ಮಂಗಳೂರು
Mangalore-ಮಗುವಿನ ಗಂಟಲಲ್ಲಿ ಸಿಲುಕಿದ ಕ್ಯಾಂಡಿ – ಮಂಗಳೂರಿನ ವೈದ್ಯರ ಸಾಹಸದಿಂದ ಉಳಿಯಿತು ಜೀವ
2 ವರ್ಷದ ಮಗುವಿನ ಗಂಟಲಲ್ಲಿ ಕಾಫಿ ಕ್ಯಾಂಡಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಮಗುವಿನ ಜೀವವನ್ನು ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಕೆಎಂಸಿ ತುರ್ತುನಿಗಾ ಘಟಕದ ವೈದ್ಯರು ಉಳಿಸಿದ್ದಾರೆ.
ಮಂಗಳೂರು, ಫೆ. 18: 2 ವರ್ಷದ ಮಗುವಿನ ಗಂಟಲಲ್ಲಿ ಕಾಫಿಕ್ಯಾಂಡಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಮಗುವಿನ ಜೀವವನ್ನು ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಕೆಎಂಸಿ ತುರ್ತುನಿಗಾ ಘಟಕದ ವೈದ್ಯರು ಉಳಿಸಿದ್ದಾರೆ.
ಮಗು ಕಾಫಿ ಕ್ಯಾಂಡಿ ತಿನ್ನುವ ವೇಳೆ ಗಂಟಲಲ್ಲಿ ಸಿಲುಕಿದ್ದು ಉಸಿರಾಟ ನಡೆಸಲಾಗದೇ ಸಮಸ್ಯೆಗೆ ಸಿಲುಕಿತ್ತು. ಮಗುವಿನ ಪೋಷಕರು ಘಟನೆ ನಡೆದ 10-15 ನಿಮಿಷದಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಗೆ ಕರೆತಂದಾಗ ಮಗು ಬಹಳ ನಿಶ್ಯಕಗೊಂಡಿದ್ದು, ಆಮ್ಲಜನಕ ಪ್ರಮಾಣವೂ ಅಪಾಯ ಮಟ್ಟದಲ್ಲಿತ್ತು. ಉಸಿರಾಟ ನಡೆಸಲು ಕಷ್ಟವಾಗುತ್ತಿತ್ತು.
ತಕ್ಷಣ ಆಸ್ಪತ್ರೆಯ ತಜ್ಞ ವೈದ್ಯರು ಪರೀಕ್ಷೆ ನಡೆಸಿ ವಿಶೇಷವಾದ ಚೊಜಿಂಗ್ ರಷ್ಯ ವಿಧಾನವನ್ನು ಕೈಗೊಂಡಿದ್ದು, ಆದರೂ ಮಗುವಿನ ಸ್ಥಿತಿ ಸುಧಾರಿಸದಿದ್ದಾಗ ಕ್ರಮಬದ್ದವಾಗಿ ಬೆನ್ನಿಗೆ ಮತ್ತು ಹೊಟ್ಟೆಯ ಭಾಗದಲ್ಲಿ ಒತ್ತಡ ಹಾಕಿ ಸಿಲುಕಿದ್ದ ಕ್ಯಾಂಡಿಯನ್ನು ವಾಂತಿ ಮಾಡಿಸಿ ಹೊರತೆಗೆಯಲಾಗಿದೆ. ಆ ಬಳಿಕ ಮಗುವಿನ ಉಸಿರಾಟದಲ್ಲಿ ಸಹಜ ಸ್ಥಿತಿಗೆ ಬಂತು ಎಂದು ತುರ್ತು ಚಿಕಿತ್ಸಾ ಘಟಕ ಕ್ಲಸ್ಟರ್ ಮುಖ್ಯಸ್ಥ ಡಾ. ಜೀದು ರಾಧಾಕೃಷ್ಣನ್ ತಿಳಿಸಿದ್ದಾರೆ.
ಮಗುವಿನ ಉಸಿರಾಟಕ್ಕೆ ತಡೆಯಾಗಿದ್ದ ಕಾಫಿ ಕ್ಯಾಂಡಿಯನ್ನು ಹೊರತೆಗೆದು ಮಗುವಿನ ಪ್ರಾಣ ಕಾಪಾಡುವಲ್ಲಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಯಶಸ್ವಿಯಾಗಿದೆ.
ನಿಧನ ವಾರ್ತೆ
Dead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
ಮಂಗಳೂರಿನ ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಬೆಳ್ತಂಗಡಿಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಎಸ್. ಕುಂಬಾರ (14) ಅವರ ಮೃತದೇಹ ಶೋಧ ಕಾರ್ಯಾಚರಣೆ ವೇಳೆ ಅ.6ರಂದು ಸಂಜೆ ಪತ್ತೆಯಾಗಿದೆ.
ಬೆಳ್ತಂಗಡಿ: ಮಂಗಳೂರಿನ ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಬೆಳ್ತಂಗಡಿಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಎಸ್. ಕುಂಬಾರ (14) ಅವರ ಮೃತದೇಹ ಶೋಧ ಕಾರ್ಯಾಚರಣೆ ವೇಳೆ ಅ.6ರಂದು ಸಂಜೆ ಪತ್ತೆಯಾಗಿದೆ.
ಬೆಳ್ತಂಗಡಿ ತಾಲೂಕಿನ ರಂಕದಗುತ್ತು, ಕಸಬಾ ಗ್ರಾಮದ ಮೂಲದ ಶ್ರೇಯಸ್ ಅ.4ರಂದು ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿಗೆ ತೆರಳಿದ್ದರು. ನಾಲ್ವರು ಅಪ್ರಾಪ್ತ ಸ್ನೇಹಿತರೊಂದಿಗೆ ಬೆಳಗ್ಗೆ ಸುಮಾರು 10 ಗಂಟೆಗೆ ಮಂಗಳೂರಿಗೆ ಬಂದು ಹುಲಿ ವೇಷದ ತರಬೇತಿಯಲ್ಲಿ ಭಾಗವಹಿಸಿದ್ದರು.
ತರಬೇತಿ ಮುಗಿದ ಬಳಿಕ ಶ್ರೇಯಸ್ ಹಾಗೂ ಸ್ನೇಹಿತರು ಸ್ಟೇಟ್ ಬ್ಯಾಂಕ್‌ನಿಂದ ಪಣಂಬೂರು ಬೀಚ್‌ಗೆ ತೆರಳಿದ್ದರು. ಸಂಜೆ ಸುಮಾರು 4.30ರಿಂದ 5 ಗಂಟೆಯ ವೇಳೆಗೆ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿದ್ದು, ಸುಮಾರು 6 ಗಂಟೆಗೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಶ್ರೇಯಸ್ ನೀರಿನಲ್ಲಿ ಮುಳುಗಿದ್ದಾರೆ. ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು.
ಶ್ರೇಯಸ್ ನೀರು ಪಾಲಾದ ವಿಚಾರವನ್ನು ಆತನ ಅಪ್ರಾಪ್ತ ಸ್ನೇಹಿತರು ಭಯಗೊಂಡು ಮನೆಯವರಿಗೆ ತಿಳಿಸಿರಲಿಲ್ಲ. ಅ.5ರಂದು ಬೆಳಗ್ಗೆ ಈ ವಿಚಾರ ಶ್ರೇಯಸ್ ಕುಟುಂಬಸ್ಥರಿಗೆ ತಿಳಿದುಬಂದಿದೆ.
ಬಾಲಕನ ತಂದೆ ಶೇಷಪ್ಪ ನೀಡಿದ ದೂರಿನ ಆಧಾರದಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಬಾಲಕನ ಪತ್ತೆಗಾಗಿ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಹಾಗೂ ಸಮುದ್ರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿತ್ತು. ಲೈಫ್‌ಗಾರ್ಡ್‌ಗಳು, ಮುಳುಗು ತಜ್ಞರು ಹಾಗೂ ಸ್ಥಳೀಯ ಮೀನುಗಾರರ ಸಹಕಾರದಿಂದ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ಮಂಗಳೂರು
Satyajit-ಎಂಆರ್‌ಪಿಎಲ್ ಸುರಕ್ಷತೆಯಲ್ಲಿ ರಾಜಿ ಬೇಡ: ಸುರಕ್ಷತಾ ಲೋಪದ ಸಮಗ್ರ ತನಿಖೆಗೆ ಸತ್ಯಜಿತ್ ಸುರತ್ಕಲ್ ಆಗ್ರಹ
ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟ ಪ್ರಕರಣವನ್ನು ಕೇವಲ ಪರಿಹಾರ ಮತ್ತು ಉದ್ಯೋಗದ ವಿಚಾರಕ್ಕೆ ಸೀಮಿತಗೊಳಿಸದೆ, ಅವಘಡಕ್ಕೆ ಕಾರಣವಾದ ಸುರಕ್ಷತಾ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಎಂಆರ್‌ಪಿಎಲ್ ಮಜ್ದೂರ್ ಸಂಘದ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.
ಮಂಗಳೂರು, ಅ.6: ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟ ಪ್ರಕರಣವನ್ನು ಕೇವಲ ಪರಿಹಾರ ಮತ್ತು ಉದ್ಯೋಗದ ವಿಚಾರಕ್ಕೆ ಸೀಮಿತಗೊಳಿಸದೆ, ಅವಘಡಕ್ಕೆ ಕಾರಣವಾದ ಸುರಕ್ಷತಾ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಎಂಆರ್‌ಪಿಎಲ್ ಮಜ್ದೂರ್ ಸಂಘದ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಆರ್‌ಪಿಎಲ್‌ನಂತಹ ಬೃಹತ್ ಕೈಗಾರಿಕಾ ಘಟಕಗಳಲ್ಲಿ ಕಾರ್ಮಿಕರು ಮಾತ್ರವಲ್ಲದೆ ಸುತ್ತಮುತ್ತಲಿನ ಜನರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಈ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಈ ಹಿಂದೆ ನಡೆದಿರುವ ಅವಘಡಗಳನ್ನೂ ಪರಿಗಣಿಸಿ ಸಮಗ್ರ ತನಿಖೆ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅವಘಡದಲ್ಲಿ ಮೃತಪಟ್ಟ ಮನೀಶ್ ಕರ್ಕೇರ ಅವರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ನೀಡಿರುವುದನ್ನು ಸ್ವಾಗತಿಸಿದ ಅವರು, ಕುಟುಂಬಕ್ಕೆ ಅಗತ್ಯ ನೆರವು ಮುಂದುವರಿಸುವುದರ ಜತೆಗೆ ಉದ್ಯೋಗ ಕಲ್ಪಿಸುವ ಕ್ರಮ ಕೈಗೊಳ್ಳಬೇಕು ಎಂದರು.
ಗುತ್ತಿಗೆ ಕಾರ್ಮಿಕರಿಗೆ ವಿಮೆ
ಎಂಆರ್‌ಪಿಎಲ್‌ನ ಗುತ್ತಿಗೆ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಹಿತದೃಷ್ಟಿಯಿಂದ ಕನಿಷ್ಠ ₹10 ಲಕ್ಷದ ಆರೋಗ್ಯ ವಿಮೆ ಒದಗಿಸಬೇಕು. ಅಪಘಾತದಲ್ಲಿ ಕಾರ್ಮಿಕ ಮೃತಪಟ್ಟ ಸಂದರ್ಭದಲ್ಲಿ ₹25 ಲಕ್ಷದ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದು ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಕಾರ್ಮಿಕರನ್ನು ಉದ್ಯೋಗದಿಂದ ವಜಾಗೊಳಿಸಲಾಗುತ್ತಿದೆ ಎಂಬ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಅನಿಲ ಸೋರಿಕೆ ಪತ್ತೆಗೆ ಪರಿಣಾಮಕಾರಿ ವ್ಯವಸ್ಥೆ ಅಗತ್ಯ
ಎಂಆರ್‌ಪಿಎಲ್‌ನಲ್ಲಿ ಅನಿಲ ಸೋರಿಕೆ ಸೇರಿದಂತೆ ಅಪಾಯಕಾರಿ ಪರಿಸ್ಥಿತಿಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚುವ ಡಿಟೆಕ್ಷನ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಬೇಕು. ಅಪಾಯದ ಸಂದರ್ಭದಲ್ಲಿ ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಜನರಿಗೆ ತಕ್ಷಣ ಎಚ್ಚರಿಕೆ ನೀಡಲು ಸೈರನ್ ವ್ಯವಸ್ಥೆ ಮತ್ತು ತುರ್ತು ಸ್ಥಳಾಂತರ ವ್ಯವಸ್ಥೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದರು.
ಸುರಕ್ಷತಾ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಕೈಗಾರಿಕಾ ಸುರಕ್ಷತೆಯ ವಿಚಾರದಲ್ಲಿ ಲೋಪ ಕಂಡುಬಂದರೆ ಅದರ ಮೂಲ ಕಾರಣ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ ಹಿತಾಸಕ್ತಿಯ ವಿಚಾರ
ಎಂಆರ್‌ಪಿಎಲ್ ಅವಘಡವನ್ನು ಕೇವಲ ಕಾರ್ಮಿಕರ ಸಮಸ್ಯೆಯಾಗಿ ಪರಿಗಣಿಸದೆ, ಜಿಲ್ಲೆಯ ಜನರ ಸುರಕ್ಷತೆ ಹಾಗೂ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರವಾಗಿ ನೋಡಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸತ್ಯಜಿತ್ ಸುರತ್ಕಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎತ್ತಿನಹೊಳೆ ಹೋರಾಟ ಸಮಿತಿ ಸಂಚಾಲಕ ಶಶಿರಾಜ್ ಶೆಟ್ಟಿ ಕೊಳಂಬೆ, ಕೆಪಿಟಿಎಂಎಸ್ ಜಿಲ್ಲಾಧ್ಯಕ್ಷ ಯಶ್‌ಪಾಲ್ ಸುವರ್ಣ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ತುಷಾರ್ ಕದ್ರಿ, ತುಳುನಾಡು ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಹಾಗೂ ಪ್ರಮುಖರಾದ ಅಮರ್ ಉಪಸ್ಥಿತರಿದ್ದರು.
ಮಂಗಳೂರು
Mangalore-ಮಂಗಳೂರು–ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ದಾಖಲೆ ಸಂಚಾರ: 20 ತಿಂಗಳಲ್ಲಿ 16.38 ಲಕ್ಷ ಪ್ರಯಾಣಿಕರು, ₹31.31 ಕೋಟಿ ಆದಾಯ..!
ಮಂಗಳೂರು–ಸುಬ್ರಹ್ಮಣ್ಯ ರೋಡ್ ರೈಲ್ವೆ ವಿಭಾಗದಲ್ಲಿ ಪ್ರಯಾಣಿಕರ ಸಂಚಾರ ಗಣನೀಯವಾಗಿ ಹೆಚ್ಚಿದ್ದು, 2025ರ ಜನವರಿಯಿಂದ 2026ರ ಆಗಸ್ಟ್‌ವರೆಗಿನ 20 ತಿಂಗಳಲ್ಲಿ ಸುಮಾರು 16.38 ಲಕ್ಷ ಪ್ರಯಾಣಿಕರು ಈ ಮಾರ್ಗದ ವಿವಿಧ ನಿಲ್ದಾಣಗಳ ಮೂಲಕ ಸಂಚರಿಸಿದ್ದಾರೆ. ಇದೇ ಅವಧಿಯಲ್ಲಿ ರೈಲ್ವೆಗೆ ಸುಮಾರು ₹31.31 ಕೋಟಿ ಪ್ರಯಾಣಿಕ ವರಮಾನ ಸಂಗ್ರಹವಾಗಿದೆ.
ಮಂಗಳೂರು: ಮಂಗಳೂರು–ಸುಬ್ರಹ್ಮಣ್ಯ ರೋಡ್ ರೈಲ್ವೆ ವಿಭಾಗದಲ್ಲಿ ಪ್ರಯಾಣಿಕರ ಸಂಚಾರ ಗಣನೀಯವಾಗಿ ಹೆಚ್ಚಿದ್ದು, 2025ರ ಜನವರಿಯಿಂದ 2026ರ ಆಗಸ್ಟ್‌ವರೆಗಿನ 20 ತಿಂಗಳಲ್ಲಿ ಸುಮಾರು 16.38 ಲಕ್ಷ ಪ್ರಯಾಣಿಕರು ಈ ಮಾರ್ಗದ ವಿವಿಧ ನಿಲ್ದಾಣಗಳ ಮೂಲಕ ಸಂಚರಿಸಿದ್ದಾರೆ. ಇದೇ ಅವಧಿಯಲ್ಲಿ ರೈಲ್ವೆಗೆ ಸುಮಾರು ₹31.31 ಕೋಟಿ ಪ್ರಯಾಣಿಕ ವರಮಾನ ಸಂಗ್ರಹವಾಗಿದೆ.
ಮಂಗಳೂರು–ಸುಬ್ರಹ್ಮಣ್ಯ ರೋಡ್ ನಡುವಿನ ಬಂಟ್ವಾಳ, ನೇರಳಕಟ್ಟೆ, ಕಬಕ ಪುತ್ತೂರು, ನರಿಮೊಗರು, ಕಾಣಿಯೂರು, ಎಡಮಂಗಲ, ಕೋಡಿಂಬಾಳ, ಬಜಕರೆ ಹಾಗೂ ಸುಬ್ರಹ್ಮಣ್ಯ ರೋಡ್ ಸೇರಿದಂತೆ ಒಂಬತ್ತು ನಿಲ್ದಾಣಗಳ ಅಂಕಿಅಂಶಗಳನ್ನು ಪರಿಗಣಿಸಲಾಗಿದೆ.
ಈ ನಿಲ್ದಾಣಗಳಲ್ಲಿ ಸುಮಾರು 10.51 ಲಕ್ಷ ಟಿಕೆಟ್ ಕಾಯ್ದಿರಿಸದ ಹಾಗೂ 5.87 ಲಕ್ಷ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಸಂಚರಿಸಿದ್ದಾರೆ. ಕಾಯ್ದಿರಿಸದ ಟಿಕೆಟ್‌ಗಳಿಂದ ಸುಮಾರು ₹7.55 ಕೋಟಿ ಹಾಗೂ ಕಾಯ್ದಿರಿಸಿದ ಟಿಕೆಟ್‌ಗಳಿಂದ ₹23.76 ಕೋಟಿ ಆದಾಯ ಬಂದಿದೆ. ಇದೇ ಅವಧಿಯಲ್ಲಿ ಸುಮಾರು 1.06 ಲಕ್ಷ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿವೆ.
ಸುಬ್ರಹ್ಮಣ್ಯ ರೋಡ್‌ಗೆ ಅಗ್ರಸ್ಥಾನ
ಪಡೀಲ್–ಸುಬ್ರಹ್ಮಣ್ಯ ನಡುವಿನ ಪ್ರಮುಖ ನಿಲ್ದಾಣವಾಗಿರುವ ಸುಬ್ರಹ್ಮಣ್ಯ ರೋಡ್ ಅತಿ ಹೆಚ್ಚು ಪ್ರಯಾಣಿಕ ದಟ್ಟಣೆ ದಾಖಲಿಸಿದೆ. 20 ತಿಂಗಳಲ್ಲಿ ಈ ನಿಲ್ದಾಣದ ಮೂಲಕ ಸುಮಾರು 8.05 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ₹18.86 ಕೋಟಿ ಪ್ರಯಾಣಿಕ ವರಮಾನ ಸಂಗ್ರಹವಾಗಿದೆ.
ಇದರಲ್ಲಿ 4.42 ಲಕ್ಷ ಕಾಯ್ದಿರಿಸದ ಹಾಗೂ 3.64 ಲಕ್ಷ ಕಾಯ್ದಿರಿಸಿದ ಪ್ರಯಾಣಿಕರು ಸೇರಿದ್ದಾರೆ. ಒಂಬತ್ತು ನಿಲ್ದಾಣಗಳ ಒಟ್ಟು ಪ್ರಯಾಣಿಕ ದಟ್ಟಣೆಯ ಸುಮಾರು ಶೇ.49 ಹಾಗೂ ಪ್ರಯಾಣಿಕ ವರಮಾನದ ಸುಮಾರು ಶೇ.60ರಷ್ಟು ಪಾಲು ಸುಬ್ರಹ್ಮಣ್ಯ ರೋಡ್ ನಿಲ್ದಾಣದ್ದಾಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರೈಲು ಸಂಪರ್ಕ ಕಲ್ಪಿಸುವುದರ ಜತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವ ಭಕ್ತರಿಗೂ ಈ ನಿಲ್ದಾಣ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಜಾತ್ರೆ, ತೀರ್ಥಯಾತ್ರೆ ಹಾಗೂ ಪ್ರಮುಖ ಹಬ್ಬಗಳ ಸಂದರ್ಭಗಳಲ್ಲಿ ಇಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ಕಬಕ ಪುತ್ತೂರು ಎರಡನೇ ಸ್ಥಾನ
ಕಬಕ ಪುತ್ತೂರು ರೈಲು ನಿಲ್ದಾಣದ ಮೂಲಕ 20 ತಿಂಗಳಲ್ಲಿ ಸುಮಾರು 5.04 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಇವರಲ್ಲಿ 3.64 ಲಕ್ಷ ಕಾಯ್ದಿರಿಸದ ಹಾಗೂ 1.39 ಲಕ್ಷ ಕಾಯ್ದಿರಿಸಿದ ಪ್ರಯಾಣಿಕರಾಗಿದ್ದಾರೆ.
ನಿಲ್ದಾಣವು ಒಟ್ಟು ಸುಮಾರು ₹7.59 ಕೋಟಿ ಪ್ರಯಾಣಿಕ ವರಮಾನ ಗಳಿಸಿದೆ. ಕಾಯ್ದಿರಿಸದ ಪ್ರಯಾಣಿಕರಿಂದ ₹1.64 ಕೋಟಿ ಹಾಗೂ ಕಾಯ್ದಿರಿಸಿದ ಪ್ರಯಾಣಿಕರಿಂದ ₹5.94 ಕೋಟಿ ಆದಾಯ ಬಂದಿದೆ.
ಇದಲ್ಲದೆ, ಕಬಕ ಪುತ್ತೂರು ನಿಲ್ದಾಣದಲ್ಲಿ ಸುಮಾರು 53,000 ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿದ್ದು, ಒಂಬತ್ತು ನಿಲ್ದಾಣಗಳ ಪೈಕಿ ಅತಿ ಹೆಚ್ಚು ಪ್ಲಾಟ್‌ಫಾರ್ಮ್ ಟಿಕೆಟ್ ಮಾರಾಟವಾದ ನಿಲ್ದಾಣವಾಗಿದೆ.
ಬಂಟ್ವಾಳದಲ್ಲೂ 2.15 ಲಕ್ಷ ಪ್ರಯಾಣಿಕರು
ಬಂಟ್ವಾಳ ರೈಲು ನಿಲ್ದಾಣದ ಮೂಲಕ ಈ ಅವಧಿಯಲ್ಲಿ ಸುಮಾರು 2.15 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಲ್ಲಿ 1.31 ಲಕ್ಷ ಕಾಯ್ದಿರಿಸದ ಹಾಗೂ 84,000 ಕಾಯ್ದಿರಿಸಿದ ಪ್ರಯಾಣಿಕರು ಸೇರಿದ್ದಾರೆ.
ಬಂಟ್ವಾಳ ನಿಲ್ದಾಣವು ಒಟ್ಟು ಸುಮಾರು ₹4.69 ಕೋಟಿ ಪ್ರಯಾಣಿಕ ವರಮಾನ ಗಳಿಸಿದೆ. ಕಾಯ್ದಿರಿಸದ ಪ್ರಯಾಣಿಕರಿಂದ ₹1.04 ಕೋಟಿ ಹಾಗೂ ಕಾಯ್ದಿರಿಸಿದ ಪ್ರಯಾಣಿಕರಿಂದ ₹3.65 ಕೋಟಿ ಆದಾಯ ಬಂದಿದೆ. ಇಲ್ಲಿ ಸುಮಾರು 37,180 ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿವೆ.
ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಹಾಗೂ ಬಂಟ್ವಾಳ ಈ ಮೂರು ನಿಲ್ದಾಣಗಳ ಮೂಲಕವೇ ಒಟ್ಟು ಸುಮಾರು 14.25 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಇದು ಒಂಬತ್ತು ನಿಲ್ದಾಣಗಳ ಒಟ್ಟು ಪ್ರಯಾಣಿಕ ದಟ್ಟಣೆಯ ಸುಮಾರು ಶೇ.87ರಷ್ಟಾಗಿದೆ.
ಗ್ರಾಮೀಣ ನಿಲ್ದಾಣಗಳಲ್ಲೂ ಗಮನಾರ್ಹ ಬೇಡಿಕೆ
ಕಾಣಿಯೂರು ನಿಲ್ದಾಣದಿಂದ ಸುಮಾರು 31,700 ಪ್ರಯಾಣಿಕರು ಸಂಚರಿಸಿದ್ದು, ₹5.10 ಲಕ್ಷ ಆದಾಯ ಸಂಗ್ರಹವಾಗಿದೆ. ಕೋಡಿಂಬಾಳದಿಂದ ಸುಮಾರು 26,600 ಪ್ರಯಾಣಿಕರು ಹಾಗೂ ₹5.25 ಲಕ್ಷ ಆದಾಯ ದಾಖಲಾಗಿದೆ.
ಎಡಮಂಗಲದಿಂದ ಸುಮಾರು 25,300 ಪ್ರಯಾಣಿಕರು ಸಂಚರಿಸಿದ್ದು, ₹3.20 ಲಕ್ಷ ಆದಾಯ ಬಂದಿದೆ. ಬಜಕರೆ ನಿಲ್ದಾಣದಿಂದ ಸುಮಾರು 11,100 ಪ್ರಯಾಣಿಕರು ಹಾಗೂ ₹2 ಲಕ್ಷ, ನೇರಳಕಟ್ಟೆಯಿಂದ ಸುಮಾರು 10,100 ಪ್ರಯಾಣಿಕರು ಹಾಗೂ ₹63,000, ನರಿಮೊಗರು ನಿಲ್ದಾಣದಿಂದ ಸುಮಾರು 9,100 ಪ್ರಯಾಣಿಕರು ಹಾಗೂ ₹97,000 ಆದಾಯ ದಾಖಲಾಗಿದೆ.
ಒಂಬತ್ತು ನಿಲ್ದಾಣಗಳಲ್ಲಿ ಒಟ್ಟು 1.06 ಲಕ್ಷ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿದ್ದು, ಕಬಕ ಪುತ್ತೂರು, ಬಂಟ್ವಾಳ ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳೇ ಬಹುಪಾಲು ಟಿಕೆಟ್ ಮಾರಾಟವನ್ನು ಹೊಂದಿವೆ.
ರೈಲ್ವೆಯ ಇತರ ವರಮಾನ
ಬಂಟ್ವಾಳ ಮತ್ತು ಕಬಕ ಪುತ್ತೂರಿನ ಪಾರ್ಕಿಂಗ್ ಗುತ್ತಿಗೆಗಳಿಂದ ಜಿಎಸ್‌ಟಿ ಹೊರತುಪಡಿಸಿ ಕ್ರಮವಾಗಿ ಸುಮಾರು ₹8,250 ಮತ್ತು ₹7,520 ಆದಾಯ ಬಂದಿದೆ.
ನಿಲ್ದಾಣಗಳ ವರ್ಗೀಕರಣ
ಈ ನಿಲ್ದಾಣಗಳನ್ನು ರೈಲು ನಿಲ್ದಾಣಗಳ ನಾನ್-ಸಬ್ ಅರ್ಬನ್ ವರ್ಗಗಳ ವಿವಿಧ ವರ್ಗಗಳಲ್ಲಿ ವರ್ಗೀಕರಿಸಲಾಗಿದೆ:
NSG-4: ಸುಬ್ರಹ್ಮಣ್ಯ ರೋಡ್
NSG-5: ಬಂಟ್ವಾಳ ಮತ್ತು ಕಬಕ ಪುತ್ತೂರು
NSG-6: ನೇರಳಕಟ್ಟೆ, ನರಿಮೊಗರು ಮತ್ತು ಎಡಮಂಗಲ
HG-3: ಕಾಣಿಯೂರು, ಕೊಡಿಂಬಾಳ ಮತ್ತು ಬಜಕರೆ
2025ರ ಜನವರಿಯಿಂದ ಈ ನಿಲ್ದಾಣಗಳ ವರ್ಗೀಕರಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲು ಸೇವೆ ವಿಸ್ತರಣೆಗೆ ಅಂಕಿಅಂಶಗಳ ಬಲ
20 ತಿಂಗಳಲ್ಲಿ 16.38 ಲಕ್ಷ ಪ್ರಯಾಣಿಕರು ಸಂಚರಿಸಿರುವುದು ಈ ರೈಲ್ವೆ ಕಾರಿಡಾರ್‌ನ ಮಹತ್ವವನ್ನು ತೋರಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ತಿಳಿಸಿದೆ.
ಸುಬ್ರಹ್ಮಣ್ಯ ರೋಡ್‌ನಲ್ಲಿ ದಾಖಲಾಗಿರುವ 8.05 ಲಕ್ಷ ಪ್ರಯಾಣಿಕರು ಹಾಗೂ ₹18.86 ಕೋಟಿ ಆದಾಯದ ಹಿನ್ನೆಲೆಯಲ್ಲಿ, ನಿಲ್ದಾಣವನ್ನು ಟರ್ಮಿನಲ್ ನಿಲ್ದಾಣವಾಗಿ ಅಭಿವೃದ್ಧಿಪಡಿಸುವುದು, ಮಂಗಳೂರಿನಿಂದ ಹೆಚ್ಚಿನ ರೈಲು ಸೇವೆಗಳನ್ನು ವಿಸ್ತರಿಸುವುದು ಹಾಗೂ ಕೊಂಕಣ, ಕೇರಳ ಮತ್ತು ತಮಿಳುನಾಡು ಭಾಗಗಳಿಗೆ ಉತ್ತಮ ಸಂಪರ್ಕ ಕಲ್ಪಿಸುವ ಬೇಡಿಕೆ ಮತ್ತಷ್ಟು ಬಲಗೊಂಡಿದೆ.
ಅದೇ ರೀತಿ ಕಬಕ ಪುತ್ತೂರು ನಿಲ್ದಾಣದಲ್ಲಿ 5.04 ಲಕ್ಷ ಪ್ರಯಾಣಿಕರ ಸಂಚಾರ, ₹7.59 ಕೋಟಿ ಆದಾಯ ಹಾಗೂ 53,000 ಪ್ಲಾಟ್‌ಫಾರ್ಮ್ ಟಿಕೆಟ್ ಮಾರಾಟವಾಗಿರುವುದರಿಂದ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂಬ ಆಗ್ರಹ ಕೇಳಿಬಂದಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಇಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ನಿಲುಗಡೆ ನೀಡಬೇಕೆಂಬ ಬೇಡಿಕೆಯೂ ಇದೆ.
ಗ್ರಾಮೀಣ ನಿಲ್ದಾಣಗಳಲ್ಲೂ ಪ್ರಯಾಣಿಕರ ಬೇಡಿಕೆ ಇರುವುದರಿಂದ ಉತ್ತಮ ಸೌಲಭ್ಯ ಹಾಗೂ ಮೂಲಸೌಕರ್ಯ ಕಲ್ಪಿಸಬೇಕು. ಮಂಗಳೂರು ಸೆಂಟ್ರಲ್–ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್‌ವರೆಗೆ ವಿಸ್ತರಿಸಿದ ಬಳಿಕ ಸ್ಥಳೀಯ ರೈಲು ಸೇವೆಗಳನ್ನು ಮತ್ತಷ್ಟು ಸುಧಾರಿಸುವ ಅಗತ್ಯವಿದೆ ಎಂದು ಸಮಿತಿ ಹೇಳಿದೆ.
ಇದರ ಜತೆಗೆ ಮಂಗಳೂರು–ಸುಬ್ರಹ್ಮಣ್ಯ ರೋಡ್ ನಡುವೆ ಕನಿಷ್ಠ ಹಳಿ ದ್ವಿಪಥೀಕರಣ ಮಾಡುವುದು, ಹೆಚ್ಚುವರಿ ಪ್ರಯಾಣಿಕ ಮತ್ತು ಪ್ರಾದೇಶಿಕ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಮಂಗಳೂರು, ಕಾಸರಗೋಡು, ಉಡುಪಿ ಸೇರಿದಂತೆ ಸಮೀಪದ ಪ್ರದೇಶಗಳಿಗೆ ಸ್ಥಳೀಯ ಮೆಮು ರೈಲು ಸೇವೆ ಆರಂಭಿಸುವ ಬೇಡಿಕೆಗೂ ಈ ಅಂಕಿಅಂಶಗಳು ಬಲ ನೀಡಿವೆ.
ಒಟ್ಟಾರೆ, 20 ತಿಂಗಳಲ್ಲಿ ದಾಖಲಾಗಿರುವ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯವು ದಕ್ಷಿಣ ಕನ್ನಡದ ನಗರ, ಗ್ರಾಮೀಣ ಪ್ರದೇಶಗಳು ಮತ್ತು ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಈ ರೈಲು ಮಾರ್ಗದ ಮಹತ್ವವನ್ನು ಎತ್ತಿ ತೋರಿಸುತ್ತಿದ್ದು, ರೈಲ್ವೆ ಮೂಲಸೌಕರ್ಯ ವಿಸ್ತರಣೆಗೆ ದತ್ತಾಂಶ ಆಧಾರಿತ ಸಮರ್ಥನೆಯನ್ನು ಒದಗಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಅಭಿಪ್ರಾಯಪಟ್ಟಿದೆ.
-
Uncategorized17 hours ago
ಬೆಳೆ ವಿಮೆ ಪರಿಹಾರ ಕಡಿತ: ಸರ್ಕಾರದ ಮುಂದೆ ಅರುಣ್ ಪುತ್ತಿಲ ಆಕ್ರೋಶ – ಪ್ರಶ್ನೆಗಳ ಸುರಿಮಳೆ
-
ದಕ್ಷಿಣ ಕನ್ನಡ11 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ಸಿನೆಮಾ17 hours agoPrema Da Ooralli-ಅಮ್ಮನ ಮಂಗಳಸೂತ್ರವನ್ನೇ ಗಿರವಿಡಲು ಮುಂದಾಗಿದ್ದ ನಿರ್ದೇಶಕ; ಇಂದು ₹17 ಕೋಟಿಯತ್ತ ಸಿನಿಮಾ! ‘ಪ್ರೇಮದ ಊರಲ್ಲಿ’ ಸೃಷ್ಟಿಸಿದ ಬಾಕ್ಸ್ ಆಫೀಸ್ ಅಚ್ಚರಿ
-
ದಕ್ಷಿಣ ಕನ್ನಡ18 hours ago
ವಿಟ್ಲ :ಬ್ಯಾಂಕ್ ಉದ್ಯೋಗದ ಆಸೆ ತೋರಿಸಿ ಹಣ ವಂಚನೆ: 15 ವರ್ಷಗಳ ಬಳಿಕ ವಾರೆಂಟ್ ಆರೋಪಿ ಬಂಧನ
-
ಅಪರಾಧ17 hours agoMangalore-ಮಂಗಳೂರು: ಜೈಲಿನಲ್ಲೇ ವಾರ್ಡನ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 5 ವರ್ಷ ಜೈಲು, 40,000 ರೂ. ದಂಡ
-
ಅಪರಾಧ10 hours agoSomasekhar-ನಕಲಿ ದಾಖಲೆ ಸೃಷ್ಟಿಸಿ ಕೈದಿಯ ಬಿಡುಗಡೆ..! ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಡಿಐಜಿ ಎಂ. ಸೋಮಶೇಖರ್
-
ಬಿಗ್ ನ್ಯೂಸ್16 hours agoPuttur-ಪುತ್ತೂರಿನಲ್ಲಿ ಆಸರೆ ಇಲ್ಲದೆ ಭಿಕ್ಷಾಟನೆ ಮಾಡುತ್ತಿದ್ದ 60ರ ವ್ಯಕ್ತಿಗೆ ನೆರವು; ಪಚ್ಚನಾಡಿ ಪುನರ್ವಸತಿ ಕೇಂದ್ರಕ್ಕೆ ದಾಖಲು
-
ಮಂಗಳೂರು17 hours agoPandamburu-ಪಣಂಬೂರು ಬೀಚ್ನಲ್ಲಿ ಹುಲಿವೇಷ ತರಬೇತಿಗೆ ಬಂದಿದ್ದ ಬಾಲಕ ನೀರುಪಾಲು


















