ಐಫೋನ್ 16 […]" /> ಐಫೋನ್ 16 […]"> Apple I phone 16 ಅತ್ಯಾಧುನಿಕ ವೈಶಿಷ್ಟ್ಯಗಳುಳ್ಳ ದುಬಾರಿಯಲ್ಲದ ಐಫೋನ್ 16 ಪ್ಲಸ್ - Nikhara News | Kannada News Website
Connect with us

ವೈರಲ್‌ ನ್ಯೂಸ್‌

Apple I phone 16 ಅತ್ಯಾಧುನಿಕ ವೈಶಿಷ್ಟ್ಯಗಳುಳ್ಳ ದುಬಾರಿಯಲ್ಲದ ಐಫೋನ್ 16 ಪ್ಲಸ್

Published

on

Ad Widget

Ad Widget

Ad Widget

Ad Widget

ಐಫೋನ್ 16 ಸರಣಿಯಲ್ಲಿ ಗರಿಷ್ಠ ವೈಶಿಷ್ಟ್ಯಗಳು ಮತ್ತು ಗರಿಷ್ಠ ಬೆಲೆ ಇರುವುದು ಐಫೋನ್ 16 ಪ್ರೊ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುವುದು ಐಫೋನ್ 16 ಪ್ರೊ ಮ್ಯಾಕ್ಸ್. ಆದರೆ, ಬಹುತೇಕ ಐಫೋನ್ 16 ಪ್ರೊ ಮ್ಯಾಕ್ಸ್ ಗಾತ್ರವನ್ನು ಹೋಲುವ, 16 ಪ್ರೊದ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದ್ದೂ ಕೊಂಚ ಕಡಿಮೆ ಬೆಲೆಯಲ್ಲಿ ದೊರೆಯುವುದು ಐಫೋನ್ 16 ಪ್ಲಸ್. 6.7 ಇಂಚು ಸ್ಟ್ರೀನ್ ಇರುವ ಐಫೋನ್ 16 ಪ್ಲಸ್ ಹೇಗಿದೆ? ಇಲ್ಲಿದೆ ಮಾಹಿತಿ.

Ad Widget

Ad Widget

Ad Widget

Ad Widget

ಪ್ರಮುಖ ವೈಶಿಷ್ಟ್ಯಗಳು

Ad Widget

Ad Widget alt="Ad Widget"/>

Ad Widget
  • 160.9×77.8×7.8 ಮೀಮೀ ತೂಕ 199ಗ್ರಾಂ
  • ಡಿಸ್‌ಪ್ಲೇ: 6.70 ಇಂಚು ಸೂಪರ್ ರೆಟಿನಾ XDR OLED, HDR10
  • ಚಿಪ್‌ಸೆಟ್: ಆ್ಯಪಲ್ ಎ18 (3 nm) : ಹೆಕ್ಸಾ ಕೋರ್; ಆ್ಯಪಲ್ GPU
  • : 128GB + 8GB RAM, 256GB + 8GB RAM, 512GB+8GB RAM
  • ಕ್ಯಾಮೆರಾ: 48 MP ಪ್ರಧಾನ ಲೆನ್ಸ್, 12 MP ಅಲ್ಪಾವೈಡ್, 12 MP ಸೆಲ್ಪಿ ಕ್ಯಾಮೆರಾ
  • ಬೆಲೆ: 189,900 (128GB+8GB), ₹99,900 (256GB+8GB), ₹1,19,900 (512GB+8GB)

ಐಫೋನ್ 16 ಪ್ಲಸ್ ನ ವಿನ್ಯಾಸ, ಗಾತ್ರ, ಡಿಸ್‌ಪ್ಲೇ
ಐಫೋನ್ 16 ಪ್ಲಸ್, 6.7 ಇಂಚು ಗಾತ್ರದ ಸೂಪರ್ ರೆಟಿನಾ XDR OLED ಸ್ಟೀನ್ ಹಾಗೂ 60Hz ರಿಫ್ರೆಶ್ ರೇಟ್ ಹೊಂದಿದೆ. ಹಿಂದಿನ ಆವೃತ್ತಿಯಾದ ಐಫೋನ್ 15 ಪ್ಲಸ್‌ಗಿಂತ ಪ್ರಧಾನವಾಗಿ ಮೊದಲ ನೋಟದಲ್ಲೇ ವ್ಯತ್ಯಾಸ ಕಾಣಿಸುವುದೆಂದರೆ, ಇದರ ಹಿಂಭಾಗದ ಎರಡು ಕ್ಯಾಮೆರಾ ಲೆನ್ಸ್‌ಗಳು ಲಂಬ ಸಾಲಿನಲ್ಲಿರುವುದು. ಹಿಂದಿನದರಲ್ಲಿ ಕರ್ಣ ಸಾಲಿನಲ್ಲಿತ್ತು. ಜೊತೆಗೊಂದು ಫ್ಲ್ಯಾಶ್ ಎಲ್‌ಇಡಿ ಲೈಟ್ ಇದೆ. ಪಿಂಕ್ ಸಹಿತವಾಗಿ ಐದು ಬಣ್ಣಗಳಲ್ಲಿ ಲಭ್ಯವಿರುವ ಐಫೋನ್ 16 ಪ್ಲಸ್‌ನಲ್ಲಿಯೂ ಪ್ರೊ ಸರಣಿಯ ಫೋನ್‌ಗಳಂತೆಯೇ ವಿನೂತನ ವಿನ್ಯಾಸದ ಆ್ಯಕ್ಷನ್ ಬಟನ್ ಜೊತೆಗೆ, ಸ್ಪರ್ಶ-ಸಂವೇದಿ ಕ್ಯಾಮೆರಾ ಬಟನ್ ಕೂಡ ಇದೆ. ಐಒಎಸ್ 18 ಅತ್ಯಾಧುನಿಕ ಕಾರ್ಯಾಚರಣಾ ವ್ಯವಸ್ಥೆಯಿದ್ದು, ತೂಕ 199 ಗ್ರಾಂ ಇದೆ.

Ad Widget

Ad Widget <> Ad Widget

ಕೆಳಭಾಗದಲ್ಲಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಹಾಗೂ ಸ್ಪೀಕರ್, ಎಡಭಾಗದಲ್ಲಿ ವಾಲ್ಯೂಮ್ ಬಟನ್‌ಗಳು, ಆ್ಯಕ್ಷನ್ ಬಟನ್ ಹಾಗೂ ಸಿಮ್ ಕಾರ್ಡ್ ಟ್ರೇ, ಬಲಭಾಗದಲ್ಲಿ ಪವರ್ ಬಟನ್ ಮತ್ತು ಕ್ಯಾಮೆರಾ ಬಟನ್ ಇದೆ. ಸ್ಟ್ರೀನ್ ಮೇಲೆ ಡೈನಮಿಕ್ ಐಲೆಂಡ್ ಖಾಲಿ ಜಾಗವು ಮುಂಭಾಗದ ಕ್ಯಾಮೆರಾವನ್ನೂ ಆವರಿಸಿದೆ. ಅಲ್ಯುಮೀನಿಯಂ ಚೌಕಟ್ಟಿನಲ್ಲಿರುವ ಸ್ಟ್ರೀನ್‌ನಲ್ಲಿ ಸಿರಾಮಿಕ್ ಶೀಲ್ಡ್ ಗಾಜು ಇದ್ದು, ಬೆಝಲ್ ತೀರಾ ಕಿರಿದಾಗಿರುವುದರಿಂದ, ದೊಡ್ಡದಾಗಿ ಚಿತ್ರ-ವಿಡಿಯೊ ವೀಕ್ಷಣೆಗೆ ಅನುಕೂಲ. ಇಯರ್‌ಪೀಸ್‌ನಲ್ಲೇ ಧ್ವನಿ ವರ್ಧಕವೂ ಇದೆ. ಕೆಳಭಾಗದಲ್ಲಿಯೂ ಪುಟ್ಟ ಇಯರ್‌ಪೀಸ್‌ ಇದೆ.

ಹೊರಾಂಗಣದಲ್ಲಿ ಸ್ಕ್ರೀನ್ ನೋಡಲು ಅತ್ಯಂತ ಅನುಕೂಲಕರ, ಪ್ರಖರ ಬಿಸಿಲಿನಲ್ಲಿಯೂ ಸಂದೇಶ ಓದಲು ಅಥವಾ ಅಂತರಜಾಲ ಪುಟಗಳನ್ನು ನೋಡುವುದಕ್ಕೆ ಇದರ ಬ್ರೈಟ್‌ನೆಸ್ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತದೆ. ಹೀಗಾಗಿ ಕಣ್ಣುಗಳಿಗೆ ತ್ರಾಸವಿಲ್ಲ.

Ad Widget

Ad Widget

ವಿವಿಧ ಆ್ಯಪ್‌ಗಳನ್ನು ಹೊಂದಿಸುವ ಆ್ಯಕ್ಷನ್ ಬಟನ್
ಹಿಂದೆ ಆ್ಯಕ್ಷನ್ ಬಟನ್ ಅನ್ನು ಸೈಲೆಂಟ್ ಮೋಡ್‌ಗೆ ಮಾತ್ರ ಬಳಸಲಾಗುತ್ತಿತ್ತು. ಆದರೆ ಈಗ ನಿರ್ದಿಷ್ಟ ಕೆಲಸಗಳನ್ನು ಅಂದರೆ ವಿಭಿನ್ನ ಆ್ಯಪ್‌ಗಳಿಗೆ ಶಾರ್ಟ್ ಕಟ್ ಆಗಿ ಈ ಬಟನ್ ಅನ್ನು ಹೊಂದಿಸಬಹುದು. ಉದಾಹರಣೆಗೆ ಸೈಲೆಂಟ್ ಮೋಡ್ ಮಾತ್ರವಲ್ಲ ಫೋಕಸ್ ವೈಶಿಷ್ಟ್ಯ ಆನ್ ಮಾಡುವುದಕ್ಕೆ, ಟಾರ್ಚ್ ಬಳಸಲು, ವಾಯ್ಸ್ ಮೆಮೊ ಹೀಗೆ ವಿವಿಧ ಆ್ಯಪ್‌ಗಳನ್ನು ಹೊಂದಿಸುವ ಆಯ್ಕೆಯಿದೆ.

ಕ್ಯಾಮೆರಾ ಕಂಟ್ರೋಲ್ ಬಟನ್
ಕ್ಯಾಮೆರಾ ತೆರೆಯಲು ಹೊಸದಾದ ಕ್ಯಾಮೆರಾ ಕಂಟ್ರೋಲ್ ಬಟನ್ ಬಳಸಬಹುದು. ಕ್ಯಾಮೆರಾ ಆನ್ ಮಾಡಿ ಮೆದುವಾಗಿ ಒತ್ತಿದರೆ, ವಿಭಿನ್ನ ನಿಯಂತ್ರಣಗಳ ಮೆನು ಬಟನ್‌ಗಳು ಗೋಚರಿಸುತ್ತವೆ. ಉದಾಹರಣೆಗೆ, ಝೂಮ್ ಬಟನ್. ಇದನ್ನು ಆಯ್ಕೆ ಮಾಡಿ, ಬಟನ್ ಮೇಲೆ ಎಡ-ಬಲ ಸ್ಟೈಪ್ ಮಾಡಿದರೆ ಝೂಮ್ ಇನ್ ಅಥವಾ ಝೂಮ್ ಔಟ್ ಫೋಕಸ್ ಮಾಡಬಹುದು. ಬಳಿಕ ಒಮ್ಮೆ ಒತ್ತಿದರೆ ಫೋಟೊ ಸೆರೆಯಾಗುತ್ತದೆ. ಒತ್ತಿ ಕೆಲ ಕ್ಷಣ ಹಿಡಿದರೆ ವಿಡಿಯೊ ದಾಖಲಿಸಿಕೊಳ್ಳಬಹುದು.

ಆ್ಯಪಲ್ ಇಂಟಲಿಜೆನ್ಸ್
ಐಒಎಸ್ 18.1 ಕಾರ್ಯಾಚರಣಾ ವ್ಯವಸ್ಥೆಯ ಅಪ್‌ಗ್ರೇಡ್ ಅಕ್ಟೋಬ‌ರ್ ಮಾಸಾಂತ್ಯದಲ್ಲಿ ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಇದರಲ್ಲಿ ಸ್ಯಾಮ್‌ಸಂಗ್, ಗೂಗಲ್‌ನಂತೆಯೇ ಆ್ಯಪಲ್ ಕೂಡ ತನ್ನದೇ ಆದ ಆ್ಯಪಲ್ ಇಂಟೆಲಿಜೆನ್ಸ್‌ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆಯ ವೈಶಿಷ್ಟ್ಯವನ್ನು ಅಳವಡಿಸಿದೆ. ಓದುವ ಟೂಲ್, ಪಠ್ಯದ ಸಾರಾಂಶ ಒದಗಿಸುವುದು, ನಮ್ಮದೇ ಎಮೋಜಿಗಳನ್ನು ತಯಾರಿಸುವುದು, ನಿರ್ದಿಷ್ಟ ರೀತಿಯ ಇಮೇಲ್ ಅಥವಾ ಲೇಖನಕ್ಕೆ ಪಠ್ಯವನ್ನು ತಯಾರಿಸಿಕೊಡುವುದು ಮುಂತಾದ ಕೆಲಸಗಳು ಇದರಲ್ಲಿವೆ.

48 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾ ಇದೆ. 12 ಮೆಗಾಪಿಕ್ಸೆಲ್ ಅಲ್ಮಾ ವೈಡ್ ಕ್ಯಾಮೆರಾ ಲೆನ್ಸ್ ನಿರ್ದಿಷ್ಟ ವಸ್ತುವಿನ ಮೇಲೆ ಸ್ವಯಂಚಾಲಿತವಾಗಿ ಫೋಕಸ್ ಮಾಡಲು ನೆರವಾಗುತ್ತದೆ. ಹಗಲು ಬೆಳಕಿನಲ್ಲಿ ತೆಗೆದ ಚಿತ್ರಗಳು ಅತ್ಯುತ್ತಮವಾಗಿ ಮೂಡಿಬಂದಿವೆ. ಸ್ಪಷ್ಟವಾಗಿ ಮತ್ತು ಶಾರ್ಪ್ ಆಗಿ ವಸ್ತುಗಳ ಡೀಟೇಲ್ಸ್ ಸೆರೆಯಾಗುತ್ತವೆ. ಸಹಜ ಬಣ್ಣಗಳು ಆ್ಯಪಲ್ ಕ್ಯಾಮೆರಾದ ವಿಶೇಷತೆಗಳಲ್ಲೊಂದು. 2x ಡಿಜಿಟಲ್ ಝೂಮ್ ಮೂಲಕವೂ ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ರಾತ್ರಿ ಅಥವಾ ಕಡಿಮೆ ಬೆಳಕಿನಲ್ಲಿಯೂ ಚಿತ್ರಗಳು ಶಾರ್ಪ್ ಆಗಿ ಮೂಡಿಬರುತ್ತವೆ ಮತ್ತು ಬೆಳಕಿನ ಸ್ವಯಂ ಹೊಂದಾಣಿಕೆಯೊಂದಿಗೆ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತವೆ.

ಅಲ್ಮಾ ವೈಡ್ ಕ್ಯಾಮೆರಾ ಮೂಲಕ ದೂರದ ಚಿತ್ರಗಳನ್ನು ಹಾಗೂ ಹೆಚ್ಚು ವಿಸ್ತಾರವಾದ ಪ್ರದೇಶದ ಚಿತ್ರವನ್ನು ದೂರದಿಂದಲೇ ಸೆರೆಹಿಡಿಯಬಹುದು. ಅದೇ ರೀತಿ, ಇದರಲ್ಲಿ ಆಟೋಫೋಕಸ್ ವ್ಯವಸ್ಥೆಯಿರುವುದರಿಂದ, ತೀರಾ ಸಮೀಪದ ಚಿತ್ರಗಳನ್ನು ಕೂಡ ಸುಂದರವಾಗಿ, ಸ್ಪಷ್ಟವಾಗಿ ಸೆರೆಹಿಡಿಯಬಹುದಾಗಿದೆ.

12 ಮೆಗಾಪಿಕ್ಸೆಲ್ ಆಟೋಫೋಕಸ್ ವೈಶಿಷ್ಟ್ಯವಿರುವ ಮುಂಭಾಗದ ಕ್ಯಾಮೆರಾದಲ್ಲಿ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಸೆರೆಯಾಗುತ್ತವೆ. ಹೆಚ್ಚು ಜನರ ಗುಂಪಿನ ಜೊತೆ ಸೆಲ್ಪಿ ತೆಗೆದುಕೊಳ್ಳಲು ಅನುಕೂಲಕರ.

4ಕೆ ಸಾಮರ್ಥ್ಯದ ವಿಡಿಯೊಗಳು ಅತ್ಯಂತ ಸ್ಪಷ್ಟ ಧ್ವನಿಯೊಂದಿಗೆ ಸೆರೆಯಾಗುವುದು ಆ್ಯಪಲ್ ಐಫೋನ್ ವೈಶಿಷ್ಟ್ಯ. 16 ಪ್ಲಸ್‌ನಲ್ಲಿಯೂ ಇದನ್ನು ಗಮನಿಸಬಹುದು. ಅಲ್ಪಾವೈಡ್ ಲೆನ್ಸ್ ಮೂಲಕ ಬರುವ ಕ್ಲಿಪ್‌ಗಳು ಕೂಡ ಶಾರ್ಪ್‌ ಆಗಿ ಗಮನ ಸೆಳೆಯುವಂತಿವೆ. ಹಾಡುಗಳನ್ನು ಆಲಿಸಲು ಮತ್ತು ಕರೆಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಸ್ಪೀಕ‌ರ್ ಧ್ವನಿಯ ಗುಣಮಟ್ಟವು ಕೂಡ ಆನಂದದಾಯಕವಾಗಿದೆ.

ಬ್ಯಾಟರಿ ಸಾಮರ್ಥ್ಯವು ಹಿಂದಿನ ಮಾಡೆಲ್‌ಗಿಂತ ತುಸು ಅಂದರೆ ಶೇ 7ರಷ್ಟು ಹೆಚ್ಚಾಗಿದ್ದರೂ, ಹೆಚ್ಚು ಶಕ್ತಿಶಾಲಿಯಾದ ಆ್ಯಪಲ್ ಎ18 ಚಿಪ್‌ಸೆಟ್, ಐಒಎಸ್ 18ರ ಆಧುನಿಕ ಸ್ಪರ್ಶ ಮತ್ತು ಕೆಲವು ಹಾರ್ಡ್‌ವೇರ್‌ ಸಂಬಂಧಿತ ವೈಶಿಷ್ಟ್ಯಗಳಿಂದಾಗಿ ಬ್ಯಾಟರಿ ಚಾರ್ಜ್ ಗರಿಷ್ಠ ಬಾಳಿಕೆ ಬರುತ್ತದೆ. ಬ್ರೌಸಿಂಗ್, ಒಂದಷ್ಟು ವಿಡಿಯೊ ವೀಕ್ಷಣೆ ಮತ್ತು ಇತರ ದೈನಂದಿನ ಕಾರ್ಯಚಟುವಟಿಕೆಗಳನ್ನು ಮಾಡಿದಾಗ 25 ಗಂಟೆ ಬ್ಯಾಟರಿ ಚಾರ್ಜ್‌ಗೆ ಸಮಸ್ಯೆಯಾಗಲಿಲ್ಲ.

ಅತ್ಯಾಧುನಿಕ ವೈಶಿಷ್ಟ್ಯ-ಕಡಿಮೆ ಬೆಲೆ
ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡ ಫೋನ್, ಆದರೆ ಬೆಲೆ ತೀರಾ ಹೆಚ್ಚಿರಬಾರದು, ಹೆಚ್ಚು ಆಧುನಿಕ ವೈಶಿಷ್ಟ್ಯಗಳಿರಬೇಕು ಎಂದುಕೊಳ್ಳುವವರಿಗೆ ಇದು ಸೂಕ್ತವಾದೀತು. ಸುಲಲಿತವಾದ ಕಾರ್ಯಾಚರಣೆ, ಐಒಎಸ್ 18ರ ಅತ್ಯಾಧುನಿಕ ವೈಶಿಷ್ಟ್ಯಗಳು, ಆ್ಯಪಲ್ ಇಂಟೆಲಿಜೆನ್ಸ್, ಕ್ಯಾಮೆರಾ ಬಟನ್, ಆ್ಯಕ್ಷನ್ ಬಟನ್, ದೊಡ್ಡ ಪರದೆ ಮತ್ತು ಗಟ್ಟಿಯಾದ ಫೋನ್ ಬಾಡಿಯಿಂದ ಐಫೋನ್ 16 ಪ್ಲಸ್ ಗಮನ ಸೆಳೆಯುತ್ತದೆ. ಇದಲ್ಲದೆ, ಎಂದಿನಂತೆ ಆ್ಯಪಲ್‌ನಿಂದ ಐದು ವರ್ಷಗಳ ಕಾಲ ತಂತ್ರಾಂಶ ಅಪ್‌ಡೇಟ್ ದೊರೆಯಲಿದೆ. ದೊಡ್ಡ ಪರದೆಯ ಐಫೋನ್ ಪ್ರೊ ಮ್ಯಾಕ್ಸ್ ಸರಣಿಯ ಫೋನ್‌ಗಳು ದುಬಾರಿ ಅಂತ ಅಂದುಕೊಳ್ಳುವವರಿಗೆ, ಬಹುತೇಕ ಪ್ರಮುಖ ಪ್ರೊ ಅದರ ವೈಶಿಷ್ಟ್ಯಗಳನ್ನು ಹೊಂದಿರುವ, ಆದರೆ ಬೆಲೆ ಕೊಂಚ ಕಡಿಮೆ ಇರುವ ಐಫೋನ್ 16 ಪ್ಲಸ್ ಇಷ್ಟವಾಗಬಹುದು.

Ad Widget
Click to comment

Leave a Reply

ಶಿಕ್ಷಣ

ಹವ್ಯಕ ಭಾಷಾ ಸಾಹಿತ್ಯಾಸಕ್ತರಿಗೆ ಸಿಹಿ ಸುದ್ದಿ; ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027ಕ್ಕೆ ಬರಹಗಳ ಆಹ್ವಾನ

Published

on

Ad Widget

Ad Widget

Ad Widget

Ad Widget

ಪುತ್ತೂರು: ಹವ್ಯಕ ಭಾಷೆಯ ಸಾಹಿತ್ಯವನ್ನು ಬೆಳೆಸುವ ಹಾಗೂ ಹೊಸ ತಲೆಮಾರಿನ ಬರಹಗಾರರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆರಂಭಗೊಂಡಿರುವ ‘ಹವ್ಯಕ ವಿಶ್ವ’ ಡಿಜಿಟಲ್ ವೇದಿಕೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ‘ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027’ ಆಯೋಜಿಸಲಾಗಿದೆ. ಈ ಪ್ರಯುಕ್ತ ಹವ್ಯಕ ಭಾಷೆಯಲ್ಲಿ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾಹಿತ್ಯಾಸಕ್ತರಿಂದ ಬರಹಗಳನ್ನು ಆಹ್ವಾನಿಸಲಾಗಿದೆ.

Ad Widget

Ad Widget

Ad Widget

Ad Widget

ಕರ್ನಾಟಕದ ಕರಾವಳಿ ಭಾಗ (ಕಾಸರಗೋಡು ಸೇರಿದಂತೆ) ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ಹವ್ಯಕ ಭಾಷೆಯ ಸಾಹಿತ್ಯಿಕ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ.

Ad Widget

Ad Widget alt="Ad Widget"/>

Ad Widget

ಕಥೆ, ಕವನ, ಪ್ರಬಂಧ ಹಾಗೂ ಲಘುಬರಹ ಹೀಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕಥೆ ಮತ್ತು ಲಘುಬರಹ ವಿಭಾಗಗಳಲ್ಲಿ ಸ್ಪರ್ಧಿಗಳು ತಮ್ಮ ಇಷ್ಟದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಕವನ ವಿಭಾಗಕ್ಕೆ ‘ಹಳ್ಳಿ ಮನೆಯೋ/ಬದುಕೋ, ಪೇಟೆ ಮನೆಯೋ/ಬದುಕೋ’ ಎಂಬ ವಿಷಯ ನೀಡಲಾಗಿದೆ. ಪ್ರಬಂಧ ವಿಭಾಗದಲ್ಲಿ ‘ಹವ್ಯಕ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಯುವ ಪೀಳಿಗೆಯ ಜವಾಬ್ದಾರಿ’ ಎಂಬ ವಿಷಯದ ಕುರಿತು ಬರೆಯಬೇಕಾಗಿದೆ.

Ad Widget

Ad Widget <> Ad Widget

ಪ್ರತಿ ವಿಭಾಗದಲ್ಲಿ ಆಯ್ಕೆಯಾಗುವ ಬರಹಗಳಿಗೆ ಪ್ರಥಮ ಬಹುಮಾನವಾಗಿ 3,000 ರೂ. ನಗದು, ಫಲಕ ಹಾಗೂ ಪ್ರಮಾಣಪತ್ರ ಮತ್ತು ದ್ವಿತೀಯ ಬಹುಮಾನವಾಗಿ 1,500 ರೂ. ನಗದು, ಫಲಕ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ.

ಸ್ಪರ್ಧೆಗೆ ಸಲ್ಲಿಸುವ ಬರಹಗಳು ಕಡ್ಡಾಯವಾಗಿ ಹವ್ಯಕ ಭಾಷೆಯಲ್ಲಿರಬೇಕು. ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು. ಬರಹಗಳನ್ನು ಯೂನಿಕೋಡ್ ಅಥವಾ ನುಡಿ ಫಾಂಟ್‌ನಲ್ಲಿ ಸಿದ್ಧಪಡಿಸಿ ವರ್ಡ್, ಪಿಡಿಎಫ್ ರೂಪದಲ್ಲಿ ಅಥವಾ ಕಾಗದದಲ್ಲಿ ಬರೆದು ಸ್ಕ್ಯಾನ್ ಮಾಡಿ ಕಳುಹಿಸಬಹುದು.

Ad Widget

Ad Widget

ಬರಹಗಳನ್ನು ಕಳುಹಿಸಲು 2026ರ ಡಿಸೆಂಬರ್ 1 ಕೊನೆಯ ದಿನವಾಗಿದ್ದು, ಸ್ಪರ್ಧೆಯ ಫಲಿತಾಂಶವನ್ನು 2027ರ ಜನವರಿ 14ರ ಸಂಕ್ರಾಂತಿ ದಿನ ಪ್ರಕಟಿಸಲಾಗುವುದು.

ಆಸಕ್ತರು ತಮ್ಮ ಬರಹಗಳನ್ನು editor@havyakavishwa.com ಅಥವಾ havyakavishwa@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ವಾಟ್ಸ್ಆ್ಯಪ್ ಮೂಲಕವೂ +91 6360604365 ಸಂಖ್ಯೆಗೆ ಕಳುಹಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ havyakavishwa.com ವೆಬ್‌ಸೈಟ್ ಸಂಪರ್ಕಿಸಬಹುದು ಎಂದು ಹವ್ಯಕ ವಿಶ್ವ ಬಳಗದ ಪರವಾಗಿ ಕೃಷ್ಣ ಕಿಶೋರ್ ಯೇನಂಕೂಡ್ಲು ತಿಳಿಸಿದ್ದಾರೆ.

Ad Widget
Continue Reading

ಸ್ಥಳೀಯ

Reels-ರೀಲ್ಸ್‌ಗಾಗಿ ಮಗುವಿನ ಜೀವದ ಜೊತೆ ಆಟ? ಅಲೆಗಳ ನಡುವೆ ಸಿಲುಕಿದ ಪುಟ್ಟ ಮಗು; ಸಾರ್ವಜನಿಕರೊಬ್ಬರಿಂದ ರಕ್ಷಣೆ..!

Published

on

Ad Widget

Ad Widget

Ad Widget

Ad Widget

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಚಿತ್ರೀಕರಿಸುವುದರಲ್ಲಿ ದಂಪತಿಯೊಬ್ಬರು ಮಗ್ನರಾಗಿದ್ದ ವೇಳೆ ಅವರ ಪುಟ್ಟ ಮಗು ಸಮುದ್ರದ ಅಲೆಗಳ ನಡುವೆ ಸಿಲುಕಿ ಪರದಾಡಿದ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗುವಿನ ಅಪಾಯವನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣ ಧಾವಿಸಿ ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಘಟನೆ ಪೋಷಕರ ನಿರ್ಲಕ್ಷ್ಯದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಚಿತ್ರೀಕರಿಸುವುದರಲ್ಲಿ ದಂಪತಿಯೊಬ್ಬರು ಮಗ್ನರಾಗಿದ್ದ ವೇಳೆ ಅವರ ಪುಟ್ಟ ಮಗು ಸಮುದ್ರದ ಅಲೆಗಳ ನಡುವೆ ಸಿಲುಕಿ ಪರದಾಡಿದ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗುವಿನ ಅಪಾಯವನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣ ಧಾವಿಸಿ ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಘಟನೆ ಪೋಷಕರ ನಿರ್ಲಕ್ಷ್ಯದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Ad Widget

Ad Widget alt="Ad Widget"/>

Ad Widget

ವೈರಲ್ ಆಗಿರುವ ವಿಡಿಯೊದಲ್ಲಿ ದಂಪತಿ ಮೊಬೈಲ್ ಫೋನ್ ಅಥವಾ ಸೆಲ್ಫಿ ಸ್ಟಿಕ್ ಬಳಸಿ ಕಡಲತೀರದಲ್ಲಿ ರೀಲ್ಸ್ ಚಿತ್ರೀಕರಿಸುತ್ತಿರುವುದು ಕಾಣಿಸುತ್ತದೆ. ನೀರಿನ ಸಮೀಪ ನಡೆಯುವಾಗ ಮಹಿಳೆ ಮಗುವಿನ ಕೈ ಹಿಡಿದಿರುತ್ತಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಮಗು ಜಾರಿ ಮರಳಿನ ಮೇಲೆ ಬೀಳುತ್ತದೆ. ಈ ವೇಳೆ ಸಮುದ್ರದ ಅಲೆಗಳು ಮಗುವನ್ನು ಅತ್ತಿತ್ತ ತಳ್ಳಲಾರಂಭಿಸುತ್ತವೆ.

Ad Widget

Ad Widget <> Ad Widget

ಮಗು ಅಪಾಯದಲ್ಲಿರುವುದನ್ನು ಗಮನಿಸಿದರೂ ದಂಪತಿ ಚಿತ್ರೀಕರಣದಲ್ಲೇ ತಲ್ಲೀನರಾಗಿರುವಂತೆ ವಿಡಿಯೊದಲ್ಲಿ ಕಾಣಿಸುತ್ತದೆ. ಮಹಿಳೆ ಕ್ಯಾಮೆರಾ ಮುಂದೆ ಪೋಸ್ ನೀಡುತ್ತಿದ್ದರೆ, ಪುರುಷ ಚಿತ್ರೀಕರಣ ಮುಂದುವರಿಸುತ್ತಾನೆ. ಈ ನಡುವೆ ಮಗು ಅಲೆಗಳ ಹೊಡೆತಕ್ಕೆ ಸಿಲುಕಿ ಪರದಾಡುತ್ತದೆ. ಕೊನೆಗೆ ಪರಿಸ್ಥಿತಿಯನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣ ಮಧ್ಯಪ್ರವೇಶಿಸಿ ಮಗುವನ್ನು ನೀರಿನಿಂದ ಹೊರತರುತ್ತಾರೆ.

‘ರೀಲ್ಸ್‌ಗಾಗಿ ಮಕ್ಕಳ ಸುರಕ್ಷತೆಯನ್ನೂ ಮರೆಯುವರೇ?’
ಎಕ್ಸ್ (X) ಬಳಕೆದಾರರಾದ ಮರಿಯಮ್ ಎಂಬುವವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಾವು ಪತಿಯೊಂದಿಗೆ ಕಡಲತೀರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ದಂಪತಿ ರೀಲ್ಸ್ ಚಿತ್ರೀಕರಣದಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ, ತಮ್ಮ ಮಗಳು ಎದುರಿಸುತ್ತಿದ್ದ ಅಪಾಯವನ್ನೇ ಗಮನಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಿದ್ದರಿಂದ ಮಗು ಅಪಾಯದಿಂದ ಪಾರಾಯಿತು ಎಂದೂ ಹೇಳಿದ್ದಾರೆ.

Ad Widget

Ad Widget

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸುವ ಧಾವಂತದ ಬಗ್ಗೆ ಪ್ರಶ್ನಿಸಿರುವ ಮರಿಯಮ್, ರೀಲ್ಸ್ ಮಾಡುವುದು ಅಷ್ಟೊಂದು ಮುಖ್ಯವೇ? ಅದಕ್ಕಾಗಿ ಜನರು ತಮ್ಮ ಸ್ವಂತ ಮಕ್ಕಳ ಸುರಕ್ಷತೆಯನ್ನೂ ನಿರ್ಲಕ್ಷಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಘಟನೆಯ ಸತ್ಯಾಸತ್ಯತೆ ಬಗ್ಗೆ ಚರ್ಚೆ
ಮಂಗಳವಾರ ಸಂಜೆಯಿಂದ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎನ್ನಲಾಗಿದ್ದು, ಘಟನೆ ನಡೆದ ನಿಖರ ಸ್ಥಳ ಮತ್ತು ಸಮಯದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ವಿಡಿಯೊದಲ್ಲಿರುವ ವ್ಯಕ್ತಿಗಳ ಗುರುತನ್ನೂ ಸ್ವತಂತ್ರವಾಗಿ ದೃಢಪಡಿಸಲಾಗಿಲ್ಲ.

ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ಅನೇಕ ಬಳಕೆದಾರರು, ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಸಮುದ್ರದ ಅಲೆಗಳ ಸಮೀಪ ಮಕ್ಕಳ ಮೇಲೆ ಪೋಷಕರು ನಿರಂತರ ನಿಗಾ ಇರಿಸುವ ಅಗತ್ಯವನ್ನು ಈ ಘಟನೆ ನೆನಪಿಸಿದೆ.

ಇನ್ನೊಂದೆಡೆ, ವಿಡಿಯೊ ನಕಲಿಯಾಗಿರಬಹುದು ಅಥವಾ ವೈರಲ್ ಆಗುವ ಉದ್ದೇಶದಿಂದಲೇ ಯೋಜಿತವಾಗಿ ಚಿತ್ರೀಕರಿಸಿರಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಆದರೆ, ಈ ವಾದಗಳಿಗೆ ಯಾವುದೇ ಸ್ವತಂತ್ರ ದೃಢೀಕರಣ ಲಭ್ಯವಿಲ್ಲ. ಹೀಗಾಗಿ, ವಿಡಿಯೊದಲ್ಲಿನ ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ.

Ad Widget
Continue Reading

ವೈರಲ್‌ ನ್ಯೂಸ್‌

ಸಿಎಂ ಪುಟದಲ್ಲಿ ಮೊಳಗಿದ ಪುತ್ತೂರಿನ ಕಂಠ – ತುಳುನಾಡಿನ ಸಂಸ್ಕೃತಿ – ಭಾಷಾ ಸೊಗಡಿಗೆ ಧ್ವನಿಯಾದ ದಿವ್ಯಶ್ರೀ ರೈ ವಜ್ರದುಂಬಿ

Published

on

Ad Widget

Ad Widget

Ad Widget

Ad Widget

ಪುತ್ತೂರು: ತುಳುವಿಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ದೊರೆತ ಸಂಭ್ರಮದ ನಡುವೆಯೇ, ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಸೊಬಗನ್ನು ಪರಿಚಯಿಸುವ ವಿಡಿಯೋವೊಂದಕ್ಕೆ ಪುತ್ತೂರಿನ ಕುಂಬ್ರದ ದಿವ್ಯಶ್ರೀ ರೈ ವಜ್ರದುಂಬಿ ಅವರು ನೀಡಿರುವ ಹಿನ್ನಲೆ ಧ್ವನಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

Ad Widget

Ad Widget

Ad Widget

Ad Widget


ಸೆ.18ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಗುರುತಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಆಚಾರ ವಿಚಾರವನ್ನು ಬಿಂಬಿಸುವ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಕಂಠಸಿರಿ ಹಿನ್ನಲೆ ಧ್ವನಿಯಾಗಿತ್ತು.

Ad Widget

Ad Widget alt="Ad Widget"/>

Ad Widget


ವಿಡಿಯೋದಲ್ಲಿ ತುಳುನಾಡಿನ ಪ್ರಕೃತಿ ಸೌಂದರ್ಯ, ಸಾಹಿತ್ಯ , ಸಂಸ್ಕೃತಿ, ಸಂಪ್ರದಾಯ, ಬದುಕಿನ ವೈವಿಧ್ಯ ಹಾಗೂ ತುಳು ಭಾಷೆಯ ಸೊಗಡನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಧ್ವನಿ ಮತ್ತಷ್ಟು ಜೀವ ತುಂಬಿದೆ. ಮಾತುಗಳನ್ನು ಕೇವಲ ಕೇಳಿಸುವುದಕ್ಕಿಂತ, ಅವುಗಳ ಭಾವವನ್ನು ಕೇಳುಗರ ಮನಸ್ಸಿಗೆ ತಲುಪಿಸುವ ರೀತಿಯ ಅವರ ಧ್ವನಿ ನಿರೂಪಣೆ ವಿಡಿಯೋಗೆ ವಿಶೇಷ ಮೆರುಗು ನೀಡಿದೆ.

Ad Widget

Ad Widget <> Ad Widget


ಮುಖ್ಯಮಂತ್ರಿಗಳ ಅಧಿಕೃತ ಪುಟದಲ್ಲಿ ಪ್ರಸಾರವಾದ ಈ ವಿಡಿಯೋಗೆ ಅಲ್ಪಾವಧಿಯಲ್ಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಎರಡು ದಿನಗಳಲ್ಲಿ ಸುಮಾರು 5 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ತುಳುವಿನ ಬಗ್ಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕರಾವಳಿಯ ಜನರ ನಡುವೆ ಈ ವಿಡಿಯೋ ವಿಶೇಷ ಗಮನ ಸೆಳೆದಿದ್ದು, ದಿವ್ಯಶ್ರೀ ಅವರ ಕಂಠಸಿರಿಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.


ನಿರೂಪಕಿ ಹಾಗೂ ವಾಯ್ಸ್‌ಓವರ್ ಆರ್ಟಿಸ್ಟ್ ಆಗಿರುವ ದಿವ್ಯಶ್ರೀ, ತಮ್ಮ ಧ್ವನಿಯ ಏರಿಳಿತ, ಉಚ್ಚಾರಣೆಯ ಸ್ಪಷ್ಟತೆ ಹಾಗೂ ಭಾವಪೂರ್ಣ ನಿರೂಪಣೆಯ ಮೂಲಕ ತುಳುನಾಡಿನ ಮಣ್ಣಿನ ಸೊಗಡನ್ನು ಧ್ವನಿಯಲ್ಲೇ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತುಳು ಭಾಷೆಯ ಬಗ್ಗೆ ಹೆಮ್ಮೆ, ಕರಾವಳಿಯ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ವಿಡಿಯೋದಲ್ಲಿನ ದೃಶ್ಯಗಳಿಗೆ ಹೊಂದಿಕೊಳ್ಳುವ ಧ್ವನಿ ನಿರೂಪಣೆ ಅವರ ವಾಯ್ಸ್‌ಓವರ್‌ನ ವಿಶೇಷತೆಯಾಗಿದೆ.

Ad Widget

Ad Widget


ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಶ್ರೀ, ಇದಕ್ಕೂ ಮೊದಲು ಹಲವು ಸುದ್ದಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೋದ್ಯಮದ ಅನುಭವದ ಜತೆಗೆ ಡಾಕ್ಯುಮೆಂಟರಿ, ವಿಶೇಷ ವರದಿ ಹಾಗೂ ಜಾಹೀರಾತುಗಳಿಗೆ ಧ್ವನಿ ನೀಡಿರುವ ಅವರು ವಾಯ್ಸ್‌ಓವರ್ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. “ನಿಖರ ನ್ಯೂಸ್”ನ ಹಲವಾರು ವಿಡಿಯೋಗಳಲ್ಲೂ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.


2023ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ ದಿವ್ಯಶ್ರೀ, ಅಧ್ಯಯನ ಹಾಗೂ ವೃತ್ತಿ ಎರಡೂ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.


ಅರಿಯಡ್ಕ ಗ್ರಾಮದ ತ್ಯಾಗರಾಜನಗರ ನಿವಾಸಿ ವಿಠಲ ರೈ ಹಾಗೂ ಶಾಲಿನಿ ರೈ ದಂಪತಿಯ ಪುತ್ರಿಯಾಗಿರುವ ದಿವ್ಯಶ್ರೀ ಅವರ ವೃತ್ತಿ ಬದುಕಿನ ಹೆಜ್ಜೆಗಳಿಗೆ ಸಹೋದರಿ ಮಧುಶ್ರೀ ರೈ ಅವರೂ ಪ್ರೋತ್ಸಾಹ ನೀಡುತ್ತಿದ್ದಾರೆ.
ತುಳುವಿಗೆ ಅಧಿಕೃತ ಮಾನ್ಯತೆ ದೊರೆತ ಸಂಭ್ರಮದ ಕ್ಷಣದಲ್ಲಿ, ತುಳುನಾಡಿನ ಕಥೆಯನ್ನು ತಮ್ಮ ಕಂಠದ ಮೂಲಕ ಸಾವಿರಾರು ಜನರಿಗೆ ತಲುಪಿಸಿದ ದಿವ್ಯಶ್ರೀ ರೈ ವಜ್ರದುಂಬಿ ಅವರ ಧ್ವನಿ ಈಗ ಪುತ್ತೂರಿನಿಂದ ತುಳುನಾಡಿನಾಚೆಗೂ ಕೇಳಿಸುತ್ತಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!