Connect with us

ಸ್ಥಳೀಯ

Sant meeting-ಎಡನೀರು ಸಂಸ್ಥಾನದ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ವಾಹನದ ಮೇಲೆ ದಾಳಿ ಖಂಡಿಸಿ ಹಲವು ಸಂತರಿಂದ ಸಂತ ಸಭೆ

Published

on

Ad Widget

Ad Widget

Ad Widget

Ad Widget
Ad Widget

Ad Widget

Ad Widget

Ad Widget

ಕೆಲ ದಿನಗಳ ಹಿಂದೆ ಎಡನೀರು ಮಠಾಧೀಶರು ಸಂಚರಿಸುತ್ತಿದ್ದ ವಾಹನದ ಮೇಲೆ ಪುಂಡರ ತಂಡವೊಂದು ದಾಳಿ ಮಾಡಿತ್ತು. ಈ ಹಿನ್ನಲೆಯಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರದೇಶ ಕಮಿಟಿಯ ನೇತೃತ್ವದಲ್ಲಿ ಎಡನೀರು ಮಠದಲ್ಲಿ ಸನ್ಯಾಸಿ ಸಭೆ ನ. 25 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಿತು.

Ad Widget

Ad Widget alt="Ad Widget"/>

Ad Widget

ಸಭೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ದಕ್ಷಿಣ ಭಾರತ ಸಂಸ್ಥಾನಗಳಿಂದ ಅಖಿಲ ಭಾರತೀಯ ಸಂತಸಮಿತಿಯ ಕಾರ್ಯಕರ್ತರು ಭಾಗವಹಿಸಿದರು.

Ad Widget

Ad Widget <> Ad Widget

ಸನಾತನ ಸಂಸ್ಕೃತಿಯ ಶ್ರೇಷ್ಠ ಭೂಮಿಯಾದ ಭಾರತದಲ್ಲಿ ಸಂಸ್ಕೃತಿ ಸಂರಕ್ಷಣೆಯೂ ಕೇಂದ್ರ ಸಂಸ್ಥಾನ ಸರ್ಕಾರದ ಜವಾಬ್ದಾರಿಯಾಗಿದೆ. ಸನಾತನ ಧರ್ಮ ಸಂರಕ್ಷಣೆಗೆ ಪ್ರವರ್ತಿಸುವ ಮಠಾಧೀಶ್ವರರ ಯಾತ್ರಾ ಮದ್ಯೆ ಸಾಮೂಹಿಕ ದ್ರೋಹಿಗಳು ನಿರೀಶ್ವಾರವಾದಿಗಳು ಧರ್ಮ ವಿರೋಧಿಗಳಿಂದ ಬರುವಂತಹ ಆಕ್ರಮಣವನ್ನು ಕ್ಷಮಿಸಲು ಅಸಾಧ್ಯ. ಸಂಚಾರ ಸ್ವಾತಂತ್ರ್ಯ ಎಲ್ಲಾರ ಹಕ್ಕು ಅದೇ ರೀತಿ ಆಧ್ಯಾತ್ಮಿಕ ಆಚಾರ್ಯರ ಯಾತ್ರೆ ಸಂದರ್ಭ ಅವರಿಗೆ ತೊಂದರೆ ಉಂಟಾದಲ್ಲಿ ಆ ತೊಂದರೆಯನ್ನು ಬಗೆಹರಿಸಿ ಯಾತ್ರೆಗೆ ಬೇಕಾದ ಸೌಕರ್ಯವನ್ನು ನೀಡುವುದು ಪೊಲೀಸರ ಜವಾಬ್ದಾರಿ. ರಾಷ್ಟ್ರೀಯತೆ ಯಾವುದೇ ರಾಷ್ಟ್ರೀಯ ಪಕ್ಷದವರಲ್ಲಿ ಪ್ರತ್ಯೇಕ ಮಮತೆಯಿಲ್ಲದೆ ಧರ್ಮ ಸಂರಕ್ಷಕರಾದ ಸ್ವಾಮೀಜಿಯವರ ಯಾತ್ರೆಯಲ್ಲಿ ಈ ರೀತಿ ದುರಂತ ಅನುಭವಗಳು ಸಂಭವಿಸಬಾರದು.

ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಯಾತ್ರೆ ಸಂದರ್ಭ ದಾರಿ ಬ್ಲಾಕ್ ಮಾಡಿ ವಾಹನಕ್ಕೆ ಆಕ್ರಮಣ ಎಸಗಿದವರನ್ನು ಬಂಧನಕ್ಕೊಳಪಡಿಸಲಿಲ್ಲ. ಅದು ಸರಿಯಲ್ಲ ಆದ್ದರಿಂದ ಆದಷ್ಟು ಬೇಗ ದುಷ್ಕರ್ಮಿಗಳನ್ನು ಅರೆಸ್ಟ್ ಮಾಡಿ ಕಾನೂನು ವ್ಯವಸ್ಥೆಯಿಂದ ತಕ್ಕದಾದ ಶಿಕ್ಷೆ ನೀಡಬೇಕು. ಸ್ವಾಮೀಜಿಗಳ ಯಾತ್ರೆ ಹಾಗೂ ವಾಹನಕ್ಕೆ ಬೇಕಾದ ಸಂರಕ್ಷಣೆ ನೀಡಲು ಸರಕಾರ ಸಂಬಂಧಪಟ್ಟವರಿಗೆ ನಿರ್ದೇಶನವನ್ನು ಕೊಡಬೇಕು. ಆತ್ಮೀಯ ಆಚಾರ್ಯರು ಆಕ್ರಮಣಕ್ಕೆ ಗುರಿಯಾಗಬಾರದೆಂದು ಸನ್ಯಾಸ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲಾಯಿತು. ಅಲ್ಲದೇ ಆಕ್ರಮಣವನ್ನು ತೀವ್ರವಾಗಿ ಖಂಡಿಸಲಾಯಿತು.

Ad Widget

Ad Widget

ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯಾಧ್ಯಕ್ಷ ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಯವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಸೇರಿದ ಸಭೆಯಲ್ಲಿ ಮಂಗಳೂರು ಓಂ ಶ್ರೀ ಮಠದ ಮಾತಾಶ್ರೀ ಓಂ ಶ್ರೀ ಶಿವ ಜ್ಞಾನಮಹಿ ಸರಸ್ವತಿ, ಅಖಿಲ ಭಾರತಿಯ ಸಂತ ಸಮಿತಿ ಕರ್ನಾಟಕ ಕೋಶಾಧಿಕಾರಿ ಪರಂಪೂಜ್ಯ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ, ಮುಖ್ಯ ಕಾರ್ಯದರ್ಶಿ ಶ್ರೀ ರಾಜೇಶ್ ನಾಥ್ ಗುರೂಜಿ, ಸಂಘಟನಾ ಕಾರ್ಯದರ್ಶಿ ಶ್ರೀ ಜಯಪ್ರಕಾಶ್ ಗುರೂಜಿ. ಅಖಿಲ ಭಾರತೀಯ ಸಂತಸಮಿತಿ ಕೇರಳ ಪ್ರದೇಶ ಅಧ್ಯಕ್ಷ ಶ್ರೀ ಪ್ರಭಾಕರಾನಂದ ಸರಸ್ವತಿ, ಉಪಾಧ್ಯಕ್ಷ ಶ್ರೀ ಸ್ವಾಮಿ ಸಾಯಿ ಈಶ್ವರಾನಂದ ಸರಸ್ವತಿ, ಮುಖ್ಯ ಕಾರ್ಯದರ್ಶಿ ಸ್ವಾಮಿ ಶ್ರೀ ಕೈಲಾಸಾನಂದ ಸರಸ್ವತಿ, ಕಾರ್ಯದರ್ಶಿ ಸ್ವಾಮಿ ಶ್ರೀ ವಿಶ್ವಾನಂದ ಸರಸ್ವತಿ, ವಿಶ್ವಕರ್ಮ ಶಂಕರಾಚಾರ್ಯ ಪೀಠಾಧೀಶ್ವರ ದಂಡಿ ಸ್ವಾಮಿ ಶ್ರೀ ಸಾಧು ಕೃಷ್ಣಾನಂದ ಸರಸ್ವತಿ, ಚೆರುಕೋಡ್ ಆಂಜನೇಯ ಆಶ್ರಮ ಮಠಾಧೀಶ್ವ‌ರ್ ಸ್ವಾಮಿ ಶ್ರೀ ರಾಮಾನಂದನಾಥ್ ಚೈತನ್ಯ.ಅಖಿಲ ಭಾರತೀಯ ಸಂತಸಮಿತಿ ತಮಿಳುನಾಡು ಪ್ರದೇಶ ಅಧ್ಯಕ್ಷ ವಿಶ್ವ ಲಿಂಗ ತಂಬಿರಾನ್ ಶ್ರೀ ಶ್ರೀ ಯುಕೇಶ್ವರ ಸ್ವಾಮಿ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಪರಮಹಂಸ ಶ್ರೀ ಮೋಹನದಾಸ್ ಸ್ವಾಮೀಜಿ ಭಾಗವಹಿಸಿ ಮಾತನಾಡಿದರು.

Ad Widget
Click to comment

Leave a Reply

ಶಿಕ್ಷಣ

Narendra-ನರೇಂದ್ರ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಇಚ್ಚಿಕ ಜೈನ್ ಇವರು ಕರಾಟೆ ಸ್ಪರ್ಧೆಯಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI)ಗೆ ಆಯ್ಕೆ

Published

on

Ad Widget

Ad Widget

Ad Widget

Ad Widget

ಮಧ್ಯಪ್ರದೇಶದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನರೇಂದ್ರ ಪ. ಪೂ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಭಾಗವಹಿಸಿ, ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ಗೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget

Ad Widget

ಮಧ್ಯಪ್ರದೇಶದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನರೇಂದ್ರ ಪ. ಪೂ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಭಾಗವಹಿಸಿ, ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ಗೆ ಆಯ್ಕೆಯಾಗಿರುತ್ತಾರೆ.

Ad Widget

Ad Widget alt="Ad Widget"/>

Ad Widget

ಇವರು ಪುತ್ತೂರಿನ ನಿವಾಸಿಗಳಾದ ಪ್ರದೀಪ್ ಜೈನ್ ಮತ್ತು ಪ್ರೇಕ್ಷ ದಂಪತಿಗಳ ಪುತ್ರಿ.

Ad Widget

Ad Widget <> Ad Widget

ಇವರು ಜಪಾನ್ ಶೊಟೊಕಾನ್ ಕರಾಟೆ ಮತ್ತು ಮಾರ್ಷಲ್ ಆರ್ಟ್ ತರಬೇತಿ ಸಂಸ್ಥೆಯ ತರಬೇತುದಾರರಾದ ಶಿವಪ್ರಸಾದ್ ಡಿ. ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ರಕ್ಷಕ-ಶಿಕ್ಷಕ ಸಂಘ, ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಈ ವಿದ್ಯಾರ್ಥಿಯ ಉಜ್ವಲ ಭವಿಷ್ಯಕ್ಕೆ ಶುಭಹಾರೈಸಿದ್ದಾರೆ.

Continue Reading

ಶಿಕ್ಷಣ

Vivekananda-ದ.ಕ ಜಿಲ್ಲಾಮಟ್ಟದ ಶಾಂತಿವನ ಟ್ರಸ್ಟ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಚಿಂತನ ಎಂ. ಚಿತ್ರಕಲೆಯಲ್ಲಿ ಪ್ರಥಮ

Published

on

Ad Widget

Ad Widget

Ad Widget

Ad Widget

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಜ್ಞಾನಚಂದನ/ ಜ್ಞಾನನಂದನ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು ಕೆ.ಪಿ.ಎಸ್, ಪುಂಜಾಲಕಟ್ಟೆಯಲ್ಲಿ ದಿನಾಂಕ ನ.23ರಂದು ನಡೆಯಿತು.

Ad Widget

Ad Widget

Ad Widget

Ad Widget

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಜ್ಞಾನಚಂದನ/ ಜ್ಞಾನನಂದನ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು ಕೆ.ಪಿ.ಎಸ್, ಪುಂಜಾಲಕಟ್ಟೆಯಲ್ಲಿ ದಿನಾಂಕ ನ.23ರಂದು ನಡೆಯಿತು.

Ad Widget

Ad Widget alt="Ad Widget"/>

Ad Widget

ಪೌಢ ಶಾಲಾ ವಿಭಾಗದಲ್ಲಿ ಚಿಂತನ. ಎಂ (ದಿ.ಸೀತಾರಾಮ ಮೇಲ್ಪಾಡಿ ಹಾಗೂ ಸರೋಜ ಮೇಲ್ಪಾಡಿಯವರ ಪುತ್ರಿ)ಚಿತ್ರಕಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Ad Widget

Ad Widget <> Ad Widget

ರಾಜ್ಯಮಟ್ಟದ ಸ್ಪರ್ಧೆಗಳು ಮುಂಬರುವ ಜನವರಿ ತಿಂಗಳಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿದೆ.

Ad Widget
Continue Reading

ಶಿಕ್ಷಣ

Narendra-ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ-ಉದ್ಘಾಟನೆ

Published

on

Ad Widget

Ad Widget

Ad Widget

Ad Widget

ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ 2026-27 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ, ಸರಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆ ಇದರ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ 1 ಆದ ರಾಮಕೃಷ್ಣ ಪಡುಮಲೆ ಅವರು ಮಾತನಾಡಿದರು.

Ad Widget

Ad Widget

Ad Widget

Ad Widget

ಕ್ರೀಡೆಯು ಜೀವನದ ಒಂದು ಭಾಗವಾಗಿದ್ದು,ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಬೆಳೆಸುತ್ತದೆ.ನಾಯಕತ್ವ, ತಾಳ್ಮೆ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದ ಮೌಲ್ಯಗಳನ್ನು ಕಲಿಸುತ್ತದೆ.ಮನಸ್ಸಿನ ಸ್ಥಿತಿಯನ್ನು ಸುಧಾರಿಸುತ್ತದೆ.ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತದೆ.ತಂಡದ ಕೆಲಸ, ಒಗ್ಗಟ್ಟು ಮತ್ತು ಪರಸ್ಪರ ಸಹಕಾರವನ್ನು ಹೆಚ್ಚಿಸುತ್ತದೆ.ಯಶಸ್ಸಿನ ಶಿಖರವನ್ನು ಸಾಧಿಸಲು ವರ್ಷಗಳ ಕಠಿಣ ತರಬೇತಿಯನ್ನು ನಿಗದಿಪಡಿಸುತ್ತದೆ ಎಂಬುದನ್ನು ಗುರುತಿಸುತ್ತದೆ ಎಂದು ಸರಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆ ಇದರ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ 1ಆದ ರಾಮಕೃಷ್ಣ ಪಡುಮಲೆ ಇವರು ಹೇಳಿದರು.

Ad Widget

Ad Widget alt="Ad Widget"/>

Ad Widget

ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ 2026-27 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

Ad Widget

Ad Widget <> Ad Widget

ಕ್ರೀಡಾಕೂಟದಲ್ಲಿ ಧ್ವಜಾರೋಹಣ ಮತ್ತು ಗೌರವ ವಂದನೆಯನ್ನು ಸ್ವೀಕರಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶುಭಾ ಅಡಿಗ ಇವರು ಮಾತನಾಡುತ್ತಾ“ಇಂದಿನ ಯುವಜನತೆಯಲ್ಲಿ ಕ್ರೀಡಾಮನೋಭಾವ ಬೆಳೆದರೆ ಜೀವನದ ಪ್ರತಿಕೂಲ ಪರಿಸ್ಥಿತಿಯಲ್ಲೂ ಅವರು ಛಲಬಿಡದೆ ಸಾಧನೆ ಮಾಡಿ ಜೀವನವನ್ನು ರೂಪಿಸಿಕೊಳ್ಳುತ್ತಾರೆ.ಇಂತಹ ದೃಢ ಮನಸ್ಸಿನ ನಾಗರಿಕರೇ ಸ್ವಸ್ಥ ಸಮಾಜದ ರೂವಾರಿಗಳು.ಅದಕ್ಕಾಗಿ ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರಬೇಕು. “ಎಂದು ಹೇಳಿದರು.
ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಸತ್ಯನಾರಾಯಣ ಬಿ. ಇವರು ಮಾತನಾಡುತ್ತಾ“ಕ್ರೀಡೆ ಸಹಶಿಕ್ಷಣದ ಒಂದು ಭಾಗ.ಮನಸ್ಸಿನ ಸಮತೋಲಿತ ಬೆಳವಣಿಗೆಗೆ ಮುಖ್ಯಕಾರಣ ಕ್ರೀಡೆ.ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಸೋಲು ಗೆಲುವಿನ ಅರ್ಥವನ್ನು ತಿಳಿದುಕೊಳ್ಳಬೇಕು.ಈ ಮೂಲಕ ಜಿವನದಲ್ಲಿ ಸಮಚಿತ್ತವನ್ನು ಸಾಧಿಸಿಕೊಳ್ಳಬಹುದು.ಉತ್ತಮ ಕ್ರೀಡಾಪಟು ಉತ್ತಮ ವಿದ್ಯಾರ್ಥಿಯಾಗುತ್ತಾನೆ.ಉತ್ತಮ ವಿದ್ಯಾರ್ಥಿಉತ್ತಮ ನಾಗರಿಕನಾಗುತ್ತಾನೆ.ನಮ್ಮ ಹಾದಿಯ ಪ್ರಗತಿಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಯಶಸ್ವಿ ಜೀವನವನ್ನುರೂಪಿಸಲು ಕ್ರೀಡೆಯು ಸಹಾಯಮಾಡುತ್ತದೆ.” ಎಂದು ಹೇಳಿದರು.

ವಿದ್ಯಾರ್ಥಿಗಳ ವಿವಿಧ ತಂಡಗಳ ಶಿಸ್ತುಬದ್ಧ ಪಥಸಂಚಲನ ನಡೆಯಿತು.ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು.

Ad Widget

Ad Widget

ಜಿಲ್ಲಾ ,ರಾಜ್ಯ ಮತ್ತು ರಾಷ್ಟçಮಟ್ಟದ ವಿವಿಧಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನುತರುವುದರ ಮೂಲಕ ಕರ‍್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ಪಥಸಂಚಲನ ಕರ‍್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ,ಮಾತನಾಡುತ್ತಾ“ಕ್ರೀಡೆಯು, ಆತ್ಮವಿಶ್ವಾಸ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಸಹಕಾರಿ.ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯ ಮೂಲವಾಗಿದೆ.ವ್ಯಾಯಾಮದ ಅತ್ಯುತ್ತಮ ಸಾಧನವೆಂದು ಪರಿಗಣಿಸಲಾಗಿದೆ.ಹಾಗಾಗಿ ಈ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಸದೃಢ ಪ್ರಜೆಗಳಾಗಿ ಮುನ್ನಡೆಯಿರಿ ”ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಅರುಣ್ ಬಿ.ಕೆ. ಇವರು ಉಪಸ್ಥಿತರಿದ್ದರು.

ಈ ಕ್ರೀಡಾಕೂಟದಲ್ಲಿ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ನಮಿತಾ, ಮತ್ತು ಕಾಲೇಜಿನ ಕ್ರೀಡಾ ತರಬೇತುದಾರರಾದ ಮನೋಹರ್ ಎನ್. ರವರು ಸಹಕರಿಸಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಲೋಚನಾ ವಂದಿಸಿದರು. ಉಪನ್ಯಾಸಕರಾದ ಮಮತಾ ಮತ್ತು ಅಪೂರ್ವ ಕಾರ‍್ಯಕ್ರಮವನ್ನು ನಿರೂಪಿಸಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!