Connect with us

ಸ್ಥಳೀಯ

Leopard-ಸೆರೆಸಿಕ್ಕ ಹೆಣ್ಣು ಚಿರತೆಯನ್ನು ಜಾಂಬ್ರಿ ಕಾಡಿಗೆ ತೆರೆದುಬಿಟ್ಟ ವದಂತಿ; ಕೇರಳ ಕರ್ನಾಟಕ ಗಡಿ ವ್ಯಾಪ್ತಿಯಲ್ಲಿ ಆತಂಕ; ಡಿಎಫ್ ಒ ಕಚೇರಿಗೆ ಮುತ್ತಿಗೆ

Published

on

Ad Widget

Ad Widget

Ad Widget

Ad Widget

ಕಾಸರಗೋಡು ಜಿಲ್ಲೆಯ ಬೇಡಡ್ಕ ಪಂಚಾಯಿತಿಯ ಕೊಳತ್ತೂರಿನಲ್ಲಿ ಭಾನುವಾರ ರಾತ್ರಿ ಬೋನಿನೊಳಗೆ ಸಿಲುಕಿದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೇರಳ ಕರ್ನಾಟಕ ವ್ಯಾಪಿಯ ಬಂಟಾಜೆ ರಕ್ಷಿತಾರಣ್ಯ, ಜಾಂಬ್ರಿ ಪರಿಸರದಲ್ಲಿ ತೆರೆದುಬಿಟ್ಟಿರುವುದಾಗಿ ವದಂತಿ ಹಬ್ಬಿದೆ. ಇದಕ್ಕೆ ಪೂರಕವಾದ ಸಿಸಿ ಟಿವಿ ದೃಶ್ಯಾವಳಿ ವಾಟ್ಸಾಪ್ ನಲ್ಲಿ ಹರಿದಾಡುತ್ತಿವೆ. ಇದರೊಂದಿಗೆ ಬೆಳ್ಳೂರು, ಎಣ್ಮಕಜೆ ಮತ್ತು ಪಾಣಾಜೆ ಗ್ರಾಮದ ಜನರು ಆತಂಕಕ್ಕೊಳಗಾಗಿದ್ದಾರೆ.

Ad Widget

Ad Widget

Ad Widget

Ad Widget

ಕಾಸರಗೋಡು ಜಿಲ್ಲೆಯ ಬೇಡಡ್ಕ ಪಂಚಾಯಿತಿಯ ಕೊಳತ್ತೂರಿನಲ್ಲಿ ಭಾನುವಾರ ರಾತ್ರಿ ಬೋನಿನೊಳಗೆ ಸಿಲುಕಿದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೇರಳ ಕರ್ನಾಟಕ ವ್ಯಾಪಿಯ ಬಂಟಾಜೆ ರಕ್ಷಿತಾರಣ್ಯ, ಜಾಂಬ್ರಿ ಪರಿಸರದಲ್ಲಿ ತೆರೆದುಬಿಟ್ಟಿರುವುದಾಗಿ ವದಂತಿ ಹಬ್ಬಿದೆ. ಇದಕ್ಕೆ ಪೂರಕವಾದ ಸಿಸಿ ಟಿವಿ ದೃಶ್ಯಾವಳಿ ವಾಟ್ಸಾಪ್ ನಲ್ಲಿ ಹರಿದಾಡುತ್ತಿವೆ. ಇದರೊಂದಿಗೆ ಬೆಳ್ಳೂರು, ಎಣ್ಮಕಜೆ ಮತ್ತು ಪಾಣಾಜೆ ಗ್ರಾಮದ ಜನರು ಆತಂಕಕ್ಕೊಳಗಾಗಿದ್ದಾರೆ.

Ad Widget

Ad Widget alt="Ad Widget"/>

Ad Widget

ಬೇಡಡ್ಕ ಸಮೀಪದ ಕೊಳತ್ತೂರು ನಿಡುವೋಟ್ಟ್ ನ ಎಂ. ಜನಾರ್ದನನ್ ಎಂಬವರ ರಬ್ಬರ್ ತೋಟದಲ್ಲಿ ಎರಡು ದಿನ ಹಿಂದೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಹೆಣ್ಣು ಚಿರತೆ ಸಿಲುಕಿತ್ತು. ಬೋನಿನ ಇನ್ನೊಂದು ಭಾಗದಲ್ಲಿ ನಾಯಿಯೊಂದನ್ನು ಕಟ್ಟಿಹಾಕಲಾಗಿತ್ತು. ನಾಯಿ ಜೋರಾಗಿ ಬೊಗಳತೊಡಗಿದಾಗ ಅದನ್ನು ಗಮನಿಸಿದ ಸಮೀಪ ಮನೆಯವರು ಅಲ್ಲಿಗೆ ಬಂದು ನೋಡಿದಾಗ ಬೋನಿಗೊಳಗೆ ಚಿರತೆ ಸಿಲುಕಿರುವುದು ಕಾಣಿಸಿದೆ. ಚಿರತೆಯ ಬಲಗಣ್ಣಿನ ಕೆಳ ಭಾಗದಲ್ಲಿ ಗಾಯದ ಕಲೆ ಪತ್ತೆಯಾಗಿದೆ.

Ad Widget

Ad Widget <> Ad Widget

ವಿಷಯ ತಿಳಿದು ನೂರಾರು ಮಂದಿ ಅಲ್ಲಿಗೆ ತಲುಪಿದ್ದರು. ಜನರ ಗುಂಪನ್ನು ನೋಡಿ ಆತಂಕಗೊಂಡ ಚಿರತೆ ಬೋನೊಳಗಿಂದಲೆ ಆಕ್ರಮಣಕ್ಕೆ ಮುಂದಾಗಿದೆ. ರಾತ್ರಿ 9.30ರ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಆರ್ ಆರ್ ಟಿ ತಂಡ ಸ್ಥಳೀಯರ ಸಹಾಯದಿಂದ ರಾತ್ರಿಯೇ ಚಿರತೆಯನ್ನು ಬೋನ್ ಸಹಿತ ವಾಹನಕ್ಕೆ ಏರಿಸಿದ್ದಾರೆ. ಚಿರತೆಯನ್ನು ತೋರಿಸುವಂತೆ ಸ್ಥಳೀಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬೋನನ್ನು ಮುಚ್ಚಿದ ಸನ್ ಶೇಡ್ ಟರ್ಪಾಲನ್ನು ಸರಿಸಿ ಚಿರತೆಯನ್ನು ತೋರಿಸಿದ ಬಳಿಕ ಮತ್ತೆ ಟರ್ಪಾಲ್‌ ನಿಂದ ಮುಚ್ಚಿ ಪಳ್ಳತ್ತುಂಗಾಲ್ ಅರಣ್ಯ ಇಲಾಖೆಯ ಕಚೇರಿಗೆ ಸಾಗಿಸಲಾಗಿದೆ.

ಇದೇ ವೇಳೆ, ಟಾರ್ಪಾಲಿನಿಂದ ಮುಚ್ಚಿದ ಬೋನ್ ಇದ್ದ ಮಿನಿ ಟೆಂಪೋ, ಅರಣ್ಯ ಇಲಾಖೆಯ ಆರ್ ಆರ್ ಟಿ ವಾಹನ(ರಾಪಿಡ್ ರೆಸ್ಕ್ಯೂ ಟೀಮ್)ಸಹಿತ ನಾಲ್ಕೈದು ವಾಹನಗಳು ಸೋಮವಾರ ಮುಂಜಾನೆ 3.38ಕ್ಕೆ ಬೆಳ್ಳೂರು ನಾಟೆಕ್ಕಲ್ಲು, 3.42ಕ್ಕೆ ಕಿನ್ನಿಂಗಾರು, 4.02ಕ್ಕೆ ಸ್ವರ್ಗ ಮೂಲಕ ಪಾಣಾಜೆ ಭಾಗಕ್ಕೆ ಹೋಗುವ ಸಿಸಿ ಟಿವಿ ದೃಶ್ಯಗಳು ಲಭಿಸಿವೆ. ಆದರೆ ಈ ರಸ್ತೆಯ ಮೂಲಕ ಮರಳದೆ ಜಾಂಬ್ರಿ ಭಾಗದಿಂದ ಕಾಡು ಮಾರ್ಗದ ಮೂಲಕ ಕಿನ್ನಿಂಗಾರು ಪ್ರವೇಶಿಸಿದೆ. ಬೆಳಗ್ಗೆ 6ರ ಬಳಿಕ ಕಿನ್ನಿಂಗಾರು ಮೂಲಕ‌ ಹಾದು ಹೋಗುವುದನ್ನು ಸ್ಥಳೀಯರು ನೋಡಿದ್ದಾರೆ. ಟೆಂಪೋ ಹಾಗೂ ಆರ್ ಆರ್ ಟಿ ವಾಹನ ನಾಟೆಕ್ಕಲ್ ಮೂಲಕ ಮರಳುವ ಸಿಸಿ ಟಿವಿ ದೃಶ್ಯವೂ ಲಭಿಸಿದೆ.

Ad Widget

Ad Widget

ಫೆಬ್ರವರಿ 4ರಂದು ರಾತ್ರಿ ಕೊಳತ್ತೂರಿನ ಮಡಂದಕೋಡಿನ ಗುಹೆಯಲ್ಲಿ ಮುಳ್ಳು ಹಂದಿಯ ಬೇಟೆಗಿಳಿದ ಚಿರತೆ ಗುಹೆಯ ದ್ವಾರದ ಕಲ್ಲುಗಳೆಡೆ ಸಿಲುಕಿಕೊಂಡಿತ್ತು. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ ಅರಿವಳಿಕೆ ತಜ್ಞರು ಚುಚ್ಚುಮದ್ದು ಗುಂಡು ಹಾರಿಸಿದ್ದರು. ಚಿರತೆಗೆ ಗುಂಡು ತಗಲಿದರೂ ಅದು ಅಲ್ಲಿಂದ ತಪ್ಪಿಸಿಕೊಂಡಿತ್ತು.

ಇದಾದ ಬಳಿಕ ವಿಳಿಕ್ಕುಂಮಾಡಂ, ಆಯಂಕಡವ್, ಪನಯಾಲ್, ಪೊಕೈನಾಚಿ, ಶಂಕರಂಗೋಡು ಮೊದಲಾದ ಭಾಗಗಳಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಕಳವಯಲ್ ಮತ್ತು ಪನಾಯಲ್‌ ಮೊದಲಾದ ಭಾಗದಲ್ಲಿ ಇನ್ನಷ್ಟು ಬೋನು ಹಾಗೂ ಕ್ಯಾಮರಾಗಳನ್ನು ಸ್ಥಾಪಿಸಿದ್ದರು. ರಾಜಪುರಂ, ಪನಯಾಲ್‌, ಅಂಬಲತ್ತರ ಹಾಗೂ ಇತರ ಹಲವೆಡೆಗಳಲ್ಲಿ ಚಿರತೆಗಳು ಪದೇ ಪದೇ ಪ್ರತ್ಯಕ್ಷಗೊಳ್ಳತೊಡಗಿದ್ದು ನಾಲ್ಕೈದು ಚಿರತೆಗಳು ಇರುವ ಸಾಧ್ಯತೆ ಇದೆ ಎಂದು ಅನುಮಾನಿಸಲಾಗಿದೆ.

ಜನರನ್ನು ಭೀತಿಗೊಳಪಡಿಸಿದ ಚಿರತೆಗಳ ಪೈಕಿ ಒಂದು ಚಿರತೆ ಬೋನಿನೊಳಗೆ ಸಿಲುಕಿದ್ದು ಅಲ್ಲಿಯ ಜನರ ಭೀತಿಯನ್ನು ಸ್ವಲ್ಪ ಶಮನಗೊಳಿಸಿದರೂ, ಇದುವರೆಗೆ ಚಿರತೆ ಭೀತಿ ಇರದಿದ್ದ ಎಣ್ಮಕಜೆ, ಬೆಳ್ಳೂರು ಮತ್ತು ಪಾಣಾಜೆ ಪಂಚಾಯಿತಿಗಳ ಜನರನ್ನು ಆತಂಕಕ್ಕೆ ಒಳಪಡಿಸಿದೆ. ಎಣ್ಮಕಜೆ ಗ್ರಾಪಂ ವ್ಯಾಪ್ತಿಯ ವಾಣೀನಗರ, ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಕಿನ್ನಿಂಗಾರು ಭಾಗದ ಜನರ ತಂಡ ಸೋಮವಾರ ಸಂಜೆ ಕಾಸರಗೋಡು ಅರಣ್ಯ ಇಲಾಖೆ ವಿಭಾಗೀಯ ಕಚೇರಿಗೆ ಧಾವಿಸಿದ್ದಾರೆ.

“ಅರಣ್ಯ ಇಲಾಖೆಗೆ ಸೇರಿದ ಜಿಲ್ಲೆಯ ರಕ್ಷಿತಾರಣ್ಯಕ್ಕೆ ಸಾಗಿಸಿ ಅಲ್ಲಿ ಚಿರತೆಯನ್ನು ತೆರೆದು ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಖಚಿತಪಡಿಸಿದ್ದರೂ ಜಾಗ ಬಹಿರಂಗಪಡಿಸಿಲ್ಲ. ಮುಳ್ಳು ಹಂದಿ, ಸಾಕು ನಾಯಿಗಳನ್ನು ಕೊಂದ ಚಿರತೆಯನ್ನು ಜನ ವಸತಿ ಪ್ರದೇಶದ ಸಣ್ಣ ಕಾಡಿನಲ್ಲಿ ಬಿಟ್ಟಿರುವುದು ಕೇರಳ ಕರ್ನಾಟಕ ಗಡಿಭಾಗದ ಮೂರೂ ಪಂಚಾಯಿತಿಗಳ ಜನರ ನಿದ್ದೆಗೆಡಿಸಲಿದೆ” – ಚಂದ್ರಶೇಖರ್ ರಾವ್ ಕಲ್ಲಗ, ಬೆಳ್ಳೂರು ಗ್ರಾಪಂ ಮಾಜಿ ಅಧ್ಯಕ್ಷರು

“ಜಾಂಬ್ರಿ ಕಾಡಿನ ಪೆರಿಯಾಲ್ ಪ್ರದೇಶದಲ್ಲಿ ಈಗಲೂ‌ ದನಗಳನ್ನು ಮೇಯಲು ಬಿಡಲಾಗುತ್ತಿದೆ. ಕೇರಳದ ಜನ ವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟ ಚಿರತೆಯನ್ನು ಮೃಗಾಲಯ ಅಥವಾ ದಟ್ಟ ಅಡವಿಗೆ ಬಿಡುವುದನ್ನು ಬಿಟ್ಟು ಅಂಗನವಾಡಿ ಶಾಲೆ ಸಹಿತ ಸಣ್ಣ ಮಕ್ಕಳು ನಡೆದಾಡುವ ಕರ್ನಾಟಕ ವ್ಯಾಪ್ತಿಯ ಸಣ್ಣ ಕಾಡಿನಲ್ಲಿ ಬಿಟ್ಟಿರುವುದು ಸರಿಯಲ್ಲ.”- ಮಹಾಬಲೇಶ್ವರ ಭಟ್ ಗಿಳಿಯಾಲು, ಮಾಜಿ ಮಂಡಲ ಪಂಚಾಯಿತಿ ಪ್ರಧಾನರು, ಪಾಣಾಜೆ

ಡಿಎಫ್ ಒ ಕಚೇರಿಗೆ ಮುತ್ತಿಗೆ
ಕೊಳತ್ತೂರಿನಲ್ಲಿ ಸೆರೆ ಹಿಡಿದ ಚಿರತೆಯನ್ನು ಕೇರಳ ಕರ್ನಾಟಕ ಗಡಿಭಾಗದ ಜಾಂಬ್ರಿ ಪ್ರದೇಶದಲ್ಲಿ ತೆರೆದು ಬಿಟ್ಟಿರುವುದನ್ನು ಪ್ರತಿಭಟಿಸಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಬಿಜೆಪಿ ಕೇರಳ ರಾಜ್ಯ ಸಮಿತಿ ಕಾರ್ಯದರ್ಶಿ ಅಡ್ವ.ಕೆ.ಶ್ರೀಕಾಂತ್, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ಸುನಿಲ್‌ ಪಿ.ಆರ್. ಉಪಸ್ಥಿತಿಯಲ್ಲಿ ಬೆಳ್ಳೂರು ಗ್ರಾಪಂ ಅಧ್ಯಕ್ಷ ಶ್ರೀಧರ ಬೆಳ್ಳೂರು ನೇತೃತ್ವದಲ್ಲಿ ಮುಖಂಡರಾದ ಜಯಾನಂದ ಕುಳ, ರಾಜಗೋಪಾಲ್‌ ಕೈಪಂಗಳ, ಜನ ಪ್ರತಿನಿಧಿಗಳಾದ ಚಂದ್ರಶೇಖರ ರೈ, ಜಯಕುಮಾರ್ ಸಹಿತ ಬೆಳ್ಳೂರು ಹಾಗೂ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಜನರು ಕಾಸರಗೋಡು ಡಿಎಫ್ ಒ ಕಚೇರಿಗೆ ಮುತ್ತಿಗೆ ಹಾಕಿದರು.

ʻʻಬೆಳ್ಳೂರು ಪಂಚಾಯತ್‌ನ ವಸತಿ ಪ್ರದೇಶದಲ್ಲಿ ಎಲ್ಲಿಯಾದರೂ ಚಿರತೆ ಕಾಡಿಗೆ ದಾರಿ ತಪ್ಪಿದರೆ ಅಥವಾ ಮನುಷ್ಯರು ಅಥವಾ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡಿದರೆ, ಎನ್‌ಟಿಸಿಎ ಮಾನದಂಡಗಳ ಪ್ರಕಾರ ಮುಖ್ಯ ವನ್ಯಜೀವಿ ವಾರ್ಡನ್ ಅವರ ಅನುಮತಿಯೊಂದಿಗೆ ಚಿರತೆಯನ್ನು ಬಲೆಗೆ ಬೀಳಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಚಿರತೆ ಸೆರೆಹಿಡಿಯುವವರೆಗೆ ಆ ಪ್ರದೇಶಗಳಲ್ಲಿ ಆರ್‌ಆರ್‌ಟಿಯಿಂದ 24 ಗಂಟೆಗಳ ಕಾಲ ಗಸ್ತು ತಿರುಗಲಿದೆ. ಇದಕ್ಕೆ ಅರಣ್ಯ ಇಲಾಖೆಯೇ ಸಂಪೂರ್ಣ ಹೊಣೆಯಾಗಲಿದೆ.” – ಕಾಸರಗೋಡು ವಿಭಾಗೀಯ ಅರಣ್ಯ ಅಧಿಕಾರಿ

Ad Widget
Click to comment

Leave a Reply

ಬಿಗ್ ನ್ಯೂಸ್

Railway-ರೈಲ್ವೆ ಗುಂಪು ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ: ಬರ್ತ್‌ಗಳ ಸಂಖ್ಯೆಗೆ ಮಿತಿ ರದ್ದು, ಬೆಳಗ್ಗೆ 9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ..!

Published

on

Ad Widget

Ad Widget

Ad Widget

Ad Widget

ಮದುವೆ, ಪ್ರವಾಸ, ತೀರ್ಥಯಾತ್ರೆ, ಶೈಕ್ಷಣಿಕ ಪ್ರವಾಸ, ಕ್ರೀಡಾಕೂಟ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಗುಂಪಾಗಿ ರೈಲಿನಲ್ಲಿ ಪ್ರಯಾಣಿಸುವವರಿಗೆ ನೈಋತ್ಯ ರೈಲ್ವೆ (SWR) ಮಹತ್ವದ ಸಡಿಲಿಕೆ ನೀಡಿದೆ. ಗುಂಪು ಹಾಗೂ ಬೃಹತ್ ಟಿಕೆಟ್ ಕಾಯ್ದಿರಿಸುವಿಕೆಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಿದ್ದು, ಗುಂಪು ಬುಕಿಂಗ್‌ನಲ್ಲಿ ಬರ್ತ್‌ಗಳ ಸಂಖ್ಯೆಗೆ ಈ ಹಿಂದೆ ಇದ್ದ ನಿರ್ದಿಷ್ಟ ಮಿತಿಯನ್ನು ತೆಗೆದುಹಾಕಲಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಮದುವೆ, ಪ್ರವಾಸ, ತೀರ್ಥಯಾತ್ರೆ, ಶೈಕ್ಷಣಿಕ ಪ್ರವಾಸ, ಕ್ರೀಡಾಕೂಟ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಗುಂಪಾಗಿ ರೈಲಿನಲ್ಲಿ ಪ್ರಯಾಣಿಸುವವರಿಗೆ ನೈಋತ್ಯ ರೈಲ್ವೆ (SWR) ಮಹತ್ವದ ಸಡಿಲಿಕೆ ನೀಡಿದೆ. ಗುಂಪು ಹಾಗೂ ಬೃಹತ್ ಟಿಕೆಟ್ ಕಾಯ್ದಿರಿಸುವಿಕೆಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಿದ್ದು, ಗುಂಪು ಬುಕಿಂಗ್‌ನಲ್ಲಿ ಬರ್ತ್‌ಗಳ ಸಂಖ್ಯೆಗೆ ಈ ಹಿಂದೆ ಇದ್ದ ನಿರ್ದಿಷ್ಟ ಮಿತಿಯನ್ನು ತೆಗೆದುಹಾಕಲಾಗಿದೆ.

Ad Widget

Ad Widget alt="Ad Widget"/>

Ad Widget

2026ರ ನವೆಂಬರ್ 18ರಂದು ನೈಋತ್ಯ ರೈಲ್ವೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದರ ಅನ್ವಯ ಪ್ರಮುಖ ಕಾಯ್ದಿರಿಸುವಿಕೆ ಕೇಂದ್ರಗಳಲ್ಲಿ ಗುಂಪು ಬುಕಿಂಗ್‌ಗೆ ಬೆಳಗ್ಗೆ 9 ಗಂಟೆಯಿಂದ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಪ್ರಯಾಣಿಕರ ಮುಂಗಡ ಕಾಯ್ದಿರಿಸುವಿಕೆ ಆರಂಭವಾದ ಒಂದು ಗಂಟೆಯ ಬಳಿಕ ಈ ಸೌಲಭ್ಯ ಲಭ್ಯವಾಗಲಿದೆ.

Ad Widget

Ad Widget <> Ad Widget

ನವೆಂಬರ್ 19ರಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾದ ಸುತ್ತೋಲೆಯ ಪ್ರಕಾರ, ಮದುವೆ ಸಮಾರಂಭಗಳು, ಹಬ್ಬಗಳು, ಯಾತ್ರೆಗಳು, ಕ್ರೀಡಾ ತಂಡಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇತರ ಸಮಾನ ಉದ್ದೇಶಗಳಿಗಾಗಿ ಗುಂಪಾಗಿ ಪ್ರಯಾಣಿಸುವವರು ನಿಲ್ದಾಣದ ಕಾಯ್ದಿರಿಸುವಿಕೆ ಕಚೇರಿಯಲ್ಲಿ ಬೃಹತ್ ಪ್ರಮಾಣದ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಈ ಸೌಲಭ್ಯ ಖಚಿತಗೊಂಡ (Confirmed), ಆರ್‌ಎಸಿ (RAC) ಹಾಗೂ ಕಾಯುವ ಪಟ್ಟಿಯ (Waitlisted) ಟಿಕೆಟ್‌ಗಳಿಗೂ ಅನ್ವಯಿಸುತ್ತದೆ.

ಗುಂಪು ಬುಕಿಂಗ್‌ಗೆ ಬರ್ತ್‌ಗಳ ಸಂಖ್ಯೆಯ ಮಿತಿ ಇಲ್ಲ
ಪರಿಷ್ಕೃತ ಮಾರ್ಗಸೂಚಿಯ ಪ್ರಮುಖ ಬದಲಾವಣೆಯೆಂದರೆ, ಗುಂಪು ಕಾಯ್ದಿರಿಸುವಿಕೆಯಲ್ಲಿ ಅನುಮತಿಸಲಾದ ಬರ್ತ್‌ಗಳು ಅಥವಾ ಆಸನಗಳ ಸಂಖ್ಯೆಗೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಈ ಹಿಂದೆ ಇದ್ದ ನಿರ್ದಿಷ್ಟ ಸಂಖ್ಯೆಯ ಮಿತಿಯನ್ನು ತೆಗೆದುಹಾಕಲಾಗಿದೆ. ಮಂಗಳೂರು ಸೇರಿದಂತೆ ಪ್ರಮುಖ ನಿಲ್ದಾಣಗಳ ಕಾಯ್ದಿರಿಸುವಿಕೆ ಅಧಿಕಾರಿಗಳಿಗೆ ಇಂತಹ ಗುಂಪು ಬುಕಿಂಗ್‌ಗಳನ್ನು ಅನುಮೋದಿಸುವ ಅಧಿಕಾರವನ್ನೂ ನೀಡಲಾಗಿದೆ.

Ad Widget

Ad Widget

ಗುಂಪು ಟಿಕೆಟ್‌ಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಅಧಿಕಾರಿಗಳಿಗೆ ನೇರ ಅರ್ಜಿ: ಗುಂಪು ಬುಕಿಂಗ್‌ಗಾಗಿ ಅರ್ಜಿದಾರರು ಸಂಬಂಧಪಟ್ಟ ನಿಲ್ದಾಣದ ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು (CRS) ಅಥವಾ ನಿಲ್ದಾಣ ವ್ಯವಸ್ಥಾಪಕರಿಗೆ (SM) ನೇರವಾಗಿ ಅರ್ಜಿ ಸಲ್ಲಿಸಬೇಕು. ಇವರಿಗೆ ಗುಂಪು ಕಾಯ್ದಿರಿಸುವಿಕೆಯನ್ನು ಅನುಮೋದಿಸುವ ಅಧಿಕಾರ ನೀಡಲಾಗಿದೆ.
  • ಪ್ರಯಾಣಿಕರ ಸಂಖ್ಯೆಗೆ ಮಿತಿ ಇಲ್ಲ: ಗುಂಪು ಬುಕಿಂಗ್‌ನಲ್ಲಿ ಬರ್ತ್ ಅಥವಾ ಆಸನಗಳ ಸಂಖ್ಯೆಗೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಎಲ್ಲಾ ಪ್ರಯಾಣ ದರ್ಜೆಗಳಲ್ಲೂ ಗುಂಪು ಕಾಯ್ದಿರಿಸುವಿಕೆ ಮಾಡಿಕೊಳ್ಳಬಹುದು.
  • ಟ್ರಾವೆಲ್ ಏಜೆನ್ಸಿಗಳ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ: ವಿದೇಶಿ ಪ್ರವಾಸಿಗರು ಹಾಗೂ ಅನಿವಾಸಿ ಭಾರತೀಯರ (NRI) ಪರವಾಗಿ ಸಲ್ಲಿಸುವ ಅರ್ಜಿಗಳನ್ನು ಹೊರತುಪಡಿಸಿ, ಇತರ ಗುಂಪು ಬುಕಿಂಗ್ ಅರ್ಜಿಗಳನ್ನು ಸ್ಥಳೀಯ ಪ್ರವಾಸ ಸಂಸ್ಥೆಗಳ ಮೂಲಕ ಸಲ್ಲಿಸಲು ಅವಕಾಶವಿಲ್ಲ. ಅರ್ಜಿದಾರರು ನೇರವಾಗಿ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಬೇಕು.
  • ಪ್ರಯಾಣದ ಉದ್ದೇಶ ಕಡ್ಡಾಯ: ಗುಂಪು ಪ್ರಯಾಣದ ಉದ್ದೇಶವನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಪ್ರಯಾಣದ ಉದ್ದೇಶವನ್ನು ತಿಳಿಸದಿದ್ದರೆ ಅನುಮತಿ ನೀಡಲಾಗುವುದಿಲ್ಲ.
  • ಪ್ರಯಾಣಿಕರ ವಿವರ ಸಲ್ಲಿಕೆ: ಅರ್ಜಿ ಸಲ್ಲಿಸುವಾಗ ಗುಂಪಿನಲ್ಲಿರುವ ಎಲ್ಲಾ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ವಿಳಾಸ ಹಾಗೂ ಪ್ರಯಾಣದ ಉದ್ದೇಶದ ವಿವರಗಳನ್ನು ಒದಗಿಸಬೇಕು.
  • ಹಿಂತಿರುಗುವ ಪ್ರಯಾಣಕ್ಕೂ ಅವಕಾಶ: ಹಿಂದಿರುಗುವ ಪ್ರಯಾಣಕ್ಕೂ ಅದೇ ಕಾಯ್ದಿರಿಸುವಿಕೆ ಕಚೇರಿಯಲ್ಲಿ ಗುಂಪು ಬುಕಿಂಗ್‌ಗೆ ಅನುಮತಿ ಪಡೆಯಬಹುದು. ಆದರೆ, ಹಿಂದಿರುಗುವ ಪ್ರಯಾಣವನ್ನು ಪ್ರತ್ಯೇಕ ಕಾಯ್ದಿರಿಸುವಿಕೆಯಾಗಿ ಪರಿಗಣಿಸಲಾಗುತ್ತದೆ.
  • ದಾಖಲೆಗಳ ನಿರ್ವಹಣೆ: ಅನುಮೋದಿಸಲಾದ ಎಲ್ಲಾ ಗುಂಪು ಬುಕಿಂಗ್‌ಗಳ ಪ್ರತ್ಯೇಕ ದಾಖಲೆ ಪುಸ್ತಕವನ್ನು ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು ಅಥವಾ ನಿಲ್ದಾಣ ವ್ಯವಸ್ಥಾಪಕರು ನಿರ್ವಹಿಸಬೇಕು. ಅರ್ಜಿ ನಮೂನೆ ಹಾಗೂ ಪ್ರಯಾಣಿಕರ ಪಟ್ಟಿಯ ಪ್ರತಿ ಪುಟಕ್ಕೂ ಮೊಹರು ಮತ್ತು ಸಹಿ ಹಾಕಬೇಕು.
  • ದುರುಪಯೋಗ ತಡೆಯಲು ಎಚ್ಚರಿಕೆ
  • ಗುಂಪು ಬುಕಿಂಗ್ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಬರ್ತ್‌ಗಳನ್ನು ಅಕ್ರಮವಾಗಿ ಕಾಯ್ದಿರಿಸುವುದಕ್ಕೆ ಅವಕಾಶ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ನೈಜ ಗುಂಪು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದು ಹಾಗೂ ಕಾಯ್ದಿರಿಸುವಿಕೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವುದು ಈ ಪರಿಷ್ಕೃತ ನಿಯಮಗಳ ಉದ್ದೇಶವಾಗಿದೆ.
  • ಉಪ ಮುಖ್ಯ ವಾಣಿಜ್ಯ ವ್ಯವಸ್ಥಾಪಕ (ಪ್ರಯಾಣಿಕರ ಸೇವೆಗಳು) ಪಿ. ಕಿರಣ್ ಕುಮಾರ್ ಅವರು ನವೆಂಬರ್ 18ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ಹೊಸ ಮಾರ್ಗಸೂಚಿಗಳನ್ನು ವಿವರಿಸಿದ್ದಾರೆ. ಸಾಮಾನ್ಯ ಮುಂಗಡ ಕಾಯ್ದಿರಿಸುವಿಕೆ ಕೌಂಟರ್‌ಗಳು ಆರಂಭವಾದ ಒಂದು ಗಂಟೆಯ ಬಳಿಕ, ಅಂದರೆ ಬೆಳಗ್ಗೆ 9 ಗಂಟೆಯಿಂದ ಗುಂಪು ಕಾಯ್ದಿರಿಸುವಿಕೆಗಳನ್ನು ಸ್ವೀಕರಿಸಬಹುದು. ಪ್ರತ್ಯೇಕ ಗುಂಪು ಬುಕಿಂಗ್ ಕೌಂಟರ್ ಇದ್ದಲ್ಲಿ ಅಲ್ಲಿಯೇ ಅಥವಾ ಸಾಮಾನ್ಯ ಕೌಂಟರ್‌ಗಳ ಮೂಲಕವೂ ಅರ್ಜಿ ಸಲ್ಲಿಸಲು ವ್ಯವಸ್ಥೆ ಕಲ್ಪಿಸಬಹುದು ಎಂದು ಸೂಚಿಸಲಾಗಿದೆ.
Ad Widget
Continue Reading

ಸ್ಥಳೀಯ

Wedding-ಕ್ಯಾಸೆಟ್‌ಗಳ ಅಬ್ಬರವಿಲ್ಲ, ಡ್ಯಾನ್ಸ್‌ಗಳ ಹಂಗಿಲ್ಲ; ಅದ್ದೂರಿತನಕ್ಕೆ ಬ್ರೇಕ್ ಹಾಕಿ ಸರಳತೆಯಲ್ಲೇ ಮದುವೆ ಸಂಭ್ರಮ..!

Published

on

Ad Widget

Ad Widget

Ad Widget

Ad Widget

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ಸಿ.ಇ.ಒ. ಕೆ.ಎನ್. ಜನಾರ್ಧನ ಮತ್ತು ಉಷಾಜನಾರ್ಧನ ತಮ್ಮ ಎರಡನೆ ಪುತ್ರ ಕೆ.ಜೆ. ಸುದರ್ಶನ್ ಅವರ ಮದುವೆಯನ್ನು ದಿವ್ಯಾ ಜೊತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ್ದು, ಸ್ಥಳೀಯ ಆಪ್ತರು, ಅಭಿಮಾನಿಗಳು ಹಾಗೂ ಸಿಬ್ಬಂದಿಯನ್ನು ಆದರದಿಂದ ಆಹ್ವಾನಿಸಿ ಬೆಳ್ತಂಗಡಿಯಲ್ಲಿರುವ ಮಂಜುನಾಥಸ್ವಾಮಿ ಕಲಾಭವನದಲ್ಲಿ ಭಾನುವಾರ ವಿವಾಹ ಸಂಭ್ರಮದ “ಸರಳ ಸ್ನೇಹಕೂಟ”ವನ್ನು ಅತ್ಯಂತ ಶಿಸ್ತುಬದ್ಧಾಗಿ ಆಯೋಜಿಸಿ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರರಾದರು.

Ad Widget

Ad Widget

Ad Widget

Ad Widget

ಉಜಿರೆ: ಕ್ಯಾಸೆಟ್‌ಗಳ ಅಬ್ಬರ, ಮೈಕಾಸುರನ ಹಾವಳಿಯಿಂದ ಶಬ್ದ ಮಾಲಿನ್ಯವಿಲ್ಲ. ಸಿನೆಮಾ ಹಾಡು, ಬ್ರೇಕ್‌ಡ್ಯಾನ್ಸ್ ಉಪಟಳವಿಲ್ಲ. ಅತ್ಯಂತ ಸರಳವಾಗಿ, ಶಿಸ್ತುಬದ್ಧವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ಸಿ.ಇ.ಒ. ಕೆ.ಎನ್. ಜನಾರ್ಧನ ಮತ್ತು ಉಷಾಜನಾರ್ಧನ ತಮ್ಮ ಎರಡನೆ ಪುತ್ರ ಕೆ.ಜೆ. ಸುದರ್ಶನ್ ಅವರ ಮದುವೆಯನ್ನು ದಿವ್ಯಾ ಜೊತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ್ದು, ಸ್ಥಳೀಯ ಆಪ್ತರು, ಅಭಿಮಾನಿಗಳು ಹಾಗೂ ಸಿಬ್ಬಂದಿಯನ್ನು ಆದರದಿಂದ ಆಹ್ವಾನಿಸಿ ಬೆಳ್ತಂಗಡಿಯಲ್ಲಿರುವ ಮಂಜುನಾಥಸ್ವಾಮಿ ಕಲಾಭವನದಲ್ಲಿ ಭಾನುವಾರ ವಿವಾಹ ಸಂಭ್ರಮದ “ಸರಳ ಸ್ನೇಹಕೂಟ”ವನ್ನು ಅತ್ಯಂತ ಶಿಸ್ತುಬದ್ಧಾಗಿ ಆಯೋಜಿಸಿ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರರಾದರು.

Ad Widget

Ad Widget alt="Ad Widget"/>

Ad Widget

ಮದುಮಗ ಕೆ.ಜೆ. ಸುದರ್ಶನ್ ತಾಯಿ-ತಂದೆ ಬಗ್ಯೆ ಅಪಾರ ಗೌರವ, ಪ್ರೀತಿ-ವಿಶ್ವಾಸವನ್ನು ವ್ಯಕ್ತಪಡಿಸಿ ಅವರೇ ತನಗೆ ಪ್ರತ್ಯಕ್ಷ ದೇವರು ಎಂದು ಗೌರವ ಸಲ್ಲಿಸಿದರು.

Ad Widget

Ad Widget <> Ad Widget

ಕೆ.ಎನ್. ಜನಾರ್ಧನ ಮತ್ತು ಉಷಾಜನಾರ್ಧನ ಭಾವುಕರಾಗಿ ಆನಂದಭಾಷ್ಪ ಸುರಿಸಿದರು. ಇಂತಹ ಮಗನನ್ನು ಪಡೆದ ತಾವೇ ಭಾಗ್ಯವಂತರು ಎಂದು ಸಂತಸವ್ಯಕ್ತಪಡಿಸಿದರು.

ಉಷಾಜನಾರ್ಧನ ಗಣೇಶನ ಸ್ತುತಿಯನ್ನು ಸುಶ್ರಾವ್ಯವಾಗಿ ಹಾಡಿದರು. ಸೊಸೆಯನ್ನು ಕೂಡಾ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳುವುದಾಗಿ ತಿಳಿಸಿದರು.

Ad Widget

Ad Widget

ಹಿರಿಯ ದಂಪತಿ ಮತ್ತು ನವದಂಪತಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿ, ಗೌರವಿಸಿದರು. ಎಲ್ಲರಿಗೂ ಸರಳ, ಶುದ್ಧ ಹಾಗೂ ಶುಚಿ-ರುಚಿಯಾದ ಶಾಕಾಹಾರ ಭೋಜನ ನೀಡಿದರು.
ಉಜಿರೆ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೇಟ್ನಾಯ, ಶಾಸಕ ಕೆ. ಹರೀಶ್‌ ಪೂಂಜ, ಮಾಜಿ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೂಡಬಿದ್ರೆಯ ಎಕ್ಸಲೆಂಟ್‌ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್‌ ಜೈನ್‌ ಮತ್ತು ರಶ್ಮಿತಾ ಜೈನ್‌ ನಾರಾವಿ ಸೇರಿದಂತೆ ಅನೇಕ ಗಣ್ಯರು, ಹಿರಿಯರು ಆಗಮಿಸಿ ನೂತನ ದಂಪತಿಗೆ ಶುಭ ಹಾರೈಸಿದರು.

Ad Widget
Continue Reading

ಶಿಕ್ಷಣ

Science Fair-ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಕೋಡ್‌ಕ್ರಾಫ್ಟ್ ವಿಜ್ಞಾನ ಮೇಳ-2026: ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ

Published

on

Ad Widget

Ad Widget

Ad Widget

Ad Widget

ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ (ರಿ.), ಪುತ್ತೂರು ಹಾಗೂ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಜಿಲ್ಲಾ ಮಟ್ಟದ ಕೋಡ್‌ಕ್ರಾಫ್ಟ್ ವಿಜ್ಞಾನ ಮೇಳ – 2026’ ಶನಿವಾರ, ನವೆಂಬರ್ 21ರಂದು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.

Ad Widget

Ad Widget

Ad Widget

Ad Widget

ಪುತ್ತೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಕುತೂಹಲ ಹಾಗೂ ಪ್ರಾಯೋಗಿಕ ಕಲಿಕೆಯನ್ನು ಬೆಳೆಸುವ ಉದ್ದೇಶದಿಂದ ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ (ರಿ.), ಪುತ್ತೂರು ಹಾಗೂ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಜಿಲ್ಲಾ ಮಟ್ಟದ ಕೋಡ್‌ಕ್ರಾಫ್ಟ್ ವಿಜ್ಞಾನ ಮೇಳ – 2026’ ಶನಿವಾರ, ನವೆಂಬರ್ 21ರಂದು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.

Ad Widget

Ad Widget alt="Ad Widget"/>

Ad Widget

ಶಾಲಾ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಯಶಸ್ವಿ ಪಯಣ:

Ad Widget

Ad Widget <> Ad Widget

“ಉತ್ತಮ ಜೀವನಕ್ಕಾಗಿ ವಿಜ್ಞಾನ” ಎಂಬ ಆಶಯದೊಂದಿಗೆ ಆರಂಭಗೊಂಡ ಈ ಅಭಿಯಾನದ ಮೊದಲ ಹಂತದಲ್ಲಿ ಜಿಲ್ಲೆಯ 41 ಗ್ರಾಮೀಣ ಶಾಲೆಗಳಲ್ಲಿ ಶಾಲಾ ಮಟ್ಟದ ವಿಜ್ಞಾನ ಮೇಳಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ 1,189 ವಿದ್ಯಾರ್ಥಿಗಳು ಭಾಗವಹಿಸಿ ಸುಮಾರು 650 ವಿನೂತನ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದರು. ಶಾಲಾ ಮಟ್ಟದಲ್ಲಿ ವಿಜೇತರಾದ ತಂಡಗಳು ಜಿಲ್ಲಾ ಮಟ್ಟದ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

ಜಿಲ್ಲಾ ಮಟ್ಟದ ಅಂತಿಮ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ 66 ಹಾಗೂ ಪ್ರೌಢಶಾಲಾ ವಿಭಾಗದ 57 ತಂಡಗಳು ಸೇರಿದಂತೆ ಒಟ್ಟು 123 ತಂಡಗಳು ಭಾಗವಹಿಸಿದ್ದವು. ಇದೇ ಸಂದರ್ಭದಲ್ಲಿ ಬಂಟರ ಭವನದಲ್ಲಿ ಸಂಪನ್ಮೂಲ ವ್ಯಕ್ತಿ ಅನಿರುದ್ಧ್ ವಾಗ್ಳೆ ವಿದ್ಯಾರ್ಥಿಗಳಿಗೆ ವಿಶೇಷ ಪ್ರೇರಣಾದಾಯಕ ಅವಧಿ ನಡೆಸಿಕೊಟ್ಟರು. ಮಾರ್ಗದರ್ಶಿ ಶಿಕ್ಷಕರಿಗಾಗಿ ಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಸಂವಾದ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

Ad Widget

Ad Widget

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಿರಂತರ ಪರಿಶ್ರಮವಿದ್ದಾಗ ಮಾತ್ರ ಹೊಸ ಆವಿಷ್ಕಾರಗಳು ಸಾಧ್ಯವಾಗುತ್ತವೆ. ನಿರಂತರ ಕಲಿಕೆಯಿಂದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು” ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕ ಶ್ರೀ ಪ್ರವೀಣ್ ಕ್ಯಾಸ್ಟಲಿನೋ, “ವಿದ್ಯಾರ್ಥಿಗಳಲ್ಲಿರುವ ಕುತೂಹಲವೇ ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತದೆ. ಪ್ರಶ್ನಿಸುವ ಹಾಗೂ ಪ್ರಯೋಗ ಮಾಡುವ ಮನೋಭಾವ ಬೆಳೆಸಿಕೊಂಡಾಗ ಗ್ರಾಮೀಣ ಪ್ರತಿಭೆಗಳು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ಆಪರೇಷನ್ಸ್ ಲೀಡ್ ಜೋಬಿನ್ ಜೋಸೆಫ್ ಹಾಗೂ ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ಶ್ರೀಶ ಬೈಪದವು ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್. ಸ್ವಾಗತಿಸಿದರು. ರಾಜೇಶ್ವರಿ ಎನ್. ನಿರೂಪಿಸಿ, ನೇತ್ರಾ ಡಿ. ರಾವ್ ವಂದಿಸಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!