ಸ್ಥಳೀಯ
Odiyur-ಇಂದು – ನಾಳೆ (ಫೆ 6,7) : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ; ಹೊರೆಕಾಣಿಕೆ ಮೆರವಣಿಗೆ -ಉಗ್ರಾಣ ಮುಹೂರ್ತ
ಕೋಶ ಎಂಬುದು ದೇಹ ಹಾಗೂ ದೇಶಕ್ಕೆ ಮುಖ್ಯವಾಗಿದ್ದು, ಮಿತಿಯಲ್ಲಿದ್ದಾಗ ಎಲ್ಲವೂ ಉತ್ತಮವಾಗಿರುತ್ತದೆ. ಕೋಶವಿಲ್ಲದಿದ್ದರೆ ದೇಶಕ್ಕೆ ಅಪಾಯ, ಕೋಶ ಸರಿಯಾಗಿ ತುಂಬದಿದ್ದರೆ ದೇಹಕ್ಕೆ ಅಪಾಯವಿದೆ. ಹೊರೆಕಾಣಿಕೆ ಎಂಬುದು ಉತ್ಸವದ ಪ್ರಾರಂಭವಾಗಿದ್ದು, ಕೋಶ ತುಂಬಿದರೆ ಉತ್ಸವದ ಯಶಸ್ಸಿನ ಮುನ್ನುಡಿ ಹಾಗೂ ಪೀಠಿಕೆಯಾಗಿದೆ. ಕೋಶವನ್ನು ತುಂಬಿಸುವಲ್ಲಿ ಎಲ್ಲರ ಪಾತ್ರ ದೊಡ್ಡದಿದ್ದು, ಎಲ್ಲ ಭಕ್ತರನ್ನು ಸಂಸ್ಥಾನ ಸ್ಮರಿಸುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ವಿಟ್ಲ: ಕೋಶ ಎಂಬುದು ದೇಹ ಹಾಗೂ ದೇಶಕ್ಕೆ ಮುಖ್ಯವಾಗಿದ್ದು, ಮಿತಿಯಲ್ಲಿದ್ದಾಗ ಎಲ್ಲವೂ ಉತ್ತಮವಾಗಿರುತ್ತದೆ. ಕೋಶವಿಲ್ಲದಿದ್ದರೆ ದೇಶಕ್ಕೆ ಅಪಾಯ, ಕೋಶ ಸರಿಯಾಗಿ ತುಂಬದಿದ್ದರೆ ದೇಹಕ್ಕೆ ಅಪಾಯವಿದೆ. ಹೊರೆಕಾಣಿಕೆ ಎಂಬುದು ಉತ್ಸವದ ಪ್ರಾರಂಭವಾಗಿದ್ದು, ಕೋಶ ತುಂಬಿದರೆ ಉತ್ಸವದ ಯಶಸ್ಸಿನ ಮುನ್ನುಡಿ ಹಾಗೂ ಪೀಠಿಕೆಯಾಗಿದೆ. ಕೋಶವನ್ನು ತುಂಬಿಸುವಲ್ಲಿ ಎಲ್ಲರ ಪಾತ್ರ ದೊಡ್ಡದಿದ್ದು, ಎಲ್ಲ ಭಕ್ತರನ್ನು ಸಂಸ್ಥಾನ ಸ್ಮರಿಸುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಅಂಗವಾಗಿ ಫೆ. 6, 7 ರಂದು ನಡೆಯುವ ಶ್ರೀ ಗುರುದೇವ ಆಧ್ಯಾತ್ಮ ಕೇಂದ್ರ ಲೋಕಾರ್ಪಣೆ, ೨೫ನೇ ವರ್ಷದ ತುಳು ಸಾಹಿತ್ಯ ಸಮ್ಮೇಳನದ ಹಿನ್ನಲೆ ನಡೆದ ಹೊರೆಕಾಣಿಕೆ ಮೆರವಣಿಗೆಯನ್ನು ಸ್ವಾಗತಿಸಿ ಉಗ್ರಾಣ ಮುಹೂರ್ತ ನಡೆಸಿ ಸಂದೇಶ ನೀಡಿದರು.
ಮಂಗಳೂರು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಲ್ಕಿ, ಕಡಬ, ಮೂಡಬಿದರೆ, ಕಾಸರಗೋಡು ಸೇರಿ ಜಿಲ್ಲೆಯ ವಿವಿಧ ಕಡೆಯಿಂದ ಹೊರೆಕಾಣಿಕೆ ವಾಹನಗಳ ಮೂಲಕ ಕ್ಷೇತ್ರಕ್ಕೆ ಆಗಮಿಸಿತು.

ಸಾಧ್ವೀ ಮಾತಾನಂದಮಯೀ ದಿವ್ಯ ಸಾನಿಧ್ಯವಹಿಸಿದ್ದರು. ಶ್ರೀ ಒಡಿಯೂರು ರಥೋತ್ಸವ ಸಮಿತಿಯ ಕೋಶಾಧಿಕಾರಿ ಎ. ಸುರೇಶ್ ರೈ, ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ, ಕಾರ್ಯದರ್ಶಿ ಹರಿಣಾಕ್ಷಿ ಎಸ್. ಶೆಟ್ಟಿ, ಸ್ವಾಗತ ಸಮಿತಿ ಲಿಂಗಪ್ಪ ಗೌಡ ಪನೆಯಡ್ಕ, ಹಸಿರುವಾಣಿ ಹೊರೆಕಾಣಿಕೆ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಬೈಲುಕೊಳಂಬೆಗುತ್ತು, ಆರ್ಥಿಕ ಸಮಿತಿಯ ಸಂಚಾಲಕ ಶಶಿಧರ ಶೆಟ್ಟಿ ಜಂಬದಮನೆ, ಮಾಹಿತಿ ಮತ್ತು ಸಮನ್ವಯ ಸಮಿತಿ ಸಂಚಾಲಕ ಗಣಪತಿ ಭಟ್ ಸೇರಾಜೆ, ಸ್ವಯಂ ಸೇವಕ ಸಂಚಾಲಕ ಪ್ರವೀಣ್ ಬೇಡಗುಡ್ಡೆ, ವೇದಿಕೆ ಮತ್ತು ಸಭಾ ಸಂಚಾಲಕ ಸಂತೋಷ್ ಭಂಡಾರಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಕ್ಷೇತ್ರದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ
ಡಿ. 8ರ ಪುತ್ತೂರು ದೀಪೋತ್ಸವಕ್ಕೆ ಸಿದ್ಧತೆ ಚುರುಕು: ಕಾರ್ಯಾಲಯ ಉದ್ಘಾಟನೆ -ಅದ್ದೂರಿ ದೀಪೋತ್ಸವಕ್ಕೆ ಭಕ್ತರ ಸಹಕಾರ ಅಗತ್ಯ: ಎಸ್. ರವೀಂದ್ರ ಶೆಟ್ಟಿ

ಪುತ್ತೂರು: ಪುತ್ತೂರು ದೀಪೋತ್ಸವ ಸಮಿತಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಡಿ. 8ರಂದು ದೇವಸ್ಥಾನದ ಮುಂಭಾಗದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಸಿದ್ಧತೆಗಳು ಚುರುಕುಗೊಂಡಿದ್ದು, ಇದರ ಅಂಗವಾಗಿ ದೇವಸ್ಥಾನದ ಮುಂಭಾಗದಲ್ಲಿ ದೀಪೋತ್ಸವದ ಕಾರ್ಯಾಲಯ ಉದ್ಘಾಟನೆಗೊಂಡಿತು.
ಮಂಗಳೂರಿನ ಉದ್ಯಮಿ ಜನಾರ್ದನ ಪೂಜಾರಿ ಪದಡ್ಕ ಅವರು ಕಾರ್ಯಾಲಯವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೀಪೋತ್ಸವ ಸಮಿತಿಯ ಅಧ್ಯಕ್ಷ ಎಸ್. ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಪುತ್ತೂರಿನಲ್ಲಿ ಅದ್ದೂರಿ ಹಾಗೂ ವಿಶಿಷ್ಟ ದೀಪೋತ್ಸವಕ್ಕೆ ಸಾಕ್ಷಿಯಾಗಬೇಕು ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ದೀಪೋತ್ಸವದ ಯಶಸ್ಸಿಗೆ ಪ್ರತಿಯೊಬ್ಬರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಿತಿಯು ನಿರಂತರವಾಗಿ ಶ್ರಮಿಸುತ್ತಿದ್ದು, ಪುತ್ತೂರಿನ ಭಕ್ತರನ್ನು ಸಂಪರ್ಕಿಸಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ದೀಪೋತ್ಸವಕ್ಕೆ ಸಂಬಂಧಿಸಿದ ಎಲ್ಲ ಸಿದ್ಧತೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ಉದ್ಯಮಿಗಳಾದ ಪ್ರಕಾಶ್ ಕಾಮತ್, ಶಿವರಾಮ ಆಳ್ವ ಬಳ್ಳಮಜಲು, ವೇಣುಗೋಪಾಲ ಪಿ.ಎಲ್., ವಿಜಯ ಬ್ಯಾಂಕ್ನ ನಿವೃತ್ತ ಎಜಿಎಂ ಜಗಜೀವನದಾಸ್ ರೈ, ನಿವೃತ್ತ ಮ್ಯಾನೇಜರ್ ಜೈರಾಜ್ ಭಂಡಾರಿ ನೋಣಾಲು ಹಾಗೂ ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಯ ಗೌರವ ಸಲಹೆಗಾರರಾದ ಹರಿಣಾಕ್ಷಿ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪ್ರಸ್ತಾವನೆಗೈದು, ದೀಪೋತ್ಸವದ ಕಾರ್ಯಕ್ರಮಗಳ ರೂಪುರೇಷೆ, ಸ್ವಯಂಸೇವಕರ ನಿಯೋಜನೆ ಹಾಗೂ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಗಲಿರುವ ರಥದ ಕುರಿತು ಮಾಹಿತಿ ನೀಡಿದರು. ಕೋಶಾಧಿಕಾರಿ ಎಸ್. ದಾಮೋದರ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಜೇಶ್ ಬೆಜ್ಜಂಗಳ ಹಾಗೂ ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು ಸಹಕರಿಸಿದರು.
ಮಂಗಳೂರು
Soujanya case: Big Breaking: ಸೌಜನ್ಯ ಪ್ರಕರಣದಲ್ಲಿ ಯೂಟ್ಯೂಬ್ ಚಾನೆಲ್ಗಳ ಮಸಾಲಾ ಸುದ್ದಿಗೆ ಖರ್ಗೆ ಗರಂ! ವೈಜ್ಞಾನಿಕ ದಾಖಲೆಗಳ ಆಧಾರದಲ್ಲೆ ತನಿಖೆ
ಸೌಜನ್ಯ ಪ್ರಕರಣ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಪ್ರಕರಣದ ಮರುತನಿಖೆ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳುವಾಗ ವೈಜ್ಞಾನಿಕ ದಾಖಲೆಗಳು ಹಾಗೂ ಸಾಕ್ಷ್ಯಗಳ ಆಧಾರದಲ್ಲೇ ಮುಂದುವರಿಯಬೇಕು. ಯಾರಿಗೂ ಅನ್ಯಾಯವಾಗಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳೂರು: ಸೌಜನ್ಯ ಪ್ರಕರಣ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಪ್ರಕರಣದ ಮರುತನಿಖೆ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳುವಾಗ ವೈಜ್ಞಾನಿಕ ದಾಖಲೆಗಳು ಹಾಗೂ ಸಾಕ್ಷ್ಯಗಳ ಆಧಾರದಲ್ಲೇ ಮುಂದುವರಿಯಬೇಕು. ಯಾರಿಗೂ ಅನ್ಯಾಯವಾಗಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಕರಣದ ಸೂಕ್ಷ್ಮತೆ ಹಾಗೂ ಸಾರ್ವಜನಿಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ತನಿಖಾಧಿಕಾರಿಗಳ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಕರಣ ನಡೆದು ಸುಮಾರು 14 ವರ್ಷಗಳಾಗಿವೆ. ಇಂತಹ ಸಂದರ್ಭದಲ್ಲಿ ಸತ್ಯವನ್ನು ಹೊರತರುವುದಕ್ಕೆ ವೈಜ್ಞಾನಿಕ ದಾಖಲೆಗಳು ಹಾಗೂ ಸಾಕ್ಷ್ಯಗಳ ಆಧಾರ ಅಗತ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಂದಿ ಪತ್ರ ಬರೆದು ಕೆಲವು ವಿಚಾರಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಆ ಮಾಹಿತಿಗಳನ್ನು ತನಿಖೆಗೆ ನೀಡಲಾಗಿದೆ ಎಂದು ಹೇಳಿದರು.
ಇದೇ ವೇಳೆ, ಕೆಲವು ಯೂಟ್ಯೂಬ್ ಚಾನೆಲ್ಗಳು ಪ್ರಕರಣದ ಕುರಿತು ತಾವೇ ತೀರ್ಮಾನಗಳನ್ನು ಪ್ರಕಟಿಸುತ್ತಿರುವಂತೆ ಕಾಣುತ್ತಿದೆ. ಅವರಿಗೆ ಮಾಹಿತಿ ಎಲ್ಲಿಂದ ಬರುತ್ತಿದೆ ಎಂಬುದು ತಿಳಿದಿಲ್ಲ. ಕೆಲವು ಚಾನೆಲ್ಗಳು ಸುದ್ದಿಗಳಿಗೆ ಮಿರ್ಚಿ ಮಸಾಲೆ ಸೇರಿಸಿ ಪ್ರಸಾರ ಮಾಡುತ್ತಿವೆ ಎಂದು ಅವರು ಟೀಕಿಸಿದರು.
ಶಿಕ್ಷಣ
Vivekananda-ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ: ವೃತ್ತಿವಾದ ಮತ್ತು ಆದರ್ಶವಾದ: ಸು.ರಾಮಣ್ಣ ಅವರಿಂದ ಉಪನ್ಯಾಸ ಕಾರ್ಯಕ್ರಮ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಾವರ್ಕರ್ ಸಬಾಭವನದಲ್ಲಿ ವೃತ್ತಿವಾದ ಮತ್ತು ಆದರ್ಶವಾದ ಎನ್ನುವ ವಿಷಯದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಟ ಪ್ರಚಾರಕ ಮಾನನೀಯ ಸು.ರಾಮಣ್ಣ ಮಾತಾಡಿದರು.
ಪುತ್ತೂರು: ಮನುಷ್ಯನ ಜೀವನದ ಗುರಿ ವ್ಯಕ್ತಿಗತವಾಗಿರಬಾರದು. ಸಮಾಜಕ್ಕೆ, ದೇಶಕ್ಕೆ ಏನಾದರೂ ಮಾಡಬೇಕೆನ್ನುವುದು ನಮ್ಮ ಗುರಿಯಾಗಬೇಕು. ಅದಕ್ಕೆ ವಿವಿಧ ಬಗೆಯ ಜನರ ನಡುವೆ ಕಾರ್ಯನಿರ್ವಹಿಸಬೇಕು. ಆಗ ನಿಜವಾದ ಆವಶ್ಯಕತೆ ಏನೆಂದು ಅರಿವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಟ ಪ್ರಚಾರಕ ಮಾನನೀಯ ಸು.ರಾಮಣ್ಣ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಾವರ್ಕರ್ ಸಬಾಭವನದಲ್ಲಿ ವೃತ್ತಿವಾದ ಮತ್ತು ಆದರ್ಶವಾದ ಎನ್ನುವ ವಿಷಯದ ಬಗ್ಗೆ ಮಾತಾಡಿದರು. ಓದು, ಜ್ಞಾನಸಂಗ್ರಹ ನಮ್ಮ ಸಾಧನೆಯ ಮೊದಲನೇ ಘಟ್ಟ. ಇದು ಇಲ್ಲದಿದ್ದರೆ ನಾವು ಸಣ್ಣವರಾಗುತ್ತೇವೆ. ವಿದ್ಯಾರ್ಥಿ ದೆಸೆಯಲ್ಲಿಯೇ ದೀರ್ಘವಾದ ಗುರಿಯನ್ನು ಇಟ್ಟುಕೊಳ್ಳಲೇಬೇಕು ಎಂದರು. ಜೀವನದಲ್ಲಿ ಕನಸು ಕಾಣಬೇಕು. ದೇವರು ಕೊಟ್ಟ ಬುದ್ಧಿ ಶಕ್ತಿ ಮತ್ತು ವ್ಯಕ್ತಿತ್ವವನ್ನು ಬಳಸಿಕೊಂಡು ದೊಡ್ಡವರಾಗಿ ಎನ್ನುವ ಅಬ್ದುಲ್ ಕಲಾಂ ಅವರ ಮಾತುಗಳನ್ನು ನೆನಪಿಸಿದ ಅವರು ದೇಶದ ಜೀವಿತೋದ್ದೇಶವನ್ನು ಉನ್ನತೀಕರಿಸುವುದರ ಜತೆಯಲ್ಲಿ ಸೃಷ್ಟಿಯ ಹಿತಕ್ಕೋಸ್ಕರ ಬದುಕಬೇಕು ಎಂದರು. ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾಮಿ ವಿವೇಕಾನಂದರು, ಸಾವರ್ಕರ್, ಅಂಬೇಡ್ಕರ್ ಇವರ ಜೀವನವು ನಮಗೆ ದಾರಿದೀಪವಾಗಲಿ ಎಂದರು. ಮಾನವತೆಯನ್ನು ಉಳಿಸುವುದಕ್ಕಾಗಿ ಅತ್ಯಂತ ಘೋರ ಸಂಕಟದ ಸಮಯದಲ್ಲಿ ಸೂಕ್ತ ನಿರ್ಣಯವನ್ನು ತೆಗೆದುಕೊಂಡ ಪೈಲೆಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ನಿಜವಾದ ಸಾಧಕ ಎಂದು ಹೇಳಿದರು. ಕೋಟ್ಯಂತರ ರೂಪಾಯಿ ವೇತನ ಪಡೆಯುವ ತಂತ್ರಜ್ಞರಾಗುವುದಲ್ಲ ಬದಲಾಗಿ ಸರ್.ಎಂ.ವಿಶ್ವೇಶ್ವರಯ್ಯರಾಗಿ ಎಂದು ಹಿತ ನುಡಿದರು.

ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ ಮತ್ತು ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಪ್ರಸನ್ನ ದರ್ಬೆ, ನಿರ್ದೇಶಕರಾದ ಮನೋಜ್ ಕುಮಾರ, ಸುಜಿತ್ ಕುಮಾರ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಅಚ್ಯುತ ನಾಯಕ್, ವಿವೇಕಾನಂದ ಸಿಬಿಎಸ್ಸಿ ಶಾಲೆಯ ಸಂಚಾಲಕ ರವಿನಾರಾಯಣ, ವಿವೇಕಾನಂದ ವಸತಿ ನಿಲಯಗಳ ನಿರ್ದೇಶಕ ರಾಜಗೋಪಾಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಅ.ನಾ.ರವಿ ಸಮಾರಂಭದಲ್ಲಿ ಹಾಜರಿದ್ದರು.
-
ಕ್ರೈಂ18 hours agoMurder-ಕನ್ಯಾನ: ಚಿಕ್ಕಪ್ಪನ ಎದೆಗೆ ಕತ್ತಿಯಿಂದ ಇರಿದು ಹತ್ಯೆಗೈದ ಯುವತಿ ಅರೆಸ್ಟ್
-
ನಿಧನ ವಾರ್ತೆ18 hours agoAccident-ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ: 8 ವರ್ಷದ ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು; ನಾಲ್ವರ ಸ್ಥಿತಿ ಗಂಭೀರ
-
ಕಾರ್ಯಕ್ರಮಗಳು17 hours agoPuttur-ಪುತ್ತೂರು: ನ.27ರಂದು ಅತ್ಯಾಧುನಿಕ ಬಹುಮಹಡಿ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ಲೋಕಾರ್ಪಣೆ; ಒಂದೇ ಸೂರಿನಡಿ ಹೈಪರ್ ಮಾರ್ಕೆಟ್ ಸಹಿತ ಹಲವು ಸೇವೆಗಳು
-
ಸ್ಥಳೀಯ12 hours agoValaalu toll plaza-ವಳಾಲು ಟೋಲ್ ಪ್ಲಾಜಾ ಕಾಮಗಾರಿ ಪೂರ್ಣ; ವಾರದೊಳಗೆ ಅಧಿಕೃತ ಘೋಷಣೆ ಸಾಧ್ಯ; ಬ್ರಹ್ಮರಕೂಟ್ಲು ಟೋಲ್ನಿಂದ ‘ಡಬಲ್ ಟೋಲ್’ ಆತಂಕ..!
-
ಅಪರಾಧ16 hours agoExcise raid-ಬಾಳ್ತಿಲ, ಮೆಲ್ಕಾರ್ನಲ್ಲಿ ಅಬಕಾರಿ ದಾಳಿ: ₹20.37 ಲಕ್ಷ ಮೌಲ್ಯದ ಗೋವಾ ಮದ್ಯ, 2 ಕಾರುಗಳು ವಶ
-
ಅಪರಾಧ12 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತಿಬ್ಬರು ಸಾಕ್ಷಿಗಳು ಉಲ್ಟಾ; ಪ್ರತಿಕೂಲ ಸಾಕ್ಷಿಗಳೆಂದು ಘೋಷಿಸಿದ ನ್ಯಾಯಾಲಯ
-
ಬಿಗ್ ನ್ಯೂಸ್18 hours agoRakesh Shetty-ಸ್ಟಿಂಗ್ ಆಪರೇಷನ್ ಪ್ರಕರಣ: ಜಾಮೀನು ಅರ್ಜಿ ವಾಪಸ್ ಪಡೆದ ರಾಕೇಶ್ ಶೆಟ್ಟಿ
-
ಕ್ರೀಡೆ16 hours agoVaibhav Suryavamshi-52 ಎಸೆತಗಳಲ್ಲಿ ದ್ವಿಶತಕ, 28 ಸಿಕ್ಸರ್ಗಳ ಅಬ್ಬರ; ಒಂದೇ ಪಂದ್ಯದಲ್ಲಿ ಎರಡು ವಿಶ್ವದಾಖಲೆ ಬರೆದ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ

















