೆಯ ಪ್ರಕಾರ ಏನು ಕೆಲಸ ಆಗ್ತಿಲ್ಲ ಅಂತ ಭಯ ನಿರಾಸೆಗೆ ಒಳಗಾಗ್ತೀರ. ಬೆಕ್ಕನ್ನು ಓಡಿಸುವಂತೆ ಕನಸು ಕಂಡರೆ ನಿಮ್ಮನ್ನು ಭಾದಿಸುತ್ತಿರುವ ಅಡ್ಡಿ ಆತಂಕಗಳನ್ನು ಎದುರಿಸಿ ನೀವು ಮುಂದೆ ನುಗ್ಗಲು ಪ್ರಯತ್ನವನ್ನು ಮಾಡುತ್ತೀರ.
- ಆಕಳು:- ಕನಸಿನಲ್ಲಿ ಆಕಳು ಕಂಡು ಬಂದರೆ ,ವಿಧೇಯತೆ,ನಿಷ್ಕ್ರಿಯ ಸ್ವಭಾವವನ್ನು ಹೊಂದಿರುತ್ತೀರ. ಸೊರಗಿದ್ದ,ಬಡಕಲು ಆಕಳನ್ನು ಕನಸಿನಲ್ಲಿ ಕಂಡರೆ ನಿಮ್ಮ ತಾಯಿ ನಿಮ್ಮ ಆಸೆಗಳಿಗೆ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದರ್ಥ.ನಿಜ ಜೀವನದಲ್ಲಿಯೂ ಸಹ ಆಕೆಯ ಪ್ರೇಮಕ್ಕೆ ನೀವು ಹಾತೊರೆಯುತ್ತೀರ ಎಂದರ್ಥ. 4.ಎತ್ತು:- ಎತ್ತನ್ನು ಕನಸಿನಲ್ಲಿ ಕಂಡರೆ ವಿಪರೀತವಾದ ಸಂಪತ್ತು ಬರುತ್ತದೆ ಎಂಬುದನ್ನು ಸೂಚಿಸುತ್ತದೆ. 5. ಕೋಣ:-ಕೋಣ ಕನಸಿನಲ್ಲಿ ಬಂದರೆ ನಿಮ್ಮ ಕೋರಿಕೆಗಳು ನಿಮ್ಮ ಹಿಡಿತದಲ್ಲಿ ಇರೋದಿಲ್ಲ ಅನ್ನುವುದನ್ನ ಸೂಚಿಸುತ್ತದೆ. 6. ಒಂಟೆ:- ಒಂಟೆ ಕನಸಿನಲ್ಲಿ ಬಂದರೆ ನಿಮ್ಮ ಭುಜಗಳ ಮೇಲೆ ಸಾಕಷ್ಟು ಸಮಸ್ಯೆಗಳ ಭಾರವನ್ನು ಹೊತ್ತಿರುತ್ತೀರಿ ಅಂತ ಅರ್ಥ.ನಿಮ್ಮ ಮನಸ್ಸಿನಲ್ಲಿರುವ ಆತಂಕ,ಉದ್ವೇಗಗಳು ಸರಿಯಾಗಿ ವ್ಯಕ್ತ ಪಡಿಸದೇ ಅವುಗಳನ್ನು ಹಿಡಿದಿಟ್ಟುಕೊಂಡು ಜೋತಾಡುವಿರಿ. ಇನ್ನೊಂದು ವಿಧದಲ್ಲಿ ನೀವು ಎಷ್ಟು ಭಾರವನ್ನು ಹೊರಬಲ್ಲಿರಿ ಎಂಬುದನ್ನು ಸೂಚಿಸುತ್ತದೆ. 7. ಗೂಬೆ:- ಗೂಬೆಯನ್ನು ಕನಸಿನಲ್ಲಿ ಕಂಡರೆ ಒಂದು ರೀತಿಯಲ್ಲಿ ಅದು ಅಪಶಕುನ.
ಬಿಳಿ ಗೂಬೆ ಕಂಡು ಬಂದರೆ ಪರಿವಾರದಲ್ಲಿ ಯಾರಾದರೂ ಒಬ್ಬರ ಮರಣ ವಾರ್ತೆಯನ್ನು ಕೇಳುವ ಸೂಚನೆ. ಕಪ್ಪು ಬಣ್ಣದ ಗೂಬೆಯನ್ನು ಕನಸಿನಲ್ಲಿ ಕಂಡರೆ ಅದು ವೈಯಕ್ತಿಕ ವಿಪ್ಪತ್ತುಗಳಿಗೆ ಸೂಚನೆಯಂತೆ. ಪಿಶಾಚಿಯಂತೆ ಇರುವ ಗೂಬೆಯನ್ನು ಕನಸಿನಲ್ಲಿ ಕಂಡರೆ ಆತ್ಮವಿಶ್ವಾಸ, ನಿಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಕೆಟ್ಟ ಚಟ ಮತ್ತು ಕೆಟ್ಟ ಅಭ್ಯಾಸಗಳನ್ನು ಬಿಡದಿದ್ದರೆ.ಜೀವನದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸುತ್ತೀರ ಮತ್ತು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. 8. ಮೊಸಳೆ:- ಮೊಸಳೆಯನ್ನು ಕನಸಿನಲ್ಲಿ ಕಂಡರೆ ಯಾರೂ ಊಹಿಸದ ಒಂದು ಪ್ರಮಾಧವು ನಿಮಗೆ ಕಾದಿದೆ ಎಂದು ಅರ್ಥ.ನಿಮಗೆ ತೀರ ಹತ್ತಿರವಾಗಿ ಇರುವವರೇ ನಿಮಗೆ ತಪ್ಪು ದಾರಿ ಮತ್ತು ತಪ್ಪು ನಿರ್ಣಯಗಳನ್ನು ಮಾರ್ಗದರ್ಶನ ನೀಡುತ್ತಾರೆ ಅಥವಾ ನೀಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಮೊಸಳೆ ನಿಮ್ಮನ್ನು ಭೇಟೆಯಾಡಿ ಕಚ್ಚಿದರೆ ಇದರ ಅರ್ಥ ಪ್ರೇಮ ವೈಫಲ್ಯ ಮತ್ತು ವ್ಯವಹಾರದಲ್ಲಿ ಆರ್ಥಿಕವಾಗಿ ಪರಾಜಯ ಮತ್ತು ನಷ್ಟವನ್ನು ಸೂಚಿಸುತ್ತದೆ.
9.ಪಶುಗಳು:- ಪಶುಗಳನ್ನು ಕನಸಿನಲ್ಲಿ ಕಂಡರೆ ಸದ್ಯ ಇರುವ ಸಂಬಂಧಗಳಲ್ಲಿ ಅತಿ ಜಾಗೃತೆಯಿಂದ ಇರಬೇಕು. ಪಶುಗಳ ಹಿಂಡನ್ನು ಕಂಡರೆ ವ್ಯಕ್ತಿತ್ವದ ಹಿತಕ್ಕೆ ಅದು ದಕ್ಕೆ ತರುವ ಸೂಚನೆಯಾಗಿದೆ. 10.ನಾಯಿ:- ಕನಸಿನಲ್ಲಿ ನಾಯಿಯನ್ನು ಕಂಡರೆ ಹಠದಿಂದ ಪ್ರತಿ ಸ್ಪರ್ದಿಯನ್ನು ಹೋರಾಡಿ ಪ್ರತಿ ಸ್ಪರ್ಧಿಯನ್ನು ಜಯಿಸುವಿರಿ. ನಾಯಿ ಸಿಟ್ಟಿನಿಂದ ಅರಚುತ್ತಾ ಇದ್ದರೆ ನಿಮ್ಮಲ್ಲಿ ಅಂತರ್ಗತವಾಗಿರುವ ಸಂರ್ಷಣೆಗಳಿಗೆ ಸೂಚನೆಯಂತೆ. ನಾಯಿ ಸತ್ತಂತೆ ಕನಸು ಕಂಡರೆ ಒಳ್ಳೆಯ ಸ್ನೇಹಿತನ ಮರಣ ವಾರ್ತೆಯನ್ನು ಸೂಚಿಸುತ್ತದೆ. ನಾಯಿ ನಿಮ್ಮ ಕಾಲಿಗೆ ಕಚ್ಚಿದಂತೆ ಕನಸು ಕಂಡರೆ ಜೀವನದಲ್ಲಿ ಸಮತೋಲನವನ್ನು ಮಾಡಿಕೊಳ್ಳುವ ಸಾಮರ್ಥ್ಯವನ್ನು ಸೂಚಿಸುತ್ತದೆ. ನಾಯಿಗೆ ಹೊಡೆದಂತೆ ಕನಸು ಬಿದ್ದರೆ ಸಂಗಾತಿಯು ಬಯಕೆಯನ್ನು ಹೊಂದಿರುವ ಸೂಚನೆ. ನಾಯಿಗೆ ಪೆಟ್ಟಾದ್ದಾಗ ಕಟ್ಟು ಕಟ್ಟುತ್ತಿರುವ ಕನಸು ಬಂದರೆ ನಿಮ್ಮ ಲೋಪ ದುರಾಭ್ಯಾಸಗಳನ್ನು ಮುಚ್ಚುತ್ತಿರು ಪ್ರಯತ್ನ ಮಾಡುತ್ತಿರುವ ಸೂಚನೆ ಎಂದರ್ಥ. 11. ಕುರಿ:- ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದೆ ತೂಕ ಮಾಡದೆ
ಇದು ಅವಿವೇಕ ತನದ ಸಂಕೇತವಾಗಿದೆ. 12.ಮೇಕೆ:- ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ವ್ಯಾಪಾರಕ್ಕೆ ನಷ್ಟ ಉಂಟುಮಾಡಲು ಸಂಚು ಹಾಕುತ್ತಿರುತ್ತಾರೆ. 13.ಕುದುರೆ:- ಬಲವಾದ ಭೌತಿಕ ಶಕ್ತಿಗೆ ಸೂಚನೆ. ಕಪ್ಪು ಕುದುರೆ ಕಂಡರೆ ಹಿಂಸೆ ಹಾಗೂ ಕ್ಷುದ್ರ ಶಕ್ತಿಗಳ ಆಗಮನದ ಸೂಚನೆ. ಬಿಳಿಯ ಕುದುರೆ ಕಂಡರೆ ಶುಭ್ರತೆ,ಶ್ರೇಯಸ್ಸು,ಅದೃಷ್ಟದ ಆಗಮನದ ಸೂಚನೆ. 14. ಆನೆ:- ಆನೆಯನ್ನು ಕನಸಿನಲ್ಲಿ ಕಂಡರೆ ನೀವು ಜೀವನದಲ್ಲಿ ಇನ್ನಷ್ಟು ತಾಳ್ಮೆ ಮತ್ತು ತಿಳುವಳಿಕೆ ಹೊಂದಬೇಕು ಎನ್ನುವ ಸಂಕೇತ.ಆನೆ ಶಕ್ತಿ , ಬಲಕ್ಕೂ ,ಬುದ್ಧಿಗೂ ಚಿಹ್ನೆಯಾಗಿದ್ದು.ಇದು ನಿಮ್ಮಲ್ಲಿರುವ ಅಂತರ್ಮುಖ ವ್ಯಕ್ತಿತ್ವವದ ಸೂಚನೆಯಾಗಿರಬಹುದು.ಆನೆಯ ಮೇಲೆ ಸವಾರಿ ಮಾಡಿದಂತೆ ಕನಸು ಕಂಡರೆ ನೀವು ಒಂದು ಸಮಯದಲ್ಲಿ ಭಯ ಪಟ್ಟರೂ ಶಕ್ತಿಗಳು ನಿಮ್ಮಲ್ಲಿ ಅಂತರ್ಗತವಾಗಿರುವ ಸೂಚನೆಯಾಗಿದೆ ಎಂದರ್ಥ. 15. ಸಿಂಹ:- ಬಲಕ್ಕೆ,ಶಕ್ತಿಗೆ,ಗಾಂಭೀರ್ಯತೆಗೆ ಅಷ್ಟೇ ಅಲ್ಲದೆ ಆತುರತೆಯ ಸಂಕೇತವಾಗಿದ್ದು. ನೀವು ಇತರರ ಜೊತೆಗೆ ಚೆನ್ನಾಗಿರಬೇಕು.ಸಂಬಂಧ ಚೆನ್ನಾಗಿರಬೇಕು ಅಂದರೆಇವನ್ನೆಲ್ಲಾ ನಿಯಂತ್ರಿಸುವ ಅವಶ್ಯಕತೆ ಇದೆ.
ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ 9686268564

ಸಿಂಹ ದಾಳಿ ಮಾಡಿದಂತೆ ಕನಸು ಕಂಡರೆ ಅಡ್ಡಿ, ಆತಂಕಗಳು ಬಂದರೂ ಅದನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದೀರ. 16. ಹುಲಿ:- ಹುಲಿಯನ್ನು ಕನಸಿನಲ್ಲಿ ಕಂಡರೆ ಶಕ್ತಿ ,ಗಾಂಭೀರ್ಯತೆ, ನಾಯಕತ್ವದ ಲಕ್ಷಣದ ಸಂಕೇತವಾಗಿದೆ. ಹುಲಿ ಬೋನಿನಲ್ಲಿ ಇರುವಂತೆ ಕನಸು ಕಂಡರೆ ಮನಿಸ್ಸಿನಲ್ಲಿ ಅವಿತಿಟ್ಟು ಕೊಂಡಿರುವ ಭಾವೋದ್ವೇಗದ ಸಂಕೇತವಾಗಿದೆ.ಒಂದೇ ಒಂದು ಕರೆಯಲ್ಲಿ ಸರ್ವ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ.
Uncategorized
Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿಗೆ ‘ಅಂಬಿಯೋರ- 2026’; ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ
ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸ್ವಿನಿಕಾ ವಿಯೋಲಾ ಕ್ರಾಸ್ತಾ ಹಾಗೂ ಧ್ಯಾನ್ ಬಿ ಪ್ರಥಮ, ಪ್ರಾಡಕ್ಟ್ ಇನ್ನೊವೇಟಿವ್ ಚಾಲೆಂಜ್ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಿವಾನಿ ಹಾಗೂ ಗಾನವಿ ಪ್ರಥಮ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಅದ್ವಿತಿ ಜಿ ಹಾಗೂ ಎ ಜಿ ಕೃತಿಕಾ ಪ್ರಥಮ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವೇದಿತಾ ಕೆ ಮತ್ತು ತನುಶ್ರೀ ಬಿ ದ್ವಿತೀಯ, ಬಿಸ್ನೆಸ್ ಮಾಡೆಲ್ ಸ್ಪರ್ಧೆಯಲ್ಲಿ ಹೆಫ್ಜಿಬಾ ಎಂ ರಿನ್ಸಾನ್ ಹಾಗೂ ಪ್ರೀತಾ ಎ ದ್ವಿತೀಯ, ಬೆಸ್ಟ್ ಔಟ್ ಆಫ್ ವೇಸ್ಟ್ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸಜ್ನಾಜ್ ಮತ್ತು ಹಲೀಮತ್ ಸೌಧ ದ್ವಿತೀಯ ಹಾಗೂ ಮಿನಿ ಮಿಲಿಟಿಯ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಹಾದ್ ಅಜಾರ್ ಮತ್ತು ಮೊಹಮ್ಮದ್ ರಫಾಜ್ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ಉಷಾ ರೈ, ಅವಿನಾ ಮಾಡ್ತಾ, ಡಾ. ಲತಾ ಹಾಗೂ ಸಂದೇಶ್ ಜಾನ್ ಲೋಬೋ ಉಪಸ್ಥಿತರಿದ್ದರು.
Uncategorized
Vivekananda-ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಸ್ವಾದಸಂಭ್ರಮ-2026’ ಆಹಾರ ಮೇಳ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಮಾತನಾಡಿದರು.

ಪುತ್ತೂರು: ಆಹಾರ ಮೇಳ ಕೇವಲ ಆಹಾರ ಮಾರಾಟದ ಬಗ್ಗೆ ಮಾತ್ರವಲ್ಲ. ಇಲ್ಲಿ ವಿದ್ಯಾರ್ಥಿಗಳು ಉದ್ಯಮ ನಡೆಸುವಾಗ ಇರಬೇಕಾದ ಕೌಶಲ್ಯಗಳು, ಗ್ರಾಹಕರ ಮನಸ್ಥಿತಿ ಮತ್ತು ಅವರೊಂದಿಗೆ ವ್ಯವಹರಿಸಬೇಕಾದ ರೀತಿಯನ್ನು ಮೇಳಗಳಿಂದ ತಿಳಿದುಕೊಳ್ಳಬಹುದು. ಇದರ ನಡುವೆ ಬರುವ ಸೋಲು-ಗೆಲುವುಗಳನ್ನು ವಿದ್ಯಾರ್ಥಿಗಳು ಸಮನಾಗಿ ಸ್ವೀಕರಿಸಬೇಕು ಎಂದು ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಗೌರವ ಅತಿಥಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಉದ್ದಿಮೆಯ ಬಗ್ಗೆ ಸೈದ್ಧಾಂತಿಕವಾಗಿ ಕಲಿತ ವಿಚಾರಗಳು ಇಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದೆ. ಒಂದು ಉದ್ದಿಮೆಯನ್ನು ನಡೆಸಬೇಕಾದರೆ ಅದರಲ್ಲಿರುವಂತಹ ಕಷ್ಟ-ಸುಖಗಳನ್ನು ಅರಿಯಲು ಇಂತಹ ಮೇಳಗಳು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಪಿ. ಉಪಸ್ಥಿತರಿದ್ದರು.
ಸ್ವಾದಸಂಭ್ರಮ ಆಹಾರ ಮೇಳ-2026ರ ವಿಜೇತರು:
ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದು ಫ್ರೋಜನ್ ಡಿಲೈಟ್ ತಂಡ ಪ್ರಥಮ ಸ್ಥಾನ, ಬೈಟ್ ಬೈ ಬೈಟ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಉತ್ತಮ ನೈರ್ಮಲ್ಯ ಕಾಪಾಡುವಿಕೆ ವಿಭಾಗದಲ್ಲಿ ಸ್ವದೇಶೀ ಸ್ವಾದ್ ತಂಡ, ಗ್ರಾಹಕರೊಂದಿಗೆ ಉತ್ತಮ ಸಂವಹನ ವಿಭಾಗದಲ್ಲಿ ಫ್ಲೇವರ್ ತಂಡ, ಉತ್ತಮ ಪೋಸ್ಟರ್ ವಿಭಾಗದಲ್ಲಿ ಫ್ಲೇವರ್ ಹಂಟರ್ಸ್ ತಂಡ ಹಾಗೂ ಉತ್ತಮ ರೀಲ್ಸ್ ವಿಭಾಗದಲ್ಲಿ ಸ್ವದ್ಘಾಮ್ ತಂಡ ಪ್ರಶಸ್ತಿ ಪಡೆದಿಕೊಂಡಿದೆ.
ಕಾರ್ಯಕ್ರಮವನ್ನು ತೃತೀಯ ಕಲಾ ವಿಭಾಗದ ಕೆ. ಕೃತಿಕಾ ನಿರ್ವಹಿಸಿದರು.
Uncategorized
Ashok Rai-ಬದ್ಯಾರ್‌ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.

ಪುತ್ತೂರು: ಈ ಭಾಗದ ಜನರು ರಸ್ತೆಯಿಲ್ಲದೆ ಸುಮಾರು 50 ವರ್ಷಗಳಿಂದ ತೊಂದರೆಯಲ್ಲಿದ್ದರು, ಇಲ್ಲಿ ಸುಮಾರು ಹತ್ತು ಮನೆಗಳಿದೆ, ಮನೆ ಕಟ್ಟುವಾಗ ಇವರೆಲ್ಲಾ ಕಲ್ಲನ್ನು ಕಾಲು ದಾರಿಯ ಮೂಲಕ ಹೊತ್ತುಕೊಂಡೇ ಹೋಗಿದ್ದು, ವಾಹನ ಹತ್ತ ಬೇಕಾದರೆ ಒಂದಷ್ಟು ದೂರ ನಡೆದುಕೊಂಡೇ ಬರಬೇಕಾದ ಸ್ಥಿತಿ. ಇದು ಪೆರುವಾಯಿ ಗ್ರಾಮದ ಬದ್ಯಾರಿನ ಕಥೆ.
ಇವರು ರಸ್ತೆಗಾಗಿ ಮನವಿ ಹಾಗೂ ಹೋರಾಟವನ್ನು ಮಾಡುತ್ತಲೇ ಇದ್ದರು. ಆದರೆ ರಸ್ತೆ ನಿರ್ಮಾಣವಾಗುವಲ್ಲಿ ಖಾಸಗಿ ಜಾಗದ ತಕರಾರಿತ್ತು. ಈ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಅನೇಕ ಜನಪ್ರತಿನಿಧಿಗಳು ಪ್ರಯತ್ನ ಮಾಡಿದ್ದರು ಆದರೆ ಯಾರಿದಂಲೂ ಸಾಧ್ಯವಾಗಿಲ್ಲ, ಕೆಲವರು ಭರವಸೆಯನ್ನು ಮಾತ್ರ ಕೊಟ್ಟಿದ್ದರು.
ಶಾಸಕ ಅಶೋಕ್ ರೈ ಭೇಟಿ
ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.
ಶಾಸಕರಿಗೆ ಸನ್ಮಾನ
ವಿವಾದ ಇತ್ಯರ್ಥಪಡಿಸಿ ೫೦ ವರ್ಷಗಳ ಹಿಂದಿನ ಬಹುದೊಡ್ಡ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ಬದ್ಯಾರು ರಸ್ತೆ ಫಲಾನುಭವಿಗಳು ಸನ್ಮಾನವನ್ನು ಮಾಡಿದ್ದಾರೆ.
ಬದ್ಯಾರ್‌ನಿವಾಸಿಗಳು ತಮ್ಮ ಕಷ್ಟವನ್ನು ನನ್ನಲ್ಲಿ ಹೇಳಿಕೊಂಡಿದ್ದರು. ರಸ್ತೆ ಇಲ್ಲದೆ ಹತ್ತು ಕುಟುಂಬಗಳು ಸಂಕಷ್ಟದಲ್ಲಿತ್ತು ಮಾತ್ರವಲ್ಲದೆ ಪಕ್ಕದಲ್ಲೇ ಒಂದು ದೇವಸ್ಥಾನದ ಕಾಮಗಾರಿಯೂ ಅರ್ಧಕ್ಕೆ ನಿಂತಿತ್ತು. ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ರಸ್ತೆ ನಿರ್ಮಾಣಕ್ಕೆ ತೊಂದರೆಯಾಗಿತ್ತು. ಜಾಗದ ಮಾಲಿಕರನ್ನು ಕರೆಸಿ ಮಾತುಕತೆ ನಡೆಸಿದಾಗ ಅವರು ಮಾನವೀಯ ನೆಲೆಯಲ್ಲಿ ಒಪ್ಪಿಕೊಂಡು ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಮೂಲಕ ದೊಡ್ಡ ಪುಣ್ಯದ ಕೆಲಸವನ್ನು ಮಾಡಿದ್ದಾರೆ. ಬೇಡಿಕೆ ಈಡೇರಿಸಿದ್ದೇನೆ, ಅನುದಾನವನ್ನು ನೀಡಿದ್ದೇನೆ ಮುಂದೆ ಅವರೆಲ್ಲರೂ ನನ್ನ ಜೊತೆ ಇರುತ್ತಾರೆ ಎಂಬ ನಂಬಿಕೆಯೂ ಇದೆ
ಅಶೋಕ್ ರೈ, ಶಾಸಕರು ಪುತ್ತೂರು
ರಸ್ತೆ ಸಂಪರ್ಕ ಇಲ್ಲದೆ 50 ವರ್ಷದಿಂದ ಪರದಾಡುತ್ತಿದ್ದೇವೆ, ನಾವು ಬಿಜೆಪಿ ಶಾಸಕರಿಗೆ, ಮುಖಂಡರಿಗಳಿಗೆ ಮನವಿ ಮಾಡಿದ್ದೆವು, ನಾವು ಬಿಜೆಪಿ ಕಾರ್ಯಕರ್ತರಾದರೂ ನಮ್ಮ ಬೇಡಿಕೆಯನ್ನು ಅವರು ಈಡೇರಿಸಿರಲಿಲ್ಲ. ನಾವು ಶಾಸಕ ಅಶೋಕ್ ರೈ ಕಚೇರಿಗೆ ಈ ವಿಚಾರವನ್ನು ತಿಳಿಸಲು ಹೋದಾಗ ಕೆಲವರು ನಮ್ಮನ್ನು ಛೇಡಿಸಿದ್ದರು. ನೀವು ಬಿಜೆಪಿ ಕಾರ್ಯಕರ್ತರಾದ ಕಾರಣ ನಿಮ್ಮ ಕೆಲಸ ಶಾಸಕರು ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಶಾಸಕರು ಪಕ್ಷ ರಾಜಕೀಯ ಮಾಡದೆ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ, ನಾವು ಮುಂದೆ ಅಶೋಕ್ ರೈ ಜೊತೆ ಇರುತ್ತೇವೆ, ಶಾಸಕರು ಮಾಡಿದ ಈ ಉಪಕಾರವನ್ನು ಮರೆಯುವುದೇ ಇಲ್ಲ.
ಜಯರಾಮ, ಬದ್ಯಾರ್ ಫಲಾನುಭವಿ
ಯಾವ ಜನಪ್ರತಿನಿಧಿಯಿಂದಲೂ ಮಾಡಲಾಗದ ಕೆಲಸವನ್ನು ಶಾಸಕ ಅಶೋಕ್ ರೈ ಮಾಡಿದ್ದಾರೆ. ಪಕ್ಷ ಬೇದವಿಲ್ಲದೆ ಬೇಡಿಕೆಯನ್ನು ಈಡೇರಿಸಿದ್ದಾರೆ, ಇವರು ಮುಂದೆಯೂ ಶಾಸಕರಾಗಿ ಆಯ್ಕೆಯಾಗುವಲ್ಲಿ ನಾವು ಖಂಡಿತಾ ಕೆಲಸ ಮಾಡುತ್ತೇವೆ.
ಶೀಲಾ ರೈ , ಫಲಾನುಭವಿ
-
ಮಂಗಳೂರು9 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಅಪರಾಧ12 hours agoRaid-ರಾಜ್ಯದ 45 ಐಸ್ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
-
ಸ್ಥಳೀಯ14 hours agoGanja-ಸಾಗರದ ಲಾಡ್ಜ್ನಲ್ಲಿ ಗಾಂಜಾ ಸೇವನೆ: ಯುವತಿ ಸೇರಿ ನಾಲ್ವರು ವಶಕ್ಕೆ – ಗಾಂಜಾ ಸಾಗಾಟಗಾರನ ಮಾಹಿತಿ ಬಿಚ್ಚಿಟ್ಟ ಯುವತಿ..!
-
ಬಿಗ್ ನ್ಯೂಸ್14 hours agoAYUSH Federation-ಡಾ. ಪ್ರದೀಪ್ ನಾವೂರು ಅವರ ಆರೋಗ್ಯ ಕ್ಲಿನಿಕ್ ಗೆ ಬೆಂಕಿ : ಆಯುಷ್ ಫೆಡರೇಶನ್ ತೀವ್ರ ಖಂಡನೆ
-
ಬಿಗ್ ನ್ಯೂಸ್7 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ಅಪರಾಧ14 hours agoUdupi-ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ : ಉಡುಪಿ, ಮೂಲ್ಕಿಯಲ್ಲಿ 4 ಪ್ರಕರಣ ದಾಖಲು
-
ಮಂಗಳೂರು8 hours agoMRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
-
ಅಪರಾಧ9 hours agoMangalore-ವಾಟರ್ ಪ್ಯೂರಿಫೈಯರ್ ಒಳಗೆ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್- ಕೋರಿಯರ್ ಮೂಲಕ ಸಾಗಾಟ | ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಂಗಳೂರಿನಲ್ಲಿ ವಿಫಲ – ಮೂವರ ಬಂಧನ..!


















